Home Blog Page 187

ಮುಟ್ಟಿನ ಹೊಟ್ಟೆ ನೋವು ತಾಳಲಾರದೇ ನೇಣಿಗೆ ಶರಣಾದ ಯುವತಿ!

0

ತುಮಕೂರು:- ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಜರುಗಿದೆ.

ಋತುಚಕ್ರದ ಹೊಟ್ಟೆ ನೊವು ತಾಳಲಾಗದೆ ಯುವತಿಯೊಬ್ಬಳು ನೇಣಿಗೆ ಶರಣಾಗಿದ್ದಾರೆ. ಕೀರ್ತನಾ (19) ನೇಣಿಗೆ ಶರಣಾದ ಯುವತಿ. ಗುಲ್ಬರ್ಗದ ಕಲಗಿ ತಾಲೂಕಿನ ಸಾಲಹಳ್ಳಿಯ ಕೀರ್ತನಾ ಕೆಲಸ ಅರಸಿ ತುಮಕೂರಿನಲ್ಲಿದ್ದ ಚಿಕ್ಕಪ್ಪನ ಮನೆಯಲ್ಲಿ ಬಂದಿದ್ದಳು. ಕೆಲಸ ಸಿಗದ ಕಾರಣ ಮನೆಯಲ್ಲೆ ವಾಸವಾಗಿದ್ದಳು

ಚಿಕ್ಕಪ್ಪನ ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮುಟ್ಟಿನ ಕಾಲದ ಹೊಟ್ಟೆ ನೋವಿನ ಕಾರಣಕ್ಕೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ; ಭಾರತೀಯ ಪುರಾತತ್ವ ಇಲಾಖೆ ಸ್ಪಷ್ಟನೆ, ಹಾಗಾದ್ರೆ ನಮ್ಮ ಚಿನ್ನ ವಾಪಸ್ ಕೊಡಿ ಎಂದ ಕುಟುಂಬಸ್ಥರು!

0

ಗದಗ:- ವಾಸ್ತು ಶಿಲ್ಪ ಕಲೆಗಳನ್ನು ಹೊಂದಿರುವ ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ ಪತ್ತೆಯಾಗಿದ್ದು, ಇದು ಇಡೀ ರಾಜ್ಯದ ಗಮನ ಸೆಳೆದಿದೆ.

ಕಸ್ತೂರವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಪಾಯ ಅಗೆಯುವ ಸಂದರ್ಭದಲ್ಲಿ ಪ್ರಜ್ವಲ್ ರಿತ್ತಿ ಎಂಬ 8 ವರ್ಷದ ಮಗನಿಗೆ ಒಂದು ಹಿತ್ತಾಳೆ ತಂಬಿಗೆಯಲ್ಲಿ ಚಿನ್ನಾಭರಣ ಸಿಕ್ಕಿವೆ. ಆತ ತಕ್ಷಣವೇ ಗ್ರಾಮದ ಹಿರಿಯರಿಗೆ, ಪಂಚಾಯಿತಿ ಸದಸ್ಯರಿಗೆ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿದ್ದು ಪಾಟೀಲ್‌ಗೆ ವಿಷಯ ತಿಳಿಸಿದ್ದಾನೆ. ಬಳಿಕ ಸಿದ್ದು ಪಾಟೀಲ್ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್‌ಗೆ ಮಾಹಿತಿ ರವಾನಿಸಿದ್ರು ಹೆಚ್.ಕೆ ಪಾಟೀಲ್ ನಿರ್ದೇಶನದ ಮೇರೆಗೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ, ವಾಸ್ತವಾಂಶ ಪರಿಶೀಲಿಸಿದ್ರು.

ಬಳಿಕ ಆ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ತಾಯಿ, ಮಗನಿಗೆ ಸನ್ಮಾನ ಕೂಡ ಮಾಡಲಾಗಿತ್ತು. ಆದರೆ ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿಷಿದ್ಧ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದ್ದು, ಎಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿದೆ. ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಈ ಬಡ ಕುಟುಂಬಕ್ಕೆ ಈಗ ಆಸರೆ ಇಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಸದಸ್ಯರು ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸರ್ಕಾರ ಮಾನವೀಯ ದೃಷ್ಟಿಯಿಂದ ಕುಟುಂಬಕ್ಕೆ ಒಂದು ನಿವೇಶನ ಅಥವಾ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುಟುಂಬದವರು ಚಿನ್ನದ ಆಸೆಯನ್ನು ಬಿಟ್ಟು, ನಮಗೆ ಮನೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. ಇನ್ನೂ ಸ್ಥಳಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ ಭೇಟಿ ನೀಡಿ ಜಾಗವನ್ನು ಪರಿಶೀಲಿಸಿದ ಬಳಿಕ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.

ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ:-

ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಹಾಕುವ ವೇಳೆ ಚಿನ್ನ ಪತ್ತೆಯಾದ ಪ್ರಕರಣದ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ. ಧಾರವಾಡ ವಲಯದ ಎಎಸ್‌ಐ ಅಧೀಕ್ಷಕ ರಮೇಶ್ ಮೂಲಿಮನಿ ಅವರು ಚಿನ್ನ ಸಿಕ್ಕ ಸ್ಥಳವನ್ನು ಪರಿಶೀಲನೆ ನಡೆಸಿ ಬಳಿಕ ಮಾತನಾಡಿದರು. “ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ. ಈ ಚಿನ್ನ ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ಪರಿಶೀಲನೆ ಮಾಡುತ್ತೇವೆ. ಮೇಲ್ನೋಟಕ್ಕೆ ನೋಡಿದಾಗ ಬಹಳ ಹಳೆಯದ್ದು ಅಂತ ಅನಿಸುತ್ತಿಲ್ಲ. ಎಲ್ಲಾ ಆಯಾಮಗಳಿಂದಲೂ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಚಿನ್ನ ರಾಜಮನೆತನಕ್ಕೆ ಸೇರಿದ್ದಾ? ಅಥವಾ ಕುಟುಂಬದ್ದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಂಗಾರ ಮನೆಯಲ್ಲಿ ಸಿಕ್ಕಿದ್ದರೆ ಅದು ಕುಟುಂಬಕ್ಕೆ ಸೇರಿದ್ದೆ ಆಗಿರುತ್ತದೆ. ದೇವಸ್ಥಾನದಲ್ಲಿ ಸಿಕ್ಕಿದ್ದರೆ ಮಾತ್ರ ರಾಜಮನೆತನಕ್ಕೆ ಸೇರಿದ್ದಾಗಿರಬಹುದು. ರಾಜಮನೆತನದ್ದಾದರೆ ಅದರ ಮೇಲೆ ಲಾಂಛನಗಳು ಇರ್ತಾಯಿತ್ತು. ಈ ಚಿನ್ನದ ಆಭರಣಗಳು ಹಾನಿಗೊಳಗಾಗಿರುವುದರಿಂದ, ಹಿಂದಿನ ಕಾಲದಲ್ಲಿ ಆ ಕುಟುಂಬವು ಅವುಗಳನ್ನು ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿರಬಹುದೆಂಬ ಸಾಧ್ಯತೆ ಇದೆ ಎಂದು ಎಎಸ್‌ಐ ಅಧೀಕ್ಷಕರು ಮಾಹಿತಿ ನೀಡಿದರು.

‘ನಿಧಿಯಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ’;

ಇನ್ನೂ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ ಅವರು “ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ” ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಹಾಗಾದ್ರೆ ಇದು ನಮ್ಮ ಪೂರ್ವಜರು ಇಟ್ಟಿರಬಹುದು ನಮ್ಮ ಚಿನ್ನ ನಮಗೆ ಕೊಡಿ” ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಅಲ್ಲದೇ ಗ್ರಾಮಸ್ಥರು ಕೂಡ ಕಾನೂನು ಪ್ರಕ್ರಿಯೆ ಮುಗಿಸಿ ಚಿನ್ನವನ್ನು ಸಂಬಂಧಪಟ್ಟ ಕುಟುಂಬಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ ಲಕ್ಕುಂಡಿ ನಿಧಿ ಪ್ರಕರಣದಲ್ಲಿ ಈ ಬೆಳವಣಿಗೆ ಬಿಗ್ ಟ್ವಿಸ್ಟ್ ಆಗಿದ್ದು, ಮುಂದಿನ ಕ್ರಮಗಳ ಬಗ್ಗೆ ಎಲ್ಲರ ಗಮನ ಸೆಳೆದಿದೆ.

ಹುಬ್ಬಳ್ಳಿ| ಮಹಿಳೆಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ: ಇಬ್ಬರು ಅರೆಸ್ಟ್

0

ಹುಬ್ಬಳ್ಳಿ: ಮಹಿಳೆಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಅದರ ವಿಡಿಯೋ ಮಾಡಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಶಿವಾನಂದ ಮತ್ತು ಗಣೇಶ್ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಸಂತ್ರಸ್ತೆಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಜ.9ರಂದು ಅಂಬೇಡ್ಕರ್ ಮೈದಾನದಿಂದ ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದು ಮದ್ಯ ಕುಡಿಸಿ ದುಷ್ಕೃತ್ಯ ನಡೆಸಿ ವಿಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪ್ರಕರಣದ ಬಳಿಕ ಆರೋಪಿಗಳನ್ನು ಸ್ಥಳೀಯರು ಥಳಿಸಿ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದು, ಈ ಹಲ್ಲೆ ಪ್ರಕರಣ ಸಂಬಂಧ ನಾಲ್ವರ ವಿರುದ್ಧವೂ ದೂರು ದಾಖಲಾಗಿದೆ. ಆರೋಪಿಗಳನ್ನು ಹಿಡಿದುಕೊಟ್ಟವರ ವಿರುದ್ಧ ಕೇಸ್ ಹಾಕಿರುವುದನ್ನು ಖಂಡಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಗೋಲ್ಡ್ ಪ್ರಿಯರಿಗೆ ಆಘಾತ; 1ಗ್ರಾಮ್‌ಗೆ 14,000 ರೂ ದಾಟಿದ ಅಪರಂಜಿ ಚಿನ್ನದ ಬೆಲೆ!

0

ಗೋಲ್ಡ್ ಪ್ರಿಯರಿಗೆ ಆಘಾತದ ಸುದ್ದಿಯೊಂದು ಹೊರಬಿದ್ದಿದ್ದು, ಇಂದಿನ ಬೆಲೆ ಕೇಳಿ ಚಿನ್ನದ ಪ್ರಿಯರು ಆತಂಕಕ್ಕೊಳಗಾಗಿದ್ದಾರೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,28,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,28,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 11ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,046 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,875 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,534 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,046 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,875 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಕೌಟುಂಬಿಕ ಕಲಹಕ್ಕೆ ಬೇಸತ್ತು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡ ಬಿಜೆಪಿ ಮುಖಂಡ!

0

ದಾವಣಗೆರೆ:- ದಾವಣಗೆರೆ ಹೊರ ವಲಯದ ನಾಗನೂರು ಗ್ರಾಮದಲ್ಲಿ ಬಿಜೆಪಿ ಮುಖಂಡರೊಬ್ಬರು ಕೌಟುಂಬಿಕ ಕಲಹಕ್ಕೆ ಬೇಸತ್ತು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ.

ಚಂದ್ರಶೇಖರ್ ಸಂಕೋಳ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ಚಂದ್ರಶೇಖರ್ ಆಸ್ತಿವಂತರಾಗಿದ್ದು, ಮನುಷ್ಯರಿಗೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಕೂಡ ಅನ್ನದಾತನಾಗಿದ್ದರು. ಅಲ್ಲದೇ ಸಾಕಷ್ಟು ಸಮಾಜ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಇಂತಹ ವ್ಯಕ್ತಿ ಕೌಟುಂಬಿಕ ಕಲಹಕ್ಕೆ ಮನನೊಂದು ಅತ್ಮಹತ್ಯೆ ದಾರಿ ಹಿಡಿದಿದ್ದಾರೆ. ಅವರದ್ದೇ ಜಮೀನಿನಲ್ಲಿ ಕಾರಿನಲ್ಲಿ ಕೂತು ಜೊತೆಗೆ ಟಯರ್‌ಗಳನ್ನಿಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಮನೂರು ಗ್ರಾಮದಲ್ಲಿ ಸಿಮೆಂಟ್, ಕಬ್ಬಿಣದ ಅಂಗಡಿಯನ್ನು ನಡೆಸುತ್ತಾ ಅವರು ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು. ಅಡಿಕೆ ತೋಟ, ಕಾಂಪ್ಲೆಕ್ಸ್ ಗಳನ್ನು ಕೂಡ ಹೊಂದಿದ್ದ ಚಂದ್ರಶೇಖರ್, ಸಾಲ ಮಾಡಿಕೊಂಡಿದ್ದರು, ಇದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು ಎನ್ನಲಾಗಿದೆ. ಅಲ್ಲದೇ ಚಂದ್ರಶೇಖರ್ ಮಕ್ಕಳಾದ ಮಗ ನರೇಶ್ (20) ಮಗಳು ಪವಿತ್ರ (23) ಮನೆಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳೀಯರು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವಿಚಾರ ತಿಳಿದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಹದಡಿ ಠಾಣೆ ಪೊಲೀಸರು ಹಾಗೂ ಸೋಕೋ ಟೀಮ್ ಆಗಮಿಸಿ ಪರಿಶೀಲನೆ ನಡೆಸಿದೆ.

ಸ್ಟೀಲ್ ರಾಡ್‌ನಿಂದ ತಂದೆಯನ್ನೇ ಹತ್ಯೆಗೈದ ಮಗ; ಕೌಟುಂಬಿಕ ಕಲಹದ ಶಂಕೆ!

0

ಹಾಸನ:- ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.

60 ವರ್ಷದ ಸತೀಶ್ ಕೊಲೆಯಾದ ತಂದೆ. 28 ವರ್ಷದ ರಂಜಿತ್ ತಂದೆಯನ್ನು ಹತ್ಯೆಗೈದ ಆರೋಪಿ. ಸತೀಶ್ ಸರಿಯಾಗಿ ಕುಟುಂಬ ನಿರ್ವಹಣೆ ಮಾಡದ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ರಂಜಿತ್ ಹಾಗೂ ಆತನ ತಾಯಿ ನಿರ್ಮಲ ಕೆ.ಆರ್.ನಗರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಇದೇ ವಿಚಾರಕ್ಕೆ ತಂದೆ ಜೊತೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ನಿನ್ನೆ ರಾತ್ರಿ ತಂದೆ-ಮಗನ ನಡುವೆ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ಸ್ಟೀಲ್ ರಾಡ್‌ನಿಂದ ತಂದೆ ಸತೀಶ್ ತಲೆಗೆ ಹೊಡೆದು ರಂಜಿತ್ ಕೊಲೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರವಾರದ ಜೆಡಿಎಸ್ ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಸೂಸೈಡ್; ಆರೋಪಿ ಎಸ್ಕೇಪ್!

0

ಕಾರವಾರ:- JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್‌ ಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಇದೀಗ ಆರೋಪಿ ಎಸ್ಕೇಪ್ ಆಗಿದ್ದಾನೆ.

ಯುವತಿಯನ್ನ ಪ್ರೀತಿಸುವಂತೆ ಪೀಡಿಸಿ ಆತ್ಮಹತ್ಯೆಗೆ ಕಾರಣವಾಗಿದ್ದ ಕಾರವಾರದ ಜೆಡಿಎಸ್ ಮುಖಂಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಅವರ ಪುತ್ರ ಚಿರಾಗ್ ಪರಾರಿಯಾಗಿದ್ದಾನೆ.

ಆರೋಪಿಯು, ಯುವತಿಗೆ ಪ್ರೀತಿಸುವಂತೆ ಪೀಡಿಸುತಿದ್ದ. ಆಕೆ ಪ್ರೀತಿಯನ್ನು ತಿರಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಆಕೆಗೆ ಕರೆ ಮಾಡಿ ಕಿರುಕುಳ ನೀಡುತಿದ್ದ. ಹೀಗಾಗಿ ಚಿರಾಗ್ ನಿಂದ ಬೇಸತ್ತ ಯುವತಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರ ಬೆನ್ನಲ್ಲೇ ಭಾನುವಾರ ಚಿರಾಗ್ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ಕದ್ರಾ ಪೊಲೀಸರು ಆತನನ್ನು ಬಂಧಿಸಲು ಕಾರವಾರದ ನಂದನಗದ್ದಾ ದಲ್ಲಿ ಇರುವ ಆತನ ನಿವಾಸಕ್ಕೆ ಇಂದು ತೆರಳಿದ್ದು ಬಂಧನ ಭೀತಿಯಿಂದ ಚಿರಾಗ್ ಪರಾರಿಯಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ಕದ್ರಾ ಪೊಲೀಸರು ವಿಶೇಷ ತಂಡ ರಚಿಸಿ ಈತನ ಹುಡುಕಾಟ ನಡೆಸುತಿದ್ದಾರೆ.

ಬೀದರ| ಮಾರ್ಕೆಟ್ ನಲ್ಲಿ ಅಗ್ನಿ ದುರಂತ; 10 ಅಂಗಡಿಗಳು ಸುಟ್ಟು ಭಸ್ಮ, ಮಾಲೀಕರು ಕಣ್ಣೀರು

0

ಬೀದರ್:- ಭೀಕರ ಅಗ್ನಿ ದುರಂತದಲ್ಲಿ ಸುಮಾರು 10 ಅಂಗಡಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಜರುಗಿದೆ.

ಎಸ್, ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಗಣೇಶ್ ಮಾರ್ಕೆಟ್‌ನಲ್ಲಿ ತಡರಾತ್ರಿ ಘಟನೆ ಜರುಗಿದ್ದು, ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಕಾರಣ ಎನ್ನಲಾಗುತ್ತಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ.

ಅಗ್ನಿ ಅವಘಡದಲ್ಲಿ 1 ಚಪ್ಪಲಿ ಅಂಗಡಿ, 1 ಕಿರಾಣಿ ಅಂಗಡಿ, 1 ತರಕಾರಿ ಅಂಗಡಿ ಮತ್ತು 7 ಭಾಂಡೆ ಅಂಗಡಿಗಳು ಸೇರಿದಂತೆ ಒಟ್ಟು 10 ಅಂಗಡಿಗಳು ಸಂಪೂರ್ಣ ಭಸ್ಮವಾಗಿದೆ. ಕೂಡಲೇ ಮಾಹಿತಿ ಆಧರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ದುರದೃಷ್ಟವಶಾತ್ ಅಗ್ನಶಾಮಕದಳ ಸಿಬ್ಬಂದಿ ಬರುವುದು ಕೊಂಚ ತಡವಾದ ಕಾರಣ, ಅಂಗಡಿಗಳು ಸುಟ್ಟು ಕರಕಲಾಗಿವೆ.

ಹಬ್ಬದ ಸೀಸನ್ ಆಗಿದ್ದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ವಸ್ತುಗಳನ್ನು ತರಿಸಲಾಗಿತ್ತು. ಅನಿರೀಕ್ಷಿತ ಬೆಂಕಿ ನಮ್ಮ ಬದುಕನ್ನೇ ಬೀದಿಗೆ ತಂದಿದೆ ಎಂದು ಅಂಗಡಿ ಮಾಲೀಕರು ಕಣ್ಣೀರು ಹಾಕಿದ್ದಾರೆ. ಸರ್ಕಾರ ನಮಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. ಘಟನಾಾ ಸ್ಥಳಕ್ಕೆ ತಹಸೀಲ್ದಾರ್ ಮಹೇಶ ಪಾಟೀಲ ಹಾಗೂ ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಗಂಡ ಬೆತ್ತಲೆ ಓಡಾಟ ಆರೋಪಕ್ಕೆ ಟ್ವಿಸ್ಟ್; ಆಕೆಗೆ 2 ಮದುವೆ, ನಾಲ್ಕನೇ ಗಂಡನ ಹುಡುಕಾಟದಲ್ಲಿದ್ದಾಳೆ! 3ನೇ ಪತಿಯ ಸ್ಪೋಟಕ ಹೇಳಿಕೆ!

0

ಬೆಂಗಳೂರು:- ಮನೆಯಲ್ಲಿ ಎಲ್ಲರ ಮುಂದೆ ಪತಿ ಬೆತ್ತಲೆಯಾಗಿ ಓಡಾಡ್ತಾನೆ ಹಾಗೂ ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡ್ತಾನೆ ಎಂದು ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ ಮೇಘಶ್ರೀ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಪತ್ನಿ ನೀಡಿದ್ದ ಗಂಭೀರ ಆರೋಪಗಳ ಪ್ರಕರಣದಲ್ಲಿ ಇದೀಗ ಹೊಸ ತಿರುವು ಸಿಕ್ಕಿದ್ದು, ಆರೋಪಿ ಪತಿ ಮಂಜುನಾಥ್‌ ಇದೀಗ ಪತ್ನಿ ಮೇಘಶ್ರೀ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾರೆ. ತನ್ನ ಮೇಲೆ ಸೈಕೋ ವರ್ತನೆ ಆರೋಪ ಮಾಡಿದ ಮೇಘಶ್ರೀಗೆ ಈಗಾಗಲೇ ಹಲವು ಮದುವೆಗಳಾಗಿದ್ದು, ನಾಲ್ಕನೇ ಗಂಡನ ಹುಡುಕಾಟದಲ್ಲಿದ್ದಾಳೆ ಎಂದು ಮಂಜುನಾಥ್‌ ದೂರಿದ್ದಾರೆ.

ಶೋಕಿಗಾಗಿ ಗಂಡಂದಿರ ಹಣ ಹಾಗೂ ಚಿನ್ನಾಭರಣ ದುರುಪಯೋಗ ಮಾಡಿಕೊಂಡು, ಎರಡನೇ ಗಂಡನ ಜೊತೆ ಜಾಲಿ ಟ್ರಿಪ್‌ಗಳಿಗೆ ಹೋಗಿದ್ದಾಳೆ ಎಂದು ಆರೋಪಿಸಿದ ಅವರು, ಮೂರನೇ ಗಂಡನಾಗಿ ನನ್ನನ್ನು ಬಲೆಗೆ ಬೀಳಿಸಿ ಸುಮಾರು 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಫೋನ್‌, ಐಪ್ಯಾಡ್‌ ಮತ್ತು ಟ್ಯಾಬ್‌ಗಳನ್ನು ಪಡೆದಿದ್ದಾಳೆ ಎಂದಿದ್ದಾರೆ.

ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಹೇಳಿ ತನ್ನ ವಿರುದ್ಧ ದೂರು
ನೀಡಿದ್ದಾಳೆ. ಆದರೆ ಮದುವೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆಕೆ ನೀಡಿಲ್ಲ. ಅಲ್ಲದೆ, ಮನೆಯಲ್ಲಿ ಬಟ್ಟೆ ಬದಲಿಸುವ ವೇಳೆ ಕದ್ದು ಫೋಟೋ ತೆಗೆದು, ಫೇಕ್‌ ದಾಖಲೆಗಳ ಮೂಲಕ ಆರೋಪ ಮಾಡಿದ್ದಾಳೆ.

ಆಕೆಯ ಮೋಸದ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕೂಡ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನನಗೆ ನ್ಯಾಯ ಬೇಕು ಎಂದು ಪತ್ನಿ ಮೇಘಶ್ರೀ ವಿರುದ್ಧ ಆರೋಪಗಳ ಸುರಿಮಳೆಗೈದರು.

ಬೈಕ್ ಕಳ್ಳತನ, ಚೈನ್ ಸ್ನ್ಯಾಚಿಂಗ್: ಮಂಡ್ಯ ಪೊಲೀಸರಿಂದ ಇಬ್ಬರು ಖದೀಮರು ಅರೆಸ್ಟ್!

0

ಮಂಡ್ಯ:- ಜಿಲ್ಲೆಯಲ್ಲಿ ಮಹಿಳೆಯರ ಮಾಂಗಲ್ಯ ಸರ ಅಪಹರಣ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಖದೀಮರನ್ನು ಮಂಡ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್‌ಗಳಲ್ಲಿ ಬಂದು ಮಹಿಳೆಯರಿಂದ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದ ಮೈಸೂರು ನಿವಾಸಿಗಳಾದ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ ಹಾಗೂ ಸೈಯ್ಯದ್ ಅಯೂಬ್ ಎಂಬ ಇಬ್ಬರನ್ನು ಮೈಸೂರಿನ ರಾಜೀವ್ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 253 ಗ್ರಾಂ ಚಿನ್ನಾಭರಣ, 178 ಗ್ರಾಂ ಬೆಳ್ಳಿಯ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಮತ್ತು ಆಕ್ಸಿಸ್ ಬೈಕ್ ಸೇರಿ ಒಟ್ಟು 31.98 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ನಡೆದ ಮಾಂಗಲ್ಯ ಸರ ಕಸಿತ ಪ್ರಕರಣದ ತನಿಖೆ ವೇಳೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪರಿಣಾಮ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

error: Content is protected !!