Home Blog Page 188

ಬೀದರ| ಮಾರ್ಕೆಟ್ ನಲ್ಲಿ ಅಗ್ನಿ ದುರಂತ; 10 ಅಂಗಡಿಗಳು ಸುಟ್ಟು ಭಸ್ಮ, ಮಾಲೀಕರು ಕಣ್ಣೀರು

0

ಬೀದರ್:- ಭೀಕರ ಅಗ್ನಿ ದುರಂತದಲ್ಲಿ ಸುಮಾರು 10 ಅಂಗಡಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಜರುಗಿದೆ.

ಎಸ್, ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಗಣೇಶ್ ಮಾರ್ಕೆಟ್‌ನಲ್ಲಿ ತಡರಾತ್ರಿ ಘಟನೆ ಜರುಗಿದ್ದು, ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಕಾರಣ ಎನ್ನಲಾಗುತ್ತಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ.

ಅಗ್ನಿ ಅವಘಡದಲ್ಲಿ 1 ಚಪ್ಪಲಿ ಅಂಗಡಿ, 1 ಕಿರಾಣಿ ಅಂಗಡಿ, 1 ತರಕಾರಿ ಅಂಗಡಿ ಮತ್ತು 7 ಭಾಂಡೆ ಅಂಗಡಿಗಳು ಸೇರಿದಂತೆ ಒಟ್ಟು 10 ಅಂಗಡಿಗಳು ಸಂಪೂರ್ಣ ಭಸ್ಮವಾಗಿದೆ. ಕೂಡಲೇ ಮಾಹಿತಿ ಆಧರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ದುರದೃಷ್ಟವಶಾತ್ ಅಗ್ನಶಾಮಕದಳ ಸಿಬ್ಬಂದಿ ಬರುವುದು ಕೊಂಚ ತಡವಾದ ಕಾರಣ, ಅಂಗಡಿಗಳು ಸುಟ್ಟು ಕರಕಲಾಗಿವೆ.

ಹಬ್ಬದ ಸೀಸನ್ ಆಗಿದ್ದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ವಸ್ತುಗಳನ್ನು ತರಿಸಲಾಗಿತ್ತು. ಅನಿರೀಕ್ಷಿತ ಬೆಂಕಿ ನಮ್ಮ ಬದುಕನ್ನೇ ಬೀದಿಗೆ ತಂದಿದೆ ಎಂದು ಅಂಗಡಿ ಮಾಲೀಕರು ಕಣ್ಣೀರು ಹಾಕಿದ್ದಾರೆ. ಸರ್ಕಾರ ನಮಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. ಘಟನಾಾ ಸ್ಥಳಕ್ಕೆ ತಹಸೀಲ್ದಾರ್ ಮಹೇಶ ಪಾಟೀಲ ಹಾಗೂ ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಗಂಡ ಬೆತ್ತಲೆ ಓಡಾಟ ಆರೋಪಕ್ಕೆ ಟ್ವಿಸ್ಟ್; ಆಕೆಗೆ 2 ಮದುವೆ, ನಾಲ್ಕನೇ ಗಂಡನ ಹುಡುಕಾಟದಲ್ಲಿದ್ದಾಳೆ! 3ನೇ ಪತಿಯ ಸ್ಪೋಟಕ ಹೇಳಿಕೆ!

0

ಬೆಂಗಳೂರು:- ಮನೆಯಲ್ಲಿ ಎಲ್ಲರ ಮುಂದೆ ಪತಿ ಬೆತ್ತಲೆಯಾಗಿ ಓಡಾಡ್ತಾನೆ ಹಾಗೂ ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡ್ತಾನೆ ಎಂದು ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ ಮೇಘಶ್ರೀ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಪತ್ನಿ ನೀಡಿದ್ದ ಗಂಭೀರ ಆರೋಪಗಳ ಪ್ರಕರಣದಲ್ಲಿ ಇದೀಗ ಹೊಸ ತಿರುವು ಸಿಕ್ಕಿದ್ದು, ಆರೋಪಿ ಪತಿ ಮಂಜುನಾಥ್‌ ಇದೀಗ ಪತ್ನಿ ಮೇಘಶ್ರೀ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾರೆ. ತನ್ನ ಮೇಲೆ ಸೈಕೋ ವರ್ತನೆ ಆರೋಪ ಮಾಡಿದ ಮೇಘಶ್ರೀಗೆ ಈಗಾಗಲೇ ಹಲವು ಮದುವೆಗಳಾಗಿದ್ದು, ನಾಲ್ಕನೇ ಗಂಡನ ಹುಡುಕಾಟದಲ್ಲಿದ್ದಾಳೆ ಎಂದು ಮಂಜುನಾಥ್‌ ದೂರಿದ್ದಾರೆ.

ಶೋಕಿಗಾಗಿ ಗಂಡಂದಿರ ಹಣ ಹಾಗೂ ಚಿನ್ನಾಭರಣ ದುರುಪಯೋಗ ಮಾಡಿಕೊಂಡು, ಎರಡನೇ ಗಂಡನ ಜೊತೆ ಜಾಲಿ ಟ್ರಿಪ್‌ಗಳಿಗೆ ಹೋಗಿದ್ದಾಳೆ ಎಂದು ಆರೋಪಿಸಿದ ಅವರು, ಮೂರನೇ ಗಂಡನಾಗಿ ನನ್ನನ್ನು ಬಲೆಗೆ ಬೀಳಿಸಿ ಸುಮಾರು 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಫೋನ್‌, ಐಪ್ಯಾಡ್‌ ಮತ್ತು ಟ್ಯಾಬ್‌ಗಳನ್ನು ಪಡೆದಿದ್ದಾಳೆ ಎಂದಿದ್ದಾರೆ.

ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಹೇಳಿ ತನ್ನ ವಿರುದ್ಧ ದೂರು
ನೀಡಿದ್ದಾಳೆ. ಆದರೆ ಮದುವೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆಕೆ ನೀಡಿಲ್ಲ. ಅಲ್ಲದೆ, ಮನೆಯಲ್ಲಿ ಬಟ್ಟೆ ಬದಲಿಸುವ ವೇಳೆ ಕದ್ದು ಫೋಟೋ ತೆಗೆದು, ಫೇಕ್‌ ದಾಖಲೆಗಳ ಮೂಲಕ ಆರೋಪ ಮಾಡಿದ್ದಾಳೆ.

ಆಕೆಯ ಮೋಸದ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕೂಡ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನನಗೆ ನ್ಯಾಯ ಬೇಕು ಎಂದು ಪತ್ನಿ ಮೇಘಶ್ರೀ ವಿರುದ್ಧ ಆರೋಪಗಳ ಸುರಿಮಳೆಗೈದರು.

ಬೈಕ್ ಕಳ್ಳತನ, ಚೈನ್ ಸ್ನ್ಯಾಚಿಂಗ್: ಮಂಡ್ಯ ಪೊಲೀಸರಿಂದ ಇಬ್ಬರು ಖದೀಮರು ಅರೆಸ್ಟ್!

0

ಮಂಡ್ಯ:- ಜಿಲ್ಲೆಯಲ್ಲಿ ಮಹಿಳೆಯರ ಮಾಂಗಲ್ಯ ಸರ ಅಪಹರಣ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಖದೀಮರನ್ನು ಮಂಡ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್‌ಗಳಲ್ಲಿ ಬಂದು ಮಹಿಳೆಯರಿಂದ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದ ಮೈಸೂರು ನಿವಾಸಿಗಳಾದ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ ಹಾಗೂ ಸೈಯ್ಯದ್ ಅಯೂಬ್ ಎಂಬ ಇಬ್ಬರನ್ನು ಮೈಸೂರಿನ ರಾಜೀವ್ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 253 ಗ್ರಾಂ ಚಿನ್ನಾಭರಣ, 178 ಗ್ರಾಂ ಬೆಳ್ಳಿಯ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಮತ್ತು ಆಕ್ಸಿಸ್ ಬೈಕ್ ಸೇರಿ ಒಟ್ಟು 31.98 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ನಡೆದ ಮಾಂಗಲ್ಯ ಸರ ಕಸಿತ ಪ್ರಕರಣದ ತನಿಖೆ ವೇಳೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪರಿಣಾಮ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

ಕೊಲ್ಲಾಪುರದ ಡಿವೈಎಸ್‌ಪಿ ವೈಷ್ಣವಿ ಅವರಿದ್ದ ಕಾರು ಅಪಘಾತ; ಚಾಲಕ ಸೇರಿ ಇಬ್ಬರು ಸಾವು!

0

ಚಿತ್ರದುರ್ಗ: ಓವರ್‌ಟೇಕ್ ಮಾಡಲು ಹೋಗಿ ಲಾರಿಗೆ ಕಾರು ಗುದ್ದಿದ ಪರಿಣಾಮ ಕೊಲ್ಲಾಪುರದ ಡಿವೈಎಸ್‌ಪಿ ವೈಷ್ಣವಿ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಭೀಕರ ಅಪಘಾತಕ್ಕೀಡಾಗಿದೆ.

ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ನಡೆದ ಈ ದುರ್ಘಟನೆಯಲ್ಲಿ ಡಿವೈಎಸ್‌ಪಿ ವೈಷ್ಣವಿ ಅವರ ತಾಯಿ ಕಮಲ ಹರಿಬಾಬು (65) ಹಾಗೂ ಕಾರು ಚಾಲಕ ರಾಕೇಶ್ (40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಡಿವೈಎಸ್‌ಪಿ ವೈಷ್ಣವಿ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಡಿವೈಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೈಷ್ಣವಿ ಅವರು ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕ ಓವರ್‌ಟೇಕ್ ಮಾಡುವ ಅವಸರದಲ್ಲಿ ಲಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಮೂವರು ಗಾಯಗೊಂಡಿದ್ದಾರೆ.

ಘಟನೆ ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರಿ ನೌಕರರ ಸಂಘದ ವತಿಯಿಂದ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿರುವುದು ಖುಷಿಯ ಸಂಗತಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ಶನಿವಾರ ನಗರದ ಆದರ್ಶ ಶಿಕ್ಷಣ ಸಮಿತಿ ಕಾಲೇಜು ಮೈದಾನದಲ್ಲಿ ಗದಗ ಜಿಲ್ಲಾ ಸರಕಾರಿ ನೌಕರರ ಸಂಘದಿಂದ ನಡೆದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗುತ್ತದೆ. ಆದರೆ ಸರಕಾರಿ ನೌಕರರ ಸಂಘ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದು ಶ್ಲಾಘನೀಯ. ಲೆದರ್ ಬಾಲ್ ಟೂರ್ನಮೆಂಟ್ ಆಯೋಜಿಸುವುದು ಸುಲಭ. ಆದರೆ ಆಡುವುದು ಕಷ್ಟ. ಅಂಥ ಸವಾಲಿನ ಕ್ರೀಡೆಯಲ್ಲಿ ಸರಕಾರಿ ನೌಕರರು ಭಾಗವಹಿಸಿರುವುದು ಶ್ಲಾಘನೀಯ ಎಂದರು.

ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ಗುಂಜೀಕರ್ ಮಾತನಾಡಿ, ಸರಕಾರಿ ನೌಕರರ ಸಂಘವು ನೌಕರರ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನೌಕರರ ಮನೋಲ್ಲಾಸಕ್ಕಾಗಿ ಇಂಥಹ ಕಾರ್ಯಕ್ರಮ ರೂಪಿಸಿರುವ ಕ್ರಿಯಾಶೀಲ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಅಭಿನಂದನಾರ್ಹರು. ಗದಗ ಜಿಲ್ಲೆಯ ತಂಡ ಉತ್ತಮ ಪ್ರದರ್ಶನ ನೀಡಿ, ರಾಜ್ಯಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಡಿ.ಎಸ್. ತಳವಾರ, ಸಿದ್ದಣ್ಣ ಲಿಂಗದಾಳ, ಡಾ. ಎಸ್.ಎಸ್. ನೀಲಗುಂದ, ಡಾ. ಶರಣು ಗೋಗೇರಿ, ಶಿವಸಂಗಮ ಗ್ರುಪ್‌ನ ಪಲ್ಲೇದ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಜಾನಪದ ಉಳಿಯಬೇಕು ಎಂದರಷ್ಟೇ ಸಾಲದು: ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಾನಪದ ಸಾಹಿತ್ಯ ಶಿಷ್ಟ ಸಾಹಿತ್ಯಕ್ಕೆ ತಾಯಿಯಿದ್ದಂತೆ. ನಮ್ಮ ಜನಪದರು ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆಯದಿದ್ದರೂ ಜಾನಪದ ಹಾಡುಗಳನ್ನು ರಚಿಸಿ ನಮ್ಮ ಜನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಹಮ್ಮಿಕೊಂಡಿದ್ದ ಡಾ. ಬಿ.ಎಸ್. ಗದ್ದಗಿಮಠ ಸಂಸ್ಮರಣೆ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ತಜ್ಞ ಹಾಗೂ ಕನ್ನಡ ಜಾನಪದ ಕಲಾವಿದೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಸಾಹಿತ್ಯ ನಮ್ಮ ಜನಪದರು ನಮಗಾಗಿ ಬಿಟ್ಟುಹೋದ ದೊಡ್ಡ ಆಸ್ತಿ. ಆದರೆ ಇಂದಿನ ಯುವಕರು, ವಿದ್ಯಾರ್ಥಿಗಳಿಗೆ ಜಾನಪದ ಎಂದರೇನು, ಜಾನಪದ ಪರಿಕರಗಳ ಬಗ್ಗೆ ಪರಿಜ್ಞಾನವಿಲ್ಲದಿರುವುದು ವಿಷಾದನೀಯ. ಜಾನಪದ ಉಳಿಯಬೇಕು ಎಂದು ಮಾತಿನಿಂದ ಹೇಳಿದರೆ ಸಾಲದು. ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದಾಗ ಮೈಸೂರು ರಸ್ತೆ ರಾಮನಗರದ ಬಳಿ ಜಾನಪದ ಲೋಕ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರಿ 12 ಎಕರೆ ಜಮೀನು ಮಂಜೂರಿ ಮಾಡಿಸಿ ಅಲ್ಲಿ ಜನಪದರು ಉಪಯೋಗಿಸುತ್ತಿದ್ದ ಪರಿಕರ ಪ್ರದರ್ಶನಕ್ಕೆ ಅನುಕೂಲಿಸಿದ್ದೇನೆ. ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸಲು ಯಾವ ಪಠ್ಯ ಹಾಗೂ ವಿಶ್ವವಿದ್ಯಾಲಯದ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಕ.ವಿ.ವಿ ಕುಲಪತಿ ಡಾ. ಎ.ಎಮ್. ಖಾನ್ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಜಾನಪದ ವಿಭಾಗಕ್ಕೆ ವಿಶೇಷ ಮಾನ್ಯತೆ ತಂದುಕೊಟ್ಟವರೇ ಡಾ. ಬಿ.ಎಸ್. ಗದ್ದಗಿಮಠ ಎಂದು ಹೇಳಿದರು. `ಜಾನಪದ ಜೀವ-ಜೀವಾಳ ಡಾ. ಬಿ.ಎಸ್. ಗದ್ದಗಿಮಠ’ ವಿಷಯದ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಕೆ. ಖಂಡೋಬಾ ಉಪನ್ಯಾಸ ನೀಡಿದರು.

ನೀಲಗಂಗಾ ಚರಂತಿಮಠ ಪ್ರಶಸ್ತಿ ಸ್ವೀಕರಿಸಿ, ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಡಾ. ಸಂಜೀವ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆ ಮೇಲೆ ಸತೀಶ ತುರಮರಿ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ತೇಜಸ್ವಿನಿ ಕಟ್ಟಿಮನಿ, ಡಾ. ಡಿ.ಎಂ. ಹಿರೇಮಠ, ಪ್ರೊ. ಐ.ಜಿ. ಸನದಿ, ಪ್ರೊ. ಸಿ.ಆರ್. ಯರವಿನತೆಲಿಮಠ, ಡಾ. ಅರವಿಂದ ಯಾಳಗಿ, ಡಾ. ಪ್ರಜ್ಞಾ ಮತ್ತಿಹಳ್ಳಿ, ಎಂ.ಎಂ. ಚಿಕ್ಕಮಠ, ಡಾ. ಪಾರ್ವತಿ ಹಾಲಭಾವಿ, ಡಾ. ಮಲ್ಲಿಕಾರ್ಜುನ ಪಾಟೀಲ ಮುಂತಾದವರಿದ್ದರು.

ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪುಲಕೇಶಿ ಗದ್ದಗಿಮಠ ಪ್ರಾಸ್ತಾವಿಸಿದರು. ಶಂಕರ ಕುಂಬಿ ನಿರೂಪಿಸಿದರು. ನಿಜಗುಣಿ ಗದ್ದಗಿಮಠ, ಉಷಾ ಗದ್ದಗಿಮಠ ಅತಿಥಿಗಳನ್ನು ಪರಿಚಯಿಸಿದರು. ರವಿ ಗದ್ದಗಿಮಠ ವಂದಿಸಿದರು.

ಪ್ರಶಸ್ತಿ ಪುರಸ್ಕೃತರಾದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಹನೂರ ಮಾತನಾಡಿ, ಡಾ. ಬಿ.ಎಸ್. ಗದ್ದಗಿಮಠ ಅವರು ಸೂಕ್ತ ಸೌಲಭ್ಯ ಹಾಗೂ ತಾಂತ್ರಿಕ ಸೌಲಭ್ಯವಿಲ್ಲದ ಕಾಲದಲ್ಲಿ ಕರ್ನಾಟಕದಾದ್ಯಂತ ಸಂಚರಿಸಿ ಒಂದು ಲಕ್ಷಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಸಂಗ್ರಹಿಸಿ ನಮ್ಮ ಜಾನಪದ ಕಣಜ ಶ್ರೀಮಂತಗೊಳಿಸಿದ ಪ್ರಾತಃಸ್ಮರಣೀಯರು. ಅಕ್ಷರಗಳು ಮನುಷ್ಯ ಸಂಬಂಧ ಗಟ್ಟಿಗೊಳಿಸುತ್ತವೆ. ರಾಜಕಾರಣದಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೇಕು. ಲೀಲಾವತಿ ಆರ್.ಪ್ರಸಾದ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ ಮಹಾನ್ ಸಾಧಕರು. 1954ರಲ್ಲಿ ಡಾ. ಬಿ.ಎಸ್. ಗದ್ದಗಿಮಠ ಇಡೀ ಭಾರತದಲ್ಲಿ ಜಾನಪದ ಕ್ಷೇತ್ರದಲ್ಲಿ ಪಿ.ಎಚ್.ಡಿ ಪಡೆದ ಮೊದಲಿಗರು. ಅಂಥವರ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿ ನನ್ನ ಘನತೆ ಹೆಚ್ಚಿಸಿದೆ ಎಂದು ಹೇಳಿದರು.

ಡಿ.ಆರ್. ಪಾಟೀಲರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಶ್ರೀ ಸ್ವಾಮಿ ವಿವೇಕಾನಂದರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಗದಗ ಮಾಜಿ ಶಾಸಕರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬಿಜಾಪೂರ ರಾಮಕೃಷ್ಣ ಆಶ್ರಮದ ಪೂಜ್ಯ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರು ಡಿ.ಆರ್. ಪಾಟೀಲರಿಗೆ ಶಾಲು ಹೊದೆಸಿ ಫಲಪುಷ್ಪ ನೀಡಿ ಆಶೀರ್ವದಿಸಿದರು.

ಸರಳ, ಸಜ್ಜನಿಕೆ ಹಾಗೂ ಸಂತ ರಾಜಕಾರಣಿ ಎಂದೇ ಜನಮನದಲ್ಲಿ ನೆಲೆಸಿರುವ ಡಿ.ಆರ್. ಪಾಟೀಲ ಅವರು ಸಮಾಜಮುಖಿ, ಜನಮುಖಿಯಾಗಿ ಕಾರ್ಯ ಮಾಡಿದವರು. ಧಾರ್ಮಿಕ ಮನೋಭಾವದ ಅವರು ನಮ್ಮ ಈ ಆಶ್ರಮ ಸುಂದರವಾಗಿ ರೂಪುಗೊಳ್ಳುವಲ್ಲಿ ಕೊಡುಗೆ ನೀಡಿದ್ದಾರೆ. ಆಶ್ರಮದ ಸಕಲ ಸದ್ಭಕ್ತರ ಪರವಾಗಿ ಸನ್ಮಾನಿಸಲು ಅತೀವ ಸಂತೋಷ ಎನ್ನಿಸುವುದು ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಬಣ್ಣಿಸಿದರು.

ಪೂಜ್ಯ ಸ್ವಾಮಿ ಜಗನ್ನಾಥಾನಂದಜೀ, ಪೂಜ್ಯ ಸ್ವಾಮಿ ಸುಮೇದಾನಂದಜೀ ಹಾಗೂ ಪೂಜ್ಯ ಸ್ವಾಮಿ ಶಿವಪ್ರಿಯಾನಂದ ಜೀ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗಣ್ಯರು, ಆಶ್ರಮದ ಎಲ್ಲ ಸೇವಾ ಸಮಿತಿಯ ಸದ್ಭಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತ್ರಿಕೂಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗುಜರಾತ್‌ನ ಸೋಮನಾಥ ದೇವಾಲಯದ ಪುನರುತ್ಥಾನದ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಸೋಮನಾಥ ಸ್ವಾಭಿಮಾನ ಅಭಿಯಾನದ ಅಂಗವಾಗಿ ಶನಿವಾರ ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ಸೋಮನಾಥ ದೇವಾಲಯದ ಮೇಲೆ ಮುಹಮ್ಮದ ಘಜನಿ ದಾಳಿ ನಡೆಸಿ ಸಾವಿರ ವರ್ಷಗಳು ಪೂರೈಸಿವೆ. ಈ ಹಿಂದೆ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಜನತೆಯ ಸಹಕಾರದೊಂದಿಗೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು. ಆ ಘಟನೆಗೆ 75 ವರ್ಷ ಸಂದ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ನಗರದ ತ್ರಿಕೂಟೇಶ್ವರ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಶಿವ ಪಂಚಾಕ್ಷರಿ ಮಂತ್ರವನ್ನು ಉಚ್ಚರಿಸುತ್ತಾ ಸಾಮೂಹಿಕ ಧ್ಯಾನ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಸೋಮನಾಥ ದೇವಾಲಯವು ಭಾರತೀಯರ ಸ್ವಾಭಿಮಾನದ ಸಂಕೇತ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥನಲ್ಲಿ ಪೂಜೆ ಸಲ್ಲಿಸಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅದರ ಅಂಗವಾಗಿ ಪ್ರತಿ ಮಂಡಲದಲ್ಲಿ ಶಿವನ ಆರಾಧನೆ ಮಾಡಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಶ್ರೀಪತಿ ಉಡುಪಿ, ಸುರೇಶ ಮರಳಪ್ಪನವರ, ಶಂಕರ ಕಾಕಿ, ಸುರೇಶ ಚಿತ್ತರಗಿ ಮುಂತಾದವರು ಇದ್ದರು.

ಮೆಕ್ಕೆಜೋಳ ಬೆಳೆದ ರೈತರ ಗೊಂದಲ ನಿವಾರಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳ ಎಂಎಸ್‌ಪಿ ಅಡಿಯಲ್ಲಿ ಖರೀದಿ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿ ಟಿಎಪಿಎಂಎಸ್ ಮೂಲಕ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಈ ನಡುವೆ ಏಕಾಏಕಿ ಅದನ್ನು ಪೂರ್ಣಗೊಳಿಸದೇ ಮಾರುಕಟ್ಟೆ ಮಧ್ಯಪ್ರವೇಶ ದರ ಅಡಿಯಲ್ಲಿ ನೋಂದಣಿ ಪ್ರಾರಂಭಿಸಿದೆ. ಹೀಗಾದರೆ ಈಗಾಗಲೇ ಎಂಎಸ್‌ಪಿ ಅಡಿಯಲ್ಲಿ ನೋಂದಾಯಿಸಿಕೊಂಡ ರೈತರ ಗತಿಯೇನು ಎಂದು ಟಿಎಪಿಸಿಎಂಎಸ್‌ನ ತಾಲೂಕಾಧ್ಯಕ್ಷ ಸೋಮಣ್ಣ ಉಪನಾಳ ಪ್ರಶ್ನಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಎಂಎಸ್‌ಪಿ ಅಡಿಯಲ್ಲಿ ನೋಂದಾಯಿಸಿಕೊಂಡ ಅಂದಾಜು ಶೇ. 70ಕ್ಕೂ ಅಧಿಕ ರೈತರ ಡೆಲಿವರಿ ಬಾಕಿ ಇದೆ. ಪ್ರಥಮ ಆದ್ಯತೆಯ ಮೇರೆಗೆ ಬಾಕಿಯಿರುವ ರೈತರ ಡೆಲಿವರಿಯನ್ನು ಪಡೆಯಲು ಸರ್ಕಾರ ಶೀಘ್ರವಾಗಿ ಕ್ರಮ ವಹಿಸಬೇಕು. ಇದರೊಂದಿಗೆ ತರಾತುರಿಯಲ್ಲಿ ನೋಂದಣಿಗಾಗಿ ಸೃಷ್ಟಿಸಿದ ತಂತ್ರಾಂಶ ಸಂಪೂರ್ಣ ಅವೈಜ್ಞಾನಿಕವಾಗಿದೆ.
ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಂಪೂರ್ಣ ವೈಜ್ಞಾನಿಕವಾಗಿ ಪ್ರಕ್ರಿಯೆಗೆ ಅಣಿಯಾಗಿ ಕಡಲೆ, ಕುಸುಬಿ, ಬಿಳಿಜೋಳ ಮುಂತಾದವುಗಳಿಗೆ ಬೆಂಬಲ ಬೆಲೆ ಅಡಿಯಲ್ಲಿ ಪ್ರಕ್ರಿಯೆ ನೋಂದಣಿಗೆ ಚಾಲನೆ ನೀಡಿ ರೈತ ಕುಲಕ್ಕೆ ಒಳಿತನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

WPL 2026; ಡೆಲ್ಲಿ ವಿರುದ್ಧ ಸುಲಭವಾಗಿ ಗೆದ್ದು ಲೀಗ್ ನಲ್ಲಿ ಗೆಲುವಿನ ಖಾತೆ ತೆರೆದ ಮುಂಬೈ!

0

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026ರ ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಆರಂಭಿಕ ಆಘಾತಗಳ ನಡುವೆಯೂ ನೇಟ್ ಸೀವರ್ ಬ್ರಂಟ್ (70) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (ಅಜೇಯ 74) ಅವರ ಅದ್ಭುತ ಇನ್ನಿಂಗ್ಸ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿತು.

196 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಿಂದಲೇ ಬ್ಯಾಟಿಂಗ್‌ನಲ್ಲಿ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಮುಖ ಆಟಗಾರ್ತಿಯರ ವೈಫಲ್ಯದಿಂದ 19 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ಚಿನೆಲ್ಲೆ ಹೆನ್ರಿ (56) ಒಬ್ಬರೇ ಹೋರಾಟ ನಡೆಸಿದರೂ ಫಲಿತಾಂಶ ಬದಲಾಯಿಸಲು ಸಾಧ್ಯವಾಗಲಿಲ್ಲ.

ಮುಂಬೈ ಪರ ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್ ಮತ್ತು ಸೀವರ್ ಬ್ರಂಟ್ ಅವರ ಶಿಸ್ತಿನ ಬೌಲಿಂಗ್ ಡೆಲ್ಲಿಯನ್ನು ಸಂಪೂರ್ಣವಾಗಿ ಕಟ್ಟಿಹಾಕಿತು ಎನ್ನಲಾಗಿದೆ.

error: Content is protected !!