Home Blog Page 2

ಪರಿಹಾರದೊಂಗಿಗೆ ಹಣ ಪಾವತಿಸಲು ಆದೇಶ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಸರಸ್ವತಪೂರದ ನಿವಾಸಿಗಳಾದ ಪ್ರೀತಿ ಮತ್ತು ಅವರ ಮಗಳಾದ ಪೂರ್ವಿ ಇವರು ತಮ್ಮ ಗಂಡ/ತಂದೆ ಪ್ರಶಾಂತ ಶಾನಭಾಗ್ ಇವರು ಆಯ್‌ಸಿಆಯ್‌ಸಿಆಯ್ ಲೋಂಬಾರ್ಡ ಇವರಲ್ಲಿ ರೂ.1489 ಪ್ರೀಮಿಯಮ್ ಮತ್ತು ಅದರ ಜೊತೆಗೆ ಪಿ.ಎ. ಕವರೇಜ್ ಮಾಲೀಕ ಮತ್ತು ಡ್ರೈವರ್ ಗೆ ಹೆಚ್ಚಿನ ಮೊತ್ತ ರೂ.375 ಪಾವತಿಸಿ ವಿಮೆಯನ್ನು ಮಾಡಿಸಿದ್ದರು. 11/10/2022ರಂದು ಪ್ರಶಾಂತ ಶಾನಭಾಗ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ದೂರುದಾರರು ತಮ್ಮ ಗಂಡ/ತಂದೆಯ ವಿಮಾ ಹಣವನ್ನು ಕೊಡುವಂತೆ ಎದುರುದಾರರ ಕಂಪನಿಗೆ ದಾಖಲೆಗಳೊಂದಿಗೆ ಬೇಡಿಕೆಯನ್ನು ಇಟ್ಟಿದ್ದರು.

ಎದುರುದಾರರು ಇವರ ಕ್ಲೇಮನ್ನು ನಿರಾಕರಿಸಿ ಪ್ರಶಾಂತ ಶಾನಭಾಗ ಇವರು ಅಪಘಾತದ ಸಮಯದಲ್ಲಿ ಲೈಸನ್ಸ್ನನ್ನು ಹೊಂದಿಲ್ಲದ ಕಾರಣ ದೂರುದಾರರು ವಿಮಾ ಹಣವನ್ನು ಪಡೆಯಲು ಅರ್ಹರಲ್ಲವೆಂದು ಅವರ ಬೇಡಿಕೆಯನ್ನು ನಿರಾಕರಿಸಿದ್ದರು.

ವಿಮಾ ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರೂ ಎದುರುದಾರರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು 11/07/2023ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ.ಹಿರೇಮಠ ಕೂಲಂಕುಷವಾಗಿ ವಿಚಾರಣೆ ನಡೆಸಿದರು. ಪ್ರಶಾಂತ ಇವರು ಹೊಂದಿದ ಡ್ರೈವಿಂಗ್ ಲೈಸನ್ಸ್ ಅವಧಿಯು 03/04/2022ರವರೆಗೆ ಇದ್ದು ಅವರ ಮರಣವು 11/10/2022ರಲ್ಲಿ ಆಗಿದ್ದು, ಎದುರುದಾರರ ಪ್ರಕಾರ ಅವರು ವಿಮಾ ಹಣವನ್ನು ಪಡೆಯಲು ಅರ್ಹರಲ್ಲರೆಂದು ಹೇಳಿತ್ತ್ತು. ದೂರುದಾರರ ವಕೀಲರು ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಿದಾಗ ಮೋಟರ್ ವಾಹನದ ಕಾಯ್ದೆಯ ಕಲಂ ಪ್ರಕಾರ ಪ್ರಶಾಂತ ಶಾನಭಾಗ ಇವರ ಲೈಸ್ಸನ್ಸ್ ಮುಂದಿನ 10 ವರ್ಷದವರೆಗೂ ಅನ್ವಯವಾಗುವ ಅಂಶಗಳನ್ನು ಸಾಬೀತುಪಡಿಸಿದಾಗ ಅದನ್ನು ಪರಿಶೀಲಿಸಿ ನೋಡಿದಾಗ ದೂರುದಾರರು ತಾವು ಕೇಳಿದಂತಹ ವಿಮಾ ಹಣವನ್ನು ಪಡೆಯಲು ಅರ್ಹರಿದ್ದಾರೆಂದು ಆಯೋಗವು ಅಭಿಪ್ರಾಯ ಪಟ್ಟು ಎದುರುದಾರರಿಗೆ ವಿಮಾ ಹಣ ರೂ.15 ಲಕ್ಷದ ಜೊತೆಗೆ ಅವರು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಅನಾನುಕೂಲತೆಗೆ 50 ಸಾವಿರ ರೂ ಪರಿಹಾರ ಮತ್ತು 10 ಸಾವಿರ ರೂ ಪ್ರಕರಣದ ಖರ್ಚು-ವೆಚ್ಚ ಕೊಡುವಂತೆ ಆಯ್‌ಸಿಆಯ್‌ಸಿಆಯ್ ಲೋಂಬಾರ್ಡ ವಿಮಾ ಕಂಪನಿಗೆ ಆಯೋಗವು ಆದೇಶಿಸಿದೆ.

ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ದಿವ್ಯ ಪ್ರಭು

0
ವಿಜಯಸಾಕ್ಷಿ ಸುದ್ದಿ, ಧಾರವಾಡ : ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದರೂ ಸಹ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ತಹಸೀಲ್ದಾರರು ನಿಗಾ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರು, ಮೇವು ಹಾಗೂ ಬರ ಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸದ್ಯ 52 ಗ್ರಾಮಗಳಲ್ಲಿ 81 ಖಾಸಗಿ ಒಡೆತನದ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಧಾರವಾಡದಲ್ಲಿ 18 ಗ್ರಾಮಗಳಿಗೆ 26 ಕೊಳವೆ ಬಾವಿಗಳಿಂದ ಹಾಗೂ ಹುಬ್ಬಳ್ಳಿಯಲ್ಲಿ 5 ಗ್ರಾಮಗಳಿಗೆ 5 ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಯಾವುದೇ ಗ್ರಾಮದಲ್ಲಿಯೂ ನೀರಿನ ಸಮಸ್ಯೆಯಾಗದಂತೆ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಎಲ್ಲಿಯಾದರೂ ಜಾನುವಾರು ಅಥವಾ ಮಳೆ ಹಾನಿಯಾದಲ್ಲಿ ತಹಸೀಲ್ದಾರರು ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿ, ತಕ್ಷಣವೇ ಪರಿಹಾರ ನೀಡುವಂತೆ ಸೂಚಿಸಿದರು.
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೊಳ್ಳಿ ಗ್ರಾಮದ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಅಪಾಯವಿರುವುದರಿಂದ ತಹಸೀಲ್ದಾರರು ತಕ್ಷಣ ಪರಿಶೀಲಿಸುವಂತೆ ತಿಳಿಸಿದರು.
ಅಲ್ಲದೇ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನೀರಿನ ಟ್ಯಾಂಕ್‌ಗೆ ಸಮರ್ಪಕವಾಗಿ ನೀರು ಪೂರೈಕೆಯಾಗದ ಕುರಿತು ಅಹವಾಲು ಕೇಳಿಬಂದಿದ್ದು, ಧಾರವಾಡ ತಹಸೀಲ್ದಾರ ತಕ್ಷಣವೇ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಮೇವಿನ ಸಮಸ್ಯೆಯಿಲ್ಲ. ಈಗಾಗಲೇ 62,463 ಮೆಟ್ರಿಕ್ ಟನ್ ಮೇವು ಸಂಗ್ರಹವಿದ್ದು ರೈತರಿಗಾಗಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದರು. ಮಲಪ್ರಭಾ ಬಲದಂಡೆ ಕಾಲುವೆಯಿಂದ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳದ 58 ಕೆರೆಗಳಿಗೆ ನೀರು ಸರಬರಾಜು ಆಗುತ್ತಿದ್ದು, ಬಹುತೇಕ ಕಡೆ ಕೆರೆಗಳು ಭರ್ತಿಯಾಗುತ್ತಿವೆ. ಈ ಬಗ್ಗೆ ತಹಸೀಲ್ದಾರರು ಭೇಟಿ ನೀಡಿ ಪರಿಶೀಲಿಸಬೇಕು. ನೀರು ಎಲ್ಲಿಯೂ ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ, ನಿಗಾ ವಹಿಸಬೇಕೆಂದರು. ಮೇ 23ಕ್ಕೆ ನೀರು ಸರಬರಾಜು ಸ್ಥಗಿತಗೊಂಡು ಮುಂದೆ ಗದಗ ಜಿಲ್ಲೆಗೆ ಪೂರೈಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕೆಂದು ನಗರ ನೀರು ಸರಬರಾಜು ಮಂಡಳಿ ಮುಖ್ಯ ಇಂಜಿನಿಯರರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಕೃಷಿ ಜಂಟಿ ನಿರ್ದೇಶಕ ಕಿರಣಕುಮಾರ ಎಂ. ಸೇರಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರರು ಉಪಸ್ಥಿತರಿದ್ದರು.
ಜಿಲ್ಲೆಗೆ ಈಗಾಗಲೇ ಒಟ್ಟು 108.12 ಕೋಟಿ ರೂ ಬರ ಪರಿಹಾರ ಅನುದಾನ ಬಿಡುಗಡೆಯಾಗಿದೆ. ವಿವಿಧ ತಾಂತ್ರಿಕ ಕಾರಣಗಳಿಂದ ಎಲ್ಲ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮೆ ಆಗದಿರುವ ಬಗ್ಗೆ ತಹಸೀಲ್ದಾರರು ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಫ್ರುಟ್ಸ್ಐಡಿ, ಆಧಾರ್ ಲಿಂಕ್, ಡಿಲಿಶನ್ ಪ್ರಕರಣ, ಮಿಸ್‌ಮ್ಯಾಚ್ ಪ್ರಕರಣ, ಶಿಫ್ಟೆಡ್ ಪ್ರಕರಣ, ನಾಟ್ ಟ್ರೇಸಿಯೇಬಲ್ ಪ್ರಕರಣ, ಡೆತ್ ಪ್ರಕರಣಗಳಲ್ಲಿಯೂ ನ್ಯೂನತೆಗಳನ್ನು ತಹಸೀಲ್ದಾರರು ಆದ್ಯತೆ ಮೇರೆಗೆ ಸರಿಪಡಿಸಿಕೊಳ್ಳಬೇಕು. ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮಲೆಕ್ಕಾಧಿಕಾರಿಗಳಿಂದ ತ್ವರಿತಗತಿಯಲ್ಲಿ ಬರ ಪರಿಹಾರ ಕಾರ್ಯ ಸರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. 

ಬಸ್ ಘಟಕ, ಚಾಲಕರ ತರಬೇತಿ ಕೇಂದ್ರಕ್ಕೆ ಭೇಟಿ

0

ವಿಜಯಸಾಕ್ಷಿ ಸುದ್ದಿ, ಹಾವೇರಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಅವರು ಗುರುವಾರ ಹಾವೇರಿ ವಿಭಾಗ ವ್ಯಾಪ್ತಿಯ ಶಿಗ್ಗಾಂವ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ಘಟಕ ಹಾಗೂ ಚಾಲಕರ ತರಬೇತಿ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ಮಾಡಿದರು. ಕಾಮಗಾರಿ ಕಾರ್ಯವನ್ನು ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ನಿರ್ವಹಿಸಲು ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ಸವಣೂರು ಬಸ್ ನಿಲ್ದಾಣ ಮತ್ತು ಘಟಕಕ್ಕೆ ಭೇಟಿ ನೀಡಿ ಅನುಸೂಚಿಗಳ ಕಾರ್ಯಾಚರಣೆ ಪರಿಶೀಲನೆ ಮಾಡಿ, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗುವುದರಿಂದ ಸಾರ್ವಜನಿಕ ಪ್ರಯಾಣಿಕರು ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಯಾವುದೇ ರೀತಿಯ ಅನಾನುಕೂಲತೆ ಆಗದಂತೆ ಸುಗಮ ಸಾರಿಗೆ ಕಾರ್ಯಾಚರಣೆ ಮಾಡಲು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳದಲ್ಲಿ ಹಾಜರಿದ್ದ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿಭಾಗದ ಮತ್ತು ಘಟಕದ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯದ ಪ್ರೌಢಶಾಲೆಯ 2023/24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ

SJJM United Undergraduate College High SchoolSJJM United Undergraduate College High School

ಜಾಫರಸಾಧಿಕ್ ಶೇಖ 556 ಅಂಕ ಪಡೆದು ಪ್ರಥಮ ಸ್ಥಾನ, ಸುಪ್ರೀತಾ ಹುರಕಡ್ಲಿ 514 ಅಂಕ ಪಡೆದು ದ್ವಿತೀಯ ಸ್ಥಾನ, ಲಕ್ಷ್ಮಿ ಚಳ್ಳಣ್ಣವರ 502 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಇ.ಎಂ. ಗುಳೆದಗುಡ್ಡ ಪ್ರಕಟಣೆಗೆ ತಿಳಿಸಿದ್ದಾರೆ.

ಅಂಜಲಿ ಅಂಬಿಗೇರ ಹತ್ಯೆಯ ಆರೋಪಿಯನ್ನು ಬಂಧಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯಲ್ಲಿ ಗಂಗಾಮತ ಸಮಾಜದ ಅಂಜಲಿ ಅಂಬಿಗೇರ ಹತ್ಯೆಯ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಗದಗ ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಬಿ.ಎನ್. ಯರನಾಳ, ಹುಬ್ಬಳ್ಳಿಯ ಸಹೋದರಿ ನೇಹಾ ಹಿರೇಮಠ ಹತ್ಯೆಯ ವಿಷಯ ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಭೀಕರವಾಗಿ ಹತ್ಯೆಯಾಗಿದ್ದಾಳೆ.

ಅಂಜಲಿಯ ಹತ್ಯೆಯಿಂದ ಇಡೀ ಕುಟುಂಬವೇ ಬೀದಿಗೆ ಬಂದಂತಾಗಿದೆ. ಕಾರಣ, ಕೂಡಲೇ ಹತ್ಯೆಗೈದ ಆರೋಪಿಯನ್ನು ಬಂಧಿಸಿ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಂದತೆ ಆರೋಪಿಗೆ ಉಗ್ರವಾದ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಅಂಜಲಿ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿ.ಬಿ. ಬಾರಕೇರ, ಆರ್.ಪಿ. ಹುನಗುಂದ, ಮಾರುತಿ, ರಾಮಣ್ಣ ಬಾರಕೇರ, ಗುರು ಎಚ್. ತಿರ್ಲಾಪೂರ, ಯಲ್ಲಪ್ಪ ಎಸ್.ಹುನಗುಂದ, ಕೆ.ಎಸ್. ಬಳಗಾನೂರ, ಯಚ್ಚರಪ್ಪ ಬಾರಕೇರ, ಗುರುಶಾಂತ ಸೂಡಿ, ವಾಸುದೇವ, ಎಸ್.ಎಚ್. ಸುಣಗಾರ, ಅಶೋಕ, ಭಾವನಾ, ವಿಶಾಲಾಲಕ್ಷಿ ಗುಳಬಾಳ, ಪಿ.ಎನ್. ಓಲೆಕಾರ, ನಾಗಪ್ಪ ಸುಣಗಾರ, ವಿ.ಎಸ್. ಬಾರಕೇರ, ಪಿ.ಬಿ. ಬಾರಕೇರ, ಮಾಲತೇಶ ಉಪಸ್ಥಿತರಿದ್ದರು.

ನಿರ್ದೇಶನ ಉಲ್ಲಂಘಿಸಿದರೆ ಕಾನೂನು ಕ್ರಮ : ಜಿಲ್ಲಾಧಿಕಾರಿ ದಿವ್ಯ ಪ್ರಭು

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ರಾಜ್ಯ ಸರಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೆ ಅವರ ಸಾಲದ ಖಾತೆಗೆ ಹಣ ಹೊಂದಾಣಿಕೆ ಮಾಡದಿರುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈಗಾಗಲೇ ಸಾಕಷ್ಟು ಬಾರಿ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ.

ಆದಾಗ್ಯೂ ಕುಂದಗೋಳ, ನವಲಗುಂದ ಸೇರಿ ಕೆಲವು ಕಡೆ ಬ್ಯಾಂಕಗಳು ಪರಿಹಾರ ಹಣವನ್ನು ರೈತರ ಸಾಲಕ್ಕೆ ಹೊಂದಿಸುತ್ತಿರುವ ಕುರಿತು ದೂರು, ವರದಿಗಳು ಬರುತ್ತಿವೆ. ಈ ವಿಷಯದಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ನೀಡಿರುವ ನಿರ್ದೇಶನ ಉಲ್ಲಂಘಿಸಿದರೆ ಅಂತಹ ಬ್ಯಾಂಕಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಮಿತಿಯ ಸಹ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2024ರ ಮುಂಗಾರು ವಿಫಲವಾಗಿದ್ದರಿಂದ ರಾಜ್ಯ ಸರಕಾರ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪಡೀತ ತಾಲೂಕುಗಳೆಂದು ಘೋಷಣೆ ಮಾಡಿ, ಸರಕಾರದ ನಿಯಮಾವಳಿಗಳ ಪರಿಹಾರ ಹಣ, ಇತರ ಸೌಲಭ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗುತ್ತಿರುವದರಿಂದ ರೈತರು ಭೂಮಿ ಉಳುಮೆ ಮಾಡಿ ಬಿತ್ತನೆಗೆ ಸಿದ್ದಗೊಳಿಸಬೇಕು, ಬೀಜ, ಗೊಬ್ಬರ ಖರೀದಿಸಬೇಕು. ಅವರ ನೆರವಿಗಾಗಿ ರಾಜ್ಯ ಸರಕಾರವು ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ನೇರವಾಗಿ ಬರಪರಿಹಾರ ಜಮೆ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರೈತರಿಗೆ ಸರಕಾರಗಳಿಂದ ನೀಡುವ ಸಹಾಯಧನ, ಸಬ್ಸಿಡಿ, ಬರಪರಿಹಾರ ಮುಂತಾದವುಗಳನ್ನು ರೈತರ ಬ್ಯಾಂಕ್ ಸಾಲದ ಖಾತೆಗೆ ಹೊಂದಾಣಿಕೆ ಮಾಡದಂತೆ ರಾಜ್ಯ ಸರಕಾರ ಮತ್ತು ರಾಜ್ಯಮಟ್ಟದ ಬ್ಯಾಂಕರ್ಸ್ ಕಮೀಟಿ ಸೂಚಿಸಿವೆ. ಈ ಕುರಿತು ಪತ್ರವನ್ನೂ ಹೊರಡಿಸಿವೆ. ಅದರಂತೆ ಧಾರವಾಡ ಜಿಲ್ಲಾಡಳಿತವು ಕಳೆದ ವರ್ಷ ಮತ್ತು ಈ ವರ್ಷದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಜಿಲ್ಲೆಯ ಪ್ರತಿ ಬ್ಯಾಂಕ್ ಮುಖ್ಯಸ್ಥರಿಗೆ, ವ್ಯವಸ್ಥಾಪಕರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವಿಶ್ವ ಸಾಹಿತ್ಯಕ್ಕೆ ವಚನಗಳ ಕೊಡುಗೆ ಅಪಾರ : ಗಂಗಾಂಬಿಕೆ ಅಕ್ಕನವರು

0

ವಿಜಯಸಾಕ್ಷಿ ಸುದ್ದಿ, ಗದಗ : ಬಸವಾದಿ ಶರಣರ ವಚನಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ವಿಶ್ವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ. ವಚನ ಸಾಹಿತ್ಯದ ನಾಯಕ ಬಸವಣ್ಣನವರು ಭಾರತದ ಸಾಂಸ್ಕೃತಿಕ ನಾಯಕರಾಗುವ ಕಾಲ ಬಹಳ ದೂರವಿಲ್ಲ. ಅಲ್ಲದೇ ವಿಶ್ವಕ್ಕೆ ಪ್ರಜಾಪ್ರಭುತ್ವವನ್ನು ಮೊಟ್ಟಮೊದಲು ಕೊಟ್ಟ ಕೀರ್ತಿ ಬಸವಣ್ಣನವರದ್ದು. ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಸಮಾನತೆಗಾಗಿ, ರಾಜಕೀಯವಾಗಿ, ನ್ಯಾಯಯುತವಾಗಿ, ಹೀಗೆ ಹತ್ತು ಹಲವಾರು ಕ್ರಾಂತಿಗಳನ್ನು ಮಾಡಿದವರು ಬಸವಣ್ಣ ಎಂದು ಶರಣೆ ಗಂಗಾಂಬಿಕೆ ಅಕ್ಕನವರು ಅಭಿಪ್ರಾಯಪಟ್ಟರು.

ಅವರು ಗದುಗಿನ ಶಿವಾನಂದ ನಗರದ ಬಸವ ಸಮುದಾಯಭವನದಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಬಸವದಳದ 1593ನೇ ಶರಣ ಸಂಗಮದಲ್ಲಿ `ಶರಣರು ಕಂಡ ಬಸವಣ್ಣ’ ವಿಷಯದ ಕುರಿತು ಮಾತನಾಡುತ್ತಿದ್ದರು.

ಅತಿಥಿಗಳಾಗಿ ಆಗಮಿಸಿದ ಭದ್ರಾವತಿಯ ಶರಣ ಎಚ್.ಎಸ್. ಬಸವರಾಜಪ್ಪ, ಅಧ್ಯಕ್ಷತೆ ವಹಿಸಿದ್ದ ಶರಣ ವಿ.ಕೆ. ಕರೇಗೌಡ್ರ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರು ವೇದಿಕೆಯ ಮೇಲಿದ್ದರು.

ಶರಣೆ ಮಂಜುಳಾ ಹಾಸಿಲಕರ ವಚನ ಪ್ರಾರ್ಥನೆ ಹಾಡಿದರು. ಶರಣ ಕೆ.ಎಸ್. ಬಾಳಿಕಾಯಿ ಸ್ವಾಗತಿಸಿದರು.

ಪ್ರಾಸ್ತಾವಿಕವಾಗಿ ಪ್ರಕಾಶ ಅಸುಂಡಿಯವರು ಮಾತನಾಡಿದರು. ಗೌರಕ್ಕ ಬಡಿಗಣ್ಣವರ ಕಾರ್ಯಕ್ರಮ ನಿರೂಪಿಸಿದರೆ, ಶರಣು ಸಮರ್ಪಣೆಯನ್ನು ಮಂಗಳಕ್ಕ ಕಾಮಣ್ಣವರ ನೆರವೇರಿಸಿದರು.

ಸಮಾರಂಭದಲ್ಲಿ ಶರಣರಾದ ಎಸ್.ಎನ್. ಹಕಾರಿ, ಎನ್.ಎಚ್. ಹಿರೇಸಕ್ಕರಗೌಡ್ರ, ಬಿ.ವಿ. ಕಾಮಣ್ಣವರ, ಎನ್.ಎಸ್. ಬಡಿಗಣ್ಣವರ, ಎಸ್.ಎ. ಮುಗದ, ಎಂ.ಬಿ. ಲಿಂಗಧಾಳ, ಮೃತ್ಯುಂಜಯ ಜಿನಗಾ, ಮಂಜುನಾಥ ಅಸುಂಡಿ, ಶರಣು ಅಂಗಡಿ, ಮಲ್ಲಣ್ಣ ಜಿನಗಾ, ಸೋಮು ಪುರಾಣಿಕ, ಅನಿಲ ಬುರ್ಲಿ, ಮಹಾಂತೇಶ ಅಂಗಡಿ, ಹಳ್ಳಿಕೇರಿ, ಬಂಡಿ, ಶರಣೆಯರಾದ ಗಿರಿಜಕ್ಕ ಧರ್ಮರಡ್ಡಿ, ಪಾರ್ವತೆಮ್ಮ ಬುರ್ಲಿ, ಜಯಶ್ರೀ ಹಳ್ಳಿಕೇರಿ, ಶಕುಂತಲಾ ಗುಡಗೇರಿ, ಬಸವಶ್ರೀ, ಶಿಲ್ಪಾ ಬುರ್ಲಿ, ಲೀಲಾವತಿ ಬಳ್ಳೊಳ್ಳಿ, ನಾಗರತ್ನ ಅಸುಂಡಿ, ಲಕ್ಷ್ಮೀ ಅಂಗಡಿ, ರೇಣುಕಾ ಹಾಸಿಲಕರ, ಗಿರಿಜಾ ಹಿರೇಮಠ, ರೂಪಾ ಕಾಮಣ್ಣವರ, ಗಂಗಮ್ಮ ಹೂಗಾರ ಮುಂತಾದವರು ಭಾಗವಹಿಸಿದ್ದರು.

ದಿವ್ಯ ಚೇತನ ಶಾಲೆಗೆ ಉತ್ತಮ ಫಲಿತಾಂಶ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸಮೀಪದ ನೀಲಗುಂದ ಗ್ರಾಮದ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆಯು 2023/24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದೆ.

SSLC ExamSSLC ExamSSLC ExamSSLC Exam

ರವಿ ಎಂ.ಮರಿಲಿಂಗಪ್ಪನವರ ಶೇ 96.84, ವಿನಾಯಕ ಆರ್.ಕಂಬಳಿ ಶೇ 95.84, ಪ್ರತಿಭಾ ಆರ್.ಕುರ್ತಕೋಟಿ ಶೇ 93.6, ಸಂಜನಾ ವಿ.ಪೂಜಾರ ಶೇ 92.8, ಕೆ.ಎಸ್. ಪ್ರತಾಪರೆಡ್ಡಿ ಶೇ 92.64 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಅಭಿನಂದಿಸಿದ್ದಾರೆ.

ಯೋಗ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆ ಫಲಿತಾಂಶ

0

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರ ಸಂಯೋಜನೆಯಲ್ಲಿ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಗದಗ ನಡೆಸಿದ 2022-2023ನೇ ಸಾಲಿನ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಸ್ (CYS) ಕೋರ್ಸ್ನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬಸವ ಯೋಗ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 30 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ವಿಶೇಷ ಉನ್ನತ ಶ್ರೇಣಿ (First Class with Distinctions)ಯಲ್ಲಿ ಉತ್ತೀರ್ಣರಾಗಿದ್ದಾರೆ.

Gadag, gadaganews, latestnews, updatenews, Gadag, gadaganews, latestnews, updatenews,

ಇವರಲ್ಲಿ ಶ್ರೀಕೃಷ್ಣ ಆವಟಿ, ಭೀಮಾಂಬಿಕಾ ಪಾಟೀಲ, ಪವಿತ್ರಾ ಎಂ.ಡಿ. ಇವರು ಹೆಚ್ಚಿನ ಅಂಕ ಗಳಿಸಿ ಕೇಂದ್ರಕ್ಕೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

ಯೋಗ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದ ಮತ್ತು ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಬಸವ ಯೋಗ ಕೇಂದ್ರದ ಅಧ್ಯಕ್ಷರಾದ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಚೇರಮನ್ ಪ್ರೊ. ಎಸ್.ವಿ. ಸಂಕನೂರ, ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ, ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಆಯ್.ಬಿ. ಕೊಟ್ಟೂರಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ರೋಣದಲ್ಲಿ ಜೆಟಿಟಿಸಿ ತರಬೇತಿ ಆರಂಭ

ವಿಜಯಸಾಕ್ಷಿ ಸುದ್ದಿ, ರೋಣ : ರಾಜ್ಯ ಸರಕಾರ ತನ್ನ ಮೊದಲ ಬಜೆಟ್‌ನಲ್ಲಿ ರೋಣ ನಗರಕ್ಕೆ 50 ಕೋಟಿ ರೂ ವೆಚ್ಚದ ಜೆಟಿಟಿಸಿ ತರಬೇತಿ ಕೇಂದ್ರವನ್ನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದ ತರಬೇತಿ ಹೊಂದುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಆರಂಭವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗುರುವಾರ ರೋಣ ನಗರಕ್ಕೆ ಜೆಟಿಟಿಸಿ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳ ವಿಕ್ಷಣೆಗೆ ಆಗಮಿಸಿದ ಸಂಧರ್ಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರೋಣ ನಗರ ಸೇರಿದಂತೆ ತಾಲೂಕಿನಲ್ಲಿ ತರಬೇತಿ ಶಿಕ್ಷಣ ಕೇಂದ್ರಗಳ ಆವಶ್ಯಕತೆಯಿದೆ ಎಂಬುದನ್ನು ಮನಗಂಡು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದೆ. ಸರಕಾರ ನನ್ನ ಮನವಿಗೆ ಸ್ಪಂದಿಸಿ ತಾಲೂಕಿಗೆ ಜೆಟಿಟಿಸಿ ಮಹಾವಿದ್ಯಾಲಯವನ್ನು ಮಂಜೂರು ಮಾಡಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿಯಾಗಿ ಸಿಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಮಹಾವಿದ್ಯಾಲಯದ ಹಿರಿಯ ಅಧಿಕಾರಿ ಲಕ್ಷ್ಮಿಕಾಂತ ಮಾತನಾಡಿ, ಜೆಟಿಟಿಸಿ ಕೇಂದ್ರದಲ್ಲಿ ತರಬೇತಿ ಹೊಂದುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿಯೂ ಮಾನ್ಯತೆ ಇರಲಿದೆ. ಅಲ್ಲದೆ, ಸರಕಾರದ ಸಂಸ್ಥೆಯಾಗಿರುವುದರಿಂದ ಮಹಾವಿದ್ಯಾಲಯದೊಂದಿಗೆ 365 ಪ್ರತಿಷ್ಠಿತ ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ದೂರಾಗಲಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ 35 ಜೆಟಿಟಿಸಿ ಕೇಂದ್ರ ವಿದ್ಯಾರ್ಥಿಗಳಿಗೆ ಅನೇಕ ಮಹತ್ತರ ವಿಷಯಗಳಲ್ಲಿ ತರಬೇತಿಯನ್ನು ನೀಡುತ್ತಿದ್ದು, ಶಾಸಕರ ಇಚ್ಛೆಯಂತೆ ರೋಣ ನಗರದಲ್ಲಿ ತನ್ನ ಕೇಂದ್ರವನ್ನು ಈ ಸಾಲಿನಿಂದ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ಸಿಗುವ ಶೈಕ್ಷಣಿಕ ಚಟುವಟಿಕೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದ ಅವರು, ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಬದಾಮಿ ರಸ್ತೆಯ ಗಿರಡ್ಡಿ ಮಹಾವಿದ್ಯಾಲಯದಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
ಐ.ಎಸ್. ಪಾಟೀಲ, ಅರವಿಂದ್, ಕೆ.ವಿ. ನಾರಾಯಣ್, ಮಾರುತಿ ಭಜಂತ್ರಿ, ಬಸವರಾಜ ನವಲಗುಂದ ಉಪಸ್ಥಿತರಿದ್ದರು.

 

ಜೆಟಿಟಿಸಿಯಲ್ಲಿ ಸದ್ಯ ನಾಲ್ಕು ಕೋರ್ಸ್ಗಳನ್ನು ಆರಂಭಿಸಲಾಗುತ್ತಿದ್ದು, 260 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಇನ್ನು ನಾಲ್ಕು ವರ್ಷದ ಡಿಪ್ಲೋಮಾ ಕೋರ್ಸ್ ಮುಗಿಸಿದ ತಕ್ಷಣ ಒಡಂಬಡಿಕೆ ಮಾಡಿಕೊಂಡ ಕಂಪನಿಗಳಲ್ಲಿ 15ರಿಂದ 20 ಸಾವಿರ ಭತ್ಯೆ ಪಡೆದು ಮತ್ತಷ್ಟು ತರಬೇತಿ ಪಡೆಯುವ ಅವಕಾಶವಿದೆ. ಜೊತೆಗೆ ವಿದೇಶದಲ್ಲಿಯೂ ಕಾರ್ಯನಿರ್ವಹಿಸಲು ಜೆಟಿಟಿಸಿ ಸಹಕರಿಸಲಿದೆ.
– ಲಕ್ಷ್ಮಿಕಾಂತ.
ಜೆಟಿಟಿಸಿ ಹಿರಿಯ ಅಧಿಕಾರಿ.

error: Content is protected !!