Home Blog Page 210

10 ಹೆಣ್ಣುಮಕ್ಕಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಕುಟುಂಬದಲ್ಲಿ ಸಂಭ್ರಮ

0

ಹರಿಯಾಣ: ಹರಿಯಾಣದಲ್ಲಿ ಮಹಿಳೆಯೊಬ್ಬಳು ಹತ್ತು ಹೆಣ್ಣುಮಕ್ಕಳ ಬಳಿಕ ಇದೀಗ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿ ಚರ್ಚೆಗೆ ಕಾರಣವಾಗಿದೆ. ತಾಯಿ ಮತ್ತು ಶಿಶುವಿನ ಆರೋಗ್ಯದ ಜೊತೆಗೆ, ಗಂಡು ಮಗು ಬೇಕೇ ಬೇಕು ಎನ್ನುವ ಮನಸ್ಥಿತಿಯ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ.

ಜಿಂದ್ ಜಿಲ್ಲೆಯ ಉಚಾನಾ ಪಟ್ಟಣದ ಓಜಾಸ್ ಆಸ್ಪತ್ರೆಯಲ್ಲಿ ಮಹಿಳೆ ತನ್ನ 11ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹೆರಿಗೆ ಅತ್ಯಂತ ಅಪಾಯಕರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ವೈದ್ಯ ಡಾ. ನರವೀರ್ ಶಿಯೋರನ್ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ತಾಯಿಗೆ ಮೂರು ಯುನಿಟ್ ರಕ್ತ ನೀಡಬೇಕಾಯಿತು. ಪ್ರಸ್ತುತ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜನವರಿ 3ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವರು ಈಗ ಫತೇಹಾಬಾದ್ ಜಿಲ್ಲೆಯ ತಮ್ಮ ಹಳ್ಳಿಗೆ ಮರಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ದಿನಗೂಲಿ ಕಾರ್ಮಿಕರಾಗಿರುವ ತಂದೆ ಸಂಜಯ್ ಕುಮಾರ್, “ನಮಗೂ ಹಾಗೂ ನನ್ನ ಹೆಣ್ಣುಮಕ್ಕಳಿಗೂ ತಮ್ಮನೊಬ್ಬ ಬೇಕೆಂಬ ಆಸೆ ಇತ್ತು” ಎಂದು ಹೇಳಿದ್ದಾರೆ.

2007ರಲ್ಲಿ ವಿವಾಹವಾದ ದಂಪತಿಗೆ ಹಿರಿಯ ಮಗಳು 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಉಳಿದ ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದಾರೆ. “ನಮ್ಮ ಆದಾಯ ಕಡಿಮೆ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆ. ಏನೇ ನಡೆದರೂ ಅದು ದೇವರ ಇಚ್ಛೆ. ಇದರಲ್ಲಿ ನಾನು ಸಂತೋಷವಾಗಿದ್ದೇನೆ” ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.

ಹಣದಾಸೆಗೆ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ತಂದೆ: 12 ಮಂದಿ ಬಂಧನ

0

ಚಿಕ್ಕಮಗಳೂರು, ಜನವರಿ 07: ತಂದೆ ಎಂದರೆ ರಕ್ಷಕ, ಆದರೆ ಇಲ್ಲಿ ತಂದೆಯೇ ಮಗಳ ಪಾಲಿಗೆ ಅತಿ ದೊಡ್ಡ ಭಕ್ಷಕನಾಗಿ ಪರಿಣಮಿಸಿರುವ ಭೀಕರ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಪತ್ತೆಯಾಗಿದೆ. ಹಣದಾಸೆಗೆ ಅಂಧನಾದ ತಂದೆ, ತನ್ನ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿ, ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರಕ್ಕೆ ಕಾರಣನಾಗಿದ್ದಾನೆ.

ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, PUC ಮುಗಿಸಿದ ಬಳಿಕ ತಂದೆಯ ಬಳಿ ವಾಪಸ್ಸಾಗಿದ್ದಳು. ಡಿಸೆಂಬರ್‌ನಲ್ಲಿ ಅಜ್ಜಿಯ ಮನೆಗೆ ಹೋಗಿ ಬಂದಿದ್ದ ಬಾಲಕಿಗೆ, ಮತ್ತೊಮ್ಮೆ ಅಜ್ಜಿಯಿಂದ ಕರೆ ಬಂದಿದೆ ಎಂದು ನಂಬಿಸಿ ಕರೆದುಕೊಂಡು ಹೋಗಲಾಗಿದೆ. ಆದರೆ ಅದು ದಂಧೆಯ ಮೊದಲ ಹೆಜ್ಜೆಯಾಗಿತ್ತು.

ಅಜ್ಜಿಯ ಮನೆಯಲ್ಲಿ ಪರಿಚಯವಾದ ಭರತ್ ಶೆಟ್ಟಿ ಎಂಬಾತ ತಂದೆ-ಮಗಳೊಂದಿಗೆ ಆತ್ಮೀಯತೆ ಬೆಳೆಸಿ, ತನ್ನ ಮನೆಗೆ ಬಂದು ತಂಗುವಂತೆ ಸೂಚಿಸಿದ್ದಾನೆ. ತಂದೆಯ ಒಪ್ಪಿಗೆಯೊಂದಿಗೆ ಇಬ್ಬರೂ ಭರತ್ ಶೆಟ್ಟಿಯೊಂದಿಗೆ ಮಂಗಳೂರಿಗೆ ತೆರಳಿದ್ದಾರೆ.

ಮಾರ್ಗ ಮಧ್ಯೆ ತಾನು ಮುಟ್ಟಾಗಿರುವುದಾಗಿ ಬಾಲಕಿ ತಂದೆಗೆ ತಿಳಿಸಿದರೂ, ಇದನ್ನೂ ಲೆಕ್ಕಿಸದೆ ಮರುದಿನ ಭರತ್ ಶೆಟ್ಟಿ ಆಕೆಯನ್ನು 4–5 ಜನರೊಂದಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. 20 ರಿಂದ 45 ವರ್ಷದ ನಾಲ್ವರು ಪುರುಷರು ಒಬ್ಬರ ನಂತರ ಒಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಮರುದಿನವೂ ಇದೇ ದೌರ್ಜನ್ಯ ಪುನರಾವರ್ತನೆಯಾಗಿದೆ.

ಬಾಲಕಿ ಅಪ್ರಾಪ್ತೆ ಎಂದು ಬೇಡಿಕೊಂಡರೂ, “ನಾವು ಭರತ್ ಶೆಟ್ಟಿಗೆ ಹಣ ಕೊಟ್ಟಿದ್ದೇವೆ” ಎಂದು ಹೇಳಿ ಕಾಮುಕರು ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ FIR ದಾಖಲಾಗಿದ್ದು, ಬಾಲಕಿಯ ತಂದೆ, ಅಜ್ಜಿ ಹಾಗೂ ಭರತ್ ಶೆಟ್ಟಿ ಸೇರಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ ಈಗಾಗಲೇ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಹೊನ್ನಾವರದಲ್ಲಿ ಕಾರು ಕಂದಕಕ್ಕೆ ಬಿದ್ದು ಬೆಂಕಿಗಾಹುತಿ – ಇಬ್ಬರ ದುರ್ಮರಣ

0

ಕಾರವಾರ/ಚಾಮರಾಜನಗರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಕಾರು ಪಲ್ಟಿಯಾಗಿ ಬೆಂಕಿಗಾಹುತಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ಕರಕಲಾಗಿದ್ದು, ನಂಬರ್ಪ್ಲೇಟ್ ಸಹ ಪತ್ತೆಯಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಾರು ಮತ್ತು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೃತರು ಸಿದ್ದಾಪುರ ಮೂಲದವರು ಎಂದು ತಿಳಿದುಬಂದಿದ್ದು, ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿದ್ದಾರೆ.

ಇದಕ್ಕೆ ಸಮಾನವಾಗಿ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. KSRTC ಅಶ್ವಮೇಧ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ವಿಶೇಷವಾಗಿ ಎರಡು ವಾಹನಗಳ ಚಾಲಕರ ಸ್ಥಿತಿ ಚಿಂತಾಜನಕವಾಗಿದೆ.

ಗ್ರಾಮದ ಶಾಲೆ ಸಮೀಪದ ತಿರುವಿನಲ್ಲಿ ನಂಜನಗೂಡು ಕಡೆಯಿಂದ ಬರುತ್ತಿದ್ದ ಬಸ್, ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಗಾಯಾಳುಗಳನ್ನು ತಕ್ಷಣ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

ಹುಬ್ಬಳ್ಳಿ| ಬಟ್ಟೆ ಬಿಚ್ಚಿ ಬಿಜೆಪಿ ಕಾರ್ಯಕರ್ತೆಯನ್ನು ಥಳಿಸಿದ್ರಾ ಕೇಶ್ವಾಪುರ ಠಾಣೆ ಪೊಲೀಸರು!?

0

ಹುಬ್ಬಳ್ಳಿ:- ನಗರದ ಕೇಶ್ವಾಪುರ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಬಟ್ಟೆ ಬಿಚ್ಚಿ ಥಳಿಸಿದ ಆರೋಪ ಕೇಳಿಬಂದಿದೆ.

ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಈ ರೀತಿ ದರ್ಪ ಮೆರೆದಿದ್ದಾರೆ ಎನ್ನಲಾಗುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತೆ ಸುಜಾತಾ ಅಲಿಯಾಸ್​​ ವಿಜಯಲಕ್ಷ್ಮೀ ಈ ಗಂಭೀರ ಆರೋಪ ಮಾಡಿದ್ದಾರೆ. ಸುಜಾತಾ ಹಂಡಿ ವಿರುದ್ಧ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಾಂಗ್ರೆಸ್ ಕಾರ್ಪೊರೇಟರ್​ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಅದೇ ದೂರಿನ ವಿಚಾರವಾಗಿ ಪೊಲೀಸರು ದರ್ಪ ನಡೆಸಿದ್ದಾರೆ ಎಂದು ದೂರಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಅಧಿಕಾರಿಗಳ ಜೊತೆ ಸುಜಾತಾ ಹಂಡಿ ತೆರಳಿದ್ದು, ಈ ವೇಳೆ ಸುವರ್ಣ ಕಲ್ಲಕುಂಟ್ಲಾ ಮತ್ತು ಅವರ ಬೆಂಬಲಿಗರು ಗಲಾಟೆ ನಡೆಸಿದ್ದರು. ಘಟನೆ ಸಂಬಂಧ ಕೇಶ್ವಾಪುರ ಠಾಣೆಗೆ ದೂರು, ಪ್ರತಿದೂರು ದಾಖಲಾಗಿತ್ತು. ಕಾರ್ಪೊರೇಟರ್​ ದೂರು ಆಧರಿಸಿ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಕೂಗಾಡಿದ್ದರು.

ಈ ವೇಳೆ ವಿವಸ್ತ್ರಗೊಳಿಸಿ ಕೇಶ್ವಾಪುರ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಸುಜಾತಾ ಹಂಡಿ‌ ಕೆಲ ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಇವರ ಮೇಲೆ ಖಾಕಿ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

ವೋಟ್ ಡಿಲೀಟ್ ಗಲಾಟೆ ಬಳಿಕ ಪೊಲೀಸರ ದರ್ಪ? ಬಿಜೆಪಿ ಕಾರ್ಯಕರ್ತೆಯ ಮೇಲೆ ಕ್ರೌರ್ಯದ ಆರೋಪ

0

ಹುಬ್ಬಳ್ಳಿ: ನಗರದಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತೆಯ ಬಂಧನ ಪ್ರಕರಣ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೇಶ್ವಾಪುರ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಮಹಿಳೆಯನ್ನು ಬಂಧಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಈ ವೇಳೆ ಪೊಲೀಸರು ಅತಿರೇಕವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯ ಮೇಲೆ ಕ್ರೌರ್ಯ ತೋರಲಾಗಿದೆ ಎಂದು ಬಿಜೆಪಿ ವಲಯ ಆರೋಪಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಡೆದ ಗಲಾಟೆಯೇ ಈ ಪ್ರಕರಣದ ಹಿನ್ನೆಲೆ ಎನ್ನಲಾಗುತ್ತಿದೆ. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ, ತಮ್ಮ ಮತಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ವಿಚಾರದಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ನಿರಂತರ ತಿಕ್ಕಾಟ ನಡೆಯುತ್ತಲೇ ಇತ್ತು.

ಈ ಗಲಾಟೆಯನ್ನು ಆಧಾರ ಮಾಡಿಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಪೊಲೀಸರು ಆ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೇ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲು ಮುಂದಾದಾಗ ಆಕೆ ಪ್ರತಿರೋಧ ತೋರಿದ್ದಾಳೆ.

ಆ ಸಂದರ್ಭದಲ್ಲಿ ಪೊಲೀಸರು ಮಹಿಳೆಯನ್ನು ಥಳಿಸಿದ್ದು ಮಾತ್ರವಲ್ಲದೆ, ಬಂಧನ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಮತ್ತೊಂದು ದೂರು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದೆ.

ಘಟನೆ ಇದೀಗ ಮಹಿಳಾ ಸುರಕ್ಷತೆ, ಪೊಲೀಸ್ ದೌರ್ಜನ್ಯ ಮತ್ತು ರಾಜಕೀಯ ಹಸ್ತಕ್ಷೇಪ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ? ತೋಟದಲ್ಲಿ ನೇಣು‌ ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!

0

ದೇವನಹಳ್ಳಿ:- ಹೊಸಕೋಟೆ ತಾಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಪೊಲೀಸರ ಕಿರುಕುಳ ಹಿನ್ನೆಲೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಮೃತ ವ್ಯಕ್ತಿಯನ್ನು ಮೈಲಾಪುರ ಗ್ರಾಮದ ಮಂಜುನಾಥ್(44) ಎಂದು ಗುರುತಿಸಲಾಗಿದೆ. ತೋಟದ ಬಳಿ ನೇಣು‌ ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ತೋಟದ ಕೆಲಸಕ್ಕೆ ಬರುತ್ತಿದ್ದ ಅಶ್ವಿನಿ ಎಂಬಾಕೆ 8 ದಿನಗಳಿಂದ ನಾಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮಂಜುನಾಥ್​ನನ್ನ ಪೊಲೀಸರು ವಿಚಾರಣೆಗೆ ಕರೆದಿದ್ದರು. ಮಹಿಳೆ ಜೊತೆ ಸಂಬಂಧ ಆರೋಪ ಹಿನ್ನೆಲೆ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಮುಗಿಸಿ‌ ಮನೆಗೆ ಬಂದಿದ್ದ ಅವರು​​​ ಶವವಾಗಿ ಪತ್ತೆಯಾಗಿದ್ದು, ತಂದೆ ಸಾವಿಗೆ ಪೊಲೀಸರೇ ಕಾರಣ ಎಂದು ಮಕ್ಕಳು ಆರೋಪಿಸಿದ್ದಾರೆ.

ಕಾನ್ಸ್​​ಟೇಬಲ್​ ಅಂಬರೀಶ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಕೊಲೆ ಮಾಡಿರುವ ಶಂಕೆ ಇದೆ ಎಂದು ಸಂಬಂಧಿಕರು ಹೇಳಿದ್ದಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

ಸಾಕ್ಷಿ ನಾಶಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹವನ್ನು ಬಲವಂತವಾಗಿ ದಹನ: ಶ್ರೀರಾಮುಲು ಗಂಭೀರ ಆರೋಪ

0

ಬಳ್ಳಾರಿ, ಜನವರಿ 6: ಬಳ್ಳಾರಿ ನಗರದಲ್ಲಿ ನಡೆದ ಗಲಭೆ ವೇಳೆ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಮೃತದೇಹವನ್ನು ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೇ ಯಾರದ್ದೋ ಒತ್ತಾಯಕ್ಕೆ ಮಣಿದು ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಇದು ಸಾಕ್ಷಿ ನಾಶ ಮಾಡುವ ಉದ್ದೇಶದಿಂದಲೇ ನಡೆದ ಕ್ರಮ ಎಂದು ಅವರು ಆರೋಪಿಸಿದ್ದು, ಪ್ರಕರಣಕ್ಕೆ ರಾಜಕೀಯ ತಿರುವು ಪಡೆದಿದೆ.

ಗಲಭೆ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಬಳ್ಳಾರಿಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ತಕ್ಷಣವೇ, ಮಾಜಿ ಸಚಿವ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆರೋಪಗಳ ಸುರಿಮಳೆಗೈದರು.

ಶ್ರೀರಾಮುಲು ಮಾತನಾಡಿ, “ಬಳ್ಳಾರಿ ಘಟನೆ ಆಕಸ್ಮಿಕವಲ್ಲ, ಇದು ಪೂರ್ವನಿಯೋಜಿತ ಸಂಚು. ಫಿಲ್ಮ್ ಸ್ಟೈಲ್‌ನಲ್ಲಿ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರು ಎಂಟ್ರಿ ಕೊಟ್ಟು, ಬಾರ್‌ಗಳಿಂದ ಸೋಡಾ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಕೊಂಡು ದಾಳಿ ನಡೆಸಿದ್ದಾರೆ” ಎಂದು ನೇರ ಆರೋಪ ಮಾಡಿದರು.

ಇನ್ನೂ ಗಂಭೀರ ಆರೋಪ ಮಾಡಿರುವ ಅವರು, ಮೃತ ರಾಜಶೇಖರ್ ಅವರ ಅಂತ್ಯಸಂಸ್ಕಾರ ಸಂಪ್ರದಾಯದಂತೆ ಮಣ್ಣು ಮಾಡುವ ಮೂಲಕ ನಡೆಯಬೇಕಿತ್ತು. ಆದರೆ, ಕುಟುಂಬಸ್ಥರ ವಿರೋಧದ ನಡುವೆಯೇ ದೇಹವನ್ನು ಸುಟ್ಟು ಹಾಕಲಾಗಿದೆ. ಇದು ವ್ಯವಸ್ಥಿತವಾಗಿ ಸಾಕ್ಷಿ ನಾಶ ಮಾಡುವ ಪ್ರಯತ್ನ ಎಂದರು.

“ಕುಟುಂಬದವರನ್ನು ಪೊಲೀಸರು ಹೆದರಿಸಿ, ಬೆದರಿಕೆ ಹಾಕಿ ಮಾನವ ಸರ್ಪಗಾವಲಿನಲ್ಲಿ ದಹನ ನಡೆಸಲಾಗಿದೆ. ಏಕೆ ಸುಟ್ಟು ಹಾಕಲಾಯಿತು ಎಂಬುದಕ್ಕೆ ಯಾರೂ ಉತ್ತರ ಕೊಟ್ಟಿಲ್ಲ. ಆದರೆ, ಇಂದಲ್ಲ ನಾಳೆ ಈ ಸತ್ಯ ಹೊರಬರುತ್ತದೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ತಂದೆಯ ಸಮಾಧಿಯ ಪಕ್ಕದಲ್ಲಿ ನೆಲ ಅಗೆದಿರುವ ಫೋಟೋಗಳನ್ನು ಪ್ರದರ್ಶಿಸಿದ ಶ್ರೀರಾಮುಲು, ಅಂತ್ಯಸಂಸ್ಕಾರಕ್ಕೆ ಪೂರ್ವಸಿದ್ಧತೆ ನಡೆದಿದ್ದರೂ ಸಾಕ್ಷಿ ಸಿಗಬಾರದು ಎಂಬ ಉದ್ದೇಶದಿಂದಲೇ ದಹನ ಮಾಡಲಾಗಿದೆ ಎಂದು ಆರೋಪಿಸಿದರು. “ಕುಟುಂಬಸ್ಥರು ಪರಿಪರಿಯಾಗಿ ಬೇಡಿಕೊಂಡರೂ ಮೃತದೇಹವನ್ನು ಸುಟ್ಟಿದ್ದಾರೆ. ಇದು ಸಹಜವಲ್ಲ” ಎಂದರು.

ಪೊಲೀಸ್ ಅಧಿಕಾರಿಗಳ ಮೇಲೂ ಅವರು ಗಂಭೀರ ಆರೋಪ ಹೊರಿಸಿದರು. “ಎಎಸ್ಪಿ ರವಿಕುಮಾರ್ ಅವರು ಕುಟುಂಬದವರನ್ನು ಬೆದರಿಸಿ ದಹನ ನಡೆಸಿಸಿದ್ದಾರೆ. ಇದು ಬೇಕಂತಲೇ ಮಾಡಿದ ಮರ್ಡರ್. ಕೊಂದು ನಮ್ಮ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ನಮ್ಮ ರಾಜಕೀಯ ಭವಿಷ್ಯ ನಾಶ ಮಾಡಲು ಶಾಸಕ ಭರತ್ ರೆಡ್ಡಿ ಸಂಚು ರೂಪಿಸಿದ್ದಾರೆ” ಎಂದು ಕಿಡಿಕಾರಿದರು.

ಡಿಎಸ್ಪಿ ನಂದಾರೆಡ್ಡಿ ಮತ್ತು ಎಎಸ್ಪಿ ರವಿಕುಮಾರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ ಅವರು, “ಜೀವ ತೆಗೆದುಕೊಳ್ಳುವ ಅಧಿಕಾರ ದೇವರಿಗೆ ಮಾತ್ರ ಇದೆ. ರಾಜಕೀಯ ಶಾಶ್ವತ ಅಲ್ಲ. ಇಂದು ನಾನು, ನಾಳೆ ನೀನು ಸೋಲ್ತೀವಿ. ಆದರೆ, ಮನುಷ್ಯನ ಜೀವದ ಜೊತೆ ಆಟ ಆಡೋದು ಅಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಶ್ರೀರಾಮುಲು, “ನೀವು ಎಸ್‌ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿದ್ದೀರಿ. ಆದರೆ, ಅಸಲಿ ತಪ್ಪಿತಸ್ಥ ಎಎಸ್ಪಿ ರವಿಕುಮಾರ್. ಘಟನೆ ನಡೆಯುವಾಗ ಅವರು ಸ್ಥಳದಲ್ಲಿರಲಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದರೂ ಟಿಯರ್ ಗ್ಯಾಸ್ ಬಳಕೆಗೆ ಅನುಮತಿ ನೀಡಲಿಲ್ಲ” ಎಂದು ಆರೋಪಿಸಿದರು.

ಇಡೀ ಘಟನೆ ಪೂರ್ವನಿಯೋಜಿತ ಹಲ್ಲೆ ಎಂದು ಪುನರುಚ್ಚರಿಸಿದ ಅವರು, “ಯಾವ್ಯಾವ ಕೇಸ್ ಹಾಕಬೇಕು ಎಂದು ಐಜಿ ಜೊತೆ ಭರತ್ ರೆಡ್ಡಿ ಚರ್ಚೆ ಮಾಡ್ತಾರೆ. ಮಧ್ಯೆ ಮಧ್ಯೆ ಜನಾರ್ದನ ರೆಡ್ಡಿಯವರನ್ನೂ ಜೋಡಿಸುತ್ತಾರೆ. ನಮ್ಮ ತಪ್ಪಿದ್ರೆ ನಮ್ಮನ್ನು ಬಿಡ್ತಿದ್ರಾ? ಸಿಬಿಐ ತನಿಖೆಗೆ ಪ್ರಕರಣ ಹೋದಾಗ ಎಲ್ಲರೂ ಹೊರಗೆ ಬರುವುದೇ ಖಚಿತ” ಎಂದು ಎಚ್ಚರಿಕೆ ನೀಡಿದರು.

ಬಳ್ಳಾರಿ ಗಲಭೆ ಇದೀಗ ಕೇವಲ ಕಾನೂನು-ಸುವ್ಯವಸ್ಥೆಯ ವಿಷಯವಲ್ಲದೆ, ಸಾಕ್ಷಿ ನಾಶ, ಪೊಲೀಸ್ ಪಾತ್ರ ಮತ್ತು ರಾಜಕೀಯ ಸಂಚು ಆರೋಪಗಳೊಂದಿಗೆ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ಸಿದ್ದರಾಮಯ್ಯ ದಾಖಲೆ ಸಿಎಂ ಸಂಭ್ರಮ: ಗದಗ ಜಿಲ್ಲೆಯಲ್ಲಿ ನಾಟಿಕೋಳಿ ಸಾರು ಘಮಘಮ!

0

ಗದಗ: ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿ ಆಗಿ ದಾಖಲೆ ಬರೆಯುತ್ತಿರುವ ಹಿನ್ನಲೆಯಲ್ಲಿ, ಅವರ ಅಭಿಮಾನಿಗಳ ಸಂಭ್ರಮ ಹಳ್ಳಿ ಹಳ್ಳಿಗಳಿಗೂ ತಲುಪಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಒದೇಗೋಳ ಗ್ರಾಮದಲ್ಲಿ ತಡರಾತ್ರಿ ಭರ್ಜರಿ ನಾಟಿಕೋಳಿ ಊಟದ ಔತಣಕೂಟ ಆಯೋಜಿಸಲಾಗಿತ್ತು.

ಸಿದ್ದರಾಮಯ್ಯ ಅಭಿಮಾನಿಗಳಿಂದ ಗ್ರಾಮಸ್ಥರಿಗೆ ವಿಶೇಷವಾಗಿ ನಾಟಿಕೋಳಿ ಸಾರು ಮತ್ತು ಜೋಳದ ರೊಟ್ಟಿ ವ್ಯವಸ್ಥೆ ಮಾಡಲಾಗಿತ್ತು. ಊಟದ ಸ್ಥಳದಲ್ಲಿ ನಾಟಿಕೋಳಿ ಸಾರಿನ ಘಮಘಮ ವಾಸನೆ ಹಬ್ಬಿ, ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಔತಣಕೂಟ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ನೂರಾರು ಗ್ರಾಮಸ್ಥರು ಸಾಲುಗಟ್ಟಿ ನಿಂತು ನಾಟಿಕೋಳಿ ಸಾರು ಸವಿದು ಖುಷಿಪಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಮಹಿಳೆಯರು, ಮಕ್ಕಳು ಸಹ ಭಾಗವಹಿಸಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. “ಸಿದ್ದರಾಮಯ್ಯ ಸಿಎಂ ಆಗಿರುವುದು ನಮ್ಮ ಹಳ್ಳಿಗೂ ಹಬ್ಬ” ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಕೆಮ್ಮು-ಶೀತ ಇದ್ದಾಗ ಮೊಟ್ಟೆ ತಿನ್ನಬಹುದಾ? ನೀವು ತಿಳಿಯಲೇಬೇಕಾದ ಸತ್ಯ

0

ನಿಯಮಿತವಾಗಿ ಮೊಟ್ಟೆಗಳ (Eggs) ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳಿವೆ. ಅದಕ್ಕಾಗಿಯೇ ಮೊಟ್ಟೆಗಳನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ರುಚಿಯ ಜೊತೆಗೆ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ಮೊಟ್ಟೆ ಒದಗಿಸುತ್ತದೆ. ಮೊಟ್ಟೆಯ ಬಿಳಿ ಭಾಗವಾಗಲಿ ಅಥವಾ ಹಳದಿ ಭಾಗವಾಗಲಿ – ಇಡೀ ಮೊಟ್ಟೆಯೇ ಆರೋಗ್ಯಕ್ಕೆ ಉಪಯುಕ್ತ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಹಾಗೂ ನೀರಿನಾಂಶ ಹೆಚ್ಚು ಇದ್ದು, ಹಳದಿ ಭಾಗದಲ್ಲಿ ಪ್ರೋಟೀನ್, ಕೊಬ್ಬು, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದರೆ ಕೆಮ್ಮು (Cough) ಮತ್ತು ಶೀತ ಬಂದಾಗ ಮೊಟ್ಟೆ ತಿನ್ನುವುದರಿಂದ ನಿಜವಾಗಿಯೂ ಪರಿಹಾರ ಸಿಗುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಇದೆ.

ಮೊಟ್ಟೆ ಕೆಮ್ಮು ಮತ್ತು ಶೀತವನ್ನು ನೇರವಾಗಿ ಗುಣಪಡಿಸುವುದಿಲ್ಲ. ಆದರೆ ಪರೋಕ್ಷವಾಗಿ ದೇಹಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಮೊಟ್ಟೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹವನ್ನು ಬಲಪಡಿಸುತ್ತವೆ. ಕೆಮ್ಮು ಮತ್ತು ಶೀತದ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ.

ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತವೆ. ಜೊತೆಗೆ ವಿಟಮಿನ್ ಡಿ, ವಿಟಮಿನ್ ಬಿ12 ಸೇರಿದಂತೆ ಅಗತ್ಯ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದರಿಂದ ದೇಹವು ನೈಸರ್ಗಿಕವಾಗಿ ಸೋಂಕುಗಳನ್ನು ಎದುರಿಸಲು ಸಹಾಯವಾಗುತ್ತದೆ. ಹೀಗಾಗಿ ಕೆಮ್ಮು ಅಥವಾ ಶೀತ ಇದ್ದಾಗ ಮಿತ ಪ್ರಮಾಣದಲ್ಲಿ ಮೊಟ್ಟೆ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತವೆಂದು ಹೇಳಲಾಗುತ್ತದೆ.

ಮೊಟ್ಟೆಗಳನ್ನು ಸೇವಿಸುವ ವೇಳೆ ಗಂಟಲು ತೇವವಾಗಿರಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಇದು ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಹೆಚ್ಚುವರಿಯಾಗಿ, ಅರಿಶಿನ, ಜೇನುತುಪ್ಪ, ನಿಂಬೆ ಅಥವಾ ತುಳಸಿ–ಜೇನುತುಪ್ಪ ಮಿಶ್ರಣದೊಂದಿಗೆ ಬೆಚ್ಚಗಿನ ಹಾಲು ಕುಡಿಯುವುದರಿಂದ ಕೆಮ್ಮಿನಿಂದ ಇನ್ನಷ್ಟು ಪರಿಹಾರ ದೊರೆಯಬಹುದು. ಆದರೆ ಕೆಮ್ಮು ತೀವ್ರವಾಗಿದ್ದರೆ, ಜ್ವರ, ಉಸಿರಾಟದ ತೊಂದರೆ ಅಥವಾ ಇತರ ಗಂಭೀರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯ.

ಜೈಲು ನಿಯಮಗಳ ಕಟ್ಟುನಿಟ್ಟು: ದರ್ಶನ್‌ಗೆ ಮನೆಯ ಬ್ಲಾಂಕೆಟ್ ಅನುಮಾನ, ಪವಿತ್ರ ಗೌಡಗೆ ಮನೆ ಊಟ ರದ್ದು?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಮನೆಯಿಂದ ತರಿಸಿಕೊಂಡ ಬ್ಲಾಂಕೆಟ್ ಸಿಗದಿರುವ ಸಾಧ್ಯತೆ ಹೆಚ್ಚಾಗಿದೆ. ಚಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದ ಬ್ಲಾಂಕೆಟ್ ಪಡೆಯಲು ಕೋರ್ಟ್ ಅನುಮತಿ ಪಡೆದಿದ್ದ ದರ್ಶನ್‌ಗೆ ಇದೀಗ ಜೈಲು ನಿಯಮಗಳೇ ಅಡ್ಡಿಯಾಗಿವೆ.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಸಮಾನವಾಗಿ ಒಂದೇ ರೀತಿಯ ಬ್ಲಾಂಕೆಟ್ ವಿತರಿಸುವಂತೆ ಆದೇಶ ಹೊರಡಿಸಲು ಮುಂದಾಗಿದ್ದಾರೆ. ಚಳಿಗಾಲ ಹಾಗೂ ಮಳೆಗಾಲ ಎರಡಕ್ಕೂ ಹೊಂದುವ ಬ್ಲಾಂಕೆಟ್‌ಗಳನ್ನು ಜೈಲು ವತಿಯಿಂದಲೇ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಕ್ರಮ ಜಾರಿಯಾದರೆ ವೈಯಕ್ತಿಕವಾಗಿ ಮನೆಯಿಂದ ಬ್ಲಾಂಕೆಟ್ ಬಳಸುವ ಅವಕಾಶ ಕೈದಿಗಳಿಗೆ ಇರುವುದಿಲ್ಲ.

ಇನ್ನೊಂದೆಡೆ, ದರ್ಶನ್ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರ ಗೌಡ ಅವರಿಗೆ ನೀಡಲಾಗಿದ್ದ ಮನೆ ಊಟದ ಅನುಮತಿಯನ್ನು ಹಿಂಪಡೆಯಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ. ಮನೆ ಊಟಕ್ಕೆ ಅವಕಾಶ ನೀಡಿದರೆ, ಪರಪ್ಪನ ಅಗ್ರಹಾರ ಜೈಲಿನ ಸಾವಿರಾರು ಆರೋಪಿಗಳು ಇದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.

ಮನೆ ಊಟವನ್ನು ಜೈಲಿನೊಳಗೆ ನೀಡಲು ಪ್ರತ್ಯೇಕ ಪರಿಶೀಲನಾ ವ್ಯವಸ್ಥೆ ಹಾಗೂ ಸಿಬ್ಬಂದಿ ಅಗತ್ಯವಿದ್ದು, ಇದು ಆಡಳಿತಾತ್ಮಕ ತೊಂದರೆ ಉಂಟುಮಾಡಲಿದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕಾರಾಗೃಹ ಇಲಾಖೆ ತೀರ್ಮಾನಿಸಿದೆ.

ಪವಿತ್ರ ಗೌಡ ಅವರು ಜೈಲಿನ ಆಹಾರದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದ್ದರು. ಅವರೊಂದಿಗೆ ನಾಗರಾಜು ಮತ್ತು ಲಕ್ಷ್ಮಣ್ ಕೂಡ ಮನೆ ಊಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ದಿನಕ್ಕೆ ಒಂದು ಬಾರಿ ಮನೆ ಊಟ ನೀಡಲು ಅನುಮತಿ ನೀಡಿದ್ದರೂ, ಇದೀಗ ಜೈಲು ಇಲಾಖೆ ಈ ಆದೇಶವನ್ನು ಪ್ರಶ್ನಿಸಲು ಮುಂದಾಗಿದೆ.

error: Content is protected !!