Home Blog Page 22

ರಾಜ್ಯ ಬಜೆಟ್‌ನಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ನಿರ್ಲಕ್ಷ್ಯ: ಬೆಣಕಲ್ ಪ್ರಕಾಶ್ ಆರೋಪ

ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷರಾದ ಬೆಣಕಲ್ ಪ್ರಕಾಶ್ ಕೆ.ಎಸ್. ಆರೋಪಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಪ್ರಮುಖ ಯೋಜನೆಗಳು ಹಾಗೂ ಅನುದಾನಗಳನ್ನು ಬಜೆಟ್‌ನಲ್ಲಿ ಒದಗಿಸಿಲ್ಲದಿರುವುದು ಜನರಲ್ಲಿ ನಿರಾಶೆ ಉಂಟುಮಾಡಿದೆ ಎಂದು ಅವರು ಹೇಳಿದರು.

ಈ ಕುರಿತು ವಿಜಯಸಾಕ್ಷಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರವು ಮುಂದಿನ ದಿನಗಳಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ಅಗತ್ಯ ಅನುದಾನ ಹಾಗೂ ಯೋಜನೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಪೌರ ಕಾರ್ಮಿಕರ ಬೇಡಿಕೆ ನಿರ್ಲಕ್ಷಿಸಿದ ಸರ್ಕಾರ: ರಾಜ್ಯಾಧ್ಯಕ್ಷ ಕೆ. ಪ್ರಭಾಕರ್ ಆಕ್ರೋಶ

ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಪೌರ ನೌಕರರ ಬೇಡಿಕೆಗಳಲ್ಲಿ ಕನಿಷ್ಠ ಒಂದನ್ನಾದರೂ ಈಡೇರಿಸದೇ ನಿರ್ಲಕ್ಷ್ಯ ತೋರಲಾಗಿದೆ ಎಂದು ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಅವರು, ಪೌರ ಕಾರ್ಮಿಕರ ವೇತನ ಹೆಚ್ಚಳ, ಶಾಶ್ವತ ನೇಮಕಾತಿ, ಸುರಕ್ಷತಾ ಸೌಲಭ್ಯಗಳು ಹಾಗೂ ವಿವಿಧ ಮೂಲಭೂತ ಸೌಲಭ್ಯಗಳ ಕುರಿತು ಹಲವಾರು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.

ನಗರಗಳ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ಮಹತ್ವದ ಕೆಲಸವನ್ನು ಪೌರ ಕಾರ್ಮಿಕರು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಇಂತಹ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗದಿರುವುದು ವಿಷಾದನೀಯವಾಗಿದೆ ಎಂದು ಹೇಳಿದರು.

ಇದೇ ಮಾರ್ಚ್ 9ರಂದು ರಾಜ್ಯ ಕಾರ್ಯಕಾರಿ ಸಭೆ ಕರೆಯಲಾಗಿದ್ದು, ಪೌರ ನೌಕರರ ಮೇಲಿನ ನಿರ್ಲಕ್ಷ್ಯ ಧೋರಣೆಗೆ ವಿರೋಧವಾಗಿ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆ. ಪ್ರಭಾಕರ್ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಬೆಳ್ಳಕ್ಕಿ ಮಾರುತಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕಡ್ಲೆಪ್ಪ ಹಾಗೂ ನಿರ್ದೇಶಕ ಸಂತೋಷ್ ಉಪಸ್ಥಿತರಿದ್ದರು.

ದಾವಣೆಗೆರೆ ಉದ್ಯಮಿಗೆ ಹನಿಟ್ರ್ಯಾಪ್‌: ಕಿಲಾಡಿ ನರ್ಸ್ ಸೇರಿ ನಾಲ್ವರು ಅರೆಸ್ಟ್‌

ದಾವಣಗೆರೆ: ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಹನಿಟ್ರ್ಯಾಪ್ ಸೂತ್ರಧಾರಿ  ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎನ್ನುವ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊದಲು ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಷ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಪರಿಚಯ ಮಾಡಿಕೊಂಡ ಬಳಿಕ ಸುಷ್ಮಿತಾ, ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭು ಅವರನ್ನ ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಸರ್ವೀಸ್ ಅಪಾರ್ಟ್ಮೆಂಟ್ ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.

ಆದ್ರೆ, ಕಳೆದ ಒಂದು ವಾರದ ಹಿಂದೆ ಸುಶ್ಮೀತಾ ಜೊತೆ ಆಕೆಯ ಸ್ನೇಹಿತೆ ಕೂಡ ಸರ್ವೀಸ್ ಅಪಾರ್ಟ್ಮೆಂಟ್ ಗೆ ಬಂದಿದ್ದಳು. ಸಂಜನಾಳನ್ನು ಪ್ರತ್ಯೇಕ ರೂಂ ನಲ್ಲಿ ಇರಿಸಿ ಸುಷ್ಮಿತಾ ಹಾಗೂ ಪ್ರಭು ಒಂದು ರೂಮ್ ನಲ್ಲಿ ಇದ್ದರು.ಈ ಸಂದರ್ಭದಲ್ಲಿ ಸಂಜನಾ, ರಾಹುಲ್, ಬೆಕ್ಕಿನಕಣ್ಣು ಕೃಷ್ಣ ಮೂರು ಜನ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡು ಪ್ರಭು ಸುಷ್ಮಿತಾ ಇದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ನಿಮ್ಮ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿದ್ದಾರೆ.

ಅಲ್ಲದೇ ಅದರೊಂದಿಗೆ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಪ್ರಭು 12 ಲಕ್ಷಕ್ಕೆ ಒಪ್ಪಿ, ಎರಡು ದಿನದೊಳಗೆ ಹಣ ಕೊಡುವುದಾಗಿ ಹೇಳಿ ತಪ್ಪಿಸಿಕೊಂಡಿದ್ದಾರೆ. ಆದರೆ ನಂತರ ಅರೋಪಿಗಳು ಚನ್ನಬಸಪ್ಪ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್ ಸೇರಿ ಪ್ರಭು ಮೇಲೆ ಮತ್ತೆ ಹಣಕ್ಕೆ ಬೆದರಿಕೆ ಹಾಕಲು ಶುರುಮಾಡಿದರು.

ಈ ಬಗ್ಗೆ ಪ್ರಭು ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದರಿಂದ, ಪೊಲೀಸರು ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಈಗ ನಾಲ್ವರು ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ.

 

UPSC ರ‍್ಯಾಂಕ್ ಗಳಿಸಿ ಯಾದಗಿರಿಗೆ ಕೀರ್ತಿ ತಂದ ನಾಲ್ವರು!

ಯಾದಗಿರಿ: ಪ್ರತಿ ಬಾರಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಹಿಂದೆ ಬಿದ್ದ ಯಾದಗಿರಿ ಜಿಲ್ಲೆ ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಗಮನ ಸೆಳೆದಿದೆ.

ಈ ಬಾರಿ ನಾಲ್ವರು ಅಭ್ಯರ್ಥಿಗಳು ಯುಪಿಎಸ್‌ಸಿ‌ನಲ್ಲಿ ರ‍್ಯಾಂಕ್ ಪಡೆದು ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಹಿಂದುಳಿದ ಜಿಲ್ಲೆ ಎಂಬ ಶಾಪವನ್ನೂ ಕಳಚಿದ್ದಾರೆ.

ಸಂದೀಪ್ ಬಾಡದ್:- ಶಹಾಪುರ ತಾಲ್ಲೂಕಿನ ಕಿರಾಣಿ ವ್ಯಾಪಾರಿ ಮಗ – 82ನೇ ರ‍್ಯಾಂಕ್

ನಿವೇದಿತಾ ಸಿ. ಭಾವಿಮನಿ:- ಬಸವೇಶ್ವರ ನಗರ – 469ನೇ ರ‍್ಯಾಂಕ್

ಬಸವರಾಜ ಜವಳಿ:- ಶಹಾಪುರ – 664ನೇ ರ‍್ಯಾಂಕ್

ಚಂದ್ರಶೇಖರ:- ಶಹಾಪುರ ತಾಲ್ಲೂಕಿನ ಚೆನ್ನೂರು ಗ್ರಾಮದ ರೈತನ ಮಗ – 880ನೇ ರ‍್ಯಾಂಕ್

ಇದೆ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಸಣ್ಣಪ್ಪ ಕಮತೆ ಪುತ್ರ ಕಿರಣ್ ಕಮತೆ 53ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ನಂಬರ್ 1 ಸಾಧನೆ ತಂದುಕೊಟ್ಟಿದ್ದಾರೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿರುವ ಕಿರಣ ಕಮತೆ 6ನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಆದಿವಾಸಿ ಸಮಾವೇಶ ಅನುಮತಿಯಲ್ಲಿ ವಿಳಂಬ: ಮಮತಾ ಬ್ಯಾನರ್ಜಿ ವಿರುದ್ಧ ಮುರ್ಮು ಕಿಡಿ

0

ಕೋಲ್ಕತ್ತಾ:  ಅಂತಾರಾಷ್ಟ್ರೀಯ ಆದಿವಾಸಿ ಸಮಾವೇಶಕ್ಕೆ ಅನುಮತಿ ನೀಡುವಲ್ಲಿ ವಿಳಂಬ ಹಾಗೂ ಕಾರ್ಯಕ್ರಮದ ಸ್ಥಳ ಬದಲಾವಣೆಯನ್ನು ಗಮನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, “ಮಮತಾ ದೀದಿ, ನೀವು ನನ್ನ ಸಹೋದರಿ ಇದ್ದಂತೆ, ನಾನು ಕೂಡ ಬಂಗಾಳದ ಮಗಳು, ಇಲ್ಲಿಗೆ ಬರಲು ನನಗೆ ಅವಕಾಶ ನೀಡಲಾಗುತ್ತಿಲ್ಲ ಏಕೆ?” ಎಂದು ಪ್ರಶ್ನಿಸಿದ್ದಾರೆ.

ಮೊದಲು ಬಿದಾನಗರದಲ್ಲಿ ನಡೆಯಬೇಕಿದ್ದ ಸಮಾವೇಶಕ್ಕೆ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿ ನೀಡದ ಕಾರಣ, ಕೊನೆ ಕ್ಷಣದಲ್ಲಿ ಕಾರ್ಯಕ್ರಮದ ಸ್ಥಳವನ್ನು ಬಾಗ್ದೋಗ್ರಾ ವಿಮಾನ ನಿಲ್ದಾಣದ ಸಮೀಪದ ಗೋಸೈನ್ಪುರಗೆ ಬದಲಾಯಿಸಬೇಕಾಯಿತು. ರಾಷ್ಟ್ರಪತಿಗಳು ಈ ಬದಲಾವಣೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಮಮತಾ ಬ್ಯಾನರ್ಜಿ ಬಿಜೆಪಿ ಹೇಳಿದಂತೆ ರಾಜಕೀಯ ಮಾಡಬೇಡಿ. ಬಿಜೆಪಿ ಆಡಳಿತವಿರುವ ರಾಜ್ಯಗಳ ಸ್ಥಿತಿಗಳನ್ನು ನೋಡಿ. ಬುಡುಕಟ್ಟು ಜನಾಂಗದವರ ಮೇಲೆ ದೌರ್ಜನ್ಯವಾದಾಗ ಎಲ್ಲಿ ಹೋಗಿದ್ರಿ ಎಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಪ್ರಶ್ನಿಸಿದ್ದಾರೆ.

 

ಉಕ್ರೇನ್‌ನ ಖಾರ್ಕಿವ್ ವಸತಿ ಕಟ್ಟಡಕ್ಕೆ ರಷ್ಯಾದ ಕ್ಷಿಪಣಿ ದಾಳಿ: 8 ಮಂದಿ ಸಾವು, 10 ಜನರಿಗೆ ಗಾಯ!

0

ಕೀವ್:  ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ನ ಐದು ಅಂತಸ್ತಿನ ವಸತಿ ಕಟ್ಟಡಕ್ಕೆ ರಷ್ಯಾದ ಕ್ಷಿಪಣಿ ದಾಳಿ ನಡೆದ ಪರಿಣಾಮ ಎಂಟು ಜನರು ಸಾವನ್ನಪ್ಪಿ, 10 ಜನರು ಗಾಯಗೊಂಡಿದ್ದಾರೆ.

ಮೃತರಲ್ಲಿ ಎರಡು ಮಕ್ಕಳು ಸೇರಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿಯನ್ನು ಖಂಡಿಸಿದ್ದಾರೆ. ರಷ್ಯಾ 29 ಕ್ಷಿಪಣಿಗಳು ಮತ್ತು 480 ಡ್ರೋನ್‌ಗಳೊಂದಿಗೆ ರಾತ್ರೋರಾತ್ರಿ ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಕೀವ್ ಮತ್ತು ಮಧ್ಯ ಪ್ರದೇಶಗಳಲ್ಲಿ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿದ್ದಾರೆ. ರಾಷ್ಟ್ರಾದ್ಯಾಂತ ಏಳು ಸ್ಥಳಗಳಲ್ಲಿ ಹಾನಿ ಸಂಭವಿಸಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನ ಏರ್ ಡಿಫೆನ್ಸ್ ಸಿಸ್ಟಮ್ 19 ಕ್ಷಿಪಣಿಗಳು ಮತ್ತು 453 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಇದರಿಂದ 22 ಸ್ಥಳಗಳಲ್ಲಿ ಒಂಬತ್ತು ಕ್ಷಿಪಣಿಗಳು ಮತ್ತು 26 ಸ್ಟ್ರೈಕ್ ಡ್ರೋನ್‌ಗಳಿಂದ ದಾಳಿಗಳು ನಡೆದಿವೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು ಅವರ ಮಗ, ಎರಡನೇ ತರಗತಿಯ ವಿದ್ಯಾರ್ಥಿನಿ ಅವರ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಎಂಟನೇ ತರಗತಿಯ ವಿದ್ಯಾರ್ಥಿನಿ ತನ್ನ ತಾಯಿಯೊಂದಿಗೆ ಸಾವನ್ನಪ್ಪಿದ್ದಾರೆ ಎಂದು ಖಾರ್ಕಿವ್ ಮೇಯರ್ ಇಹೋರ್ ಟೆರೆಖೋವ್ ತಿಳಿಸಿದ್ದಾರೆ.

ಪ್ರಾದೇಶಿಕ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದಂತೆ, ‘ಇಜ್ಡೆಲಿಯೆ-30’ ಎಂಬ ಹೊಸ ರಷ್ಯಾದ ಕ್ರೂಸ್ ಕ್ಷಿಪಣಿ ಕಟ್ಟಡವನ್ನು ಹೊಡೆದಿದೆ. ರಷ್ಯಾದ ರಕ್ಷಣಾ ಸಚಿವಾಲಯದ ಹೇಳಿಕೆ ಪ್ರಕಾರ, ದಾಳಿ ಉಕ್ರೇನಿಯನ್ ಮಿಲಿಟರಿ ನೆಲೆಗಳು, ಇಂಧನ ಸೌಲಭ್ಯಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ.

 

ಸಹವಾಸದಿಂದ ಯಶಸ್ಸು ಕಟ್ಟಿಕೊಳ್ಳಿ, ನಾಶಮಾಡುವವರಿಂದ ದೂರವಿರಿ – ಚಾಣಕ್ಯನ ಜಾಗೃತಿ

0

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಜೀವನದ ಸೂಕ್ಷ್ಮ ವಿಚಾರಗಳು ಮತ್ತು ವ್ಯಕ್ತಿತ್ವದ ಮಹತ್ವವನ್ನು ವಿವರಿಸಿದ್ದಾರೆ.

ಅವರು ಹೇಳುವಂತೆ, ನಮ್ಮ ಯಶಸ್ಸು ಕೇವಲ ನಮ್ಮ ಪರಿಶ್ರಮಕ್ಕೆ ಮಾತ್ರವಲ್ಲ, ನಮ್ಮ ಸುತ್ತಲಿನ ಜನರ ಸಹವಾಸಕ್ಕೂ ಅವಲಂಬಿತವಾಗಿದೆ. ಕೆಲವು ಜನರ ಸಹವಾಸ ನಮ್ಮ ಭವಿಷ್ಯವನ್ನು ಕತ್ತಲೆಗೆ ತಳ್ಳಬಹುದು ಎಂದು ಅವರು ಎಚ್ಚರಿಸಿದ್ದಾರೆ. ಚಾಣಕ್ಯರ ಪ್ರಕಾರ, ಇಂತಹವರು ನಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ನಿಧಾನವಾಗಿ ನಾಶಮಾಡುತ್ತಾರೆ, ಆದ್ದರಿಂದ ಅವರ ಬಳಿಯಲ್ಲಿ ಇರಬಾರದು.

ಅಂತರ್ಜೀವನದಲ್ಲಿ ದೂರವಿರುವುದು ಶ್ರೇಷ್ಟ ಎನ್ನುವ ಜನರಲ್ಲಿ ಮೊದಲನೆಯವರು ಇತರರ ತಪ್ಪುಗಳನ್ನು ಹುಡುಕುವವರು. ಇವರು ನಿಮ್ಮ ಸಾಧನೆಗಳಲ್ಲಿಯೂ ತಪ್ಪು ಕಂಡು ಹಾನಿ ಮಾಡುತ್ತಾರೆ ಮತ್ತು ನಿಮ್ಮ ಸಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತಾರೆ. ಎರಡನೆಯವರು ಸುಳ್ಳುಗಾರರು; ಈ ರೀತಿಯವರ ಮೇಲೆ ನಂಬಿಕೆ ಇಡುವುದು ನಷ್ಟಕ್ಕೂ, ಆರ್ಥಿಕ ಸಂಕಷ್ಟಕ್ಕೂ ದಾರಿ ತೆರೆದಿಡುತ್ತದೆ. ಮೂರನೆಯವರು ಸೋಮಾರಿ ವ್ಯಕ್ತಿಗಳು, ತಾನು ಪರಿಶ್ರಮ ಮಾಡುವುದಿಲ್ಲದ ಹಾಗೆ ಇತರರನ್ನು ಸಹ ಸೋಮಾರಿಯನ್ನಾಗಿ ಮಾಡುತ್ತಾರೆ. ನಾಲ್ಕನೆಯವರು ಜಗಳಗಂಟಿ ವ್ಯಕ್ತಿಗಳು, ಕ್ಷುಲ್ಲಕ ವಿಷಯಗಳ ಮೇಲೆ ಜಗಳ ಮಾಡುವುದರಿಂದ ನಿಮ್ಮ ನೆಮ್ಮದಿಯನ್ನು ಹಾಳುಮಾಡುತ್ತಾರೆ.

ಚಾಣಕ್ಯರ ಪ್ರಕಾರ, ಸ್ವಾರ್ಥಿಗಳು ಸಹದೋಷಿಗಳಲ್ಲ; ತಮ್ಮ ಸ್ವಾರ್ಥಕ್ಕಾಗಿ ಮಾತ್ರ ನಿಮಗೆ ಸಂಪರ್ಕ ಹೊಂದುವರು, ಆದರೆ ತುರ್ತು ಸಂದರ್ಭದಲ್ಲಿ ನಿಮ್ಮ ಸಹಾಯಕ್ಕೆ ಖಂಡಿತ ಬರಲಾರರು. ಈ ರೀತಿಯ ಜನರ ಸಹವಾಸದಲ್ಲಿ ಉಳಿಯುವುದರಿಂದ ನೀವು ನಿಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯರ್ಥಮಾಡಿಕೊಳ್ಳುತ್ತೀರಿ. ಅಂತಹ ಕಾರಣದಿಂದ, ಜೀವನದಲ್ಲಿ ಯಶಸ್ಸು ಸಾಧಿಸಲು ನೀವು ಇಂತಹ ವ್ಯಕ್ತಿಗಳಿಂದ ದೂರವಿದ್ದು, ಸಕಾರಾತ್ಮಕ, ಪರಿಶ್ರಮಶೀಲ, ನಿಷ್ಠಾವಂತವರೊಂದಿಗೆ ಮಾತ್ರ ಸಹವಾಸ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ.

ಪೊದೆಯಲ್ಲಿ ಮಲಗಲು ಸಹಕರಿಸದ ಮಹಿಳೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

0

ರಾಯಚೂರು:- ಕಳೆದ ಎರಡು ವರ್ಷಗಳ ಹಿಂದೆ ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲಿಂಗಸುಗೂರು ಪೀಠ ಆದೇಶ ಹೊರಡಿಸಿದೆ.

ಮೃತ ಮಹಿಳೆ ವಿಜಯಲಕ್ಷ್ಮಿ ಜೊತೆ ಯರಡೋಣ ಗ್ರಾಮದ ಆರೋಪಿ ದೇವರಾಜ ಅಕ್ರಮ ಸಂಬಂಧ ಹೊಂದಿದ್ದ. ಇದೀಗ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯ ಆರೋಪಿ ಮೇಲೆ ಕಠಿಣ ಕ್ರಮ ಕೈಗೊಂಡಿದೆ.

ಮೃತ ಮಹಿಳೆ ಪತಿ ಮರಣ ನಂತರ ತವರು ಮನೆ ಯರಡೋಣದಲ್ಲಿ ವಾಸವಾಗಿದ್ದರು. ಈ ವೇಳೆ ಸಲುಗೆ ಬೆಳೆಸಿಕೊಂಡು ದೇವರಾಜ ಅಕ್ರಮ ಸಂಬಂಧ ಹೊಂದಿದ್ದ. 2024ರ ಮಾ.10ರಂದು ಅಮವಾಸ್ಯೆ ಹಿನ್ನೆಲೆ ಇಬ್ಬರು ಜೊತೆಯಲ್ಲಿ ಛತ್ತರ ಹನುಮಪ್ಪ ದೇವಸ್ಥಾನಕ್ಕೆ ಹೋಗಿದ್ದರು. ಗ್ರಾಮಕ್ಕೆ ಮರಳುವಾಗ ಲಿಂಗಸುಗೂರಿನಲ್ಲಿ ಹಳ್ಳದ ದಂಡೆಯ ಪೊದೆಯಲ್ಲಿ ತನ್ನ ಜೊತೆ ಮಲಗಲು ಸಹಕರಿಸದಿದ್ದಕ್ಕೆ ಆರೋಪಿ ಮಹಿಳೆಯನ್ನ ಕೊಲೆ ಮಾಡಿದ್ದ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಎರಡು ವರ್ಷದ ಬಳಿಕ ಆರೋಪಿ ವಿರುದ್ದ ನ್ಯಾಯಾಲಯ ಕಠಿಣ ಕ್ರಮ ಕೈಗೊಂಡಿದೆ.

ಪೊಲೀಸರ ವಿಚಾರಣೆಗೆ ಹೆದರಿ ನೇಣಿಗೆ ಕೊರಳೊಡ್ಡಿದ ‘ರೈತ’: ಆಗಿದ್ದೇನು?

ಹುಬ್ಬಳ್ಳಿ:- ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಪೊಲೀಸರ ವಿಚಾರಣೆಗೆ ಹೆದರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

48 ವರ್ಷದ ನಿಂಗಪ್ಪ ಅಂಗಡಿ(48) ಮೃತ ರೈತ. ಹೊಲದ ದಾರಿ ವಿಚಾರವಾಗಿ ಉಮಚಗಿ ಗ್ರಾಮದಲ್ಲಿ ಗಲಾಟೆಯಾಗಿದ್ದು, ಈ ಸಂಬಂಧ ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಪೊಲೀಸರು ಕರೆ ಮಾಡಿ ಸ್ಪೆಷನ್​​​ಗೆ ಬರುವಂತೆ ಹೇಳಿದ್ದಾರೆ. ಇದರಿಂದ ಹೆದರಿದ ರೈತ ಜಮೀನಿನಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ.

ಎಸ್, ಜಮೀನು ಹಾದಿ ಸಂಬಂಧ ಉಮಚಗಿ ಗ್ರಾಮದಲ್ಲಿ ಜಗಳವಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು, ನಿಂಗಪ್ಪನನ್ನು ಕರೆಸಿ ಹಲ್ಲೆ‌ ಮಾಡಿದ್ದಾರೆ. ಸಾಲದಕ್ಕೆ ಪಂಚಾಯಿತಿ ಸದಸ್ಯರು, ನಿಂಗಪ್ಪ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ಸಹ ಎರಡ್ಮೂರು ದಿನಗಳಿಂದ ನಿಂಗಪ್ಪನಿಗೆ ಕರೆ ಮಾಡಿ ಠಾಣೆಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ.

ಇದರಿಂದ ತೀವ್ರ ಭಯಗೊಂಡ ರೈತ, ಜಮೀನಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅಟ್ರಾಸಿಟಿ ಕೇಸ್ ದಾಖಲಿಸಿ ಇದೀಗ ಆತನನ್ನು ಬಲಿ ಪಡೆದುಕೊಂಡಿದ್ದಾರೆ.

3 ದಿನದ ಸಾಂಬಾರ್ ಬಡಿಸಿದ ಹೆಂಡ್ತಿಗೆ ಗಂಡನ ಬೈಗುಳ: ಮನನೊಂದು ಗೃಹಿಣಿ ಸೂಸೈಡ್

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಆತಂಕ ಮೂಡಿಸಿದೆ.

ಇದೀಗ ಗಂಡ ಹೆಂಡತಿ ನಡುವೆ ಉಂಟಾದ ಸಣ್ಣ ಜಗಳ ಒಂದು ಜೀವವನ್ನೇ ಬಲಿ ಪಡೆದಿದೆ. ಎಸ್, ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ.

ಕಾವ್ಯ (27) ಮೃತ ಮಹಿಳೆ. ಈಕೆ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಆದ್ರೆ, ಇದೀಗ ತಾಯಿಯನ್ನು ಕಳೆದುಕೊಂಡ ಮಗು ಅನಾಥವಾಗಿದೆ. ಪತಿಗೆ ಕಳೆದ ಮೂರು ದಿನಗಳಿಂದ ಒಂದೇ ಸಾಂಬಾರು ಬಡಿಸಿದ್ದಾಳೆ. ಫ್ರಿಡ್ಜ್‌ನಲ್ಲಿಟ್ಟು ತೆಗೆದು ಬಿಸಿ ಮಾಡಿ ಅದೇ ಸಾರನ್ನು ಮೂರು ದಿನದಿಂದ ಬಡಿಸಿದ್ದಾಳೆ. ಎರಡು ದಿನ ಸಹಿಸಿಕೊಂಡ ಗಂಡ ಮೂರನೇ ದಿನ ಆಕ್ರೋಶಗೊಂಡಿದ್ದು, ಮೂರು ದಿನದ ಹಿಂದಿನ ಸಾರನ್ನು ಬಡಿಸುತ್ತಿದ್ದಿಯಾ ಎಂದು ಪತ್ನಿ ವಿರುದ್ದ ಜಗಳಕ್ಕೆ ನಿಂತಿದ್ದಾನೆ. ಅಲ್ಲದೇ ಪತ್ನಿಗೆ ಹಿಗ್ಗಾಮುಗ್ಗ ಬೈದಿದ್ದಾನೆ. ಪತಿಯ ಆಕ್ರೋಶಭರಿತ ಬೈಗುಳಕ್ಕೆ ನೊಂದ ಪತ್ನಿ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.

ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಕಾವ್ಯ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಮಾರ್ಗಮಧ್ಯದಲ್ಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!