Home Blog Page 239

ಜ.3ರಂದು ನಾಗಾವಿಯಲ್ಲಿ ನಾಟಕ ಪ್ರದರ್ಶನ

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಧು ಸತ್ಪುರುಷರ ತಪೋಭೂಮಿ ಗದಗ ತಾಲೂಕು ನಾಗಾವಿ ಗ್ರಾಮದ ಸುಕ್ಷೇತ್ರ ರೇಣುಕಾದೇವಿ ಜಾತ್ರೆಯ ನಿಮಿತ್ತ ಜ. 3ರಂದು ರಾತ್ರಿ 10 ಗಂಟೆಗೆ ಗ್ರಾಮದ ರೇಣುಕಾದೇವಿ ರಂಗಮಂದಿರದಲ್ಲಿ ಬಸವೇಶ್ವರ ಭಜನಾ ನಾಟ್ಯ ಸಂಘದಿಂದ ಎಚ್.ಎಸ್. ಹೊಸಮನಿ ಕವಿಗಳು ರಚಿಸಿದ `ಮಾನುಳ್ಳವರ ಮನೆತನ’ ಎಂಬ ಸಾಮಾಜಿಕ ನಾಟಕವು ಮಂಡಳ ಪಂಚಾಯತ್ ಪ್ರಧಾನರಾಗಿದ್ದ ದಿ. ವಿರೂಪಾಕ್ಷಪ್ಪನವರು ಚಿಂಚಲಿ ಅವರ ಸವಿನೆನಪಿನೊಂದಿಗೆ ಜರುಗಲಿದೆ.

ನಾಟಕದ ಉದ್ಘಾಟನೆಯನ್ನು ಕೊಟ್ಟೂರೇಶ್ವರ ಮಠದ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗ್ರಾಮದ ಗಂಗಾಧರೇಶ್ವರ ಮಠದ ವೇ.ಮೂ. ಮೃತ್ಯುಂಜಯ ಸ್ವಾಮಿಗಳು ಹಿರೇಮಠ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ನೆರವೇರಿಸಲಿದ್ದಾರೆ.

ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಚಿಂಚಲಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ ಪುತ್ರ ಕಾಂತೇಶ್, ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾಧ್ಯಕ್ಷ ರಾಜಣ್ಣ ಕುರುಡಗಿ, ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ, ಗದಗ ಗ್ರಾಮೀಣ ಪೊಲೀಸ್ ಠಾಣೆಯ ವಿ.ಜಿ. ಪವಾರ್, ಬೆಳದಡಿಯ ಬಿಜೆಪಿ ಮುಖಂಡರಾದ ಮಂಜುನಾಥ್ ಹಳ್ಳೂರಮಠ, ವಕೀಲರಾದ ರವಿಕಾಂತ್ ಅಂಗಡಿ, ಅಳಗವಾಡಿ ಗ್ರಾಮದ ಜಿ.ವೈ. ಅರಾಧಿ, ನಾಗಾವಿ ಗ್ರಾ.ಪಂ. ಸದಸ್ಯರಾದ ಅಲ್ಲಾಸಾಬ್ ಪೀರಖಾನವರ, ಹನುಮವ್ವ ಗುಡಿಮನಿ, ಕಳಸಾಪುರ ಗ್ರಾಮದ ಬಸವಯ್ಯಸ್ವಾಮಿ ಸಾಸ್ವಿಹಳ್ಳಿಮಠ, ನಾಗಸಮುದ್ರ ಗ್ರಾಮದ ಪ್ರಗತಿಪರ ರೈತರಾದ ನಿಂಗಪ್ಪ ಮಣ್ಣೂರ, ನಾಗಾವಿ ಗ್ರಾ.ಪಂ. ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಮುಖಂಡರುಗಳು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಬಸವೇಶ್ವರ ಭಜನಾ ಸಂಘದ ಸದಸ್ಯರು ತಿಳಿಸಿದ್ದಾರೆ.

ಚಿನ್ನದ ಅಂಬಾರಿಯ ಮುಕುಟಮಣಿ ಚನ್ನಯ್ಯ ಹಿರೇಮಠ

ಶ್ರೀಗಳ ಒಡನಾಡಿ, ಲಿಂಗೈಕ್ಯ ಶ್ರೀಮನ್ನಿರಂಜನ ಜಗದ್ಗುರು ತೋಂಟದ ಗುರುಬಸವ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀಮನ್ನಿರಂಜನ ಜಗದ್ಗುರು ಶಿವಕುಮಾರ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀಮನ್ನಿರಂಜನ ಜಗದ್ಗುರು ತೋಂಟದ ಸಿದ್ಧಲಿಂಗ ಸ್ವಾಮಿಗಳು, ಶ್ರೀಮನ್ನಿರಂಜನ ಜಗದ್ಗುರು ಪೂಜ್ಯ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳ ಆಪ್ತರಾಗಿ ಧರ್ಮ ಅನುರಾಗಕರಾಗಿ, ಧರ್ಮಿಷ್ಟರಾಗಿ ನಡೆದು, ಆಜ್ಞಾಧಾರಕರಾಗಿ ಶ್ರೀಗಳ ಪ್ರೀತಿಪಾತ್ರರಾಗಿ ಅಘಾದ ಜ್ಞಾನವಂತರಾದ ಹಿರಿಯ ಜೀವ, ಎಂಟು ದಶಕಗಳ ಸವಿಯುಂಡ ಬಸವ ತತ್ವಗಾರರಾದ ಚನ್ನಯ್ಯ ಹಿರೇಮಠ ಇವರಿಗೆ 82ನೇ ಜನ್ಮದಿನ. ಎಂಟು ದಶಕದ ಎಂಟು ಸೂತ್ರದಾರ ಚನ್ನಯ್ಯ ಸಾರ್ಥಕ ಜೀವನದಿ.

ಬಸವಣ್ಣನವರು ಹೇಳಿದಂತೆ ಸ್ವರ್ಗ ಬೇರೆಲ್ಲೂ ಇಲ್ಲ, ಎಲ್ಲವೂ ಇಲ್ಲಿಯೇ ಇದೆ. ಈ ಜೀವನದಲ್ಲಿಯೇ ಈ ಭುವಿಯಲ್ಲಿ ನೆಲೆಸಿದ ಪ್ರತಿಯೊಂದು ಜೀವಿಗೂ ಸ್ವರ್ಗ-ನರಕಗಳ ದರ್ಶನ ಇದೆ. ನಾವು ಸನ್ಮಾರ್ಗದ ಹಾದಿಯಲ್ಲಿ ನಡೆದು ಧರ್ಮದಿಂದ ನಡೆದರೆ ಜೀವನ ಸಾರ್ಥಕ. ಸುಖ ವಿಮುಖನಾಗಿರಬೇಕು, ತೃಪ್ತನಾಗಿರಬೇಕು, ದೇವಾಸಕ್ತನಾಗಿರಬೇಕು, ಆತ್ಮಸುಖಿಯಾಗಿರಬೇಕು, ಸರ್ವಹಿತ ಬಯಸುವವನಾಗಿರಬೇಕು ಈ ಎಲ್ಲ ಮಾತುಗಳನ್ನು ಅಕ್ಷರಶಃ ಪಾಲಿಸುವವರು ನಮ್ಮ ಹೆಮ್ಮೆಯ ಚನ್ನಯ್ಯ ಹಿರೇಮಠರವರು.

ಒಂದು ದಿನ ನಾನು ನನ್ನ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಗಣಕಯಂತ್ರ ವಿದ್ಯಾಲಯದಲ್ಲಿ ಕರ್ತವ್ಯದಲ್ಲಿದ್ದಾಗ ಭೇಟಿ ಕೊಟ್ಟರು. ನಾನು ವಿದ್ಯಾರ್ಥಿಗಳ ಪಾಲಕರು ಎಂದು ‘ಬನ್ನಿ ಸರ್ ಬನ್ನಿ ಒಳಗೆ ಬನ್ನಿ.. ನಮ್ಮಲ್ಲಿ ಬೆರಳಚ್ಚು ಮತ್ತು ಗಣಕಯಂತ್ರ ತರಬೇತಿ ಕೊಡುತ್ತೇವೆ. ನಿಮ್ಮ ಮಕ್ಕಳಿಗೆ ಯಾವ ವಿಷಯದಲ್ಲಿ ತರಬೇತಿ ಬೇಕು, ಹೇಳಿ..’ ಎಂದು ನಾನು ಹೇಳಿದಾಗ ಚನ್ನಯ್ಯನವರು, ನಾನು ನನ್ನ ಮಗನಿಗೆ ಬೆರಳಚ್ಚು ಕಲಿಸಬೇಕು, ಮಗನಿಗೆ ಕಳಿಸುತ್ತೇನೆ ಏನು ಬೇಕೆಂಬುದನ್ನು ನನ್ನ ಮಗನಿಗೆ ಹೇಳಿ. ಹಾಗೆಯೇ, ನಾನು ಏನನ್ನು ಕೇಳದೆ ವಿದ್ಯಾಲಯದ ಹೊರಗೆ ಬರಬೇಕಾದರೆ ನನಗೆ ಆಧರವಾಗಿ ಗೌರವದಿಂದ ಒಳಗೆ ಬನ್ನಿ ಕುಳಿತುಕೊಳ್ಳಿ ಎಂದು ಗೌರವಿಸಿದ ರೀತಿಗೆ ನಾನು ಧನ್ಯನಾದೆ. ಪಾಲಕರು ಇರಲಿ, ಯಾರೇ ಇರಲಿ ಗೌರವಿಸುವ ರೀತಿ ನನಗೆ ಮೆಚ್ಚುಗೆಯಾಯಿತು ಎಂದು ಹೇಳಿ ಹೊರಟು ಹೋದರು. ಮರುದಿನವೇ ಮಗನಿಗೆ ಪ್ರವೇಶ ಪಡೆದರು.

ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಹೆತ್ತವರಾಗಿದ್ದರೂ, ಶಿಕ್ಷಕರಾಗಿದ್ದರೂ, ‘ಮಗುವಾಗಿ’ ಬೆರೆತಾಗ ನಿರ್ಮಲ ಮನಸ್ಸಿನ ಮಕ್ಕಳು ನಮ್ಮೊಂದಿಗೆ ಮಗುವಾಗಿ ದೇವತೆಯ ರೂಪದಲ್ಲಿ ಕಾಣುತ್ತಾರೆ. ಈ ಮಕ್ಕಳು ಬೆಳೆದು ದೊಡ್ಡವರಾಗುವುದು ಸರಿ ಅದಕ್ಕೂ ಮುಖ್ಯ ಕಾರಣಕರ್ತರು, ತಂದೆ-ತಾಯಿಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪೋಷಕರು, ಸಮಾಜ. ಮಗುವಾಗಿ ಮಗುವಿನೊಂದಿಗೆ ನಾವು ಕಲಿಯಬೇಕು. ಪ್ರಾಮಾಣಿಕತೆ, ನಿರ್ಮಲತೆ, ಸತ್ಯ, ಮುಕ್ತತೆ, ಪ್ರೀತಿ, ತ್ಯಾಗ, ಬಲಿದಾನ ಇತ್ಯಾದಿಗಳನ್ನು ಮೈಗೂಡಿಸಿಕೊಂಡಾಗ ನಮ್ಮ ಮಕ್ಕಳು ದೇಶದ ಮಕ್ಕಳಾಗಿ ಭವಿಷ್ಯದ ನಾಗರಿಕರಾಗಿ ಬೆಳೆಯುತ್ತಾರೆ. ಅಂತಹ ಮಕ್ಕಳನ್ನು ಬೆಳೆಸಿದ ಕೀರ್ತಿ ಚನ್ನಯ್ಯ ಹಿರೇಮಠರಿಗೆ ಸಲ್ಲುತ್ತದೆ.

ಇನ್ನು, ಇವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಶ್ರೀಗಳ ಮೊದಲ ಅಭಯ ಪಡೆದ ಪುಣ್ಯದಾತರು, ಈಗಿನ ತೋಂಟದಾರ್ಯ ಕಾಲೇಜನ್ನು ದೇಣಿಗೆ ನೀಡಿದ ಶ್ರೀಗಳ ಒಡನಾಡಿ, ಅವರ ಆಪ್ತರಾಗಿ, ಧರ್ಮ ಅನುರಾಗಕರಾಗಿ, ಧರ್ಮಿಷ್ಟರಾಗಿ ನಡೆದು ಆಜ್ಞಾಧಾರಕರಾಗಿ ಶ್ರೀಗಳ ಪ್ರೀತಿಪಾತ್ರರಾಗಿ ಅಘಾದ ಜ್ಞಾನವಂತರಾದ ಚನ್ನಯ್ಯನವರು ಒಂದು ಜ್ಞಾನದ ಭಂಡಾರ. ಮಠಗಳ ಭೇಟಿ, ಶ್ರೀಗಳ ಹಿಂಬಾಲಕರಾಗಿ ಸಲಹೆ ಸೂಚನೆಗಳ ಪಾಲಕರಾಗಿ ಸದಾ ಚೈತನ್ಯದ ಚಿಲುಮೆಯಾಗಿದ್ದುಕೊಂಡು ಭಕ್ತರು ನೀಡುವ, ಶ್ರೀಗಳು ಕರುಣಿಸಿದ ಪ್ರಸಾದವೇ ಅಮೃತವೆಂದು ಸೇವಿಸಿ ತಮ್ಮ ತನು-ಮನವನ್ನು ಧರ್ಮ ರಕ್ಷಣೆಗೆ ವಿನಿಯೋಗಿಸಿದ ಧೀಮಂತ ವ್ಯಕ್ತಿತ್ವದ ಸರಳ ಸಜ್ಜನವಂತರು.

ಎಲ್ಲ ಚಿಂತನೆಗಳ ಅರೆದು ಕುಡಿಸಿ ಬೆಳೆಸಿದವರು ಹೆತ್ತವರು. ಪತ್ನಿಯ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು, ಸಹಾಯ ಸಹಕಾರದೊಂದಿಗೆ, ಸಂಸಾರದ ನೌಕೆಯಲ್ಲಿ ಅನ್ಯೋನ್ಯತೆಗೆ ಕೊರತೆ ಕಾಣದೆ, ಪ್ರೀತಿ, ವಿಶ್ವಾಸ ಮತ್ತು ಗುರಿಯತ್ತ ತಮ್ಮ ಪತ್ನಿಯನ್ನು ನೆನೆಯುವವರು ಚನ್ನಯ್ಯನವರು. ಶ್ರೀಮತಿಯವರ ತ್ಯಾಗ, ಪ್ರೀತಿ, ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಒಂದು ಗಂಡಿನ ಯಶಸ್ಸಿನ ಹಿಂದೆ ಹೆಣ್ಣಿನ ಕೈ ಇದೆ ಎನ್ನುವ ಮಾತಿನಂತೆಯೇ, ಒಂದು ಹೆಣ್ಣಿನ ಯಶಸ್ಸಿನ ಹಿಂದೆ ಗಂಡಿನ ಕೈ ಇದೆ ಎನ್ನುವುದಕ್ಕೆ ಚನ್ನಯ್ಯನವರೇ ಸಾಕ್ಷಿ.

ಚನ್ನಯ್ಯ ಹಿರೇಮಠರವರು 80ರ ವಯಸ್ಸಿನಲ್ಲೂ ಆರೋಗ್ಯದಾತರು, ನಾಡಿನ ಎಲ್ಲ ಮಠಾಧೀಶರ ಅಭಯದಿಂದ ಇಂದು 80ರ ಚಿರಯೌವ್ವನದಲ್ಲೂ ಉತ್ಸಾಹ ಕಡಿಮೆ ಆಗಿಲ್ಲ. ನಾನು ಅವರಿಗಾಗಿಯೇ ವಿಶೇಷ “ನಡೆ ನುಡಿಯ ಚಿನ್ನದ ಅಂಬಾರಿ ಚನ್ನಯ್ಯ” 82ನೇ ಹುಟ್ಟಹಬ್ಬದ ಸವಿನೆನಪಿಗಾಗಿ ಲೇಖನ ಬರೆಯುವ ವಿಚಾರ ತಮ್ಮ ಮಾರ್ಗದರ್ಶನ ಬಯಸುತ್ತ ನೂರು ವರ್ಷ ಆರೋಗ್ಯಕರವಾಗಿ ಸುಖಕರವಾಗಿರಲಿ, ಆರೋಗ್ಯದಾಯಕ ಜೀವನ ಸಮೃದ್ಧಿದಾಯಕವಾಗಲಿ, ನೂರಾರು ವರ್ಷ ಬಾಳಲಿ, ಇವರ ಸಹ ಕುಟುಂಬ ನಗು ಸಂತೋಷದ ಅಲೆಯಲ್ಲಿ ತೇಲಲಿ, ಪೂಜ್ಯ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳ ಅಖಂಡ ಆಶೀರ್ವಾದ ಸದಾ ಇರಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.

  • ಡಾ. ತಯಬಅಲಿ ಅ. ಹೊಂಬಳ.
    ಮಕ್ಕಳ ಸಾಹಿತಿ, ಪ್ರಾಚಾರ್ಯರು, ಗದಗ.

ಬುರುಡೆ ಕೇಸ್‌: ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆ!

0

ಬೆಳ್ತಂಗಡಿ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ವಕಾಲತ್ತು ಸಲ್ಲಿಕೆಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025 ಸಂಬಂಧ ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ವಕೀಲ ಮಹೇಶ್ ಕಜೆ ಅವರು ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸದ್ಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದ್ದು, ಈ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ತನಿಖಾ ವರದಿಯನ್ನೂ ಸಲ್ಲಿಸಲಾಗಿದೆ. ವರದಿಯಲ್ಲಿ ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿರುವ ಅಂಶಗಳು ಬಹಿರಂಗಗೊಂಡಿದ್ದರೂ, ಆರೋಪಿಗಳ ವಿರುದ್ಧ ಇದುವರೆಗೆ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡನೆ ನಡೆಯಲಿದೆ. ಎಸ್‌ಐಟಿ ಸಲ್ಲಿಸಿರುವ ವರದಿ ಕುರಿತು ಜನವರಿ 3ರಂದು ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಲಿರುವುದರಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಎಸ್‌ಐಟಿ ತನಿಖೆಯಲ್ಲಿ ಧರ್ಮಸ್ಥಳದ ವಿರುದ್ಧ ಬುರುಡೆ ಪ್ರಕರಣವನ್ನು ಷಡ್ಯಂತ್ರ ರೂಪಿಸಿ ಸೃಷ್ಟಿಸಿರುವುದು ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಹಾಗೂ ಸುಜಾತಾ ಭಟ್ ಸೇರಿ ಆರು ಮಂದಿ ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ ದೃಢಪಡಿಸಿದೆ.

ಹಣದ ಆಮಿಷಕ್ಕೆ ಒಳಗಾಗಿ ಎ1 ಆರೋಪಿ ಚಿನ್ನಯ್ಯ ಬುರುಡೆ ಸಂಬಂಧ ಸುಳ್ಳು ಕಥೆ ಕಟ್ಟಿದ್ದು, ಅಪರಿಚಿತ ಶವಗಳನ್ನು ಹೂತಿರುವುದಾಗಿ ಹೇಳಿಕೆ ನೀಡುವಂತೆ ಪ್ರೇರೇಪಿಸಿ ವಿಡಿಯೋ ದಾಖಲೆ ಮಾಡಿಕೊಳ್ಳಲಾಗಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಚಿನ್ನಯ್ಯನಿಗೆ ಪೂರ್ವಪರಿಚಿತನಾಗಿದ್ದ ವಿಠ್ಠಲ ಗೌಡ, ಆತನನ್ನು ಮಹೇಶ್ ತಿಮರೋಡಿ ಮನೆಗೆ ಕರೆದೊಯ್ದಿದ್ದು, ಅಲ್ಲಿ ನಡೆದ ಸಭೆಯಲ್ಲಿ ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಹಾಗೂ ವಿಠ್ಠಲ ಗೌಡ ಭಾಗಿಯಾಗಿದ್ದರು ಎಂದು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಭೆಯಲ್ಲೇ ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿ ರೂಪಿಸಲಾಗಿದ್ದು, ಅದರಂತೆ ಚಿನ್ನಯ್ಯನಿಗೆ ಒಂದು ಬುರುಡೆ ನೀಡಲಾಗಿತ್ತು ಹಾಗೂ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.

ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವಂತೆ ಚಿನ್ನಯ್ಯನಿಗೆ ಪ್ರೇರೇಪಿಸಲಾಗಿತ್ತು ಎಂಬುದನ್ನೂ ಎಸ್‌ಐಟಿ ವರದಿ ಬಹಿರಂಗಪಡಿಸಿದೆ. ಈ ನಡುವೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಕರ್ನಾಟಕದಲ್ಲಿ ಮಿನಿ ಬಾಂಗ್ಲಾದೇಶವನ್ನು ನಿರ್ಮಿಸುತ್ತಿದ್ದಾರೆ: ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ

0

ಬೆಂಗಳೂರು: ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಟೋಪಿ ಸರಕಾರ; ಇವರು ಇಷ್ಟು ದಿನ ಕರ್ನಾಟಕದ ಕನ್ನಡಿಗರಿಗೆ ಟೋಪಿ ಹಾಕಿ, ಇವತ್ತು ಕರ್ನಾಟಕದಲ್ಲಿ ಮಿನಿ ಬಾಂಗ್ಲಾದೇಶವನ್ನು ನಿರ್ಮಿಸುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ಷೇಪಿಸಿದ್ದಾರೆ.

ಒತ್ತುವರಿ ಹಿನ್ನೆಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ತೆರವುಗೊಳಿಸಿದ ಯಲಹಂಕದ ಕೋಗಿಲು ಬಡಾವಣೆಗೆ ಇಂದು ಭೇಟಿ ನೀಡಿದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಈ ಸರಕಾರ ಬಂದ ಬಳಿಕ ಕರ್ನಾಟಕವು ಮಿನಿ ಬಾಂಗ್ಲಾದೇಶೀಯರ ತಾಣ ಆಗುತ್ತಿದೆ ಎಂದು ಟೀಕಿಸಿದರು.

ಇವರು ಯಾರು? ಎಲ್ಲಿಂದ ಬಂದರು ಎಂದು ಕೇಳಿದರು. ಗೂಗಲ್ ಮ್ಯಾಪ್‍ನಡಿ ಇಲ್ಲಿ ಒಂದು ವರ್ಷದ ಹಿಂದೆ ಮನೆಗಳಿರಲಿಲ್ಲ. ಈಗ ಮನೆಗಳಿವೆ. ಇವರೆಲ್ಲ ಬಂದು ಆರು ತಿಂಗಳಾಗಿಲ್ಲ. ಇವರಿಗೆಲ್ಲ ವಿದ್ಯುತ್ ಸಂಪರ್ಕ ಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಾರು 4 ಲಕ್ಷ ಜನರು ಅನಧಿಕೃತ ಮನೆ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿದ್ದಾರೆ. ನಮ್ಮ ರಾಜ್ಯದ ತೆರಿಗೆದಾರರು ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದರೆ, ಇಲ್ಲಿ ದುಬಾರಿ ಮೊತ್ತದ ಕೇಬಲ್ ಸಂಪರ್ಕ ಮಾಡಿ ವಿದ್ಯುತ್ ಬಳಸುತ್ತಿದ್ದಾರೆ. ಇವರೇನು ಸಿದ್ದರಾಮಯ್ಯನವರ ನೆಂಟರೇ ಎಂದು ಕೇಳಿದರು. ಇವರೆಲ್ಲ ಆಂಧ್ರದ ಪೆನುಗೊಂಡದಿಂದ ಬಂದವರೆಂದು ಹೇಳುತ್ತಾರೆ. 28 ವರ್ಷದವರು ಎನ್ನುತ್ತಾರೆ. 25-26 ವರ್ಷದಿಂದ ವಾಸವಿದ್ದರೆ 2 ವರ್ಷಕ್ಕೆ ಹೇಗೆ ನಡೆದು ಬಂದರು ಎಂದು ಕೇಳಿದರು.

ಇದು ಸುಮಾರು 600 ಕೋಟಿ ಬೆಲೆಯ ಜಮೀನು. ಇದನ್ನು ಸರಕಾರ ಯಾವ ಕಾನೂನಿನಡಿ ಕೊಡಲಿದೆ ಎಂದು ಕೇಳಿದರು. ನೆರೆಯಿಂದ ರಾಜ್ಯದಲ್ಲಿ 13 ಸಾವಿರ ಮನೆಗಳು ಬಿದ್ದಿವೆ. ಆದರೆ, ಕರ್ನಾಟಕದ ರೈತರಾದ ಅವರಿಗೆ ಇನ್ನೂ ಸೂರು ಕೊಟ್ಟಿಲ್ಲ. 2400 ಶಾಲೆಗಳ ಶೀಟ್‍ಗಳು ಹಾರಿ ಹೋಗಿವೆ. ಅವರಿಗೆ ವ್ಯವಸ್ಥೆ ಮಾಡದೇ ಮರದ ಕೆಳಗೆ ಪಾಠ ಮಾಡುವ ಸ್ಥಿತಿ ಇದೆ. ಇವರಿಗೆ ಪಟಾಪಟ್ ಎಂದು ಎರಡೇ ದಿನಗಳಲ್ಲಿ ಬಹುಮಹಡಿ ಮನೆಗಳಲ್ಲಿ ಜಾಗ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಹೊಸ ವರ್ಷಕ್ಕೆ ಬಾಂಗ್ಲಾದೇಶದವರಿಗೆ ಉಡುಗೊರೆ ಕೊಡುತ್ತಾರೆ. ಕನ್ನಡಿಗರಿಗೆ ಏನು ಕೊಡುತ್ತೀರಿ? ಚಿಪ್ಪು ಕೊಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು. ಇವೆಲ್ಲವೂ ಅಪರಾಧದ ತಾಣಗಳು ಎಂದು ಅವರು ಆರೋಪಿಸಿದರು.

ಕಲಬುರಗಿ ಸೆಂಟ್ರಲ್‌ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು! ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

0

ಕಲಬುರಗಿ: ದಿನದಿಂದ ದಿನಕ್ಕೆ ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿವೆ.  ಇದೀಗ ಕೈದಿಗಳ ಹೈಫೈ ಜೀವನ ಶೈಲಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಜೈಲಿನೊಳಗೆ ಕ್ಲಬ್‌ಗಳನ್ನು ಮೀರಿಸುವಂತ ಬಿಂದಾಸ್ ಲೈಫ್ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ವಿಡಿಯೋದಲ್ಲಿ ಕೈದಿಗಳು ಬ್ರ್ಯಾಂಡೆಡ್ ಎಣ್ಣೆ ಸೇವಿಸುತ್ತಾ, ಸಿಗರೇಟ್ ಸೇದುತ್ತಾ, ಗುಂಪು ಗುಂಪಾಗಿ ಜೂಜಾಟ ಆಡುತ್ತಿರುವ ದೃಶ್ಯಗಳು ಕಾಣಿಸಿವೆ. ಬಿಗಿ ಭದ್ರತೆಯ ಜೈಲಿನೊಳಗೆ ನಿಷೇಧಿತ ವಸ್ತುಗಳು ಹೇಗೆ ತಲುಪುತ್ತಿವೆ ಎಂಬ ಪ್ರಶ್ನೆ ಮೂಡಿದೆ.

ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಡಾ. ಅನಿತಾ ಕಣ್ಮುಚ್ಚಿ ಕುಳಿತಿದ್ದಾರೆ. ನಿನ್ನೆಯಷ್ಟೇ ಆರ್.ಡಿ. ಪಾಟೀಲ್ ವಿಡಿಯೋ ವೈರಲ್ ಆಗಿದ್ದು, ಜೈಲ್ ಅಧಿಕ್ಷಕಿ ಡಾ. ಅನಿತಾ ವಿರುದ್ಧ 10 ಲಕ್ಷ ರೂ. ಲಂಚದ ಆರೋಪವನ್ನು ಮಾಡಿದ್ದರು. ಇದೀಗ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ನಡೆಯುತ್ತಿರುವ ಅಂದರ್–ಬಾಹರ್ ಅಟ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಎಣ್ಣೆ ನಶೆಯಲ್ಲಿ ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!

0

ನೆಲಮಂಗಲ: ಮದ್ಯದ ನಶೆಯಲ್ಲಿ ತಾಯಿಯೊಂದಿಗೆ ತಮಾಷೆ ಮಾಡಲು ಹೋಗಿ ನೇಣಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್ ನಗರದಲ್ಲಿ ನಡೆದಿದೆ.

ಮೃತನನ್ನು ವಿಜಯಕುಮಾರ್ (28) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಮದ್ಯ ಸೇವಿಸಿ ಮನೆಗೆ ಬಂದ ವಿಜಯಕುಮಾರ್, ತಾಯಿಯಿಂದ ಖರ್ಚಿಗೆ ಹಣ ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಆ ಬಳಿಕ ತಮಾಷೆಯ ಉದ್ದೇಶದಿಂದ ನೇಣಿನ ಕುಣಿಕೆಗೆ ಹೋಗಿದ್ದಾಗ, ಆಕಸ್ಮಿಕವಾಗಿ ನೇಣಿಗೆ ಸಿಲುಕಿ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ತುಂಡಾದ ಚಾಲಕನ ಕಾಲು – ಹಲವರು ಗಂಭೀರ

0

ಬಾಗಲಕೋಟೆ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ ಚಾಲಕನ ಕಾಲು ತುಂಡಾಗಿ, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಹೊರವಲಯದಲ್ಲಿ ಸಂಭವಿಸಿದೆ.

ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಲಾರಿಯ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡ ಬಸ್ ಚಾಲಕ ಸೇರಿದಂತೆ ಪ್ರಯಾಣಿಕರನ್ನು ತಕ್ಷಣ ಲೋಕಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕಾರಣ ಕುರಿತು ತನಿಖೆ ಕೈಗೊಂಡಿದ್ದಾರೆ.

ಟೋಲ್ ಸಿಬ್ಬಂದಿಗಳಿಂದ ಪ್ರಯಾಣಿಕರ ಮೇಲೆ ಹಲ್ಲೆ, ದೌರ್ಜನ್ಯ.! ಪೊಲೀಸ್ ಠಾಣೆ ಮುಂದೆ ಧರಣಿ

0

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಮೈ–ಬೆಂ ದಶಪಥ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ಟೋಲ್ ಸಿಬ್ಬಂದಿಗಳು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಟೋಲ್ ಶುಲ್ಕದ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಟೋಲ್ ಸಿಬ್ಬಂದಿಗಳು ರೌಡಿಗಳನ್ನು ಕರೆಸಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎನ್ನಲಾಗಿದೆ.

ಟೋಲ್ ಸಿಬ್ಬಂದಿಗಳೇ ಹೊರಗಿನ ರೌಡಿಗಳನ್ನು ಕರೆಸಿ ದೌರ್ಜನ್ಯ ಎಸಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ವೇಳೆ ಪ್ರಯಾಣಿಕರನ್ನು ದರೋಡೆ ಮಾಡುವ ಉದ್ದೇಶದಿಂದ ಚಿನ್ನದ ಸರ ಕದಿಯಲು ಕೂಡ ಪ್ರಯತ್ನಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಘಟನೆ ಕುರಿತು ದೂರು ನೀಡಲು ಹಲ್ಲೆಗೊಳಗಾದವರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದರೂ, ಪೊಲೀಸರು ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವೂ ಹೊರಬಂದಿದೆ.

ಪ್ರಕರಣ ದಾಖಲಿಸದ ಪೊಲೀಸರ ನಡೆ ಖಂಡಿಸಿ, ಹಲ್ಲೆಗೊಳಗಾದವರು ಹಾಗೂ ಗ್ರಾಮಸ್ಥರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು. ಈ ವೇಳೆ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಹಲ್ಲೆ ಹಾಗೂ ದೌರ್ಜನ್ಯ ನಡೆಸಿದ ಟೋಲ್ ಸಿಬ್ಬಂದಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.‌

ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ: ಭಾಸ್ಕರ್ ರಾವ್ ಗಂಭೀರ ಆರೋಪ

0

ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಪೊಲೀಸರೇ ಅಪರಾಧಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ನಡೆದ ಸುಮಾರು ₹7 ಕೋಟಿ ದರೋಡೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಖಾಕಿಯ ಪಾತ್ರ ಬೆಳಕಿಗೆ ಬಂದಿತ್ತು. ಇದರ ನಡುವೆಯೇ ಪೊಲೀಸ್ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿಬರುತ್ತಿವೆ.

ಬಿಜೆಪಿ ನಾಯಕ ಹಾಗೂ ಮಾಜಿ IPS ಅಧಿಕಾರಿ ಭಾಸ್ಕರ್ ರಾವ್ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಮಾಡಿದ ಪೋಸ್ಟ್ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ತಮ್ಮ ಪೋಸ್ಟ್‌ನಲ್ಲಿ ಗೃಹ ಸಚಿವರನ್ನು ಉಲ್ಲೇಖಿಸಿ ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಕಚೇರಿಯಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. ಆದರೆ ಅನೇಕ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ ಎಂದು ಅವರು ಹೇಳಿದ್ದಾರೆ. ಒಂದು ಪೊಲೀಸ್ ಠಾಣೆಯಲ್ಲಿನ ಖಾಲಿ ಹುದ್ದೆಗೆ ₹55 ಲಕ್ಷ ಹಣದ ಬೇಡಿಕೆ ಇಡಲಾಗಿತ್ತು ಎಂದು ಭಾಸ್ಕರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ ತಮ್ಮ ಅಭ್ಯರ್ಥಿಗೆ ಆ ಮೊತ್ತವನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ನಂತರ ಮಧ್ಯವರ್ತಿಯ ಮೂಲಕ ಕಚೇರಿ ಹುದ್ದೆ ನೀಡುವಂತೆ ಮನವಿ ಮಾಡಲಾಗಿದ್ದು,

ಆರಂಭದಲ್ಲಿ ₹3 ಲಕ್ಷ ಕೇಳಲಾಗಿತ್ತು. ಅಂತಿಮವಾಗಿ ₹1 ಲಕ್ಷಕ್ಕೆ ವ್ಯವಹಾರ ನಿಶ್ಚಯವಾಯಿತು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮಾಜಿ IPS ಅಧಿಕಾರಿ ಮಾಡಿದ ಈ ಗಂಭೀರ ಆರೋಪಗಳು ಇದೀಗ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ ಅಥವಾ ತನಿಖೆ ನಡೆಯುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು: ಸಿಎಂ ಸಿದ್ದರಾಮಯ್ಯ

0

ಕೇರಳ: ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾರಾಯಣ ಗುರುಗಳು ಕೇವಲ‌ ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು ಎಂದರು.

ಇದೇ ನಾರಾಯಣ ಗುರುಗಳು ಕಂಡ ಭಾರತ. ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂಥಾ ಭಾರತವನ್ನು ನಾವು ಒಟ್ಟಾಗಿ ಗಟ್ಟಿಗೊಳಿಸಬೇಕಿದೆ ಎಂದರು. ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ,ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಮೆಚ್ಚುಗೆ ಸೂಚಿಸಿದರು.‌

ರಾಜಕಾರಣ ನೈತಿಕತೆಯಿಂದ ದೂರವಾಗುತ್ತಾ, ಧರ್ಮವು ನೈತಿಕತೆಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಆಯುಧವಾಗುತ್ತಿರುವ ಅಪಾಯದ ದಿನಗಳಲ್ಲಿ ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ಆದರ್ಶವಾಗಬೇಕು.ಶಿವಗಿರಿ ಮಠ ‘ಜೀವಂತ ಸಂವಿಧಾನ’ದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಶಿವಗಿರಿ ತೀರ್ಥಯಾತ್ರೆಯು ಭಾರತದ ಮೂಲ ‘ಕೋಮು-ವಿರೋಧಿ’ ಯೋಜನೆಯಾಗಿದೆ. ಸಮಾಜವು ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿಯು ಪ್ರಾಬಲ್ಯಕ್ಕಿಂತ ‘ಸಂವಾದ’ವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ ‘ಸಮಾನತೆ’ಯನ್ನು ಮತ್ತು ಸಾಂಕೇತಿಕತೆಗಿಂತ ‘ನೈತಿಕತೆ’ಯನ್ನು ಎತ್ತಿ ಹಿಡಿಯುತ್ತದೆ ಎಂದರು.

“ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ” ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು.

ನಾರಾಯಣ ಗುರುಗಳು ಅನ್ಯಾಯದ ಚೌಕಟ್ಟಿನೊಳಗೆ ಸುಧಾರಣೆಯನ್ನು ಬಯಸಲಿಲ್ಲ. ಅವರು ಅನ್ಯಾಯದ ಬೇರುಗಳನ್ನೇ ಕಿತ್ತೆಸೆದರು. ಕೇರಳವು ಜಾತಿ ತಾರತಮ್ಯ, ಮೌಢ್ಯಾಚರಣೆ ಮತ್ತು ಅಸಮಾನತೆಯಿಂದ ಉಸಿರುಗಟ್ಟುತ್ತಿದ್ದಾಗ, “ಮಾನವಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಸತ್ಯವನ್ನು ಘೋಷಿಸಿದರು.

error: Content is protected !!