Home Blog Page 247

ಡಿ. 30ರಂದು ಶಿಕ್ಷಕಿಯರ ಬೀಳ್ಕೊಡುಗೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸರ್ಕಾರಿ ಪ್ರೌಢಶಾಲೆ ಸಿದ್ದಲಿಂಗ ನಗರದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಗುರುಮಾತೆಯರಿಗೆ ಡಿ. 30ರಂದು ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಂದಾ ಕಟವಟೆ ಹಾಗೂ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ ತಿಳಿಸಿದ್ದಾರೆ.

ಅಂದು ಮಧ್ಯಾಹ್ನ 3 ಗಂಟೆಗೆ ಶಾಲಾ ಸಭಾಂಗಣದಲ್ಲಿ ಆಯೋಜಿಸಿರುವ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಂಜುಳಾ ಸಾಮ್ರಾಣಿ, ಸಬೀಯಾ ಕುಷ್ಟಗಿ ಅವರನ್ನು ಹೃತ್ಪೂರ್ವಕವಾಗಿ ಗೌರವಿಸಿ ಬೀಳ್ಕೊಡಲಾಗುವುದು. ಮಂಜುಳಾ ಅವರು 20 ವರ್ಷಗಳಿಂದ ಹಾಗೂ ಕುಷ್ಟಗಿ ಗುರುಮಾತೆಯರು 5 ವರ್ಷಗಳಿಂದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.

ಈ ಹೃದಯಸ್ಪರ್ಶಿ ಬೀಳ್ಕೊಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾ.ಶಿ. ಇಲಾಖೆಯ ಉಪನಿರ್ದೇಶಕರಾದ ಆರ್.ಎಸ್. ಬುರುಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಲಾ ದತ್ತು ಉಸ್ತುವಾರಿಗಳಾದ ಡಾ. ಬಸವರಾಜ ಧಾರವಾಡ, ನಗರಸಭೆ ಸದಸ್ಯರಾದ ವಿದ್ಯಾವತಿ ಗಡಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವೀಂದ್ರ ಶೆಟ್ಟಪ್ಪನವರ, ಗದಗ ತಾಲೂಕಾ ಅಕ್ಷರ ದಾಸೋಹ ಅಧಿಕಾರಿಗಳಾದ ಶಂಕರ್ ಹಡಗಲಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಫ್. ಪೂಜಾರ, ಗದಗ ತಾಲೂಕಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣಪ್ಪ ನಾರಹಳ್ಳಿ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವ್ವ ಸೇವಾ ಟ್ರಸ್ಟ್‌ನವರು ಕೊಡಮಾಡಿದ 2026ನೇ ಸಾಲಿನ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿ: ಕೆ.ಎ. ಬಳಿಗೇರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳಲ್ಲಿ ಸುಪ್ತವಾಗಿರುವ ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡೆ ಹೀಗೆ ಯಾವುದೇ ವಿಶೇಷ ಪ್ರತಿಭೆಗಳನ್ನು ಬಾಲ್ಯದಲ್ಲಿಯೇ ಗುರುತಿಸಿ ಅದಕ್ಕೆ ಸಂಸ್ಕಾರ, ಶಿಸ್ತು, ಸಂಯಮದ ನೀರೆರೆದು ಪ್ರೋತ್ಸಾಹಿಸಬೇಕು ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಅವರು ಪಟ್ಟಣದ ರಂಭಾಪುರಿ ಜ.ವೀರಗಂಗಾಧರ ಸಮುದಾಯ ಭವನದಲ್ಲಿ ಕಲಾ ವೈಭವ ಸಾಂಸ್ಕೃತಿಕ ವಿವಿಧೋದ್ದೇಶಗಳ ಸಂಸ್ಥೆಯಿಂದ ನಡೆದ ನಟರಾಜ ನರ್ತನ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭರತನಾಟ್ಯ ದೇಶದ ಪ್ರಾಚೀನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಪರಂಪರೆ ಬಿಂಬಿಸುವ ಭಾರತೀಯ ಸಾಂಪ್ರದಾಯಿಕ ಶ್ರೇಷ್ಠ ನೃತ್ಯ ಕಲೆಯಾಗಿದೆ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ದೇವರು, ಧರ್ಮ, ಗುರು-ಹಿರಿಯರಲ್ಲಿ ವಿಧೇಯತೆ ಜತೆಗೆ ಮಾನಸಿಕ ದೈಹಿಕ ಆರೋಗ್ಯವನ್ನುಂಟುಮಾಡುತ್ತದೆ. ದೇಶದ ಸಂಪತ್ತಾದ ಮಕ್ಕಳಲ್ಲಿ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಕಾರ್ಯ ನಿರಂತರವಾಗಿರಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಲಲಿತಕ್ಕ ಕೆರಿಮನಿ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಪ್ರಸ್ತುತ ಟಿ.ವಿ., ಕಂಪ್ಯೂಟರ್, ಮೊಬೈಲ್ ಇತರೇ ತಂತ್ರಜ್ಞಾನದ ಪ್ರಭಾವದ ನಡುವೆಯೂ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ನೃತ್ಯಕಲೆ, ಸಂಗೀತ, ಸಾಹಿತ್ಯ, ಹಬ್ಬ, ಉತ್ಸವ, ಆಚರಣೆಗಳಲ್ಲಿ ಮಕ್ಕಳನ್ನು ತೊಡಗಿಸಿ ಉಳಿಸಿ-ಬೆಳೆಸಿ-ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.

ಕಲಾ ವೈಭವ ಸಂಸ್ಥೆಯ ಮುಖ್ಯಸ್ಥೆ ಭವ್ಯಾ ಕತ್ತಿ ಪ್ರಾಸ್ತಾವಿಕ ನುಡಿದರು. ಈ ವೇಳೆ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಗದಗನ ವಿ. ರಾಘವಿ ಜೋತಿಶ್ರೀ ಸೇರಿ ಪಾಲಕರು ಪಾಲ್ಗೊಂಡಿದ್ದರು. ಬಳಿಕ ಸಂಸ್ಥೆಯ ಭರತನಾಟ್ಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಕಾರ್ಯಕ್ರಮ ನೆರವೇರಿತು.

ಸವಾಲುಗಳನ್ನು ಮೆಟ್ಟಿ ನಿಲ್ಲುವಂತಾಗಲಿ: ಜಗದೀಶ ಕಾರಂತ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಭಾರತ ದೇಶದ ಇತಿಹಾಸದ ಇತಿಹಾಸಕಾರರು ಬರೆದಿರುವ ಪುಟಗಳನ್ನು ತಿರುವಿ ಹಾಕಿದಾಗ ಭಾರತ ಹಿಂದೂ ರಾಷ್ಟ್ರ, ಹಿಂದೂಸ್ಥಾನ ಎಂದು ಕರೆಸಿಕೊಂಡಿದೆ. ಹೀಗಾಗಿ ಹಿಂದು ಮತ ವಾಚಕವಲ್ಲ, ಧರ್ಮ ವಾಚಕವಲ್ಲ, ರಾಷ್ಟ್ರ ವಾಚಕ, ರಾಷ್ಟ್ರ ಸೂಚಕವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಕ್ಷೇತ್ರೀಯ ಸಂಯೋಜಕರಾದ ಜಗದೀಶ ಕಾರಂತ ಹೇಳಿದರು.

ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.

ಧಾರವಾಡ ವಿಭಾಗದಲ್ಲಿ ಪ್ರಥಮವಾಗಿ ಡಂಬಳದಲ್ಲಿ ಹಿಂದೂ ಸಮ್ಮೇಳನ ನಡೆಸಲಾಗಿದೆ. ನಮ್ಮ ವಿರೋಧ ಇರುವುದು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ನೆಲೆಸಿರುವ ಮುಸ್ಲಿಮರ ಬಗ್ಗೆ, ಅವರು ಮರಳಿ ಅವರ ದೇಶಕ್ಕೆ ಹೋಗಬೇಕು ಎನ್ನುವುದು. ಆರ್‌ಎಸ್‌ಎಸ್ ಗುರುತಿಸುವುದಕ್ಕಿಂತ ಮುಂಚೆ ಭಾರತವನ್ನು ಜಗತ್ತು ಗುರುತಿಸಿರುವುದು ಹಿಂದೂ ಎಂದು. ದೇಶದ ಎಲ್ಲಾ ಜಮಾತೆ ಇಸ್ಲಾಂ ಸಂಘಟನೆಗಳು ತಮ್ಮ ಸಂಘಟನೆಗಳನ್ನು ಹೆಸರಿಸುವುದು ಜಮಾತೆ ಇಸ್ಲಾಂ ಹಿಂದ್ ಎಂದು. ಆರ್.ಎಸ್.ಎಸ್ ಸಾವಿರಾರು ಹಿಂದೂ ಸಮ್ಮೇಳನ ನಡೆಸುವ ಗುರಿ ಹೊಂದಿದ್ದು, ಆರ್‌ಎಸ್‌ಎಸ್ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದ ರಕ್ಷಣೆಗಾಗಿ ಜಾತಿ-ಮತ ಮೀರಿ ಒಂದಾಗಿ ನಡೆಯಬೇಕು. ಸಮಾಜದಲ್ಲಿ ಸಮರಸವಾಗಿ ಬಾಳುವುದನ್ನು ಕಲಿಸುವುದರೊಂದಿಗೆ ದೇಶ ಎದುರಿಸಬಹುದಾದ ಅನೇಕ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಾಗಬೇಕು ಎಂದು ಹೇಳಿದರು.

ಸಂಜೀವ ರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ದೇವಸ್ಥಾನದಿಂದ ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಾರತಾಂಬೆಯ ಭಾವಚಿತ್ರದೊಂದಿಗೆ ಶೋಭಾಯಾತ್ರೆ ಜರುಗಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ, ಹಿಂದೂ ಸಮ್ಮೇಳನದ ಅಧ್ಯಕ್ಷ ಮಲ್ಲೇಶ ಮಠದ, ಉಪಾಧ್ಯಕ್ಷ ಹನುಮಪ್ಪ ಹಾದಿಮನಿ, ಬಾಬು ರಾಠೋಡ, ಡಿ. ಪ್ರಸಾದ, ಮಂಜುನಾಥ ಇಟಗಿ, ರವಿ ಕರಿಗಾರ, ನಾಗರಾಜ ಕಾಟ್ರಳ್ಳಿ, ಈಶ್ವರಗೌಡ ಪಾಟೀಲ, ಸಮಿತಿಯ ಪ್ರಮುಖರಾದ ಬೀರಪ್ಪ ಬಂಡಿ, ವೆಂಕನಗೌಡ ಪಾಟೀಲ್, ಮುದಿಲಿಂಗಪ್ಪ ಕೊರ್ಲಹಳ್ಳಿ, ನಾಗರಾಜ ಕಾಟ್ರಳ್ಳಿ, ಈಶ್ವರಗೌಡ, ಕುಬೇರಪ್ಪ ಬಂಡಿ, ಕೃಷ್ಣ ಬಂಡಿ, ಪ್ರಭು ಕರಮುಡಿ, ದೇವಪ್ಪ ಇಟಗಿ, ಕೃಷ್ಣಾ ಬಂಡಿ, ಶರಣಪ್ಪ ಕೊಂಬಳಿ, ಮಹಾದೇವಪ್ಪ ತೋಟಪ್ಪನವರ, ಬಸವರಾಜ ಚನ್ನಳ್ಳಿ, ಪಕ್ಕಣನಗೌಡರ ರಡ್ಡೆರ, ರಮೇಶ ತುರಕಾಣಿ, ಪ್ರಕಾಶ ಕೋಂತಬ್ರಿ, ಶಿವಾನಂದ ಬಂಡಿ, ಹನಮಂತ ಪೂಜಾರ, ಪಾಂಡಪ್ಪ ರಾಠೋಡ, ಲಕ್ಷ್ಮಣ ರಾಠೋಡ, ಬಸವಂತಪ್ಪ ಬಡಿಗೇರ, ಬಾಬಣ್ಣ ರಾಠೋಡ, ಸಿದ್ಧನಗೌಡ ಪಾಟೀಲ, ನಿಂಗಣಗೌಡ ಹರ್ತಿ, ಮಂಜುನಾಥ ರಾಮೇನಳ್ಳಿ, ಈಶಪ್ಪ ರಂಗಪ್ಪನವರ, ಮಿತ್ತಯ್ಯಜ್ಜ ಹರ್ತಿಮಠ, ಕೃಷ್ಣಪ್ಪ ನಗರ, ದೇವಪ್ಪ ಕಲಿವಾಳ, ವಾಸುದೇವ ಪಾಟೀಲ, ಮುದಕಪ್ಪ ಮುಳಗುಂದ, ಮುತ್ತು ಚಿನ್ನಪ್ಪಗೌಡರ, ಮಂಜುನಾಥ ಇಟಗಿ, ರವಿ ಕರಿಗಾರ, ಮುತ್ತು ಚಿನ್ನಪ್ಪಗೌಡರ, ಸೋಮಶೇಖರಯ್ಯ ಹಿರೇಮಠ, ಲಕ್ಷ್ಮಣ ಬೂದಿಹಾಳ, ಯಲ್ಲಪ್ಪ ಮುದಗಣ್ಣನವರ, ಸಂಭು ಸಂದಿಗೌಡ ಮುಂತಾದವರಿದ್ದರು.

ಹರ್ಲಾಪೂರದ ಡಾ. ಅಭಿನವ ಕೊಟ್ಟೂರೇಶ್ವರ ಮಹಾ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ಸಮಾಜ ಎಂಬುದು ದ್ವಾರಬಾಗಿಲು ಇದ್ದಂತೆ. ಜಾತಿ-ಮತ ಇಲ್ಲದೆ ಹಿಂದೂಗಳು ನಾವೆಲ್ಲ ಬಂಧುಗಳು ಎಂಬ ಭಾವನೆಯಿಂದ ಹೊರಟು ಎಲ್ಲವನ್ನು ಅಪ್ಪಿಕೊಳ್ಳುವ ಸಮಾಜವಾಗಿದೆ. ಜಾತ್ಯಾತೀತವಾಗಿ ಎಲ್ಲರೂ ಧೈರ್ಯದಿಂದ ಹಿಂದೂಗಳು ಎನ್ನುವುದು ಅಗತ್ಯವಿದೆ. ಇದು ಭ್ರಾತೃತ್ವ ತೋರಿಸುತ್ತದೆ ಎಂದು ಹೇಳಿದರು.

ಬೆಂಗಳೂರು| ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ; ಓರ್ವ ವ್ಯಕ್ತಿ ಸಾವು, ಹಲವರಿಗೆ ಗಾಯ

0

ಬೆಂಗಳೂರು:- ನಗರದ ಕುಂದಲಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ಸಿಲಿಂಡರ್​ ಸ್ಫೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.

ಮೃತ ಯುವಕನನ್ನು 23 ವರ್ಷದ ಅರವಿಂದ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ವೆಂಕಟೇಶ್ ಎಂಬುವವರು ಗಂಭೀರಗೊಂಡಿದ್ದು, ದೇವಿ, ವಿಶಾಲ್​​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಥಳೀಯ ಹೆಚ್ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಯಶ್ರೀ ಹಿರೇಮಠರಿಗೆ `ಉತ್ತಮ ಶಿಕ್ಷಕಿ’ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಮಗೇರಿ ಗ್ರಾಮದ ಜಿ.ಎಫ್. ಉಪನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಜಯಶ್ರೀ ಹಿರೇಮಠ ಧಾರವಾಡದ ಚೇತನ ಫೌಂಡೇಶನ್ ಕೊಡಮಾಡುವ ಉತ್ತಮ ಶಿಕ್ಷಕಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಧಾರವಾಡದ ಚಂದ್ರಶೇಖರ ಮಾಡಲಗೇರಿ ನೇತೃತ್ವದ ಚೇತನ ಫೌಂಡೇಶನ್ ಕರ್ನಾಟಕ ವಿಶ್ವವಿದ್ಯಾಲಯದ ಕನಕ ವಿದ್ಯಾಪೀಠದಲ್ಲಿ ಭಾನುವಾರ ನಡೆದ ನುಡಿ ಸಡಗರ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ವಿಶೇಷ ಸೇವೆ ಪರಿಗಣಿಸಿ ರಾಮಗೇರಿ ಗ್ರಾಮದ ಜಿ.ಎಫ್. ಉಪನಾಳ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಶ್ರೀ ಹಿರೇಮಠ, ಲಕ್ಷ್ಮೇಶ್ವರದ ಸರ್ಕಾರಿ ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶಿಕ್ಷಕ ಬಸವರಾಜ ದನದಮನಿ ಅವರಿಗೆ ಉತ್ತಮ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸ್ವಾತಂತ್ರ್ಯಕ್ಕಾಗಿ ಸ್ಥಾಪಿತವಾದ ಪಕ್ಷ ಕಾಂಗ್ರೆಸ್: ಅಕ್ಷಯ ಪಾಟೀಲ 

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಾಂಗ್ರೆಸ್ ಎಂದು ಕರೆಯಲ್ಪಡುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದಲ್ಲಿ ದೊಡ್ಡ ರಾಜಕೀಯ ಪಕ್ಷವಾಗಿದೆ. ರಾಷ್ಟವಾದಿ ಮತ್ತು ಸ್ವಾತಂತ್ರ ಎಂಬ ತತ್ವದಲ್ಲಿ ಸ್ಥಾಪಿತವಾದ ಪಕ್ಷವಾಗಿದ್ದು, ಏಷ್ಯಾ ಮತ್ತು ಆಫ್ರಿಕಾದ ಆಗಿನ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ಪಕ್ಷವಾಗಿದೆ. ಸಮಬಾಳು, ಸಹಜೀವನ, ಜೊತೆಗೆ ಸ್ವಾತಂತ್ರಕ್ಕಾಗಿ ಸ್ಥಾಪಿತವಾದ ಪ್ರಮುಖ ಸಂಘಟನೆಯಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಹೇಳಿದರು.

ಸಮೀಪದ ಅಬ್ಬಿಗೇರಿಯ ಗಾಂಧಿ ವೃತ್ತದಲ್ಲಿ ಅಬ್ಬಿಗೇರಿ ಕಾಂಗ್ರೆಸ್ ಕಮಿಟಿ ಆಶ್ರಯದಲ್ಲಿ, ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಪಾತ್ರ ವಹಿಸಿದ ಪ್ರಮುಖ ಪಕ್ಷಗಳಲ್ಲಿ ಕಾಂಗ್ರೆಸ್ ಒಂದಾಗಿದೆ. ಬ್ರಿಟಿಷ್ ಸಾಮ್ರಾಜ್ಯದಲ್ಲಿನ ಇತರ ವಸಾಹತುಶಾಹಿ ವಿರೋಧಿ ರಾಷ್ಟ್ರೀಯತಾವಾದಿ ಚಳುವಳಿಗಳ ಮೇಲೆ ಕಾಂಗ್ರೆಸ್ ಪ್ರಭಾವ ಬೀರಿದೆ ಎಂದರು.

ರೋಣ ತಾಲೂಕು ವಾಲ್ಮಿಕಿ ಸಮಾಜದ ಅಧ್ಯಕ್ಷ ಬಸವರಾಜ ತಳವಾರ ಮಾತನಾಡಿ, ಬ್ರಿಟಿಷ್ ಆಳ್ವಿಕೆ ನಂತರ, ಆಡಳಿತದಲ್ಲಿ ಭಾರತೀಯರು ಹೆಚ್ಚಿನ ಭಾಗವಹಿಸುವಿಕೆಯ ಉದ್ದೇಶವನ್ನು ಇಟ್ಟುಕೊಂಡು ರಾಷ್ಟ್ರೀಯತಾವಾದಿ ಚಳುವಳಿಗಾಗಿ ರಚಿಸಲಾದ ಪ್ರಮುಖ ಸಂಘಟನೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ದೇಶವನ್ನು ಸ್ವತಂತ್ರಗೊಳಿಸುವುದು, ದೇಶಕ್ಕೆ ಹೊಸ ಸಂವಿಧಾನ ರಚಿಸುವುದು, ರಾಮರಾಜ್ಯ ಸ್ಥಾಪನೆ, ಸರ್ವೋದಯ ಪರಿಕಲ್ಪನೆ ಮೂಲಕ ಸ್ಥಾಪಿತವಾದ ಒಂದು ಸಂಘಟನೆಯಾಗಿದೆ. ಕ್ರಮೇಣ ಇದು ರಾಜಕೀಯ ಪಕ್ಷವಾಯಿತು. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಸುಮಾರು 60 ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಈ ರಾಷ್ಟ್ರೀಯ ಕಾಂಗ್ರೆಸ್ ಪ್ರೇರಣೆ ನೀಡಿತು ಎಂದರು.

ಬಾಬುಗೌಡ ಪಾಟೀಲ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಎಚ್.ಟಿ. ದ್ವಾಸಲ, ಬಾಬು ಬನ್ನಿಕೊಪ್ಪ, ಎಂ.ಡಿ. ಬಸವರಡ್ಡೇರ, ರಾಮನಗೌಡ ಹಲಕುರ್ಕಿ, ಜಗದೀಶ ಅವರಡ್ಡಿ, ಭೀಮರಡ್ಡಿ ಅವರಡ್ಡಿ, ಗುರಣ್ಣ ಅವರಡ್ಡಿ, ಎಂ.ಡಿ. ಬಸವರಡ್ಡೇರ, ಸುರೇಶ ಶಿರೋಳ, ಮಲ್ಲು ಯಲ್ಲರಡ್ಡಿ, ಅಂದಪ್ಪ ಹಲಕುರ್ಕಿ, ಸಿದ್ದು ಹನುಮನಾಳ, ಮುತ್ತು ಕುಕನೂರ, ಶಿವಣ್ಣ ಗುಗ್ಗರಿ, ಮಹಾಂತೇಶ ತಳವಾರ, ಮಹಾಂತೇಶ ಇಮ್ರಾಪೂರ, ಭೀಮಣ್ಣ ಕಂಬಳಿ, ಅಂದಪ್ಪ ತಾಳಿಕೋಟಿ, ಟಿ.ಬಿ. ಇಮ್ರಾಪೂರ, ಬಸವರಾಜ ಕಮ್ಮಾರ, ತಿರುಮಲೇಶ ಬಂಡಿವಡ್ಡರ, ರಾಮಣ್ಣ ಕುಲಕರ್ಣಿ, ಸಂತೋಷ ಕಲ್ಲೆಶ್ಯಾಣಿ, ಕುಮಾರ ಬಸವರಡ್ಡೇರ, ಸೋಮು ಶಿರೋಳ, ಶಿವಪುತ್ರ ಕೆಂಗಾರ, ಶೇಕಣ್ಣ ಕಮ್ಮಾರ, ಗುರುಲಿಂಗಪ್ಪ ಬಸವರಡ್ಡೇರ, ಶರಣು ವಡವಿ, ಸೋಮು ವಡವಿ, ಅಶೋಕ ಶಿರೋಳ, ಮನೋಹರ ಬಳಗಾನೂರ, ಮಂಜು ಚಿತ್ತರಗಿ, ಚನ್ನಬಸು ಹೂಗಾರ, ಲಕ್ಷ್ಮಣ ಹಿರೇಮನಿ, ಶಶಿ ಸಂಗನಾಳ, ಶಶಿ ಹಿರೇಮನಿ, ಶಂಕರ ದ್ವಾಸಲ, ಮಳ್ಳಪ್ಪ ದ್ವಾಸಲ, ರಮೇಶ ಕುಡಗುಂಟಿ ಮುಂತಾದವರು ಉಪಸ್ಥಿತರಿದ್ದರು.

ಪಕ್ಷಕ್ಕೆ ಸೇವೆ ಸಲ್ಲಿಸಿದ ಹಿರಿಯರಾದ ಬುದ್ಧಿವಂತಪ್ಪ ಉಪಾಧ್ಯ, ಭೀಮಣ್ಣ ಬಂಡಿಹಾಳ, ಮಲ್ಲೇಶಪ್ಪ ಗದುಗಿನ, ಮಲ್ಲಪ್ಪ ಕಲ್ಲೇಶ್ಯಾಣಿ, ಎಚ್.ಟಿ. ದ್ವಾಸಲ, ಸುರೇಶ ಬಸವರಡ್ಡೇರ, ಹನುಮಪ್ಪ ನಡುವಲಗುಡ್ಡ, ಹೂವಪ್ಪ ಪೂಜಾರ, ಅಂದಪ್ಪ ದ್ವಾಸಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸೇವೆಯಿಂದ ಸಾರ್ಥಕ ಬದುಕು ಸಾಧ್ಯ: ಉತ್ಕರ್ಷಾ ಪಾಟೀಲ್

0

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವ್ಹೀಲ್ ಕ್ಲಬ್‌ನ ಮೂಲ ಧ್ಯೇಯವಾದ ಸ್ನೇಹ ಮತ್ತು ಸೇವೆಯನ್ನು ಸಾರ್ಥಕವಾಗಿ ನಿಭಾಯಿಸುತ್ತಿರುವ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಉತ್ತಮ ಮಾದರಿಯಾಗಿದೆ. ಎಲ್ಲಿ ಯಾವಾಗ ಅವಶ್ಯಕತೆ ಇದೆಯೋ, ಅಲ್ಲಿ ಉಪಸ್ಥಿತವಿರುವ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಸಮಯ ಪ್ರಜ್ಞೆ ಪ್ರಶಂಸನೀಯವಾದದ್ದು ಎಂದು ಇನ್ನರ್ ವ್ಹೀಲ್ ಕ್ಲಬ್ ಡಿಸ್ಟ್ರಿಕ್ 317ನ ಡಿಸ್ಟ್ರಿಕ್ ಚೇರಮನ್ ಉತ್ಕರ್ಷಾ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ಗದಗ-ಬೆಟಗೇರಿಯಲ್ಲಿ ನಡೆದ ಇನ್ನರ್ ವ್ಹೀಲ್ ಕ್ಲಬ್‌ನ ಅಧಿಕೃತ ಭೇಟಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವರ್ಣ ಸಂಭ್ರಮವನ್ನು ಆಚರಿಸಿಕೊಂಡ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಕಾರ್ಯಗಳು ಹಾಗೂ ಅವರ ಪರಿಶ್ರಮ ಶ್ಲಾಘನೀಯವಾದದ್ದು ಎಂದರಲ್ಲದೆ, 2025-26ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿ ಅವರ ನಿಷ್ಠೆ ಹಾಗೂ ಸಮರ್ಪಣಾ ಭಾವವನ್ನು ಮೆಚ್ಚಿ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.

ಕ್ಲಬ್‌ನ ಅಧ್ಯಕ್ಷರಾದ ಅಶ್ವಿನಿ ಜಗತಾಪ ಸ್ವಾಗತಿಸಿದರು. ಪವಿತ್ರಾ ಬಿರಾದರ್ ಇನ್ನರ್ ವ್ಹೀಲ್ ಪ್ರಾರ್ಥನೆಯನ್ನು ಮಾಡಿದರು, ದೀಪಾ ಪಟ್ಟಣಶೆಟ್ಟಿ ಡಿಸಿ ಉತ್ಕರ್ಷಾ ಪಾಟೀಲ್ ಅವರ ಪರಿಚಯವನ್ನು ನೀಡಿದರು. ರೂಪಾ ಸಂಶೀಮಠ ಪಿ.ಡಿ.ಸಿ. ಪ್ರೇಮಾ ಗುಳಗೌಡರ್ ಇವರ ಪರಿಚಯವನ್ನು ಹಾಗೂ ಹೊಸ ಸದಸ್ಯರಾಗಿ ಸೇರಿಕೊಂಡ ಗೀತಾ ನಾಲ್ವಾಡ ಇವರ ಪರಿಚಯವನ್ನು ಸುವರ್ಣಾ ಮದ್ರಿಮಠ ಮಾಡಿದರು.

ಕಾರ್ಯದರ್ಶಿಗಳಾದ ಶಿವಲೀಲಾ ಅಕ್ಕಿ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯಿಂದ ಇಲ್ಲಿಯವರೆಗೆ ಕೈಗೊಂಡ 2025-26ನೇ ಸಾಲಿನ ಪ್ರೊಜೆಕ್ಟ್ಗಳ ವಿವರವನ್ನು ನೀಡಿದರು. ಸಂಪಾದಕರಾದ ವೀಣಾ ಕಾವೇರಿ ಕಾರ್ಯಕ್ರಮದಲ್ಲಿ ಬಿಡುಗಡೆಯಾದ 2025-26ನೇ ಸಾಲಿನ ಬುಲೆಟಿನ್ ಬುಕ್ ಬಗ್ಗೆ ವಿವರಣೆಯನ್ನು ನೀಡಿದರು. ಮಾಜಿ ಅಧ್ಯಕ್ಷರಾದ ನೀಲಾಂಬಿಕಾ ಉಗಲಾಟ್ ಹಾಗೂ ಕೊ-ಸಿ.ಪಿ.ಸಿ.ಸಿ. ಶಿಲ್ಪಾ ಅಕ್ಕಿ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಗದಗ-ಬೆಟಗೇರಿಯ ರೋಟರಿ, ರೋಟ್ರ‍್ಯಾಕ್ಸ್, ರೋಟರಿ ಸೆಂಟ್ರಲ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಮಿಡ್‌ಟೌನ್‌ನ ಸದಸ್ಯರು ಹಾಗೂ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಸದಸ್ಯರು ಉಪಸ್ಥಿತರಿದ್ದರು.

ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಡಿಸಿ ಉತ್ಕರ್ಷಾ ಪಾಟೀಲ ಮಂಜು ಶಿಕ್ಷಣ ಸಂಸ್ಥೆ ಬೆಟಿಗೇರಿ-ಗದಗನ ಮಂಡ ಬುದ್ಧಿ ಮಕ್ಕಳ ವಸತಿ ವಿಶೇಷ ಶಾಲೆಯಲ್ಲಿ ವಾರ್ಷಿಕ ಕ್ರೀಡೆಗಳನ್ನು ಉದ್ಘಾಟಿಸಿ ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಬಾಲಕಿಗೆ ಸೈಕಲ್‌ನ್ನು ಕ್ಲಬ್ ವತಿಯಿಂದ ವಿತರಿಸಲಾಯಿತು.

Bengaluru Power Cut: ನಾಳೆ ಬೆಂಗಳೂರಲ್ಲಿ ವಿದ್ಯುತ್ ಕಡಿತ, ಈ ಪ್ರದೇಶಗಳಲ್ಲಿ ಪವರ್ ಕಟ್!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ನಾಳೆಯೂ ಪವರ್ ಸಮಸ್ಯೆ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಕೆಪಿಟಿಸಿಎಲ್ ವತಿಯಿಂದ 66/11ಕೆ.ವಿ ರೆಮಕೊ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಡಿಸೆಂಬರ್ 30ರ ಮಂಗಳವಾರ ನಗರದ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಮೈಸೂರ್ ರಸ್ತೆ 7ನೇ ಕ್ರಾಸ್, ಶಾಮಣ್ಣಾ ಗಾರ್ಡನ್, ಮಂಜುನಾಥನಗರ, ಪೈಪ್‌ಲೈನ್‌ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ಅನಂತ ರಾಮಯ್ಯ ಕಾಂಪೌಂಡ್, ಕುವೆಂಪು ನಗರ, 6ನೇ ಕ್ರಾಸ್ ಮೈಸೂರು ರಸ್ತೆ, 4ನೇ ಕ್ರಾಸ್ ಮೈಸೂರು ರಸ್ತೆ, ಗುಡ್ಡದಹಳ್ಳಿ ಹಾಗೂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ.

ವಿ.ಎಚ್.ಪಿ ವಿಭಾಗ ಪ್ರಮುಖರಾಗಿ ಶ್ರೀಧರ್ ಕುಲಕರ್ಣಿ ಆಯ್ಕೆ

0

 ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ ಶ್ರೀಧರ್ ಕುಲಕರ್ಣಿ ಅವರಿಗೆ ವಿಭಾಗ ಪ್ರಮುಖ ಹಾಗೂ ಪ್ರಾಂತ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಬೈಠಕ್‌ನಲ್ಲಿ ಘೋಷಣೆ ಮಾಡಲಾಗಿದೆ.

ಇದುವರೆಗೆ ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಎಂದು ಕಾರ್ಯನಿರ್ವಹಿಸುತ್ತಿದ್ದ ಗದುಗಿನ ಮಾರುತಿ ಪವಾರರನ್ನು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಎಂದು ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ವಿಶ್ವ ಹಿಂದೂ ಪರಿಷತ್ ಪ್ರಾಂತ ಬೈಠಕ್‌ನಲ್ಲಿ ಘೋಷಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಿರುತೆರೆಗೆ ಬಿಗ್ ಶಾಕ್; ಬೆಂಗಳೂರಿನಲ್ಲಿ ಖ್ಯಾತ ನಟಿ ಆತ್ಮಹತ್ಯೆಗೆ ಶರಣು!

0

ಕನ್ನಡ ಹಾಗೂ ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದಲ್ಲಿ ನಡೆದಿದೆ.

ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ, ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಅವರು ಕನ್ನಡದ ಜೀವ ಹೂವಾಗಿದೆ, ಸಂಘರ್ಷ, ಮಧುಮಗಳು, ನೀನಾದೆ ನಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದ್ದರು. ಅಲ್ಲದೇ ತಮಿಳಿನ ಗೌರಿ ಧಾರಾವಾಹಿಯಲ್ಲಿ ಕನಕ ಹಾಗೂ ದುರ್ಗಾ ಎಂಬ ದ್ವಿಪಾತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು.
ನಂದಿನಿ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಅನಾರೋಗ್ಯ ಸಮಸ್ಯೆಯಿಂದ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಅಲ್ಲದೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ನಂದಿನಿ ಅವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆ ನಿಧನ ನಂತರ ಅವರ ಕೆಲಸವನ್ನು ತಾವೇ ಮುಂದುವರಿಸಬೇಕೆಂದು ಮನೆಯವರು ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಶಿಕ್ಷಕ ವೃತ್ತಿ ನಂದಿನಿಗೆ ಇಷ್ಟವಿರಲಿಲ್ಲವೆಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ನಂದಿನಿ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!