Home Blog Page 3028

ವಿಜಯಸಾಕ್ಷಿ ಇಂಪ್ಯಾಕ್ಟ್! ವಿಕೃತಕಾಮಿಯ ಹೆಡೆಮುರಿ ಕಟ್ಟಿದ ಮಹಾಂತೇಶ್ ಹೂಳಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜು ದಖನಿ

ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಹೀಳಾ ರೋಗಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಕೃತ ಕಾಮಿಯಯನ್ನ ಹೆಡೆಮುರಿ ಕಟ್ಟುವಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಇನ್ಸ್‌ಪೆಕ್ಟರ್ ಮಹಾಂತೇಶ ಹೂಳಿ ಯಶಸ್ಸು ಕಂಡಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಪತ್ರಿಕೆ ಹಾಗೂ ವೆಬ್ ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ಗಮನಿಸಿದ ಪೊಲೀಸರು ಕಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ. 19ರಂದು ಆಂಧ್ರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿಯ ಖ್ಯಾತ ವೈದ್ಯ ಡಾ. ಕ್ರಾಂತಿಕಿರಣ ಅವರ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಆ ಸಂದರ್ಭದಲ್ಲಿ ಮಹಿಳೆಗೆ ಇದೇ ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಕೊಠಡಿಗೆ ವಾರ್ಡ್ ಬಾಯ್ ಕರೆದುಕೊಂಡು ಹೊಗಿದ್ದ. ಕೊಠಡಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ವಿಕೃತಿ ಮೆರೆದಿದ್ದ. ಕೃತ್ಯ ಬಯಲಿಗೆ ಬರುತ್ತಿದ್ದಂತೆ ಆರೋಪಿ ಅಶೋಕ, ಆಸ್ಪತ್ರೆಯಿಂದ ಪರಾರಿಯಾಗಿದ್ದ.

ಆದರೆ, ಪ್ರಕರಣದ ಜಾಡು ಬೆನ್ನು ಹತ್ತಿದ್ದ ವಿದ್ಯಾನಗರದ ಸೂಪರ್ ಕಾಪ್‌ ಮಹಾಂತೇಶ ಹೂಳಿ ಅವರು ಘಟನೆ ನಡೆದ ನಾಲ್ಕು ದಿನಗಳಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಅಣ್ಣಿಗೇರಿ ಮೂಲದ ಅಶೋಕ ಹಲಗಿ ಎಂದು ಗುರುತಿಸಲಾಗಿದೆ. ಆದರೆ, ಆರೋಪಿಯ ಮುಖದ ಮೇಲೆ ಗಂಭೀರ ಸ್ವರೂಪದ ಗಾಯದ ಗುರುತುಗಳು ಪತ್ತೆಯಾಗಿವೆ. ಈ ಕುರಿತು ವಿಚಾರಿಸಿದಾಗ ಕಳೆದ ಎರಡು ದಿನಗಳ ಹಿಂದೆಯೇ ಬೈಕ್ ಮೆಲಿಂದ ಬಿದ್ದಿರುವ ಕುರಿತು ಆರೋಪಿ ಹೇಳಿದ್ದಾನೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಲು ಮುಂದಾಗದ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಗೂ ಹಾಗೂ ಆತನಿಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಖ್ಯಾತ ನರರೋಗ ತಜ್ಞ, ಸಮಾಜ ಪರ ಕಾಳಜಿ ಹೊಂದಿರುವ ಡಾಕ್ಟರ್ ಕ್ರಾಂತಿ ಕಿರಣ್ ಅವರು ಕಳೆದ ಹತ್ತು ವರ್ಷಗಳಿಂದ ಇಂತಹ ಘಟನೆ ಬಾಲಾಜಿ ಆಸ್ಪತ್ರೆಯಲ್ಲಿ ನಡೆದಿರಲಿಲ್ಲ. ಆದರೆ ಇಂತಹ ಘಟನೆ ಸಂಭವಿಸಿದಾಗ ಜನರಲ್ಲಿ ಸಹಜವಾಗಿಯೇ ಆತಂಕ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಂದೆ ಬರ್ತಡೆಗೆ ಕೇಕ್ ತರಲು ಬಂದವರ ಬೈಕ್ ಜಪ್ತಿ!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಾದರೂ ಜನರಿಗೆ ಮಾತ್ರ ಬುದ್ಧಿ ಬರುತ್ತಿಲ್ಲ. ಇಡೀ ರಾಜ್ಯದಲ್ಲಿ ಇನ್ನೂ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ಸನ್ನಿವೇಶದಲ್ಲಿಯೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹತೋಟಿಗೆ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಜಿಲ್ಲಾಡಳಿತ ಮುಂದಾಗಿದೆ. ಆದರೂ ಜನ ಮಾತ್ರ ಅನಾವಶ್ಯಕವಾಗಿ ಓಡಾಡುತ್ತಿರುವುದನ್ನು ಮಾತ್ರ ಬಿಡುತ್ತಿಲ್ಲ.

ಕಠಿಣ ಲಾಕ್ ಡೌನ್ ಮಧ್ಯೆಯೂ ತಂದೆಯ ಬರ್ತಡೇ ಕೇಕ್ ತರುವುದಕ್ಕಾಗಿ ಇಬ್ಬರು ಯುವಕರು ವಿನಾಕಾರಣ ರಸ್ತೆಗೆ ಬಂದಿದ್ದರು. ಇದನ್ನು ಕಂಡ ಕೂಡಲೇ ಬೈಕ್ ತಡೆದ ಪೊಲೀಸರು, ಬೈಕ್ ವಶಕ್ಕೆ ಪಡೆದಿದ್ದಾರೆ.
ಈ ಕೇಕ್ ನಿಮಗೆ ಯಾರು ಕೊಟ್ಟರು ಹೇಳಿ ಎಂದು ಪೊಲೀಸರು ಪ್ರಶ್ನಿಸಿದಾಗ ಯುವಕರು, ಇಲ್ಲ ಸರ್ ಮನೆಯಲ್ಲಿಯೇ ತಯಾರಿಸಿದ್ದು, ನಾವು ಬೇಕರಿಯಲ್ಲಿ ತಂದಿಲ್ಲ. ಬೈಕ್ ಕೊಡಿ ಸರ್ ಇನ್ನೊಮ್ಮೆ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಗೋಳಾಡಿದರು. ಎಷ್ಟೇ ಗೋಳಾಡಿದರೂ ಪೊಲೀಸರು ಮಾತ್ರ ಬೈಕ್ ನೀಡಲಿಲ್ಲ.

ಈ ಘಟನೆ ನಗರದ ಹಳೇ ಡಿಸಿ ಕಚೇರಿ ಸರ್ಕಲ್ ಬಳಿ ನಡೆದಿದೆ. ಟ್ರಾಫಿಕ್ ಪೊಲೀಸರು ಬೈಕ್ ನ್ನು ತಡೆದು ಸೀಜ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಲ್ಲಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಇದರ ಮಧ್ಯೆಯೂ ಹೊರಗೆ ಬರುತ್ತಿರುವವರ ಬೈಕ್ ಗಳನ್ನು ಸೀಜ್ ಮಾಡಲಾಗುತ್ತಿದೆ.

ಗಜೇಂದ್ರಗಡ‌ ದಾಬಾ, ಹುಲಕೋಟಿ ಹೊಟೇಲ್ ಮೇಲೆ ದಾಳಿ; ಮದ್ಯ ಮಾರುತ್ತಿದ್ದ ನಾಲ್ವರು ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಮೇ‌ 27 ರಿಂದ ಜೂನ್ 1ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ, ಮದ್ಯ, ಅಗತ್ಯ ವಸ್ತುಗಳ ಮಾರಾಟ ಮಾಡದಂತೆ ಸಂಪೂರ್ಣ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಇದನ್ನು ಕೆಲವರು ಬಂಡವಾಳ ಮಾಡಿಕೊಂಡು ಹಣ ಗಳಿಸುವ ದಂದೆ ಮಾಡಿಕೊಂಡಿದ್ದಾರೆ.

ಸಂಪೂರ್ಣ ಲಾಕ್ ಡೌನ್ ಘೋಷಣೆ ಹೊರ ಬಿದ್ದ ಮರುದಿನವೇ ಜಿಲ್ಲೆಯ ಕೆಲವಡೆ ಮದ್ಯ ಖರೀದಿಸಿ ಸಂಗ್ರಹ ಮಾಡಿಕೊಂಡಿದ್ದರು.

ಇದನ್ನು ಅರಿತ ಜಿಲ್ಲೆಯ ಪೊಲೀಸರು ಅಲ್ಲಲ್ಲಿ ದಾಳಿ ಮಾಡಿ ಮದ್ಯ ಜಪ್ತಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ಗಜೇಂದ್ರಗಡ ಪಟ್ಟಣದ ತುಂಗಭದ್ರಾ ದಾಬಾ ಮೇಲೆ ದಾಳಿ ಮಾಡಿ ಸಂಗಪ್ಪ ಈಶ್ಚರಪ್ಪ ಹಾವೇರಿ ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿಎಸ್ಐ ಗುರುಶಾಂತ ದಾಸ್ಯಾಳ ಹಾಗೂ ಸಿಬ್ಬಂದಿ ಆತನನ್ನು ಬಂಧಿಸಿ, ಆತನಿಂದ 8735 ರೂ, ಗಳ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಗದಗ ತಾಲೂಕಿನ ವಿವಧೆಡೆ ಅಕ್ರಮವಾಗಿ ‌ಮದ್ಯ ಮಾರಾಟ ಮಾಡುತ್ತಿದ್ದವರ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಸಿಪಿಐ ರವಿಕುಮಾರ್ ಕಪ್ಪತನವರ್ , ಪಿಎಸ್ಐ ಅಜಿತಕುಮಾರ್ ಹೊಸಮನಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

ಕದಡಿ ಗ್ರಾಮದ ಅಡಿವೆಪ್ಪ ಮರಿಯಪ್ಪ ಚಲವಾದಿ ಎಂಬಾತನನ್ನು ಬಂಧಿಸಿ, ಆತನಿಂದ 27 ಸಾವಿರ ರೂ, ಮೌಲ್ಯದ ಬಿಯರ್ ಸೇರಿ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಗಾವರವಾಡ ಗ್ರಾಮದ ಪ್ರಕಾಶ್ ಎಂ ಬೆಟಗೇರಿ ಎಂಬಾತನನ್ನು ಬಂಧಿಸಿ, ಆತನಿಂದ 13ಸಾವಿರ ರೂ, ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.

ಹುಲಕೋಟಿಯಲ್ಲೂ ದಾಳಿ ಮಾಡಿರುವ ಪೊಲೀಸರು ಮ್ಯಾಂಗೋ ಟ್ರೀ ಹೋಟೆಲ್ ಸಮೀಪದ ಶಿವಕುಮಾರ್ ರಾಮಚಂದ್ರ ನಾಯಕ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 5ಸಾವಿರ ರೂ,‌ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಗಜೇಂದ್ರಗಡ ಹಾಗೂ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಇಂದು ರಾಜ್ಯದಲ್ಲಿ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು 20,378 ಜನರಲ್ಲಿ ಸೋಂಕು ಕಾಣಿಸೊಂಡಿದ್ದು, 382 ಜನರು ಬಲಿಯಾಗಿದ್ದಾರೆ. ಅಲ್ಲದೇ, 28,053 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ 3,42,010 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದಿನ 382 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 28,679 ಜನ ಸಾವನ್ನಪ್ಪಿದ್ದಾರೆ.

ರಾಜಧಾನಿಯಲ್ಲಿ ಕೊರೊನಾ ಸಂಖ್ಯೆ ಇಳಿಕೆಯಾಗಿದ್ದು, 4,734 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 213 ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ರಾಜ್ಯದ ಬಾಗಲಕೋಟೆ 193, ಬಳ್ಳಾರಿ 598, ಬೆಳಗಾವಿ 1,171, ಬೆಂಗಳೂರು ಗ್ರಾಮಾಂತರ 392, ಬೆಂಗಳೂರು ನಗರ 4,734, ಬೀದರ್ 37, ಚಾಮರಾಜನಗರ 402, ಚಿಕ್ಕಬಳ್ಳಾಪುರ 356, ಚಿಕ್ಕಮಗಳೂರು 671, ಚಿತ್ರದುರ್ಗ 805, ದಕ್ಷಿಣ ಕನ್ನಡ 727, ದಾವಣಗೆರೆ 698, ಧಾರವಾಡ 525, ಗದಗ 289, ಹಾಸನ 2,227, ಹಾವೇರಿ 206, ಕಲಬುರಗಿ 107, ಕೊಡಗು 271, ಕೋಲಾರ 341, ಕೊಪ್ಪಳ 365, ಮಂಡ್ಯ 643, ಮೈಸೂರು 1,559, ರಾಯಚೂರು 278, ರಾಮನಗರ 164, ಶಿವಮೊಗ್ಗ 386, ತುಮಕೂರು 773, ಉಡುಪಿ 651, ಉತ್ತರ ಕನ್ನಡ 504, ವಿಜಯಪುರ 198, ಮತ್ತು ಯಾದಗಿರಿಯಲ್ಲಿ 107 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಲೇಡಿ ಪಿಎಸ್ಐ ಜೊತೆಗೆ ಯುವಕನ ಅನುಚಿತ ವರ್ತನೆ; ಸೀಜ್ ಮಾಡಿದ್ದ ಬೈಕ್ ಬಿಟ್ಟ ಪೊಲೀಸರು!

ವಿಜಯಸಾಕ್ಷಿ ಸುದ್ದಿ, ಗದಗ

ಸೋಂಕು ತಡೆಗಟ್ಟಲು ಸರಕಾರ ಲಾಕ್ ಡೌನ್ ಜಾರಿ ಮಾಡಿದೆ. ಗದಗ ಜಿಲ್ಲೆಯಲ್ಲೂ ಸೋಂಕು ಹೆಚ್ಚಳವಾಗದಂತೆ ಐದು ದಿನಗಳ ಕಾಲ ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಮಾಡಿದೆ.

ಅನಗತ್ಯ ವಾಹನಗಳ ಓಡಾಟ ಬೇಡ, ಬೇಕಾಬಿಟ್ಟಿ ವಾಹನ ಓಡಿಸಿದರೆ ಸೀಜ್ ಮಾಡುವ ಎಚ್ಚರಿಕೆ ಕೂಡ ನೀಡಲಾಗಿದೆ. ಆದರೂ ಕೆಲವು ಜನರು ಸುಖಾಸುಮ್ಮನೇ ಓಡಾಡೋದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ವಾಹನ ತಡೆದಾಗ ವಾಹನ ಸವಾರರು ಇಲ್ಲದ ಸಬೂಬು ಹೇಳ್ತಾರೆ. ಪ್ರೆಸ್, ಮೆಡಿಯಾ, ಹಾಸ್ಪಿಟಲ್ ಗೆ ಬಂದಿದ್ದೆ, ಔಷಧ ತರಲು ಬಂದಿದ್ದೆ ಅಂತ ಹೇಳೊದು, ಪೊಲೀಸರು ಹೆಚ್ಚಿನ ರಿಸ್ಕ್ ತಗೊಳ್ಳದೇ ಬಿಟ್ಟು ಕಳಿಸುತ್ತಾರೆ. ಆದ್ರೆ ಇಲ್ಲೊಬ್ಬ‌ ಭೂಪ ಬೈಕ್ ತಡೆದ ಪಿಎಸ್ಐಗೆ ಅಶ್ಲೀಲ ಭಾಷೆ ಬಳಸಿ ನಿಂಧಿಸಿದ್ದಾನೆ.

ಮೊನ್ನೆ ಗದಗನ ಹುಡ್ಕೋ ಕಾಲೋನಿಯ ಮೂರನೇ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬೈಕ್ ತಡೆದ ನಂತರ ಆ ಯುವಕನಿಗೆ ಪೋನ್ ಕರೆ ಬಂದಿದೆ. ಆ ಸಂದರ್ಭದಲ್ಲಿ ಯುವಕ ಕರೆ ಮಾಡಿದ ವ್ಯಕ್ತಿಯ ಜೊತೆಗೆ ನನ್ನ ಗಾಡಿ …….ತಡಿಯೋ ಮಾರಾಯ….ಅಂತ ಪದೇ ಪದೇ ಹೇಳಿದ್ದಾನೆ. ಸೂಕ್ಷ್ಮವಾಗಿ ಗಮನಿಸಿದ ಆ ಲೇಡಿ ಪಿಎಸ್ಐ ಮೆಡಮ್ ಆ ಯುವಕನಿಗೆ ತರಾಟೆಗೆ ತಗೆದುಕೊಂಡಿದ್ದಲ್ಲದೆ ಬೈಕ್ ಸೀಜ್ ಮಾಡಿದ್ದಾರೆ. ಆದರೆ ಕೇವಲ ಬೈಕ್ ಸೀಜ್ ಮಾಡದೇ ಆತನ ಮೇಲೆ ಕೇಸ್ ಹಾಕಿ ಒದ್ದು ಒಳಗೆ ಹಾಕಿಬೇಕಿತ್ತು ಅಂತ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಜೊತೆಗೆ ಅನುಚಿತವಾಗಿ ವರ್ತಿಸುವವರಿಗೆ ಪಾಠ ಕಲಿಸಿದಾಗ ಮಾತ್ರ ಸಮಾಜದಲ್ಲಿ ಇಂತಹವರಿಗೆ ಕಡಿವಾಣ ಹಾಕಬಹುದು ಅಂತಾರೆ ಪ್ರಜ್ಞಾವಂತ ಜನತೆ.

ಸೀಜ್ ಮಾಡಿದ ಮರುದಿನವೇ ಅಂದರೆ ಶನಿವಾರದಂದು ಬೈಕ್ ಬಿಡುಗಡೆಯಾಗಿದೆ. ಎಂತಹ ವಿಪರ್ಯಾಸ ನೋಡಿ.

ಭಾನುವಾರ ಗದಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ; ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಭಾನುವಾರವೂ ಸಾವಿನ ಸರಣಿ ಮುಂದುವರೆದಿದೆ. ಇವತ್ತು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಐವರು ಮೃತಪಟ್ಟಿದ್ದಾರೆ. ಇವತ್ತು 289 ಜನರಿಗೆ ಸೋಂಕು ತಗುಲಿದೆ.

ಇಂದಿನ 289 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23326 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -115, ಮುಂಡರಗಿ-33, ನರಗುಂದ-23, ರೋಣ-47, ಶಿರಹಟ್ಟಿ-68, ಹೊರಜಿಲ್ಲೆಯ-03 ಸೇರಿದಂತೆ 289 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 246 ಕ್ಕೇರಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬುಗವಾಡ ನಿವಾಸಿ 79 ವರ್ಷದ ವ್ಯಕ್ತಿ ಮೇ-24 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 27 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಬೆಟಗೇರಿ ನಿವಾಸಿ 65 ವರ್ಷದ ಮಹಿಳೆ ಮೆ,16 ರಂದು ಖಾಸಗಿ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 27 ರಂದು ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ನಿವಾಸಿ 41 ವರ್ಷದ ಮಹಿಳೆ ಮೇ 21 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 26 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಬಿಂಕದಕಟ್ಟಿ ನಿವಾಸಿ 65 ವರ್ಷದ ಮಹಿಳೆ ಮೇ 25 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 27 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಕುರುವಿನಕೊಪ್ಪ ‌ ನಿವಾಸಿ 79 ವರ್ಷದ ವ್ಯಕ್ತಿ ಮೇ 26 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 28 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 391 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 20389 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2691 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 185 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ನನ್ನ ಸಾವು ಬಯಸುವವರಿಗೆ ನನ್ನ ಆಯುಷ್ಯ, ಸರ್ವಸ್ವ ಸಿಗಲಿ: ಅನಿಲ ಮೆಣಸಿನಕಾಯಿ

ವಿಜಯಸಾಕ್ಷಿ ಸುದ್ದಿ, ಗದಗ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಟೀಕೆಗಳಿಗೆ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ತಾಳ್ಮೆಯಿಂದಲೆ ತಿರುಗೇಟು ನೀಡಿದ್ದಾರೆ. ಈ ಕುರಿತು ಗದಗ ಜನತೆಗೆ ಬಹಿರಂಗ ಪತ್ರ ಬರೆದಿದ್ದು, ಪತ್ರದ ಪೂರ್ಣ ವಿವರ ಇಲ್ಲಿದೆ.

ಆತ್ಮೀಯ ಬಂಧು ಬಾಂಧವರೆ, ನನ್ನ ಅನಾರೋಗ್ಯದ ಕಾರಣವನ್ನು ಮುಂದಿಟ್ಟು, ಸ್ವಹಿತಾಸಕ್ತಿ ಮತ್ತು ಲಾಭಕ್ಕಾಗಿ ಈ ಸಮಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮನಸ್ಥಿತಿಗಳು ಬೇರೂರುತ್ತಿವೆ. ನನ್ನ ಸಾವನ್ನು ಬಯಸುತ್ತಿರುವ ಅಂತವರಿಗೆ ನನ್ನ ಆಯಸ್ಸು ಮತ್ತು ಸರ್ವಸ್ವವನ್ನೂ ನೀಡಲಿ ಎಂದು ಪುಟ್ಟರಾಜಕವಿ ಗವಾಯಿಗಳು ಹಾಗೂ ತೋಂಟದಾರ್ಯ ಶ್ರೀಗಳಿಗೆ ನಮಸ್ಕರಿಸಿ ಬೇಡಿಕೊಳ್ಳುತ್ತೇನೆ. ಸಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಆಧಾರ ರಹಿತ ಮಾಹಿತಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕೊರೊನಾ ಸೋಂಕಿಗೆ ಒಳಗಾಗಿರುವ ಚಿಕಿತ್ಸೆ ಪಡೆಯುತ್ತಿದ್ದೇನೆ.

ರಾಜಕೀಯ ಹೊರತಾಗಿಯೂ ನನ್ನನ್ನು ನೀವು ಸ್ವೀಕರಿಸುತ್ತಿರಿ. ಮೊದಲ ಕೊರೊನಾ ಅಲೆಯಲ್ಲಿ ‘ಮನು ಕುಲಕ್ಕಾಗಿ ಭಿಕ್ಷೆ’ ಹೊರಟ ಸಂದರ್ಭದಲ್ಲಿ ಮನುಕುಲದ ಆಸರೆಯಾಗಿ ಸಾವಿರಾರು ಜನರು, ರೈತರು ಬೆಂಬಲ ನೀಡಿದ್ದು, ಅಚ್ಚಳಿಯದೆ ಉಳಿದಿದೆ. ನಿಮ್ಮ ಬೆಂಬಲದಿಂದ ಬಡ, ನಿರ್ಗತಿಕರಿಗೆ ಕಳೆದ ಬಾರಿ 15000 ಕಿಟ್ ವಿತರಣೆ ಮಾಡಿದ್ದೇವೆ. ಎರಡನೇ ಕೊರೊನಾ ಅಲೆಯಲ್ಲಿ ಎರೆಡು ಬಾರಿ ಕೊರೊನಾ ಸೋಂಕಿಗೆ ಒಳಪಟ್ಟು ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಯಿಂದ ಸುದಾರಿಸಿಕೊಳ್ಳುತ್ತಿದ್ದೆನೆ.

ಸಂಕಷ್ಟದ ಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಿರಿ. ಗುಣಮುಖನಾಗಿ ಬಂದು ನಿಮ್ನ ಸೇವೆಗೆ ಅಣಿಯಾಗುವ ಹಂಬಲ ಇನ್ನೂ ಕೈಬಿಟ್ಟಿಲ್ಲ. ದ್ವೇಷಿಗಳನ್ನು ಹಿತೈಷಿಗಳೆಂದು ನಂಬಿ ಬದುಕುವ ಹಂಬಲ ನನ್ನದು.

ಇಂತಿ ನಿಮ್ಮ

  • ಅನಿಲ ಮೆಣಸಿನಕಾಯಿ

ವೃದ್ಧರು, ಬುದ್ಧಿಮಾಂಧ್ಯರೇ ತುಂಬಿಕೊಂಡಿರುವ ಈ ಆಶ್ರಮದ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಜಿಲ್ಲೆಯಲ್ಲಿನ ಒಂದೇ ಆಶ್ರಮದ 210 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಾಗುತ್ತಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಪಂ ವ್ಯಾಪ್ತಿಯ ಗಂಡಿಬಾಗಿಲು ಪ್ರದೇಶದಲ್ಲಿರುವ ಸಿಯೋನ್ ಎಂಬ ಅನಾಥಾಶ್ರಮದಲ್ಲಿನ ಬರೋಬ್ಬರಿ 210 ಜನರಿಗೆ ಸೋಂಕು ಆವರಿಸಿದೆ.

ಈ ಆಶ್ರಮದಲ್ಲಿ 270 ಜನರಿದ್ದಾರೆ. ಆದರೆ, ಈ ಪೈಕಿ ಈಗಾಗಲೇ 210 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಆಶ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಾಮೂಹಿಕ ಪರೀಕ್ಷೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಶ್ರಮದಲ್ಲಿನ ಬಹುತೇಕರು ಸೋಂಕಿಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.

ಕೆಲವು ದಿನಗಳ ಹಿಂದೆ ಈ ಆಶ್ರಮದ ಕೆಲವು ವ್ಯಕ್ತಿಗಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಆರೋಗ್ಯ ಅಧಿಕಾರಿಗಳು ಆಶ್ರಮದಲ್ಲಿನ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದರು. ಆದರೆ, ಬಹುತೇಕರಲ್ಲಿ ಸೋಂಕು ಇರುವುದು ಖಚಿತವಾಗಿದೆ.

ಈ ಆಶ್ರಮದಲ್ಲಿ ವೃದ್ಧರು ಮತ್ತು ಮನೋರೋಗಿಗಳೇ ಇದ್ದಾರೆ. ಸದ್ಯ ಅವರಿಗೆಲ್ಲ ಸೋಂಕು ಆವರಿಸಿದೆ. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಅವರು ಇವರನ್ನೆಲ್ಲ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಮುಂದಾಗಿದ್ದಾರೆ. ಹೀಗಾಗಿ 10ಕ್ಕೂ ಹೆಚ್ಚು ಆಂಬುಲೆನ್ಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಸೋಂಕಿತರು ಸದ್ಯ ಧರ್ಮಸ್ಥಳದ ರಜತಾದ್ರಿ ವಸತಿ ಗೃಹಕ್ಕೆ ಸ್ಥಳಾಂತರವಾಗಲಿದ್ದಾರೆ.

ಮಕ್ಕಳನ್ನೂ ಬಿಡದ ಬ್ಲ್ಯಾಕ್ ಫಂಗಸ್…ಈ ಹೆಮ್ಮಾರಿಯಿಂದ ಕಣ್ಣು ಕಳೆದುಕೊಂಡ ಬಾಲಕ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಎರಡನೇ ಅಲೆಯಲ್ಲಿ ಮಕ್ಕಳಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ದೇಶದಲ್ಲಿ ಹೊಕ್ಕಿರುವ ಬ್ಲ್ಯಾಕ್ ಫಂಗಸ್ ಕೂಡ ಮಕ್ಕಳಲ್ಲಿ ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ನಗರದಲ್ಲಿ ಇಬ್ಬರು ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. 14 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಚಿತ್ರದುರ್ಗದ 11 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 14 ವರ್ಷದ ಬಾಲಕ ಬಳ್ಳಾರಿಯವನಾಗಿದ್ದು, ಆತ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರ ಮೆದುಳಿಗೆ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಮಾಡಿದೆ.

ಚಿತ್ರದುರ್ಗದ ಬಾಲಕ ಬ್ಲ್ಯಾಕ್ ಫಂಗಸ್ ನಿಂದಾಗಿ ಕಣ್ಣು ಕಳೆದುಕೊಂಡಿದ್ದಾನೆ. ಇದರಿಂದಾಗಿ ರಾಜ್ಯದಲ್ಲಿ ಆತಂಕ ಮನೆ ಮಾಡಿದೆ.

ಸೋಂಕಿತನ ಮೃತದೇಹವನ್ನು ನದಿಯಲ್ಲಿ ಎಸೆದ ಸಂಬಂಧಿಕರು!

ವಿಜಯಸಾಕ್ಷಿ ಸುದ್ದಿ, ಲಕ್ನೋ

ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆಯ ಸದ್ದು ಜೋರಾಗಿದೆ. ಸಾವು- ನೋವುಗಳು ಹೆಚ್ಚಾಗಿಯೇ ಕಂಡು ಬರುತ್ತಿದೆ. ಈ ಸಂದರಭದಲ್ಲಿ ಮಾನವೀಯತೆ ಕೂಡ ಮರೆಯಾಗುತ್ತಿದೆ. ಹಲವೆಡೆ ಸೋಂಕಿತರ ಮೃತ ದೇಹದ ಬಗ್ಗೆ ಭಯ, ಆತಂಕ ಇನ್ನೂ ದೂರವಾಗುತ್ತಿಲ್ಲ. ಸೋಂಕಿತನ ಮೃತದೇಹವನ್ನು ಸಂಬಂಧಿಕರು ನದಿಗೆ ಎಸೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಬಲರಾಮಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನದಿಗೆ ಎಸೆದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಒಂದು ವಾರದಿ ಹಿಂದೆಯೇ ಈ ಘಟನೆ ನಡೆದಿದೆ. ಪೊಲೀಸರು ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.

ಅಲ್ಲಿಯ ಮುಖ್ಯ ಆರೋಗ್ಯ ಅಧಿಕಾರಿ ಡಾ. ವಿಜಯ್ ಬಹದ್ದೂರ್ ಸಿಂಗ್ ಅವರ ಹೇಳಿಕೆಯಂತೆ, ವಿಡಿಯೋ ವೈರಲ್ ಆದ ನಂತರ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಸಿದ್ಧಾರ್ಥ್ ನಗರದ ನಿವಾಸಿ ಪ್ರೇಮನಾಥ್ ಮಿಶ್ರಾ ಎಂಬುವವರ ಮೃತ ಇದು ಎಂದು ತಿಳಿದು ಬಂದಿದೆ.

ಮಿಶ್ರಾ ಅವರು ಕೊರೊನಾದಿಂದಾಗಿ ಮೇ. 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ. 28ರಂದು ಸಾವನ್ನಪ್ಪಿದ್ದರು. ಕೊರೊನಾ ಮಾರ್ಗಸೂಚಿಗಳಂತೆಯೇ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು.

ಕೊರೊನಾ ಸೋಂಕಿತನ ಮೃತದೇಹದ ಜೊತೆಗೆ ಇಬ್ಬರು ಇದ್ದಾರೆ. ಪಿಪಿಇ ಕಿಟ್ ಧರಿಸಿರುವ ಈ ವ್ಯಕ್ತಿಗಳಲ್ಲಿನ ಒಬ್ಬರು ಮೃತ ದೇಹವನ್ನು ನದಿಗೆ ಎಸೆದಿದ್ದಾರೆ. ಈ ವಿಡಿಯೋವನ್ನು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.

error: Content is protected !!