Home Blog Page 3072

ಬಾರ್ ಬಂದ್ ಮಾಡದಂತೆ ಗ್ರಾ.ಪಂ ಸದಸ್ಯನ ಪ್ರೊಟೆಸ್ಟ್

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಬಾರ್ ಬಂದ್ ಮಾಡದಂತೆ ಬಿಜೆಪಿ ಮುಖಂಡ, ಗ್ರಾಪಂ ಸದಸ್ಯ ಕುಡುಕರೊಂದಿಗೆ ಸೇರಿ ಬಾರ್ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.

ಸಂಬರಗಿ ಗ್ರಾಮದಲ್ಲಿರುವ ಬಾರ್ ಬಂದ್ ಮಾಡುವಂತೆ ರೈತ ಸಂಘಟನೆ ಹಾಗೂ ಸ್ಥಳೀಯರು ಸೇರಿ ಪ್ರತಿಭಟನೆ ನಡೆಸಿದ್ದರು‌.
ಈ ವೇಳೆ ಸಂಬರಗಿ ಗ್ರಾಮ ಪಂಚಾಯತ ಸದಸ್ಯ ಅಶೋಕ‌ ಭಾನುದಾಸೆ ಮಾನೆ, ಕೆಲ ಮದ್ಯ ಪ್ರಿಯರೊಂದಿಗೆ ಸ್ಥಳಕ್ಕೆ ಧಾವಿಸಿ ನಮಗೆ ಸಾರಾಯಿ ಬೇಕು, ಬಾರ್ ಬಂದ್ ಮಾಡದಂತೆ ಪ್ರತಿಭಟನೆ ನಡೆಸಿದರು.

ಮಡಿಕೇರಿಯಲ್ಲಿ ಲಕ್ಷ್ಮೇಶ್ವರದ ಯುವಕರಿಬ್ಬರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮಡಿಕೇರಿ ತಾಲೂಕಿನ ಚೇರಂಬಾಣೆ ಬಳಿಯ ಪಾಕ ಗ್ರಾಮದಲ್ಲಿ ರಸ್ತೆ ಕೆಲಸ ಮಾಡುತ್ತಿದ್ದಾಗ
ಮಣ್ಣಿನ ಗುಡ್ಡ ಕುಸಿದು ಲಕ್ಷ್ಮೇಶ್ವರ ಪಟ್ಟಣದ
ಯುವಕರಿಬ್ಬರು ಮೃತಪಟ್ಟಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದ ಇಂದಿರಾನಗರ ನಿವಾಸಿಗಳಾದ ಸಂತೋಷ ಬಂಡಾರಿ (27)
ಹಾಗೂ ಪ್ರವೀಣ್ ಮಾವಿನಕಾಯಿ (21) ಮೃತರು. ರಸ್ತೆ ಕೆಲಸಕ್ಕೆ ಮಡಿಕೇರಿಗೆ ತೆರಳಿದ್ದರು.

ಮಡಿಕೇರಿ ತಾಲೂಕಿನ ಚೆರಂಬಾಣೆಯ ಸಿದ್ಧಾರೂಡ ಮಠದ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಿಕ್ಸರ್ ಲಾರಿ ಮೂಲಕ ಕಾಂಕ್ರಿಟ್ ಸುರಿಯುತ್ತಿರುವ ವೇಳೆ 20 ಅಡಿ ಎತ್ತರದಿಂದ ಲಾರಿ ಸಮೇತ ಗುಡ್ಡದ ಮಣ್ಣು ಕುಸಿದು ಈ ದುರ್ಘಟನೆ ಸಂಭವಿಸಿದೆ.
ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಏಳು ಜನ ಮಣ್ಣಿನಡಿ ಸಿಲುಕಿದ್ದಾರೆ. ಅದರಲ್ಲಿ 5 ಜನರನ್ನು ರಕ್ಷಿಸಲಾಗಿದೆ. ಸತತ ಮಳೆ ಆಗುತ್ತಿರುವದರಿಂದ ಮಣ್ಣು ಕುಸಿದಿದೆ ಎನ್ನಲಾಗಿದೆ.

ಮೃತ ಸಂತೋಷ ಹಾಗೂ ಪ್ರವೀಣ ಪಾಲಕರಿಗೆ ಒಬ್ಬೊಬ್ಬರೇ ಪುತ್ರರಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ‌.

ಬೆಳ್ಳಂಬೆಳಿಗ್ಗೆ ಯುವಕನ ಬರ್ಬರ ಕೊಲೆ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಬೆಳ್ಳಂಬಳಿಗ್ಗೆಯೇ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ಪಟ್ಟಣದಲ್ಲಿ ನಡೆದಿದೆ. ಮಂಜು ಶಂಕರ್ ಮುರಕಿಭಾವಿ (22) ಕೊಲೆಯಾದ ಯುವಕ.

ತಡರಾತ್ರಿ ಯುವಕನ ಹತ್ಯೆಗೈದು
ದುಷ್ಕರ್ಮಿಗಳು ಪರಾರಿಯಾಗಿದ್ದು, ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಶಂಕರ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆಯಿಂದ ಚಿತ್ರಮಂದಿರ, ಪದವಿ ಕಾಲೇಜ್ ಓಪನ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದಲ್ಲಿ ಅನ್ ಲಾಕ್ 4.0 ಜಾರಿಗೊಳ್ಳಲಿದೆ. ಹೀಗಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ತೆರೆಯಲು ಅನುಮತಿಗೆ ನಿರ್ಧರಿಸಲಾಗಿದೆ. ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ನಾಳೆಯಿಂದ ಪದವಿ ಕಾಲೇಜುಗಳ ತರಗತಿಗಳೂ ಸಹ ಆರಂಭವಾಗಲಿದ್ದು, ಮೊದಲ ಡೋಸ್ ಲಸಿಕೆ ಪಡೆದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬಹುದು.

ನಾಗರಹೊಳೆ ಅಭಯಾರಣ್ಯದಲ್ಲಿ ಬ್ಲಾಕ್ ಪ್ಯಾಂಥರ್ ಪ್ರತ್ಯಕ್ಷ

ವಿಜಯಸಾಕ್ಷಿ ಸುದ್ದಿ, ಮೈಸೂರು

ನಾಗರಹೊಳೆ ಅಭಯಾರಣ್ಯದಲ್ಲಿ ಬ್ಲಾಕ್ ಪ್ಯಾಂಥರ್ ಕಾಣಿಸಿಕೊಂಡಿದೆ. ನಿನ್ನೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಈ ಕರಿ ಚಿರತೆ ಕಾಣಿಸಿಕೊಂಡಿದ್ದು, ಇದನ್ನು ಕಂಡು ಸಫಾರಿಗೆ ತೆರಳಿದ್ದವರು ಫುಲ್ ಖುಷಿಯಾಗಿ ಅದರ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಪ್ರವಾಸಿಗರನ್ನು ನೋಡುತ್ತಲೇ ಚಿರತೆ ಮರದ ಕೊಂಬೆಯ ಮೇಲೇರಿ ಕುಳಿತುಕೊಂಡಿದೆ.
ದಟ್ಟವಾದ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡುಬರುವ ಇದು ಮನುಷ್ಯರ ಸಂಪರ್ಕಕ್ಕೆ ಬರುವುದು ಬಲು ವಿರಳ. ಇದು ಹೆಚ್ಚಾಗಿ ಕಿನ್ಯಾ, ಭಾರತ, ಶ್ರೀಲಂಕಾ, ನೇಪಾಳ, ಮಲೇಷಿಯಾ, ಜಾವಾ ಅರಣ್ಯಪ್ರದೇಶದಲ್ಲಿ ಕಂಡುಬರುತ್ತದೆ.

ಲಾಕ್ಡೌನ್ ಬಳಿಕ ಸಫಾರಿ ತೆರಳಿದವರಿಗೆ ಸಾಲು ಸಾಲು ಪ್ರಾಣಿಗಳ ದರ್ಶನವಾಗುತ್ತಿವೆ.

ಡಿ ಕೆ ಶಿವಕುಮಾರ್ ನಡೆಗೆ ಅಬ್ದುಲ್ ರಜಾಕ್ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮ್ಮ ಸದಾಶಿವನಗರದ ಮನೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಭೆಗೆ ಜಮೀರ್ ಅಹಮದ್ ಖಾನ್ ಅವರಿಗೆ ಆಹ್ವಾನಿಸಿಲ್ಲ. ಈ ನಡೆ ಬಹಳ ನೋವು ತಂದಿದೆ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಬೆಂಗಳೂರಿಗೆ ಒಳಪಟ್ಟ ಎಲ್ಲಾ ಶಾಸಕರನ್ನು ಆಹ್ವಾನಿಸಿ ಅಲ್ಪಸಂಖ್ಯಾತ ಒಬ್ಬ ಶಾಸಕರನ್ನ ಆಹ್ವಾನಿಸಿಲ್ಲ.

ಇದರ ವಿರುದ್ಧವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಡಿ ಕೆ ಶಿವಕುಮಾರರ ಈ ನಡೆಯನ್ನು ಖಂಡಿಸುತ್ತದೆ.

ನಮಗೆ ಭಾರತ ದೇಶ ಮೊದಲು ಮುಖ್ಯ, ಸಮುದಾಯ ಮುಖ್ಯ ನಂತರ ಪಕ್ಷ ಎಂದು ಮಹಾಮಂಡಳ ರಾಜ್ಯಾಧ್ಯಕ್ಷ ಅಬ್ದುಲ್ ರಜಾಕ್ ಅಸಮಾಧಾನ ವ್ಯಕ್ತಪಡಿಸಿದರು.

ಕಪ್ಪತಗುಡ್ಡದಲ್ಲಿ ವಾಹನಗಳ ನಿಷೇಧ; ಪ್ರವಾಸಿಗರಿಗೆ ನಿರಾಶೆ!

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಗದಗ ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಸಿಗರಿಗೆ ಕಪ್ಪತಗುಡ್ಡ ರಮಣೀಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಬೆಳ್ಲಂಬೆಳಿಗ್ಗೆ ಕಪ್ಪತಗುಡ್ಡ ನೋಡುವುದಕ್ಕೆ ಎರಡು ಕಣ್ಣು ಸಾಲದು. ಅಷ್ಟೊಂದು ಸುಂದರವಾಗಿ ಕಾಣುತ್ತಿದೆ. ಶುದ್ಧ ಗಾಳಿ ಸವಿಯಲು, ಚಲಿಸುವ ಮೋಡಗಳು ಕಣ್ಣು ಮುಂದೆ ಹೋಗುವ ದೃಶ್ಯಗಳನ್ನುಂತೂ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಗದಗ ಜಿಲ್ಲೆಯ ಜನರಷ್ಟೇ ಅಲ್ಲ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನ ಹರಿದು ಬರುತ್ತದೆ. ವೀಕೆಂಡ್ ದಿನವನ್ನು ಕಳೆಯಲು ಮಕ್ಕಳ ಸಮೇತ ಆಗಮಿಸುತ್ತಾರೆ.

ಆದರೆ ಇವತ್ತು ಪ್ರವಾಸಿಗರಿಗೆ ನಿರಾಶೆ ಕಾದಿದೆ. ಯಾಕೆಂದರೆ ಕಪ್ಪತಗುಡ್ಡಕ್ಕೆ ಬೇಕಾಬಿಟ್ಟಿ ವಾಹನಗಳ ತಡೆಗೆ ಅರಣ್ಯ ಇಲಾಖೆ ಚೆಕ್ ಪೋಸ್ಟ್ ‌ನಿರ್ಮಿಸಿದೆ. ಅದೂ ಐದು ಕಿಲೋಮೀಟರ್ ದೂರದಲ್ಲಿ. ಐದು ಕಿಲೋಮೀಟರ್ ದೂರದಲ್ಲಿ ವಾಹನ ನಿಲ್ಲಿಸಿ, ಕಪ್ಪತಗುಡ್ಡದ ಮೇಲೆ ಹತ್ತಲು ಕಾಲ್ನಡಿಗೆಯಲ್ಲಿ ಹೋಗಬೇಕು. ಇದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲಲ್ಲಿ ಈ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪ್ರವಾಸಿಗರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಕಳೆದ ಎರಡು ತಿಂಗಳನಿಂದ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಹಾಗೆ ಬಂದವರು ಕಪ್ಪತಗುಡ್ಡದಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ವಸ್ತುಗಳ ಬೀಸಾಕುವುದು, ಗಲೀಜು ಮಾಡುವುದು ನಡೆದಿತ್ತು. ಇದರಿಂದಾಗಿ ಪರಿಸರಕ್ಕೆ ಹಾನಿಯಾಗುವ ಸಂಭವ ಇತ್ತು. ಇದನ್ನು ತಡೆಯಲು ಅರಣ್ಯ ಇಲಾಖೆ ನಿನ್ನೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಯಾವುದೇ ವಾಹನಗಳು ಗುಡ್ಡದ ಮೇಲೆ ಹೋಗದಂತೆ, ಪ್ಲಾಸ್ಟಿಕ್, ಇನ್ನಿತರ ವಸ್ತುಗಳನ್ನು ತಗೆದುಕೊಂಡು ಹೋಗದಂತೆ ತಪಾಸಣೆ ಮಾಡಿ ಬಿಡಲಾಗುತ್ತಿದೆ.

ವೀಕೆಂಡ್ ಮೋಜು- ಮಸ್ತಿ ಮಾಡುವ ಕೆಲವರಿಗೆ ಇದರಿಂದ ನಿರಾಶೆಯಾದಂತಾಗಿದೆ. ಈ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಅನಾವಶ್ಯಕ ಜನದಟ್ಟಣೆ ತಡೆಯಲು, ಕಪ್ಪತಗುಡ್ಡ ನೋಡಲು ಬರುವ ಕೆಲವರು, ಮುಜಗುರ ತರುವ ಸನ್ನಿವೇಶ, ಮೋಜು-ಮಸ್ತಿ ಮಾಡುತ್ತಿದ್ದರು. ಹೀಗಾಗಿಯೇ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದರು.

ದೆಹಲಿಗೆ ಸಿಎಂ ಆರು ಬ್ಯಾಗ್ ಹೊತ್ತೊಯ್ದಿದ್ದೇಕೆ: ಎಚ್ಡಿಕೆ ಪ್ರಶ್ನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಿಎಂ ಯಡಿಯೂರಪ್ಪ ಬ್ಯಾಗ್ ಗಳ ಸಮೇತ ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿನ್ನೆ ಸಿಎಂ ಯಡಿಯೂರಪ್ಪ ತಮ್ಮ ಇಬ್ಬರು ಪುತ್ರರು ಹಾಗೂ ಕೆಲ ಅಧಿಕಾರಿಗಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಫ್ಲೈಟ್ ನಲ್ಲಿ 6 ದೊಡ್ಡ ದೊಡ್ಡ ಬ್ಯಾಗ್ ಗಳನ್ನು ಹೊತ್ತೊಯ್ದಿದ್ದಾರೆ ಎಂಬ ಮಾಹಿತಿ ಬಂದಿದೆ. ಆ ಬ್ಯಾಗ್ ಗಳಲ್ಲಿ ರಾಜ್ಯದ ಸಮಸ್ಯೆಗಳ ಕುರಿತಾದ ಫೈಲ್ ಗಳಿವೆಯೇ ಅಥವಾ ಬೇರೆ ಏನಿದೆ ಎಂಬುದು ಗೊತ್ತಾಗಿಲ್ಲ. ಹೈಕಮಾಂಡ್ ಗೆ ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ? ಅಥವಾ ಬೇರೆ ಏನು ಕೊಡಲು ತೆಗೆದುಕೊಂಡು ಹೋಗಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ನಿನ್ನೆ ದೆಹಲಿಯಲ್ಲಿ ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಅವರೊಬ್ಬರೇ ಭೇಟಿ ಮಾಡಿದ್ದಾರಾ ಅಥವಾ 6 ಬ್ಯಾಗ್ ಗಳೊಂದಿಗೆ ಭೇಟಿ ಮಾಡಿದ್ದಾರಾ? ಈ ಬಗ್ಗೆ ಸಿಎಂ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ಏರ್‌ಪೋರ್ಟ್ ಗೆ ಬಂದ ಸಿಎಂಗೆ ಬುಲಾವ್ ನೀಡಿದ ಅಮಿತ್ ಷಾ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿನತ್ತ ಹಿಂದಿರುಗಲು ಏರ್‌ಪೋರ್ಟ್ ನತ್ತ
ಪ್ರಯಾಣಿಸುತ್ತಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಗೃಹ ಸಚಿವ ಅಮಿತ್ ಷಾ ದಿಢೀರ್ ಬುಲಾವ್ ನೀಡಿದ್ದಾರೆ.

ನಿನ್ನೆ ಸಂಜೆ ಪ್ರಧಾನಿ ಮೋದಿ ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ, ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭೇಟಿಯಾಗಿ ಬಳಿಕ ಅಮಿತ್ ಷಾ ಭೇಟಿಗೆ ನಿರ್ಧರಿಸಿದ್ದರು. ಆದರೆ ಕಾಲಾವಕಾಶ ಸಾಧ್ಯವಾಗದೇ ಬೆಂಗಳೂರಿಗೆ ಹಿಂದಿರುಗಲು ಏರ್ಪೋರ್ಟ್ ಗೆ ಬಂದಿದ್ದರು. ಅಷ್ಟರಲ್ಲಿ ಮತ್ತೆ ಅಮಿತ್ ಷಾ ಸಿಎಂ ಯಡಿಯೂರಪ್ಪನವರಿಗೆ ಕರೆ ಮಾಡಿ ಬುಲಾವ್ ನೀಡಿದ್ದಾರೆ.

ಏರ್‌ಪೋರ್ಟ್ ನಿಂದ ವಾಪಸ್ ಅಮಿತ್ ಷಾ ನಿವಾಸಕ್ಕೆ ತೆರಳಿರುವ ಯಡಿಯೂರಪ್ಪ ಷಾ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದು ಜೈಕಾರ ಘೋಷಣೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

  • ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ

ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ನಡೆದಿರುವ ಮುಸುಕಿನ ಗುದ್ದಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುವಂತೆ ಕಾಣುತ್ತಿಲ್ಲ. ಈ ವಿಚಾರ ಪ್ರಸ್ತಾಪಿಸದಂತೆ ದೆಹಲಿ ವರಷ್ಠರು ಕಠಿಣ ಎಚ್ಚರಿಕೆ ನೀಡಿದ್ದರೂ ಒಳಗೊಳಗೆ ಕಾರ್ಯತಂತ್ರಗಳು ನಡೆಯುತ್ತಿವೆ.

ಇದಕ್ಕೆ ಇಂಬು ನೀಡುವಂತೆ ಶುಕ್ರವಾರ ಕಲಬುರಗಿ ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ದಾರೆ. ಜೊತೆಗೆ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಂದು ಜೈಕಾರ ಕೂಗಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಅವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಜೈ ಎಂದು ಜೈಕಾರ ಹಾಕಿದ್ದಾರೆ.

error: Content is protected !!