Home Blog Page 3078

ಸಚಿವ ಸ್ಥಾನದ ಕುರಿತು ಮಹೇಶ್ ಕುಮಠಳ್ಳಿ ಹೊಸ ಬಾಂಬ್

0

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ: ಸಚಿವ ಸ್ಥಾನದ ವಿಸ್ತರಣೆ ಅಥವಾ ಪುನರ್ ರಚನೆಯ ಗೊಂದಲದ ನಡುವೆಯೇ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಎಮ್ ಟಿ ಬಿ ನಾಗರಾಜ್, ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಆದರೆ ನನಗೆ ಕೊಳಗೇರಿ ನಿಗಮ ಮಂಡಳಿ ಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಕೊಡಬಹುದು ಎಂದು ಇನ್ನೂ ಕೂಡಾ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರಿದ ಹಿನ್ನೆಲೆಯಲ್ಲಿ ಮಹೇಶ್ ಕುಮಠಳ್ಳಿ ಅವರಿಗೆ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ನಾವು ಬಿಜೆಪಿಗೆ ಬರುವಾಗ ಹದಿನೇಳು ಜನರ ಟೀಮ್ ಇತ್ತು ಈಗ ಎಲ್ಲ ಬಿಜೆಪಿ ಟೀಮ್. ಹನ್ನೊಂದು ಜನರಿಗೆ ಸಚಿವ ಸ್ಥಾನ ಕೊಟ್ಟಾಗ, ನನ್ನನ್ನು ಸಚಿವನಾಗಿಸುವ ಭರವಸೆ ಕೊಟ್ಟಿದ್ದರು ಆದರೆ ಯಾವ ತೊಂದರೆ ಇದೆಯೋ ಗೊತ್ತಿಲ್ಲ. ನಾನು ಕೂಡ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದ್ದೇನೆ ಎಂದರು.

ಪಕ್ಷದ ವರಿಷ್ಠರೂ ಕೂಡ ಭರವಸೆ ಕೊಟ್ಟಿದ್ದಾರೆ.
ಜವಾಬ್ದಾರಿ ಇರುವ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಬಹುತೇಕ ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದರು.

ಸಿದ್ಧರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ:ಸಚಿವ ಸೋಮಣ್ಣ ಟಾಂಗ್

0

ವಿಜಯಸಾಕ್ಷಿ ಸುದ್ದಿ, ಗದಗ: ಮಾಜಿ ಸಿಎಂ ಸಿದ್ಧರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಟಾಂಗ್ ನೀಡಿದ್ದಾರೆ. ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತಾನಾಡಿದರು.

ಸಿಎಂ ಬದಲಾವಣೆಯಾಗುತ್ತಾರೆ ಎನ್ನುವ ಸಿದ್ಧರಾಮಯ್ಯ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಎಲ್ಲರಿಗೂ ರಾತ್ರಿ ಕನಸು ಬೀಳುತ್ತೆ, ಆದರೆ ಸಿದ್ದರಾಮಯ್ಯಗೆ ಹಗಲು ಕನಸು ಬೀಳುತ್ತೆ. ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಶಾಸಕ ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ನಮ್ಮ ಪಕ್ಷದ ಹಿರಿಯ ಶಾಸಕರು ಮಾಜಿ ಕೇಂದ್ರ ಮಂತ್ರಿಯಾಗಿದ್ದವರು. ಹೈಕಮಾಂಡ್ ಈ ಕುರಿತು ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಒಂದು ಕೊನೆ ಅಂತ ಇದ್ದೇ ಇರುತ್ತೆ. ಈ ಸಮಾಜದಿಂದ ಬಂದ ಸಿಎಂ ಗಳು ಎಲ್ಲ ವರ್ಗದ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವ್ರು ಮಾಡ್ತಾಯಿದ್ದಾರೆ. ಯತ್ನಾಳ ಬುದ್ದಿವಂತ ಇದ್ದಾರೆ ನಾಳೆ ವಿಜಯಪುರ ಕ್ಕೆ ಹೋಗ್ತಾಯಿದ್ದೀನಿ ಮಾತಾಡ್ತೀನಿ ಎಂದರು.

ಎಲ್ಲವನ್ನೂ ಹೈಕಮಾಂಡ ನೋಡ್ತಾಯಿದೆ. ಸಾವಿರ ಬಾರಿ ಸುಳ್ಳು ಹೇಳಿದ್ರೇ ಸುಳ್ಳೇ ಒಂದು ಬಾರಿ ಹೇಳಿದರೂ ಸುಳ್ಳೇ. ಲಿಂಗಾಯತ ಸಮಾಜದ ಸಿಎಂ ಬದಲಾವಣೆ ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ವಾರಸುದಾರರಿಲ್ಲದ ಮನೆಯಾಗಿದೆ: ಕಾರಜೋಳ ವಾರ್

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ವಾರಸುದಾರರಿಲ್ಲದ ಮನೆಯಂತಾಗಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ನಗರದಲ್ಲಿ ಆಯೋಜಿಸಿರುವ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅವಸಾನದ ಅಂಚಿಗೆ ತಲುಪಿದೆ. ಕಾಂಗ್ರೆಸ್ ವಾರಸುದಾರರಿಲ್ಲದ ಮನೆಯಂತಾಗಿದೆ. ಕಾಂಗ್ರೆಸ್ ಲೀಡರ್ ಲೆಸ್ ಪಾರ್ಟಿಯಾಗಿದೆ. ಎಂದರು.

ಮುಖ್ಯಮಂತ್ರಿ ಗಾದಿಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ದಿನಾಲೂ ಕನಸು ಕಾಣುತ್ತಿದ್ದಾರೆ. ದೇಶದಲ್ಲಿ ರಾಹುಲ್ ಗಾಂಧಿ ನೂರಕ್ಕೆ ನೂರು ಪ್ರಧಾನ ಮಂತ್ರಿ ಆಗಲ್ಲ. ರಾಜ್ಯದಲ್ಲಿಯೂ ಇನ್ನು ಕಾಂಗ್ರೆಸ್ ನಿಂದ ಯಾರೇ ಆಗಲಿ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಶಾಸಕ ಮನಗೂಳಿ ಏರ್ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲು

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಅನಾರೋಗ್ಯದಿಂದ ಬಳಲುತ್ತಿದ್ದ ಸಿಂದಗಿ ಶಾಸಕ ಎಂ ಸಿ ಮನಗೂಳಿ ಇವರನ್ನು ಎರಡು ದಿನಗಳ ಹಿಂದೆ ಕಲಬುರಗಿಯಿಂದ ಏರ್ಲಿಫ್ಟ್ ಮೂಲಕ ಶಾಸಕರನ್ನು ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಫ ಕಟ್ಟಿದ ಹಿನ್ನೆಲೆಯಲ್ಲಿ ಶಾಸಕ ಮನಗೂಳಿ ತೀವ್ರ ಅಸ್ವಸ್ಥರಾಗಿದ್ದರು.

ಸದ್ಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

ವರದಿ:ಡಾ. ಅಬ್ದುಲ್ ರಜಾಕ್

ಯಡಿಯೂರಪ್ಪನವರೇ ಎರಡೂವರೆ ವರ್ಷ ಮನೆಯ ಯಜಮಾನ್ರು: ಶಾಸಕ ರಾಮದಾಸ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಯಡಿಯೂರಪ್ಪ ನಮ್ಮ ನಾಯಕರಾಗಿದ್ದು, ಅವರ ತಂಡದಲ್ಲಿ ಯಾರಿರಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಶಾಸಕ ರಾಮದಾಸ್ ಹೇಳಿದರು.

ಸುತ್ತೂರಿನಲ್ಲಿ ಮಾತನಾಡಿದ ಶಾಸಕರು, ನಾವು ಯಾವುದೇ ನಿರೀಕ್ಷೆ ಆಸೆಗಳನ್ನು ಇಟ್ಟುಕೊಂಡಿಲ್ಲ. ಸಚಿವ ಸಂಪುಟದಲ್ಲಿ ನನಗೂ ಅವಕಾಶ ಕೊಟ್ಟರೆ, ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದಿದ್ದರೂ ನಮಗೆ ಏನು ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಮನೆಯವರೇ ಯಜಮಾನ ಎಂದು ಹೇಳುವುದು ಸೂಕ್ತ ಎಂದು ಶಾಸಕ ರಾಮದಾಸ್ ತಿಳಿಸಿದರು.

ಸಚಿವ ಸ್ಥಾನ ನೀಡಿದರೆ ಬೇಡ ಅನ್ನಲ್ಲ: ಕಳಕಪ್ಪ ಬಂಡಿ ಸ್ಪಷ್ಟೋಕ್ತಿ

ವಿಜಯಸಾಕ್ಷಿ ಸುದ್ದಿ, ಗದಗ: ನನಗೆ ಸಚಿವ ಸ್ಥಾನ ನೀಡಿದರೆ ಬೇಡ ಅನ್ನಲ್ಲ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ತಾವೂ ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕಳಕಪ್ಪ ಬಂಡಿ, ಸಚಿವ ಸಂಪುಟ ವಿಸ್ತರಣೆಯಾಗುತ್ತೇ ಅಂತಾ ಯಾರು ಹೇಳಿದ್ದಾರೆ. ನಾನು ನೋಡಿಲ್ಲಾ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿಲ್ಲಾ, ನೋಡಿ ಹೇಳುತ್ತೇನೆ ಎಂದರು.

ಇದೇ ವೇಳೆ ಸಚಿವ ಸ್ಥಾನದ ಕುರಿತು ನನಗೆ ಅಸಮಾಧಾನ ಇಲ್ಲಾ, ಸಚಿವ ಸ್ಥಾನ ನೀಡಿದ್ರೆ ಬೇಡ ಅನ್ನಲ್ಲಾ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಈಗಾಗಲೇ ಕಳಕಪ್ಪ ಬಂಡಿ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ.

ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲವಿದೆ, ಸಚಿವ ಸ್ಥಾನ ಕೊಟ್ರೆ ಉತ್ತಮ ಕೆಲಸ ಮಾಡುವೆ: ಶಾಸಕ ಮಹೇಶ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಚಿವ ಸ್ಥಾನದ ಆಕಾಂಕ್ಷೆ ಯಾರಿಗೆ ಇರೋಲ್ಲ ಹೇಳಿ. ಸಚಿವ ಸ್ಥಾನ ಕೊಟ್ಟರೆ ಉತ್ತಮ ಕೆಲಸ ಮಾಡುವೆ.ಆದ್ರೆ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಸಚಿವನಾಗುವ ಇಂಗಿತ ವ್ಯಕ್ತಪಡಿಸಿದರು.

ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ‌ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ.
ಆದ್ರೆ, ನಾನು ಯಡಿಯೂರಪ್ಪ ಅವರ ಜೊತೆ ಇರುವ ನಿರ್ಧಾರ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ ಇದೆ. ಸಚಿವ ಸ್ಥಾನ ಕೊಟ್ಟರೆ ಒಳ್ಳೆಯ ಆಡಳಿತ ನಡೆಸಿ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವೆ ಎಂದು ಶಾಸಕ ಎನ್.ಮಹೇಶ್ ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರು.

ಜ.13 ಮಧ್ಯಾಹ್ನ ಅಮವಾಸ್ಯೆ ಕಳೆದು ಒಳ್ಳೇ ಸಮಯ ಬರುತ್ತೆ, ಆಗ ಸಂಪುಟ ವಿಸ್ತರಣೆ ಆಗುತ್ತೆ: ಸಿಎಂ ಯಡಿಯೂರಪ್ಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ. ಅದು ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಅದು ಅವತ್ತಿಗೆ ಗೊತ್ತಾಗಲಿದೆ ಎಂದು ರವಿವಾರದ ದೆಹಲಿ ವರಿಷ್ಠರ ಭೇಟಿ ಮಾತುಕತೆಯ ಬಳಿಕವಿಂದು ಸಿಎಂ ಯಡಿಯೂರಪ್ಪ ಅವರು ಸಷ್ಪಪಡಿಸಿದರು.

ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿ ಅವರ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೂ ಚಾಲನೆ ನೀಡುವುದಕ್ಕಿಂತ ಮುನ್ನ ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಜನವರಿ 13ರ ಮಧ್ಯಾಹ್ನ ಅಮವಾಸ್ಯೆ ಕಳೆಯುತ್ತದೆ. ಆ ನಂತರ ಒಳ್ಳೆಯ ಸಮಯ ಅಂತ ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸಮಯ ಕೇಳಿಕೊಂಡು ನಿಮಗೂ ಸಮಯ ತಿಳಿಸುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ; ಸಚಿವ ಕಾರಜೋಳ ಸ್ಪಷ್ಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಪೂರ್ಣಾವಧಿಗೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ‌ಗೋವಿಂದ ಕಾರಜೋಳ ಅವರು ಸ್ಪಷ್ಟಪಡಿಸಿದರು.

ಗದಗನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ರಾಜ್ಯದ ಸಿಎಂ ಆಗಿರುತ್ತಾರೆ. ಹಾಗಾಗಿ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.

ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು,
ಸಿಎಂ ಅವ್ರೇ ಜ.13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಅವತ್ತಿಗೆ ಗೊತ್ತಾಗಲಿದೆ ಎಂದು ಹೇಳಿದ್ದು, ಅಲ್ಲಿಯವರೆಗೆ ಕಾದು ನೋಡಿ ಎಂದ ಅವರು,ಯಾವುದೇ ಗೊಂದಲವಿಲ್ಲದೇ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು
ಡಿಸಿಎಂ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ ಇದ್ದರು.

ಗ್ರಾ.ಪಂ.ಚುನಾವಣೆಯಲ್ಲಿ ಹಣದ ಹೊಳೆ, ಬರುವ ಚುನಾವಣೆಯಲ್ಲಿ ಆಸ್ತಿ ಮಾರಬೇಕು: ಶಾಸಕ ಗೌರಿಶಂಕರ

ವಿಜಯಸಾಕ್ಷಿ ಸುದ್ದಿ, ತುಮಕೂರು

ವಿಧಾನಸಭಾ ಚುನಾವಣೆಯಲ್ಲಿ ಅಷ್ಟೋ ಇಷ್ಟೋ ಖರ್ಚು ಮಾಡಿ ಎಂಎಲ್ಎ ಆಗ್ತಿದ್ವಿ. ಗ್ರಾ.ಪಂ. ಚುನಾವಣೆ ನಡೆದಿದ್ದು ನೋಡಿದ್ರೆ ಭಯ ಆಗುತ್ತೆ. ನಾನಾಗಲಿ ಕೃಷ್ಣಪ್ಪಣ್ಣ ಆಗಲಿ ಚುನಾವಣೆಗೆ ದುಡ್ಡು ಎಲ್ಲಿಂದ ತರೋದು. ಕೃಷ್ಣಪ್ಪರೇ ನೀವು ಒಂದು ಆಸ್ತಿ ರೆಡಿ ಮಾಡಿ, ನಾನು ನಮ್ಮಪ್ಪನ ಒಂದು ಆಸ್ತಿ ಮಾರುತ್ತೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ ಆತಂಕ ವ್ಯಕ್ತಪಡಿಸಿದರು.

ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಬ್ಬೊಬ್ಬರು ಖರ್ಚು ಮಾಡಿರೋ ರೇಟ್ ಲೆಕ್ಕ ಹಾಕಿದ್ರೆ, ಒಂದು ಸೀಟ್ ಗೆ ಒಂದು ಕೋಟಿ ಎಲ್ಲಣ್ಣ ತರೋದು. ಮೂರು ತಾಲ್ಲೂಕು ಚುನಾವಣೆಗೆ ಖರ್ಚು ಮಾಡುವ ಹಣನಾ ಒಂದು ಪಂಚಾಯಿತಿಗೆ ಖರ್ಚು ಮಾಡಿದ್ದಾರೆ. ಹೀಗೆ ಮಾಡಿದ್ರೆ ಯಾವ ಮನೆ ಹಾಳು ಮಾಡಿಕೊಳ್ಳಬೇಕು, ಕೆಲಸ ಹೇಗೆ ಮಾಡೋದು ಎಂದು ಪ್ರಶ್ನಿಸಿದರು.

ನನ್ನ ಸೋಲಿಸೋಕೆ ಸಾಲುಗಟ್ಟಿ ನಿಂತಿದ್ದಾರೆ. ನಮ್ಮನ್ನ ತೆಗೆಯೋರು ಯಾರು.?. ನೀವು ತೆಗೆಯಬೇಕು ಇಲ್ಲಾ, ದೇವರು ತೆಗೆಯಬೇಕು.
ಬಿಜೆಪಿ ನನ್ನ ಮೇಲೆ ಬಿಟ್ಟು ತೆಗೆಯುವುದಕ್ಕೆ ಆಗುವುದಿಲ್ಲ.
ನಮ್ಮ ತಾಲ್ಲೂಕು 25 ವರ್ಷಗಳಿಂದ ಜೆಡಿಎಸ್ ಭದ್ರಕೋಟೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಪಳಗಿರುವುದು ದೇವೇಗೌಡ್ರ ಗರಡಿಯಲ್ಲಿ. ತಾತ ಶ್ರೀಕೃಷ್ಣ ಪರಮಾತ್ಮ ಇದ್ದ ಹಾಗೆ ಚುನಾವಣೆ ಹೇಗೆ ಮಾಡಬೇಕು ಅಂತಾ ಹೇಳಿಕೊಟ್ಟಿದ್ದಾರೆ ಎಂದು ಶಾಸಕ ಗೌರಿಶಂಕರ ಅಭಿಪ್ರಾಯ ಪಟ್ಟರು.

error: Content is protected !!