Home Blog Page 3083

ಸಾಂಪ್ರದಾಯಿಕ ಉಡುಗೆಯಲ್ಲಿ ಪೊಲೀಸರು! ಡಿವೈಎಸ್‌ಪಿ ನೇತೃತ್ವದಲ್ಲಿ ಹೊಸ ವರ್ಷಾಚರಣೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ನಿನ್ನೆ ರಾತ್ರಿಯಿಡಿ ಬಂದೋಬಸ್ತ್‌ನಿಂದ ಬಸವಳಿದಿದ್ದರೂ ಸಹ ಬೆಳಗಾಗುತ್ತಲೇ ಕೊಪ್ಪಳ ಜಿಲ್ಲೆಯ ಪೊಲೀಸರು ಸಂಭ್ರಮದಿಂದ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದಾರೆ. ಬಹಳ ವರ್ಷಗಳಿಂದ ಕೊಪ್ಪಳದ ಜನತೆಯ ಬೇಡಿಕೆಯಾಗಿದ್ದ ಟ್ರಾಫಿಕ್ ಲೈಟ್, ಸಿಗ್ನಲ್ , ಕ್ಯಾಮೆರಾ ಅಳವಡಿಕೆ ಮತ್ತು ಪೊಲೀಸರಿಗೆ ಶೆಲ್ಟರ್ ವ್ಯವಸ್ಥೆಯನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮದುವೆ ಮನೆ ಸಿಂಗರಿಸಿದಂತೆ ವೃತ್ತಗಳಲ್ಲಿರುವ ಟ್ರಾಫಿಕ್ ಪೊಲೀಸರ ಶೆಲ್ಟರ್‌ಗಳನ್ನು ಸಿಂಗಾರ ಮಾಡಲಾಗಿತ್ತು. ಮದುವೆಗೆ ಸಿದ್ದರಾದ ಮದುಮಕ್ಕಳಂತೆ ಪೊಲೀಸ್ ಅಧಿಕಾರಿಗಳು ಡ್ರೆಸ್ಸಿಂಗ್ ಮಾಡಿಕೊಂಡಿದ್ದ ಎಲ್ಲರನ್ನು ಸೆಳಯಿತು.

ರೇಷ್ಮಿಯ ಲುಂಗಿ, ರೇಷ್ಮಿ ಶರ್ಟ್ ಮೇಲೊಂದು ರೇಷ್ಮಿ ಶಲ್ಯ ಹೊದ್ದುಕೊಂಡು ಭರ್ಜರಿ ಸಂಭ್ರಮದಿಂದ ಪೊಲೀಸರು ಭಾಗವಹಿಸಿದ್ದರು. ಕೊಪ್ಪಳ ಡಿವಿಜನ್‌ನ ಎಲ್ಲ ಸಿಪಿಐಗಳು, ಪಿಎಸ್ಐ ಗಳು, ಇನ್ಸಪೆಕ್ಟರ್‌ಗಳು ಎಲ್ಲರೂ ಒಂದೇ ಡ್ರೆಸ್ ಕೋಡ್‌ನಲ್ಲಿದ್ದದ್ದು ಕಂಡು ಬಂತು.

ಇದೇ ಧಿರಿಸಿನಲ್ಲಿ ಗಣ್ಯರ ಮನೆಗೆ ಭೇಟಿ ನೀಡಿ ಹೊಸ ವರ್ಷಕ್ಕೆ ಶುಭ ಕೋರಿದರು. ಸಂಸದ ಕರಡಿ ಸಂಗಣ್ಣನವರ ಮನೆಗೆ ಭೇಟಿ ನೀಡಿ ಹೂಗೂಚ್ಛ ನೀಡಿ ಕೇಕ್ ಕತ್ತರಿಸಿ ಶುಭಕೋರಿ ಬಿಜೆಪಿ ಮುಖಂಡ ಅಮರೇಶ ಕರಡಿಯವರ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಕೊಪ್ಪಳ ಡಿವೈಎಸ್‌ಪಿ ವೆಂಕಟಪ್ಪ‌ ನೇತೃತ್ವದಲ್ಲಿ ಕೊಪ್ಪಳ ಪೊಲೀಸರ ತಂಡ ಸಾಂಪ್ರದಾಯಿಕ ಉಡುಗೆಯಲ್ಲಿ ಹಾಗೂ ಗಂಗಾವತಿ ಡಿವೈಎಸ್‌ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಸಹಜ ಧಿರಿಸಿನಲ್ಲಿ ಗಂಗಾವತಿ ಪೊಲೀಸರ ತಂಡ ಗಣ್ಯರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ ಫೋಟೋಗಳು ವೈರಲ್ ಆಗಿವೆ.

ಕೊಪ್ಪಳದ ಮಹ್ಮದ್ ಹಕ್ ಸೇರಿದಂತೆ 121 ಪೋಲಿಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
2019ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿದ್ದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಸೇರಿದಂತೆ 121 ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಭಾರಿ ಪೊಲೀಸ್ ಕಮೀಷನರಾಗಿ ಕರ್ತವ್ಯ ನಿರ್ವಹಿಸಿದ್ದ ರಾಘವೇಂದ್ರ ಸುಹಾಸ, ಬೆಳಗಾವಿ ಜಿಲ್ಲೆಯ ವರಿಷ್ಠಾಧಿಕಾರಿ ಐಪಿಎಸ್ ಲಕ್ಷ್ಮಣ ನಿಂಬರಗಿ, ಬಾಗಲಕೋಟೆ ಜಿಲ್ಲೆಯ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನಕುಮಾರ ಜಿ.ಕೆ, ಶಿವಮೊಗ್ಗ ಜಿಲ್ಲೆಯ ಕೆ.ಎಂ.ಶಾಂತಕುಮಾರ ಸೇರಿದಂತೆ ಒಟ್ಟು 121 ಜನರಿಗೆ ಸಿಎಂ ಮೆಡಲ್ ದೊರಕಿದೆ.

ಕೊಪ್ಪಳದ ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಗುಪ್ತಚರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹ್ಮದ್ ಹಕ್ 2019ನೇ ಸಾಲಿನ ಸಿಎಂ ಮೆಡಲ್ ಗೆ ಭಾಜನರಾಗಿದ್ದಾರೆ.

ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆಯಲ್ಲಿ ಸೈಬರ್ ಕ್ರೈಮ್ ವಿಭಾಗದಲ್ಲಿ ಅತ್ಯುತ್ತಮವಾದ ಪರಿಣಿತ ಹೊಂದಿರುವ ಪೋಲಿಸ್ ಎಂದೇ ಹೆಸರುವಾಸಿ. ಸೋಷಿಯಲ್ ಮೀಡಿಯಾಗಳ ಬಗ್ಗೆ ವಿಶೇಷ ಪರಿಣಿತ ಹೊಂದಿರುವ ಮತ್ತು ಸೈಬರ್ ತಂತ್ರಜ್ಞಾನದ ಬಗ್ಗೆ, ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಹಕ್ ಬಗ್ಗೆ ಇಡೀ ಜಿಲ್ಲೆಯ ಪೋಲಿಸರು ಹೆಮ್ಮೆ ಪಡುತ್ತಾರೆ. ಹಲವಾರು ಕ್ಲಿಷ್ಟಕರ ಪ್ರಕರಣಗಳಲ್ಲಿ ಇವರು ತಮ್ಮ ಪರಿಣಿತಿಯಿಂದ ಆರೋಪಿಗಳನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ ಮೆಡಲ್ ಗೆ ಭಾಜನರಾಗಿರುವ ಹಕ್ ರಿಗೆ ಕೊಪ್ಪಳ ಜಿಲ್ಲೆಯ ಸಮಸ್ತ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು, ಹಿತೈಷಿಗಳು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ಚಿಕ್ಕ ನರಗುಂದ ಗ್ರಾ.ಪಂ. ಚುನಾವಣೆ; ಯುವ ಮುಖಂಡ ಮುತ್ತು ರಾಯರೆಡ್ಡಿಗೆ ಭರ್ಜರಿ ಗೆಲುವು

ವಿಜಯಸಾಕ್ಷಿ ಸುದ್ದಿ, ನರಗುಂದ

ಡಿ.27 ರಂದು ನಡೆದ ತಾಲ್ಲೂಕಿನ ಚಿಕ್ಕ ನರಗುಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೂರನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮುತ್ತು ರಾಯರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. 173 ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಮುತ್ತು ರಾಯರೆಡ್ಡಿ, ಮತ ಹಾಕಿದ 3ನೇ ವಾರ್ಡಿನ ಮತದಾರರಿಗೆ, ಗ್ರಾಮದ ಸಮಸ್ತ ಹಿರಿಯರಿಗೆ, ಸಹೋದರ- ಸಹೋದರರಿಗೆ ಕೃತಜ್ಞತೆ ಸಲ್ಲಿಸಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮೂರನೇ ವಾರ್ಡಿನಲ್ಲಿ ಚಲಾವಣೆಗೊಂಡ 990 ಮತಗಳಲ್ಲಿ 598 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ಮುತ್ತು ರಾಯರೆಡ್ಡಿಗೆ ಗ್ರಾಮಸ್ಥರು, ಗೆಳೆಯರು ಹಾಗೂ ಅಭಿಮಾನಿಗಳು ಅಭಿನಂದಿಸಿ ವಿಜಯೋತ್ಸವ ಆಚರಿಸಿದರು.

ಗ್ರಾ. ಪಂ. ಚುನಾವಣೆ- ಗದಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದ 92 ಅಭ್ಯರ್ಥಿಗಳ ಸಂಪೂರ್ಣ ಅಪ್ಡೇಟ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದ 92 ಅಭ್ಯರ್ಥಿಗಳ ಹೆಸರು, ಜಾತಿ, ಹಾಗೂ ಪಡೆದ ಮತಗಳ ವಿವರ ಇಂತಿದೆ.

ಹುಲಕೋಟಿ– 4 ರಲ್ಲಿ ಮಡಿವಾಳರ ದ್ಯಾಮವ್ವ ಅಡಿವಡಪ್ಪ ( ಸಾಮಾನ್ಯ ಮಹಿಳೆ- 518 ), ರೊಳ್ಳಿ ಉಮೇಶ ಮಹಾದೇವಪ್ಪ (ಸಾಮಾನ್ಯ-740),
ಹುಲಕೋಟಿ-6 ರಲ್ಲಿ ಸೊಗಿನ ಸಂತೋಷ ಗುರಪ್ಪ (ಸಾಮಾನ್ಯ-755)

ಹುಲಕೋಟಿ-8 ರಲ್ಲಿ ಶಲವಡಿ ಸುಮಂಗಲ ತಿಪ್ಪಣ್ಣ (ಹಿಂದುಳಿದ ಅ ವರ್ಗ ಮಹಿಳೆ-529), ಬ್ಯಾಡಗಿ ಬಸಪ್ಪ ಸಿದ್ದರಾಮಪ್ಪ (ಹಿ ಅ ವರ್ಗ-520), ರಂಗನಗೌಡ ರವೀಂದ್ರ ನಿಂಗನಗೌಡ (ಸಾ-475),

ಹೊಂಬಳ-4 ಈರಣ್ಣ ರಾಜಶೇಖರಪ್ಪ ಸಂಗಟಿ (ಹಿ ಅ ವರ್ಗ -242), ರೂಪಾ ಸಂಗಮೇಶ ಪೂಜಾರ (ಸಾ ಮಹಿಳೆ-192), ಬಸವರಾಜ ಶಂಕ್ರಪ್ಪ ಹುಣಸಿಕಟ್ಟಿ (ಸಾ-276),
ಹೊಂಬಳ-5 ಭೀಮಾಂಬಿಕ ಬ ಹಾಲನವರ (ಹಿ ಅ ವರ್ಗ ಮಹಿಳೆ-178), ಜಂದುಸಾಬ ಹುಸೇನಸಾಬ ಹಾದಿಮನಿ (ಹಿ ಅ ವರ್ಗ-427), ನೀಲವ್ವ ಮಾರುತೆಪ್ಪ ಬಾಳಣ್ಣವರ (ಸಾ ಮಹಿಳೆ-451)

ಲಿಂಗದಾಳ-3 ದೊಡ್ಡಮನಿ ದಿಲ್ಲಿಶಾದ್ ಬೇಗಂ (ಹಿ ಅ ವರ್ಗ ಮಹಿಳೆ-570), ಬಂಡಿವಾಡ ಶಕುಂತಲ ವೀರಣ್ಣ (ಸಾ ಮಹಿಳೆ-546), ನವಲಗುಂದ ದೀಲಿಪಕುಮಾರ (ಸಾ-626),
ಚಿಂಚಲಿ-1 ಗೌರಮ್ಮ ಕಾಳಪ್ಪ ಕರಿಗಾರ (ಸಾ ಮಹಿಳೆ-239), ಮಂಜುನಾಥ ಬಸಪ್ಪ ಕಾಳಿ (ಪ.ಜಾ-264), ನಿಂಗಪ್ಪ ಬ ತೇರಿನಗಡ್ಡಿ (ಸಾ-335)
ಚಿಂಚಲಿ-2 ಯಲ್ಲವ್ವ ಲು ಮಾದರ (ಪ.ಜಾ ಮಹಿಳೆ-215), ರೂಪಾ ನಾ ಕುರುಬರ (ಹಿ ಅ ವರ್ಗ ಮಹಿಳೆ-290), ಬಾಬಾಜಾನ ಕುದರಿಮೋತಿ (ಸಾ-281)

ಕಲ್ಲೂರ-1 ಚಂದ್ರಶೇಖರ ಹರಿಜನ (ಪ.ಜಾ-435) ಸೋಮಪ್ಪ ಸೊರಟೂರ (ಪ.ಪಂ-323)
ಕಲ್ಲೂರ-2 ಬಸವರಾಜ ರಾಮರೆಡ್ಡಿ (ಹಿ ಬ ವರ್ಗ-421), ಶಕುಂತಲಾ ಕೆಂಭಾವಿಮಠ (ಸಾ ಮಹಿಳೆ-222),
ಕದಡಿ-2 ಮೈಲಾರೆಪ್ಪ ನಿಂಗಪ್ಪ ಸಗರ (ಪ.ಜಾ-207), ಉಮೇಶ ವೀರಪ್ಪ ಅಕ್ಕಹುಣಸಿ (ಸಾ-304)

ಗಾವರವಾಡರಲ್ಲಿ ಕವಿತಾ ಚಂದ್ರಪ್ಪ ಕೋಣಿಮನಿ (ಪ.ಜಾ ಮಹಿಳೆ-481), ಜಂತ್ಲಿ ಮಂಜಪ್ಪ ಕನಕಪ್ಪ (ಹಿ ಅ ವರ್ಗ-493) ಕುಲಕರ್ಣಿ ಜ್ಯೋತಿ ವೀರಣ್ಣ (ಸಾ ಮಹಿಳೆ-559) ಅಣ್ಣಿಗೇರಿ ನಾಗಪ್ಪ ತಿಪ್ಪಣ್ಣ (ಸಾ-499)
ಕಳಸಾಪುರ-3 ಭಜಂತ್ರಿ ಶಾಂತವ್ವ ಹೂವಪ್ಪ (ಪ.ಜಾ ಮಹಿಳೆ-289) ಅನುಸೂಯಾ ಬಾಳನಗೌಡ ಬೆಟಗೇರಿ (ಸಾ ಮಹಿಳೆ-250), ಕಿರಣಕುಮಾರ ಕೊಪಡೆ (ಸಾ-218)
ಅಸುಂಡಿ-3 ಮೈಲೆವ್ವ ಬ ಭಾವಿಮನಿ (ಪ.ಜಾ ಮಹಿಳೆ-499) ರೇಖಾ ಶಿವಾನಂದಗೌಡ ತಿಮ್ಮನಗೌಡರ (ಸಾ ಮಹಿಳೆ-552) ಸೋನರೆಡ್ಡಿ ಹನುಮರೆಡ್ಡಿ ರಾಮನಹಳ್ಳಿ (ಸಾ-735)

ಕೋಟುಮುಚಗಿ-3 ಯಲ್ಲವ್ವ ಮ ನೀರಲಗಿ (ಹಿ ಅ ವರ್ಗ ಮಹಿಳೆ-517), ಸುವರ್ಣ ನೀಲನಗೌಡರ ಸಂಕನಗೌಡ (ಸಾ ಮಹಿಳೆ-512) ರವಿ ಮಲ್ಲಿಕಾರ್ಜುನ ಗೋದಿ (ಸಾ-598) ಶರಣಪ್ಪ ಮನೋಹರ ಮೆಗೆರಿ (ಸಾ-557)

ಕಣಗಿನಹಾಳ-1 ಕವಿತಾ ಶಂಕ್ರಪ್ಪ ಹಂಪಣ್ಣವರ (ಹಿ ಅ ವರ್ಗ ಮಹಿಳೆ-183) ಲಕ್ಷ್ಮಿ ಕಲ್ಲಪ್ಪ ಬಂಕಲಕುಂಟಿ (ಸಾ ಮಹಿಳೆ-174) ಮಲ್ಲಿಕಾರ್ಜುನ ವಿ ದೂಳಪ್ಪನವರ (ಸಾ-221)
ಸಿದ್ದರಾಮೇಶ್ವರ ನಗರ-1 ಕವಿತಾ ಸೋಮಪ್ಪ ಪವಾರ (ಪ.ಜಾ ಮಹಿಳೆ-315) ಮೀರಾಬಾಯಿ ನೇಮಪ್ಪ ಲಮಾಣಿ (ಪ.ಜಾ ಮಹಿಳೆ-300) ಸುರೇಶ ಸೋಮಪ್ಪ ಪವಾರ (ಪ.ಜಾ-395)

ಮದಗಾನೂರ, ಹನುಮವ್ವ ಪ ಬಾರಕೇರ (ಪ.ಪಂ ಮಹಿಳೆ-373) ಪದ್ಮಾವತಿ ರಾ ರಜಪೂತ (ಹಿ ಅ ವರ್ಗ ಮಹಿಳೆ-339) ಸಂಗನಗೌಡ ಪಾಟೀಲ (ಸಾ-412)
ಬಳಗಾನೂರ-3 ಶಿವಲಿಂಗವ್ವ ಜಗಳೂರು (ಪ.ಪಂ ಮಹಿಳೆ-352) ಬಂಡಿವಾಡ ಶಿ ವೀರಭದ್ರಪ್ಪ (ಹಿ ಬ ವರ್ಗ-474) ಶಾಂತಾ ವ ಶಟುವಾಜಿ (ಸಾ ಮಹಿಳೆ-325) ಕೃಷ್ಣಪ್ಪ ಯ ಪಡೆಸೂರ (ಸಾ-532)

ಕುರ್ತಕೋಟಿ-7 ಜಕ್ಕಲಿ ಮಂಜುಳಾ ಶರಣಪ್ಪ (ಹಿ ಅ ವರ್ಗ-397) ಚನ್ನಬಸವ್ವ ಹ ಹುಬ್ಬಳ್ಳಿ (ಸಾ ಮಹಿಳೆ-515) ಅಶೋಕ ವೀರಪ್ಪ ಶಿರಹಟ್ಟಿ (ಸಾ-627)
ಬ್ರಹ್ಮಾನಂದಪುರ-2 ಸವಿತಾ ಹನುಮಂತ ನಾಯಕ (ಪ.ಜಾ ಮಹಿಳೆ-279) ಶಾರದಾ ನಾಯಕ (ಪ.ಜಾ ಮಹಿಳೆ-266) ಶಿವಪ್ಪ ಟೋಪಣ್ಣ ನಾಯಕ (ಪ.ಜಾ-366)

ಕಿರಟಗೇರಿ ಕ್ಷೇತ್ರದಲ್ಲಿ ಹೇಮಾ ಬಸವರಾಜ ಹರಿಜನ (ಪ.ಜಾ ಮಹಿಳೆ-436) ಶಂಕ್ರವ್ವ ಕಲ್ಲಪ್ಪ ಹಡಪದ (ಹಿ ಅ ವರ್ಗ ಮಹಿಳೆ-393) ಪಾಟೀಲ ಮಹೇಶಗೌಡ ತಮ್ಮನಗೌಡ (ಸಾ-320)
ಅಂತೂರ-2 ಭಜಂತ್ರಿ ಅಶೋಕ ರಾಮಪ್ಪ (ಪ.ಜಾ-307) ನಿರ್ಮಲಾ ಎಂ ಹಸರಾನಿ (ಹಿ ಅ ವರ್ಗ ಮಹಿಳೆ-300) ನಿರ್ಮಲಾ ಕೊಪ್ಪಳ (ಸಾ ಮಹಿಳೆ-357) ಮಂಜುನಾಥ ಈ ಪವಾಡಿ (ಸಾ-507)
ಲಕ್ಕುಂಡಿ-10 ಗಂಗಮ್ಮ ಎಂ ಪೂಜಾರ (ಪ.ಪಂ ಮಹಿಳೆ-189) ಈರವ್ವ ಛಬ್ಬರಭಾವಿ (ಹಿ ಬ ವರ್ಗ ಮಹಿಳೆ-276) ರುದ್ರಪ್ಪ ಮುಸುಕಿನಭಾವಿ (ಸಾ-426)

ಲಕ್ಕುಂಡಿ-7 ಮಂಜುನಾಥ ಗುಡನಮನಿ (ಹಿ ಅ ವರ್ಗ-236) ಶ್ರೇಯಾ ಚಂದ್ರಹಾಸ ಕಟುಗಾರ (ಸಾ ಮಹಿಳೆ-374)
ಲಕ್ಕುಂಡಿ -8 ಭಜಂತ್ರಿ ಲಕ್ಮವ್ವ ದೇವಪ್ಪ (ಪ.ಜಾ ಮಹಿಳೆ-107) ಬೇಟಗೇರಿ ಕಲ್ಲಪ್ಪ (ಸಾ-126)
ನರಸಾಪೂರ -2 ಜಂಬಣ್ಣ ವೀರಪ್ಪ ಕಲಬುರಗಿ (ಹಿ ಅ ವರ್ಗ-211) ನಿರ್ಮಲಾ ಎಂ ಕರಿಗೌಡರ (ಸಾ ಮಹಿಳೆ-201)
ನಾಗಸಮುದ್ರ, ವಿಜಯಲಕ್ಷ್ಮಿ ಹೊಸಮನಿ (ಪ.ಜಾ ಮಹಿಳೆ-301) ಬಸನಗೌಡ ವೀರನಗೌಡ ಪಾಟೀಲ (ಹಿ ಅವರ್ಗ -496) ನೀಲವ್ವ ಶಿವಪ್ಪ ಮಣ್ಣೂರ (ಸಾ ಮಹಿಳೆ-558) ಮಂಜುನಾಥ ಪರ್ವತಗೌಡರ (ಸಾ-459)
ಕಣವಿ-1 ಹಾಲವ್ವ ಕುಬೇರಪ್ಪ ಕುರಿ (ಹಿ ಅ ವರ್ಗ ಮಹಿಳೆ-408) ಮಹಾದೇವಿ ಶರಣಪ್ಪ ಬಳಿಗೇರ (ಸಾ ಮಹಿಳೆ-389) ಪ್ರಕಾಶ ಈಶ್ವರಪ್ಪ ಕುರ್ತಕೋಟಿ (ಸಾ-503)
ಹಿರೇಹಂದಿಗೋಳ-1 ಗಾಯತ್ರಿ ಬಸವರಾಜ ಖಾನಾಪುರ (ಹಿ ಅ ವರ್ಗ ಮಹಿಳೆ-260) ಪರಪ್ಪನವರ ನಿಂಗಪ್ಪ ಈರಪ್ಪ (ಸಾ-343)
ಎಲಿಶಿರೂರ-2 ಶಿವಪುತ್ರೆವ್ವ ನಾಗಪ್ಪ ಬರಮನಾಯಕ (ಪ.ಪಂ ಮಹಿಳೆ-403) ಪರುಶುರಾಮ ಗೂಳಪ್ಪ ಹೂಗಾರ (ಹಿ ಅ ವರ್ಗ -508) ಕವಿತಾ ಮಲ್ಲಿಕಾರ್ಜುನ ಹೊನ್ನಪ್ಪನವರ (ಸಾ ಮಹಿಳೆ-404) ಮಂಜುನಾಥ ಶ ಎಲಿ (ಸಾ-574)
ಕುರ್ತಕೋಟಿ-6 ಶೇಖವ್ವ ದುರ್ಗಪ್ಪ ಶೈಲಾಪುರ (ಪ.ಪಂ ಮಹಿಳೆ-395) ಪುಷ್ಪಾ ವೀರಪ್ಪ ನಾಗಾವಿ (ಸಾ ಮಹಿಳೆ-386) ಇನಾಮತಿ ಮಲ್ಲಪ್ಪ ಮೈಲಾರಪ್ಪ (ಸಾ-517) ಕೋರಿ ವೀರಣ್ಣ ಗುರುಸಿದ್ದಪ್ಪ (ಸಾ-504)

ಗ್ರಾ.ಪಂ. ಚುನಾವಣೆ- ಗದಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದ 140 ಅಭ್ಯರ್ಥಿಗಳ ಸಂಪೂರ್ಣ ಅಪ್ಡೇಟ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗದಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದ 140 ಅಭ್ಯರ್ಥಿಗಳ ಹೆಸರು, ಜಾತಿ, ಹಾಗೂ ಪಡೆದ ಮತಗಳ ವಿವರ ಇಂತಿದೆ.

ಹಿರೇಹಂದಿಗೋಳ ವಾರ್ಡ್ ನಂ. 2 ರಲ್ಲಿ ದೇವೇಂದ್ರಗೌಡ ಕರಿಗೌಡ್ರ 349 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಕಳಸಾಪುರ- 2 ರಲ್ಲಿ ರತ್ನ ನಾಯ್ಕರ –(ಪ.ಪಂ. ಮಹಿಳೆ -161), ರಾಮಪ್ಪ ಅಣ್ಣಿಗೇರಿ (ಸಾಮಾನ್ಯ ವರ್ಗ–189).

ನರಸಾಪುರ -1 ರಲ್ಲಿ ಶಿವಾನಂದ ಕರಿಗೌಡ್ರ (ಸಾಮಾನ್ಯ ವರ್ಗ – 284),
ಸೊರಟೂರ-2 ರಲ್ಲಿ ರೇಖಾ ಚವ್ಹಾಣ ( ಹಿಂ.ಅ. ವರ್ಗ ಮಹಿಳೆ- 188), ಅಡರಕಟ್ಟಿ ದೇವೇಂದ್ರಪ್ಪ ( ಸಾಮಾನ್ಯ 252 ),
ಹಂಗನಕಟ್ಟಿ – ಗಂಗವ್ವ ಗಂಟಿ ( ಹಿಂದುಳಿವ ವರ್ಗ ಅ ಮಹಿಳೆ-296), ಬಸವರಾಜ ಖಾನಾಪುರ ( ಸಾಮಾನ್ಯ – 350 ),
ಹುಲಕೋಟಿ– 2 ರಲ್ಲಿ ಹಳ್ಳಿ ಕಮಲಾಕ್ಷಿ ( ಸಾಮಾನ್ಯ ಮಹಿಳೆ – 288), ಹುಲಕೋಟಿ- 5 ರಲ್ಲಿ ಶಿಶುವಿನಹಳ್ಳಿ ವಿ ಭೀಮರೆಡ್ಡಿ ( ಸಾಮಾನ್ಯ – 355),

ಬೆಳದಡಿ-2 ರಲ್ಲಿ ಪಾರ್ವತಿ ಗುಡಿಮನಿ ( ಪ.ಜಾ ಮಹಿಳೆ- 265). ಬಸವರಾಜ ಪೂಜಾರ ( ಸಾಮಾನ್ಯ – 208 ),
ಶಿರೋಳ ದಲ್ಲಿ ಪಾಂಡಪ್ಪ ರಾಮಗಿರಿ ( ಪ.ಜಾ. 206), ಲಕ್ಷ್ಮವ್ವ ಸೋ ನಾಗಾವಿ-( ಸಾಮಾನ್ಯ ಮಹಿಳೆ- 229),
ಲಿಂಗಧಾಳ -2 ರಲ್ಲಿ ಹನುಮವ್ವ ಸಿಡ್ಲೆನ್ನವರ ( ಪ.ಜಾ ಮಹಿಳೆ-217), ಸುನಿಲ ಪಾಲಿನ (ಸಾಮಾನ್ಯ -260 )
ಬಿಂಕದಕಟ್ಟಿ– 1 ರಲ್ಲಿ ಮೂಲಿಮನಿ ಲಕ್ಷ್ಮೀ ಪ್ರಕಾಶ (ಸಾ.ಮಹಿಳೆ – 417), ದೇಸಾಯಿ ರಾ ವೆಂಕಪ್ಪ (ಸಾ– 440),
ಹುಯಿಲಗೋಳ– 2 ರಲ್ಲಿ ನೀಲವ್ವ ಕಟಿಯವರ (ಪ.ಜಾ ಮಹಿಳೆ – 129), ಚನ್ನಬಸಪ್ಪ ಹೂಗಾರ (ಹಿಂದುಳಿದ ಅ ವರ್ಗ- 222) , ಬೆಳಗಟ್ಟಿ ರಮೇಶ (ಸಾಮಾನ್ಯ -226)
ಕಣಗಿನಹಾಳ – 4 ರಲ್ಲಿ ಸುವರ್ಣಾ ಶಿರೂರ (ಹಿಂದುಳಿದ ಅ ವರ್ಗ ಮಹಿಳೆ- 150), ಯಮನೂರಸಾಬ ರ ನಿಟ್ಟಾಲಿ (ಸಾಮಾನ್ಯ 283),
ನಾಗಾವಿ– 2 ರಲ್ಲಿ ಹನುಮವ್ವ ಗುಡಿಮನಿ (ಪ.ಜಾ ಮಹಿಳೆ – 301), ಅಲ್ಲಾಸಾಬ ಟಿ ಫಿರಕಾನವರ – (ಸಾ-365),

ಬೆಂತೂರ– 2 ರಲ್ಲಿ ಯಲವ್ವ ದು ಹೊಸಮನಿ (ಪ.ಜಾ ಮಹಿಳೆ-337), ಪಾಟೀಲ ಪ್ರ ಹನುಮಂತಗೌಡ (ಸಾ– 560), ಗುರುವಯ್ಯ ಲಗಮಯ್ಯನವರ ( ಸಾಮಾನ್ಯ – 434),
ಹೊಂಬಳ– 1 ರಲ್ಲಿ ಮಹಬೂಬಾನಿ ಕಲೆಬಾಯಿ (ಹಿಂ. ಅ ವರ್ಗ ಮಹಿಳೆ- 378), ವೀಣಾ ಮ ಕವಲೂರ (ಸಾಮಾನ್ಯ ಮಹಿಳೆ – 391), ಚನ್ನಬಸಪ್ಪ ಬು ನಾಶಿಪುಡಿ (ಸಾಮಾನ್ಯ – 510) ,
ಲಕ್ಕುಂಡಿ– 2 ರಲ್ಲಿ ರಮೇಶ ಬಾವಿ (ಹಿಂ. ಅ ವರ್ಗ – 222) , ಅನಸವ್ವ ಸಿ ಅಂಬಳ (ಸಾಮಾನ್ಯ ಮಹಿಳೆ – 240) ಲಕ್ಕುಂಡಿ– 4 ರಲ್ಲಿ ಬೇಲೇರಿ ಪ ಬಸಪ್ಪ (ಹಿಂ.ಅ ವರ್ಗ- 216 ) ಚಂದ್ರವ್ವ ರಿತ್ತಿ ( ಸಾಮಾನ್ಯ – ಮಹಿಳೆ 213 ),

ಲಕ್ಕುಂಡಿ– 6 ರಲ್ಲಿ ಅಮಿನಾ ಮ ಹುಬ್ಬಳ್ಳಿ (ಹಿಂದುಳಿದ ಅ ವರ್ಗದ ಮಹಿಳೆ 200 ), ಯಲಿಶಿರುಂದ ಬ ಮಲ್ಲಪ್ಪ (ಸಾಮಾನ್ಯ 252),
ಬೆಳಹೋಡ– 2 ರಲ್ಲಿ ಲಕ್ಷ್ಮವ್ವ ಯ ನಡುವಿನಮನಿ (ಎಸ್.ಸಿ. ಮಹಿಳೆ-260), ದಾವಲಸಾಬ ಹಿತ್ತಲಮನಿ (ಸಾ-470),
ಕೋಟುಮಚಗಿ-1ರಲ್ಲಿ ರಮಜಾನಬಿ ಬುಕ್ಕಿಟಗಾರ ( ಹಿಂ. ಅ ವರ್ಗ ಮಹಿಳೆ- 381), ಬಸವ್ವ ತೋಟಪ್ಪ ನವಲಿ ( ಹಿಂ. ಬ ವರ್ಗ ಮಹಿಳೆ- 263), ಅಕ್ಬರಸಾಬ ಅ ನಾಗರಾಳ- ( ಸಾಮಾನ್ಯ 316),

ಕಣವಿ– 3 ರಲ್ಲಿ ರೇಣವ್ವ ಬೋ ತಳವಾರ (ಎಸ್.ಟಿ ಮಹಿಳೆ- 212), ಯಲ್ಲಪ್ಪ ಬ ಕೋರಿ (ಸಾಮಾನ್ಯ 317),
ಬಾಲಾಜಿನಗರ : ಸೋಮಪ್ಪ ಮ ಪೂಜಾರ ( ಪ.ಜಾ 189), ಚನ್ನಮ್ಮ ಲಮಾಣಿ (ಸಾಮಾನ್ಯ ಮಹಿಳೆ 158),
ಕೋಟುಮಚಗಿ-2 ರಲ್ಲಿ ಶರಣವ್ವ ಹ ಖಾಡರ ( ಸಾಮಾನ್ಯ ಮಹಿಳೆ – 289), ಮಹದೇವಪ್ಪ ಬ ಬ್ಯಾಹಟ್ಟಿ (ಸಾಮಾನ್ಯ 334),

ಬೆಳಹೊಡ-1 ರಲ್ಲಿ ದೇವಕ್ಕ ಯ ನೀರಲಗಿ ( ಹಿಂ. ಅ ವರ್ಗ ಮಹಿಳೆ- 385), ಸರೋಜಿನಿ ಅ ಬೆಟಗೇರಿ ( ಸಾಮಾನ್ಯ ಮಹಿಳೆ – 260), ಬೀರಣ್ಣವರ ಗೋ ಬಸಪ್ಪ (ಸಾಮಾನ್ಯ 398),
ಬಳಗಾನೂರ-1 ರಲ್ಲಿ ದಿವ್ಯಾ ಆರ್ ಬೇವಿನಮರದ ( ಪ.ಜಾ ಮಹಿಳೆ – 425), ಬಸವ್ವ ಶರಣಪ್ಪ ಚಟ್ರಿ ( ಹಿಂ. ಅ ವರ್ಗ ಮಹಿಳೆ- 439), ಪಾಟೀಲ ರಾ ನೀಲಪ್ಪಗೌಡ ( ಸಾಮಾನ್ಯ 472),
ಬಳಗಾನೂರ– 2 ರಲ್ಲಿ ಲಲಿತಾ ಮ ಹೊಂಬಳ ( ಹಿಂ. ಅ ವರ್ಗ ಮಹಿಳೆ- 314), ಹನುಮಪ್ಪ ಬಿ ಕಮಲದಿನ್ನಿ ( ಸಾಮಾನ್ಯ – 392), ವಗ್ಗಣ್ಣವರ ಎಂ. ಬಸಪ್ಪ ( ಸಾಮಾನ್ಯ 295 ),

ಶ್ಯಾಗೋಟಿ– 1 ರಲ್ಲಿ ಕುರ್ತಕೋಟಿ ರಾಮಪ್ಪ ಹನುಮಪ್ಪ ( ಪ.ಪಂ. 301), ಕುರುಹಿನಶೆಟ್ಟಿ ಕೋ ಶಂಕ್ರಪ್ಪ ( ಹಿಂ. ಅ ವರ್ಗ – 277), ಹಿರೇಮಠ ನಿವೇದಿತಾ ಸಿದ್ಧಲಿಂಗಯ್ಯ ( ಸಾಮಾನ್ಯ ಮಹಿಳೆ – 206 ),

ಕುರ್ತಕೋಟಿ – 1 ರಲ್ಲಿ ಪುಷ್ಪಾ ವೀರಪ್ಪ ಬಿಸಾಟಿ ( ಪ.ಪಂ. ಮಹಿಳೆ -324), ಇನಾಮತಿ ಅಪ್ಪಣ್ಣ ಅಮರಪ್ಪ ( ಸಾಮಾನ್ಯ – 297),
ಕುರ್ತಕೋಟಿ– 2 ರಲ್ಲಿ ನಂದಾ ವಿನಯಕುಮಾರ ಬಾರಕೇರ ( ಸಾಮಾನ್ಯ ಮಹಿಳೆ 351), ತಹಶೀಲ್ದಾರ ರಾಜೇಸಾಬ ಹುಸೇನಸಾಬ ( ಹಿಂ. ಅ ವರ್ಗ- 370), ಬಸವರೆಡ್ಡಿ ಸೋಮರೆಡ್ಡಿ ಹೆಬಸೂರ ( ಸಾಮಾನ್ಯ 395),
ಕುರ್ತಕೋಟಿ – 4 ರಲ್ಲಿ ಈಟಿ ಶೇಕಪ್ಪ ಹನುಮಪ್ಪ ( ಹಿಂ. ಅ ವರ್ಗ – 433), ದೇವಕ್ಕ ಶಿವರೆಡ್ಡಿ ಮಲ್ಲರೆಡ್ಡಿ ( ಸಾಮಾನ್ಯ ಮಹಿಳೆ – 410),
ಹೊಸಳ್ಳಿ– 2 ರಲ್ಲಿ ಬೂದಪ್ಪ ಬೂದಪ್ಪ ದೊಡ್ಡಮನಿ ( ಪ.ಜಾ – 257), ಶಿವಲೀಲಾ ಮಲ್ಲಿಕಾರ್ಜುನ ಮುಳಗುಂದ ( ಸಾಮಾನ್ಯ ಮಹಿಳೆ – 375),

ಸಂಭಾಪುರ– 2 ರಲ್ಲಿ ಕಮಲವ್ವ ಅ ಹರ್ತಿ ( ಪ. ಪಂ. ಮಹಿಳೆ – 252), ರಮೇಶ ಹ ಬಿದರಳ್ಳಿ ( ಸಾಮಾನ್ಯ 318),
ಜಲಶಂಕರನಗರ – 1 ರಲ್ಲಿ ದೇವಕ್ಕ ಲಾಲಪ್ಪ ಲಮಾಣಿ (ಪ.ಜಾ ಮಹಿಳೆ – 164), ವೆಂಕಟೇಶ ಉಮೇಶ ಲಮಾಣಿ ( ಪ. ಜಾ 231),
ಸೊರಟೂರ – 4 ರಲ್ಲಿ ಮಹಬೂಬಸಾಬ ಬಾ ಯಕ್ಲಾಸಪುರ ( ಹಿಂ. ಅ ವರ್ಗ – 356), ಕರಿಗೌಡ್ರ ಶಿವಮೂರ್ತಿ ಮಲಕಾಜಪ್ಪ ;( ಸಾಮಾನ್ಯ – 468), ಲಕ್ಷ್ಮೀ ಚ ಮಠಪತಿ (ಸಾಮಾನ್ಯ ಮಹಿಳೆ – 343),
ಶ್ಯಾಗೋಟಿ – 2 ರಲ್ಲಿ ಅಣ್ಣಿಗೇರಿ ಪ್ರೇಮವ್ವ ಬಸಪ್ಪ ( ಪ. ಪಂ. ಮಹಿಳೆ – 325 ), ವೆಂಕನಗೌಡ್ರ ಶಿವನಗೌಡ್ರ ಗೋವಿಂದಗೌಡ್ರ ( ಸಾಮಾನ್ಯ – 427)

ಕೋಟುಮಚಗಿ- 5 ರಲ್ಲಿ ಬಸವಣ್ಣೆವ್ವ ಶಂಕ್ರಪ್ಪ ತಳವಾರ ( ಪ.ಪಂ. ಮಹಿಳೆ- 298), ಸುಭಾಸಪ್ಪ ಯಲ್ಲಪ್ಪ ಅಬ್ಬಿಗೇರಿ ( ಪ.ಜಾ – 266), ಸಾಯಿನಾಜಿ ಬೇಗಂ ಹು ಬೂದಿಹಾಳ ( ಸಾಮಾನ್ಯ ಮಹಿಳೆ – 354)
ನೀರಲಗಿ– 1 ರಲ್ಲಿ ಮಮತಾ ಬೇಗಂ ಪ ಬಾಬುಖಾನವರ ( ಹಿಂದುಳಿದ ಮಹಿಳೆ- 322), ಯಲ್ಲಮ್ಮ ಸಿ ಸಂದಿಗೋಳ ( ಸಾಮಾನ್ಯ ಮಹಿಳೆ – 462), ರುದ್ರೇಶ ಗು ಕುರಡಗಿ ( ಸಾಮಾನ್ಯ – 440 ),
ಶಿರುಂಜ – 1 ರಲ್ಲಿ ನೀಲಪ್ಪ ಮ ಮಾಲಿಂಗಪುರ ( ಪ. ಜಾತಿ 189) , ರೇಣವ್ವ ಪ್ಯಾಟಿ ( ಸಾಮಾನ್ಯ ಮಹಿಳೆ – 238),

ಲಿಂಗಧಾಳ– 1 ರಲ್ಲಿ ದೊಡ್ಮನಿ ಮಂಜುಳಾ ಸುರೇಶ ( ಪ.ಪಂ. ಮಹಿಳೆ 474), ಪುರದ ಶರಣಪ್ಪ ಈರಪ್ಪ ( ಹಿಂ. ಅ ವರ್ಗ – 508), ಜಾನೋಪಂತರ ಈರಣ್ಣ ರಾಚಪ್ಪ ( ಸಾಮಾನ್ಯ 509)
ತಿಮ್ಮಾಪುರ – 1 ರಲ್ಲಿ ಹನುಮವ್ವ ಲ ತಳವಾರ ( ಪ.ಪಂ. ಮಹಿಳೆ 157), ಹಂಚಿನಾಳ ಮಾ ಗವಿಸಿದ್ಧಪ್ಪ ( ಹಿಂ. ಅ ವರ್ಗ – 323), ಹನುಮವ್ವ ಈ ಕೊಪ್ಪದ – ( ಸಾಮಾನ್ಯ ಮಹಿಳೆ 269), ಬಸವರಾಜ ಶಿ ಯಲಬುರ್ಗಿ ( ಸಾಮಾನ್ಯ – 335)
ಪಾಂಡುರಂಗಪುರ- 1 ರಲ್ಲಿ ರೇಣುಕಾ ಗಣೇಶ ಚವ್ಹಾಣ ( ಪ. ಜಾತಿ ಮಹಿಳೆ- 171), ರಾಜಕುಮಾರ ಹ ಕಟ್ಟಿಮನಿ ( ಪ. ಜಾ 196),

ನಾಗಾವಿ -3 ರಲ್ಲಿ ಸುಮಾ ಶಿವಾನಂದ ತಳವಾರ ( ಪ.ಪಂ. ಮಹಿಳೆ- 374), ಹನುಮವ್ವ ಮರಿಯಪ್ಪ ಸಿದ್ನೇಕೊಪ್ಪ ( ಸಾಮಾನ್ಯ ಮಹಿಳೆ 374), ಉಳವಪ್ಪ ಬಸಪ್ಪ ಶಿಗ್ಲಿ ( ಸಾಮಾನ್ಯ – 126)
ಮಲ್ಲಸಮುದ್ರ 3 ರಲ್ಲಿ ಮಾಬೂಬಿ ಅ ಮ್ಯಾಗೇರಿ ( ಹಿಂ. ಅ ವರ್ಗ ಮಹಿಳೆ – 327), ಶಶಿಕಲಾ ಅ ಹೊಸಮನಿ ( ಸಾಮಾನ್ಯ ಮಹಿಳೆ 170) , ಮಂಜುನಾಥ ಚ ಅಕ್ಕಿ ( ಸಾಮಾನ್ಯ 323)
ಅಸುಂಡಿ – 2 ರಲ್ಲಿ ದಾಕ್ಷಾಯಣಿ ಬ ವಗ್ಗಣ್ಣವರ ( ಸಾಮಾನ್ಯ ಮಹಿಳೆ- 391), ಜಯಶ್ರೀ ಶ ಅಣ್ಣಿಗೇರಿ ( ಸಾಮಾನ್ಯ ಮಹಿಳೆ 382), ರಾಘವೇಂದ್ರ ಹುಲಕೋಟಿ ( ಸಾಮಾನ್ಯ 429),

ಹಾತಲಗೇರಿ – 3 ರಲ್ಲಿ ಗಂಗವ್ವ ಯಲ್ಲಪ್ಪ ಕಡೆಮನಿ ( ಪ. ಜಾ ಮಹಿಳೆ – 110) , ಹನುಮಂತಗೌಡ ಪಾಟಿಲ ( ಸಾಮಾನ್ಯ 328),
ಬಿಂಕದಕಟ್ಟಿ – 2 ರಲ್ಲಿ ತುಳಸಾ ತಿಮ್ಮನಗೌಡ್ರ ( ಸಾಮಾನ್ಯ ಮಹಿಳೆ -345), ವೆಂಕಟೇಶ ಕೋನಿ (ಸಾಮಾನ್ಯ – 370),
ಬಿಂಕದಕಟ್ಟಿ – 3 ರಲ್ಲಿ ಭೀಮವ್ವ ಸಿ ಬೇವಿನಕಟ್ಟಿ ( ಪ. ಜಾ ಮಹಿಳೆ – 419), ಅಶೋಕ ಮಲ್ಲಪ್ಪ ಕರೂರ (ಸಾಮಾನ್ಯ 432)

ಅಸುಂಡಿ – 1 ರಲ್ಲಿ ನೇತ್ರಾವತಿ ಎಂ. ಪೂಜಾರ ( ಪ.ಪಂ. ಮಹಿಳೆ – 288), ತಾಜುದೀನ ಹ ಓಲೇಕಾರ ( ಸಾಮಾನ್ಯ ಅ ವರ್ಗ 291), ಸೋಮರಡ್ಡಿ ಅ ರಾಮನಹಳ್ಳಿ ( ಸಾಮಾನ್ಯ 309),
ಕಬಲಾಯತಕಟ್ಟಿ ಯಲ್ಲಿ ಮೀರಾಬಾಯಿ ಮ ದೊಡ್ಡಮನಿ ( ಪ. ಜಾ ಮಹಿಳೆ – 324), ಠಾಕೂರ ದೇವಪ್ಪ ಲಮಾಣಿ ( ಪ. ಜಾ 335),
ಅಂತೂರ – 1 ರಲ್ಲಿ ಚನ್ನಬಸಪ್ಪ ಬ ಪತ್ತಾರ ( ಪ. ಪಂ. 332), ಪಾರವ್ವ ಈ ಯಡಿಕುಂಟಿ ( ಸಾಮಾನ್ಯ ಮಹಿಳೆ 327) ಅಲ್ಲಾಬಕ್ಷ ನದಾಫ್ ( ಸಾಮಾನ್ಯ 325)

ಲಕ್ಕುಂಡಿ – 1 ರಲ್ಲಿ ಸುಮಿತ್ರವ್ವ ಮ ರೋಣದ ( ಹಿಂ. ಅ ವರ್ಗ ಮಹಿಳೆ 320), ಪುಷ್ಪಾ ಶಿವನಗೌಡ ಪಾಟೀಲ ( ಸಾಮಾನ್ಯ ಮಹಿಳೆ 220), ಮುಳಗುಂದ ರೇ ಶೇಕಪ್ಪ ( ಸಾಮಾನ್ಯ 359)
ಎಚ್.ಎಸ್. ವೆಂಕಟಾಪುರ ದಲ್ಲಿ ರುದ್ರಗೌಡ ಪಾಟೀಲ ( ಹಿಂ. ಅ ವರ್ಗ 480), ಬಸನಗೌಡ ಚ ಗೌಡ್ರ ( ಸಾಮಾನ್ಯ 478), ಶ್ವೇತಾ ಷಣ್ಮುಖಪ್ಪ ಹುಡೇದ ( ಸಾಮಾನ್ಯ ಮಹಿಳೆ 297),

ಕುರ್ತಕೋಟಿ –3 ರಲ್ಲಿ ಬೇವಿನಮರದ ಯಲ್ಲಪ್ಪ ಅಡಿವೆಪ್ಪ (ಪ. ಪಂ. 317), ನಮಾಜಿ ಫರಿನಾಬಾನು ಷರೀಫ ಸಾಬ ( ಹಿಂ. ವರ್ಗ ಅ ಮಹಿಳೆ 443), ಮಲಕಾಜಪ್ಪ ಬ ಹೊಸಮನಿ – ( ಸಾಮಾನ್ಯ 547)
ಕುರ್ತಕೋಟಿ – 5 ರಲ್ಲಿ ಅಡರಕಟ್ಟಿ ಜಯಶ್ರೀ ಫಕೀರಪ್ಪ ( ಪ. ಜಾ ಮಹಿಳೆ 436), ಈರವ್ವ ಸಿ ಬಸಪ್ಪನವರ ( ಹಿಂ. ಅ ವರ್ಗ ಮಹಿಳೆ 558), ಅಪ್ಪಣ್ಣ ಅಮರಪ್ಪ ಇನಾಮತಿ- (ಸಾಮಾನ್ಯ 525)
ಪಾಪನಾಶಿ– ಕೀರ್ತಿ ಪ್ರಶಾಂತಗೌಡ ಪಾಟೀಲ ( ಸಾಮಾನ್ಯ ಮಹಿಳೆ 264), ಈಶಪ್ಪ ಅಮರಪ್ಪ ಇಟಗಿ ( ಸಾಮಾನ್ಯ 354),
ಹರ್ತಿ– 3 ರಲ್ಲಿ ಬಂಡಿವಡ್ಡರ ಕಸ್ತೂರೆವ್ವ ಹನುಮಂತಪ್ಪ ( ಪ. ಜಾ ಮಹಿಳೆ 214), ಅಸುಂಡಿ ದೇವಕ್ಕ ಬಸವರಾಜ ( ಹಿಂ. ಅ ವರ್ಗ ಮಹಿಳೆ 238), ಮಹೇಶ ಭೂ ಪಟ್ಟಣಶೆಟ್ಟಿ ( ಸಾಮಾನ್ಯ 392)

ಹುಯಿಲಗೋಳ– 3 ರಲ್ಲಿ ಕಾಳೆ ಪ್ರಕಾಶ ಮಿಲಿಂದ ( ಪ. ಜಾ 390), ಹೆಬ್ಬಳ್ಳಿ ಷರೀಫ ಮೌಲಸಾಬ ( ಹಿಂ. ಅ ವರ್ಗ 331), ಯಶೋಧಾ ಅಶೋಕ ಬೆಳಗಟ್ಟಿ ( ಸಾಮಾನ್ಯ ಮಹಿಳೆ – 212)
ಹುಲಕೋಟಿ– 1 ರಲ್ಲಿ ಕವಡಕ್ಕಿ ಲಕ್ಷ್ಮೀ ರವಿ ( ಹಿಂ. ಅ ವರ್ಗ ಮಹಿಳೆ 260), ತಹಶೀಲ್ದಾರ ಅಬ್ದುಲ್ ಕಲೀಮ್ ಸಾಬ ( ಸಾಮಾನ್ಯ 316),

ಶಿಗ್ಲಿ ಬಸ್ಯಾನ ಪತ್ನಿಗೆ 2 ಮತಗಳ ಗೆಲುವು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ನ್ಯಾಯಾಧೀಶರ ಮನೆ ಸೇರಿ ರಾಜ್ಯಾದ್ಯಂತ ಅನೇಕ ಕಳ್ಳತನ ಪ್ರಕರಣಗಳಡಿ ಜೈಲು ವಾಸ ಅನುಭವಿಸಿ ತನ್ನ ಪರವಾಗಿ ತಾನೇ ವಾದ ಮಂಡಿಸುವ ಮೂಲಕ ಗಮನ ಸೆಳೆದಿರುವ ಶಿಗ್ಲಿ ಬಸ್ಯಾ (ಬಸವರಾಜ್ ಗಡ್ಡಿ) ತನ್ನ ಬೇಡಿಕೆಗಳ ಈಡೇರಿಕೆಗಾಗಿ ಕೊರಳಿಗೆ ಪಟಾಕಿ ಸರ ಹಾಕಿಕೊಂಡು ಟವರ್ ಏರುವ, ಮರವೇರುವ ಮೂಲಕವೂ ಸುದ್ದಿಯಾಗಿದ್ದ. ಇತ್ತೀಚಿನ ದಿನಗಳಲ್ಲಿ ಈ ಗೊಂದಲಗಳಿಂದ ಹೊರಗುಳಿದಿದ್ದಾನೆ. ಈತನ ಪತ್ನಿ ಗುಲ್ಜಾರಾಬಾನು ಶೇಖ್ ಶಿಗ್ಲಿ ಗ್ರಾಪಂನ 1 ನೇ ವಾರ್ಡಿನಿಂದ ಕಣಕ್ಕಿಳಿದಿದ್ದರು. ಕಬ್ಬಿನ ರೈತ ಚಿತ್ರದಡಿ ಪತ್ನಿ ಪರವಾಗಿ ಮತಯಾಚನೆ ಮಾಡಿದ್ದ. ಮಹಿಳಾ ಅ, ವರ್ಗದ ಮೀಸಲಾತಿ ಇರುವ ಒಂದು ಸ್ಥಾನಕ್ಕೆ ಮೂವರು ಕಣದಲ್ಲಿದ್ದರು. ತುರುಸಿನ ಸ್ಪರ್ಧೆಯಲ್ಲಿ ಗುಲ್ಜಾರಾಬಾನು ಶೇಖ್ ಎರಡು ಮತಗಳಿಂದ ಜಯ ಗಳಿಸಿದ್ದಾರೆ.

ಚುನಾವಣೆಯಲ್ಲಿ ಯಾರಿಗೂ 1 ರೂಪಾಯಿ ಹಣ ಹಂಚಿಲ್ಲ. ಆ ಶಕ್ತಿಯೂ ನಮಗಿಲ್ಲ. ನನ್ನ ವಾರ್ಡಿನ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗುಲ್ಜಾರಾಬಾನು ಪ್ರತಿಕ್ರಿಯಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ: ತೃತೀಯ ಲಿಂಗಿಗೆ ಒಲಿದ ವಿಜಯಲಕ್ಷ್ಮಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮೈಸೂರು

ಗ್ರಾಮ ಪಂಚಾಯತ್‌ ಚುನಾವಣೆಯ ಕೆ.ಆರ್‌.ನಗರ ತಾಲ್ಲೂಕಿನ ಸಾಲಿಗ್ರಾಮದ 7ನೇ ಬ್ಲಾಕ್‌ನಿಂದ ಸ್ಪರ್ಧಿಸಿದ್ದ ತೃತೀಯಲಿಂಗಿ ದೇವಿಕಾ ಅವರು ಗೆಲುವು ಸಾಧಿಸಿದ್ದಾರೆ.

ಮೈಸೂರಿನ ಕೆ.ಆರ್.ನಗರ ತಾಲ್ಲೂಕು ಸಾಲಿಗ್ರಾಮದ 7ನೇ ವಾರ್ಡ್‌ನಲ್ಲಿ ಎಸ್.ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಮಂಗಳಮುಖಿ ದೇವಿಕಾ ಸ್ಪರ್ಧಿಸಿದ್ದರು.ದೇವಿಕಾ ಕೇವಲ ಐದು ಮತಗಳಿಂದ ಗೆದ್ದಿದ್ದಾರೆ.

ಹಳೆ ನೋಟುಗಳ ಎಕ್ಸಚೆಂಜ್ ಜಾಲ ಪತ್ತೆ: ಡಾಕ್ಟರ್, ಸಂಘಟಕರ ಬಂಧನ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ನೋಟು ಅಮಾನ್ಯದಿಂದ ಮೌಲ್ಯ ಕಳೆದುಕೊಂಡಿರುವ 5 ನೂರು ಮತ್ತು ಸಾವಿರ ರೂಪಾಯಿಗಳ ಎಕ್ಸಚೆಂಜ್ ಮಾಡುತ್ತಿದ್ದ ಜಾಲವೊಂದು ಕೊಪ್ಪಳದಲ್ಲಿ ಸಿಕ್ಕು ಬಿದ್ದಿದೆ. ಮೈಸೂರು ಮೂಲದ ಇಬ್ಬರು ಹಾಗೂ ಕೊಪ್ಪಳ ಜಿಲ್ಲೆಯ ಆರ್ ಎಂಪಿ ವೈದ್ಯ ಸೇರಿದಂತೆ ಇತರೆ ೫ ಜನರನ್ನು ಪೋಲಿಸರು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆಯೇ ಎಲ್ಲ ನೋಟುಗಳನ್ನು ಸರಕಾರ ವಾಪಸ್ ಪಡೆದಿತ್ತು. ಇದರ ಚಲಾವಣೆಯನ್ನು ರದ್ದು ಮಾಡಿತ್ತು. ಆದರೆ ಈಗಲೂ ಕೆಲವೆಡೆ ಅಕ್ರಮವಾಗಿ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುವ ಜಾಲಗಳು ಸಕ್ರೀಯವಾಗಿವೆ.

ರಾಜ್ಯದ ವಿವಿಧೆಡೆ ಇಂತಹ ಜಾಲಗಳು ಸಿಕ್ಕಿ ಬೀಳುತ್ತಲೇ ಇವೆ. ಕೊಪ್ಪಳದ ಖಾಸಗಿ ಲಾಡ್ಜವೊಂದರಲ್ಲಿ ತಂಗಿದ್ದ ಗುಂಡ್ಲುಪೇಟೆಯ ಮಂಜುನಾಥ, ಬೆಂಗಳೂರಿನ ಧನಲಕ್ಷ್ಮೀ ಸೇರಿದಂತೆ ಕೊಪ್ಪಳದ ಅಸೀಪ್ ಅಲಿ, ರಫಿಕ್, ಟಿಕ್ಕೆ ನಾಯಕ, ಹಿರೇಬಗನಾಳದ ಆರ್ ಎಂಪಿ ವೈದ್ಯ ವೀರೇಶ ಗಟ್ಟಿ ಇವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಹನುಮಂತ ಎನ್ನುವ ವ್ಯಕ್ತಿ ಪರಾರಿಯಾಗಿದ್ದಾನೆ.

ಬಂಧಿತರಿಂದ 65ಸಾವಿರ ಮೌಲ್ಯದ ಹಳೆಯ 5 ನೂರು ಮತ್ತು ಸಾವಿರ ರೂಪಾಯಿಯ 130 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ನೋಟುಗಳನ್ನು ಪೂಜೆ ಮಾಡಿದ್ರೆ ಹೊಸ ನೋಟುಗಳಾಗುತ್ತವೆ, ದ್ವಿಗುಣವಾಗುತ್ತವೆ ಎಂದು ನಂಬಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಬಂಧಿತರಲ್ಲಿ ಹೆಚ್ಚಿನವರು ಕನ್ನಡಪರ ಸಂಘಟನೆಯೊಂದಕ್ಕೆ ಸೇರಿದವರು ಎಂದು ಹೇಳಲಾಗಿದೆ. ಕೊಪ್ಪಳ ನಗರ ಠಾಣೆಯ ಸಿಪಿಐ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ಪೋಲಿಸರ ತಂಡ ಕಾರ್ಯಾಚರಣೆ ಮಾಡಿ ಬಂಧಿತರಿಂದ 6 ಮೊಬೈಲ್, ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು. ಆರೋಪಿತರನ್ನು ನ್ಯಾಯಾದೀಶರ ಮುಂದೆ ಹಾಜರುವಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಸ್ಟಿಂಗ್ ಆಪರೇಷನ್ ನಡೆಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದ್ದು ಹೆಚ್ಚಿನ ತನಿಖೆ ನಡೆದರೆ ಈ ಜಾಲದ ಆಳ ಅಗಲ ತಿಳಿಯಲಿದೆ.

ಮತವನ್ನ ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮತ ಎಣಿಕೆ ವೇಳೆ ಬ್ಯಾಲೇಟ್ ಪೇಪರ್ ನಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮತ ಚಲಾಯಿಸಿದ್ದನ್ನು ಚುನಾವಣಾ ಅಧಿಕಾರಿ ಮತವನ್ನ ಸ್ಕೇಲ್ ನಿಂದ ಅಳೆದು ಗಮನ ಸೆಳೆದರು.
ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆಯ ವೇಳೆ ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದನು. ಈ ಮತ ಎಣಿಕೆಯಿಂದ ಹೊರಗಿಟ್ಟು ಮತ ಎಣಿಕೆ ಮಾಡಲಾಗಿತ್ತು. ಕೊನೆ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಚಲಾಯಿಸಲಾಗಿದ್ದ ಮತ ಎಣಿಕೆ ವೇಳೆ ಚುನಾವಣಾಧಿಕಾರಿ ಆ ಮತ ಸ್ಕೇಲ್ ನಿಂದ ಅಳತೆ ಮಾಡಿ ಟಿವಿ ಚಿನ್ಹೆಯ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆಯಲ್ಲಿ ಟಿವಿ ಅಭ್ಯರ್ಥಿಗೆ ಮತ ಎಂದು ಘೋಷಣೆ ಮಾಡಿದರು.

ಲಾರಿ ಚಾಲಕರ ಮೇಲಿನ ಹಲ್ಲೆ ಪ್ರಕರಣ, ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ: ನಾಲ್ವರು ದರೋಡೆಕೋರರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಲಾರಿ ಚಾಲಕರ ನಿದ್ದೆಗೆಡಿಸಿದ್ದ ನಾಲ್ಕು ಜನ ದರೋಡೆಕೋರರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಭರ್ಜರಿ ಬೇಟೆಯಾಡಿದ್ದಾರೆ.

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮೋಡಿಕೇರ, ಲಕ್ಷ್ಮಣ ಮೋಡಿಕೇರ, ದುರಗಪ್ಪ ಮೋಡಿಕೇರ, ಶಿವಾಜಿ ಮೋಡಿಕೇರ ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸರು ಬಂಧಿತರಿಂದ ಕಬ್ಬಿಣದ ರಾಡ್‌ಗಳು, ಖಾರದ ಪುಡಿ, ಖಾಲಿ ಬಾಟಲಿಗಳು, ಹಗ್ಗ ಹಾಗೂ ಸಣ್ಣ ಕಂದಲಿಯನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಈ ನಾಲ್ವರು ಖದೀಮರು ಕಳೆದ ಒಂದು ವಾರದಿಂದ ಲಾರಿಗಳ ಚಾಲಕರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ದೊಚುತ್ತಿದ್ದರು. ಡಿ.25 ರಂದು ಗದಗ ಗ್ರಾಮೀಣ ಹಾಗೂ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿತ ಆರೋಪಿತರು ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

ಪ್ರಕರಣ ಭೇದಿಸುವ ಸಲುವಾಗಿ ಡಿಎಸ್‌ಪಿ, ಸಿಪಿಐ ಗದಗ ಗ್ರಾಮೀಣ, ಸಿಪಿಐ ಗದಗ ಶಹರ, ಸಿಪಿಐ ಶಿರಹಟ್ಟಿ ವೃತ್ತ ಇವರ ನೇತೃತ್ವದಲ್ಲಿ ವಿಶೇಷ ಗಸ್ತು ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಸೋಮವಾರ(ಡಿ.28) ರಾತ್ರಿ ನಗರದ ಲಕ್ಷೇಶ್ವರ ರಸ್ತೆಯ ರಾಧಾಕೃಷ್ಣನ್ ನಗರ ಕ್ರಾಸ್ ಸಮೀಪ ನಿಂತಿದ್ದ ದರೋಡೆಕೋರರಿಗೆ ವಿಶೇಷ ಗಸ್ತು ಕರ್ತವ್ಯದಲ್ಲಿದ್ದ ಗದಗ ಗ್ರಾಮೀಣ ಪಿಎಸ್‌ಐ ಅಜಿತ್‌ಕುಮಾರ್ ಹೊಸಮನಿ ನೇತೃತ್ವದ ತಂಡ ಕೈಗೆ ಕೋಳ ತೊಡಿಸಿದೆ. ಇವರಲ್ಲದೇ ಇನ್ನೂ ನಾಲ್ಕು ಜನ ಆರೋಪಿತರಿದ್ದು, ಬಂಧಿಸುವ ವೇಳೆ ಬೊಲೇರೋ ವಾಹನ ಸಮೇತ ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ತನಿಖಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಡಿಎಸ್‌ಪಿ ಎಸ್.ಕೆ.ಪ್ರಹ್ಲಾದ, ಗದಗ ಗ್ರಾಮೀಣ ಸಿಪಿಐ ಆರ್.ಎಸ್.ಕಪ್ಪತನವರ, ಗದಗ ಶಹರ ಸಿಪಿಐ ಪಿ.ವಿ.ಸಾಲಿಮಠ, ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ, ಪಿಇಎನ್ ಠಾಣೆಯ ಮಹಾಂತೇಶ ಪಿ.ಐ., ಪಿಎಸ್‌ಐ ಸುನೀಲ್ ನಾಯಕ, ಸಿಬ್ಬಂದಿಗಳಾದ ಆರ್.ಪಿ.ಹಿರೇಮಠ, ಪಿ.ಎಸ್.ಗಾಣಿಗೇರ, ಎಂ.ರಂಗರೇಜ್, ಡಿ.ಎಸ್.ನದಾಫ್, ಗಣೇಶ್ ಗ್ರಾಮ ಪುರೋಹಿತ, ಗಂಗಾಧರ ಕರಲಿಂಗಣ್ಣವರ, ಪಿ.ಎಸ್.ಶೆಟ್ಟೆಣ್ಣವರ, ಎಸ್.ಎ.ಗುಡ್ಡಿಮಠ, ಎ.ಪಿ.ದೊಡ್ಡಮನಿ, ಎಂ.ವಿ.ಹೂವಣ್ಣ ಸೇರಿದಂತೆ ಸಿಬ್ಬಮದಿಗಳ ಕರ್ತವ್ಯವನ್ನು ಎಸ್‌ಪಿ ಯತೀಶ್ ಎನ್. ಶ್ಲಾಘಿಸಿದರು.

ಜೈಲು ವಾಸ ಅನುಭವಿಸಿದ್ದ ಆರೋಪಿಗಳು

ಈ ನಾಲವ್ರು ಆರೋಪಿಗಳು ಕಳೆದ ಜುಲೈನಲ್ಲಿ ಪೊಲೀಸರು, ವಾಚ್‌ಮನ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದರು, ಈ ವೇಳೆ ಸಿಕ್ಕಿಹಾಕಿಕೊಂಡು ಜೈಲು ವಾಸ ಅನುಭವಿಸುತ್ತಿದ್ದರು. ಕಳೆದ ಹನ್ನೆರಡು ದಿನಗಳ ಹಿಂದಷ್ಟೇ (ಡಿ.17) ಜಾಮೀನು ಮೇಲೆ ಹೊರ ಬಂದಿದ್ದರು. ಜೈಲಿನಿಂದ ಹೊರ ಬರುತ್ತಿದ್ದಂತೆ ಆರೋಪಿಗಳು ತಮ್ಮ ಹಳೇ ಚಾಳಿ ಮುಂದುವರೆಸಿದ್ದರು. ಇನ್ನು ಆರೋಪಿತರು ಕ್ಲರ್ಕ್ ಇನ್ ಹೋಟೆಲ್, ಪಾರ್ಶ್ವನಾಥ ಶಾಲೆ ಬಳಿ, ಶಿರಹಟ್ಟಿ ಪಟ್ಟಣದಲ್ಲೂ ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.

error: Content is protected !!