Home Blog Page 3098

ನಿನ್ನೆಗಿಂತಲೂ ಇಂದು ಹೆಚ್ಚು ಆತಂಕ ಮೂಡಿಸಿದ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ನಿನ್ನೆಗಿಂತಲೂ ಇಂದು ಕೊರೊನಾ ಆತಂಕ ಮೂಡಿಸಿದೆ. ಇಂದು ರಾಜ್ಯದಲ್ಲ 10,959 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 20,246 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಪಾಸಿಟಿವಿಟಿ ರೇಟ್ ಮತ್ತಷ್ಟು ಕಡಿಮೆಯಾಗಿದ್ದು, ಶೇ.6.68ಕ್ಕೆ ಇಳಿಕೆಯಾಗಿದೆ. ಮಹಾಮಾರಿಗೆ 192 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇನ್ನೂ 2,15,525 ಸಕ್ರಿಯ ಪ್ರಕರಣಗಳಿವೆ. ಇಂದು 20,246 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರಾಜ್ಯದಲ್ಲಿ ಇದುವರೆಗೂ 27,28,248 ಕೊರೊನಾ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಇಂದು ಬಾಗಲಕೋಟೆ 96, ಬಳ್ಳಾರಿ 211, ಬೆಳಗಾವಿ 341, ಬೆಂಗಳೂರು ಗ್ರಾಮಾಂತರ 385, ಬೆಂಗಳೂರು ನಗರ 2,395, ಬೀದರ್ 9, ಚಾಮರಾಜನಗರ 254, ಚಿಕ್ಕಬಳ್ಳಾಪುರ 268, ಚಿಕ್ಕಮಗಳೂರು 339, ಚಿತ್ರದುರ್ಗ 200, ದಕ್ಷಿಣ ಕನ್ನಡ 594, ದಾವಣಗೆರೆ 227, ಧಾರವಾಡ 275,

ಗದಗ 95, ಹಾಸನ 745, ಹಾವೇರಿ 97, ಕಲಬುರಗಿ 48, ಕೊಡಗು 216, ಕೋಲಾರ 239, ಕೊಪ್ಪಳ 157, ಮಂಡ್ಯ 397, ಮೈಸೂರು 1,163, ರಾಯಚೂರು 20, ರಾಮನಗರ 50, ಶಿವಮೊಗ್ಗ 562, ತುಮಕೂರು 662, ಉಡುಪಿ 413, ಉತ್ತರ ಕನ್ನಡ 312, ವಿಜಯಪುರ 158 ಮತ್ತು ಯಾದಗಿರಿಯಲ್ಲಿ 31 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಮತ್ತೆ ನೂರರ ಗಡಿಗೆ ಸೋಂಕು, ಹಾವು-ಏಣಿ ಆಟ ಆಡುತ್ತಿರುವ ಕೊರೊನಾ!

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ನೂರರ ಗಡಿಗೆ ಬಂದು ನಿಂತಿದೆ. ನಿನ್ನೆಯಷ್ಟೆ ನರಗುಂದ ತಾಲೂಕಿನಲ್ಲಿ ಸೋಂಕು ಕಾಣಸಿರಲಿಲ್ಲ. ಮತ್ತೆ ಇವತ್ತು ಹತ್ತು ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ನರಗುಂದ ಸೋಂಕಿನಿಂದ ಮುಕ್ತವಾಗಿಲ್ಲ ಅನ್ನೋದು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ.

ಕಳೆದ ಶುಕ್ರವಾರದಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖದತ್ತ ಸಾಗಿದ್ದು, ಬುಧವಾರ 95 ಜನರಿಗೆ ಸೋಂಕು ತಗುಲಿದ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು 95 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ.

ಇಂದು 95 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25108 ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -31, ಮುಂಡರಗಿ-14, ನರಗುಂದ-10, ರೋಣ-19, ಶಿರಹಟ್ಟಿ-19, ಹೊರಜಿಲ್ಲೆಯ-02 ಸೇರಿದಂತೆ 95 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 279 ಕ್ಕೇರಿದೆ.

ಗದಗ ಶಹರದ ಕಾಶಿವಿಶ್ವನಾಥ ನಗರದ ನಿವಾಸಿ 80 ವರ್ಷದ ಮಹಿಳೆ ಜೂನ್-03 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -07 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ರಾಜೀವಗಾಂಧಿ ನಗರ ನಿವಾಸಿ 72 ವರ್ಷದ ವ್ಯಕ್ತಿ ಜೂನ್- 06 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 07 ರಂದೇ ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 248 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23639 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1190 ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 115 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗಡ್ಡ ಬೋಳಿಸಿಕೊಳ್ಳಲು ಮೋದಿಗೆ 100 ರೂ. ಮನಿ ಆರ್ಡರ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಪ್ರಧಾನಿ ನರೇಂದ್ರ ಮೋದಿಯವರಿಗೆ 100 ರೂ.ಗಳ ಮನಿ ಆರ್ಡರ್ ಕಳುಹಿಸಿರುವ ಮಹಾರಾಷ್ಟ್ರದ ಬಾರಾಮತಿಯಲ್ಲಿ ಚಹಾ ಮಾರುವ ವ್ಯಕ್ತಿಯೊಬ್ಬ, ಉದ್ದನೆಯ ಗಡ್ಡವನ್ನು ಬೋಳಿಸಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿದ್ದಾನೆ!

ಕೋವಿಡ್-ಪ್ರೇರಿತ ಲಾಕ್ಡೌನ್ ನಿಂದಾಗಿ ಅಸಂಘಟಿತ ವಲಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದರಿಂದ ಅಸಮಾಧಾನಗೊಂಡ ಇಂದಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರಿನ ಸಣ್ಣ ಚಹಾ ಅಂಗಡಿ ಮಾಲಕ ಅನಿಲ್ ಮೋರೆ, ‘ಪ್ರಧಾನಿ ಮೋದಿ ಗಡ್ಡವನ್ನು ಬೆಳೆಸಿದ್ದಾರೆ. ಅವರು ದೇಶದ ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ದೇಶದ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ತ್ವರಿತಗೊಳಿಸಲು ಪ್ರಯತ್ನಿಸಬೇಕು ಹಾಗೂ ಅಸ್ತಿತ್ವದಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದ್ದಾನೆ.

ನಾನು ಉಳಿತಾಯ ಮಾಡಿರುವ 100 ರೂ.ಗಳನ್ನು ಅವರಿಗೆ ರೂ.ಕಳುಹಿಸಿದ್ದೇನೆ. ಅವರು ತಮ್ಮ ಗಡ್ಡವನ್ನು ಕ್ಷೌರ ಮಾಡಿಕೊಳ್ಳಲಿ. ಸಾಂಕ್ರಾಮಿಕ ರೋಗದಿಂದಾಗಿ ದಿನದಿಂದ ದಿನಕ್ಕೆ ಬಡವರ ಸಮಸ್ಯೆಗಳು ಬೆಳೆಯುತ್ತಿರುವುದರಿಂದ ಅವರ ಗಮನ ಸೆಳೆಯಲು ಈ ಮಾರ್ಗ ತುಳಿದಿದ್ದೇನೆ’ ಎಂದು ಹೇಳಿದ್ದಾನೆ.

ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ. ಹಾಗೂ ಲಾಕ್ ಡೌನ್ ನಿಂದ ಹಾನಿಗೊಳಗಾದ ಕುಟುಂಬಗಳಿಗೆ 30,000 ರೂ.ಗಳ ಆರ್ಥಿಕ ನೆರವು ನೀಡುವಂತೆ ಪತ್ರದಲ್ಲಿ ಮೋರೆ ಒತ್ತಾಯಿಸಿದ್ದಾನೆ.

ಗ್ಯಾಸ್‌ ಡೀಲರ್ ಶಿಪ್ ಕೊಡುವುದಾಗಿ ವ್ಯಾಪಾರಿಗೆ 16 ಲಕ್ಷ ರೂ, ವಂಚನೆ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಮುಂಬೈನ ವ್ಯಕ್ತಿಯೊಬ್ಬ ಗಣ್ಯ ವ್ಯಾಪಾರಿಯೊಬ್ಬರಿಗೆ ಗ್ಯಾಸ್ ಡೀಲರ್ ಶಿಪ್ ಕೊಡುವುದಾಗಿ ಹಣ ಪಡೆದು ಮೋಸ‌ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುಂಡರಗಿಯ ಗಣ್ಯ ವ್ಯಾಪಾರಸ್ಥ ರಾಜಕುಮಾರ ಪರುತಪ್ಪ ಮುಳ್ಳೂರು ಎಂಬುವವರಿಗೆ ಮುಂಬೈನ ಆಶೀಸ್ ಶಿಂಕ್ಲಾ ಎಂಬಾತ 2020 ಆಗಸ್ಟ್ ತಿಂಗಳಿನಲ್ಲಿ ಫೇಸ್‌ಬುಕ್‌ ನಲ್ಲಿ ವಿವಿಧ ಗ್ಯಾಸ್ ಡೀಲರ್ ಶಿಪ್ ಗಾಗಿ ಜಾಹೀರಾತು ನೀಡಿ ಆನ್ಲೈನ್ ಅರ್ಜಿ ಹಾಕಲು ತಿಳಿಸಿದ್ದ.

ಜಾಹೀರಾತು ಗಮನಿಸಿದ ಸ್ಥಳೀಯ ವ್ಯಾಪಾರಸ್ಥ ರಾಜಕುಮಾರ ಎಂಬುವವರು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿದ್ದರು. ಆದಾದ ನಂತರ ವ್ಯಾಪಾರಿ ರಾಜಕುಮಾರ ಅವರಿಗೆ ಆರೋಪಿ ಆಶೀಸ್, ಫಾರ್ಮ್ ಫೀಸ್, ಪ್ರೊಸೆಸ್ಸಿಂಗ್ ಫೀಸ್, ಜಿಎಸ್ಟಿ, ಎನ್ಒಸಿ ಅಂತ ಹೇಳಿ ಹಂತ -ಹಂತವಾಗಿ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 16ಲಕ್ಷ , 22 ಸಾವಿರ ರೂ,ಗಳನ್ನು ನೆಫ್ತ್ ಹಾಗೂ ಫೋನ್ ಪೇ ಮೂಲಕ ವರ್ಗಾವಣೆ ಮಾಡಿಸಿಕೊಂಡು ಗ್ಯಾಸ್ ಡೀಲರ್ ಶಿಪ್ ಕೊಡದೇ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾನೆ.

ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ ಆರೋಪಿ ಆಶೀಸ್ ಬಂಧನಕ್ಕೆ ಜಾಲ ಬೀಸಿದ್ದಾರೆ.

ರೈತರಿಗೆ ಗೊಬ್ಬರ, ಬೀಜ ಉಚಿತವಾಗಿ ನೀಡಲು ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕಿನಿಂದ ಅನೇಕ ವರ್ಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ರೈತಾಪಿ ವರ್ಗದ ಜನರ ಸಂಕಷ್ಟ ಹೇಳತೀರದು. ಹೀಗಾಗಿ ಸರಕಾರ ಮುಂಗಾರು ಬಿತ್ತನೆಗೆ ರೈತ ಸಮುದಾಯಕ್ಕೆ ಬೀಜ ಹಾಗೂ ಗೊಬ್ಬರ‌ ಉಚಿತವಾಗಿ ನೀಡಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ಸಂಯೋಜಕ ರಾಜು ಪೆಂಡಾರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ಲಾಕ್ ಡೌನ್ ನಿಂದ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೈಯಲ್ಲಿ ಹಣವಿಲ್ದೇ ಪರಿತಪಿಸುವಂತಹ ಸಮಯದಲ್ಲಿ ಸರಕಾರ ಅವರ ಕೈ ಹಿಡಿಯಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಕೃಷಿ ಸಚಿವರು ಕೂಡಲೇ ಈ ಬಗ್ಗೆ ಗಮನ ಹರಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಪೆಂಡಾರ ಮನವಿ ಮಾಡಿದ್ದಾರೆ.

ಕೊರೊನಾ ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಕರೆಂಟ್ ಉತ್ಪತ್ತಿ!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿರುವ ವಿಚಿತ್ರ ಘಟನೆ ನಡೆದಿದೆ.

ವ್ಯಾಕ್ಸಿನ್ ಪಡೆದವರ ದೇಹದಲ್ಲಿ ಈ ರೀತಿಯಾಗುತ್ತಿರುವ ವಿಚಿತ್ರ ಘಟನೆ ನಡೆದಿದೆ. ಈ ಅಚ್ಚರಿಯ ಘಟನೆ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ. ಕೋವಿಶೀಲ್ಡ್ ಪಡೆದ ಯುವಕ, ಯುವತಿಯ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿದೆ. ಹೀಗೆ ವ್ಯಾಕ್ಸಿನ್ ಪಡೆದುಕೊಂಡವರಿಂದ ಈ ರೀತಿಯ ವಿಚಿತ್ರ ಘಟನೆ ನಡೆಯುತ್ತಿದೆ. ಇವರಿಬ್ಬರ ದೇಹದಿಂದ 9 ವ್ಯಾಟ್ ನ ಬಲ್ಬ್ ಉರಿಯುತ್ತಿವೆ.

ವ್ಯಾಕ್ಸಿನ್ ಹಾಕಿಸಿಕೊಂಡ ಅಣ್ಣ ಮತ್ತು ತಂಗಿಯ ದೇಹದಲ್ಲಿ‌ ಕರೆಂಟ್ ಕಾಣಿಸಿಕೊಂಡಿದೆ. ವ್ಯಾಕ್ಸಿನ್ ಹಾಕಿದ ತೋಳಿಗೆ ಬಲ್ಬ್ ತಾಗಿಸಿದರೆ ಬಲ್ಬ್ ಉರಿಯುತ್ತಿದೆ. ಸುಮಂತ ಹಾಗೂ ಆತನ ತಂಗಿಯ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿದೆ. ವ್ಯಾಕ್ಸಿನ ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ  ಚಮತ್ಕಾರ ನಡೆದಿದೆ.

ಇವರ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿರುವುದಕ್ಕೆ ಯವುದೇ ವೈಜ್ಞಾನಿಕ ಕಾರಣ ತಿಳಿದು ಬಂದಿಲ್ಲ. ಇದು ಕಾಕತಾಳಿಯ ಇರಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ವೈಜ್ಞಾನಿಕವಾಗಿ ಪರಿಶೀಲನೆ ಮಾಡಿದ ನಂತರವೇ ವಿದ್ಯುತ್ ನ ಉತ್ಪತ್ತಿಯ ಕುರಿತು ಸಂಪೂರ್ಣವಾಗಿ ತಿಳಿದು ಬರಲು ಸಾಧ್ಯ.

ಸಿಂಧೂರಿ ಸಿನಿಮಾ ಬಂದರೆ, ಬಡ ರೈತನ ಮಗ ಐಎಎಸ್ ಅಧಿಕಾರಿ ಎಂಬ ಚಿತ್ರ ನಾವು ತೆಗೆಯುತ್ತೇವೆ – ಸಾ.ರಾ. ಮಹೇಶ್

ವಿಜಯಸಾಕ್ಷಿ ಸುದ್ದಿ, ಮೈಸೂರು

ನಾನು ಹತ್ತು ದಾಖಲೆಗಳ ಸಮೇತ ಗಂಭೀರ ಆರೋಪ ಮಾಡುತ್ತ ಬಂದಿದ್ದೇನೆ. ಒಂದೇ ಒಂದು ಗುಂಟೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿದರೆ ನಾನೆ ವರ್ಗಾವಣೆ ರದ್ದು ಮಾಡಿ ಎಂದು ಮನವಿ‌ ಮಾಡುತ್ತೇನೆ. ಈಗಲೂ ನಿಮ್ಮ ಬಳಿ ಏನಿದೆ ಸರ್ಕಾರಕ್ಕೆ ವರದಿ ಕೊಡಿ ಎಂದು ಶಾಸಕ ಸಾ.ರಾ. ಮಹೇಶ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರೋಹಿಣಿ ವರ್ಗಾವಣೆ ಬಗ್ಗೆ ಸಾ.ರಾ.ಮಹೇಶ್ ಕಾರಣ ಎಂಬ‌ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯನ್ನು ಸರಿಯಾಗಿ ಮಾಡದ ಪರಿಣಾಮ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಮೈಸೂರಿನ ಬೆಳವಣಿಗೆಗಳ‌ ಬಗ್ಗೆ ನೀವು ಯಾಕೆ ಧ್ವನಿ‌ ಎತ್ತಲಿಲ್ಲ? ಮೈಸೂರು ಜಿಲ್ಲಾಧಿಕಾರಿಗೆ ಕಳಂಕ ತರಲು ಯತ್ನಿಸಿದ್ದಾರೆ ಎಂದು ಆರೋಪಿಸುತ್ತಿರಲ್ಲ, ರೋಹಿಣಿ ಕೈಗೊಂಡ ಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ನೀವು ಅಷ್ಟೊಂದು ಖಡಕ್‌ ಆಗಿದ್ದರೆ ವರ್ಗಾವಣೆ ಬಳಿಕವೂ ಸರ್ಕಾರಿ ಕಾರಿನಲ್ಲಿ ಹೋಗಿ ಸಿಎಂ ಭೇಟಿಯಾಗಿದ್ದು ಏಕೆ? ಶಿಲ್ಪಾ ನಾಗ್ ವರ್ಗಾವಣೆ ಆದ ಮೇಲೆ ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಆದರೆ, ನೀವು ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇಲ್ಲೇ ಗೊತ್ತಾಗುತ್ತದೆ ನಿಮ್ಮ ನಡವಳಿಕೆ ಏನು ಎಂದು? ನೀವು ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆದು ಪ್ರಚಾರ ಪಡೆಯುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.

ಆ ನಕಲಿ ಖಾತೆಗಳಲ್ಲಿಯೇ ಅಕ್ರಮ ಭೂ ಮಾಫಿಯಾ ದಾಖಲೆ ಬಿಡುಗಡೆ ಮಾಡಿ, ಕ್ಯಾಬಿನೆಟ್ ಸಚಿವರ ನಿವಾಸ ನವೀಕರಣಕ್ಕೆ ರೂ. 2 ಲಕ್ಷ ಮಾತ್ರ ಅನುದಾನ ಬರುತ್ತದೆ. ಆದರೆ, ರೂ. 65 ಲಕ್ಷ ವೆಚ್ಚದಲ್ಲಿ ಸ್ವಿಮ್ಮಿಂಗ್‌ಪೂಲ್, ಜಿಮ್‌ ನಿರ್ಮಾಣ ಮಾಡಲಾಗಿದೆ. ಇಷ್ಟೊಂದು ಹಣ ಖರ್ಚು ಮಾಡಲು ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಅವರು, ಸ್ವಿಮ್ಮಿಂಗ್ ಮಾಡಲು ಕುಡಿಯುವ ನೀರನ್ನು ಬಳಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ‌ ಮನೆಗೆ ಮೂರು ವಿದ್ಯುತ್ ಮೀಟರ್‌ ಗಳಿವೆ. ಅವರು ಅತಿ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ರೂ. 42,371 ಹಾಗೂ ಜೂನ್ ತಿಂಗಳಲ್ಲಿ ರೂ. 36,406 ವಿದ್ಯುತ್ ಬಿಲ್ ಬಂದಿದೆ. ಇದು ದಿ ಗ್ರೇಟ್ ಖಡಕ್ ಸಿಂಗಂ ಆಫೀಸರ್ ಮಾಡುವ ಕೆಲಸನಾ? ಯಾವ ಮಂತ್ರಿ ಮನೆಯಲ್ಲಿಯೂ ರೂ. 50 ಸಾವಿರದಷ್ಟು ವಿದ್ಯುತ್ ಬಿಲ್ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಭೂಮಾಫಿಯಾದಿಂದಾಗಿ ನನ್ನ ವರ್ಗಾವಣೆ ಮಾಡಲಾಗಿದೆ ಎಂದು ಸಿಂಧೂರಿ ಆರೋಪಿಸಿದ್ದು, ನಿಮ್ಮ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಸಿಎಂ ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿ. ಈ ರೀತಿ ಪ್ರಚಾರಪ್ರಿಯೆ ಅವರನ್ನು ನಾನು ಎಲ್ಲಿಯೂ ಕಂಡಿಲ್ಲ. ಹೆಣ್ಣು ಮಕ್ಕಳಿಗೆ ತಾಯಿ ಹೃದಯ ಅಂತಾರೆ. ಆದರೆ, ಇವರಲ್ಲಿ ತಾಯಿ ಹೃದಯ ನೋಡಿಯೇ ಇಲ್ಲ. ಸಿಂಧೂರಿ ಲೋಪ ದೋಷಗಳ ಬಗ್ಗೆ ತನಿಖೆ ನಡೆಸಬೇಕು. ತನಿಖೆ‌ ನಡೆಸದಿದ್ದರೆ, ಇಷ್ಟಕ್ಕೆ ಬಿಡುವುದಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅದೇನೋ ಈಗ ಫಿಲಂ ತೆಗೆಯುತ್ತಾರಂತೆ. ಕರ್ನಾಟಕದ ಜನ ಸ್ವಾಭಿಮಾನಿಗಳು. ಪಿಕ್ಚರ್ ರಿಲೀಸ್ ಆಗಲಿ ನಾನು ನೋಡುತ್ತೇನೆ. ಬಡ ರೈತನ ಮಗ ಐಎಎಸ್ ಅಧಿಕಾರಿಯ ಬಗ್ಗೆ ಸಿಬಿಐ ಸಲ್ಲಿಸಿರುವ ರಿಪೋರ್ಟನ್ನು ನಾವು ತೆಗೆಯುತ್ತೇವೆ. ನಾವು ಬಡ ರೈತನ ಮಗ ಐಎಎಸ್ ಅಧಿಕಾರಿ ಜೀವನಗಾಥೆ ನಾವು ಚಿತ್ರ ರೂಪದಲ್ಲ ತೆಗೆಯುತ್ತೇವೆ ಎಂದು ಸಾ.ರಾ. ಗೋವಿಂದ್, ರೋಹಿಣಿ ಸಿಂಧೂರಿಗೆ ವಾರ್ನಿಂಗ್ ಮಾಡಿದ್ದಾರೆ.

ಒಂದೇ ಬಾರಿಗೆ ಹತ್ತು ಮಕ್ಕಳನ್ನು ಹೆತ್ತ ತಾಯಿ!

ವಿಜಯಸಾಕ್ಷಿ ಸುದ್ದಿ, ಸೌತ್ ಆಫ್ರಿಕಾ

ಇಲ್ಲಿಯವರೆಗೆ ನಾಲ್ಕೈದು ಮಕ್ಕಳಿಗೆ ತಾಯಿ ಒಟ್ಟಿಗೆ ಜನ್ಮ ನೀಡಿರುವ ಘಟನೆಯನ್ನು ನಾವು ಕಂಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಇಲ್ಲೊಬ್ಬರು ತಾಯಿ ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ.

ಸೌತ್ ಆಫ್ರಿಕಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಏಕಕಾಲಕ್ಕೆ ಹತ್ತು ಕಂದಮ್ಮಗಳಿಗೆ ಮಹಿಳೆಯೊಬ್ಬರು ಜೀವ ನೀಡಿದ್ದಾರೆ. ಈ ಮೂಲಕ ಹೊಸ ಗಿನ್ನಿಸ್ ದಾಖಲೆಗೆ ಅವರು ಸಾಕ್ಷಿಯಾಗಿದ್ದಾರೆ. ಈ ಹಿಂದೆ ಮಲಿಯಾನ್ ಹಲೀಮಾ ಎಂಬ ಮೊರಕ್ಕೋದ ತಾಯಿ, ಒಂಭತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಈ ಯುವತಿ ಸರಿಗಟ್ಟಿದ್ದಾರೆ. ಇವರು ಹತ್ತು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಹಿಂದಿನ ಜನರು ಒಟ್ಟಾರೆ ಐದಾರು ಮಕ್ಕಳನ್ನು ಪಡೆಯುತ್ತಿದ್ದರು. ಸದ್ಯ ಈಗ ಒಂದಿಬ್ಬರು ಮಕ್ಕಳು ಆಸ್ತಿಯಾಗುತ್ತಿದ್ದಾರೆ. ಅಲ್ಲದೇ, ಅವಳಿ ಮಕ್ಕಳು ಆಗುತ್ತಿರುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ತ್ರಿವಳಿ ಮಕ್ಕಳು ಆಗುವುದೂ ಉಂಟು. ಆದರೆ, ಯಾರೂ ಊಹಿಸದಂತಹ ಘಟನೆಯೊಂದು ಸದ್ಯ ನಡೆದಿದೆ.

ಈ ಸುದ್ದಿ ಕೇಳುತ್ತಿದ್ದಂತೆ ನೆಟ್ಟಿಗರು ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ, ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೀವು ಈ ಮಹಿಳೆಯಾಗಿದ್ದರೆ, ಮಕ್ಕಳಿಗೆ ಜನ್ಮ ನೀಡಿದ ನಂತರ ಮೊದಲ ಕೆಲಸ ಏನು ಮಾಡುತ್ತಿದ್ದಿರಿ? ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಅಪಘಾತ – 17 ಜನರ ಸಾವು, 24 ಜನ ಗಂಭೀರ ಗಾಯ!

ವಿಜಯಸಾಕ್ಷಿ ಸುದ್ದಿ, ಕಾನ್ಪುರ

ಬಸ್ ಹಾಗೂ ಜೆಸಿಬಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 17 ಜನರು ದುರಂತ ಸಾವು ಕಂಡ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ 24 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಾನ್ಪುರ್ ಸಚೇಂದಿ ಬಳಿಯ ಕಿಸಾನ್ ನಗರ ಕಾಲುವೆ ಸಮೀಪ ಜೆಸಿಬಿ, ಶತಾಬ್ದಿ ಎಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ 17 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಲಾಲಾ ಲಜಪತ್ರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ, ಪರಿಹಾರ ಕೂಡ ಘೋಷಣೆ ಮಾಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ರೂ. 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ರೂ. 50 ಸಾವಿರ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ಮಧ್ಯೆ ಹೆಚ್ಚಾಗುತ್ತಿದೆ ಪ್ರಾಣಿಗಳ ಸಂತಾನ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಕೊರೊನಾ ಲಾಕ್‌ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯ ಪ್ರಾಣಿಗಳಿಗೆ ಜನರ ಕಾಟ ಇಲ್ಲದಂತಾಗಿದೆ. ಹೀಗಾಗಿ ಅವುಗಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿದೆ. ಹೀಗಾಗಿ ಅವುಗಳ ಸಂತಾನಾಭಿವೃದ್ಧಿ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಇಲ್ಲಿಯ ಪಿಲಿಕುಳ ಮೃಗಾಲಯದಲ್ಲಿ ಸಂತಸದ ಬೆಳವಣಿಗೆಯೊಂದು ನಡೆದಿದೆ.

ದೇಶದ 17 ಬೃಹತ್ ವಿವಿಧ ಮೃಗಾಲಯದಲ್ಲಿ ಒಂದಾಗಿರುವ ಇಲ್ಲಿಯ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿ ಎಂಬ ಹುಲಿ, ಕಾಡು ಶ್ವಾನ ದೋಳ್, ರಿಯಾ ಜಾತಿಯ ಪಕ್ಷಿ, ಲಟಿಕ್ಯುಲೇಚಿಡ್ ಜಾತಿಯ ಹೆಬ್ಬಾವು, ಕಾಳಿಂಗ ಸರ್ಪ ತಮ್ಮ ಸಂತಾನ ಹೆಚ್ಚು ಮಾಡಿಕೊಂಡಿದೆ.

ಇದರಲ್ಲಿ 10 ವರ್ಷದ ರಾಣಿ ಹೆಸರಿನ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ದೋಳ್ ಜಾತಿಯ ಕಾಡುಶ್ವಾನ ಏಳು ಮರಿಗಳಿಗೆ ಜನ್ಮ ನೀಡಿದೆ. ಇನ್ನು ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ರಿಯಾ ಮೊಟ್ಟೆ ಇಟ್ಟಿದ್ದು, ರೆಟಿಕ್ಯುಲೇಟಿಡ್ ಜಾತಿಯ ಹೆಬ್ಬಾವು 20 ಮೊಟ್ಟೆ ಇಟ್ಟು ಕಾವು ಕೊಡುತ್ತಿದೆ. ಕಾಳಿಂಗ ಸರ್ಪ ಆರು ಮೊಟ್ಟೆ ಇಟ್ಟಿದ್ದು, ಕೃತಕ ಕಾವು ನೀಡಲಾಗುತ್ತಿದೆ.

ಪಿಲಿಕುಳದಲ್ಲಿ ಕೇವಲ ಜೈವಿಕ ಉದ್ಯಾನವನವೇ ಸುಮಾರು 150 ಎಕರೆ ಪ್ರದೇಶ ವ್ಯಾಪಿಸಿದೆ. ವಿವಿಧ ಪ್ರಭೇದದ 1,200ಕ್ಕೂ ಅಧಿಕ ಪ್ರಾಣಿ, ಪಕ್ಷಿ ಉರಗಗಳಿವೆ. ಇಲ್ಲಿ ಪ್ರಾಣಿ, ಪಕ್ಷಿಗಳಿಗೆ ನೈಸರ್ಗಿಕವಾದ ವಾತಾವರಣದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ. ಇದರ ಪರಿಣಾಮ ಇಲ್ಲಿಗೆ ತಂದ ಹೆಚ್ಚಿನ ಪ್ರಾಣಿ -ಪಕ್ಷಿಗಳು ಸಂತಾನಾಭಿವೃದ್ದಿ ಮಾಡುತ್ತಿವೆ.

ಸದ್ಯ ಈಗಿನ ಸಂತಾನಾಭಿವೃದ್ದಿಯಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಕಾಡುಶ್ವಾನಗಳ ಸಂಖ್ಯೆ 32ಕ್ಕೆ ಏರಿದೆ. ಕಾಳಿಂಗ ಸರ್ಪ 19 ಇವೆ. ಲಾಕ್‌ ಡೌನ್ ಮುಗಿದ ಬಳಿಕ ಪ್ರಾಣಿ ವಿನಿಮಯದಲ್ಲಿ ಚೆನ್ನೈಯ ವಂಡಲೂರು ಮೃಗಾಲಯದಿಂದ ಬಿಳಿ ಹುಲಿ ತರಿಸಲು ನಿರ್ಧರಿಸಲಾಗಿದೆ.

error: Content is protected !!