Home Blog Page 3105

ವಿಸ್ತರಣೆಯಾಯ್ತು ಸಚಿವ ಸಂಪುಟ: ಕೊಪ್ಪಳ ಜಿಲ್ಲೆಗೆ ಈ ಸಲವೂ ತಪ್ಪಲಿಲ್ಲ ಸಂಕಟ!

-ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಮರೆತ ಬಿಜೆಪಿ ಸರಕಾರಈ ಸಲವೂ ತೇಲಿ ಹೋಯ್ತು ಹಾಲಪ್ಪ ಆಚಾರ್ ಹೆಸರು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಬಸವರಾಜ ಕರುಗಲ್
ಕಾಂಗ್ರೆಸ್-ಜೆಡಿಎಸ್‌ನಲ್ಲಿ ಶಾಸಕರಿದ್ದ ಅತೃಪ್ತರು ಬಿಜೆಪಿ ಸಖ್ಯ ಬೆಳೆಸಿ ಕಮಲ ಸರಕಾರ ಅಸ್ತಿತ್ವಕ್ಕೆ ತರಲು ಕೊಡುಗೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದಲೂ ಅನರ್ಹತೆಯ ಭೀತಿಯಿಂದ ಅರ್ಹತೆ ಗಳಿಸಿದ ಶಾಸಕರ ಋಣಸಂದಾಯದ ಕೆಲಸ ಇನ್ನೂ ನಡೆಯುತ್ತಲೇ ಇದೆ. ಪರಿಣಾಮ ಮೂಲ ಬಿಜೆಪಿಗರು ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸಂಕಟ ಪಡುವಂತಾಗಿದೆ.

ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆ ಕಾಲಕ್ಕೂ ವಲಸಿಗರಿಗೆ ಮಣೆ ಹಾಕಿದ್ದು ಮೂಲ ಬಿಜೆಪಿಯ ಶಾಸಕರಲ್ಲಿ ಬೇಗುದಿ ಹೆಚ್ಚಿಸಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಐವರು ಶಾಸಕರಲ್ಲಿ ಮೂವರು ಬಿಜೆಪಿಯಿಂದಲೇ ಚುನಾಯಿತರಾದವರು. ಮೊದಲನೇ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಜಿಲ್ಲಾವಾರು ಪ್ರಾತಿನಿಧ್ಯದಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೆಸರು ಕೇಳಿ ಬಂದಿತ್ತು.

ಹಾಲಪ್ಪ ಆಚಾರ್ ಮಂತ್ರಿಯಾಗೇಬಿಟ್ಟರು ಎನ್ನುವಷ್ಟರಮಟ್ಟಿಗೆ ಬಿಂಬಿಸಲಾಯಿತು. ಆ ಸಂದರ್ಭದಲ್ಲಿ ಹಾಲಪ್ಪ ಆಚಾರ್ ದಿಢೀರನೆ ದೆಹಲಿಗೆ ಭೇಟಿ ನೀಡಿದ್ದು ಜಿಲ್ಲೆಗೆ ಸಚಿವ ಸ್ಥಾನ ದಕ್ಕುವ ಆಕಾಂಕ್ಷೆ ಗರಿ ಗೆದರಿತ್ತು. ಸಚಿವ ಸಂಪುಡ ವಿಸ್ತರಣೆಗೊಂಡಾಗ ಜಿಲ್ಲೆಗೆ ಭಾರೀ ನಿರಾಸೆ ಉಂಟಾಯಿತು.

ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸ್ಥಾನ ದಕ್ಕಿದ್ದು ಔರಾದ್ ಕ್ಷೇತ್ರದ ಪ್ರಭು ಚಹ್ವಾಣ್ ಮತ್ತು ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಅವರಿಗೆ ಮಾತ್ರ. ಅದೂ ಚಹ್ವಾಣ್‌ಗೆ ಪಶು ಸಂಗೋಪನೆ ಖಾತೆ ಸಿಂಗ್‌ಗೆ ಅರಣ್ಯ ಖಾತೆ! ಈ ಬಾರಿ ಪ್ರಭು ಚಹ್ವಾಣ್ ಬದಲಾಗಿ ಕಲ್ಯಾಣ ಕರ್ನಾಟಕದ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇತ್ತು. ಸರಕಾರ ಬಯಸಿದರೆ ರಾಜೀನಾಮೆ ನೀಡುವುದಾಗಿ ಆನಂದ್ ಸಿಂಗ್ ಸಹ ಹೇಳಿದ್ದರು. ಈ ನಿಟ್ಟಿನಲ್ಲಿ ಹಾಲಪ್ಪ ಆಚಾರ್ ಹೆಸರು ಬಲವಾಗಿ ಕೇಳಿ ಬಂದಿತ್ತು.

ಸಿಎಂಗೆ ಮನವಿ ಸಲ್ಲಿಸಿದ್ದೇವೆ
“ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಕೊಪ್ಪಳ ಜಿಲ್ಲೆಗೆ ಆದ್ಯತೆ‌ ನೀಡುವಂತೆ ಮನವಿ ಮಾಡಿದ್ದೇವೆ. ಇರುವ ಮೂವರು ಬಿಜೆಪಿ ಶಾಸಕರಲ್ಲಿ ಯಾರಿಗಾದರೂ ಸರಿ, ಸಚಿವ ಸ್ಥಾನ ನೀಡುವಂತೆ ಕೇಳಿದ್ದೇವು. ಬೇರೆ ಪಕ್ಷದಿಂದ ಬಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಶ್ರಮಿಸಿದವರನ್ನೂ ಈ ಸಂದರ್ಭದಲ್ಲಿ ಕಡೆಗಣಿಸಲಾಗದು. ಆ ನಿಟ್ಟಿನಲ್ಲಿ ನ್ಯಾಯ ಸಲ್ಲಿಸಲಾಗಿದೆ. ಸಚಿವ ಸ್ಥಾನ ಸಿಗದಿದ್ದರೇನಂತೆ ಶಾಸಕರಾಗಿಯೇ ಅಭಿವೃದ್ಧಿ ಕೆಲಸ ಮಾಡುವ ಶಿಸ್ತಿನ ಸಿಪಾಯಿಗಳು ಬಿಜೆಪಿ ಶಾಸಕರು.”

ಸ್ವತಃ ಹಾಲಪ್ಪ ಆಚಾರ್ ಅವರಿಗೆ ಈ ಬೆಳವಣಿಗೆ ಅಚ್ಚರಿ ಉಂಟು ಮಾಡಿತ್ತು. ಸಚಿವ ಸ್ಥಾನದ ಆಕಾಂಕ್ಷಿ ನಾನೊಬ್ಬನೇ ಅಲ್ಲ, ಬಿಜೆಪಿಯಿಂದ ಆಯ್ಕೆಯಾದ ಎಲ್ಲ ಶಾಸಕರು ಆಕಾಂಕ್ಷಿಗಳೇ ನನಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ಕೆಲಸ ಮಾಡುವುದಾಗಿ ಹಾಲಪ್ಪ ಆಚಾರ್ ಹೇಳಿದ್ದರು. ಮಂಗಳವಾರ ರಾತ್ರಿವರೆಗೂ ಸಿಎಂ ಫೋನ್‌ಗಾಗಿ ಕಾದರೂ ಕರೆ ಬರಲಿಲ್ಲವಾದ್ದರಿಂದ ಎರಡನೇ ಬಾರಿ ಆಚಾರ್ ನಿರಾಸೆ ಅನುಭವಿಸಬೇಕಾಯ್ತು.

ಸಿಎಂಗೆ ಮನವಿ ಸಲ್ಲಿಸಿದ್ದೇವೆ
“ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಕೊಪ್ಪಳ ಜಿಲ್ಲೆಗೆ ಆದ್ಯತೆ‌ ನೀಡುವಂತೆ ಮನವಿ ಮಾಡಿದ್ದೇವೆ. ಇರುವ ಮೂವರು ಬಿಜೆಪಿ ಶಾಸಕರಲ್ಲಿ ಯಾರಿಗಾದರೂ ಸರಿ, ಸಚಿವ ಸ್ಥಾನ ನೀಡುವಂತೆ ಕೇಳಿದ್ದೇವು. ಬೇರೆ ಪಕ್ಷದಿಂದ ಬಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಶ್ರಮಿಸಿದವರನ್ನೂ ಈ ಸಂದರ್ಭದಲ್ಲಿ ಕಡೆಗಣಿಸಲಾಗದು. ಆ ನಿಟ್ಟಿನಲ್ಲಿ ನ್ಯಾಯ ಸಲ್ಲಿಸಲಾಗಿದೆ. ಸಚಿವ ಸ್ಥಾನ ಸಿಗದಿದ್ದರೇನಂತೆ ಶಾಸಕರಾಗಿಯೇ ಅಭಿವೃದ್ಧಿ ಕೆಲಸ ಮಾಡುವ ಶಿಸ್ತಿನ ಸಿಪಾಯಿಗಳು ಬಿಜೆಪಿ ಶಾಸಕರು.”

ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ.

ಅಸಮಾಧಾನ ಆಗಿರೋದು ನಿಜ, ಪಕ್ಷಕ್ಕಿಂತ ದೊಡ್ಡದಿಲ್ಲ
ಎರಡನೇ ಬಾರಿ ಸಂಪುಟ ವಿಸ್ತರಣೆ ಕಾಲಕ್ಕೆ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ವಿಶ್ವಾಸ ಇತ್ತು. ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ಇತ್ತು. ಆದರೆ ಈ ಬಾರಿಯೂ ಕೊಪ್ಪಳ ಜಿಲ್ಲೆಗೆ ಅನ್ಯಾಯವಾಗಿದೆ. ಅಸಮಾಧಾನ ಆಗಿರೋದು ನಿಜ, ಹಾಗೆಂದ ಮಾತ್ರಕ್ಕೆ ಪಕ್ಷಕ್ಕಿಂತ ದೊಡ್ಡದು ಬೇರೆನಿಲ್ಲ‌. ಇನ್ನೊಮ್ಮೆ ಸಿಎಂ ಅವರನ್ನು ಭೇಟಿ ಮಾಡ್ತಿವಿ.

-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ

ಬೈಕ್ ಸ್ಕಿಡ್ ಆಗಿ ಸವಾರ ಸಾವು, ಸವಾರನ ಮಡದಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಬೈಕ್ ಸ್ಕಿಡ್ ಆದ ಪರಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಆತನ ಮಡದಿ ಗಾಯಗೊಂಡ ಘಟನೆ, ತಾಲೂಕಿನ ಜಲಾಶಂಕರ ಬಳಿ ನಡೆದಿದೆ.

ಕಣವಿ ಹುಸೂರು ಗ್ರಾಮದ ಬಸವರಾಜ್ ಅರಗಂಜಿ(45) ಮೃತ ದುರ್ದೈವಿಯಾಗಿದ್ದು, ಆತನ ಪತ್ನಿ ಶಿವಲೀಲಾಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನ ಅಡವಿ ಸೋಮಾಪುರಕ್ಕೆ ಕೆಲಸದ ನಿಮಿತ್ತ ಹೋಗಿ ವಾಪಸ್ ಬರುವಾಗ ಜಲಾಶಂಕರ ಬಳಿಯ ನಾಗಾವಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ರಸ್ತೆಯ ಇಳಿಜಾರಿನಲ್ಲಿ ಬೈಕ್ ನಿಯಂತ್ರಣಕ್ಕೆ ಬಾರದೇ ರಸ್ತೆಯ ಎದುರಿನ ತಗ್ಗು ಪ್ರದೇಶಕ್ಕೆ ಬಿದ್ದ ಪರಿಣಾಮ, ಬಸವರಾಜ್ ನ ತಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂಗಡಗಿ ಸುಳ್ಳು ಹೇಳುವುದನ್ನು ಕಲಿಸಿಕೊಟ್ಟು ಹೋಗಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ: ದೊಡ್ಡನಗೌಡ ಪಾಟೀಲ್

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಹೇಳುವ ಮಾಜಿ ಸಚಿವ ಶಿವರಾಜ ತಂಗಡಗಿ ಈ ಹಿಂದೆ ಬಿಜೆಪಿಯಲ್ಲಿದ್ದರು. ಅಧಿಕಾರ ಅನುಭವಿಸಿದಾಗ ಅವರೇ ಸುಳ್ಳು ಹೇಳುವುದನ್ನು ಕಲಿಸಿಕೊಟ್ಟು ಹೋಗಿದ್ದೇನೆ ಎಂಬ ಭ್ರಮೆಯಲ್ಲಿರಬೇಕು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಶಿವರಾಜ ತಂಗಡಗಿ ಯಾವುದರ ಬಗ್ಗೆ ಮಾತನಾಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಅವರೊಬ್ಬ ಮಾಜಿ ಸಚಿವರಾಗಿ ಸ್ಪಷ್ಟತೆ ಪಡೆದುಕೊಂಡು ಮಾತನಾಡಬೇಕು ಎಂದರು.

ಇನ್ನು ನಾಯಕತ್ವ ಬದಲಾವಣೆ ಇಲ್ಲ ಎಂದು ಈಗಾಗಲೇ ನಮ್ಮ ಪಕ್ಷದ ರಾಜ್ಯದ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ. ಆದರೆ ನಮ್ಮ ಪಕ್ಷದಲ್ಲಿ ಆಗುವ ಬದಲಾವಣೆಗಳು ಸಿದ್ದರಾಮಯ್ಯ ಅವರಿಗೆ ಹೇಗೆ ಗೊತ್ತಾಗುತ್ತವೆ. ಎಲ್ಲರಿಗೂ ಎಲ್ಲ ಕಡೆ ಸ್ನೇಹಿತರು ಇರುತ್ತಾರೆ‌. ಸಿದ್ದರಾಮಯ್ಯ ಅವರೇನು ಜ್ಯೋತಿಷ್ಯ ಹೇಳುತ್ತಾರಾ ಎಂದರು.

ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುರಿತು ನಮ್ಮ ರಾಜ್ಯ, ಕೇಂದ್ರದ ನಾಯಕರು ನೋಡಿಕೊಳ್ಳುತ್ತಾರೆ. ಆದರೆ ಈಗಾಗಲೇ ಬ್ರೇಕ್ ಹಾಕಲಾಗಿದೆ‌. ಹಾಗೆಲ್ಲಾ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎಂದರು.

ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಪ್ಪಳ ಜಿಲ್ಲೆಗೆ ಆದ್ಯತೆ ನೀಡಿ ಎಂದು ನಾವು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರಿಗೆ, ಸಿಎಂ ಅವರಿಗೆ ಒತ್ತಾಯ ಮಾಡಿದ್ದೇವೆ. ಜಿಲ್ಲೆಯಲ್ಲಿರುವ ಮೂವರು ಶಾಸಕರಲ್ಲಿ ಯಾರೊಬ್ಬರಿಗಾದರೂ ಸಚಿವ ಸ್ಥಾನ ನೀಡಲಿ. ನಮ್ಮ ಜಿಲ್ಲೆಗೆ ಆದ್ಯತೆ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ದೊಡ್ಡನಗೌಡ ಪಾಟೀಲ್ ಹೇಳಿದರು.

ಗದಗ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದ ಮನೆಗಳ್ಳರು

ವಿಜಯಸಾಕ್ಷಿ ಸುದ್ದಿ, ಗದಗ: ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರ ಜಿಲ್ಲಾ ಮನೆಗಳ್ಳರ ಹಾಗೂ ಸರಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹುಬ್ಬಳ್ಳಿಯ ತಾರಿಹಾಳದ ರಾಮನಗರ ನಿವಾಸಿ ಕಾಸೀಂ ಗಾಳೆಪ್ಪ ಹುಬ್ಬಳ್ಳಿ ಹಾಗೂ ಗದಗ ನಗರದ ಸುನೀಲ್ ಸಂಜೀವಪ್ಪ ಮುಳಗುಂದ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ನವಂಬರ್ ತಿಂಗಳ 25 ರಂದು ನಗರದ ಗಣೇಶ್ ಕಾಲೋನಿಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರ ಮನೆಯ ಬೀಗ ಮುರಿದು 2,37,000 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದರು.

ಡಿಸೆಂಬರ್ 17 ರಂದು ಶಿವಾನಂದ ನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ 1,35,000 ಮೌಲ್ಯದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಇನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ದೇವಸ್ಥಾನವೊಂದರ ಹುಂಡಿ ಮತ್ತು ರಾಮದುರ್ಗದಲ್ಲಿ ಮನೆ ಕಳ್ಳತನವನ್ನೂ ಮಾಡಿದ್ದರು.

ಬಂಧಿತ ಆರೋಪಿತರಿಂದ ಒಟ್ಟು 5,00,000 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಕಳಸಾಪುರ ರಸ್ತೆಯ ಬಾಪೂಜಿ ನಗರದ ಸಮೀಪ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇವರನ್ನು ಬಂಧಿಸಲಾಗಿದೆ.

ಗದಗ ಎಸ್ಪಿ ಯತೀಶ್ ಎನ್ ಹಾಗೂ ಡಿವೈಎಸ್ಪಿ ಕೆ ಪ್ರಹ್ಲಾದ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಪಿ ವಿ ಸಾಲಿಮಠ, ಪಿಎಸ್ಐ ಶ್ರೀಮತಿ ಜಿ ಟಿ ಜಕ್ಕಲಿ, ಎಆರ್ ಎಸ್ಐ ಜಿ ಎಂ ಬೂದಿಹಾಳ, ಸಿಬ್ಬಂದಿಗಳಾದ ಬಿ ಜಿ ಹೊರಕೇರಿ, ವಿ ಎಸ್ ಶೆಟ್ಟಣ್ಣವರ್, ಎಸ್ ಎ ಗುಡ್ಡಿಮಠ, ಎಂ ಎ ಸದರನ್ನವರ್, ಪಿ ಆರ್ ಕುಲಕರ್ಣಿ, ಹನುಮಂತ ಯಡಿಯಾಪುರ್, ಪ್ರವೀಣ್ ಕಲ್ಲೂರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಟಾವಿಗೆ ಬಂದ ಕಬ್ಬು ಬೆಂಕಿಗಾಹುತಿ: ತಲೆ ಮೇಲೆ ಕೈ ಹೊತ್ತು ಕೂತ ರೈತ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಜಮೀನಿಗೆ ಬೆಂಕಿ ಹತ್ತಿದ ಪರಿಣಾಮ 8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಬೀರಪ್ಪ ಬಂಡಿ ಎನ್ನುವವರಿಗೆ ಸೇರಿದ ಜಮೀನು ಇದಾಗಿದ್ದು, 9 ಎಕರೆ ಜಮೀನಿನ ಪೈಕಿ‌ 8 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸ ಪಟ್ಟರು.

ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಹಕ್ಕಿಜ್ವರದ ಭೀತಿ: ಗದಗ ಜಿಲ್ಲೆಯಲ್ಲಿ ಸತ್ತು ಬಿದ್ದ ಹತ್ತಾರು ಹಕ್ಕಿಗಳು!

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲೂ ಹಕ್ಕಿ ಜ್ವರದ ಭೀತಿ ಶುರುವಾಗಿದ್ದು, ಜಿಲ್ಲೆಗೂ ಹಕ್ಕಿಜ್ವರ ಕಾಲಿಟ್ಟಿತಾ? ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಹಕ್ಕಿಗಳು ಸತ್ತು ಬಿದ್ದಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.
ಹಕ್ಕಿಗಳು ಸತ್ತು ಬಿದ್ದಿರುವುದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಸತ್ತುಬಿದ್ದ ಹಕ್ಕಿ ಸುತ್ತ ಸುಮಾರು 100 ಮೀ ವ್ಯಾಪ್ತಿಯಲ್ಲಿ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಸಿಬ್ಬಂದಿಗಳು ಸತ್ತುಬಿದ್ದ ಹತ್ತಾರು ಹಕ್ಕಿಗಳನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದ್ದಾರೆ.

ST ಮೀಸಲಾತಿ ಹೋರಾಟ ಯಾರ ವಿರುದ್ಧ, ಈಶ್ವರ ವರ್ಸೆಸ್ ಈಶ್ವರಪ್ಪನಾ? ಅಥವಾ ಈಶ್ವರಪ್ಪ ವರ್ಸೆಸ್ ಯಡಿಯೂರಪ್ಪನಾ?: ಸಿದ್ದರಾಮಯ್ಯ ಪ್ರಶ್ನೆ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಕುರುಬರಿಗೆ ST ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ.
ಆದರೆ, ಈಗಿನ ST ಮೀಸಲಾತಿ ಹೋರಾಟದಲ್ಲಿ ರಾಜಕೀಯ ಇದ್ದು, ಇದರ ಹಿಂದೆ RSS ಇರುವ ಕಾರಣಕ್ಕೆ ನಾನು ವಿರೋಧಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.

ದೇವದುರ್ಗ ತಾಲೂಕಿನ ‌ತಿಂಥಣಿಯಲ್ಲಿ ನಡೆದ ಹಾಲುಮತ ಉತ್ಸವದಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಿನ ಹೋರಾಟ ಯಾರ ವಿರುದ್ಧ ಈಶ್ವರ ವರ್ಸೆಸ್ ಈಶ್ವರಪ್ಪನಾ?
ಅಥವಾ ಈಶ್ವರಪ್ಪ ವರ್ಸೆಸ್ ಯಡಿಯೂರಪ್ಪನಾ? ಎಂದು ಪ್ರಶ್ನಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ. ಯಾಕೆ ಒತ್ತಡ ಹೇರಿ ಮೀಸಲಾತಿ ಕೊಡಿಸಬಾರದು. ನಾನು ಸಿಎಂ ಇದ್ದಾಗ ನಾಲ್ಕು ಜಿಲ್ಲೆಗಳಲ್ಲಿ ಕುರುಬರಿಗೆ ST ಮೀಸಲಾತಿ ನೀಡಿದ್ದೇನೆ.ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ನಡೆದಿದೆ, ಆದರೆ ಅದು ಆಗುವುದಿಲ್ಲ. ಈಶ್ವರಪ್ಪ ಕುರುಬ ಸಮಾಜದ ನಾಯಕರಾಗಲು ಹೊರಟಿದ್ದಾರೆ ಅದು ಸಾಧ್ಯವಿಲ್ಲ ಎಂದು ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಿಎಂ ಬಿಎಸ್ವೈ ಅವರಿಂದ ಕತ್ತಿಗೆ ಬುಲಾವ್: ಬೆಂಗಳೂರಿಗೆ ಹಾರಿದ ಉಮೇಶ್ ಕತ್ತಿ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯಾಗುತ್ತದೆನ್ನುವ ಸುದ್ದಿಗಳ ನಡುವೆಯೇ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಬೆಂಗಳೂರಿಗೆ ಹಾರಿದ್ದಾರೆ.

ಹೊರಡುವ ಮೊದಲು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬುಲಾವ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟ್ಟಿದ್ದೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲಿಯೇ ಆಗಲಿದ್ದು, ಸಂಪುಟದಲ್ಲಿ ಅವಕಾಶ ಕೊಡೋದು ಬಿಡೋದು ಸಿಎಂ ಅವರಿಗೆ ಬಿಟ್ಟದ್ದು. ಅವಕಾಶ ಕೊಟ್ಟರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ ಎಂದು ಕತ್ತಿ ತಿಳಿಸಿದರು.

ಅಂದು ವಿಧಾನ ಪರಿಷತ್ ನಲ್ಲಿ ನಡೆದದ್ದು ಗದ್ದಲವಲ್ಲ, ದುರ್ಘಟನೆ: ಅಲ್ಲಂ ವೀರಭದ್ರಪ್ಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮುಂದಿನ ಅಧಿವೇಶನದಲ್ಲಿ ಎಲ್ಲರೂ ಪ್ರಮಾಣ ಮಾಡಬೇಕು.
ನಾವು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿ ಸದನ ಶುರು ಮಾಡಬೇಕು ಎಂದು ಹಿರಿಯ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ
ವಿಧಾನ ಪರಿಷತ್‌‌ನ ಗದ್ದಲ ವಿಚಾರವಾಗಿ ಹೀಗೆ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಂದು ನಡೆದದ್ದು ಗದ್ದಲವಲ್ಲ, ದುರ್ಘಟನೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರಿಷತ್ ಬೇಕೊ ಬೇಡವೋ ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ವೀರಭದ್ರಪ್ಪ, ಪರಿಷತ್ ರದ್ದು ಮಾಡೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿಧಾನಸಭೆಗಿಂತ ವಿಧಾನ ಪರಿಷತ್‌ನಲ್ಲಿ ಹೆಚ್ಚು ಚರ್ಚೆ ಆಗುತ್ತಿತ್ತು. ನಾನು ಈ ಹಿಂದೆ ಸಚಿವನಾಗಿದ್ದ ವೇಳೆ ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಭಯ ಬೀಳುತ್ತಿದ್ದೆ.
ಹಾಗಾಗಿಯೇ ಪರಿಷತ್ತನ್ನ ಬುದ್ದಿಜೀವಿಗಳು, ಹಿರಿಯರ‌ ಮನೆ ಅಂತಿದ್ರು, ಈಗ ಆ ರೀತಿ ಇಲ್ಲ ಎಂದು ಅಸಮಾಧಾನ ಪಟ್ಟರು.

ಮಹಿಳೆಯ ಸರ ಕದ್ದು ಇಬ್ಬರು ಪರಾರಿ

0

ವಿಜಯಸಾಕ್ಷಿ ಸುದ್ದಿ, ಮೈಸೂರು

ಇಷ್ಟು ದಿವಸ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಸರಗಳ್ಳತನ ಇದೀಗ ಹಳ್ಳಿಗೂ ಕಾಲಿಟ್ಟಿದೆ.

ಧನುರ್ಮಾಸ ಪೂಜೆಗೆಂದು ದೇವಸ್ಥಾ‌ನಕ್ಕೆ ಹೋಗಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಖದೀಮರು ಕಸಿದು ಪರಾರಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ನಡೆದಿದೆ.

ಧನುರ್ಮಾಸ ಹಿನ್ನಲೆಯಲ್ಲಿ ವಿಮಲಾ ಎಂಬ ಮಹಿಳೆ ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಚಿನ್ನದ ಸರ ಕಿತ್ತುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸರ ಕಸಿಯುತ್ತಿರುವ ವೇಳೆ ಮಹಿಳೆ ಪ್ರತಿರೋಧವೊಡ್ಡಿದ್ದಾರೆ. ಆದರೆ, ಖದೀಮರು ಗೃಹಿಣಿಯನ್ನು ನೆಲಕ್ಕೆ ಬೀಳಿಸಿ 25 ಗ್ರಾಂ ಬಂಗಾರದ ಸರ
ಕದ್ದೊಯ್ದಿದ್ದಾರೆ.

ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!