Home Blog Page 3168

ಇಲ್ಲಿ ಬಯಲಿನಲ್ಲಿಯೇ ನಡೆಯುತ್ತಿದೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ!

ವಿಜಯಸಾಕ್ಷಿ ಸುದ್ದಿ, ಭೋಪಾಲ್

ಕೊರೊನಾ ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಭಯಪಟ್ಟು ಹಳ್ಳಿಯ ಹೊಲಗಳಲ್ಲಿ ಮರಗಳ ಕೆಲಕೆ ಚಿಕಿತ್ಸೆ ಪಡೆಯುತ್ತಿರುವ ಸಂಗತಿ ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ.

ಆ ರಾಜ್ಯದ ಅಗರ್ – ಮಾಲ್ವಾ ಜಿಲ್ಲೆಯ ಹಳ್ಳಿಗಳಲ್ಲಿ ರಸ್ತೆಯ ಪಕ್ಕದಲ್ಲಿಯೇ ಕೊರೊನಾ ಸೋಂಕಿತರು ಮಲಗಿದ್ದಾರೆ. ಮರಗಳಿಗೆ ಡ್ರಿಪ್ ಬಾಟಲಿಗಳನ್ನು ತೂಗಿ ಹಾಕಿ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಭಾಗದ ಗ್ರಾಮಗಳಲ್ಲಿನ ಜನರಲ್ಲಿ ಜ್ವರ – ನೆಗಡಿ ಹೆಚ್ಚಾಗಿ ಕಂಡು ಬರುತ್ತಿದೆ. ಆದರೆ, ಜನ ಮಾತ್ರ ಆಸ್ಪತ್ರೆಗೆ ತೆರಳಲು ಹಿಂಜರಿಯುತ್ತಿದ್ದಾರೆ. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ. ಹೀಗಾಗಿ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಜನರು ಅವಲೊತ್ತಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಥಳೀಯ ವೈದ್ಯರಿಂದಲೇ ಚಿಕಿತ್ಸೆ ಪಡೆಯುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಸ್ಥಳೀಯ ವೈದ್ಯರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ನೆಗಡಿ, ಕೆಮ್ಮು ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ವೈದ್ಯರನ್ನು ಭೇಟಿ ಮಾಡಿ ಎಂದು ಆರೋಗ್ಯಾಧಿಕಾರಿ ಮನಿಶ್ ಕುರ್ಲಿ ತಿಳಿಸಿದ್ದಾರೆ.

ಹಿಮದಂತೆ ಕಂಡು ಬಂದ ಹರಿದು ಬಂದ ನೊರೆ; ಗಾಬರಿಗೊಂಡ ಜನ!

ವಿಜಯಸಾಕ್ಷಿ ಸುದ್ದಿ, ರೋಣ

ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಹಿಮದ ಬಂಡೆಯಂತೆ ನೊರೆ ಕಂಡು ಬಂದಿದ್ದು, ಜನ ಆಶ್ಚರ್ಯದಿಂದ ತಂಡೋಪ ತಂಡವಾಗಿ ಆಗಮಿಸಿ ನೋಡುತ್ತಿದ್ದಾರೆ.
ಮಾರನಬಸರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಭರ್ಜರಿಯಾಗಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಗ್ರಾಮದ ನರೇಗಲ್ ರಸ್ತೆಗೆ ಹೊಂದಿಕೊಂಡಿರುವ ಸೇತುವೆ ಬಳಿ ನೊರೆ ಹಿಮದ ಬಂಡೆಯಂತೆ ಕಂಡು ಬಂದಿದೆ.

ಈ ದ್ರಶ್ಯ ನೊಡಲು ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಅಪರೂಪದ ದೃಶ್ಯ ಕಂಡಿದ್ದಾರೆ. ಆದರೆ, ಇಷ್ಟೊಂದು ನೊರೆ ಬಂದಿರುವುದಕ್ಕೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ರಾಸಾಯನಿಕ ಬಳಕೆಯಿಂದ ಈ ರೀತಿಯ ನೊರೆ ಕಂಡು ಬಂದಿದೆ ಎನ್ನಲಾಗುತ್ತದೆ.

ರಾಜ್ಯದಲ್ಲಿ ಸೋಂಕು ತಡೆಗಟ್ಟದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲೇಬೇಕು. ಇಲ್ಲವೇ ಬೇರೆ ಪರಿಹಾರ ಇಲ್ಲ ಎಂದು ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮೇ ಮಧ್ಯ ಭಾಗದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷ ಮೀರುವ ಸಾಧ್ಯತೆ ಇದೆ. ಜೂನ್ ಮೊದಲ ವಾರದಲ್ಲಿ ಶೇ. 80ರಷ್ಟು ಸೋಂಕು ಹೆಚ್ಚಳವಾಗಬಹುದು. ಹೀಗಾಗಿ ದೀರ್ಘಾವಧಿಯ ಲಾಕ್ ಡೌನ್ ನಿಂದಾಗಿ ಮಾತ್ರ ಸೋಂಕನ್ನು ತಡೆಗಟ್ಟಬಹುದು. ಹೀಗಾಗಿ 15 ದಿನ ಲಾಕ್ ಡೌನ್ ಮಾಡಿದರೆ ಪರಿಣಾಮ ಹೆಚ್ಚಾಗಿರುತ್ತದೆ. ಏಕಾಏಕಿ ಲಾಕ್‍ ಡೌನ್ ಘೋಷಿಸದೆ ಹಂತ – ಹಂತವಾಗಿ ವಿನಾಯಿ ನೀಡುತ್ತ ಲಾಕ್ ಡೌನ್ ತೆರೆಯಬೇಕು ಎಂದು ಸರ್ಕಾರಕ್ಕೆ ಐಐಎಸ್ಸಿ ಎಚ್ಚರಿಕೆ ನೀಡಿದೆ.

ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷರಾದ ಡಾ. ಪ್ರಸನ್ನ ಅವರು, ಸದ್ಯ ಜನರ ಜೀವ ಉಳಿಸಲು ಲಾಕ್ ಡೌನ್ ಒಂದೇ ಪರಿಹಾರವಾಗಿದೆ. ಜನರ ಜೀವ ಉಳಿದರೆ ಆರ್ಥಿಕತೆ ತನ್ನಿಂದ ತಾನೇ ಸರಿಯಾಗುತ್ತದೆ. ಸದ್ಯ ಹಳ್ಲಿಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ಇನ್ನೊಂದೆಡೆ ಆರೋಗ್ಯ ವಲಯದ ಮೇಲೆಯೂ ವಿಪರೀತ ಒತ್ತಡ ಬೀಳುತ್ತಿದೆ. ಸಿಬ್ಬಂದಿಗೂ ಸೋಂಕು ಹರಡುತ್ತಿದ್ದು, ಅಭಾವ ಶುರುವಾಗುತ್ತಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಆದರೆ, ಸರ್ಕಾರ ಮಾತ್ರ ಲಾಕ್ ಡೌನ್ ಘೋಷಿಸಲು ಮುಂದಾಗುತ್ತಿಲ್ಲ. ಕೇರಳದಲ್ಲಿ ಒಂದು ವಾರಗಳ ಕಾಲ ಕಂಪ್ಲೀಟ್ ಲಾಕ್‍ ಡೌನ್ ಘೋಷಿಸಲಾಗಿದೆ. ಮೇ. 8 ರಿಂದ 16ರ ವರೆಗೆ ಕೇರಳ ಸ್ತಬ್ಧವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಲಾಕ್ ಡೌನ್ ನಿಂದಾಗಿ ಸೋಂಕಿನ ಪ್ರಮಾಣ ಇಳಿಮುಖ ಕಾಣುತ್ತಿದೆ. ಆದರೆ, ರಾಜ್ಯದಲ್ಲಿ ಮಾತ್ರ ಈ ನಿರ್ಧಾರ ಕೈಗೊಳ್ಳುತ್ತಿಲ್ಲ.

ಮತ್ತೆ ಗಾರೆ ಕೆಲಸ ಪ್ರಾರಂಭಿಸಿದ ನಟ ಚಿಕ್ಕಣ್ಣ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಳೆದ ವರ್ಷಕ್ಕಿಂತ ಈ ವರ್ಷ ಮಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದೆ. ಅಲ್ಲದೇ, ಸಮರ್ಪಕ ಆಕ್ಸಿಜನ್ ಸಿಗದೆ ಜನರು ನರಳಾಡುತ್ತಿದ್ದಾರೆ. ಇತ್ತ ಲಾಕ್‌ ಡೌನ್‌ ನಿಂದಾಗಿ ಹಲವಾರು ಸೆಲೆಬ್ರೆಟಿಗಳು ಮನೆಯಿಂದಲೇ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕಾಮಿಡಿ ಕಿಂಗ್ ಚಿಕ್ಕಣ್ಣ ಶೂಟಿಂಗ್ ಕೆಲಸವಿಲ್ಲದೆ, ಅವರ ಹಳೆಯ ಕೆಲಸಕ್ಕೆ ಮರಳಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದಿರುವ ಚಿಕ್ಕಣ್ಣ ಮೊದಲು ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈಕೆಳಗೆ ದಿನಗೂಲಿಗೆ ಮನೆಗಳ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಅವರು ನಟನಾಗುತ್ತಿದ್ದಂತೆ ಬೆಂಗಳೂರಿಗೆ ಬಂದು ಹಲವಾರು ವರ್ಷಗಳ ಶ್ರಮದಿಂದ ಉತ್ತಮ ನಟನಾಗಿ ಹೆಸರು ಮಾಡಿದ್ದಾರೆ.

ಆದರೆ, ಸದ್ಯ ಚಿಕ್ಕಣ್ಣ ತಮ್ಮ ಹಳೆಯ ವೃತ್ತಿಗೆ ಮರಳಿದ್ದಾರೆ. ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಚಿಕ್ಕಣ್ಣ ಬೇರೆಯವರ ಮನೆಯ ಗಾರೆ ಕೆಲಸ ಮಾಡುತ್ತಿಲ್ಲ. ಬದಲಿಗೆ ತಮ್ಮದೇ ತೋಟದ ಮನೆಯ ಗಾರೆ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಬಳಿ ದೊಡ್ಡ ಫಾರ್ಮ್ ನಿರ್ಮಿಸಿರುವ ಚಿಕ್ಕಣ್ಣ ಅಲ್ಲಿಯೇ ಸಣ್ಣದೊಂದು ಮನೆ ನಿರ್ಮಾಣ ಮಾಡುತ್ತಿದ್ದು, ಮನೆ ನಿರ್ಮಾಣ ಕಾರ್ಯಕ್ಕೆ ತಾವೇ ಕೈ ಜೋಡಿಸಿದ್ದಾರೆ. ಲಾಕ್‌ ಡೌನ್ ಸಮಯದಲ್ಲಿ ಚಿತ್ರೀಕರಣ ಇಲ್ಲದ ಕಾರಣ ಸಮಯದ ಸದುಪಯೋಗಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ. ನಟ ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿಕ್ಕಣ್ಣನ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲಸ ಬೇಕಾದರೆ ಬಿಡುತ್ತೇನೆ….ಬೆಡ್ ಕೊಡಿಸಲು ಆಗಲ್ಲ ಎಂದ ಡಿಎಚ್ ಒ

ವಿಜಯಸಾಕ್ಷಿ ಸುದ್ದಿ, ಮೈಸೂರು

ನನ್ನ ಮಡದಿಗೂ ವೆಂಟಿಲೇಟರ್ ಕೊಡಿಸಲು ನನ್ನಿಂದ ಆಗುತ್ತಿಲ್ಲ ಎಂದು ಹೇಳುವ ಮೂಲಕ ಜಿಲ್ಲೆಯ ಡಿಎಚ್ ಒ ಅಮರನಾಥ್ ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ.

ಹೀಗಂತ ಸಂಬಂಧಿಕರೊಂದಿಗೆ ಫೋನ್ ಸಂಭಾಷಣೆ ನಡೆಸಿರುವ ಅಮರನಾಥ್ ಅವರ ಆಡಿಯೋ ಸದ್ಯ ಸಖತ್ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಅಮರನಾಥ್ ಅವರಿಗೆ ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ವಾರ್ ರೂಂ ಗೆ ಕರೆ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ.

ಆಗ ವ್ಯಕ್ತಿ, ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ. ಆಗ ಡಿಎಚ್ ಒ ಅವರು ಬೆಡ್ ಗೆ ಹಾಗೂ ನನಗೆ ಯಾವುದೇ ಸಂಬಂಧವಿಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ. ನನಗೆ ನನ್ನ ಹೆಂಡತಿಗೂ ಬೆಡ್ ಕೊಡಿಸಲು ಯೋಗ್ಯತೆ ಇಲ್ಲ. ನನ್ನ ಕೈ ಸೋತು ಹೋಗಿದೆ ಎಂದು ಅಸಹಾಯಕತೆ ತೋರಿಸಿದ್ದಾರೆ.

ಆಗ ಕರೆ ಮಾಡಿದ್ದ ವ್ಯಕ್ತಿ, ಜವಾಬ್ದಾರಿ ಏಕೆ? ಕೆಲಸ ಬಿಟ್ಟು ಹೋಗಿ ಎಂದು ಹೇಳಿದ್ದಾರೆ. ಕೆಲಸದಿಂದ ಕಳುಹಿಸಿ ಬಿಟ್ಟು ಹೋಗಲು ಕೂಡ ಸಿದ್ಧನಿದ್ದೇನೆ ಎಂದಿರುವ ಡಿಎಚ್ ಒ ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ. ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡದ ಖ್ಯಾತ ನಿರ್ದೇಶಕ ಮಹಾಮಾರಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸೋಂಕಿಗೆ ಚಿತ್ರರಂಗವು ಬಳಲಿ ಬೆಂಡಾಗುತ್ತಿದೆ. ಹಿರಿಯ ನಟ, ನಿರ್ದೇಶಕರನ್ನು ಕಳೆದುಕೊಳ್ಳುತ್ತ ಸೊರಗುತ್ತಿದೆ. ಸದ್ಯ ಕನ್ನಡದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಕನ್ನಡಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಅವರು ಕೊರೊನಾದಿಂದಾಗಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ‘ಕವಿರತ್ನ ಕಾಳಿದಾಸ’, ‘ಅಂಜದ ಗಂಡು’, ‘ಕಿಂದರ ಜೋಗಿ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಎರಡು ದಿನಗಳ ಹಿಂದೆಯಷ್ಟೇ ರೇಣುಕಾ ಶರ್ಮಾ ಅವರನ್ನು ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಇನ್ನು ಮುಂದೆ ಬಿಗ್ ಬಜೆಟ್ ಚಿತ್ರಗಳಲ್ಲಿಯೂ ಕಾಣಸಿಗಲಿರುವ ಕಿಚ್ಚ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡ ಮಾತ್ರವಲ್ಲದೆ ಪರಭಾಷೆಯಲಲಿಯೂ ತಮ್ಮ ಅಮೋಘ ನಟನೆಯಿಂದ ಭಾರಿ ಹೆಸರು ಮಾಡಿರುವ ಕಿಚ್ಚ ಸುದೀಪ್ ಬಿಗ್‌ ಬಜೆಟ್ ಸಿನಿಮಾಗಳಲ್ಲಿಯೂ ಇನ್ನು ಮುಂದೆ ಸದ್ದು ಮಾಡಲಿದ್ದಾರೆ. ಕಿಚ್ಚನಿಗೆ ಆಫರ್‌ ಗಳ ಸುರಿಮಳೆಯಾಗಿದ್ದು, ಹಿಂದಿ ಸಿನಿಮಾದ ಆದಿಪುರುಷದಿಂದ ಆಫರ್ ಬಂದಿದೆ.

ನಟ ‘ಕಿಚ್ಚ’ ಸುದೀಪ್ ಅವರಿಗೆ ಬಾಲಿವುಡ್ ಮಾತ್ರವಲ್ಲದೆ, ಇಡೀ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಈಗ ಪುಲಿ, ಬಾಹುಬಲಿ, ಸೈರಾ ನರಸಿಂಹ ರೆಡ್ಡಿ, ದಬಾಂಗ್ – 3 ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿರುವ ಕಿಚ್ಚ, ಕೆಲವು ದಿನಗಳಿಂದ ಶಂಕರ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೊಂದು ದೊಡ್ಡ ಸಿನಿಮಾದಲ್ಲಿ ಕಿಚ್ಚ ನಟಿಸುತ್ತಾರೆ ಎಂಬ ಸುದ್ದಿ ಬಾರಿ ಹಾರಿದಾಡುತ್ತಿದೆ.

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆರಂಭದಿಂದಲೂ ಈ ಸಿನಿಮಾ ಪಾತ್ರವರ್ಗದಿಂದಲೇ ಗಮನ ಸೆಳೆಯುತ್ತಿದೆ. ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ‘ಆದಿಪುರುಷ್’ ಸಿನಿಮಾ ಮಾಡಲಾಗುತ್ತಿದೆ. ಇಲ್ಲಿ ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದು, ರಾವಣನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಿರ್ವಹಿಸಲಿದ್ದಾರೆ. ಈಗ ನಟ ಕಿಚ್ಚ ಸುದೀಪ್ ರಾವಣನ ಸಹೋದರ ವಿಭೀಷಣನ ಪಾತ್ರ ಮಾಡುವುದು ಟಾಕ್ ಆಫ್ ದಿ ಟೌನ್ ಆಗಿದೆ. ಇನ್ನೂ ಈ ಪಾತ್ರವನ್ನು ಸುದೀಪ್ ಮಾಡುತ್ತಾರಾ ಅಥವಾ ಇಲ್ಲಾವಾ ಎಂಬುವುದನ್ನು ಅವರೇ ಸ್ಪಷ್ಟ ಪಡಿಸಬೇಕಿದೆ.

ಇದು ಕರುನಾಡ? ಅಥವಾ ಕೊರೊನಾಡ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಮಹಾಮಾರಿ ಸ್ಫೋಟಗೊಂಡಿದೆ. ಇಂದು ಬರೋಬ್ಬರಿ ರಾಜ್ಯದಲ್ಲಿ 49,058 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ, ಸಾವಿನ ಸಂಖ್ಯೆಯಲ್ಲಿಯೂ ದಾಖಲೆ ಬರೆದಿದೆ.
ಇಂದು ರಾಜ್ಯದಲ್ಲಿ 328 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಂದು 23,706 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 139 ಜನ ಬಲಿಯಾಗಿದ್ದಾರೆ.

ಇಂದು 18,943 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಂಕಿತರ ಸಂಖ್ಯೆ 17,90,104ಕ್ಕೆ ಏರಿಕೆ ಕಂಡಿದೆ. ಮೃತರ ಸಂಖ್ಯೆ 17,212ಕ್ಕೆ ಏರಿಕೆ ಕಂಡಿದೆ.

ಇಂದು ರಾಜ್ಯದ ಬಾಗಲಕೋಟೆ 665, ಬಳ್ಳಾರಿ 922, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬೆಂಗಳೂರು ನಗರ 23,706, ಬೀದರ್ 336, ಚಾಮರಾಜನಗರ 707, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452, ಚಿತ್ರದುರ್ಗ 126, ದಕ್ಷಿಣ ಕನ್ನಡ 1,191, ದಾವಣಗೆರೆ 672, ಧಾರವಾಡ 824, ಗದಗ 191, ಹಾಸನ 1,403, ಹಾವೇರಿ 236, ಕಲಬುರಗಿ 1,652, ಕೊಡಗು 697, ಕೋಲಾರ 756, ಕೊಪ್ಪಳ 357, ಮಂಡ್ಯ 1,301, ಮೈಸೂರು 2,531, ರಾಯಚೂರು 819, ರಾಮನಗರ 413, ಶಿವಮೊಗ್ಗ 635, ತುಮಕೂರು 2,418, ಉಡುಪಿ 1,526, ಉತ್ತರ ಕನ್ನಡ 734, ವಿಜಯಪುರ 662 ಮತ್ತು ಯಾದಗಿರಿಯಲ್ಲಿ 721 ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕೊರೋನಾ; ಗುರುವಾರ 191 ಜನರಿಗೆ ಸೋಂಕು, ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 06 ಗುರುವಾರ ಗದಗ ಜಿಲ್ಲೆಯಲ್ಲಿ ಸೋಂಕು ಮೂರು ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಸತತ ನಾಲ್ಕನೇ ದಿನವೂ ಸೋಂಕಿತರ ಸಂಖ್ಯೆ ಆಸುಪಾಸಿನಲ್ಲಿದೆ. ಕೋವಿಡ್ ನಿಂದ ಮೂವರು ಮೃತಪಟ್ಟಿದ್ದಾರೆ.

ಇಂದಿನ 191 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13787 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -111, ಮುಂಡರಗಿ-19, ನರಗುಂದ-14, ರೋಣ-22, ಶಿರಹಟ್ಟಿ-20, ಹೊರಜಿಲ್ಲೆಯ-05 ಸೇರಿದಂತೆ 191 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ 58 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಮೇ04 ರಂದು ಮೃತಪಟ್ಟಿದ್ದು, ಇನ್ನೊಬ್ಬರು ರೋಣ ತಾಲೂಕಿನ ನಿವಾಸಿ 68 ವರ್ಷದ ವ್ಯಕ್ತಿ ಮೇ-04 ರಂದು ಜಿಮ್ಸ್ ನಲ್ಲಿ, ಹಾಗೂ ಗದಗನ ಹನುಮಾನ್ ಗಲ್ಲಿ ನಿವಾಸಿ 82 ವರ್ಷದ ವೃದ್ಧೆ ಮೇ 3 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
150 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 130 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 12651 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 986 ಪ್ರಕರಣಗಳು ಸಕ್ರಿಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 258 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕೊರೊನಾ ಸಂಕಷ್ಟ; ನಟಿ ಸನ್ನಿಲಿಯೋನನಿಂದ ಮಾನವೀಯ ಕಾರ್ಯ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಸದ್ಯ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ಭಾರತವೇ ಸಿಲುಕಿದೆ. ಈಗಾಗಲೇ ಹಲವೆಡೆ ಲಾಕ್ ಡೌನ್ ಕೂಡ ಘೋಷಣೆಯಾಗಿದೆ. ಹೀಗಾಗಿ ಸಾವಿರಾರು ವಲಸೆ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ಜನರಿಗೆ ಹಲವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇವರ ಸಾಲಿಗೆ ಸದ್ಯ ನಟಿ ಸನ್ನಿಲಿಯೋನ್ ನಿಂತಿದ್ದಾರೆ.

ನಟಿ ಸನ್ನಿ ಲಿಯೋನ್ ಸದಾ ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಹೊಂದಿದ ಸಹೃದಯಿ. ಸದ್ಯ ಕಷ್ಟಕ್ಕೆ ಸಿಲುಕಿದವರ ಹೊಟ್ಟೆ ತುಂಬಿಸುತ್ತ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಹಸಿದಿರುವ ಸುಮಾರು 10 ಸಾವಿರ ಜನರಿಗೆ ಅನ್ನ ನೀಡುವ ಮಹಾನ್ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸನ್ನಿ, ದೇಶದಲ್ಲಿ ನಾವು ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಸಹಾನುಭೂತಿ ಮತ್ತು ಒಗ್ಗಟ್ಟಿನೊಂದಿಗೆ ನಾವು ಮುಂದೆ ಬರುತ್ತೇವೆ. ಈ ಸಮಯದಲ್ಲಿ ಅಗತ್ಯವಿರುವ ಸಾವಿರಾರು ಜನರಿಗೆ ಪ್ರೋಟೀನ್ ತುಂಬಿದ ಸಸ್ಯಾಹಾರಿ ಆಹಾರ ನೀಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

error: Content is protected !!