Home Blog Page 3205

ರಾಮನಗರ ಜಿಲ್ಲೆಗೆ ಏನು ಮಾಡಬೇಕು ಎಂಬ ನೀಲಿ ನಕ್ಷೆ ಇದೆ: ಡಿ.ಕೆ.ಶಿವಕುಮಾರ್

0

ಮೈಸೂರು: ಕನಕಪುರದ ಜನ ತಮ್ಮ ಆಸ್ತಿಗಳನ್ನು ಮಾರಿಕೊಳ್ಳಬೇಡಿ. ಆಸ್ತಿ, ಜಮೀನು ಉಳಿಸಿಕೊಳ್ಳುವಂತೆ ಹೇಳಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆಯಲ್ಲಿರುವ ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇನೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದಾಗಿ ಹೇಳಿರುವ ಡಿ.ಕೆ.ಶಿವಕುಮಾರ್ ಹೇಳಿಕೆ ಹಿಂದೆ ದುರುದ್ದೇಶವಿದೆ ಎಂದು ಬೇನಾಮಿ ಆಸ್ತಿ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್,

ಕುಮಾರಸ್ವಾಮಿ ಅವರು ಸಿಎಂ ಆಗಿದ್ದವರು, ಪ್ರಜ್ಞಾವಂತರು ಎಂದಿಕೊಂಡಿದ್ದೆ. ಆದರೆ ಅವರಿಗೆ ಕಾಮನ್ ಸೆನ್ಸ್ ಇಲ್ಲ.

ದೇಶಕ್ಕೆ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ಪ್ರಜ್ಞಾವಂತರು ಬೇಕು ಎಂದು ಟಾಂಗ್ ನೀಡಿದ್ದಾರೆ. ರಾಮನಗರ, ಕನಕಪುರ, ಚನ್ನಪಟ್ಟಣದ ಜನ ಭೂಮಿಯನ್ನು ಮಾರಿಕೊಂಡು ಹೋಗಬೆಡಿ.

ಮುಂದಿನ ದಿನಗಳಲ್ಲಿ ಒಳ್ಳೆ ಬೆಲೆ ಬರಲಿದೆ ಎಂದು ಹೇಳಿದ್ದೇನೆ. ಕೋವಿಡ್ ನಂತರ ನಮ್ಮ ಜನ ಭೂಮಿ ಮಾರಿಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು. ಕನಕಪುರ ಮಾತ್ರವಲ್ಲ ರಾಮನಗರ, ಚನ್ನಪಟ್ಟಣ ಎಲ್ಲವೂ ಬೆಂಗಳೂರಿಗೆ ಸೇರಿದ್ದು. ನಾವೆಲ್ಲರೂ ಬೆಂಗಳೂರಿನವರೇ.

ರಾಮನಗರ ಜಿಲ್ಲೆಗೆ ಏನು ಮಾಡಬೇಕು ಎಂಬ ನೀಲಿ ನಕ್ಷೆ ಇದೆ. ರಾಮನಗರ ಬೆಂಗಳೂರಿಗೆ ಸೇರಿದ್ದು. ಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು.

ದಾರುಣ ಘಟನೆ: ಆಟವಾಡುತ್ತಿದ್ದ 14 ತಿಂಗಳ ಮಗು ಕಾಲುವೆಗೆ ಬಿದ್ದು ಸಾವು

0

ಕೊಪ್ಪಳ: ಮನೆ ಮುಂದಿನ ಕಾಲುವೆಗೆ ಬಿದ್ದು 14 ತಿಂಗಳ ಗಂಡು ಮಗು ಸಾವನ್ನಪ್ಪಿದ ಧಾರುಣ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್ನಲ್ಲಿ ನಡೆದಿದೆ.

ವಿಜಯೇಂದ್ರ ಮೃತ ಮಗು. ಶಿವಾನಂದ ಹಾಗೂ ಶಿಲ್ಪಾ ದಂಪತಿಯ ಮಗು ಇದಾಗಿದ್ದು, ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಕಾಲುವೆಗೆ ಬಿದ್ದು ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲ ಪತ್ತೆ, ದಂಧೆಗೆ ವೈದ್ಯರೇ ಸಾಥ್

0

ಬೆಂಗಳೂರು;- ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನ್‌ಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್‌ಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತರು. ಈ ದಂಧೆಯಲ್ಲಿ ವೈದ್ಯರು ಸಹ ಇದ್ದು, 15 ರಿಂದ 20 ಸಾವಿರ ರೂಪಾಯಿ ಪಡೆದುಕೊಂಡು ಈ ದಂಧೆಗೆ ಸಾಥ್ ನೀಡುತ್ತಿದ್ದರು.

ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ದಂಧೆ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದ ಇನ್‌ಸ್ಪೆಕ್ಟರ್‌ ಎಂ.ಪ್ರಶಾಂತ್ ಅವರು, ಕೂಡಲೇ ಪಿಎಸ್‌ಐ ಮಂಜುನಾಥ್‌, ಬೈಯಪ್ಪನಹಳ್ಳಿ ಠಾಣೆ ಪಿಎಸ್‌ಐ ಮಂಜುನಾಥ್, ಎಎಸ್‌ಐಗಳಾದ ಗೋವಿಂದರಾಜು, ನಾಗಯ್ಯ ಒಳಗೊಂಡ ತಂಡ ರಚಿಸಿಕೊಂಡು ದಂಧೆಕೋರರ ಬೆನ್ನುಹತ್ತಿದ್ದಾಗ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.

ಇತ್ತೀಚೆಗೆ ಹಳೇ ಮದ್ರಾಸ್‌ ರಸ್ತೆ ಕಡೆಯಿಂದ ಗರ್ಭಿಣಿಯನ್ನು ಪರೀಕ್ಷೆಗೆ ಕರೆದೊಯ್ಯಲು ವೀರೇಶ್ ತಂಡ ಬರುವ ಖಚಿತ ಮಾಹಿತಿ ಪಿಐ ಪ್ರಶಾಂತ್ ತಂಡಕ್ಕೆ ಸಿಕ್ಕಿದೆ. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಹಳೇ ಮದ್ರಾಸ್‌ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ದಂಧೆಕೋರರು, ಪೊಲೀಸರನ್ನು ಕಂಡು ಭೀತಿಯಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು, ಕೂಡಲೇ ಆ ಕಾರನ್ನು ಬೈಕ್‌ಗಳಲ್ಲಿ ಸ್ಪಲ್ಪದೂರ ಬೆನ್ನಹತ್ತಿ ಹೋಗಿ ತಡೆದಿದ್ದಾರೆ. ಬಳಿಕ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಹಾಗೂ ಗರ್ಭಿಣಿಯನ್ನು ಠಾಣೆ ಕರೆತಂದು ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ.

ಬಳಿಕ ಈ ಆರೋಪಿಗಳ ಮಾಹಿತಿ ಆಧರಿಸಿ ಮಂಡ್ಯ-ಪಾಂಡಪುರ ರಸ್ತೆಯಲ್ಲಿದ್ದ ಅಲೆಮನೆ ಮೇಲೆ ಪೊಲೀಸರು ಕ್ಷಿಪ್ರ ದಾಳಿ ನಡೆಸಿದಾಗ ಇನ್ನುಳಿದ್ದಿಬ್ಬರು ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ದಂಧೆಕೋರರ ಅಡ್ಡೆಯಾದ ಪಾಂಡಪುರ ರಸ್ತೆಯ ಅಲೆಮನೆ ಮೇಲೆ ದಾಳಿ ನಡೆಸಿದಾಗ ಐದಕ್ಕೂ ಹೆಚ್ಚಿನ ಗರ್ಭೀಣಿಯರು ಪತ್ತೆಯಾಗಿದ್ದಾರೆ. ಆ ಮಹಿಳೆಯರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಈ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಗೆ ಕೆಲ ವೈದ್ಯರು ಸಹ ಸಾಥ್ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಚಿವ ಸತೀಶ್‌ ಜಾರಕಿಹೊಳಿ ಮೂಲಕ ನನ್ನ ಬಂಡಾಯಕ್ಕೆ ಉತ್ತರ ಸಿಕ್ಕಿದೆ – ರಮೇಶ್‌ ಜಾರಕಿಹೊಳಿ

0

ಬೆಳಗಾವಿ;- ನನ್ನ ಬಂಡಾಯಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಮೂಲಕ ಉತ್ತರ ಸಿಕ್ಕಿದೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,, ಈ ಹಿಂದೆ ನಾನು ಕಾಂಗ್ರೆಸ್‌ನಲ್ಲಿ ಬಂಡಾಯವೆದ್ದಾಗ ಜನ ನನ್ನನ್ನು ಬೈಯ್ದಿದ್ದರು. ನನ್ನನ್ನು ಬೈಯ್ದಿದ್ದವರಿಗೆ ಈಗ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮೂಲಕ ಉತ್ತರ ಸಿಕ್ಕಿದೆ. ನಾನು ಏಕೆ ಬಂಡಾಯವೆದ್ದಿದ್ದೆ ಎಂಬುದು ಗೊತ್ತಾಗಿದೆ ಎಂದರು.

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ವೇಳೆಯೇ ಸತೀಶ್‌ ಜಾರಕಿಹೊಳಿ ಪರಿಸ್ಥಿತಿ ಈ ರೀತಿಯಾಗಿದೆ. ಇನ್ನು ಬೇರೆಯವರು ಮುಖ್ಯಮಂತ್ರಿಯಾದರೆ ಅವರ ಪರಿಸ್ಥಿತಿ ಏನು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುವ ರೀತಿ ನೋಡಿದರೆ ಅವರು ಮೊದಲಿನಂತಿಲ್ಲ. ಹಾಗಾಗಿ, ಸಿದ್ದರಾಮಯ್ಯನವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಮಾತಿನ ದರ್ಪ, ಗಂಭೀರತೆ ಈಗ ಕಾಣುತ್ತಿಲ್ಲ. ಏಕೆ ಹೀಗೆ ಮಾಡುತ್ತಿದ್ದಾರೋ ಎಂಬುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ, ಅವರ ಬಗ್ಗೆ ಅಪಾರ ಗೌರವವಿದೆ. ಬಹುಶಃ ಹೈಕಮಾಂಡ್‌ ಹಾಗೂ ಕೆಲವರು ಅವರನ್ನು ಮುಕ್ತವಾಗಿ ಬಿಟ್ಟಿಲ್ಲ ಎಂದು ದೂರಿದರು. ಡಿಸಿಎಂ ಡಿ.ಕೆ.ಶಿವಕುಮಾರ ಇರುವವರೆಗೂ ನಮಗೆ ಪ್ರತಿಪಕ್ಷವಾಗಿ ವರದಾನ ಎಂದು ಇದೇ ವೇಳೆ ತಿಳಿಸಿದರು.

ಹಳ್ಳಿಕಾರ್ ವರ್ತೂರು ಸಂತೋಷ್ ಅರೆಸ್ಟ್; FSL ವರದಿ ಬಳಿಕ ಮತ್ತೊಂದು ಆಯಾಮದಲ್ಲಿ ತನಿಖೆ

0

ಬೆಂಗಳೂರು;- ಬಿಗ್ ಬಾಸ್ ಸೀಸನ್ 10 ರ ಸ್ಪಪ್ಧಿಯಾಗಿದ್ದ ವರ್ತೂರ್ ಸಂತೋಷ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ FSL ವರದಿ ಬಂದ ಬಳಿಕ ಮತ್ತೊಂದು ಆಯಾಮದಲ್ಲಿ ತನಿಖೆ ನಡೆಸಲಾಗುವುದು.

ಒಂದು ವೇಳೆ ಇದು ಹುಲಿಯದ್ದೇ ಉಗುರು ಅಂತ ಎಫ್​ಎಸ್​ಎಲ್​ ವರದಿ ಬಂದರೇ ವರ್ತೂರ್​ ಸಂತೋಷ್​​ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಪ್ರಕರಣದ ತನಿಖೆ ಮತ್ತೊಂದು ಆಯಾಮದಲ್ಲಿ ನಡೆಯಲಿದೆ.

ಎಫ್​ಎಸ್​ಎಲ್​ ವರದಿಯಲ್ಲಿ ಎಷ್ಟು ವರ್ಷದ ಹುಲಿ ಉಗುರು? ಯಾವ ಜಾತಿಯ ಹುಲಿ ? ಸೇರಿದಂತೆ ಮತ್ತಿತ್ತರ ಮಾಹಿತಿ ಲಭ್ಯವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಕಗ್ಗಲಿಪುರ ಅರಣ್ಯಾಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಹುಲಿ ಉಗುರನ್ನು ಸಂತೋಷ್​ಗೆ ನೀಡಿದ್ದು ಯಾರು? ಯಾರು ಮಾರಿದರು? ಇದರ ಮೂಲ ಎಲ್ಲಿ ಎಂಬ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ಎಫ್​​ಎಸ್​​ಎಲ್​ ವರದಿ ಮತ್ತು ತಾವು ನಡೆಸಿದ ತನಿಖೆಯ ವರದಿಯನ್ನು ಕಗ್ಗಲಿಪುರ ಅರಣ್ಯಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳಿಗೆ ಹಸ್ತಾಂತರ ಮಾಡಲಿದ್ದಾರೆ. ಈ​​ ವರದಿಗಳನ್ನು ಆಧರಿಸಿ ಪ್ರಾಧಿಕಾರಗಳು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ದತ್ತಾಂಶವನ್ನು ಪರಿಶೀಲನೆ ಮಾಡಲಿದ್ದಾರೆ.

ಬರದ ಪರಿಸ್ಥಿತಿ: ಮಳೆರಾಯನಿಗಾಗಿ ಕತ್ತೆ ಮದುವೆ ಮಾಡಿದ ರೈತರು

0

ಗದಗ;- ಮಳೆಯಿಲ್ಲದೇ ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಆದರೆ ಮಳೆಗಾಗಿ ನಡೆಯುತ್ತಿರುವ ಪ್ರಾರ್ಥನೆ ಮಾತ್ರ ಇನ್ನೂ ನಿಂತಿಲ್ಲ. ರೈತರು ಹಿಂಗಾರು ಮಳೆಗಾಗಿ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಈಗ ಕತ್ತೆಗಳ ಮದುವೆ ಮಾಡಿದರೆ ಮಳೆರಾಯ ನಗುಬೀರಿ ಮಳೆ ಸುರಿಸಿ ತಂಪೆರೆಯುತ್ತಾನೆ ಎಂಬ ರೈತರ ನಂಬಿಕೆ ಇನ್ನೂ ಜೀವಂತವಾಗಿದೆ.

ಅಂದಹಾಗೆ ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಕತ್ತೆಯ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದರು.

ಮದುವೆಯ ಹಿನ್ನೆಲೆಯಲ್ಲಿ ಸಾಂಪ್ರದಾಯದ ಪ್ರಕಾರ ಬಾಸಿಂಗವನ್ನು ಮಹಿಳೆಯರು ಹೂಗಾರರ ಮನೆಯಿಂದ ತಂದರೆ. ಪುರುಷರು ಅರಿಶಿಣ ಶಾಸ್ತ್ರವನ್ನು ಮಾಡಿ ಸುರುಗಿ ನೀರನ್ನು ಹಾಕಿದರು.
ಬಳಿಕ ಮಾಂಗಲ್ಯ ಧಾರಣೆ ಮಾಡಿ ಗ್ರಾಮಸ್ಥರು ಅಕ್ಷತೆಯನ್ನು ಹಾಕುವುದರ ಮೂಲಕ ಕತ್ತೆಗಳಿಗೆ ಸಾಂಪ್ರದಾಯಕವಾಗಿ ಮದುವೆ ಮಾಡಿ ಸಂಭ್ರಮಿಸಿದರು. ಮದುವೆ ನಂತರ ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ಮೂಲಕ ಕತ್ತೆಗಳ ಮದುವೆ ನೋಡಿ ವರುಣನಿಗೆ ನಗು ಬಂದು ಧರೆಗೆ ಇಳಿಯುತ್ತಾನೆ. ಆ ಮೂಲಕ ಭೂಮಿತಾಯಿ ಮಡಿಲನ್ನು ತಂಪುಗೊಳಿಸಿ ಎಲ್ಲಾ ಸಕಲ ಜೀವರಾಶಿಗಳ ದಾಹ ನೀಗಿಸುತ್ತಾನೆ ಅಂತ ರೈತರು ನಂಬಿಕೆಯಾಗಿದೆ.

ಕೈ ಕೊಟ್ಟ ಮಳೆ; ಆತ್ಮಹತ್ಯೆಗೆ ಶರಣಾದ ಅನ್ನದಾತ ರೈತ

0

ಹುಬ್ಬಳ್ಳಿ;- ಸಾಲದ ಬಾಧೆಯಿಂದ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿ ಸಮೀಪದ ಕುಂದಗೋಳ ತಾಲೂಕು ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ ಬಹದ್ದೂರಪ್ಪ ಪೂಜಾರ (68) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಕೆನರಾ ಬ್ಯಾಂಕಿನಲ್ಲಿ ಮೂರು ಲಕ್ಷ ಹಾಗೂ ಕೈಗಡ 2 ಲಕ್ಷ ಸಾಲ ಮಾಡಿಕೊಂಡಿದ್ದ. ಅದಲ್ಲದೆ ಟ್ರ್ಯಾಕ್ಟರ್ ಸಾಲ 4.50 ಲಕ್ಷ ಮಾಡಿಕೊಂಡಿದ್ದ. ಆದ್ರೆ ಹಿಂಗಾರು‌ ಮಳೆಯಾಗಲಿಲ್ಲ.‌ ಈಗ ಮುಂಗಾರು ಮಳೆಯೂ ಸಮಯಕ್ಕೆ ಸರಿಯಾಗಿ ಬಾರದೆ ಬೆಳೆದ ಬೆಳೆಯಲ್ಲ ಹಾಳಾಗಿದ್ದು ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.ಈ ಸಂಬಂಧ ಕುಂದಗೋಳ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ

ಹುಬ್ಬಳ್ಳಿ ಸಮೀಪದ ಕುಂದಗೋಳ ತಾಲೂಕಿನ ಚಾಕಲೆಬ್ಬಿ ಗ್ರಾಮದ ಮುಂಗಾರು ಹಿಂಗಾರು ಮಳೆ ಇಲ್ಲದೆ ಬೆಳೆಬಾರದೆ ರೈತ ಪೂಜಾರ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾದ ಹೇಮನಗೌಡ್ರು ಬಸನಗೌಡರು ಮೃತ ರೈತನ ಕುಟುಂಬಕ್ಕೆ ಸಾಂತ್ವಾನ ಹೇಳಿದರು ಸರ್ಕಾರದಿಂದ ಮುಕ್ತ ರೈತನ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಬೇಕು ಅವರ ಕುಟುಂಬಕ್ಕೆ ಸರ್ಕಾರದಿಂದ ಸರಿಯಾದ ಸೌಲತ್ತುಗಳನ್ನು ಕೊಡಬೇಕೆಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ ಯೋಗಪ್ಪನವರ ವಿಟ್ಟಲ್ ಗಾಡಿಗೆ ಗುರುನಾಥ ಹೊನ್ನಳ್ಳಿ ಗ್ರಾಮದ ವಿವಿಧ ರೈತ ಮುಖಂಡರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಮೃತ ರೈತನಿಗೆ ಒಂದು ನಿಮಿಷ ಮೌನ ಆಚರಣೆ ಮಾಡಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಂಡರು.

ಮೀಸಲಾತಿ ನೀಡಿ ಇಲ್ಲವೇ ಹೋರಾಟ ಎದುರಿಸಿ; ಜಯಮೃತ್ಯುಂಜಯ ಸ್ವಾಮೀಜಿ ವಾರ್ನಿಂಗ್!

0

ಬೆಂಗಳೂರು;- MP ಎಲೆಕ್ಷನ್ ಒಳಗಾಗಿ ಮೀಸಲಾತಿ ನೀಡಿ ಇಲ್ಲವೇ ಹೋರಾಟ ಎದುರಿಸಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಲಿಂಗಾಯತ ಸಮುದಾಯದ ನ್ಯಾಯಯುತ ಮೀಸಲಾತಿಗಾಗಿ 3 ವರ್ಷ ಹೋರಾಡಿದ್ದೇವೆ. ಚಳುವಳಿ ಒಂದು ಹಂತಕ್ಕೆ ತಲುಪಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕುಳಿತಾಗ ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಿಂದ ಹಿಂದಿನ ಸರ್ಕಾರ ಹೊಸದಾಗಿ 2ಡಿ ಎಂದು ಹೊಸ ಮೀಸಲಾತಿ ಘೋಷಿಸಿತು. ಚುನಾವಣೆ ನೀತಿ ಸಂಹಿತೆ ಕಾರಣ ವಿಳಂಬವಾಗಿತ್ತು. ನಂತರ ಸರ್ಕಾರ ಬದಲಾಯಿತು. ಸಮುದಾಯದ ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಈ ಕುರಿತು ಒಂದು ಸಭೆ ಕರೆಯುತ್ತೇವೆ. ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇವೆ ಎಂದಿದ್ದರು. ಆದರೆ, ಸಭೆಯಾಗಿ ಮೂರ್ನಾಲ್ಕು ತಿಂಗಳಾದರೂ ಏನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿಗಾಗಿ ಈ ಸರ್ಕಾರಕ್ಕೆ ಮತ್ತೊಮ್ಮೆ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆಯ ಮೂಲಕ ಹೋರಾಟ ಆರಂಭಿಸಿದ್ದೇವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಧಾರವಾಡದಲ್ಲಿ ಮಾಡಿದ್ದೇವೆ. ಎಲ್ಲ 31 ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತೇವೆ. ಹೋರಾಟ ಮುಗಿಯುವುದರೊಳಗೆ ಸರ್ಕಾರ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಸಮಾಜದ ಬಾಂಧವರೆಲ್ಲ ಸೇರಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಯಲ್ಲಿ ಸಮುದಾಯ ಶಕ್ತಿ ಪ್ರದರ್ಶನ ಮಾಡುತ್ತೇವೆ. ಹೋರಾಟ ತೀವ್ರಗೊಳ್ಳುತ್ತದೆ. ಲೋಕಸಭೆ ಚುನಾವಣೆಯೊಳಗೆ ಸಮಾಜಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ಹಿಂದುತ್ವ ನನ್ನ ರಕ್ತದ ಪ್ರತಿ ಕಣದಲ್ಲೂ ಇದೆ ಎಂದ MP ರೇಣುಕಾಚಾರ್ಯ

0

ದಾವಣಗೆರೆ;- ನನ್ನ ರಕ್ತದ ಪ್ರತಿ ಕಣದಲ್ಲೂ ಹಿಂದುತ್ವವಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆಲ್ಲಾ ನಾನೇಕೆ ಉತ್ತರ ಕೊಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ಧಾಳಿ ಮುಂದುವರಿಸಿದರು.

ಸಂಸದ ಸಿದ್ದೇಶ್ವರರ ಬಗ್ಗೆ ನನಗೆ ಗೌರವವಿದೆ. ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯನಿದ್ದೇನೆ. ಸಂಸದರು ವಯಸ್ಸಿನಲ್ಲಿ ಹಿರಿಯರಾಗಿರಬಹುದು. ಆದರೆ, ಪಕ್ಷದಲ್ಲಿ ನಾನು ದಾವಣಗೆರೆ ಸಂಸದರಿಗಿಂತ ಸೀನಿಯರ್ ಇದ್ದೀನಿ ಎಂದರು.

ಬಿಜೆಪಿಗಾಗಿ ಎರಡು ಸಲ ಜೈಲಿಗೆ ಹೋಗಿ ಬಂದವನು ನಾನು, ನನ್ನ ರಕ್ತದ ಪ್ರತಿ ಕಣದಲ್ಲಿಯೂ ಹಿಂದುತ್ವ ಇದೆ. ರೇಣುಕಾಚಾರ್ಯ ಏನೇ ಮಾತನಾಡಿದರು, ಏನೇ ಒಂದು ಮಾತು ಹೇಳಿದರೂ ಅದು ಪಕ್ಷ ದ್ರೋಹವೆನ್ನುತ್ತಾರೆ. ಆದರೆ, ಬೇರೆ ಕೆಲವರು ಮಾತನಾಡಿದರೆ ಅದು ಪಕ್ಷ ದ್ರೋಹವಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ರಾಮನಗರ ಜಿಲ್ಲೆ ಉದ್ಧಾರ ಆಗೋದು ಡಿಕೆಶಿ ಗೆ ಇಷ್ಟ ಇಲ್ಲ‌ – ರವಿಕುಮಾರ್

0

ಬೆಂಗಳೂರು;- ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರ ಹಿಂದೆ ಡಿಕೆಶಿ ಕುಟುಂಬವನ್ನು ಶ್ರೀಮಂತಗೊಳಿಸುವ ಹುನ್ನಾರ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಹೇಳಿಕೆ ನೀಡಿದ್ದಾರೆ. ಅವರಿಗೆ ರಾಮನಗರ ಜಿಲ್ಲೆ ಉದ್ಧಾರ ಆಗೋದು ಇಷ್ಟ ಇಲ್ಲ‌. ರಾಮನಗರ ಜಿಲ್ಲೆಯನ್ನು ಹೇಗೆ ಕ್ಷೀಣ ಮಾಡಬಹುದು ಅಂತ ಯೋಚನೆ ಮಾಡುತ್ತಿದ್ದಾರೆ. ಕನಕಪುರ ಬೆಂಗಳೂರು ಗ್ರಾಮಾಂತರ ಅಷ್ಟೇ ಅಲ್ಲ. ನಗರಕ್ಕೆ ಸೇರಿಸಬೇಕು ಅನ್ನೋದು ಅವರ ಚಿಂತನೆ ಎಂದರು.

ಅಭಿವೃದ್ಧಿ ಮಾಡಬೇಕು ಅಂದರೆ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ. ಜಿಲ್ಲೆಗೆ ನಿಮ್ಮ ಕೊಡುಗೆ ಏನು?, ಕನಕಪುರ ತಾಲೂಕಿನ ಬಗ್ಗೆ ಯಾಕಿಷ್ಟು ಕಾಳಜಿ ಎಂದು ಪ್ರಶ್ನಿಸಿದರು. ಚಾಮರಾಜನಗರ ಜಿಲ್ಲೆಯಾಗಲು ನಮ್ಮ ಬಿಜೆಪಿ ಸರ್ಕಾರ ಕಾರಣ. ಬರ, ವಿದ್ಯುತ್ ಬಗ್ಗೆ ಯಾಕೆ ಯೋಚನೆ ಮಾಡುತ್ತಿಲ್ಲ. ಇಷ್ಟು ಸ್ವಾರ್ಥ ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಟೀಕಿಸಿದರು.

error: Content is protected !!