Home Blog Page 3231

ಕಾಂಗ್ರೆಸ್-ಬಿಜೆಪಿ ಎರಡೂ ಪರ್ಸೆಂಟೇಜ್ ಪಕ್ಷಗಳು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕಾಂಗ್ರೆಸ್- ಬಿಜೆಪಿ ಎರಡು ಪಕ್ಷಗಳೂ ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ. ಇಬ್ಬರೂ ಜನತೆಯ ದುಡ್ಡನ್ನು ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದ ಜನತೆ ಎರಡೂ ಪಕ್ಷಗಳಿಗೆ ಪಾಠ ಕಲಿಸಲು ಮನಸ್ಸು ಮಾಡಬೇಕಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ಜೆಡಿಎಸ್- ಬಿಜೆಪಿ ಮಧ್ಯೆ ಹೋರಾಟ ಇದ್ದು, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಕುಮಾರಸ್ವಾಮಿ ಕಾಲು ಕೆರೆದು ಜಗಳಕ್ಕೆ ಬರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಕಾಲು ಕೆರೆದುಕೊಂಡು ಬರೋಕೆ ನನಗೆ ಬೇರೆ ಕೆಲಸ ಇಲ್ವಾ ? ಅವರು ನನ್ನ ಸುದ್ದಿಗೆ ಬರದೆ ಇದ್ದರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ. ಕಾಂಗ್ರೆಸ್ ನಾಯಕರ ರೀತಿ ವೈಯಕ್ತಿಕವಾಗಿ ಮತ ಪಡೆಯುವ ಅವಶ್ಯಕತೆ ನಮಗಿಲ್ಲ ಎಂದರು.

ಪುಟಗೋಸಿ ವಿರೋಧ ಪಕ್ಷದ ಸ್ಥಾನ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಿಎಂ, ವಿರೋಧ ಪಕ್ಷದ ಸ್ಥಾನಕ್ಕೆ ಗೌರವ ಕೊಡುತ್ತೇನೆ. ಆದರೆ, ಆ ಸ್ಥಾನದಲ್ಲಿರುವ ಸಿದ್ದರಾಮಯ್ಯ ನಡವಳಿಕೆ ಬಗ್ಗೆ ನಾನು ಮಾತಾಡಿದ್ದೇನೆ ಎಂದ ಅವರು, ಜಮೀರ್ ಬಗ್ಗೆ ನಾನು ಚರ್ಚೆ ಮಾಡಲ್ಲ. ದೇವರಿದ್ದಾನೆ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

ಸಾಯೋದರೊಳಗೆ ಪ್ರಾದೇಶಿಕ ಪಕ್ಷದ ಸರ್ಕಾರ ನೋಡುವ ಆಸೆ

  • ಸಿಂದಗಿಯ ಚಟ್ಟರಕಿ ಗ್ರಾಮದಲ್ಲಿ ಭಾವುಕರಾದ ಮಾಜಿ ಪ್ರಧಾನಿ ದೇವೇಗೌಡ

ವಿಜಯಸಾಕ್ಷಿ ಸುದ್ದಿ, ಸಿಂದಗಿ

ನಾನು ಎಷ್ಟು ದಿನ ಬದುಕುತ್ತೇನೊ ಗೊತ್ತಿಲ್ಲ. ನಾನು ಸತ್ತರೂ ಪ್ರಾದೇಶಿಕ ಪಕ್ಷ ಜೀವಂತ ಇರಬೇಕು. ನನ್ನ ಆಯುಸ್ಸು ಮುಗಿವುದೊರಳಗೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಸಿಂದಗಿಯ ಚಟ್ಟರಕಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಪರ ಮಾತಯಾಚಿಸಿ ಮಾತನಾಡಿದ ಅವರು, ನಿಮ್ಮಲ್ಲಿ ಮತಭಿಕ್ಷೆ ಬೇಡುತ್ತೇನೆ. ನನ್ನ ಕೊನೆಯ ಘಟ್ಟದಲ್ಲಿ ಕೇಳುತ್ತಿದ್ದೇನೆ. ಜೆಡಿಎಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿ. ಇನ್ನು ಎಷ್ಟು ದಿನ ಬದುಕುತ್ತೇನೋ ದೇವರು ಆಯುಷ್ಯ ಕೊಡಬೇಕಷ್ಟೆ ಎಂದು ಭಾವುಕರಾದರು.

ಕೋಟೆನಾಡಲ್ಲಿ ಮಾಜಿ – ಹಾಲಿ ಸಿಎಂಗಳ ಮುನಿಸು?

ವೇದಿಕೆ ಹಂಚಿಕೊಂಡರೂ ಪರಸ್ಪರರತ್ತ ತಿರುಗಿ ನೋಡದ ಮಾಜಿ ಸಿಎಂ ಬಿಎಸ್ ವೈ, ಹಾಲಿ ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಗುರು ಶಿಷ್ಯರಂತಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೋಟೆನಾಡಲ್ಲಿ ನಡೆದ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರರತ್ತ ತಿರುಗಿ ನೋಡದೆ ಅಂತರ ಕಾಯ್ದುಕೊಂಡಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಚಿತ್ರದುರ್ಗದ ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ನಡೆದ ಗುರುವಂದನ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಎಸ್ ವೈ ಹಾಗೂ ಸಿಎಂ ಬೊಮ್ಮಾಯಿ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಮುಗಿಯುವವರೆಗೂ ಪರಸ್ಪರ ಮಾತನಾಡುವುದು ದೂರದ ಮಾತು ಒಬ್ಬರು ಮತ್ತೊಬ್ಬರತ್ತ ತಿರುಗಿ ನೋಡದಿರುವುದು ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿಸಿದೆ.

ಬೊಮ್ಮಾಯಿ ಅವರು ಜನತಾ ಪರಿವಾರ ತೊರೆದು ಬಿಜೆಪಿ ಸೇರಿದಾಗಿನಿಂದ ಬಿಎಸ್ ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕವಂತೂ ಇಬ್ಬರ ನಡುವೆ ಅತ್ಯಂತ ಆತ್ಮೀಯ ಸಂಬಂಧ ಬೆಳೆದಿತ್ತು. ಸಿಎಂ ಬಳಿಕ ಸಂಪುಟದ ಎರಡನೇ ಸ್ಥಾನ ಹೊಂದಿರುವ ಗೃಹಖಾತೆ ನೀಡಿ ಬೊಮ್ಮಾಯಿ ಮೇಲೆ ಅಕ್ಕರೆ ತೋರಿಸಿದ್ದರು.

ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಬಸವರಾಜ ಬೊಮ್ಮಾಯಿ ಬಿಎಸ್ ವೈ ನೆರಳಿನಂತೆ ಗುರುತಿಸಿಕೊಂಡಿದ್ದರು.

ಆದರೆ, ಹೈಕಮಾಂಡ್ ಸೂಚನೆ ಪಾಲಿಸಿ ಬಿಎಸ್ ವೈ ಸಿಎಂ ಗದ್ದುಗೆಯಿಂದ ಕೆಳಗಿಳಿದ ಬಳಿಕ ಮೂಲ ಬಿಜೆಪಿಯ ಘಟಾನುಘಟಿ ಮುಖಂಡರನ್ನೇ ಹಿಂದಿಕ್ಕಿ ಬೊಮ್ಮಾಯಿ ಅವರು ಸಿಎಂ ಆಗಿದ್ದು, ಬಿಎಸ್ ವೈ ಕೃಪಾಶೀರ್ವಾದದಿಂದಲೇ ಎಂಬ ಮಾತುಗಳೂ ಸಹ ಕೇಳಿಬಂದಿದ್ದವು.

ಆದರೆ, ನಂತರ ನಡೆದ ಕೆಲ ಘಟನೆಗಳು ಇಬ್ಬರ ಮಧ್ಯೆ ಮುನಿಸು ಉಂಟಾಗಲು ಕಾರಣವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಮೊದಲನೆಯದಾಗಿ ಪುತ್ರ ವಿಜಯೇಂದ್ರನಿಗೆ ಸರ್ಕಾರದಲ್ಲೂ ಸ್ಥಾನ ಸಿಗದೆ ಪಕ್ಷದಲ್ಲೂ ಪ್ರಾಧಾನ್ಯತೆ ಕಡಿಮೆಯಾಗಿರುವುದು, ಈಚೆಗೆ ತಮ್ಮ ಆಪ್ತರ ಮೇಲೆ ನಡೆದ ಐಟಿ ರೇಡ್ ಬಿಎಸ್ ವೈ ರನ್ನು ಘಾಸಿಗೊಳಿಸಿದ್ದು, ಹೀಗಾಗಿಯೇ ಸಿಎಂ ಬೊಮ್ಮಾಯಿ ಜೊತೆಗೆ ಅಂತರ ಕಾಯ್ದುಕೊಂಡಿರಬಹುದು ಎಂಬ ಚರ್ಚೆಗಳು ಕೇಳಿಬಂದಿವೆ.

ಜೆಡಿಎಸ್ ಮುಖಂಡ ಅಕ್ತರ್‌ಗೆ ಆವಾಜ್ ಹಾಕಿದ ಮನಿಯಾರ್!

0

-ಅನ್ಸಾರಿಯವರನ್ನ ಮಂತ್ರಿ ಮಾಡಿದ್ದು ಅಲ್ಪಸಂಖ್ಯಾತರ ಮತಗಳಿಗಾಗಿ

-ದೇವೇಗೌಡರ ರಾಜಕೀಯ ತಂತ್ರಗಾರಿಕೆ

-ಅಕ್ತರ್‌ಸಾಬ್ ಯಾವ ಸೀಮೆ ದೊಣ್ಣೆನಾಯಕ

-ಕ್ಷೇತ್ರದ 63 ಸಾವಿರ ಜನ ಅನ್ಸಾರಿಯವರ ಜೊತೆಗಿದ್ದಾರೆ

ವಿಜಯಸಾಕ್ಷಿ ಸುದ್ದಿ, ಗಂಗಾವತಿ:

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ಜೆಡಿಎಸ್‌‌ನ ಪಿ.ಅಕ್ತರ್ ಸಾಬ್ ಯಾವ ಸೀಮೆ ದೊಣ್ಣೆ ನಾಯಕ. ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಿದರೆ ಒಳ್ಳೇಯದು. ನಾವೇನಾದರೂ ಎರಡನೇ ನಾಲಿಗೆ ತೆರೆದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಗಂಗಾವತಿ ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಆವಾಜ್ ಹಾಕಿದರು.

ಸೋಮವಾರ ಅನ್ಸಾರಿಯವರ ನಿವಾಸದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು,
ಸಿದ್ದರಾಮಯ್ಯನವರನ್ನು ನಮ್ಮ ನಾಯಕರಾಗಿ ಒಪ್ಪಲ್ಲ ಎಂಬ ಮುಸ್ಲಿಂ ಮುಖಂಡ ಅಕ್ತರ್‌ಸಾಬ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಅನ್ಸಾರಿ ಹಿಂದೆ 63 ಸಾವಿರ ಜನ ಕಾರ್ಯಕರ್ತರಿದ್ದೇವೆ…
ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡು ಎಂದು ಎಚ್ಚರಿಕೆ‌ ನೀಡಿದ ಅವರು,
ಮಸೀದಿಗಳು ಪ್ರಾರ್ಥನೆ ಮಾಡೋಕೆ ಇವೆ, ಆಣೆ ಮಾಡೋಕೆ ಅಲ್ಲ…
ರಾತ್ರಿ ಕುಡಿದು ಬರೋರಿಗೆ ಮಸೀದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀನ ಆಣೆ ಮಾಡೋಕೆ ಯಾವದರ ದರ್ಗಾಗೆ ಹೋಗು,ಮಠಕ್ಕೆ ಹೋಗು, ಆದ್ರೆ ಮಸೀದಿಗೆ ಬರಬೇಡ..
ದೇವೇಗೌಡ, ಕುಮಾರಸ್ವಾಮಿಯವರು ಅನ್ಸಾರಿಯನ್ನ ಮಂತ್ರಿ ಮಾಡಿಲ್ಲ..
ಅಲ್ಪ ಸಂಖ್ಯಾತರ ನಾಯಕ ಯಾರೂ ಇಲ್ಲ, ಮುಸ್ಲಿಂರ ಮತಕ್ಕಾಗಿ ಮಂತ್ರಿ ಮಾಡಿದ್ದಾರೆ. ಕೊಪ್ಪಳದಲ್ಲಿ ಜೆ.ಡಿ.ಎಸ್.ದ್ವಜ ಹಿಡಿಯೋರು ಯಾರೂ ಇರಲಿಲ್ಲ..
ಅನ್ಸಾರಿ ಬಂದ ಮೇಲೆ ಜೆ.ಡಿ.ಎಸ್ ಗೆ ಈ ಭಾಗದಲ್ಲಿ ಶಕ್ತಿ ಬಂದಿದೆ ಎಂದು ಶ್ಯಾಮಿದ್ ಕುಟುಕಿದರು.

ಅಲ್ಪಸಂಖ್ಯಾತರ ನಾಯಕ ಅನ್ಸಾರಿ ಸಾಹೇಬ್ರು. ಅನ್ಸಾರಿಯವರಿಗೆ ಸಿದ್ದರಾಮಯ್ಯನವರು ನಾಯಕ. ಸಿದ್ದರಾಮಯ್ಯನವರ ನಾಯಕತ್ವದಲ್ಲೇ ಅನ್ಸಾರಿ ಸಾಹೇಬ್ರು ಚುನಾವಣೆ ಎದುರಿಸಿ ಗೆದ್ದೇ ಗೆಲ್ಲುತ್ತಾರೆ. ಅನ್ಸಾರಿಯವರನ್ನು ಟೀಕಿಸುವವರು ತಾಕತ್ತಿದ್ದರೆ ಎಲೆಕ್ಷನ್‌ನಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಹಾಗೂ ಟಿ.ಎ.ಶರವಣ್ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ಸಿದ್ದರಾಮಯ್ಯನವರು ಈಗಲೂ ಅಲ್ಪಸಂಖ್ಯಾತರ ಧ್ವನಿಯಾಗಿ ಘರ್ಜಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ಅಲ್ಪಸಂಖ್ಯಾತರ ನಾಯಕ ಎಂದು ಪುನರುಚ್ಛರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲೇಶ್ ದೇವರಮನಿ, ಮಹಮ್ಮದ್ ಹನೀಫ್, ಮೌಲಾಸಾಬ್, ಮೆಹಬೂಬ್ ಸಾಬ್ ಮತ್ತಿತರರು ಇದ್ದರು.

ಸರ್ಕಾರಿ ಇಲಾಖೆಗಳು, ಅಧಿಕಾರಿಗಳನ್ನೇ ಕೇಸರೀಕರಣ ಮಾಡೋದು ಎಷ್ಟು ಸರಿ ?

ವಿಜಯಸಾಕ್ಷಿ ಸುದ್ದಿ, ವಿಜಯಪುರ

ರಾಜ್ಯದ ಠಾಣೆಗಳಲ್ಲಿನ ಪೊಲೀಸರು ಕೇಸರಿ ಮಯಯಾಗುತ್ತಿದ್ದಾರೆ.‌ ಒಬ್ಬರೋ ಇಬ್ಬರೋ ಬೇಕಾದ್ರೆ ಕೇಸರಿ ವಸ್ತ್ರಗಳನ್ನು ಹಾಕಿಕೊಳ್ಳಲಿ. ಆದರೆ, ಠಾಣೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಕೇಸರಿಯಾಗುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿಂದಗಿಯ ಮೊರಟಿಗಿಯಲ್ಲಿ ಪ್ರಚಾರದ ವೇಳೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ಕೇಸರೀಕರಣ ಆರೋಪ ಸಮರ್ಥಿಸಿಕೊಂಡ ಮಾಜಿ ಸಿಎಂ, ಈ ವಿಚಾರವನ್ನು ನಾನು ಟ್ವೀಟ್ ಮೂಲಕ ಖಂಡಿಸಿದ್ದೇನೆ.

ಬಿಜೆಪಿ, ಆರ್.ಎಸ್.ಎಸ್. ಏನಾದರೂ ಮಾಡಿಕೊಳ್ಳಲಿ. ಆದರೆ, ಸರ್ಕಾರಿ ಇಲಾಖೆಗಳು, ಅಧಿಕಾರಿಗಳನ್ನೇ ಕೇಸರಿಕರಣ ಮಾಡೋದು ಎಷ್ಟು ಸರಿ. ಕೇಸರಿ ಜೊತೆ ತ್ರಿಶೂಲವನ್ನೂ ಕೈಯಲ್ಲಿ ಕೊಟ್ಟುಬಿಡಿ ಎಂದು ವ್ಯಂಗ್ಯವಾಗಿ ಹೇಳಿದ್ದೆ ಎಂದು ಸಮರ್ಥಿಸಿಕೊಂಡರು.

ಸಾಣಾಪುರ ಕೆರೆಯಲ್ಲಿ ಇಬ್ಬರು ಐಟಿ ಉದ್ಯೋಗಿಗಳ ಸಾವು!

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ತಾಲೂಕಿನ ಸಾಣಾಪುರ ಎಡದಂಡೆ ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಹೈದರಾಬಾದ್ ಮೂಲದ ಇಬ್ಬರು ಐಟಿ ಬಿಟಿ ಉದ್ಯೋಗಿಗಳು ನಾಪತ್ತೆಯಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ಜರುಗಿದೆ.

ಹೈದರಾಬಾದ್ ಮೂಲದ ಕೆ.ಆರ್.ಪುರಂ ನಿವಾಸಿಗಳಾದ ಮಧುಕಿರಣ್ (25) ಹಾಗೂ ರಾಜೇಶ್ ಕುಮಾರ್ (26) ಸಂಗಾಪುರ ಹತ್ತಿರವಿರುವ ಮೇಘರಾಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭದಲ್ಲಿ ಕಲ್ಲಿನ ಮೇಲಿಂದ ಜಂಪಿಂಗ್ ಮಾಡುವ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್, ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಕರೆದು ತೊಡಗಿದ್ದಾರೆ. ರಾಜೇಶ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಇನ್ನೂ ಮಧುಕಿರಣ್ ಪತ್ತೆಯಾಗಿಲ್ಲ .

ಸಾಣಾಪುರ ಕೆರೆಯಲ್ಲಿ ಇಬ್ಬರು ಐಟಿ ಉದ್ಯೋಗಿಗಳ ಸಾವು!

0

ವಿಜಯಸಾಕ್ಷಿ ಸುದ್ದಿ,
ಗಂಗಾವತಿ: ತಾಲೂಕಿನ ಸಾಣಾಪುರ ಎಡದಂಡೆ ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಹೈದರಾಬಾದ್ ಮೂಲದ ಇಬ್ಬರು ಐಟಿ ಬಿಟಿ ಉದ್ಯೋಗಿಗಳು ನಾಪತ್ತೆಯಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ಜರುಗಿದೆ.

ಹೈದರಾಬಾದ್ ಮೂಲದ ಕೆ.ಆರ್.ಪುರಂ ನಿವಾಸಿಗಳಾದ ಮಧುಕಿರಣ್ (25) ಹಾಗೂ ರಾಜೇಶ್ ಕುಮಾರ್ (26) ಸಂಗಾಪುರ ಹತ್ತಿರವಿರುವ ಮೇಘರಾಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭದಲ್ಲಿ ಕಲ್ಲಿನ ಮೇಲಿಂದ ಜಂಪಿಂಗ್ ಮಾಡುವ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್, ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಕರೆದು ತೊಡಗಿದ್ದಾರೆ. ರಾಜೇಶ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಇನ್ನೂ ಮಧುಕಿರಣ್ ಪತ್ತೆಯಾಗಿಲ್ಲ .

ಮೈಸೂರಲ್ಲಿ ಏನೂ‌ ಮಾಡಲಾಗದವರು ಹಾನಗಲ್ ಗೆ ಬಂದು ಏನು ಮಾಡ್ತೀರಾ ?

  • ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಮೈಸೂರನಲ್ಲಿ ಏನೂ ಮಾಡಲು ಸಾಧ್ಯವಾಗದವರು ಹಾನಗಲ್ ಗೆ ಬಂದು ಎನು ಮಾಡ್ತೀರಾ. ಮೈಸೂರು ಜನರೇ ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ಹಾನಗಲ್ ಜನ ಯಾಕೆ ವಿಶ್ವಾಸ ಇಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.

ಹಾನಗಲ್ ನಲ್ಲಿ ಉಪಚುನಾವಣೆಯ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಣ್ಣ ಮಾತು ಎತ್ತಿದ್ರೆ ಮೋದಿಯ ಬಗ್ಗೆ ಮಾತಾಡ್ತಾರೆ. ಮೋದಿಯ ವಿರುದ್ಧ ಮಾತನಾಡಿದ್ರೆ ದೊಡ್ಡ ವ್ಯಕ್ತಿ ಆಗುತ್ತೆನೆಂದುಕೊಂಡಿದ್ದಾರೆ. ಅಚ್ಚೇ ದಿನ್ ಎಲ್ಲಿದೆ ಎಂದು ಪದೇ ಪದೆ ಪ್ರಶ್ನೆ ಮಾಡುತ್ತಾರೆ. ಅಚ್ಚೇ ದಿನ್ ದೇಶದ ಜನರಿಗೆ ಬರುತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇರುವವರೆಗೂ ಅಚ್ಚೇ ದಿನ್ ಬರಲ್ಲ. ಅವರಿಗೆ ಅಚ್ಚೇ ದಿನ್ ಬರಲು ಡಿಕೆಶಿ ಬಿಡಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ನಲ್ಲಿ ಪಿಸು ಮಾತು ಶುರುವಾಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು, ರಾಜ್ಯದಲ್ಲಿ ಗದ್ದುಗೆ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ತಮ್ಮ ಶಿಷ್ಯರ ಮೂಲಕ ಪಿಸುಮಾತು ಆಡಿಸುತ್ತಿದ್ದಾರೆ. ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್ ನಾಯಕರೇ ಸಾಕು ಎಂದರು.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಎಲ್ಲರ ಮೇಲೆ ಆರೋಪ ಇದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ನಾವು ಜನರ ಜೊತೆ ಇರುವವರು. ಭೂಮಿಯಲ್ಲಿ ಆಳವಾಗಿ ಬೇರೂರಿರುವವರು. ನಿಮ್ಮ ಹಾಗೆ ಕುಂಡಲಿಯಲ್ಲಿ ಇರುವ ಗಿಡಗಳಲ್ಲ. ಅಧಿಕಾರ ಶಾಶ್ವತ ಅಲ್ಲ. ವಿಶ್ವಾಸ ಶಾಶ್ವತ.‌ ನಾನು ನಿಮ್ಮ ಪ್ರೀತಿ ವಿಶ್ವಾಸ ಗಳಿಸಲು ಬಂದಿದ್ದೇನೆ ಎಂದು ಹೇಳಿದರು.

ಹಿರೇಕೌಂಸಿ, ಬಾಳಬೀಡ ನೀರಾವರಿ ಯೋಜನೆ ಮಾಡಿದ್ದು ಬಿಜೆಪಿ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದ ವೇಳೆ ಇವರು ಮಾಡಿದ್ದಾದರೂ ಏನು. ಕೆರೆ ತುಂಬಿಸುವ ಯೋಜನೆ ಬಗ್ಗೆ ಸಿದ್ದರಾಮಯ್ಯ ನವರಿಗೆ ದಾಖಲೆ ಕಳುಹಿಸಿಕೊಡುವೆ. ಬಾರಪ್ಪ ಬಾ ಸಿದ್ದರಾಮಣ್ಣ, ಬೊಮ್ಮಾಯಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ನೋಡು ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸಿದ್ದು ಬಿಜೆಪಿ ಸರ್ಕಾರ. ಈ‌ ಕ್ಷೇತ್ರದ 20 ಸಾವಿರ ಜನರಿಗೆ ಕಾರ್ಮಿಕ ಇಲಾಖೆ ಆಹಾರ ಕಿಟ್ ನೀಡಿದ್ದೇವೆ. ಕೋವಿಡ್ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿಜವಾದ ಸೇವೆ ಮಾಡಿದೆ. ಸೇವೆ ಮಾಡಿದ್ದೇವೆ ಎಂದು ಕಾಂಗ್ರೆಸ್ ನವರು ಜನರ ಬಳಿ ಮತ ಕೇಳುತ್ತಿದ್ದಾರೆ. ಇವರು ಯಾವ ಸೇವೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ರೈತ ಕೂಡ ಕೋಟಿ ಲೆಕ್ಕದಲ್ಲಿ ಮಾತನಾಡುವ ಸಮಯ ಬರಲಿ

ಕೃಷಿ ಸಾಧಕಿ ಕವಿತಾ ಉಮಾಶಂಕರ ಮಿಶ್ರಾ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ನರಗುಂದ

ಕೇವಲ ಇಂಜಿನಿಯರ್, ಡಾಕ್ಟರ್, ಲಾಯರ್ ಮಾತ್ರ ಕೋಟಿ ಲೆಕ್ಕದಲ್ಲಿ ಮಾತಾಡುವುದಲ್ಲ, ಒಬ್ಬ ರೈತ ಕೂಡ ಕೋಟಿ ಲೆಕ್ಕದಲ್ಲಿ ಮಾತಾಡಬೇಕು. ಜಗತ್ತಿನಲ್ಲಿ ಎಲ್ಲ ಇಲ್ಲದಿದ್ದರೂ ಜಗತ್ತು ನಡೆಯುತ್ತದೆ. ಆದರೆ ರೈತ ಇಲ್ಲದಿದ್ದರೆ ಜಗತ್ತೇ ನಿಂತು ಹೋಗುತ್ತದೆ.‌ ರೈತ ದೇಶದ ಬೆನ್ನೆಲುಬು ಅಲ್ಲ ಜಗತ್ತಿನ ಬೆನ್ನೆಲುಬು ಎಂದು ಕೃಷಿ ಸಾಧಕಿ ಕವಿತಾ ಉಮಾಶಂಕರ ಮಿಶ್ರಾ ಹೇಳಿದರು.

ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಶ್ರೀ ಯಚ್ಚರಸ್ವಾಮಿಗಳು ಗವಿಮಠದ ಅಜ್ಜನ ಜಾತ್ರೆ ಅಂಗವಾಗಿ ರೈತ ಮತ್ತು ಸೈನಿಕ ಹಿತಚಿಂತನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹೆಣ್ಣು ಸೃಷ್ಟಿಯ ಸಂಕೇತ. ನಿಮ್ಮಿಂದ ಅಸಾಧ್ಯವಾದುದು ಯಾವುದೂ ಇಲ್ಲ.‌ ನೀವು ಎಲ್ಲವನ್ನೂ ಸಾಧಿಸಬಲ್ಲಿರಿ‌ ಎಂದು ಮಹಿಳೆರಿಗೆ ಸ್ಫೂರ್ತಿ ತುಂಬಿದರು.

ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುವ 100ಕ್ಕೂ ಹೆಚ್ಚು ರೈತರು ಮತ್ತು ಗಡಿಯಲ್ಲಿ ಸೇವೆ ಸಲ್ಲಿಸಿದ 100 ಕ್ಕೂ ಹೆಚ್ಚು ಸೈನಿಕರಿಗೆ ಪಾದಪೂಜೆ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅಭಿನವ ಯಚ್ಚರಸ್ವಾಮಿಗಳು, ಕಿತ್ತಲಿಯ ಮಂಜುನಾಥ ಸ್ವಾಮಿಗಳು, ಯರಗಟ್ಟಿ ಶ್ರೀ ಗಣಪತಿ ಮಹಾರಾಜರು ಹಾಗೂ ಸೈನಿಕರ ಸಂಘದ ರಾಜ್ಯಾಧ್ಯಕ್ಷ, ಜಾತ್ರಾ ಕಮಿಟಿ ಗೌರವಾಧ್ಯಕ್ಷ ಗುರುಬಸಯ್ಯ ನಾಗಲೋಟಿಮಠ, ಅಧ್ಯಕ್ಷ ಲಾಲಸಾಬ ಅರಗಂಜಿ, ಉಪಾಧ್ಯಕ್ಷ ಶಿವಾನಂದ ಯಲಿಬಳ್ಳಿ, ಕಾರ್ಯದರ್ಶಿ ಪ್ರವೀಣ ವೀ ಸಂಗಳದ ಶೆಟ್ಟರ್, ಸಹ ಕಾರ್ಯದರ್ಶಿ ಬಾಲಪ್ಪ ಮೂಲಿಮನಿ ಉಪಸ್ಥಿತರಿದ್ದರು.

ತಾರಕಕ್ಕೇರಿದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿವಾದ

  • ನಿರ್ಮಾಪಕ ಎಂ.ಬಿ. ಬಾಬು ವಿರುದ್ಧ ಚಿತ್ರ ವಿತರಕ ಕೇಸ್ ದಾಖಲು

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ನಟ ಸುದೀಪ್ ನಟನೆಯ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ರಿಲೀಜ್ ವಿವಾದ ತಾರಕಕ್ಕೇರಿದ್ದು, ರಾಂ ಬಾಬು ಪ್ರೊಡಕ್ಷನ್ಸ್ ನಿರ್ಮಾಪಕ ಎಂ.ಬಿ. ಬಾಬು ವಿರುದ್ಧ ವಿತರಕ ಖಾಝಾಪೀರ್
ಚಿತ್ರದುರ್ಗದಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಗ್ರಿಮೆಂಟ್ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

2.90 ಲಕ್ಷ ಹಣಕ್ಕೆ ಚಿತ್ರ ನಿರ್ಮಾಪಕರು ಮತ್ತು ವಿತರಕರ ನಡುವೆ ಅಗ್ರಿಮೆಂಟ್ ಆಗಿತ್ತು. ಅಗ್ರಿಮೆಂಟ್ ಬಳಿಕ
ರಾಂ ಬಾಬು ಪ್ರೋಡಕ್ಷನ್ಸ್ ಗೆ 60 ಲಕ್ಷ ಹಣ ನೀಡಿದ್ದೆ. ಮಾ.31 ಕ್ಕೆ ಕಾಳಿಂಗ ಹ್ಯಾಡ್ಸ್ ಮೂಲಕ 45 ಲಕ್ಷ RTGS, 5 ಲಕ್ಷ ಕ್ಯಾಶ್, ಬಳಿಕ ಸೆ. 23ಕ್ಕೆ 1 ಲಕ್ಷ, 27 ಕ್ಕೆ 4 ಲಕ್ಷ, ಅಕ್ಟೋಬರ್‌ 27 ಕ್ಕೆ 5 ಲಕ್ಷ ಸೇರಿ ಒಟ್ಟು 60 ಲಕ್ಷ ರಾಂಬಾಬು ಫಿಲಂಸ್ ಗೆ ಹಣ ನೀಡಿದ್ದೆ.

ಈಗ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆ ಪೊಲೀಸರು 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!