Home Blog Page 3237

ಪರೋಕ್ಷವಾಗಿ ಬಿಎಸ್‌ವೈಗೆ ಟಾಂಗ್ ನೀಡಿದ ಅರುಣ್‌ಸಿಂಗ್

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗ ಬಸವರಾಜ್ ಬೊಮ್ಮಾಯಿ ಹಾಗೂ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಪಚುನಾವಣೆ, ಜಿಲ್ಲಾ ಪಂಚಾಯಿತಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುವುದಾಗಿ ಹೇಳುತ್ತಿರುವ ಮಾಜಿ ಸಿಎಂ ಹೇಳಿಕೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಟಾಂಗ್ ನೀಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಗಳ ನೇತೃತ್ವದಲ್ಲಿ ನಡೆದ ಎಲ್ಲ ಚುನಾವಣೆಗಳನ್ನ ಗೆದ್ದಿದ್ದೇವೆ. ಜನರು ಮೋದಿಯವರ ಮೇಲೆ ವಿಸ್ವಾಸವಿಟ್ಟಿದ್ದಾರೆ. ಮುಖ್ಯಮಂತ್ರಿಯಿಂದ ಪ್ರಧಾನಿಮಂತ್ರಿಯವರೆಗೆ ಒಂದೇ ಒಂದು ರೂಪಾಯಿ ಭ್ರಷ್ಟಾಚಾರದ ಆರೋಪವಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ದೇಶದ ರೈತರು, ಕಾರ್ಮಿಕರು, ಬಡವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದ ಜೊತೆಗೆ ನಿಂತಿದ್ದಾರೆ. ಪ್ರಧಾನಿಗಳ ಜನ್ಮದಿನಾಚರಣೆಗೆ ನಾವು ಕೇಕ್ ಕಟ್ ಮಾಡಲಿಲ್ಲ, ಬಡವರ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದೇವೆ.

ಒಂದೇ ದಿನಕ್ಕೆ 2ಕೋಟಿ 30ಲಕ್ಷ ಜನರಿಗೆ ಕೋವಿಡ್ ವ್ಯಾಕ್ಷಿನ್ ಹಾಕಲಾಗಿದೆ. ನಮ್ಮನ್ನು ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ದೇಶದ ಜನರಿಗೆ ಅರ್ಥವಾಗಿದೆ. ಎಸ್ಸಿ ಎಸ್ಟಿ, ಒಬಿಸಿ ಸಮಾಜದವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಹೆಚ್ಚು ಪಾಲು ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಅಭಿವೃದ್ಧಿಗಳನ್ನು ಕಾರ್ಯಕರ್ತರು ಜನಸಾಮಾನ್ಯರಿಗೆ ತಲುಪಿಸಬೇಕಿದೆ ಎಂದು ಕರೆ ನೀಡಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಕಾಂಗ್ರೆಸ್‌ನವರು ಬಡವರಿಗೆ ಶುದ್ಧ ಕುಡಿಯುವ ನೀರು ಸಹ ಕೊಡಲು ಆಗಲಿಲ್ಲ. ಅರವತ್ತು ವರ್ಷದ ಆಡಳಿತದ ಕಾಂಗ್ರೆಸ್ ಪಕ್ಷಕ್ಕೆ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಕೊಡಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಭಾರತದ ಲಸಿಕೆ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಪಹಾಸ್ಯ ಮಾಡಿದ್ದರು ಎಂದರು.

ಪಂಜಾಬ್ ಮುಖ್ಯಮಂತ್ರಿಯನ್ನು ಹೇಳದೆ, ಕೇಳದೆ ಬದಲಿಸಲಾಗಿದೆ. ರಾಜಸ್ಥಾನದಲ್ಲಿ ಅತಂತ್ರ ಸ್ಥಿತಿಯಲ್ಲಿದೆ. ಸೋನಿಯಾ ಗಾಂಧಿ, ರಾಹುಲ್ ಗೆ ದೇಶ ನಡೆಸಲು ಸಾಧ್ಯವೇ ಇಲ್ಲ ಎಂದು ಮಾತಿನೇಟು ನೀಡಿದರು.

ಬಿಜೆಪಿ ಶಾಸಕರ ಸೆಳೆಯಲು ಡಿಕೆಶಿ ಯತ್ನ; ಬಿಎಸ್ವೈ ಹೊಸ ಬಾಂಬ್

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಬಿಜೆಪಿಯ ಶಾಸಕರನ್ನು ಸಂಪರ್ಕಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಈಗಾಗಲೆ ಒಂದಿಬ್ಬರು ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದು‌ ಮಾಜಿ ಬಿಎಸ್ ವೈ ಹೊಸ ಬಾಂಬ್ ಸಿಡಿಸಿದ್ದಾರೆ.

ದಾವಣಗೆರೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷಗಳನ್ನ ಹಗುರವಾಗಿ ಪರಿಗಣನೆ ಮಾಡಬೇಡಿ. ವಿಪಕ್ಷಗಳು ರಾಜ್ಯದಲ್ಲಿ ತಮ್ಮದೆ ಆದ ಶಕ್ತಿ ಹೊಂದಿವೆ. ನನ್ನ ಕಿವಿಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಶಕ್ತಿ ಮೀರಿ ಮುಂದಿನ ಚುನಾವಣೆ ಎದುರಿಸಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ, ಎದ್ದು ಕೂತಿದೆ. ಲೋಕಸಭೆ ಚುನಾವಣೆಯನ್ನು ಪ್ರಧಾನಿ ಮೋದಿಯವರ ಹೆಸರಿನಲ್ಲಿ ಗೆಲ್ಲಬಹುದು. ಆದರೆ, ವಿಧಾನಸಭೆ ಗೆಲ್ಲುವುದು ಸುಲಭವಲ್ಲ. ತಳ ಮಟ್ಟದಲ್ಲಿ ನಾವು ಪಕ್ಷ ಸಂಘಟನೆ ಬಲಪಡಿಸಬೇಕು.

ಯಾರ ಮೇಲೂ ಅವಲಂಬನೆಯಾಗದೆ 140 ಸ್ಥಾನ ಗೆದ್ದು ಅಧಿಕಾರ ಹಿಡಿಯಬೇಕಿದೆ. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.

ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯನ್ನು ನಾವು ಹಗುರವಾಗಿ ತೆಗೆದುಕೊಳ್ಳಬಾರದು. ಗೆಲ್ಲುವ ತಂತ್ರಗಳನ್ನು ಮಾಡಬೇಕಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ನಾವು ಹೆಚ್ಚು ಸೀಟು ಗೆಲ್ಲಬೇಕಿದೆ ಎಂದು ಹೇಳಿದರು.

ಪಕ್ಷ ಸಂಘಟನೆ ಹಾಗೂ ಹೋರಾಟದ ಬಗ್ಗೆ ಮೆಲುಕು ಹಾಕಿದ ಮಾಜಿ ಸಿಎಂ, ವಿಧಾನಸಭೆಯಲ್ಲಿ ಎರಡು ಸದಸ್ಯರಿಂದ ಅಧಿಕಾರಕ್ಕೇರುವ ಹಾಗೆ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಒಂದು ತಿಂಗಳ ಕಾಲ ಪಕ್ಷ ಸಂಘಟನೆ ಮಾಡಲಿದ್ದೇನೆ.

ರಾಜ್ಯದಲ್ಲಿ ಯಡಿಯೂರಪ್ಪ ಪ್ರವಾಸದ ಬಗ್ಗೆ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಒಬ್ಬನೇ ಪ್ರವಾಸ ಮಾಡಲ್ಲ. ನಾಲ್ಕಾರು ಗುಂಪುಗಳಲ್ಲಿ ಕೆಲಸ ಮಾಡಬೇಕಿದೆ. ಪ್ರಧಾನಿ ಮೋದಿಯವರ ಅಪೇಕ್ಷೆ ಕೂಡ ಇದೆ ಆಗಿದೆ. ಪ್ರಮಾಣಿಕವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದ ಅವರು, ದೇವಸ್ಥಾನವನ್ನು ಕೆಡುವುದನ್ನು ನಿಲ್ಲಿಸಲು ನಮ್ಮ ಸರ್ಕಾರ ಕಠಿಣ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಬೈಕ್ ಗೆ ಕ್ಯಾಂಟರ್ ಗೂಡ್ಸ್ ವಾಹನ ಡಿಕ್ಕಿ ; ಮಗು ಸಮೇತ ಮೂವರು ಸಾವು

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಬೈಕ್ ಗೆ ಕ್ಯಾಂಟರ್ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ಸಮೇತ ಅಕ್ಕ ಹಾಗೂ ಸಹೋದರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.

ಮುಂಡರಗಿ ತಾಲೂಕಿನ ಬಾಗೇವಾಡಿ ಸಮೀಪದ ಕಣವಿ ದುರ್ಗಮ್ಮ ದೇವಸ್ತಾನದ ಬಳಿ ನಡೆದ ಈ ದುರ್ಘಟನೆಯಲ್ಲಿ ಶಿರಹಟ್ಟಿ ತಾಲೂಕಿನ ಕನಕವಾಡ ಗ್ರಾಮದ ಮಹ್ಮದರಫಿ ಮಕ್ಕುಗೌಡ ಜಂಗ್ಲೇಗೌಡ (20) ಸಹೋದರಿ ಬೀಬಿಹಾಜಿರಾ ಕೋಂ ಜಂಗ್ಲೀಸಾಬ್ ಲಂಗೂಟಿ (24) ಹಾಗೂ ಮೂರು ವರ್ಷದ ಮಗು ಮಹಮ್ಮದ್ ಸಾಕೀಬ್ ಚಮನಸಾಬ್ ಲಂಗೂಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಮಗು, ಅಕ್ಕ ಹಾಗೂ ಸಹೋದರ

ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕನಕವಾಡದಿಂದ ಆಗಮಿಸಿರುವ ಮೃತರ ಸಂಬಂಧಿಕರ ಆಕ್ರಂಧನ ಮುಗಿಲ ಮುಟ್ಟಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಕನಕವಾಡದಿಂದ ಮುಂಡರಗಿಯತ್ತ ಬರುತ್ತಿದ್ದಾಗ ಕ್ಯಾಂಟರ್ ಗೂಡ್ಸ್ ವಾಹನ ಡಿಕ್ಕಿ ಹೊಡದಿದೆ. ಅಪಘಾತದ ನಂತರ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ.

ಬೈಕ್ ನಜ್ಜುಗುಜ್ಜಾಗಿದ್ದು, ಮಗು ಪಕ್ಕದ ಮುಳ್ಳಿನ ಕಂಟೆಯಲ್ಲಿ‌ ಬಿದ್ದಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.

ಬಾವಿಯಲ್ಲಿ ತಾಯಿ, ಮಗಳ ಶವಪತ್ತೆ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ತಾಯಿ ಹಾಗೂ ಮಗಳು ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ರಾಯಬಾಗ ತಾಲೂಕಿನ ದೇವಾಪೂರ ಸಹಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ರುಕ್ಮಮ್ಮ ಹಳಿಂಗ(38), ಮಗಳು ಅನ್ವಿತಾ ಹಳಿಂಗ(2) ಮೃತರು. ಗುರುವಾರ ಸಂಜೆ ಮನೆಯಿಂದ ಹೋದ ತಾಯಿ-ಮಗಳ ಶವಗಳು ಬಾವಿಯಲ್ಲಿ ಕಂಡುಬಂದಿವೆ. ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸತ್ಯ ಹೊರಬರಲಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಸ್ವಾಮೀಜಿಗಳ ಕಾಲಿಗೆ ಬೀಳೋದು, ಬೆಳಗ್ಗೆದ್ದ ಧರ್ಮ ಒಡೆಯೋದು

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ರಾತ್ರಿ ಹೋಗಿ ಹಿಂದು ಸ್ವಾಮೀಜಿಗಳ ಕಾಲಿಗೆ ಬೀಳುವುದು, ಬೆಳಗ್ಗೆ ಎದ್ದು ಧರ್ಮ ಒಡೆಯವ ಕೆಲಸ ಮಾಡ್ತಾರೆ. ಆದರೆ, ನಾವು ಎದೆ ಉಬ್ಬಿಸಿ ಪೂಜೆ ಮಾಡುತ್ತೇವೆ. ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಟಾಂಗ್ ನೀಡಿದರು.


ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಹಿಂದುತ್ವದ ಮೇಲೆ‌ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಜೆಡಿಎಸ್ ಅಧಿಕಾರದಲ್ಲಿದ್ದಾಗ ಕೋಮುಗಲಭೆಗಳಾಗಿವೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದು-ಮುಸ್ಲಿಮರು ಅನ್ಯೋ‌ನ್ಯತೆಯಿಂದ ಇದ್ದಾರೆ.

ಲಿಂಗಾಯತ, ವೀರಶೈವ ಎಂದು ಒಡೆದು ನಮ್ಮಲ್ಲೇ ಜಗಳ ತಂದಿಟ್ಟಿದ್ದೀರಿ ಎಂದು ಹೆಸರು ಹೇಳದೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಅವರ ಹಾಗೆ ಬುರ್ಕಾ, ಟೋಪಿ ಹಾಕಿ ನಮಾಜ್ ಮಾಡಿ ನಾಟಕ ಮಾಡುವುದಿಲ್ಲ ಎಂದು ಟಾಂಗ್ ನೀಡಿದರು.

ರಾತ್ರಿ ಹೆಣ್ಮಗಳು ಹೊರಗೆ ಬರ್ತಾರಂದ್ರೆ ಹೆಮ್ಮೆ ಪಡಬೇಕು, ಪ್ರಶ್ನಿಸೋದಲ್ಲ; ಬಿಜೆಪಿ ಶಾಸಕ ಗರಂ

0
  • ಗೃಹ ಸಚಿವರಿಗೆ ಪರೋಕ್ಷ ಟಾಂಗ್ ನೀಡಿದ ಶಾಸಕ ರಾಜುಗೌಡ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಯಾದಗಿರಿಯಲ್ಲಿ ಸಾಮೂಹಿಕ‌ ಅತ್ಯಚಾರ ಘಟನೆ ಖಂಡಿಸಿರುವ ಸುರಪುರ ಶಾಸಕ ರಾಜೂಗೌಡ, ಮಹಾತ್ಮ ಗಾಂಧೀಜಿ ರಾತ್ರಿ 12 ಗಂಟೆಗೆ ಹೆಣ್ಣುಮಗಳು ನಿರ್ಭೀತಿಯಿಂದ ಹೊರಗೆ ತಿರುಗಾಡಿದರೆ ರಾಮರಾಜ್ಯ, ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದು ಹೇಳಿದ್ದರು.

ಆದರೆ, ನಮ್ಮ ಕೆಲಸ ಮಾಡುವುದು ಬಿಟ್ಟು. ಇನ್ನೊಬ್ಬರ ಮೇಲೆ ಬೆರಳು ತೋರುವುದು ಸರಿಯಲ್ಲ ಎಂದು ಗೃಹವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತಪ್ಪಾಗಿದೇಯಾ ? ಅದಕ್ಕೆ ನಾವು ಏನು ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ ಎನ್ನುವುದು ಮುಖ್ಯ. ಅದು ಬಿಟ್ಟು ಅವರು ಅಲ್ಲಿ‌ ಏಕೆ ಹೋಗಿದ್ದರು. ಇವರು ಅಲ್ಲಿ ಏಕೆ ಹೋಗಿದ್ದರು ಎಂದು ಪ್ರಶ್ನಿಸುವುದು ತಪ್ಪು. ನಮ್ಮ ಕರ್ತವ್ಯ ನಾವು ಸರಿಯಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.

ರಾತ್ರಿ 12 ಗಂಟೆಗೆ ಹೆಣ್ಣುಮಗಳು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ತಾಳೆ ಅಂದ್ರೆ ನಾವು ಹೆಮ್ಮೆ ಪಡಬೇಕು. ಅದನ್ನು ಬಿಟ್ಟು ಅಲ್ಲಿ ಏಕೆ ಹೋಗಿದ್ದಳು ಎಂದು ಕೇಳುವುದಲ್ಲ ಎಂದು ಹರಿಹಾಯ್ದರು.

ಹಾಡುಹಗಲೇ ಅನ್ನಭಾಗ್ಯ ಅಕ್ಕಿ ಸಾಗಾಟ; ದಂಧೆಯ ರೂವಾರಿ ಏಕನಾಥ್ ಪರಾರಿ!

0

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಟ ಜಿಲ್ಲೆಯಲ್ಲಿ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕಳೆದ ಹಲವು ದಿನಗಳಿಂದ ರಾತ್ರೋರಾತ್ರಿ ಕದ್ದು ಮುಚ್ಚಿ ನಡೆಯುತ್ತಿದ್ದ ಸಾಗಾಟ ಈಗ ಹಾಡುಹಗಲೇ ಆರಂಭವಾಗಿದೆ.

ಹೊಸಬರ ಜೊತೆಗೆ ಹಳೆ ಪಂಟರು ಈ ದಂಧೆಗೆ ರೀ ಎಂಟ್ರಿ ಆಗಿರೋದು ಕಳ್ಳದಂಧೆ ಮತ್ತಷ್ಟು ಬೆಳೆಯಲು ಕಾರಣವಾಗಿದೆ. ಅದಕ್ಕೆ ಉದಾಹರಣೆ ಗುರುವಾರ ಮುಂಜಾನೆ ಹುಡ್ಕೋ ಕಾಲೊನಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ತುಂಬಿದ ಗೂಡ್ಸ್ ವಾಹನ ಸಿಕ್ಕಿಬಿದ್ದಿದ್ದು.

ಹುಡ್ಕೋ ಕಾಲೋನಿಯ ಬಸವೇಶ್ವರ ಸ್ಕೂಲ್ ಬಳಿ ಲೋಡ್ ಮಾಡಿಕೊಂಡು ನಿಂತಿದ್ದ ಗೂಡ್ಸ್ ವಾಹನ ಶಹರ ಠಾಣೆಯ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ತಡ, ಸೀದಾ ವಾಹನವನ್ನು ಠಾಣೆಗೆ ಹೊರಡಿಸಿದ್ದಾರೆ.

ಆರೋಪಿ ಗೂಡ್ಸ್ ವಾಹನದ ಚಾಲಕ ಬೆಟಗೇರಿಯ ಮಂಜುನಾಥ್ ನಗರ ನಿವಾಸಿ ದಿನೇಶ್ ದಾರಾಸಿಂಗ್ ನವಲಗುಂದ ಎಂಬಾತ ಹುಡ್ಕೋದಿಂದ ಸುಮಾರು 77,625 ರೂಪಾಯಿ ಮೌಲ್ಯದ 33 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿಯನ್ನು ಪ್ಲಾಸ್ಟಿಕ್ ‌ಚೀಲಗಳಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ.

ಈ ಸಂದರ್ಭದಲ್ಲಿ ಶಹರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಗೂಡ್ಸ್ ವಾಹನ ಸಮೇತ ಚಾಲಕ ಬೆಟಗೇರಿಯ ಮಂಜುನಾಥ್ ನಗರದ ನಿವಾಸಿ ದಿನೇಶ್ ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಎರಡನೇ ಆರೋಪಿ ಏಕನಾಥ್ ಪರಾರಿಯಾಗಿದ್ದಾನೆ.

ದಂಧೆಯ ರೂವಾರಿ ಏಕನಾಥ್ ಪರಾರಿ!

ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ಬೆಟಗೇರಿಯ ಸೆಟ್ಲಮೆಂಟ್ ನಿವಾಸಿ ಏಕನಾಥ್ ಎಂಬಾತನೇ ಈ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಅದನ್ನು ಸಾಗಾಟ ಮಾಡುತ್ತಿದ್ದ ರೂವಾರಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಹಲವು ದಿನಗಳಿಂದ ಬೆಟಗೇರಿಯ ಸೆಟ್ಲಮೆಂಟ್ ಏರಿಯಾದಲ್ಲಿ ಈ ದಂಧೆ ಜೋರಾಗಿತ್ತು ಎನ್ನಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮನೆಯೊಂದರಲ್ಲಿ ಅಕ್ಕಿ ಸಂಗ್ರಹಿಸಿ ಅಲ್ಲಿಂದ ಬೆಟಗೇರಿಯ ನೇಕಾರ ನಗರದ ಪಳಗಿದ ಅಸಾಮಿ ಮೂಲಕ ಈ ಅಕ್ಕಿ ಬೇರೆ ಕಡೆ ಸಾಗಾಟ ಮಾಡಲಾಗುತ್ತಿದೆ ಎನ್ನಲಾಗಿದೆ.

ಪೊಲೀಸರು ಸಾರ್ವಜನಿಕರ ಮೂಲಕ ಈ ದಂಧೆಗೆ ಕಡಿವಾಣ ಹಾಕಲು ಮುಂದಾದರೂ ಆಹಾರ ಇಲಾಖೆಯ ಅಧಿಕಾರಿಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎನ್ನಲಾಗಿದೆ.

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುವ ವಾಹನ, ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರೂ ಸ್ವಯಂ ಪ್ರಕರಣ ದಾಖಲು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ.

ಹೀಗಾಗಿ ಆಹಾರ ಇಲಾಖೆಯ ಅಧಿಕಾರಿಗಳೇ ಬಂದು ದೂರು ಕೊಡಬೇಕು. ಅಂದಾಗ ಎಫ್ಐಆರ್ ದಾಖಲಾಗುತ್ತದೆ. ಆದ್ರೆ ಇದು ಪೊಲೀಸರ ಮೇಲೆ ಸಾರ್ವಜನಿಕರಿಗೆ ಅನುಮಾನ ಹುಟ್ಟಲು ಕಾರಣವಾಗಬಹುದು.

ಏನೇ ಆಗಲಿ ಅಕ್ರಮ ಅಕ್ಕಿ ದಂಧೆಕೋರರ ಹೆಡೆಮುರಿ ಕಟ್ಟಲು ಪೊಲೀಸರ ಜೊತೆಗೆ ಆಹಾರ ಇಲಾಖೆಯ ಅಧಿಕಾರಿಗಳು ಮುಂದಾದಾಗ ಇಂತಹ ಅಕ್ರಮಕ್ಕೆ ಕಡಿವಾಣ ಹಾಕಬಹುದು.

ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲ್ಲ: ಬಿಎಸ್ ವೈ

ವಿಜಯಸಾಕ್ಷಿ ಸುದ್ದಿ, ಮೈಸೂರು

ವಿಜಯೇಂದ್ರ ಸದ್ಯಕ್ಕೆ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಮುಂದೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬುದೂ ನಿರ್ಧಾರವಾಗಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ನಾನು ಮತ್ತು ರಾಜ್ಯಾಧ್ಯಕ್ಷರು ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ. ಅಧಿವೇಶನ ಮುಗಿಯಲಿ, 15 ದಿನಗಳ ನಂತರ ಪ್ರವಾಸದ ರೂಪುರೇಷೆ ಸಿದ್ಧಗೊಳ್ಳಲಿದೆ ಎಂದು ತಿಳಿಸಿದರು.

ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆಂಬುದು ನನ್ನ ಅಭಿಪ್ರಾಯ. ರಾಜ್ಯದ ಜನರ ಅಭಿಪ್ರಾಯವೂ ಅದೇ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಪರ ಬಿಎಸ್ ವೈ ಬ್ಯಾಟ್ ಬೀಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯ ಆದೇಶ ಪಾಲನೆ ಅಗತ್ಯ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು‌ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ. ದೇವಸ್ಥಾನ ತೆರವು ವಿಚಾರವಾಗಿ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,‌ ಸುಪ್ರೀಂನಲ್ಲಿ ತಪ್ಪಾದರೆ ಅಮೈಂಡ್ ಮಾಡುವ ಅಧಿಕಾರ ಪಾರ್ಲಿಮೆಂಟ್ ಗೆ ಇದೆ. ಪಾರ್ಲಿಮೆಂಟ್ ನಲ್ಲಿ ತಪ್ಪು ಮಾಡಿದಾಗ ಪ್ರಶ್ನಿಸುವ ಅಧಿಕಾರ ರಾಷ್ಟ್ರಪತಿಗಿದೆ. ಈಡೀ ವಿಶ್ವಕ್ಕೆ ನಮ್ಮ ಪ್ರಜಾಪ್ರಭುತ್ವ ಮಾದರಿಯಾಗಿದೆ ಎಂದರು.

ಗೊತ್ತೋ ಗೊತ್ತಿಲ್ಲದೆ ಸಂಸದ ಪ್ರತಾಪ್ ಸಿಂಹ ದೇವಸ್ಥಾನ ತೆರವಿಗೆ ವಿರೋಧ ಮಾಡುತ್ತಿದ್ದಾರೆ.‌ ಈ ಕುರಿತು ಚರ್ಚೆ ಆಗುತ್ತದೆ, ತಪ್ಪುಗಳು ನಡೆದಾಗ ತಿದ್ದಿಕೊಳ್ಳುತ್ತೇವೆ ಎಂದು ಹೇಳಿದರು.

ನಾವು ಹಿಂದೂ ರಾಷ್ಟ್ರ ಕಟ್ಟಲು ಹೊರಟಿದ್ದೇವೆ, ಡೋಂಗಿ ರಾಜಕಾರಣ ಮಾಡಲ್ಲ. ಬಿಜೆಪಿ ಮತ್ತು ಸಂಘ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಕಟಿಬದ್ಧವಾಗಿವೆ. ಹಾಗಂತ ಬೇರೆ ಧರ್ಮಗಳನ್ನು ವಿರೋಧಿಸಲ್ಲ ಎಂದು ಹೇಳಿದರು.

ಗಜಾನನ ಮಂಟಪದಲ್ಲಿ ಸತ್ಯನಾರಾಯಣ ಪೂಜೆ, ಲಸಿಕಾ‌ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಶಿದ್ದಲಿಂಗ ನಗರದಲ್ಲಿ ಶ್ರೀ ಜಾಗೃತ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಶ್ರೀ ಗಜಾನನ ಮಂಟಪದಲ್ಲಿ ಶುಕ್ರವಾರ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಲಸಿಕಾ ಅಭಿಯಾನ ನಿಮಿತ್ತ ಉಚಿತ ಕೋವಿಡ್ ಲಸಿಕೆ ಹಾಕಲಾಯಿತು. ಸುಮಾರು 300 ಜನರಿಗೆ ಲಸಿಕೆ ಹಾಕಲಾಯಿತು. ಇದೇ ಸಮಯದಲ್ಲಿ 104 ಅಜ್ಜಿ ಲಸಿಕೆ ಪಡೆದಿದ್ದು ವಿಶೇಷವಾಗಿತ್ತು.

ಶಿದ್ಧಲಿಂಗ ನಗರ ಶ್ರೀ ಜಾಗೃತ ಗಜಾನನ ಯುವಕ ಮಂಡಳಿಯ ಡಾ. ಜಯಕುಮಾರ ಬ್ಯಾಳಿ, ಸಿದ್ದು ಅಂದಾನಗೌಡರ, ಸೂರಜ್ ಜಿಗಜಿನ್ನಿ, ಮಂಜು ಅಂಗಡಿ, ಸಂತೋಷ ಮಾಳಶೆಟ್ಟಿ, ದೀಪಕ್ ಬೊಮ್ಮನಹಳ್ಳಿ, ಸಂಗಮೇಶ ಗೊಂದಿ, ಸಿದ್ದು ಪುಟಾಣಿ, ಸುನೀಲ್ ಕಲಾಲ, ಬಸವರಾಜ್ ಹೂಗಾರ, ನಿಖಿಲ್ ವರ್ಣೆಕರ ಸೇರಿದಂತೆ ಇತರರು ಇದ್ದರು.

error: Content is protected !!