Home Blog Page 3290

ಗಾಂಜಾ ಬೆಳೆಸಿದ್ದ ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ, 2ಲಕ್ಷ ರೂ. ದಂಡ

0

ಅಂದಿನ ಪ್ರೊ.ಡಿ ಎಸ್ ಪಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ನಡೆದಿದ್ದ ಕಾರ್ಯಾಚರಣೆ……

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆಸಿದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯ ಹದಿನೈದು ವರ್ಷ ಕಠಿಣ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ದಿ.09-11-2013ರಂದು ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಟ್ಟಿ ಗ್ರಾಮದ ಆರೋಪಿತ ಉಡಚಪ್ಪ ಬಸವಣ್ಣೆಪ್ಪ ಪುರದ ಎಂಬುವರು ತಮ್ಮ ಒಂದು ಎಕರೆ ಮೂವತ್ತು ಗುಂಟೆ ಜಮೀನಿನಲ್ಲಿ ಹತ್ತಿ ಹಾಗೂ ತೊಗರಿ ಬೆಳೆಯಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದ ಬಗ್ಗೆ ಖಚಿತ ಮಾಹಿತಿ ಪಡೆದ ಅಂದಿನ ಪ್ರೊಬಷನರಿ ಡಿಎಸ್ ಪಿ ಬಿ ಎಸ್. ನೇಮಗೌಡ, ಪಿಎಸ್ಐ ವಿಕಾಸ್ ಲಮಾಣಿ ಹಾಗೂ ಸಿಬ್ಬಂದಿ ವರ್ಗ ದಾಳಿ ಮಾಡಿದ್ದರು.

ದಾಳಿಯ ಕಾಲಕ್ಕೆ ಒಂದು ಲಕ್ಷ ರೂ. ಮೌಲ್ಯದ 101ಕೆ.ಜಿ ಗಾಂಜಾ ಗಿಡಗಳು ವಶಪಡಿಸಿಕೊಳ್ಳಲಾಗಿತ್ತು. ಆ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.95/2013 ಕಲಂ +20[ಎ][ಬಿ] ಎನ್ ಡಿ ಪಿಎಸ್ ಅಡಿಯಲ್ಲಿ ದಾಖಲು ಮಾಡಿಕೊಂಡಿದ್ದ ಪ್ರಕರಣವನ್ನು ಪಿಎಸ್ಐ ಆರ್.ಎಸ್. ಕಟ್ಟಿಮನಿ ಇವರು ತನಿಖೆ ಪೂರೈಸಿ ದಿ.30.04.2014 ರಂದು ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಸದರಿ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಿ. ದೊಡ್ಡಗೌಡರ ಅವರು ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದು, ಆರೋಪಿತನ ಕೃತ್ಯ ಎಸೆಗಿದ್ದು ಸಾಬೀತಾದ ಪರಿಣಾಮ ದಿ.06.02.2023ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎಸ್.ಶೆಟ್ಟಿ ಅವರು ಆರೋಪಿಗೆ ಹದಿನೈದು ವರ್ಷ ಕಠಿಣ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕೊಡಲಿಯಿಂದ ಕೊಚ್ಚಿ ಪತಿಯಿಂದ ಪತ್ನಿಯ ಬರ್ಬರ್ ಹತ್ಯೆ; ಪ್ರೀತಿಸಿ ಮದುವೆಯಾಗಿದ್ದ ಜೋಡಿ!

ಪೊಲೀಸರಿಂದ ಆರೋಪಿ ಮೌನೇಶ್ವರ ಬಂಧನ....

ಪತ್ನಿಯ ಶೀಲದ ಬಗ್ಗೆ ಸಂಶಯಪಟ್ಟ ಪಾಪಿ ಪತಿಯೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾಶ್ರೀ (29) ಕೋಲೆಗೀಡಾದ ನತದೃಷ್ಟ ಮಹಿಳೆ.

ಪಾಪಿ ಪತಿ ಮೌನೇಶ್ವರ ಆಡಿನ ಈ ಕೃತ್ಯ ಎಸೆಗಿದ ಆರೋಪಿಯಾಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ 7-8 ವರ್ಷಗಳ ಹಿಂದೆ ವಿದ್ಯಾಶ್ರೀ ಹಾಗೂ ಮೌನೇಶ್ವರ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳಲ್ಲಿ ಬರುಬರುತ್ತಾ ಮೃತ ವಿದ್ಯಾಶ್ರೀಯ ಶೀಲದ ಬಗ್ಗೆ ಸಂಶಯಪಡುತ್ತಾ ಬಂದ ಮೌನೇಶ್ವರ, ಮನೆಯಲ್ಲಿ ಆಗಾಗ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದ್ದು, ಅದು ಮಂಗಳವಾರ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ.

ತೀವ್ರ ರಕ್ತಸ್ರಾವವಾಗಿ ವಿದ್ಯಾಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸುದ್ದಿ ತಿಳಿದು ಗಜೇಂದ್ರಗಡ ಪಿಎಸ್ಐ ರಾಘವೇಂದ್ರ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.

ಜೀವನದಲ್ಲಿ ಜಿಗುಪ್ಸೆ; ರೈಲ್ವೆ ಹಳಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆಗೆ ಶರಣು

0

ರುಂಡ-ಮುಂಡ ಇಬ್ಬಾಗ…….

ಕೊಟ್ಟೂರು : ಅನಾರೋಗ್ಯದಿಂದ ಜಿಗುಪ್ಸೆಗೊಂಡ ಯುವಕನೋರ್ವ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಪಟ್ಟಣದ ಸಮೀಪದಲ್ಲಿ ನಡೆದಿದೆ.

ಮೃತನನ್ನು ಪಟ್ಟಣದ ಜುಮ್ಮಾ ಮಸೀದಿ ಹತ್ತಿರದ ನಿವಾಸಿ ರಾಜಶೇಖರ್ ಅವರ ಪುತ್ರ ಅಜ್ಜಯ್ಯ (25) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ಗುರುವಾರ ರಾತ್ರಿ ರೈಲಿನ ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿ ಗುರುರಾಜ್ ಭೇಟಿ ನೀಡಿ ಪರಿಶೀಲಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಕುರಿತು ಮಾಹಿತಿ ಪಡೆದುಕೊಂಡರು.

ಪಟ್ಟಣ ಪಂಚಾಯತಿ ಸದಸ್ಯ ಕೆಂಗರಾಜ್ ಸೇರಿದಂತೆ ಪ್ರಮುಖ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು.

ಕಳೆದಿದ್ದ ಮೊಬೈಲ್ ಬಳಿಸಿ ಲಕ್ಷಾಂತರ ರೂ. ಚೀಟಿಂಗ್…..ಆ 2036 ನಂಬರ್ ಮಾಡಿದ ಎಡವಟ್ಟು…..

ಮಹಾ ಕಿಲಾಡಿ ವಂಚಕ…….?

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದಿದ್ದ ಮೊಬೈಲ್ ಬಳಿಸಿಕೊಂಡ ಅಪರಿಚಿತರು, ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಲಕ್ಷಾಂತರ ರೂ.ಗಳ ಮೋಸ ಮಾಡಿದ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜನವರಿ 13ರಂದು ಮುಂಜಾನೆ ಮುಂಡರಗಿ-ಗದಗ ಬಸ್ ನಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಆಗಿರುವ ಮುಂಡರಗಿಯ ರಮೇಶ್ ಸೋಮಪ್ಪ ಹೊಂಬಳ ಎಂಬುವರು ಮೊಬೈಲ್ ಕಳೆದುಕೊಂಡಿದ್ದರು.

ಸಿಕ್ಕ ಮೊಬೈಲ್ ದುರ್ಬಳಕೆ ಮಾಡಿಕೊಂಡ ಅಪರಿಚಿತರು, ಮೊಬೈಲ್ ಸಂಖ್ಯೆಯ ಕೊನೆಯ 2036 ನಾಲ್ಕು ಸಂಖ್ಯೆಯನ್ನು ಬಳಿಸಿ ಪೋನ್ ಪೇ ಪಾಸ್ ವರ್ಡ್, ಯುಪಿಐ ಪಿನ್ ನಂಬರ್ ಉಪಯೋಗಿಸಿ ಪೋನ್-ಪೇ ಮೂಲಕ ಹಂತ-ಹಂತವಾಗಿ 1.69.002/ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ.

ಈ ಕುರಿತು ರಮೇಶ್ ಸೋಮಪ್ಪ ಹೊಂಬಳ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್-2008(u/s-66(c):ಐಪಿಸಿ 1860(u/s-420)0007/2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ತಗುಲಿ ಮನೆಗಳು ಸಂಪೂರ್ಣ ಭಸ್ಮ, ಲಕ್ಷಾಂತರ ರೂ. ಹಾನಿ

ಕೊಕ್ಕರಗುಂದಿ ಜವಳಾಪೂರ ಪ್ಲಾಟ್‌ನಲ್ಲಿ ಬೆಂಕಿ ಅವಘಡ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಜವಳಾಪೂರ ಪ್ಲಾಟ್‌ನಲ್ಲಿ ಶನಿವಾರ ಮಧ್ಯಾಹ್ನ ೨ರ ಸುಮಾರಿಗೆ ಬೆಂಕಿ ತಗುಲಿ 5 ತಗಡಿನ ಮನೆಗಳು ಸಂಪೂರ್ಣ ಭಸ್ಮವಾಗಿದ್ದು, 10 ಜಾನುವಾರುಗಳ ಹೊಟ್ಟಿನ ಬಣಿವೆಗಳು ಸೇರಿದಂತೆ 3 ಚಕ್ಕಡಿಗಳು ಬೆಂಕಿಗೆ ಆಹುತಿಯಾಗಿವೆ.

ಪ್ಲಾಟ್‌ನಲ್ಲಿಯ ಟಿಸಿಯಲ್ಲಿ ಜೋರಾಗಿ ಶಬ್ದ ಬಂದಿದ್ದು, ಇದರ ಕಿಡಿಯು ಬಣಿವೆಗೆ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.

ನೋಡ ನೋಡುತ್ತಿದ್ದಂತೆಯೇ ಮನೆಗಳಿಗೆ ಹೊತ್ತಿಕೊಂಡ ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು. ಮನೆಯಲ್ಲಿನ ಎಲ್ಲ ಸಾಮಾಗ್ರಿ ಮತ್ತು ದಿನಸಿ ವಸ್ತುಗಳು ಸಹ ಸಂಪೂರ್ಣವಾಗಿ ಸುಟ್ಟುಹೋಗಿವೆ. ಶಿರಹಟ್ಟಿಯ ಅಗ್ನಿಶಾಮಕ ಠಾಣೆಯ ವಾಹನ ಬೇರೆಡೆಗೆ ಹೋಗಿದ್ದರಿಂದ ಲಕ್ಷ್ಮೇಶ್ವರದಿಂದ ಅಗ್ನಿಶಾಮಕ ವಾಹನ ಬಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.

ಸೂಕ್ತ ಪರಿಹಾರಕ್ಕೆ ಒತ್ತಾಯ

ವಿದ್ಯುತ್‌ ಟಿಸಿಯಿಂದ ಹೊರಬಂದ ಕಿಡಿಯಿಂದ ಪ್ಲಾಟ್‌ನಲ್ಲಿಯ ಕುಟುಂಬಗಳ ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಈ ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮದ ವೀರನಗೌಡ ಪಾಟೀಲ ಆಗ್ರಹಿಸಿದ್ದಾರೆ.

ಜೆಸಿಬಿ ಕೊಡಿಸುವದಾಗಿ ಉದ್ಯಮಿಗಳಿಂದ ರೈತನಿಗೆ ಲಕ್ಷಾಂತರ ರೂ. ಮೋಸ…!

ಹುಬ್ಬಳ್ಳಿ, ತಮಿಳುನಾಡಿನ ಉದ್ಯಮಿಗಳು…..

ವಿಜಯಸಾಕ್ಷಿ ಸುದ್ದಿ, ಗದಗ

ರೈತರೊಬ್ಬರಿಗೆ ಜೆಸಿಬಿ ಕೊಡಿಸುವದಾಗಿ ನಂಬಿಸಿ ಲಕ್ಷಾಂತರ ರೂ.ಗಳನ್ನು ಪಡೆದು ನಾಲ್ವರು ಉದ್ಯಮಿಗಳು ಮೋಸ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಗ್ರಾಮದ ರೈತ ಬಸವಣ್ಣೆಪ್ಪ ನಾಗಪ್ಪ ಎಂಬುವರು ತಮ್ಮ ಉದ್ಯೋಗಕ್ಕಾಗಿ ಜೆಸಿಬಿ ತೆಗೆದುಕೊಳ್ಳುವ ಸಲುವಾಗಿ ಹುಬ್ಬಳ್ಳಿಯ ಅಮರಗೋಳದ ಎಪಿಎಮ್ ಸಿ ಯಾರ್ಡ್ ನ ಅಬ್ದುಲ್ ಸಾಬ ಎ ದರಗಾದ ಎಂಬುವರ ಜೊತೆಗೆ ಮಾತನಾಡಿದ್ದಾರೆ.

ಆಗ ಅಬ್ದುಲ್ ಸಾಬ ಇನ್ನುಳಿದ ತಮಿಳುನಾಡಿನ ಸುಬ್ರಮಣಿಯನ್, ಕರುಪ್ಪುಸಾಮಿ ಹಾಗೂ ಇನ್ನೊಬ್ಬ ಕರುಪ್ಪುಸ್ವಾಮಿ ವೀರಮುತ್ತು ಎಂಬುವರ ಜೊತೆಗೆ ಸೇರಿಕೊಂಡು ಕಳೆದ ವರ್ಷ 2022ರ ಸೆಪ್ಟೆಂಬರ್ 20ರಂದು ಲಕ್ಷ್ಮೇಶ್ವರದ ಬಸ್ ನಿಲ್ದಾಣದ ಬಳಿ ಜೆಸಿಬಿ ಯ ಪೋಟೋ ತೋರಿಸಿ ಇದು ಮಾರಾಟಕ್ಕೆ ಇದೆ ಎಂದು ನಂಬಿಸಿ ರೈತ ಬಸವಣ್ಣೆಪ್ಪನಿಂದ ಮುಂಗಡವಾಗಿ 50 ಸಾವಿರ ರೂ.ಗಳನ್ನು ಪಡೆದು ನಂತರ, ಎರಡು ದಿನ ಬಿಟ್ಟು ಸೆಪ್ಟೆಂಬರ್ 23ರಂದು ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿ ಬೇರೆ ಯಾರಿಗೂ ಸೇರಿದ ಜೆಸಿಬಿ ತೋರಿಸಿ ರೈತನಿಂದ ಮತ್ತೆ 16 ಲಕ್ಷ ರೂ.ಗಳನ್ನು ಬ್ಯಾಂಕ್ ಮುಖಾಂತರ ತಮ್ಮ ಖಾತೆಗೆ ಹಾಕಿಸಿಕೊಂಡು ಜೆಸಿಬಿ ಕೊಡಸದೇ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ.

ಈ ಕುರಿತು ರೈತ ಬಸವಣ್ಣೆಪ್ಪ ನಾಗಪ್ಪ ಎಂಬುವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚೀಟಿಂಗ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾಂಗ್ರೆಸ್ ಸುಳ್ಳು ಆರೋಪಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ’

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಆರೋಪ

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ. ಮುಖ್ಯಮಂತ್ರಿ ಮೇಲೆ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಕಾಮನ್ ಮ್ಯಾನ್ ಬಸವರಾಜ ಬೊಮ್ಮಾಯಿ ಅವರನ್ನು ಅವಮಾನಿಸುವುದು ರಾಜ್ಯದ ಜನರನ್ನು ಅವಮಾನಿಸಿದಂತೆ ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಆರೋಪಿಸಿದರು.

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಆರೋಪ ಮಾಡಲು ಕಾಂಗ್ರೆಸ್ಸಿಗೆ ಯಾವುದೇ ವಿಷಯವಿಲ್ಲ. ಹೀಗಾಗಿ ಸ್ಯಾಂಟ್ರೋ ರವಿ ಆತ್ಮಹತ್ಯೆ ವಿಷಯ ಮುನ್ನಲೆಗೆ ತಂದಿದ್ದಾರೆ. ಕಾಂಗ್ರೆಸ್ ಕೆಲ ತಿಂಗಳಿಂದ ಇಂಥ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿಗರಿಗೆ ಸುಳ್ಳು ಹೇಳುವುದೇ ಕಾಯಕವಾಗಿದೆ. ಹೀಗಾಗಿ ಉಚಿತ ಕೊಡುಗೆ ಘೋಷಣೆ ಮಾಡುವ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಬೆರಳೆಣಿಕೆಯ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿನ ಸಾಧನೆಗಳನ್ನಾದರೂ ಜನರ ಮುಂದಿಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿ ಎಂದು ಸವಾಲು ಹಾಕಿದರು.

ರಾಜ್ಯ ಬಿಜೆಪಿ ಸರಕಾರದ ಮೇಲೆ ೪೦ ಪ್ರತಿಶತ ಕಮಿಷನ್ ಆರೋಪ ಕಾಂಗ್ರೆಸ್ ಸೃಷ್ಟಿ. ಕಾಂಗ್ರೆಸ್ಸಿಗರ ಆರೋಪದಲ್ಲಿ ಸತ್ಯಾಸತ್ಯತೆ ಇದ್ದರೆ ಎಫ್‌ಐಆರ್ ದಾಖಲಿಸಲಿ, ವೃಥಾ ಆರೋಪ ಮಾಡುವುದು ಕಾಂಗ್ರೆಸ್ ಚಾಳಿ. ಬಿಜೆಪಿ ಇಂಥ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಖಾತೆ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ಎಸ್ ವಿ ಸಂಕನೂರು, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಮುಖಂಡರಾದ ಎಮ್.ಎಮ್ ಹಿರೇಮಠ, ವಿನಾಯಕ ಹಬೀಬ ಇದ್ದರು.

ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಕೊಡುವ ವಾಗ್ದಾನ ಮಾಡಿದೆ. ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಇಲ್ಲದೇ ಉಚಿತವಾಗಿ ಹೇಗೆ ಕೊಡಲು ಸಾಧ್ಯ? ಸದ್ಯ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿ ಯಾಕೆ ಉಚಿತವಾಗಿ ವಿದ್ಯುತ್ ಕೊಟ್ಟಿಲ್ಲ? 12 ಬಾರಿ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಏಕೆ ಎನ್ನುವುದನ್ನು ಕಾಂಗ್ರೆಸ್ಸಿಗರು ಉತ್ತರಿಸಬೇಕು.

ಅರುಣಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಭಾರತದಲ್ಲಿ ಕಟ್ಟಿರುವ ದೇವಸ್ಥಾನಗಳು ವಿಜ್ಞಾನಕ್ಕೆ ಸವಾಲಾಗಿವೆ; ದಿಂಗಾಲೇಶ್ವರ ಶ್ರೀ

0

ಭಕ್ತಿ ಭಾವದಿಂದ ಯಶಸ್ವಿಯಾಗಿ ನಡೆದ ಧಾರ್ಮಿಕ ಕಾರ್ಯಕ್ರಗಳು

ವಿಜಯಸಾಕ್ಷಿ ಸುದ್ದಿ, ನವಲಗುಂದ

ದೇವರನ್ನು ನಂಬುವ, ನಂಬದೇ ಇರುವ ಜನರಿದ್ದಾರೆ. ಆದರೆ ನಂಬುವವರ ಸಂಖ್ಯೆ ಹೆಚ್ಚಾಗಿರುವುದರಿಂದಲೇ ದೇವಸ್ಥಾನಗಳ ಸಂಖ್ಯೆಯು ಹೆಚ್ಚಾಗುತ್ತಿವೆ.  ಸಾವಿರಾರು ವರ್ಷಗಳ ಹಿಂದೆ ಈ ದೇಶದಲ್ಲಿ ಕಟ್ಟಿರುವ ದೇವಸ್ಥಾನಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿವೆ ಎಂದು ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನ ಮಠದ ಫಕ್ಕೀರದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಗುರುವಾರ ಬಸ್ತಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ಧಿವಿನಾಯಕ ಹಾಗು ಆಂಜನೇಯ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ಯಾವುದೇ ಯಂತ್ರಗಳ ಸಹಾಯವಿಲ್ಲದೇ ಸಮುದ್ರದ ಆಳದಲ್ಲಿ ನಿರ್ಮಿಸಿರುವ ರಾಮೇಶ್ವರ ದೇವಾಲಯದಲ್ಲಿನ ಸಿಹಿನೀರಿನ ಬಾವಿಗಳು, ತಂಜಾವೂರಿನ ಬೃಹದೇಶ್ವರ ದೇವಾಲಯದ ಗೋಪುರದ ವಿಶೇಷತೆ, ಒಡಿಸ್ಸಾದಲ್ಲಿರುವ ಪುರಿ ಜಗನ್ನಾಥ ದೇವಾಲಯದ ಧ್ವಜದ ವಿಶೇಷತೆಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿವೆ. ದಿಕ್ಕಿಲ್ಲದವರಿಗೆ ದೇವರೆ ಗತಿ, ದಿಕ್ಕಿಲ್ಲದ ದೇವಸ್ಥಾನಗಳಿಗೆ ಭಕ್ತರೆ ಗತಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. 

ದೇವಸ್ಥಾನ ಕಟ್ಟುವುದು ಮುಖ್ಯವಲ್ಲ, ಶರಣರು ಹೇಳಿದಂತೆ ದೇಹವನ್ನು ದೇವಾಲಯವನ್ನಾಗಿ ಮಾಡಿಕೊಂಡು ಜಾತ್ಯಾತೀತ ಮನೊಭಾವನೆಯಿಂದ ನಂಬುಗೆ ವಿಶ್ವಾಸ ಸಂಸ್ಕಾರದಿಂದ ನಡೆದುಕೊಳ್ಳಬೇಕು.
ಇಲ್ಲಿ ನಿರ್ಮಿಸಿರುವ ದೇವಾಲಯವು ಕೂಡ ಅತೀ ಅಚ್ಚುಕಟ್ಟಾಗಿದ್ದು ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ದಾನಿಗಳಿಗೂ, ಭಕ್ತರಿಗೆ ಶುಭವಾಗಲಿ ಎಂದು ಹಾರೈಸಿದರು.

ಸಿದ್ಧಿವಿನಾಯಕ ನಗರ ಹಾಗೂ ಲಕ್ಷ್ಮೀ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ವಾಯ್. ಬಾರಕೇರ ಅಧ್ಯಕ್ಷತೆ ವಹಿಸಿ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಖರ್ಚು ವೆಚ್ಚದ ವಿವರಗಳನ್ನು ತಿಳಿಸಿದರು.

ಜ.22 ರಿಂದ ನಿರಂತರವಾಗಿ ಐದು ದಿನ ದೇವಸ್ಥಾನದಲ್ಲಿ ನಡೆದ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಈ ನಾಡಿನ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ದಾನಿಗಳು, ಮಾಜಿ ಸೈನಿಕರು, ಪತ್ರಕರ್ತರು, ಹಾಸ್ಯ ಹಾಗೂ ಜಾನಪದ ಕಲಾವಿದರು, ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸಿದ ಎಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿನಿತ್ಯವು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. .

ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಡಿ.ಜೆ.ನಾಯ್ಕರ, ಪ್ರಧಾನ ಕಾರ್ಯದರ್ಶಿ ಎಸ್. ಜಿ. ಇನಾಮತಿ, ಸದಸ್ಯರಾದ ಎಂ.ಎನ್.ಗಂಗನಗೌಡ್ರ, ಬಿ.ಎಸ್.ಕಟ್ಟಿಮನಿ, ವಿ.ಎಚ್.ಕಿರೇಸೂರ, ಎಂ.ಆರ್.ಹುಯಿಲಗೋಳ, ಆರ್.ಬಿ.ಬಾಳನಗೌಡ್ರ, ಪಿ.ಆರ್.ಹಿರೇಮಠ, ಜೆ.ಎ.ರಂಗಣ್ಣವರ, ಆರ್.ಎಚ್.ನೇಗಲಿ, ಬಿ.ಎಸ್.ಬಾಗಲಕೋಟಿ, ಎಂ.ಎಫ್.ಮಾಳವಾಡ ಹಾಗೂ ಪಿ.ಎಂ.ಹಡಪದ ಉಪಸ್ಥಿತರಿದ್ದರು.
   

ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ ಗುಂಜಿಕರ್ ಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸರಕಾರಿ ನೌಕರರ ಸಂಘದ  ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ.ಎಲ್.ಗುಂಜಿಕರ್ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಮುಂಡರಗಿ ತಾಲೂಕು ಅಧಿಕಾರಿಗಳಾದ  ಡಾ. ಬಸವರಾಜ.ಬಳ್ಳಾರಿ, ಗದಗ ತಾಲೂಕು ವಿಸ್ತರ್ಣಾಧಿಕಾರಿಗಳಾದ ಮಲ್ಲಿಕಾರ್ಜುನ ಹಣಸಿ,  ಸದಸ್ಯರಾದ ಮಹಾಂತೇಶ ಅಂಗಡಿ, ಬಸವರಾಜ ಪೂಜಾರ, ಹನುಮಂತ ನಾಗರಹಳ್ಳಿ, ಮಂಜುನಾಥ್ ನಿಡಗುಂದಿ, ಬಸವರಾಜ ಲಾಳಿ, ಮಹಾಂತೇಶ ಹಾದಿಮನಿ, ಕಸ್ತೂರೆವ್ವ ಕಾತರಕಿ, ಸರೋಜಾ ದೊಡ್ಡನಿ, ಸ್ವಾತಿ ಮಾಳಗಿಮನಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಗ್ರಾಹಕರ ನಕಲಿ ಸಹಿ ಮಾಡಿ ಪೋಸ್ಟ್ ಮಾಸ್ಟರ್ ಮೋಸ; ಸರ್ಕಾರಕ್ಕೂ, ಗ್ರಾಹಕರಿಗೂ ಮೋಸ…..

ಗ್ರಾಹಕರು ಕೊಟ್ಟ ಹಣ ಸ್ವಂತಕ್ಕೆ…….

ವಿಜಯಸಾಕ್ಷಿ ಸುದ್ದಿ, ಗದಗ/ಶಿರಹಟ್ಟಿ

ಗ್ರಾಹಕರು ಖಾತೆಗಳಿಗೆ ಜಮಾ ಮಾಡಲು ಕೊಟ್ಟ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡದೆ ಸ್ವಂತಕ್ಕೆ ಬಳಿಸಿಕೊಂಡ ಪೋಸ್ಟ್ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮದ ಗ್ರಾಮೀಣ ಶಾಖಾ ಅಂಚೆ ಪಾಲಕ ಅಂತ ಕೆಲಸ ಮಾಡುತ್ತಿದ್ದ ರಣತೂರ ಗ್ರಾಮದ ವಿನೋದಕುಮಾರ್ ಎಚ್ ಹೆಬ್ಬಾಳ ಎಂಬುವರೇ ಗ್ರಾಹಕರಿಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿತ ಪೋಸ್ಟ್ ಮಾಸ್ಟರ್ ವಿನೋದಕುಮಾರ್ , 2017ರಿಂದ ಸುಗ್ನಳ್ಳಿ ಗ್ರಾಮದಲ್ಲಿ ಅಂಚೆ ಪಾಲಕ ಎಂದು ಕಾರ್ಯನಿರ್ವಹಿಸುತ್ತಿದ್ದಾನೆ.

21-10-2021ರಿಂದ 03-03-2022ರ ನಡುವಿನ ಅವಧಿಯಲ್ಲಿ ಗ್ರಾಹಕರು ತಮ್ಮ ಖಾತೆಗಳಿಗೆ ಹಣ ತುಂಬಲು ಕೊಟ್ಟ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾನೆ.

ಗ್ರಾಹಕರ ಪಾಸ್ ಬುಕ್ ನಲ್ಲಿ ಮಾತ್ರ ಅವರು ಕೊಟ್ಟ ಹಣದ ಮೊತ್ತವನ್ನು ದಾಖಲು ಮಾಡಿದ್ದು, ತನ್ನದೊಂದು ಸಣ್ಣದೊಂದು ಸಹಿ ಮಾಡಿದ್ದಾನೆ.

ಒಟ್ಟು ಮೂರು ಜನ ಗ್ರಾಹಕರಿಗೆ ಸೇರಿದ 63,300ರೂ. ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ಪೋಸ್ಟ್ ಮಾಸ್ಟರ್ ವಿರುದ್ಧ ಗದಗ ಹೆಡ್ ಪೋಸ್ಟ್ ನ ಅಧಿಕಾರಿ ಎಮ್. ಜಿ ಕರಣ ಎಂಬುವರು ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, 0015/2023-ಐಪಿಸಿ 1860-(u/s-409,420,465,468 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.