Home Blog Page 3290

ಆಹಾರ ಇಲಾಖೆ ಅಧಿಕಾರಿಗಳ ದಾಳಿ; 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರ ಬಡವರಿಗೆ ಹಂಚಿಕೆ ಮಾಡಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಶೆಡ್ ಒಂದರ ಮೇಲೆ ಅಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ‌ ಮಾಡಿದ್ದು, ಅಪಾರ ಪ್ರಮಾಣದ ಅಕ್ಕಿ ವಶಪಡಿಸಿಕೊಂಡಿದೆ.

ಜಿಲ್ಲೆಯ ಗಜೇಂದ್ರಗಡದ ಗುಡ್ಡದ ಹಿಂಭಾಗದಲ್ಲಿ ಇರುವ ಜಮೀನೊಂದರ ಶೆಡ್‌ನಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.ರಾಜೂರ ಗ್ರಾ.ಪಂ. ವ್ಯಾಪ್ತಿಗೆ ಬರುವ ಈ ಜಮೀನಿನಲ್ಲಿ ಇರುವ ಶೆಡ್ ಬಾಡಿಗೆ ರೂಪದಲ್ಲಿ ಪಡೆಯಲಾಗಿತ್ತು.

ಶುಕ್ರವಾರ ಬೆಳಗ್ಗೆ ಆಹಾರ ಇಲಾಖೆಯ ಉಪ ನಿರ್ದೇಶಕ ರವಿಕುಮಾರ್, ಗಜೇಂದ್ರಗಡ ತಹಸೀಲ್ದಾರ ಅಶೋಕ ಕಲಘಟಗಿ, ಆಹಾರ‌ ನಿರೀಕ್ಷಕ ಮಂಜುನಾಥ್ ತಳ್ಳಿಹಾಳ, ಪಿಎಸ್ಐ ಗುರುಶಾಂತ ದಾಸ್ಯಾಳ ಕಾರ್ಯಚರಣೆಯಲ್ಲಿದ್ದರು. ದಾಳಿಯ ಕಾಲಕ್ಕೆ 600 ಕ್ವಿಂಟಲ್ ಅಕ್ಕಿ ಜಪ್ತಿಯಾಗಿದ್ದು, ಇದರ ರೂವಾರಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಶಾಸಕರ ಬಲಗೈ ಬಂಟ ಶಾಮೀಲು?

ಗಜೇಂದ್ರಗಡದಲ್ಲಿ ಈ ಹಿಂದೆಯೂ ಅನ್ನಭಾಗ್ಯದ ಅಕ್ಕಿ ಸಿಕ್ಕಿತ್ತು. ಆಗ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಅನ್ನಭಾಗ್ಯ ಅಕ್ಕಿ ದಂಧೆಯಲ್ಲಿ ಶಾಸಕರ ಹಿಂಬಾಲಕರೇ ಇದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದರು. ಆದರೆ, ಸರಕಾರ, ಅಧಿಕಾರಿಗಳು ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಿದರು ಅಂತ ಬಹಿರಂಗವಾಗಲೇ ಇಲ್ಲ.

ಗಜೇಂದ್ರಗಡದಲ್ಲಿ ಕಾಳು-ಕಡಿ ತುಂಬುವ ಅಳಿಯ- ಮಾವನೇ ಅಕ್ಕಿಯ ಅಕ್ರಮ ಸಂಗ್ರಹ ಮಾಡುವ ಕಸುಬುದಾರರು. ಮೂಲಗಳ ಪ್ರಕಾರ ಶಾಸಕರ ಬಲಗೈ ಬಂಟನೇ ಈ ದಂಧೆಯೆ ರೂವಾರಿ ಎಂದು ಹೇಳಲಾಗುತ್ತಿದ್ದು, ಈ ಹಿಂದೆ ಕಾಂಗ್ರೆಸ್ ಮುಖಂಡರು ದಂಧೆ ಬಯಲಿಗೆ ತಂದ ಮೇಲೆ ಮೂರು ತಿಂಗಳು ಬಂದ್ ಆಗಿತ್ತು. ಆನಂತರ ಈ ಹೊಸ ಜಾಗೆ ಪಡೆದು ಮತ್ತೆ ದಂಧೆ ಆರಂಭಿಸಿದ್ದರು. ದಂಧೆ ನಡೆಸುವ ಮೊದಲೇ ಅಧಿಕಾರಿಗಳನ್ನು ಬುಕ್ ಮಾಡಿಕೊಳ್ಳುತ್ತಾರೆ ಎಂಬ ಆರೋಪ ಸಾರ್ವಜನಿಕರದು. ಈ ಆರೋಪಕ್ಕೆ ಪುಷ್ಟಿ ಶುಕ್ರವಾರದ ಕಾರ್ಯಚರಣೆ.

ಗದಗನ ಅಧಿಕಾರಿಗಳು ಬಂದು ದಾಳಿ ಮಾಡುವುದಾದರೆ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ವಿಷಯ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಆಹಾರ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿಯನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಗದಗನ ಕಾಂಗ್ರೆಸ್ ‌ಮುಖಂಡ, ಅಕ್ಕಿ ದಂಧೆಕೋರನೇ ರೇಡ್ ಮಾಡಿಸಿರಬಹುದು ಎಂಬ ಸುದ್ದಿಯೂ ಹರಡಿದೆ. ಸಿಕ್ಕ ಅಕ್ಕಿ, ಇದರಲ್ಲಿ ಪಾಲ್ಗೊಂಡ ದಂಧೆಕೋರರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಜನರ ಮುಂದೆ ಸತ್ಯಾಂಶ ಬಿಚ್ಚಿಡುವ ಹೊಣೆಗಾರಿಕೆ ಜಿಲ್ಲಾಡಳಿತಕ್ಕಿದೆ.

ಗದಗ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದರೂ ಪಕ್ಕದಲ್ಲಿದೆ ಅಪಾಯ ಹುಷಾರ್!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಅನ್ ಲಾಕ್ ಮಾಡಿ ಆದೇಶ ಹೊರಡಿಸಿದೆ. ಈ ಸಾಲಿಗೆ ಗದಗ ಜಿಲ್ಲೆ ಕೂಡ ಇದ್ದು ಜೂ. 14ರಿಂದ ಅನ್ ಲಾಕ್ ಆಗಲಿದೆ.

ಸರ್ಕಾರ ಇಲ್ಲಿಯವರೆಗೆ ಶೇ. 5ರಷ್ಟು ಪಾಸಿಟಿವಿಟಿ ಬಂದರೆ ಮಾತ್ರ ಲಾಕ್ ಡೌನ್ ತೆರವುಗೊಳಿಸಲಾಗುವುದು ಎಂದು ಹೇಳಿತ್ತು. ಆದರೆ, ತಾಲೂಕುವಾರು ಗಮನಿಸದೆ, ಜಿಲ್ಲಾವಾರು ಸೋಂಕಿತರ ಸಂಖ್ಯೆ ಕಡಿಮೆ ಇರುವ 19 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಿದೆ. ಅಲ್ಲದೇ, ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿದೆ.

ಗದಗ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳನ್ನು ನೋಡುವುದಾದರೆ ಗದಗ ತಾಲೂಕಿನಲ್ಲಿ ಶೇ. 4.41, ರೋಣ ಶೇ. 5.75, ಮುಂಡರಗಿ ಶೇ. 2.81, ಶಿರಹಟ್ಟಿಯಲ್ಲಿ ಶೇ. 4.47ರಷ್ಟು ಪಾಸಿಟಿವಿಟಿ ದರವಿದೆ. ಆದರೆ, ನರಗುಂದ ತಾಲೂಕಿನಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಾಗಿದೆ. ಅಲ್ಲಿ ಶೇ. 5.75ರಷ್ಟು ಪಾಸಿವಿಟಿ ದರ ಹೆಚ್ಚಾಗಿದೆ.

ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳನ್ನು ಗಮನಿಸುವಾದರೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಶೇ. 2.46 ರಷ್ಟು ಪಾಸಿಟಿವಿಟಿ ದರ ಇದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಶೇ. 5.76ರಷ್ಟು, ಕುಷ್ಟಗಿಯಲ್ಲಿ ಶೇ. 10.34ರಷ್ಟು, ಯಲಬುರ್ಗಾದಲ್ಲಿ ಶೇ. 5.1ರಷ್ಟು, ಕೊಪ್ಪಳ ತಾಲೂಕಿನಲ್ಲಿ ಶೇ. 4.8ರಷ್ಟು, ಹಡಗಲಿಯಲ್ಲಿ ಶೇ. 6.77ರಷ್ಟು, ಹಾವೇರಿ ತಾಲೂಕಿನಲ್ಲಿ ಶೇ. 2.6ರಷ್ಟು, ಸವಣೂರ ತಾಲೂಕಿನಲ್ಲಿ ಶೇ. 2.5ರಷ್ಟು ಪಾಸಿಟಿವಿಟಿ ದರವಿದೆ.

ಸರ್ಕಾರ ಅನ್ ಲಾಕ್ ಮಾಡಿದೆ ಎಂದು ಜಿಲ್ಲೆಯ ಜನ ಮೈಮರತೆರೆ ಸುತ್ತಮುತ್ತಲಿನ ತಾಲೂಕಿನಿಂದ ಕೊರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

ಹೈಟೆಕ್ ಕಳ್ಳನ ಕಾರು ಸಮೇತ ತಂದ ನವನಗರ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಮೆಣಸಿನಕಾಯಿ ಅಂಗಡಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನವನಗರ ಠಾಣೆ ಹಾಗೂ ಕೇಶ್ವಾಪೂರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಮೂಲದ ಮಹಮ್ಮದ್ ಇಕ್ವಾಲ್(56) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 2.80 ಲಕ್ಷ ನಗದು, ಒಂದು ಸ್ವಿಫ್ಟ್ ಕಾರ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಫೆಬ್ರವರಿ 8ರಂದು ಸೈಯದ್ ಸಾಬ ಲಿಂಬುವಾಲೆ ಎಂಬುವವರ ಮೆಣಸಿನಕಾಯಿ ಅಂಗಡಿಯ ಕೀಲಿ ಮುರಿದು ಒಳ ನುಗ್ಗಿದ್ದ ಆರೋಪಿ ಕ್ಯಾಶ್ ಕೌಂಟರ್ ನಲ್ಲಿದ್ದ 4.86 ಲಕ್ಷ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಕುರಿತಂತೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಪೊಲೀಸರು ಕಾರ್ಯಾಚರಣೆ ಮೂಲಕ ಹಾಸನದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯ ಮೇಲೆ ಈ ಹಿಂದೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ವಿಶೇಷ ಎನೆಂದರೆ ಈತ ಎಪಿಎಂಸಿ ಅಂಗಡಿಗಳನ್ನು ಟಾರ್ಗೆಟ್ ಮಾಡಿ‌ ಕಳ್ಳತನ ಮಾಡುವ ಬಗ್ಗೆ ತನಿಖೆ ವೇಳೆ ಬಯಲಾಗಿದೆ.

ಇನ್ನೂ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಗಳಾದ ವಿಶ್ವನಾಥ ಚೌಗಲೆ ಹಾಗೂ ಕೇಶ್ವಾಪೂರ ಠಾಣೆಯ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಚಾಲಕಿ ಕಳ್ಳನನ್ನು ಹೆಡೆಮುರಿ ಕಟ್ಟಲಾಗಿದೆ.

ಗದಗ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದರೂ ಪಕ್ಕದಲ್ಲಿದೆ ಅಪಾಯ ಹುಷಾರ್!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಅನ್ ಲಾಕ್ ಮಾಡಿ ಆದೇಶ ಹೊರಡಿಸಿದೆ. ಈ ಸಾಲಿಗೆ ಗದಗ ಜಿಲ್ಲೆ ಕೂಡ ಇದ್ದು, ಜೂ. 14ರಿಂದ ಅನ್ ಲಾಕ್ ಆಗಲಿದೆ.

ಸರ್ಕಾರ ಇಲ್ಲಿಯವರೆಗೆ ಶೇ. 5ರಷ್ಟು ಪಾಸಿಟಿವಿಟಿ ಬಂದರೆ ಮಾತ್ರ ಲಾಕ್ ಡೌನ್ ತೆರವುಗೊಳಿಸಲಾಗುವುದು ಎಂದು ಹೇಳಿತ್ತು. ಆದರೆ, ತಾಲೂಕುವಾರು ಗಮನಿಸದೆ, ಜಿಲ್ಲಾವಾರು ಸೋಂಕಿತರ ಸಂಖ್ಯೆ ಕಡಿಮೆ ಇರುವ 19 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಿದೆ. ಅಲ್ಲದೇ, ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿದೆ.

ಗದಗ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳನ್ನು ನೋಡುವುದಾದರೆ ಗದಗ ತಾಲೂಕಿನಲ್ಲಿ ಶೇ. 4.41, ರೋಣ ಶೇ. 3.28, ಮುಂಡರಗಿ ಶೇ. 2.81, ಶಿರಹಟ್ಟಿಯಲ್ಲಿ ಶೇ. 4.47ರಷ್ಟು ಪಾಸಿಟಿವಿಟಿ ದರವಿದೆ. ಆದರೆ, ನರಗುಂದ ತಾಲೂಕಿನಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಾಗಿದೆ. ಅಲ್ಲಿ ಶೇ. 5.75ರಷ್ಟು ಪಾಸಿವಿಟಿ ದರ ಹೆಚ್ಚಾಗಿದೆ.

ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳನ್ನು ಗಮನಿಸುವಾದರೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಶೇ. 2.46 ರಷ್ಟು ಪಾಸಿಟಿವಿಟಿ ದರ ಇದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಶೇ. 5.76ರಷ್ಟು, ಕುಷ್ಟಗಿಯಲ್ಲಿ ಶೇ. 10.34ರಷ್ಟು, ಯಲಬುರ್ಗಾದಲ್ಲಿ ಶೇ. 5.1ರಷ್ಟು, ಕೊಪ್ಪಳ ತಾಲೂಕಿನಲ್ಲಿ ಶೇ. 4.8ರಷ್ಟು, ಹಡಗಲಿಯಲ್ಲಿ ಶೇ. 6.77ರಷ್ಟು, ಹಾವೇರಿ ತಾಲೂಕಿನಲ್ಲಿ ಶೇ. 2.6ರಷ್ಟು, ಸವಣೂರ ತಾಲೂಕಿನಲ್ಲಿ ಶೇ. 2.5ರಷ್ಟು ಪಾಸಿಟಿವಿಟಿ ದರವಿದೆ. ಸರ್ಕಾರ ಅನ್ ಲಾಕ್ ಮಾಡಿದೆ ಎಂದು ಜಿಲ್ಲೆಯ ಜನ ಮೈಮರತೆರೆ ಸುತ್ತಮುತ್ತಲಿನ ತಾಲೂಕಿನಿಂದ ಕೊರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಮಾಡಿದ್ದೇನು?

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವಡ್ರಾಲ(40) ಹತ್ಯೆಯಾದ ಮಹಿಳೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಳಗಿ ಠಾಣೆ ಪೊಲೀಸರು ಪತಿ, ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದಿದ್ದಾರೆ.

ಪತ್ನಿಯ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಗಂಡ ಮತ್ತು ಮಗ ಕೊಲೆ ಮಾಡಿದ್ದರು. ಆ ನಂತರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ, ಮಗ ಗ್ರಾಮಸ್ಥರನ್ನು ನಂಬಿಸಿದ್ದರು. ಕೂಡಲೇ ಮಹಾದೇವಿ ಅಂತ್ಯಕ್ರಿಯೆ ಮಾಡಿದ್ದರು.

ಈ ಸಂದರ್ಭದಲ್ಲಿ ಕೊಲೆಯ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ಅನಾಮಿಕ ಕರೆಯೊಂದು ಬಂದಿದೆ. ಇದನ್ನು ಆಧರಿಸಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಸಾವಳಗಿ ಪೊಲೀಸರು ಹಾಗೂ ಜಮಖಂಡಿ ಸಿಪಿಐ ತನಿಖೆ ನಡೆಸಿ ಪತಿ ಹನುಮಂತ ವಡ್ರಾಲ ಹಾಗೂ 14 ವರ್ಷದ ಮಗನನ್ನು ಬಂಧಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇವರಿಗೆ ಗುಂಡಿ ತೋಡಲು ಹಣ, ಮುಚ್ಚಲೂ ಹಣ ಬೇಕಂತೆ!

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರಿನಲ್ಲಿಯೇ ಹೇಯ ಕೃತ್ಯವೊಂದು ನಡೆದಿದ್ದು, ಬೆಳಕಿಗೆ ಬಂದಿದೆ.
ಅಲ್ಲದೇ, ಈ ಕೃತ್ಯ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿರುವ ಕೆ.ಆರ್. ಪೇಟೆಯಲ್ಲಿ ನಡೆದಿದೆ. ಕೊರೊನಾ ಸೊಂಕಿನಿಂದ ಸತ್ತವರ ಸಂಸ್ಕಾರಕ್ಕೆ ಗುಂಡಿ ತೊಡಲು ರೂ. 4500ಕ್ಕೆ ಬೇಡಿಕೆ ಇಟ್ಟ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ, ಅವರ ಪಾಪಿ ಕೃತ್ಯ ಇಷ್ಟಕ್ಕೆ ಮುಗಿದಿಲ್ಲ. ಗುಂಡಿ ಮುಚ್ಚಲು ಮತ್ತೆ ಹಣ ಕೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ತಾಲೂಕಾದ ಕೆ.ಆರ್. ಪೇಟೆಯಲ್ಲಿ ಶವ ಸಂಸ್ಕಾರಕ್ಕೆ ಬಂದವರನ್ನು ಹಣಕ್ಕಾಗಿ ಗಂಟೆಗಟ್ಟಲೆ ಕಾಯಿಸಲಾಗಿದೆ. ಪಿಡಿಓ ಒಬ್ಬರು ಹಣ ಪಡೆದು ಜೆಸಿಬಿ ಯಿಂದ ಗುಂಡಿ ತೆಗಿಸಿ ಮತ್ತೆ ಮಣ್ಣು ಮುಟ್ಟಲು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೀಗಾಗಿ ಶವಸಂಸ್ಕಾರದ ಎಲ್ಲ ಕಾರ್ಯಗಳನ್ನು ಮುಗಿಸಿದ್ದ ಸ್ವಯಂ ಸೇವಕರು ಮಣ್ಣು ಮುಚ್ಚಲು ಕಾಯ್ದು ಕುಳಿತಿದ್ದರು. ತಹಶೀಲ್ದಾರ್ ಅವರ ಮಧ್ಯಪ್ರವೇಶದಿಂದ ಈ ಸಮಸ್ಯೆ ಬಗೆ ಹರಿದಿದೆ. ಹೀಗೆ ಕೊರೊನಾದಿಂದ ಸತ್ತವರ ಕುಟುಂಬಸ್ಥರಿಂದ ಫೋನ್ ನಲ್ಲಿಯೇ ಡೀಲ್ ಮಾಡಿ ಪಿಡಿಓ ಗಳು ಹಣ ಮಾಡುತ್ತಿದ್ದಾರೆ ಎಂಬ ಆರೋಪ ಈ ಭಾಗದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತಿದ್ದಾರೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕಕಾಲದಲ್ಲಿ ಎರಡು ಟೂರ್ನಿ ಆಡುತ್ತಿರುವ ಭಾರತ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಶ್ರೀಲಂಕಾ ಪ್ರವಾಸಕ್ಕೆ ಭಾರತೀಯ ಪುರುಷರ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಎಡಗೈ ಆಟಗಾರ ಶಿಖರ್ ಧವನ್ ಗೆ ತಂಡದ ಸಾರಥ್ಯ ವಹಿಸಲಾಗಿದೆ. ನಾಯಕ ಕೊಹ್ಲಿ ಹಾಗೂ ಇನ್ನಿತರ ಹಿರಿಯ ಆಟಗಾರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರಿವುದರಿಂದಾಗಿ ಶಿಖರ್ ಧವನ್ ಗೆ ತಂಡದ ನಾಯಕತ್ವ ನೀಡಲಾಗಿದೆ. ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ.

ಹಿರಿಯ ಆಟಗಾರರ ಅನುಪಸ್ಥಿತಿ ಇರುವ ಹಿನ್ನೆಲೆಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಕಳೆದ ಎರಡು ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸಮನ್ ಗಳಾದ ದೇವದತ್ ಪಡಿಕ್ಕಲ್ ಹಾಗೂ ರುತುರಾಜ್ ಗಾಯಕ್ವಾಡ್ ಅವರು ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅಲ್ಲದೇ, ಎಡಗೈ ಬ್ಯಾಟ್ಸಮನ್ ನಿತೀಶ್ ರಾಣಾ ಕೂಡ ಈ ತಂಡದಲ್ಲಿದ್ದಾರೆ. ಆ ಮೂಲಕ ರಾಣಾ ಲಂಕಾ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಂತಾಗುತ್ತಿದೆ.

ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದ ಎಡಗೈ ವೇಗದ ಬೌಲರ್ ಚೇತನ್ ಸಕರಿಯಾ, ಆಲ್‌ ರೌಂಡರ್ ಕೃಷ್ಣಪ್ಪ ಗೌತಮ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ನವದೀಪ್ ಸೈನಿ ಅವರಿಗೆ ಸಿಕ್ಕಿದೆ.

ಭಾರತ ತಂಡ ಶ್ರೀಲಂಕಾ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಏಕದಿನ ಪಂದ್ಯಗಳು ಜುಲೈ 13 ರಿಂದ ಪ್ರಾರಂಭವಾಗಲಿದ್ದು, ಟಿ 20 ಸರಣಿ ಜುಲೈ 21 ರಿಂದ ಆರಂಭವಾಗಲಿದೆ. ಏಕದಿನ ಪಂದ್ಯಗಳು ಜುಲೈ 13, 16 ಮತ್ತು 18 ರಂದು ನಡೆಯಲಿವೆ. ಟಿ 20 ಪಂದ್ಯಗಳು ಜುಲೈ 21, 23 ಮತ್ತು 25 ರಂದು ನಡೆಯಲಿವೆ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ಪಂದ್ಯಗಳು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ.
ಭಾರತ ತಂಡದಲ್ಲಿ ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಎಸ್ ಸ್ಯಾಮ್ಸನ್ (ವಿಕೆಟ್ ಕೀಪರ್), ಯಜ್ವೇಂದ್ರ ಚಹಲ್, ರಾಹುಲ್ ಚಹರ್ , ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವ್ ದೀಪ್ ಸೈನಿ, ಚೇತನ್ ಸಕರಿಯಾ
ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್ ಇದ್ದಾರೆ.

ಭಾರತೀಯ ಕ್ರಿಕೆಟ್ ತಂಡ ಇದೇ ಜೂ. 18ರಿಂದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡಲಿದೆ. ಆ ನಂತರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿದೆ. ಇಂಗ್ಲೆಂಡ್ ನಲ್ಲಿ ಭಾರತ ತಂಡ ಆಗಷ್ಟ್ 4 ರಿಂದ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಗಳನ್ನು ಆಡಲಿದೆ. ಜುಲೈನಲ್ಲಿ ಒಂದೆಡೆ ಇಂಗ್ಲೆಂಡ್ ಪ್ರವಾಸ ಮತ್ತೊಂದೆಡೆ ಶ್ರೀಲಂಕಾ ಪ್ರವಾಸ ಇದೆ. ಇದೆ ಮೊದಲ ಬಾರಿಗೆ ಭಾರತ ತಂಡ ಈ ರೀತಿ ಏಕಕಾಲದಲ್ಲಿ ಏರಡೆರಡು ಸರಣಿಯಲ್ಲಿ ಭಾಗವಹಿಸುತ್ತಿದೆ.

ಕೋವಿಡ್ ಸಮಸ್ಯೆಯ ನಂತರ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೋಗ ರಾಜ್ಯದಲ್ಲಿ ಪತ್ತೆ!

ವಿಜಯಸಾಕ್ಷಿ ಸುದ್ದಿ, ರಾಯಚೂರು

ಕೊರೊನಾ ಸೋಂಕು ತಗುಲಿದ ಮಕ್ಕಳಲ್ಲಿ ಗುಣಮುಖವಾದ ಮೂರ್ನಾಲ್ಕು ವಾರಗಳ ನಂತರ ಕಾಣಿಸಿಕೊಳ್ಳುವ ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್(ಎಚ್ಎವಲ್ಎಸಚ್) ಸಮಸ್ಯೆಯ ಮೊದಲ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಆದರೆ, ಎಚ್‍ ಎಲ್‍ ಎಚ್ ನಿಂದ ಬಳಲುತ್ತಿದ್ದ 5 ವರ್ಷದ ಮಗುವನ್ನು ವೈದ್ಯರು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಜಿಲ್ಲಾಡಳಿತ ಆ ಮಗು ಗುಣಮುಖವಾಗಿದೆ ಅಂತ ಮಾಹಿತಿ ನೀಡಿದೆ.

ನಗರದ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಣ್ಣು ಮಗು ಕಳೆದ 9 ದಿನಗಳಿಂದ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ. ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್ ಸಮಸ್ಯೆ ಅತಿ ವಿರಳವಾಗಿ ಕಾಣಿಸಿಕೊಳ್ಳುವ ತೊಂದೆಯಾಗಿದೆ.

ವಿಪರೀತ ಜ್ವರ, ವಾಂತಿ ಬೇಧಿ, ಹೊಟ್ಟೆನೋವು ಇದರ ಪ್ರಮುಖ ಲಕ್ಷಣಗಳು. ಬಿಳಿ ರಕ್ತಕಣ, ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಇಳಿಕೆ, ಸಿಆರ್ ಪಿ ಹೆಚ್ಚಳದಿಂದ ಮಕ್ಕಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ರಿಮ್ಸ್ ನ ಪಿಐಸಿಯು ನಲ್ಲಿ ಚಿಕಿತ್ಸೆ ಪಡೆದ ಮಗು ಈಗ ಸಂಪೂರ್ಣ ಗುಣಮುಖಳಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ ಇಂದು ಕೂಡ 11 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಸಿಎಂ ಯಡಿಯೂರಪ್ಪ ಅವರು 11 ಜಿಲ್ಲೆಗಳಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ದಿನವೂ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 11 ಸಾವಿರಕ್ಕೂ ಅಧಿಕವಿದೆ.
ಇಂದು ರಾಜ್ಯದಲ್ಲಿ 11,042 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಆಸ್ಪತ್ರೆಯಿಂದ 15,721 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಂದು ಮಹಾಮಾರಿಗೆ 194 ಜನ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 2,10,652 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 27,39,290 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಂದು ಬೆಂಗಳೂರಿನಲ್ಲಿ 2,191 ಜನಕ್ಕೆ ಸೋಂಕು ತಗುಲಿದ್ದು, 47 ಜನ ಸಾವನ್ನಪ್ಪಿದ್ದಾರೆ.

ಇಂದು ರಾಜ್ಯದ ಬಾಗಲಕೋಟೆ 72, ಬಳ್ಳಾರಿ 293, ಬೆಳಗಾವಿ 439, ಬೆಂಗಳೂರು ಗ್ರಾಮಾಂತರ 264, ಬೆಂಗಳೂರು ನಗರ 2,191, ಬೀದರ್ 20, ಚಾಮರಾಜನಗರ 274, ಚಿಕ್ಕಬಳ್ಳಾಪುರ 280, ಚಿಕ್ಕಮಗಳೂರು 397, ಚಿತ್ರದುರ್ಗ 349, ದಕ್ಷಿಣ ಕನ್ನಡ 580, ದಾವಣಗೆರೆ 313, ಧಾರವಾಡ 261,

ಗದಗ 90, ಹಾಸನ 776, ಹಾವೇರಿ 67, ಕಲಬುರಗಿ 58, ಕೊಡಗು 279, ಕೋಲಾರ 247, ಕೊಪ್ಪಳ 161, ಮಂಡ್ಯ 448, ಮೈಸೂರು 1,011, ರಾಯಚೂರು 115, ರಾಮನಗರ 59, ಶಿವಮೊಗ್ಗ 521, ತುಮಕೂರು 571, ಉಡುಪಿ 291, ಉತ್ತರ ಕನ್ನಡ 426, ವಿಜಯಪುರ 174 ಮತ್ತು ಯಾದಗಿರಿಯಲ್ಲಿ 15 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕೊರೊನಾ; ನೂರರ ಗಡಿಯಲ್ಲಿಯೇ ಇರುವ ಸೋಂಕು; ಸುಧಾರಣೆಯತ್ತ ಪಾಸಿಟಿವಿಟಿ ರೇಟ್!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಗುರುವಾರ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ನೂರರ ಗಡಿಗೆ ಬಂದು ನಿಂತಿದೆ. ನಿನ್ನೆಯಷ್ಟೆ 95 ಜನರಲ್ಲಿ ಕಂಡು ಬಂದಿದ್ದ ಸೋಂಕು ಇವತ್ತು 90ಕ್ಕೆ ಬಂದು ನಿಂತಿದೆ.

ಕಳೆದ ಶುಕ್ರವಾರದಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖದತ್ತ ಸಾಗಿದೆ.

ಇಂದು 90 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಮೂವರು ಮೃತಪಟ್ಟಿದ್ದಾರೆ.

ಇಂದು 90 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25198 ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -41, ಮುಂಡರಗಿ-15, ನರಗುಂದ-03, ರೋಣ-18, ಶಿರಹಟ್ಟಿ-10, ಹೊರಜಿಲ್ಲೆಯ-03 ಸೇರಿದಂತೆ 90 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 282 ಕ್ಕೇರಿದೆ.

ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ನಿವಾಸಿ 62 ವರ್ಷದ ಮಹಿಳೆ ಮೇ 31 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -09 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಬೆಳಧಡಿ ತಾಂಡಾ ನಿವಾಸಿ 65 ವರ್ಷದ ಮಹಿಳೆ ಜೂನ್- 02 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 08 ರಂದೇ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಮಾಗಡಿ‌ ನಿವಾಸಿ 70 ವರ್ಷದ ಮಹಿಳೆ ಜೂನ್ 01 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಅವರು ಜೂನ್ -09 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ.

ಇಂದು 221 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23860 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1056 ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 105 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!