Home Blog Page 3367

ಕೊರೊನಾ ತಡೆಯೋದು ಬಿಟ್ಟು ಸಂಪುಟ ವಿಸ್ತರಣೆಯಲ್ಲಿ ಬ್ಯುಜಿ

  • ಬಿಜೆಪಿ ಸರ್ಕಾರದ ವಿರುದ್ಧ ಕಾರವಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಕಾರವಾರ

ಬಿಜೆಪಿ ಭ್ರಷ್ಟ ಪಕ್ಷ, ರಾಜ್ಯದಲ್ಲಿರುವುದು ಭ್ರಷ್ಟ ಸರಕಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಾವು ಸಾಚಾಗಳು, ಸಂಸ್ಕೃತಿಯವರು ಎಂದು ತೋರಿಸಿಕೊಳ್ತಾರೆ.
ಆದರೆ, ಬಿಜೆಪಿಯವರು ಸಂಸ್ಕೃತಿ ರಹಿತರು ಎಂದು ಟೀಕಿಸಿದ ಅವರು, ಯಡಿಯೂರಪ್ಪರವರನ್ನು ಯಾಕೆ ಇಳಿಸಿದ್ರು? 75 ವರ್ಷ ಆಯ್ತುಂತ ಇಳಿಸಿದ್ರಾ..? ಎಂದು ಪ್ರಶ್ನಿಸಿದರು.

ಬೊಮ್ಮಾಯಿ ನೂತನ ಸಿಎಂ, ಅವರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಕೊರೊನಾ ನಿಯಂತ್ರಣ ಮಾಡೋದು ಸರಕಾರದ ಪ್ರಾಥಮಿಕ ಕರ್ತವ್ಯ. ಕೇರಳದಲ್ಲಿ ಮೂರನೇ ಅಲೆ ಬಂದಿದೆ. ಮಹಾರಾಷ್ಟ್ರದಲ್ಲೂ ಜಾಸ್ತಿಯಾಗಿದೆ.
ಬಾರ್ಡರ್‌ನಲ್ಲಿ ಕಟ್ಟೆಚ್ಚರ ವಹಿಸಬೇಕು.‌ ಬಿಗಿಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎರಡು ಡೋಸ್ ತೆಗೆದುಕೊಂಡವರನ್ನು ಮಾತ್ರ ಒಳಗೆ ಬಿಡಬೇಕು. ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ರಾಜ್ಯದೊಳಗೆ ಬಿಡಬೇಕು. ಈಗಾಗಲೇ ಜನರು ಆಕ್ಸಿಜನ್, ಬೆಡ್ ಇಲ್ಲದೇ ತೊಂದರೆ ಅನುಭವಿಸಿದ್ದಾರೆ. ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳುವ ಬದಲು ಸಿಎಂ ಮಂತ್ರಿಮಂಡಳ ರಚನೆಯಲ್ಲಿ ಬ್ಯುಜಿ ಆಗಿದ್ದಾರೆ. ಪದೇ ಪದೇ ಹೈಕಮಾಂಡ್ ಭೇಟಿಗೆ ತೆರಳುತ್ತಿದ್ದಾರೆ. ಹೈಕಮಾಂಡ್ ಕೂಡಾ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಶಾಸಕರು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಅವರಿಗೆ ಮಂತ್ರಿಯಾಗೋದು ಮುಖ್ಯವಾಗಿದೆ. ಜನರ ಸಮಸ್ಯೆಯಲ್ಲ ಎಂದು ದೂರಿದರು.

ರೇಣುಕಾಚಾರ್ಯ ಕೋರ್ಟ್ ಮೊರೆ ಹೋಗಿದ್ದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಇವರು ಯಾವುದೋ ಸ್ಕ್ಯಾಂಡಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸೆಕ್ಸ್ ಹಾಗೂ ಇತರ ಸ್ಕ್ಯಾಮ್‌ನಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಅದಕ್ಕೆ ಹೋಗಿದ್ದಾರೆ ಎಂದರು. ಜೆಡಿಎಸ್ ಸೆಕ್ಯೂಲರ್ ಪಾರ್ಟಿ ಅಲ್ಲ. ಅದಕ್ಕೆ ತರ್ಪಣ ಬಿಟ್ಟು ಬಹಳ ಸಮಯವಾಯ್ತು. ದೇವೆಗೌಡರ ಬಗ್ಗೆ ನಾನು ಮಾತನಾಡಲ್ಲ ಎಂದರು.

ವಲಸೆ ಬಂದ ಕೆಲವರಿಗೆ ಸಚಿವ ಸ್ಥಾನ ಸಿಗೋದು ಡೌಟು

  • ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ರಾಜ್ಯದಲ್ಲಿ ಇನ್ನೆರಡು ದಿನದಲ್ಲಿ ಸಚಿವ ಸಂಪುಟ ರಚನೆ ಆಗುವ ಸಾಧ್ಯತೆಯಿದೆ. ಪಕ್ಷಕ್ಕೆ ವಲಸೆ ಬಂದವರಲ್ಲಿ ಕೆಲವರಿಗೆ ಅವಕಾಶ ಸಿಗೋದು ಡೌಟು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಪುಟದಲ್ಲಿ ಯಾರು ಸೇರುತ್ತಾರೆ, ಯಾರು ಬಿಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಯಾರಿಗೆ ಸಚಿವ ಸ್ಥಾನ ಸಿಗುತ್ತದೋ ಭಗವಂತ ಹಾಗೂ ಹೈಕಮಾಂಡ್‍ಗೆ ಗೊತ್ತು. ಈ ನಡುವೆ ಯುವಕರಿಗೆ ಆದ್ಯತೆ ಹಾಗೂ ಹಳಬರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.

ಸಂಜೆ ವೇಳೆಗೆ ಸಂಪುಟ ಫೈನಲ್ ಆಗುವ ಸಾಧ್ಯತೆ; ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಸಂಪುಟ ಫೈನಲ್ ಆಗಲಿದ್ದು, ಸಂಜೆ ಅಥವಾ ನಾಳೆ ಅಂತಿಮ ಚಿತ್ರಣ ಸಿಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಎಲ್ಲ ಶಾಸಕರು ಸಚಿವರಾಗಲು‌ ಆಗದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಲಾಗುವುದು. ದೆಹಲಿಗೆ ಬಂದ ಶಾಸಕರ ಜೊತೆಯೂ ಚರ್ಚಿಸಿದ್ದೇನೆ. ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ. ಪ್ರಾದೇಶಿಕ ಸಮತೋಲನ ಕಾಪಾಡಬೇಕು. ಹಿಂದೆ ಸಂಪುಟದಲ್ಲಿ ಸ್ಥಾನ ಪಡೆದವರ ಬಗ್ಗೆಯೂ ಚರ್ಚೆಯಿದೆ. ಎಲ್ಲವನ್ನೂ ನಿರ್ಧರಿಸಿ ಬ್ಯಾಲೆನ್ಸ್ ಸಂಪುಟ ರಚನೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಎಷ್ಟು ಜ‌ನ ಡಿಸಿಎಂ ಇರಬೇಕು. ಸಂಪುಟ ರಚನೆಗೆ ಯಾವ ಸೂತ್ರ ಪಾಲಿಸಬೇಕು. ಎಷ್ಟು ಹಂತದಲ್ಲಿ ಸಂಪುಟ ರಚನೆಯಾಗಬೇಕು ಸೇರಿ ಹಲವು ವಿಚಾರಗಳ ಬಗ್ಗೆ ವರಿಷ್ಠರ ಭೇಟಿಯಾಗಿ ಚರ್ಚಿಸುತ್ತೇನೆ. ಜೆ.ಪಿ.ನಡ್ಡಾ ಭೇಟಿಗೂ ಮುನ್ನ ಸಂಸತ್ ಭವನಕ್ಕೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುತ್ತೇನೆ. ಬಳಿಕ ಜೆ.ಪಿ.ನಡ್ಡಾ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹೇಳಿದರು.

ಕೇರಳದಲ್ಲಿ ಕೊರೊನಾ ಹೆಚ್ಚಳ; ಮೈಸೂರು ಗಡಿಯಲ್ಲಿ ಹೈ ಅಲರ್ಟ್

ವಿಜಯಸಾಕ್ಷಿ ಸುದ್ದಿ, ಮೈಸೂರು

ನೆರೆಯ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ- ಕೇರಳ ಗಡಿ ಬಾವಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ‌ ಮುಂದಾಗಿರುವ ಜಿಲ್ಲಾಡಳಿತ ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಂದು ವಾಹನ ನಿಲ್ಲಿಸಿ ಆರ್ ಟಿಪಿಎಸ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದವರನ್ನು ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ.

ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಬಾವಲಿ ಚೆಕ್‌ ಪೋಸ್ಟ್ ನಲ್ಲಿ ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಕೊರೊನಾ ನೆಗೆಟಿವ್ ವರದಿ ಅಥವಾ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಲಸಿಕೆ ಪಡೆದ ಬಗ್ಗೆ ದಾಖಲೆ ಹಾಗೂ ಆರ್ ಟಿಪಿಎಸ್ ನೆಗಟಿವ್ ವರದಿ ಇಲ್ಲದವರಿಗೆ ರಾಜ್ಯ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ.

ನಾನು ಸಚಿವ ಸ್ಥಾನದ ಆಕಾಂಕ್ಷಿ‌, ಆದ್ರೆ ಪ್ರಮಾಣ ವಚನ ಸ್ವೀಕರಿಸೋ ತನತ ಹೇಳಾಕ್ಕಾಗಲ್ಲ

  • ಸಚಿವ ಸ್ಥಾನದ ಸುಳಿವು ನೀಡಿದ ಶಾಸಕ ಸುರಪುರ ಶಾಸಕ ರಾಜುಗೌಡ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಪ್ರಮಾಣ ವಚನ ಸ್ವೀಕಾರ ಮಾಡುವತನಕ ಏನು ಹೇಳಲು ಆಗಲ್ಲ‌‌ ಎಂದು ಸುರಪುರ ಶಾಸಕ ರಾಜೂಗೌಡ, ಬೊಮ್ಮಾಯಿ ಸಂಪುಟ ಸೇರುವ ಸುಳಿವು ನೀಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಲೀಕೇಶನ್ ಹಾಕಿದಿವಿ, ಕಾಯುತ್ತ ಕುಂತೀವಿ. ಏನಾಗುತ್ತೆ ನೋಡೋಣ ಎಂದರು.

ಸಿಎಂ ಬೊಮ್ಮಯಿ ಅವರಿಗೆ ಮನವಿ ಮಾಡದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರು, ಮಾಜಿ ಸಿಂ ಯಡಿಯೂರಪ್ಪನವರು, ಬೊಮ್ಮಾಯಿ ಅವರು ಏನ್ ನಿರ್ಧಾರ ಮಡತಾರ ನೋಡಬೇಕಿದೆ.
ಯಾವ ಭಾಗಕ್ಕೆ ಕೊಟ್ಟರೆ , ? ಯಾರಿಗೆ ಕೊಟ್ಟರ ?ಒಳ್ಳೆಯದಾಗುವುದು ಎಂದು ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುವುದಾಗಿ ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಯಿ ನನಗೆ ದೊಡ್ಡ ಅಣ್ಣ ಇದ್ದ ಹಾಗೆ. ರಾಜಕೀಯವಾಗಿ ಮಾರ್ಗದರ್ಶನ ನೀಡುತ್ತಾರೆ. ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ. ಪ್ರಾಂತವಾರು ಸಮಸ್ಯೆಗಳನ್ನು ಬಗೆಹರಿಸಿ ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಭಾಗದಲ್ಲಿ ಯಾರಿಗೂ ಅನ್ಯಾಯವಾಗದಂತೆ ಸಚಿವ ಸ್ಥಾನ ನೀಡಲಿ ಎಂಬುದು ನನ್ನ ಬೇಡಿಕೆ ಎಂದು ಶಾಸಕ ರಾಜುಗೌಡ ಹೇಳಿದರು.

ಬಸವರಾಜ‌ ಬೊಮ್ಮಯಿ ಅವರಿಗೆ ಆಡಳಿತ ನಡೆಸದೊ ಗೊತ್ತಿದೆ. ಜೆ.ಎಚ್. ಪಟೇಲರು ಮುಖ್ಯ ಮಂತ್ರಿಯಿದ್ದಾಗ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಜಲಸಂಪನ್ಮೂಲ ಖಾತೆ, ಹೋಂ ಮಿನಿಸ್ಟರ್ , ಲಾ‌ ಮಿನಿಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಆಡಳಿತದ ಬಗ್ಗೆ ಸಂಪೂರ್ಣ ತಿಳಿವಳಿಕೆ ಇದೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ 150 ಕ್ಕೂ ಹೆಚ್ಚು ಸೀಟ್ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ಜಗದೀಶ ಶೆಟ್ಟರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರಾಜೂಗೌಡ, ಬಸವರಾಜ ಬೊಮ್ಮಯಿ ಯುವಕರು. ನಾನು ಮಂತ್ರಿಯಾಗಲ್ಲ ಎಂದು ಅವರೇ ಸ್ಥಾನ ಬಿಟ್ಕೊಟ್ಟಿದ್ದಾರೆಯೇ ಹೊರತು, ಯಾವುದೇ ಅಸಮಾಧಾನ ಇಲ್ಲ ಎಂದು ಸಮರ್ಥಿಸಿಕೊಂಡರು

ಸಿಎಂ ಆಗಲು ಗಡ್ಡ ಬಿಟ್ಟಿಲ್ಲ; ಸಿ.ಟಿ.ರವಿ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಗಡ್ಡಧಾರಿ ಸಿಎಂ ಆಗ್ತಾರೆ ಎಂಬ ಭವಿಷ್ಯ ನಿಜವಾದರೆ ಮುಂದೆ ಹಲವರು ಗಡ್ಡ ಬಿಡಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.

ಏಳೆಂಟು ತಿಂಗಳು ಮಾತ್ರ ಬೊಮ್ಮಾಯಿ ಸಿಎಂ ಆಗಿರಲಿದ್ದಾರೆ. ಮುಂಬರುವ ಮಾರ್ಚ್ ವೇಳೆಗೆ ಕುಂಕುಮಧಾರಿ ಗಡ್ಡದಾರಿಯೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಹೂವಿನಹಡಗಲಿ ತಾಲೂಕು ಶ್ರೀ ಕ್ಷೇತ್ರ ಮೈಲಾರದ ಕಾರ್ಯದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿದ ಸಿ.ಟಿ.ರವಿ, ನಾನು ಸಿಎಂ ಆಗಬೇಕೆಂದು ಗಡ್ಡ ಬಿಟ್ಟಿಲ್ಲ. ಕಾಲೇಜು ದಿನಗಳಿಂದ ಗಡ್ಡ ಬಿಟ್ಟಿದ್ದೇನೆ. ಗಡ್ಡ ನನ್ನ ಐಡೆಂಟಿಟಿ. ಹಣೆಗೆ ಕುಂಕುಮ, ಕಿವಿಯಲ್ಲಿ ಮುರಾ, ಗಡ್ಡ ನನ್ನ ಗುರುತಿಸಲು ಸುಲಭ ಸಂಕೇತ ಹಾಗಾಗಿ ನಾನು ಮೊದಲಿನಿಂದಲೂ ಗಡ್ಡ ಬಿಟ್ಟಿದ್ದೇನೆ ಹೊರತು ಬೇರಾವ ಉದ್ದೇಶವಿಲ್ಲ ಎಂದರು.

ಭಾರತಕ್ಕೆ ಮತ್ತೊಂದು ಪದಕ ತಂದ ಪಿ.ವಿ.ಸಿಂಧು

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ ದೊರೆತಿದ್ದು, ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‍ನಲ್ಲಿ ಪಿ.ವಿ. ಸಿಂಧು ಕಂಚಿನ ಪದಕ ಪಡೆದಿದ್ದಾರೆ. ನಿನ್ನೆ ನಡೆದ ಸೆಮಿಫೈನಲ್ ನಲ್ಲಿ ಚೀನಾದ ಇನ್ನೋರ್ವ ಆಟಗಾರ್ತಿ ವಿರುದ್ಧ ಸೋತಿದ್ದ ಸಿಂಧು ಕಂಚಿನ ಪದಕಕ್ಕೆ ಇಂದು ನಡೆದ ಪಂದ್ಯದಲ್ಲಿ ಚೀನಾದ ಜಿ. ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಸೆಟ್‍ಗಳಿಂದ ಗೆಲುವು ದಾಖಲಿಸಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಎರಡನೇ ಬಾರಿ ಪದಕಕ್ಕೆ ಮುತ್ತಿಕ್ಕಿರುವ ಪಿ.ವ್ಹಿ.ಸಿಂಧು ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಕೊರೊನಾ; ಜಿಲ್ಲೆಯಲ್ಲಿ ಆಗಸ್ಟ್ 16 ರವರೆಗೆ ನಿಷೇಧಾಜ್ಞೆ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973, ಸಾಂಕ್ರಾಮಿಕ ರೋಗ ಕಾಯ್ದೆ 1897 ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಸರ್ಕಾರ ಹೊರಡಿಸಿದ ಜುಲೈ 18 ರ ಆದೇಶಗಳಡಿ ಸಮೀಕ್ಷೆ, ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಮಾರ್ಗಸೂಚಿಗಳ. ಎಲ್ಲ ಹಾಗೂ ಷರತ್ತು ಹಾಗೂ ಸಡಿಲಿಕೆಗಳಿಗೆ ಒಳಪಟ್ಟು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಆಗಸ್ಟ 16 ರ ಬೆಳಗಿನ 6 ಗಂಟೆಯವರೆಗೆ ಪ್ರತಿ ರಾತ್ರಿ 10 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಮಾರ್ಗಸೂಚಿಗಳನ್ನು ಜ್ಯಾರಿಗೊಳಿಸಿ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ಮುಂದುವರೆಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100 ದಂಡವನ್ನು ವಿಧಿಸಲಾಗುವುದು ಹಾಗೂ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಆರೇಳು ತಿಂಗಳಿಗೆ ಮಾತ್ರ ಸಿಎಂ

ಹೂವಿನ ಹಡಗಲಿಯ ಶ್ರೀ ಕ್ಷೇತ್ರ ಮೈಲಾರದ ಧರ್ಮದರ್ಶಿ ವೆಂಕಪಯ್ಯ ಒಡೆಯರ್ ಭವಿಷ್ಯ

ವಿಜಯಸಾಕ್ಷಿ ಸುದ್ದಿ, ಹೂವಿನ ಹಡಗಲಿ

ಸಿಎಂ ಬೊಮ್ಮಾಯಿ ಆರರಿಂದ ಏಳು ತಿಂಗಳ ಮುಖ್ಯಮಂತ್ರಿ ಮಾತ್ರವಂತೆ. ಬಿಜೆಪಿಯ ಗಡ್ಡದಾರಿ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶ್ರೀ ಕ್ಷೇತ್ರ ಮೈಲಾರದ ಧರ್ಮದರ್ಶಿ ವೆಂಕಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.

ಕೆಲವೇ ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದೆ. ಮೂರು ಜನ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಒಡೆಯರ್ ಕಾರ್ಣಿಕ ನುಡಿದಿದ್ದಾರೆ. ಮತ್ತೆ ಕೊರೋನಾ ಹೆಚ್ಚಾಗಲಿದೆ. ಸರ್ಕಾರದ ನಿಯಮಗಳನ್ನ ಪಾಲಿಸಿ ಎಂದು ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.

ದಿಢೀರ್ ದೆಹಲಿಗೆ ಹಾರಿದ ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹೈಕಮಾಂಡ್ ಬುಲಾವ್ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಂಜೆ ದಿಢೀರ್ ದೆಹಲಿಗೆ ಹಾರಿದ್ದು, ಸಚಿವ ಸಂಪುಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.

ಇಂದು ಸಂಜೆ ದೆಹಲಿಗೆ ತೆರಳಿರುವ ಸಿಎಂ ನಾಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಸಚಿವರ ಪಟ್ಟಿ ಫೈನಲ್ ಮಾಡಲಿದ್ದಾರೆ. ವರಿಷ್ಠರಿಂದ ಒಪ್ಪಿಗೆ ಪಡೆದು ನಾಳೆಯೇ ದೆಹಲಿಯಿಂದ ವಾಪಸ್ ಆಗಲಿದ್ದಾರೆ. ಮಂಗಳವಾರ ಅಥವಾ ಬುಧವಾರ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

error: Content is protected !!