Home Blog Page 6

ಕೊಲಂಬೊದಲ್ಲಿ ಭಾರತಕ್ಕೆ ಭರ್ಜರಿ ಜಯ: ಪಾಕ್‌ ಸೋಲೋದು ಗೊತ್ತಾಗ್ತಿದ್ದಂತೆ ಮೈದಾನದಿಂದ ನಿರ್ಗಮಿಸಿದ ಪಿಸಿಬಿ ಅಧ್ಯಕ್ಷ

0

ಕೊಲಂಬೊ: ಭಾರತ-ಪಾಕಿಸ್ತಾನ ಪೈಪೋಟಿ ಎಂದೇ ಪ್ರಸಿದ್ಧಿ ಪಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 61 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ.

176 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಕುಸಿದು ಪವರ್ ಪ್ಲೇಯಲ್ಲೇ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಉಸ್ಮಾನ್ ಖಾನ್ ಮಾತ್ರ ಪ್ರತಿರೋಧ ತೋರಿದರೆ ಉಳಿದ ಬ್ಯಾಟರ್‌ಗಳು ಬೇಗನೆ ಔಟ್ ಆದರು.

12ನೇ ಓವರ್‌ನಲ್ಲಿ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಮೊಹಮ್ಮದ್ ನವಾಜ್ ಕ್ಯಾಚ್ ಔಟ್ ಆದ ಕ್ಷಣದಿಂದ ಪಂದ್ಯ ಸಂಪೂರ್ಣ ಭಾರತ ಕಡೆ ತಿರುಗಿತು. ಈ ವೇಳೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸ್ಟೇಡಿಯಂ ತೊರೆದು ಹೊರಟ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.

ಭಾರತದ ಬೌಲರ್‌ಗಳ ದಾಳಿಗೆ ಪಾಕ್ ತಂಡ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿನ ಬಳಿಕ ವಿವಿಧ ದೇಶಗಳ ಅಭಿಮಾನಿಗಳು ಸಂಭ್ರಮಿಸಿದರು.

ಪ್ರತಿದಿನವೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ: ದರ್ಶನ್ ಬರ್ತ್​​ಡೇಗೆ ನಟಿ ರಕ್ಷಿತಾ ಭಾವುಕ ಪೋಸ್ಟ್

ಬೆಂಗಳೂರು: ನಟ ದರ್ಶನ್ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ನೋವುಂಟುಮಾಡಿದೆ. ಕಳೆದ ವರ್ಷ ಇದೇ ದಿನ ಕುಟುಂಬದ ಜೊತೆ ಸಂಭ್ರಮಿಸಿದ್ದರೂ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.

ಈ ನಡುವೆ ನಟಿ ರಕ್ಷಿತಾ ಗೆಳೆಯನನ್ನು ನೆನೆದು ಭಾವುಕ ಸಂದೇಶ ಪ್ರಕಟಿಸಿದ್ದಾರೆ. ದರ್ಶನ್, ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಒಟ್ಟಿಗೆ ಇರುವ ಹಳೆಯ ಚಿತ್ರವನ್ನು ಹಂಚಿಕೊಂಡು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಇನ್ನೊಂದು ಸಂದೇಶದಲ್ಲಿ ಪ್ರತಿದಿನವೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ, ನೀನು ಮತ್ತೆ ಸಂತೋಷವಾಗಿ ಇರುವ ದಿನ ಬರಲಿ ಎಂದು ಬರೆದು ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ.

ಜಾಮೀನು ವಜಾದ ಹಿನ್ನೆಲೆಯಲ್ಲಿ ದರ್ಶನ್ ಜೈಲಿನಲ್ಲೇ ಉಳಿದಿದ್ದು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಅಭಿಮಾನಿಗಳು ಬಿಡುಗಡೆಗೆ ಕಾಯುತ್ತಿದ್ದಾರೆ.

ಚಾಮರಾಜನಗರ| ಉರುಳಿಗೆ ಸಿಲುಸಿ ಬೃಹತ್ ಗಾತ್ರದ ಹುಲಿ ಸಾವು!

0

ಚಾಮರಾಜನಗರ:- ಜಿಲ್ಲೆಯ ಹನೂರು ತಾಲ್ಲೂಕು, ಗುಂಡಾಲ್ ಜಲಾಶಯದ ಬಳಿ ಬೃಹತ್ ಗಾತ್ರದ ಹುಲಿಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಸ್ಥಳೀಯ ಬೇಟೆಗಾರರು ಜಲಾಶಯದ ಪ್ರಾಣಿಗಳನ್ನು ಸೆರೆ ಹಿಡಿಯಲು ಉರುಳು ಹಾಕಿದ್ದರು, ಅದಕ್ಕೆ ಹುಲಿ ಸಿಲುಕಿಸಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಘಟನೆ ಸ್ಥಳಕ್ಕೆ ಬಿ.ಆರ್.ಟಿ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಡಿಸಿಎಫ್ ಶ್ರೀಪತಿ ವಲಯ ಅರಣ್ಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಪೊಲೀಸರಿಗೆ ಕೂಡ ಮಾಹಿತಿ ನೀಡಲಾಗಿದೆ, ಮತ್ತು ಶ್ವಾನದಳದ ಸಿಬ್ಬಂದಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜಾಗರಣೆಗೆ ಹೋದ ಕುಟುಂಬಕ್ಕೆ ಶಾಕ್ — ಲಕ್ಷಾಂತರ ಮೌಲ್ಯದ ಚಿನ್ನ, ನಗದು ಕಳವು

0

ವಿಜಯಪುರ: ಮಹಾಶಿವರಾತ್ರಿ ಜಾಗರಣೆಯನ್ನು ಬಂಡವಾಳ ಮಾಡಿಕೊಂಡು ಕಳ್ಳರು ಮನೆ ಕಳ್ಳತನ ನಡೆಸಿದ ಘಟನೆ ವಿಜಯಪುರ ನಗರದ ಶಾರದಾ ನಗರದಲ್ಲಿ ನಡೆದಿದೆ.

ಸೋಮಶೇಖರ ಗಣಿ ಅವರಿಗೆ ಸೇರಿದ ಮನೆಯಲ್ಲಿ ಕಳ್ಳರು ನುಗ್ಗಿ 40 ಸಾವಿರ ರೂಪಾಯಿ ನಗದು, 154 ಗ್ರಾಂ ಚಿನ್ನಾಭರಣ ಮತ್ತು 270 ಗ್ರಾಂ ಬೆಳ್ಳಿ ಆಭರಣ ಕದ್ದೊಯ್ದಿದ್ದಾರೆ. ಕುಟುಂಬಸ್ಥರು ಮನೆಗೆ ಬೀಗ ಹಾಕಿ ಶಿವಗಿರಿಗೆ ಜಾಗರಣೆಗೆ ತೆರಳಿದ್ದರು.

ಇಂಡಿಯಾ – ಪಾಕ್ ಟಿ20 ಕ್ರಿಕೆಟ್ ಪಂದ್ಯ ಇದ್ದ ಕಾರಣ ಬೀದಿಯಲ್ಲಿ ಜನಸಂಚಾರವೂ ಇರಲಿಲ್ಲ. ಇದೇ ಅವಕಾಶ ಬಳಸಿಕೊಂಡ ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡದಿಂದ ಪರಿಶೋಧನೆ ನಡೆಸಲಾಗಿದ್ದು ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎಐ ಭವಿಷ್ಯಕ್ಕೆ ವೇದಿಕೆಯಾಗಲಿದೆ ನವದೆಹಲಿ: ಇಡೀ ಜಗತ್ತಿನ ದೃಷ್ಟಿ ಭಾರತದತ್ತ

0

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯಲಿದೆ. ಕೃತಕ ಬುದ್ಧಿಮತ್ತೆ ವೇಗವಾಗಿ ವಿಶ್ವ ವ್ಯವಸ್ಥೆಯನ್ನು ಬದಲಿಸುತ್ತಿರುವ ಹಿನ್ನೆಲೆಯಲ್ಲಿ ಈ ಜಾಗತಿಕ ಸಮ್ಮೇಳನಕ್ಕೆ ಅಪಾರ ಮಹತ್ವ ಸಿಕ್ಕಿದೆ.

ಸಮ್ಮೇಳನದ ಪ್ರಮುಖ ಉದ್ದೇಶ ಎಐ ಕುರಿತು ಜಾಗೃತಿ ಮೂಡಿಸುವುದು ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಯೋಜನೆಗಳನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸುವುದು. ವಿಶ್ವದ ಅನೇಕ ದೇಶಗಳ ತಂತ್ರಜ್ಞಾನ ಸಂಸ್ಥೆಗಳು, ಉದ್ಯಮಿಗಳು ಮತ್ತು ತಜ್ಞರು ಭಾಗವಹಿಸುವ ನಿರೀಕ್ಷೆಯಿದ್ದು ಸುಮಾರು 50 ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ಭಾರತ್ ಮಂಟಪಂನಲ್ಲಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಎಐ ಮಾನವನ ಬದುಕಿಗೆ ಬೀರುವ ಪರಿಣಾಮ, ಅದರ ಲಾಭ ಮತ್ತು ಅಪಾಯಗಳ ಕುರಿತು ವಿಶೇಷ ಚರ್ಚೆಗಳು ನಡೆಯಲಿವೆ. ಸಮಗ್ರ ಅಭಿವೃದ್ಧಿಗೆ ಎಐ ಬಳಕೆ ಹಾಗೂ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ವಿವಿಧ ಅಧಿವೇಶನಗಳು ನಡೆಯಲಿವೆ.

ಸಮ್ಮೇಳನದ ಅಂಗವಾಗಿ ಬೃಹತ್ ಎಕ್ಸ್‌ಪೋ ಆಯೋಜನೆಗೊಂಡಿದ್ದು 300 ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಮತ್ತು ನೇರ ಪ್ರಾತ್ಯಕ್ಷಿಕೆಗಳು ಇರಲಿವೆ. ಜನ, ಗ್ರಹ ಮತ್ತು ಪ್ರಗತಿ ಎಂಬ ವಿಷಯಾಧಾರಿತ ಪ್ರದರ್ಶನಗಳು ಗಮನ ಸೆಳೆಯಲಿವೆ.

ಇದಲ್ಲದೆ 13 ದೇಶಗಳಿಂದ 600 ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಿ ಎಐ ಪರಿಸರ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಹಕಾರದ ಮಾದರಿಗಳನ್ನು ಪ್ರದರ್ಶಿಸಲಿವೆ.

ಮೊದಲ ದಿನ ಭಾರತದಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸಲು ಎಐ ಆಧಾರಿತ ವ್ಯವಸ್ಥೆಗಳ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಅಪಘಾತ ಮಾದರಿಗಳನ್ನು ವಿಶ್ಲೇಷಣೆ, ಅಪಾಯ ಪೂರ್ವಾನುಮಾನ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಸಕ್ರಿಯಗೊಳಿಸುವ ಡೇಟಾ ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆಗಳೊಂದಿಗೆ ಚರ್ಚೆ ನಡೆಯಲಿದೆ. ಸಾರಿಗೆ ಇಲಾಖೆ, ಐಐಟಿ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಳ್ಳಲಿದ್ದಾರೆ.

ಪೆಟ್ರೋಲ್ ಬಂಕ್‌ನ ಲೈಟಿಂಗ್ ಕಂಬ ಕುಸಿದು ಸಮಾಜವಾದಿ ಪಕ್ಷದ ನಾಯಕ ಸಾವು!

0

ಪ್ರತಾಪಗಢ: ಚಲಿಸುತ್ತಿದ್ದ ಕಾರಿನ ಮೇಲೆ ಪೆಟ್ರೋಲ್ ಬಂಕ್‌ನ ಲೈಟಿಂಗ್ ಕಂಬ ಕುಸಿದು ಬಿದ್ದ ಪರಿಣಾಮ, ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ವರದಿಯ ಪ್ರಕಾರ, ಲಾಲ್ ಬಹದ್ದೂರ್ ಯಾದವ್ ವೈಯಕ್ತಿಕ ಕೆಲಸಕ್ಕಾಗಿ ಬಾಬುಗಂಜ್‌ನಿಂದ ಪ್ರತಾಪಗಢ ನಗರಕ್ಕೆ ಕ್ರೆಟಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಮನೆದಿಂದ ಕೇವಲ 500 ಮೀಟರ್ ದೂರದಲ್ಲಿಯೇ ಈ ಅಪಘಾತ ಸಂಭವಿಸಿತು.

ಪೆಟ್ರೋಲ್ ಪಂಪ್ ಮುಂದೆ ಭಾರತ್ ಪೆಟ್ರೋಲಿಯಂದ ಸಹಾಯದಿಂದ ಕ್ರೇನ್ ಉಪಯೋಗಿಸಿ ಸುಮಾರು 65 ಅಡಿ ಎತ್ತರದ ಲೈಟಿಂಗ್ ಮಾಸ್ಟ್ ಕಂಬವನ್ನು ನಿರ್ಮಿಸಲಾಗುತ್ತಿತ್ತು. ಆ ಕಂಬದ ತೂಕ ಸುಮಾರು 40 ಕ್ವಿಂಟಾಲ್ ಎಂದು ವರದಿಯಾಗಿದೆ. ಈ ದುರ್ಘಟನೆ ಸ್ಥಳೀಯರಿಗೆ ಆಶ್ಚರ್ಯಕಾರಿಯಾಗಿದೆ ಮತ್ತು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪತ್ನಿ ವಿಜಯಲಕ್ಷ್ಮೀ: ಕಾರಾಗೃಹದಲ್ಲೇ ನಟನ ಹುಟ್ಟುಹಬ್ಬ

ಕನ್ನಡ ಚಿತ್ರರಂಗದ ನಟ ದರ್ಶನ್‌ ಅವರ ಜನ್ಮದಿನ ಈ ಬಾರಿ ನಿಶ್ಶಬ್ದವಾಗಿಯೇ ಕಳೆಯುತ್ತಿದೆ. ಪ್ರಕರಣದ ಹಿನ್ನೆಲೆ ಅವರು ಕಾರಾಗೃಹದಲ್ಲಿರುವುದರಿಂದ ಯಾವುದೇ ದೊಡ್ಡ ಆಚರಣೆ ನಡೆಯುತ್ತಿಲ್ಲ.

ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದು, ಕೆಲವರು ಸೇವಾ ಕಾರ್ಯಗಳನ್ನು ನಡೆಸಿ ನಟನ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಪತ್ನಿ ವಿಜಯಲಕ್ಷ್ಮೀ ದರ್ಶನ್‌ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ವಿಶೇಷ ಅನುಮತಿ ಪಡೆದು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಕುಟುಂಬದೊಂದಿಗೆ ಕೇಕ್ ಎದುರು ನಿಂತಿರುವುದು ಕಾಣಿಸಿಕೊಂಡಿದ್ದು, ಕೇಕ್ ಮೇಲೆ ಆನೆಯ ಆಕೃತಿ ಗಮನ ಸೆಳೆಯುತ್ತಿದೆ.

ಪ್ರಕರಣದ ಹಿನ್ನೆಲೆಯಲ್ಲಿ ನಟನಿಗೆ ಇದೇ ಮೊದಲ ಬಾರಿಗೆ ಕಾರಾಗೃಹದಲ್ಲೇ ಜನ್ಮದಿನ ಆಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಭಿಮಾನಿಗಳು ಅವರ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

Breaking News; ಮಹಾಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ಕನ್ನ; ಮಾಲೀಕರು ಕಂಗಾಲು!

0

ವಿಜಯಪುರ: ವಿಜಯಪುರದ ಶಾರದಾ ನಗರದಲ್ಲಿ ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ನುಗ್ಗಿ ಖದೀಮರು ಕಳ್ಳತನ ಮಾಡಿರುವ ಘಟನೆ ಜರುಗಿದೆ.

ಸೋಮಶೇಖರ ಗಣಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ.

ಸದ್ಯ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿತ್ರದುರ್ಗ| ಕಾಲ್ಕೆರೆ ಗ್ರಾಮದ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು!

0

ಚಿತ್ರದುರ್ಗ:- ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕಾಲ್ಕೆರೆ ಗ್ರಾಮದ ಕೆರೆಯಲ್ಲಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿಬಿದ್ದು ಈ ದುರಂತ ಸಂಭವಿಸಿದೆ. ಕವಿತಾ ಹನುಮಂತಪ್ಪ(14), ಪ್ರಜ್ವಲ್ ಪ್ರಭು(12) ಮೃತರು.

ಘಟನೆ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನೀರಿಗೆ ಬಿದ್ದು ಮೃತಪಟ್ಟ 3 ವರ್ಷದ ಕಂದಮ್ಮ; ತಾಯಿಯ ಫೋಟೋ ಶೂಟ್​​ ವೇಳೆಯೇ ದುರಂತ!

0

ನೆಲಮಂಗಲ:- ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡ್ಡೆನಹಳ್ಳಿಯಲ್ಲಿ ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ಮೊದಲನೇ ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ಜರುಗಿದೆ.

3 ವರ್ಷದ ಲಕ್ಷ್ಮೀರ್ ಮೃತ ಮಗುವಾಗಿದ್ದು, ತಾಯಿ ಗರ್ಭಿಣಿ ಫೋಟೊ ಶೂಟ್ ಮಾಡಿಸುತ್ತಿದ್ದ ವೇಳೆ, ಆಟವಾಡಿಕೊಂಡಿದ್ದ ಮಗು ಸ್ಥಳದಲ್ಲಿದ್ದ ಸಣ್ಣ ನೀರಿನ ಪೂಲ್​​ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಲಕ್ಷ್ಮೀರ್ ಜೆ.ಪಿ. ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್ ರಾಜ್ ದಂಪತಿಯ ಮಗುವಾಗಿದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಪೋಟೋ ಶೂಟ್ ಮಾಡಿಸುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ಸ್ನೇಹಿತೆಯೊಂದಿಗೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ.

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ.

ಇನ್ನು ವಿದೇಶದಲ್ಲಿರುವ ಚರಣ್ ರಾಜ್ ನಾಳೆ ಬೆಂಗಳೂರಿಗೆ ಬರಲಿದ್ದು, ಈ ಹಿನ್ನೆಲೆ ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ.

error: Content is protected !!