Home Blog Page 6

ಪಕ್ಷಕ್ಕಾಗಿ ದುಡಿದಿದ್ದಾರೆ, ಡಿಕೆಶಿ ಸಿಎಂ ಆಗಲೆಂದು ನನ್ನ ಹೃದಯ ಬಯಸುತ್ತಿದೆ: ಗಣಿಗ ರವಿಕುಮಾರ್

0

ಮಂಡ್ಯ:- ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಎಂ ಆಗಲೆಂದು ನನ್ನ ಹೃದಯ ಬಯಸುತ್ತಿದೆ ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅವರು ಜೈಲಿಗೂ ಸಹ ಹೋಗಿದ್ದಾರೆ. ನನ್ನ ವೈಯಕ್ತಿಕ ಕಷ್ಟಕಾಲದಲ್ಲಿ ಜೊತೆಗೆ ನಿಂತಿದ್ದಾರೆ. ಡಿಕೆಶಿ ಅವರಿಗೆ ಸಿಎಂ ಸ್ಥಾನ ಸಿಗಬೇಕು. ನಮಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಸಮಾನರು. ಇಬ್ಬರ ಕೊಡುಗೆ ಪಕ್ಷಕ್ಕೆ ಅಪಾರವಾಗಿದೆ. 140 ಜನ ಶಾಸಕರು ಇಬ್ಬರ ಪರವಾಗಿ ಇದ್ದಾರೆ. ಆದಷ್ಟು ಬೇಗ ಎಲ್ಲವೂ ಒಳ್ಳೆಯದಾಗುತ್ತದೆ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.

ಇನ್ನೂ ನಾನು ದೆಹಲಿಗೆ ಹೋಗಿದ್ದು, ಕೋರ್ಟ್ ಕೆಲಸದ ಮೇಲೆ. ದೇವರಾಣೆ ನನಗೆ ಇತರ ಶಾಸಕರು ಬರುವ ವಿಚಾರ ಗೊತ್ತಿರಲಿಲ್ಲ. ನಾವು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಕೇಳಲು ಅಷ್ಟೇ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಾವು ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

ಶಾಸಕ ಜಿ ಎಸ್ ಪಾಟೀಲ್ ಗೆ ಸಚಿವ ಸ್ಥಾನಕ್ಕಾಗಿ ಪ್ರತಿಭಟನೆ: ಡೀಸೆಲ್ ಸುರಿದುಕೊಂಡು ಅಭಿಮಾನಿಗಳ ಆಕ್ರೋಶ!

0

ಗದಗ:- ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಶಾಸಕರ ಅಭಿಮಾನಿಗಳಿಬ್ಬರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗಜೇಂದ್ರಗಡ ಪಟ್ಟಣದಲ್ಲಿ ಜರುಗಿದೆ.

ಎಸ್, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ರೋಣ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಇಂದು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಸರ್ಕಲ್ ಬಳಿ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ಜರುಗಿದೆ. ಈ ವೇಳೆ ಸಂಗಪ್ಪ ತೇಲಿ, ರವಿಕುಮಾರ್ ಎಂಬುವವರು ದಿಢೀರ್ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಇದ್ದ ಇನ್ನುಳಿದ ಕಾರ್ಯಕರ್ತರು ಡೀಸೆಲ್ ಡಬ್ಬಿ ಕಸಿದುಕೊಂಡು ರಕ್ಷಣೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಆಗಿತ್ತು. ಶಾಸಕ ಜಿ ಎಸ್ ಪಾಟೀಲ್ ಗೆ ಪ್ರತೀ ಬಾರಿ ಅನ್ಯಾಯವಾಗಿದೆ. ಹೀಗಾಗಿ ಹೈಕಮಾಂಡ್ ಈ ಬಾರಿ ಜಿ ಎಸ್ ಪಾಟೀಲ್ ಹಾಗೂ ರೋಣ ಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದ್ದು, ಪ್ರತಿಭಟನೆಯಲ್ಲಿ ಸಾಕಷ್ಟು ಕಾರ್ಯಕರ್ತರು ನೆರೆದಿದ್ದರು. 50 ವರ್ಷಗಳಿಂದ ಜಿ ಎಸ್ ಪಾಟೀಲ್ ಅವರು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ನಾಲ್ಕು ಭಾರೀ ಶಾಸಕರಾಗಿದ್ದಾರೆ. ಆದರೆ ಅವರಿಗೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ನೀಡದಿದ್ರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಕಾರ್ಯಕರ್ತರು ನೀಡಿದ್ದಾರೆ.

ಹಿರಿಯ ನಾಯಕರ ಮೇಲೂ ಆಕ್ರೋಶ:

ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರತಿಭಟನಾಕಾರರು, ಜಿಲ್ಲೆಯ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿ ಎಸ್ ಪಾಟೀಲ್ ಅವರಿಗೆ ಒಮ್ಮೆಯಾದರೂ ಹೆಚ್ ಕೆ ಪಾಟೀಲ್ ಸಚಿವ ಸ್ಥಾನ ಬಿಟ್ಟು ಬಿಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಬೆಂಗಳೂರಿನಲ್ಲಿ ದರೋಡೆ ಪ್ರಕರಣ:5.76 ಕೋಟಿ ಹಣ ಸೀಜ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಾಹಿತಿ!

0

ಬೆಂಗಳೂರು:- ನಗರದ ಡೈರಿ ಸರ್ಕಲ್ ನಲ್ಲಿ ಹಾಡಹಗಲೇ ನಡೆದಿದ್ದ 7 ಕೋಟಿ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಟ್ಟು 8 ಜನರ ಗುಂಪಿನಿಂದ ಕೃತ್ಯ ನಡೆದಿದೆ. ಈಗ ಸದ್ಯ 3 ಆರೋಪಿಗಳನ್ನು ಬಂಧಿಸಲಾಗಿದೆ. 5.76 ಕೋಟಿ ಹಣ ಸೀಜ್ ಮಾಡಲಾಗಿದೆ. ಮೊದಲು ಡಿಜೆ ಹಳ್ಳಿಯಲ್ಲಿ ಆಗಿದೆ ಅಂತ ಮಾಹಿತಿ ಬಂದಿತ್ತು. ಘಟನೆ ನಡೆದ ಒಂದೂವರೆ ಗಂಟೆಯ ಬಳಿಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಲ್ಲಾ ಭಾಗಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ದರೋಡೆಕೋರರು ಮೊಬೈಲ್ ಬಳಸುತ್ತಿರಲಿಲ್ಲ. ಸಿಸಿಟಿವಿ ಕಾಣದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದ್ದರು. ತನಿಖೆಯ ದಾರಿ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದ್ದಾರೆ.

ಘಟನೆ ನಡೆದ ದಿನ ಹಣ ತೆಗೆದುಕೊಂಡು ಹೋದ ವಾಹನ ಹಿಡಿಯಲಿಕ್ಕೆ ಆಗ್ಲಿಲ್ಲ. ಅನೇಕ ವಾಹನ ಬಳಸಿದ್ದಾರೆ. ವಾಹನಗಳ ನಂಬರ್ ಪದೇ ಪದೇ ಬದಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಇಲ್ಲದ ಕಡೆಯಲ್ಲಿ ಆರೋಪಿಗಳು ಓಡಾಡಿದ್ದಾರೆ. ವಾಹನವನ್ನು ಸಿಸಿಟಿವಿ ಇಲ್ಲದ ಜಾಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾದಲ್ಲಿ ಆರೋಪಿಗಳನ್ನು ಹುಡುಕಾಟ ನಡೆಸಿದ್ದಾರೆ. ಇನ್ನೂ ಹಣ ರಿಕವರಿ ಆಗಬೇಕು. 200 ಸ್ಟಾಪ್ ಬಳಕೆ ಮಾಡಲಾಗಿದೆ. 30 ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಅದರಲ್ಲಿ ಮೂವರು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಗೋವಿಂದಪುರ ಪೇದೆ ಸೇರಿ ಮೂವರ ಬಂಧನವಾಗಿದೆ. ಗೋಪಿ, ಜೋವಿಯಾರ್, ಅಣ್ಣಪ್ಪನಾಯ್ಕ್ ಬಂಧಿತ ಆರೋಪಿಗಳು. ಕ್ಲೂ ಇಲ್ಲದೆ ಆರೋಪಿಗಳು ಕೆಲಸ ಮಾಡಿದ್ದಾರೆ. ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಬಂಧನ ಮಾಡಲಾಗಿದೆ. 6 ರಿಂದ ಏಂಟು ಮಂದಿ ಸೇರಿ ಕೃತ್ಯ ಎಸಗಿದ್ದಾರೆ. ಒಂದು ಇನ್ನೋವಾ ಗಾಡಿ ಚಿತ್ತೂರಿನಲ್ಲಿ ಸಿಕ್ಕಿತ್ತು. ಬೆಂಗಳೂರಿನ ಹೊರ ಭಾಗದಲ್ಲಿ ಹಣ ರಿಕವರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹೋಮ್ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದು 5 ವರ್ಷದ ಬಾಲಕ ದುರಂತ ಅಂತ್ಯ!

0

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಯಲ್ಲಿ ಹೋಮ್‌ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಜರುಗಿದೆ.

ಮೊಹಮ್ಮದ್ ಮುಸ್ತಾಕೀಮ್ ಶೇಖ್ (5) ಮೃತ ಬಾಲಕ. ಕುಟುಂಬದವರ ಜೊತೆ ಆಟವಾಡುತ್ತಿದ್ದಾಗ ಮಗು ಕಾಲುಜಾರಿ ಈಜುಕೊಳಕ್ಕೆ ಬಿದ್ದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ಶಾಹಿದುಲ್ಲಾಹ ಹೋಮ್ ಸ್ಟೇ ಮನೆಯನ್ನು ಲೀಸ್‍ಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ: ಬೆಂಗಳೂರಿನಲ್ಲಿ ಆರೋಪಿ ಅರೆಸ್ಟ್

0

ಬೆಂಗಳೂರು:- ಹೈಗ್ರೌಂಡ್ಸ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಾಲೇಜು ಹಾಗೂ ಶಾಲಾ ಮಕ್ಕಳಿಗೆ ಡ್ರಗ್ಸ್ ಮಾದರಿಯ ಮಾತ್ರೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಪ್ರೇಮ್ ಅಲಿಯಾಸ್ ವೈಷ್ಣವ್ ಬಂಧಿತ ಆರೋಪಿ. ಆರೋಪಿ ಬಳಿಯಿಂದ ಪೊಲೀಸರು 6,700 ತ್ಯಾಪೆನ್ಡನಾಲ್ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಈತ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೂರರಿಂದ ಐನೂರು ರೂ.ಗೆ ಒಂದು ಮಾತ್ರೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬೇರೆ ರಾಜ್ಯದಿಂದ ಆರೋಪಿ ಮಾತ್ರೆಗಳನ್ನು ತರಿಸಿ, ಮಾರಾಟ ಮಾಡುತ್ತಿದ್ದ. ಅಲ್ಲದೇ ಈ ಮಾತ್ರೆಗಳಿಂದ ಸೈಕೋಟ್ರಾಫಿಕ್ ಎಫೆಕ್ಟ್ ಆಗಿ ಮತ್ತು ಬರುತ್ತದೆ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು: ಪಾಪಿ ಅಪ್ಪ ಸೇರಿ ಇಬ್ಬರ ಮೇಲೆ ಪೋಕ್ಸೋ ಕೇಸ್ ದಾಖಲು

0

ಕೊಪ್ಪಳ:- ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ಕೊಟ್ಟ ಆರೋಪದಡಿ ಪಾಪಿ ತಂದೆ ಸೇರಿ ಇಬ್ಬರ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ.

ವಿಕೃತ ತಂದೆಯೊಬ್ಬ ತನ್ನ ಸ್ನೇಹಿತನ ಮನೆಗೆ ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿರುವುದು ಕೊಪ್ಪಳದಲ್ಲಿ ನಡೆದಿದೆ.

ಈ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ತಂದೆ ಹಾಗೂ ಆತನ ಸ್ನೇಹಿತನ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ. ದೂರಿನಲ್ಲಿ ತಂದೆ ತನ್ನ ಸ್ನೇಹಿತನ ಮನೆಗೆ ಕರೆದು ಕೊಂಡು ಹೋಗಿದ್ದ. ಈ ವೇಳೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಇದರಿಂದ ಗಾಬರಿಗೊಂಡು ಬಾಲಕಿ ಓಡಿ ಅಲ್ಲಿಂದ ತಪ್ಪಿಸಿಕೊಂಡು ನಗರ ಠಾಣೆಗೆ ಬಂದು ದೂರು ನೀಡಿದ್ದಾಗಿ ತಿಳಿಸಿದ್ದಾಳೆ.

ಬಾಲಕಿ ನೀಡಿದ ದೂರಿನಡಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಪೊಲೀಸರಿಂದ ಶೋಧ ನಡೆದಿದೆ.

ಗೋವಿನಜೋಳ ಬೆಂಬಲ ಬೆಲೆಗೆ ಒತ್ತಾಯ: ಲಕ್ಷ್ಮೇಶ್ವರ ಬಂದ್‌ನ ದೃಶ್ಯಾವಳಿ

0

ಗದಗ: ಸರ್ಕಾರ ಬೆಂಬಲ ಬೆಲೆಯ ಯೋಜನೆಯಡಿ ಗೋವಿನಜೋಳ ಖರೀದಿಸಬೇಕು ಎಂಬ ದಿಟ್ಟ ನಿಲುವಿನೊಂದಿಗೆ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮತ್ತು ಎಲ್ಲ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ನೀಡಿದ್ದ ಲಕ್ಷ್ಮೇಶ್ವರ ಬಂದ್‌ನ ವಿವಿಧ ದೃಶ್ಯಾವಳಿಗಳು.

ಹರ್ತಿ ಗ್ರಾಮದಲ್ಲಿ ಭವ್ಯ ಕಾರ್ತಿಕೋತ್ಸವ: ಸಾವಿರಾರು ಭಕ್ತರ ದೀಪಾರಾಧನೆಯಲ್ಲಿ ಅರಳಿದ ಭಕ್ತಿ ಸಿರಿ

0

ಮುಳಗುಂದ: ಮುಳಗುಂದ ಪಟ್ಟಣ ಸಮೀಪದ ಹರ್ತಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ನಿಮಿತ್ತ ಬಸವೇಶ್ವರನಿಗೆ ಬೆಳಿಗ್ಗೆ ವಿಶೇಷ ಅಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ಸಾಯಂಕಾಲ ಕಾರ್ತಿಕೋತ್ಸವ ಜರುಗಿತು. ಸಾವಿರಾರು ಭಕ್ತರು ಭಕ್ತಿ ಭಾವದಿಂದ ಬಸವೇಶ್ವರ ದೇವರಿಗೆ ದೀಪೋತ್ಸವ ನೆರವೇರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

 

ಗೋಶಾಲೆಯಲ್ಲಿ ಗರ್ಭಿಣಿ ಗೋಮಾತೆಗೆ ಸೀಮಂತ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗರ್ಭಿಣಿ ಗೋಮಾತೆಗೆ ಶ್ರದ್ದಾ-ಭಕ್ತಿಯಿಂದ ಪೂಜಿಸಿ ಸೀಮಂತ ಕಾರ್ಯಕ್ರಮದೊಂದಿಗೆ ಮೂರು ಗೋಮಾತೆಯ ಕರುಗಳಿಗೆ ನಾಮಕರಣ ಮಾಡುವ ಮೂಲಕ ಗೋಮಾತೆಯನ್ನು ಸಂರಕ್ಷಿಸಿ ಎಂಬ ಭಕ್ತಿ ಭಾವ ಸ್ಪುರಿಸುವ ವಿಶಿಷ್ಟ ಕಾರ್ಯಕ್ರಮವು ಗದುಗಿನ ಹೊರವಲಯದಲ್ಲಿರುವ ಗಂಗಿಮಡಿ ಪ್ರದೇಶದ ಹಿರೇಹಂದಿಗೋಳ ಮಾರ್ಗದ ಗೋಶಾಲೆಯಲ್ಲಿ ಶುಕ್ರವಾರ ಜರುಗಿತು.

ಗೋ-ಸೇವಾ ಗತಿ ವಿಧಿ ಉತ್ತರ ಪ್ರಾಂತ ಮತ್ತು ಗೋ-ಜೈವಿಕ ಕೃಷಿ ಅನುಸಂಧಾನ ಕೇಂದ್ರ ಟ್ರಸ್ಟ್ ಗದಗ ಇವರ ಸಹಯೋಗದೊಂದಿಗೆ ವಿವಿಧ ಮಹಿಳಾ ಸಂಘಟನೆಗಳು ಈ ಕೈಂಕರ್ಯಕ್ಕೆ ಕೈಜೋಡಿಸಿವೆ.

ಗೋಶಾಲಾದ ಶುಚಿಗೊಳಿಸಿದ ದೇವಣಿ, ಗೀರ್ ತಳಿಯ ಗರ್ಭಿಣಿ ಗೋಮಾತೆಯನ್ನು ಮುತ್ತೆದೆಯರು ಕುಂಭದೊಂದಿಗೆ ತಳಿರು ತೋರಣಗಳಿಂದ ಅಲಂಕೃತಗೊಳಿಸಿದ್ದ ಮಂಟಪಕ್ಕೆ ಬರಮಾಡಿಕೊಂಡರು. ಈ ಗೋಮಾತೆಗೆ ಪಾದಪೂಜೆ ಮಾಡಿ ಕುಂಕುಮ, ಅರಿಷಿಣ ಹಚ್ಚಿ ಸೀರೆ ಉಡಿಸಿ, ಉಡಿ ತುಂಬಿ ಬೆಲ್ಲ, ಅಕ್ಕಿಯೊಂದಿಗೆ ಪಶು ಆಹಾರ ನೀಡಿ ನಮಿಸಿದರು.

ಅಲಂಕೃತ ತೊಟ್ಟಿಲಲ್ಲಿ ಒಂದರ ನಂತರ ಒಂದರಂತೆ ಗೋಶಾಲೆಯ ಮೂರು ಗೋಮಾತೆಯ ಕರುಗಳಿಗೆ ಬಸವ, ಕೃಷ್ಣೆ, ಗೌರಿ ಎಂದು ನಾಮಕರಣ ಮಾಡಿ ಮುತ್ತೆದೆಯರು ಜೋಗುಳ ಹಾಡಿ ಸಂಭ್ರಮಿಸಿದರು.

ಮಹಿಳಾ ಪ್ರಮುಖರಾದ ರಜನಿ ಪಂಥರ, ನಾಗವೇಣಿ ಕಟ್ಟಿಮನಿ, ಅಶ್ವಿನಿ ಜಗತಾಪ, ವೀಣಾ ಕಾವೇರಿ, ರಂಜನಾ ಕೋಟಿ, ವಿಜಯಾ ನವಲೆ ಮುಂತಾದವರ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಮುತ್ತೆದೆಯರು ಕುಂಭದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಉಡಿ ತುಂಬಿ ಗೌರವಿಸಲಾಯಿತು.

ಟ್ರಸ್ಟ್ ಕಾರ್ಯದರ್ಶಿ ರವಿ ಹಡಪದ, ಆರ್.ಎಸ್.ಎಸ್. ಪ್ರಮುಖರಾದ ನರಸಿಂಹ ಕಾಮಾರ್ತಿ, ಮೋಹನ ಮಾಳಶೆಟ್ಟಿ, ಗುರುಸಿದ್ದಪ್ಪ ಕೊಣ್ಣೂರ, ಚೇತನ್ ಮೇಹರವಾಡೆ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಗೋ ಸಂತತಿ ಉಳಿಯಬೇಕು, ಗೋ ಸಂರಕ್ಷಣೆ ಆಗಬೇಕು, ಗೋವಿನ ಹಾಲು, ಬೆಣ್ಣೆ, ಮೂತ್ರ, ಸಗಣೆಯಿಂದ ಮಾನವನಿಗೆ ಉಪಯುಕ್ತ ಸಾಮಗ್ರಿಗಳ ಉತ್ಪಾದನೆ ಹೆಚ್ಚಾಗಬೇಕೆಂಬ ಉದ್ದೇಶವಿದೆ. ಬರಲಿರುವ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು.

– ರವಿ ಹಡಪದ,
ಟ್ರಸ್ಟ್ ಕಾರ್ಯದರ್ಶಿ.

ಮನೆ ಕಳ್ಳತನ ಆರೋಪಿಯ ಬಂಧನ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿ ನಗರದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮನೆಯೊಂದರ ಹಿತ್ತಲ ಬಾಗಿಲು ಮುರಿದು ಮನೆಯಲ್ಲಿದ್ದ ಬೆಳ್ಳಿ, ಬಂಗಾರದ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 29ರಂದು ನಡೆದಿದ್ದ ಕಳವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಹೋಟೆಲ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ದ್ಯಾಮಣ್ಣ ಗಂಗಪ್ಪ ಕಂಬಳಿ ಎಂಬುವನನ್ನು ಬಂಧಿಸಿ, ಬಂಧಿತನಿಂದ ಒಟ್ಟು 17 ಗ್ರಾಂ ಬಂಗಾರದ ಆಭರಣಗಳು ಹಾಗೂ 55 ಗ್ರಾಂ ಬೆಳ್ಳಿ ಆಭರಣಗಳು, ಒಟ್ಟಾರೆ ₹1,25,000 ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

ಈ ಪ್ರಕರಣ ಭೇದಿಸುವಲ್ಲಿ ಎಸ್ಪಿ ರೋಹನ್ ಜಗದೀಶ, ಡಿಎಸ್ಪಿ ಮುರ್ತುಜಾ ಖಾರ್ದಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ನೇತೃತ್ವದಲ್ಲಿ ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ. ರಾಠೋಡ, ಸಿಬ್ಬಂದಿ ಎಂ.ಎ. ಶೇಖ, ಆರ್.ಎಸ್. ಯರಗಟ್ಟಿ, ಎಂ.ಎಸ್. ಬಳ್ಳಾರಿ, ಎ.ಆರ್. ಕಮ್ಮಾರ, ಎಚ್.ಬಿ. ಗುಡ್ಡಣ್ಣವರ, ಸಿ.ಎಸ್. ಮಠಪತಿ, ಡಿ.ಎಸ್. ನದಾಫ್, ಪಾಂಡುರಂಗರಾವ್, ಎಚ್.ಐ. ಕಲ್ಲನ್ನವರ್, ಎಂ.ಆರ್. ಧಾರವಾಡ, ಎಂ.ಎಸ್. ಅಂಗಡಿ, ಎನ್.ಎಚ್. ಮಠಪತಿ, ಎಎಸ್‌ಐ ಗುರು ಬೂದಿಹಾಳ, ಸಂಜೀವ ಕೊರಡೂರ, ಅಪ್ಪಣ್ಣ ರಾಠೋಡ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ಪ್ರಕರಣ ಭೇದಿಸಿದ ತಂಡವನ್ನು ಎಸ್ಪಿ ರೋಹನ್ ಜಗದೀಶ ಹಾಗೂ ಡಿಎಸ್ಪಿ ಮುರ್ತುಜಾ ಖಾರ್ದಿ ಅಭಿನಂದಿಸಿದ್ದಾರೆ.

error: Content is protected !!