Home Blog Page 60

ಪ್ರೇಕ್ಷಕರಿಗೆ ಡಬಲ್ ಮಜಾ: ಐಪಿಎಲ್‌ನಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚಳ!

0

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ.

2026ರ ಐಪಿಎಲ್ ಸೀಸನ್‌ನಿಂದ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದ್ದು, ಒಟ್ಟು 84 ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ. ಈ ಹಿಂದೆ ಬಿಸಿಸಿಐ ಐಪಿಎಲ್ 2025 ಮತ್ತು 2026ರಲ್ಲಿ 84 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಿತ್ತು. ಆದರೆ ಆಟಗಾರರ ಲಭ್ಯತೆ ಹಾಗೂ ವಿದೇಶಿ ಆಟಗಾರರ ವಿಂಡೋ ಸಮಸ್ಯೆಯಿಂದಾಗಿ ಆ ಯೋಜನೆ ಜಾರಿಗೆ ಬರಲಿಲ್ಲ. ಇದುವರೆಗೆ ಐಪಿಎಲ್‌ನಲ್ಲಿ 74 ಪಂದ್ಯಗಳು ಮಾತ್ರ ನಡೆಯುತ್ತಿತ್ತು. ಇದೀಗ 2026ರಿಂದ ಹೆಚ್ಚುವರಿ 10 ಪಂದ್ಯಗಳನ್ನು ಸೇರಿಸಿ 84 ಪಂದ್ಯಗಳ ಟೂರ್ನಿ ನಡೆಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಐಪಿಎಲ್ ಸೀಸನ್ 18 ಮತ್ತು 19ರಲ್ಲಿ 84 ಪಂದ್ಯಗಳನ್ನು ಆಯೋಜಿಸುವ ಯೋಜನೆ ಇದ್ದರೂ, ಕಳೆದ ಬಾರಿ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪ್ರಸಾರಕರ ಬೇಡಿಕೆ ಮತ್ತು ವಾಣಿಜ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.

ಇನ್ನು 2027ರಿಂದ ಐಪಿಎಲ್ ಟೂರ್ನಿಯನ್ನು ಸಂಪೂರ್ಣ ಲೀಗ್ ಮಾದರಿಯಲ್ಲಿ ನಡೆಸುವ ಯೋಜನೆಯೂ ಇದೆ. ಅದರಂತೆ ಪ್ರತಿ ತಂಡವು ಒಟ್ಟು 18 ಪಂದ್ಯಗಳನ್ನು ಆಡಲಿದ್ದು, 9 ಪಂದ್ಯಗಳು ಹೋಮ್ ಮೈದಾನದಲ್ಲಿ ಮತ್ತು ಉಳಿದ 9 ಪಂದ್ಯಗಳು ಹೊರ ಮೈದಾನದಲ್ಲಿ ನಡೆಯಲಿವೆ. ಈ ಮೂಲಕ 2027ರಿಂದ ಐಪಿಎಲ್‌ನಲ್ಲಿ 94 ಪಂದ್ಯಗಳು ನಡೆಯುವ ಸಾಧ್ಯತೆ ಇದೆ.

ಈ ಬದಲಾವಣೆಯಿಂದ ಐಪಿಎಲ್ ಅಭಿಮಾನಿಗಳಿಗೆ ಇನ್ನಷ್ಟು ಪಂದ್ಯಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ಗುರುಗ್ರಾಮ್: ನಿರ್ಮಾಣ ಹಂತದ ಗೋಡೆ ಕುಸಿತ – 7 ಕಾರ್ಮಿಕರು ಸಾವು, ಐವರ ಸ್ಥಿತಿ ಚಿಂತಾಜನಕ!

0

ಚಂಡೀಗಢ: ಹರಿಯಾಣದ ಗುರುಗ್ರಾಮ್ ಸಿಧ್ರಾವಲಿ ಪ್ರದೇಶದ ಸಿಗ್ನೇಚರ್ ಗ್ಲೋಬಲ್ ಸೊಸೈಟಿಯಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದ ಪರಿಣಾಮ 7 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದ್ರಜಿ ಸದಾ (32), ಭಾಗೀರಥ್ ಗೋಪಿ, ಛೋಟೆಲಾಲ್ ಸದಾ (37), ಶಿವಶಂಕರ್ (31), ಶಿವಕಾಂತ್ ಚೌಧರಿ (47) ಮತ್ತು ಮಂಗಾತ್ರಮ್ (32) ಮೃತರು. ಮತ್ತೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

ಸುಮಾರಿಗೆ 12–15 ಕಾರ್ಮಿಕರು ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಗೋಡೆ ಕುಸಿದ ಬಳಿಕ ಕಾರ್ಮಿಕರು ಅವಶೇಷಗಳು ಮತ್ತು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು.

9:30 ಗಂಟೆಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು, SDRF ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಆರಂಭಿಸಿ, ಏಳು ಶವಗಳನ್ನು ಹೊರತೆಗೆಯಲಾಗಿದ್ದು, ಐವರು ಗಾಯಗೊಂಡವರನ್ನು ಭಿವಾಡಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಪೋಲೀಸರು ಗೋಡೆ ಕುಸಿತಕ್ಕೆ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

 

ಜಲಸಂಧಿಯಲ್ಲಿ ತೈಲ ಹರಿವು ತಡೆದರೆ, ಇರಾನ್ ಒಂದು ರಾಷ್ಟ್ರವಾಗಿಯೇ ಉಳಿಯದು: ಟ್ರಂಪ್ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

“ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸುವ ಯಾವುದೇ ಪ್ರಯತ್ನ, ಇರಾನ್ ಅನುಭವಿಸಿದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ದಾಳಿಯನ್ನು ಎದುರಿಸಬೇಕಾಗುತ್ತದೆ. ಅಂತಹ ದಾಳಿಗಳು ಇರಾನ್ ಅನ್ನು ಒಂದು ರಾಷ್ಟ್ರವಾಗಿ ಉಳಿಸಿಕೊಳ್ಳಲು ಅಸಾಧ್ಯಮಾಡಬಹುದು. ಆದರೆ ನಾನು ಬಯಸುತ್ತೇನೆ, ಅದು ಸಂಭವಿಸಬಾರದು ಎಂದು ಟ್ರಂಪ್ ಹೇಳಿದ್ದಾರೆ.

ಫೆಬ್ರವರಿ 28 ರಂದು, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿದವು. ಈ ಕ್ರಮ ಮಧ್ಯಪ್ರಾಚ್ಯದ ಹಲವು ದೇಶಗಳನ್ನು ಪ್ರಾದೇಶಿಕ ಯುದ್ಧದ ಅಂಚಿಗೆ ತಲುಪಿಸಿದೆ. ಟ್ರಂಪ್ ಹೇಳಿಕೆ ಪ್ರಕಾರ, ಇರಾನ್ ಈಗ ನೌಕಾಪಡೆ, ವಾಯುಪಡೆ ಮತ್ತು ಕ್ಷಿಪಣಿ ವ್ಯವಸ್ಥೆಗಳಲ್ಲಿ ದೊಡ್ಡ ಕೊರತೆ ಎದುರಿಸುತ್ತಿದೆ. ಡ್ರೋನ್ ತಯಾರಿಸುವ ಕಾರ್ಖಾನೆಗಳು ನಾಶಗೊಂಡಿದ್ದು, ಡ್ರೋನ್‌ಗಳನ್ನು ಹಲವು ಕಡೆಗೆ ಹೊಡೆದುರುಳಿಸಲಾಗಿದೆ.

“ಯುದ್ಧ ಪ್ರಾರಂಭವಾದಾಗ ನಾವು ಕನಿಷ್ಠ ನಾಲ್ಕರಿಂದ ಐದು ವಾರಗಳ ಕ್ರಮ ನಿರೀಕ್ಷಿಸಿದ್ದೆವು, ಆದರೆ ಈಗ ಸಂಘರ್ಷ ಶೀಘ್ರದಲ್ಲೇ ಮುಗಿಯಬಹುದು. ಇರಾನ್ ಯಾವುದೇ ಹೊಸ ತಂತ್ರಗಳನ್ನು ಪ್ರಯತ್ನಿಸಬಾರದು. ಹಾರ್ಮುಜ್ ಜಲಸಂಧಿ ಈಗ ತೆರೆದಿದ್ದು, ಹಡಗುಗಳು ಅಲ್ಲಿಂದ ಸುರಕ್ಷಿತವಾಗಿ ಸಾಗುತ್ತಿವೆ” ಎಂದು ತಿಳಿಸಿದ್ದಾರೆ.

 

 

ರಾಯಚೂರು| ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿತ: ದಂಪತಿ ಸಾವು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಯಲಗಟ್ಟ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಮೆಟ್ಟಿಲು ಏಕಾಏಕಿ ಕುಸಿದ ಪರಿಣಾಮ, ಗೌಂಡಿ ಕೆಲಸ ಮಾಡುತ್ತಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ಪೈಕಿ 38 ವರ್ಷದ ದ್ಯಾವಪ್ಪ ಸೂಗುರು ಮತ್ತು 32 ವರ್ಷದ ಶಿವಮ್ಮ, ದುರ್ದೈವಿಗಳು. ತನಿಖೆಯ ಪ್ರಕಾರ, ಮೆಟ್ಟಿಲು ಪಿಲ್ಲರ್ ಇಲ್ಲದೆ, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದುದರಿಂದ ಕುಸಿತಕ್ಕೆ ಕಾರಣವಾಗಿದೆ.

ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯರು ದಾರುಣ ಘಟನೆಗೆ ಸಂಬಂಧಿಸಿದಂತೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

 

ಶಾಸಕರಿಗೆ ಔತಣಕೂಟ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುತ್ತಾರಾ ಡಿಸಿಎಂ ಡಿಕೆಶಿ!?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ.

ಈ ಔತಣಕೂಟ ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಗೊಂದಲದ ನಡುವೆ ಆಯೋಜನೆಯಾಗಿದೆ. ಪಕ್ಷದೊಳಗಿನ ಕೆಲವರಲ್ಲಿ “ಡಿಕೆಶಿ ಅಧ್ಯಕ್ಷ ಸ್ಥಾನದಿಂದ ಇಳಿಯುವ ಬಗ್ಗೆಯೂ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಡಿನ್ನರ್ ಮೀಟಿಂಗ್ ಸಾಕಷ್ಟು ಕುತೂಹಲ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, “ನಾನು ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ.

ಮುಂದಿನ ದಿನಗಳಲ್ಲಿ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕೂಡ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಈ ಭೋಜನಕೂಟವನ್ನು ನೀಡಿದ್ದೇವೆ” ಎಂದು ಹೇಳಿದರು.

 

ತಮಿಳುನಾಡಲ್ಲಿ ಸಿಲಿಂಡರ್ ಕೊರತೆ: ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡೋ ಪರಿಸ್ಥಿತಿ!

0

ಚೆನ್ನೈ: ಇಸ್ರೇಲ್‌, ಅಮೆರಿಕ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ದೇಶದ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳ ಕಂಡಿದ್ದು, ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಗೃಹ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಅಭಾವ ತಲೆದೋರಿದೆ.

ತಮಿಳುನಾಡಿನ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳು ಈ ಪೂರೈಕಾ ತೊಂದರೆ ಹಿನ್ನೆಲೆಯಲ್ಲಿ ಬಂಡವಾಳದ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೆಲವು ಹೋಟೆಲ್‌ಗಳು ಬಂದ್‌ ಮಾಡುವ ಪರಿಸ್ಥಿತಿಯಲ್ಲಿವೆ.

ಚೆನ್ನೈ ಹೋಟೆಲ್ ಅಸೋಸಿಯೇಷನ್ ತಮಿಳುನಾಡು ಮುಖ್ಯಮಂತ್ರಿ ಗೆ ಪತ್ರ ಬರೆದು, ಸಿಲಿಂಡರ್ ಪೂರೈಕೆಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಪತ್ರದಲ್ಲಿ, “ಸಿಲಿಂಡರ್ ಸಿಗದೆ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ವಿತರಕರು ಪೂರೈಕೆ ಸಂಪೂರ್ಣ ಸ್ಥಗಿತ ಮಾಡಿದ್ದಾರೆ. ನೋ ಸ್ಟಾಕ್ ಎಂದು ಹೇಳುತ್ತಿದ್ದು, ಬಹುತೇಕ ರೆಸ್ಟೋರೆಂಟ್ ಬಂದ್ ಮಾಡಲು ಎದುರಿಸುತ್ತಿದ್ದಾರೆ,” ಎಂದು ವಿವರಿಸಲಾಗಿದೆ.

ಅಸೋಸಿಯೇಷನ್ ಅವರು ಸರ್ಕಾರದ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿ, ಕಮರ್ಷಿಯಲ್ ಸಿಲಿಂಡರ್ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

ಲೆನ್ಸ್ ಹಾಕಲು ಹಣಕ್ಕೆ ಬೇಡಿಕೆ: ಲೋಕಾ ಬಲೆಗೆ ಬಿದ್ದ ತುಮಕೂರು ಜಿಲ್ಲಾಸ್ಪತ್ರೆ ವೈದ್ಯೆ!

ತುಮಕೂರು:- ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯೆಯೋರ್ವರು ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಡಾ. ಸವಿತಾ ಲೋಕಾ ಬಲೆಗೆ ಬಿದ್ದ ನೇತ್ರಾ ಚಿಕಿತ್ಸಕಿ. ಉಪ್ಪಾರಹಳ್ಳಿ ನಿವಾಸಿ ಅವಿನಾಶ್ ಅವರ ತಾಯಿ ಕಣ್ಣಿಗೆ ಲೆನ್ಸ್ ಹಾಕಲು ಡಾ.ಸವಿತಾ ಅವರು ಹಣದ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಅವಿನಾಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮನೋಜ್ ಮೂಲಕ ಡಾ.ಸವಿತಾ ಲಂಚದ ಹಣ ಪಡೆದಾಗ, ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್ ನೇತೃತ್ವದ ತಂಡ ರೆಡ್ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಡಾ.ಸವಿತಾ ಮತ್ತು ಮನೋಜ್ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿದಿದೆ.

ವಿಶ್ವಕಪ್ ಗೆದ್ದಾಯ್ತು.. ಟೀಮ್ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಯಾವಾಗ?

0

ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಗೆದ್ದ ನಂತರ ವಿಶೇಷ ಸಂಭ್ರಮಾಚರಣೆಯೊಂದಿಗೆ ಕೆಲವು ದಿನ ವಿಶ್ರಾಂತಿಗೆ ಹೋಗಿದೆ.

ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ಮುಗಿಸಿ ಆಟಗಾರರು ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ. ಟೀಂ ಇಂಡಿಯಾ ಆಟಗಾರರು ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ, “ಮುಂದೆ ತಂಡವನ್ನು ಮೈದಾನದಲ್ಲಿ ಯಾವಾಗ ನೋಡಬಹುದು?” ಎಂಬ ಪ್ರಶ್ನೆ ಈಗ ಪ್ರಸ್ತುತವಾಗಿದೆ.

ಟಿ20 ವಿಶ್ವಕಪ್ ಗೆದ್ದ ಬಳಿಕ, ಭಾರತ ತಂಡ 96 ದಿನಗಳ ಕಾಲ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸದೆ ಇರುತ್ತದೆ. ಈ ವಿಶ್ರಾಂತಿ ಬಳಿಕ, ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ತೊಡಗಲಿದೆ. ಜೂನ್ 6 ರಂದು ನ್ಯೂ ಚಂಡೀಗಢದಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೆ ನಂತರ, ಅಫ್ಘಾನಿಸ್ತಾನ ವಿರುದ್ಧ 3 ಏಕದಿನ ಸರಣಿಯು ನಡೆಯಲಿದೆ. ಈ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರು – ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಆಡಲಿದ್ದಾರೆ.

ಮಾರ್ಚ್ 28 ರಿಂದ ಭಾರತ ಆಟಗಾರರು ಐಪಿಎಲ್‌ನಲ್ಲಿ ತಮ್ಮ ಕ್ಲಬ್ ತಂಡಗಳ ಪರವಾಗಿ ಆಡಲು ಪ್ರಾರಂಭಿಸುತ್ತಾರೆ. ಈ ಪಂದ್ಯಾವಳಿ ಫೈನಲ್ ಪಂದ್ಯ ಮೇ 31 ರಂದು ಮುಗಿಯಲಿದೆ. ಐಪಿಎಲ್ ನಂತರ, ಟೀಂ ಇಂಡಿಯಾ ಅಂತಾರಾಷ್ಟ್ರೀಯ ಮೈದಾನಕ್ಕೆ ಮರಳುತ್ತದೆ.

ಭಾರತ ತಂಡದ 2026 ರ ಪ್ರಮುಖ ಪ್ರವಾಸ ಮತ್ತು ಸರಣಿಗಳು:

  • ಜೂನ್ – ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಮತ್ತು 3 ಏಕದಿನ ಸರಣಿ.
  • ಜುಲೈ – ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲಿದೆ. ಈ ಪ್ರವಾಸದಲ್ಲಿ 5 ಟಿ20 ಮತ್ತು 3 ಏಕದಿನ ಪಂದ್ಯಗಳು ನಡೆಯುತ್ತವೆ.
  • ಆಗಸ್ಟ್ – ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
  • ಸೆಪ್ಟೆಂಬರ್-ಅಕ್ಟೋಬರ್ – ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಮತ್ತು 5 ಟಿ20 ಪಂದ್ಯಗಳು.
  • ಅಕ್ಟೋಬರ್-ನವೆಂಬರ್ – ನ್ಯೂಜಿಲೆಂಡ್ ಪ್ರವಾಸ, ಅಲ್ಲಿ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯುತ್ತವೆ.
  • ಡಿಸೆಂಬರ್ – ಶ್ರೀಲಂಕಾ ತಂಡ ಭಾರತಕ್ಕೆ ಬರುವಂತೆ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಡೆಯುತ್ತವೆ.

ಈ ವೇಳಾಪಟ್ಟಿಯೊಂದಿಗೆ ಟೀಂ ಇಂಡಿಯಾ ತನ್ನ ಆಟಗಾರರನ್ನು ಹಲವಾರು ಸ್ಥಳಗಳಲ್ಲಿ ಹಾಗೂ ವಿವಿಧ ಫಾರ್ಮ್ಯಾಟ್‌ನಲ್ಲಿ ಬ್ಯುಸಿ ಇಡಲಿದೆ. ಕ್ರಿಕೆಟ್ ಅಭಿಮಾನಿಗಳು, ವಿಶೇಷವಾಗಿ ಟಿ20 ವಿಶ್ವಕಪ್ ಗೆದ್ದ ತಂಡವನ್ನು, ಮುಂದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೈದಾನದಲ್ಲಿ ನೋಡಿ ಸಂತೋಷ ಪಡುವ ನಿರೀಕ್ಷೆಯಲ್ಲಿದ್ದಾರೆ.

ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ: ಹೆಚ್ ಡಿ ದೇವೇಗೌಡರು ಆಕ್ರೋಶ

ದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ.  ದೇವೇಗೌಡರು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ವಿಳಂಬವಾಗಿರುವ ಬಗ್ಗೆ ಕಿಡಿಕಾರಿದ್ದಾರೆ.

ರಾಜ್ಯಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸದ ಕಾರಣ ರಾಜ್ಯ ಸರ್ಕಾರವೇ ಉತ್ತರದಾಯಿಯಾಗಿದೆ; ಕೇಂದ್ರವನ್ನು ಅನಗತ್ಯವಾಗಿ ದೂರುತ್ತಿದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆಯ ವೆಚ್ಚ ಮೊದಲು 8,000 ಕೋಟಿ ರೂ. ಇದ್ದರೆ, ಈಗ 33,000 ಕೋಟಿ ರೂ. ಮೀರಿದೆ, ಆದರೂ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ನೀರು ತಲುಪಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರ ಹತ್ತಿರ ಅರಸೀಕೆರೆಗೂ ನೀರು ಬಂದಿಲ್ಲ. ಮೇಕೆದಾಟು ಯೋಜನೆ ಕಾರ್ಯಗತಗೊಳ್ಳುವುದಕ್ಕೆ ಕೇಂದ್ರದ ಅರಣ್ಯ, ಪರಿಸರ ನಿಯಮಗಳು, ಆನೆ ಕಾರಿಡಾರ್ ಹಾಗೂ ವನ್ಯಜೀವಿ ಸಂಕಷ್ಟಗಳು ಅಡ್ಡಿಯಾಗಿವೆ.

ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದ ಜನರಿಗೆ ಕೊಳಚೆ ನೀರು ನೀಡಲಾಗುತ್ತಿದೆ, ಬೆಳೆಗಳು ವಿಷಕಾರಿಯಾಗುತ್ತಿವೆ, ಮತ್ತು ಜನರಿಗೆ ಕಷ್ಟಗಳು ಹೆಚ್ಚಾಗುತ್ತಿವೆ ಎಂದು ಹೆಚ್.ಡಿ. ದೇವೇಗೌಡರು ಟೀಕಿಸಿದರು.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ: ವಂದೇ ಭಾರತ್ ರೈಲುಗಳ ನಿಲುಗಡೆ ಸಮಯ ಬದಲಾವಣೆ!

ಬೆಂಗಳೂರು: ನೈರುತ್ಯ ರೈಲ್ವೆ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ನಿಗದಿತ ನಿಲ್ದಾಣಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಹೊಸ ವೇಳಾಪಟ್ಟಿಗಳು ಮಾರ್ಚ್ 15ರಿಂದ ಜಾರಿಗೆ ಬರುತ್ತವೆ.

ಮುಖ್ಯ ಬದಲಾವಣೆಗಳು:

  1. ರೈಲು 20669 (ಹುಬ್ಬಳ್ಳಿ–ಪುಣೆ) – ಬೆಳಗಾವಿ: 07:05–07:10, ಘಟಪ್ರಭಾದ: 07:48–07:50
  2. ರೈಲು 20661 (ಬೆಂಗಳೂರು–ಧಾರವಾಡ) – ದಾವಣಗೆರೆ: 09:30–09:32, ಹಾವೇರಿ: 10:20–10:22, ಹುಬ್ಬಳ್ಳಿ: 11:15–11:20
  3. ರೈಲು 20662 (ಧಾರವಾಡ–ಬೆಂಗಳೂರು) – ಹಾವೇರಿ: 14:48–14:50, ದಾವಣಗೆರೆ: 15:33–15:35, ಯಶವಂತಪುರ: 19:21–19:23
  4. ರೈಲು 26751 (ಬೆಳಗಾವಿ–ಬೆಂಗಳೂರು) – ಹಾವೇರಿ: 08:42–08:44, ದಾವಣಗೆರೆ: 09:28–09:30, ತುಮಕೂರು: 12:15–12:17, ಯಶವಂತಪುರ: 13:23–13:25
  5. ರೈಲು 20704 / 20703 (ಯಶವಂತಪುರ–ಕಾಚಿಗುಡ) – ಹಿಂದೂಪುರ ನಿಲ್ದಾಣ: 12:17–12:19 / 15:55–15:57
  6. ರೈಲು 22231 / 22232 (ಕಲಬುರಗಿ–ಬೆಂಗಳೂರು) – ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ: 11:13–11:15 / 16:45–16:47, ಯಲಹಂಕ: 12:58–13:00 / 15:09–15:11
  7. ರೈಲು 20642 (ಕೊಯಮತ್ತೂರು–ಬೆಂಗಳೂರು) – ಹೊಸೂರು ನಿಲ್ದಾಣ: 12:13–12:15

ಇವುಗಳನ್ನು ಗಮನದಲ್ಲಿ ಇಟ್ಟು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕು.

error: Content is protected !!