Home Blog Page 91

ಮುಂಬೈನಲ್ಲಿ ಷೇರುಪೇಟೆ ತತ್ತರ: ಒಂದೇ ದಿನ 8 ಲಕ್ಷ ಕೋಟಿ ರೂ. ನಷ್ಟ – ಚಿನ್ನದ ಬೆಲೆ ಮತ್ತೆ ಏರಿಕೆ?

0

ಮುಂಬೈ: ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಭಾರತದ ಷೇರುಪೇಟೆ ಇಂದು ಭಾರೀ ಕುಸಿತ ಕಂಡಿದೆ.

ಒಂದೇ ದಿನದಲ್ಲಿ ಹೂಡಿಕೆದಾರರಿಗೆ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಜಾಗತಿಕ ಮಟ್ಟದಲ್ಲಿ ಉಂಟಾದ ಅಸ್ಥಿರತೆಯ ಪರಿಣಾಮವಾಗಿ ದೇಶೀಯ ಷೇರು ಸೂಚ್ಯಂಕಗಳು ತತ್ತರಿಸಿದ್ದು, ಮಾರುಕಟ್ಟೆಗಳಲ್ಲಿ ಆತಂಕದ ವಾತಾವರಣ ಆವರಿಸಿದೆ.

ಇದರ ನಡುವೆ ಸುರಕ್ಷಿತ ಹೂಡಿಕೆಯೆಂದು ಪರಿಗಣಿಸಲ್ಪಡುವ ಚಿನ್ನದ ಬೆಲೆ ಮತ್ತೆ ಏರಿಕೆಯತ್ತ ಸಾಗುತ್ತಿದೆ. ಫೆಬ್ರವರಿ ಆರಂಭದಲ್ಲಿ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ದರ, ಇದೀಗ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಮತ್ತೆ ಏರಿಕೆಯಾಗುವ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಎರಡು ಲಕ್ಷ ರೂಪಾಯಿ ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಲಯ ಅಂದಾಜಿಸಿದೆ.

ಇಂದು ದೇಶದಲ್ಲಿ ಚಿನ್ನದ ದರ?
24 ಕ್ಯಾರಟ್ 1 ಗ್ರಾಂ – 17,051 ರೂ.
24 ಕ್ಯಾರಟ್ 10 ಗ್ರಾಂ – 1,70,510 ರೂ.

22 ಕ್ಯಾರಟ್ 1 ಗ್ರಾಂ – 15, 630 ರೂ.
22 ಕ್ಯಾರಟ್ 10 ಗ್ರಾಂ – 1,56,300 ರೂ.

ಯುದ್ಧ ಭೀತಿ ಹೆಚ್ಚಾದ ಸಂದರ್ಭಗಳಲ್ಲಿ ಹೂಡಿಕೆದಾರರು ಷೇರುಗಳಿಂದ ಹಿಂದೆ ಸರಿದು ಚಿನ್ನದಂತಹ ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ಈಗಾಗಲೇ ಚಿನ್ನದ ಪೂರೈಕೆ ಸೀಮಿತವಾಗಿರುವುದರಿಂದ ಬೇಡಿಕೆ ಹೆಚ್ಚಾದರೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಇದೇ ವೇಳೆ ಸರಕು ವಹಿವಾಟು ಕ್ಷೇತ್ರದಲ್ಲೂ ಚಟುವಟಿಕೆ ಹೆಚ್ಚಾಗಿದ್ದು, ಚಿನ್ನದ ವಹಿವಾಟು ನಡೆಸುವ ಸಂಸ್ಥೆಗಳ ಷೇರುಗಳು ಲಾಭ ಕಂಡಿವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನವಾಗುವವರೆಗೆ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.

ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಧರ್ಮ, ದೇಶದ ಸಂಸ್ಕೃತಿಯನ್ನು ರಕ್ಷಣೆ ಮಾಡಿದ ಅಪ್ಪಟ ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಬಿಜೆಪಿ ಶಿರಹಟ್ಟಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ತಿಳಿಸಿದರು.

ಅವರು ಪಟ್ಟಣದ ಅಖಂಡ ಭಾರತ ಯುವಸೇನೆ ಇವರ ವತಿಯಿಂದ ರವಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಭವ್ಯಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಶಿವಾಜಿ ಮಹಾರಾಜರ ಧೈರ್ಯ ಮತ್ತು ಸ್ಫೂರ್ತಿದಾಯಕ ಕಾರ್ಯಗಳು ಯುವಕರಿಗೆ ಪ್ರೇರಣೆ ಆಗಬೇಕು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶಿವಾಜಿ ಮಹಾರಾಜರ ಭವ್ಯಮೂರ್ತಿ ಶೋಭಾಯಾತ್ರೆ ಪಂಪ ವೃತ್ತದಿಂದ ಪ್ರಾರಂಭಗೊಂಡು, ಬಸ್ತಿಕೇರಿ ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಪಾದಗಟ್ಟಿ, ಪುರಸಭೆ, ಸರ್ಕಾರಿ ಆಸ್ಪತ್ರೆ, ಹಳೆ ಬಸ್‌ಸ್ಟಾಂಡ್ ಮುಂಭಾಗದಿಂದ ಪರ್ವತ ಮಲ್ಲಯ್ಯನ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಅಮರೀಶ ಗಾಂಜಿ, ಶ್ರೇಯಾಂಕ ಹಿರೇಮಠ, ಪ್ರತಾಪ ಅಂಕಲಿ, ಎಂ.ಆರ್. ಪಾಟೀಲ, ಗಂಗಾಧರ ಮೆಣಸಿನಕಾಯಿ, ವಿವೇಕ ಕದಂ, ಚಂದ್ರಗೌಳಿ, ಶಕ್ತಿ ಕತ್ತಿ, ಈಶ್ವರ ಗದಗ, ಶಂಕರ ಶಳಕೆ, ಶರಣಬಸಪ್ಪ ಗಾಂಜಿ, ಪ್ರವೀಣ ದಶಮನಿ, ಚಂದ್ರು ಬಾರ್ಕಿ, ನವೀನ ಗಾಯಕವಾಡ, ಪ್ರಕಾಶ ಗುತ್ತಲ, ನವೀನ ಗುರಿಕಾರ, ಶಿವು ಆರೇರ, ಖಂಡಪ್ಪ ಅಣ್ಣಿಗೇರಿ, ಮಂಜುನಾಥ ಗಾಂಜಿ, ಆಕಾಶ ಸೌದತ್ತಿ, ಗೋವಿಂದ ಗೋಸಾವಿ ಸೇರಿದಂತೆ ನೂರಾರು ಯುವಕರು, ಹಿರಿಯರು ಇದ್ದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೋಣ ಕ್ಷೇತ್ರಾದ್ಯಂತ ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮದಲ್ಲಿ 2024-25ನೇ ಸಾಲಿನ ಮಳೆ ಪರಿಹಾರ ಯೋಜನೆಯಡಿ ಶಿರೂರ ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಶಿರೂರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ, ಪೇಠಾಲೂರ ಗ್ರಾಮದಲ್ಲಿ ಹಾಲಪ್ಪ ಕರಿಗಾರ ಮನೆಯಿಂದ ಸೋಮಣ್ಯ ಕರಳ್ಳಿ ಅವರ ಮನೆಯವರೆಗೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ, 16 ಲಕ್ಷ ವೆಚ್ಚದಲ್ಲಿ ನವೀಕೃತಗೊಂಡ ಪೇಠಾಲೂರ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮದ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸೂಕ್ತ ವಾತಾವರಣ ನಿರ್ಮಾಣಕ್ಕಾಗಿ ಸರ್ಕಾರಿ ಶಾಲೆಗಳ ನವೀಕರಣ, ಸ್ಮಾರ್ಟ್ ತರಗತಿ ಕೊಠಡಿಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದರ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು.

ಈಗಾಗಲೇ ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಕಾಸ್ತು ಪೋಡಿ, ಪೌತಿ ಖಾತೆ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ರೈತರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸಿ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಪೇಠಾಲೂರ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯ ನವೀಕರಣದಿಂದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸಿಗಲಿದೆ. ತಾಲೂಕಿನ ಎಲ್ಲಾ ಶಾಲೆಗಳ ದುರಸ್ತಿ ಮತ್ತು ನೂತನ ಶಾಲಾ ಕೊಠಡಿಗಳ ನಿರ್ಮಾಣ ಸರ್ಕಾರ ಮತ್ತು ಈ ಭಾಗದ ಶಾಸಕರಾದ ಜಿ.ಎಸ್. ಪಾಟೀಲರು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡ ವೀರಯ್ಯ ಸೋಮನಕಟ್ಟಿಮಠ, ಇಒ ವಿಶ್ವನಾಥ ಹೊಸಮನಿ, ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಮುಖಂಡರಾದ ಅಬ್ದುಲ ಕಲಕೇರಿ, ಹಾಲಪ್ಪ ಕಬ್ಬೇರಳ್ಳಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಅಶೋಕ ಕಬ್ಬೇರಳ್ಳಿ, ಯಲ್ಲಪ್ಪ ಕರಮುಡಿ, ಭೀಮರಡ್ಡಿ ಪಾಟೀಲ, ಹೇಮಣ್ಣ ಪೂಜಾರ, ರವಿ ದೊಡ್ಡಮನಿ, ಪುಲಕೇಶಗೌಡ, ಭುವನೇಶ್ವರಿ ಕಲ್ಲಕುಟಿಗರ, ಶರಣಪ್ಪ ಶಿರುಂದ, ಬಸವರಡ್ಡಿ ಬಂಡಿಹಾಳ, ಬಶೀರ ಹಾರೂಗೇರಿ, ಬಸುರಾಜ ಶಿರೋಳ, ಹನಮಂತಪ್ಪ ಹೊಸಮನಿ, ಶಿಕ್ಷಕ ವಿಶ್ವನಾಥ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ಪಾಲಾಕ್ಷಿಗೌಡ ಪಾಟೀಲ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಪಿಡಬ್ಲುಡಿ ಅಧಿಕಾರಿ ನಾಗೇಂದ್ರ ಪಟ್ಟಣಶೆಟ್ಟರ, ಪಿಡಿಒಗಳು, ಎಸ್.ಡಿ.ಎಮ್.ಸಿ ಸದಸ್ಯರು, ಗ್ರಾಮಸ್ಥರು ಇದ್ದರು. ಎಮ್.ಎಮ್. ಬಂಡಿ ನಿರೂಪಿಸಿ ವಂದಿಸಿದರು.

ಎಲ್ಲಾ ದಾಖಲೆಗಳನ್ನು ಆನ್‌ಲೈನ್ ಮೂಲಕ ಒಂದೇ ಕಡೆ ಅಥವಾ ಒಂದೇ ಕಚೇರಿಯಲ್ಲಿ ಲಭ್ಯವಾಗುವ ರೀತಿಯಲ್ಲಿ ಹಲವು ಸುಧಾರಣೆಗಳನ್ನು ಇಲಾಖೆ ಈಗಾಗಲೇ ಕೈಗೊಂಡಿದೆ. ಬರುವ ಆಯವ್ಯಯದ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ, ಇಸಿಎಂಆರ್ ಹಾಗೂ ಆಕಾರ್‌ಬಂದ್ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಪಡೆಯುವ ಏಕ ವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.

ರೇಣುಕಾಚಾರ್ಯರ ತತ್ವಗಳು ಜಗತ್ತಿಗೆ ದಾರಿದೀಪವಾಗಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಜಗದ್ಗುರು ರೇಣುಕಾಚಾರ್ಯರ ಸಂದೇಶವು ಇಂದಿನ ಅಶಾಂತಿಯ ಜಗತ್ತಿಗೆ ಅತ್ಯಂತ ಅವಶ್ಯಕವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಹೇಳಿದರು.

ನಗರದ ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ರೇಣುಕಾಚಾರ್ಯರು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಸಕಲ ಜೀವಾತ್ಮರಿಗೂ ಲೇಸನ್ನು ಬಯಸುವ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ್ದಾರೆ. ದಯೆ, ಕರುಣೆ, ಅಹಿಂಸೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಸರ್ಕಾರಿ ಜಯಂತಿಗಳು ಕೇವಲ ಅಧಿಕಾರಿಗಳ ಕಾರ್ಯಕ್ರಮವಾಗದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅರ್ಥಪೂರ್ಣವಾಗಬೇಕು. ಜಿಲ್ಲಾ ರಂಗಮಂದಿರವು ಇಂತಹ ಸಾಂಸ್ಕೃತಿಕ ಮತ್ತು ವೈಚಾರಿಕ ಕಾರ್ಯಕ್ರಮಗಳಿಂದ ಸದಾ ತುಂಬಿರಲಿ ಎಂದು ಆಶಿಸಿದರು.

ಇಂದಿನ ದಿನಗಳಲ್ಲಿ ಶ್ರೀಮಂತ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧ ಮತ್ತು ಹಿಂಸೆಯ ವಾತಾವರಣವು ಆತಂಕಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಶಾಂತಿ ಮಂತ್ರ ಮತ್ತು ರೇಣುಕಾಚಾರ್ಯರ ತತ್ವಗಳು ಜಗತ್ತಿಗೆ ದಾರಿದೀಪವಾಗಲಿ ಎಂದು ಸಚಿವರು ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಶ್ರೀನಿವಾಸ್ ಮೂರ್ತಿ, ಎಸ್.ಎನ್. ಬಳ್ಳಾರಿ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ಅಕ್ಷತಾ ಹಿರೇಮಠ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಉಪನ್ಯಾಸಕರಾದ ಡಾ. ಜಯಶ್ರೀ ಮಲ್ಲಿಕಾರ್ಜುನ್ ಹೊಸಮನಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ‘ಶಿವಾದ್ವೈತ ಸಿದ್ಧಾಂತ’ವು ‘ಸಿದ್ಧಾಂತ ಶಿಖಾಮಣಿ’ ಗ್ರಂಥದ ಮೂಲಕ ನಮಗೆ ಲಭ್ಯವಾಗಿದೆ. ಈ ಗ್ರಂಥವು ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳ ಮೂಲಕ ಮನುಷ್ಯನು ಹೇಗೆ ಮುಕ್ತಿಯನ್ನು ಪಡೆಯಬಹುದು ಎಂಬುದನ್ನು ಹಂತ-ಹಂತವಾಗಿ ವಿವರಿಸುತ್ತದೆ. ಮನುಷ್ಯ ಜನ್ಮವು ಅತ್ಯಂತ ದುರ್ಲಭವಾದುದು. ರೇಣುಕಾಚಾರ್ಯರು ಅಂದಿನ ಕಾಲದಲ್ಲೇ ಮಹಿಳೆಯರಿಗೆ ಸಮಾನ ಗೌರವ ನೀಡಿದ್ದರು. ಲಿಂಗಧಾರಣೆ ಮಾಡಿದವರೆಲ್ಲರೂ ಸಮಾನರು ಎಂಬ ತತ್ವದ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯನ್ನು ಮಾಡಿದ್ದರು ಎಂದು ಉಪನ್ಯಾಸ ನೀಡಿದರು.

ಭಾರತ ಮಹಾತ್ಮರ ಪರಂಪರೆ ಹೊಂದಿರುವ ರಾಷ್ಟ್ರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಆಧ್ಯಾತ್ಮಿಕ ತಳಹದಿಯನ್ನು ಹೊಂದಿರುವ ಭಾರತ ಶರಣರು, ಸಂತರು, ಮಹಾತ್ಮರ ಪರಂಪರೆ ಹೊಂದಿರುವ ಸೌಹಾರ್ದಯುತ ರಾಷ್ಟ್ರವಾಗಿದೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ನರೇಗಲ್ಲ ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಸರ್ವಧರ್ಮ ಸಮನ್ವಯಾವತಾರಿಗಳಾಗಿ ಧರ್ಮ ಸಹಿಷ್ಣುತೆಗಾಗಿ ಈ ಜಗತ್ತಿಗೆ ಅವತರಿಸಿ ಬಂದು ಎಲ್ಲರನ್ನೂ ಪ್ರೀತಿಸಿ, ಗೌರವಿಸುವ ಗುಣ ಹೊಂದಿರುವ ಈ ಧರ್ಮದ ಸ್ಥಾಪನೆಯ ಮೂಲಕ ಅವರು ಧರ್ಮಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು. ಆದ್ದರಿಂದ ಶ್ರೀ ರೇಣುಕರು ಎಂದಿಗೂ ಜಗದ್ವಂದ್ಯರು. ಶ್ರೀ ರೇಣುಕರು ತೋರಿದ ಲೀಲೆಗಳು ಅಪಾರ. ಅವುಗಳನ್ನು ಅರಿಯಬೇಕೆಂದರೆ ಚರಿತ್ರೆಯನ್ನು ಓದಬೇಕು. ಅವರ ಅವತಾರದಿಂದ ಈ ಭೂಮಿ ಪಾವನವಾಯಿತು. ಶ್ರೀ ಜಗದ್ಗುರು ರೇವಣಶಿದ್ದರಾಗಿ ಅವತರಿಸಿದ ರೇಣುಕಾಚಾರ್ಯರು ವೀರಶೈವ ಧರ್ಮದ ಯುಗ ಪ್ರವರ್ತಕರಾಗಿ ಈ ನಾಡಿನ ಜನರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಿದರು. ಅಗಸ್ತ್ಯ ಮುನಿಗೆ ಶಕ್ತಿ ವಿಶಿಷ್ಠಾದ್ವೈತ ಸಿದ್ಧಾಂತವನ್ನು ಬೋಧಿಸಿದರು. ಇದನ್ನೇ ನಾವಿಂದು ಸಿದ್ಧಾಂತ ಶಿಖಾಮಣಿಯೆಂದು ಅಧ್ಯಯನ ಮಾಡುತ್ತೇವೆ. ಈ ಗ್ರಂಥದಲ್ಲಿ ಜೀವನಕ್ಕೆ ಬೇಕಾದ ಅನೇಕ ಮೌಲ್ಯಗಳಿವೆ ಎಂದರು.

ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿಬಾಯಿ ಧನ್ನೂರ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಈಶ್ವರ ಬೆಟಗೇರಿ, ಡಾ. ಆರ್.ಕೆ. ಗಚ್ಚಿನಮಠ, ಶಿವಾನಂದ ಹಿರೇಮಠ, ನಿವೃತ್ತ ಶಿಕ್ಷಕಿ ರತ್ನಮ್ಮ ಧಡೆಸೂರಮಠ, ಮುಖೋಪಾಧ್ಯಾಯೆ ನಿರ್ಮಲಾ ಹಿರೇಮಠ, ಎ.ಎಮ್. ಬೆಟಗೇರಿ, ಪ್ರಶಾಂತ ಹಿರೇಮಠ, ಮೈತ್ರಾ ನಂದಿ, ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ರೇಣುಕಮಠ ಸ್ವಾಗತಿಸಿದರು. ಎ.ಎಂ. ಆದಿ ನಿರೂಪಿಸಿದರು. ರೇಣುಕಾ ರಾಮಣ್ಣವರ ವಂದಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಸ್ವಚ್ಛತೆ ಜಾಗೃತಿಗೆ ಮೂವರು ರಾಯಭಾರಿಗಳ ನೇಮಕ!

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸ್ವಚ್ಛತೆ, ಕಸ ವಿಂಗಡಣೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂವರು ರಾಯಭಾರಿಗಳನ್ನು ನೇಮಕ ಮಾಡಿದೆ.

ಸ್ವಚ್ಛ ಸರ್ವೇಕ್ಷಣ ಅಭಿಯಾನದ ಅಂಗವಾಗಿ ನಾಗರಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ರಾಯಭಾರಿಗಳಾಗಿ ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮಾರ್ಚ್ 9ರಂದು ಟೌನ್‌ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಪ್ರತಿದಿನ ಸರಾಸರಿ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ ಸುಮಾರು 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು 1,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳ ಪರಿಣಾಮವಾಗಿ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆಯ ಪ್ರಮಾಣ ಹೆಚ್ಚಾಗಿದ್ದು, ಲ್ಯಾಂಡ್‌ಫಿಲ್‌ಗೆ ಸಾಗುವ ಕಸದ ಪ್ರಮಾಣದಲ್ಲಿ ಕ್ರಮೇಣ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದರು.

ಇನ್ನೂ ಜಿಬಿಎ ವ್ಯಾಪ್ತಿಯಲ್ಲಿ ರಸ್ತೆಬದಿ ಕಸ ಬಿಸಾಡುವವರು ಹಾಗೂ ಕಸ ವಿಂಗಡಿಸದೆ ನೀಡುವವರಿಂದ ಪ್ರತಿ ತಿಂಗಳು ಸರಾಸರಿ ರೂ.60 ಲಕ್ಷ ದಂಡ ಸಂಗ್ರಹಿಸಲಾಗುತ್ತಿದೆ. ಈ ಹಣದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಟ್ರ್ಯಾಕ್ಟರ್ ಖರೀದಿಸಲಾಗಿದ್ದು, ಅವುಗಳ ಮೂಲಕ ಬಲ್ಕ್ ವೇಸ್ಟ್ ತೆರವುಗೊಳಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ 6,000 ಮೆಟ್ರಿಕ್ ಟನ್‌ಗಿಂತ ಹೆಚ್ಚು ಬಲ್ಕ್ ವೇಸ್ಟ್ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಳ ಹೋಬಳಿಯ ಗುಂಡಲಹಳ್ಳಿ ಗ್ರಾಮ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಸರ್ಕಾರಿ ಜಾಗ ಸೇರಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗಾಗಿ ಎರಡೂ ಕಡೆ 100 ಎಕರೆಗೂ ಅಧಿಕ ಜಾಗ ಗುರುತಿಸಲಾಗಿದೆ. ಭೂ ಪರಿಹಾರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಕಂಡುಬಂದಲ್ಲಿ ಸಹಾಯ 2.0 ತಂತ್ರಾಂಶ, ಜಿಬಿಎ ಸಹಾಯವಾಣಿ 1533 ಅಥವಾ ವಾಟ್ಸಪ್ ಚಾಟ್‌ಬಾಟ್ ಸಂಖ್ಯೆ 9448197197 ಮೂಲಕ ದೂರು ಸಲ್ಲಿಸಬಹುದಾಗಿದೆ. ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ತ್ವರಿತವಾಗಿ ಪರಿಹರಿಸಲಾಗುತ್ತದೆ ಎಂದು ತಿಳಿಸಿದರು.

ಮಂಗಳೂರು: ನಗರದಲ್ಲಿ ಚಿರತೆ ಕಾಟ, ರಾತ್ರಿ ವೇಳೆ ನಗರವಾಸಿಗಳಿಗೆ ಭೀತಿ!

ಮಂಗಳೂರು: ನಗರದ ಕೆಲ ಭಾಗಗಳಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಚಿರತೆ ನಗರ ಪ್ರದೇಶಕ್ಕೆ ನುಗ್ಗುತ್ತಿದ್ದು, ಜನರಲ್ಲಿ ಭಯಭೀತಿಯನ್ನು ಉಂಟುಮಾಡಿದೆ.

ಮಂಗಳೂರಿನ ಕದ್ರಿ, ಕೈಬಟ್ಟಲ್, ಶಕ್ತಿನಗರ ಮತ್ತು ಮರೋಳಿ ಭಾಗಗಳಲ್ಲಿ ತೀವ್ರ ಚಿರತೆ ಚಲನವಲನ ಕಂಡು ಬಂದಿದೆ. ಕೆಲ ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆ ಓಡಾಟ ಸೆರೆಯಾಗಿದೆ, ಮತ್ತು ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಗರವಾಸಿಗಳು ರಾತ್ರಿ ವೇಳೆ ಹೊರಬಾರದ ಪರಿಸ್ಥಿತಿಯಲ್ಲಿದ್ದಾರೆ, ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಮತ್ತು ಧಾರ್ಮಿಕ ಉತ್ಸವಗಳಿಗೆ ಹೋಗುವವರು ಆತಂಕದಲ್ಲಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಕದ್ರಿ ಮತ್ತು ಮರೋಳಿ ಭಾಗಗಳಲ್ಲಿ ಅರಣ್ಯ ಇಲಾಖೆ ಬೋನು ಆರಂಭಿಸಿದೆ. ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸಲು ಮತ್ತು ಚಿರತೆ ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ.

 

ನಾಳೆ ಖಗ್ರಾಸ್ ಚಂದ್ರಗ್ರಹಣ: ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ಇರುತ್ತಾ?

ರಾಯಚೂರು: ನಾಳೆ ನಡೆಯಲಿರುವ ಖಗ್ರಾಸ್ ಚಂದ್ರಗ್ರಹಣದ ಸಂದರ್ಭದಲ್ಲಿ ಹೆಚ್ಚಿನ ದೇವಸ್ಥಾನಗಳ ಬಾಗಿಲು ಬ್ಲಾಕ್ ಆಗಲಿದೆ ಮತ್ತು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರದು.

ಆದರೆ ಮಂತ್ರಾಲಯದ ರಾಯರ ಮಠದಲ್ಲಿ ಎಂದಿನಂತೆ ಗ್ರಹಣದ ವೇಳೆ ಭಕ್ತರಿಗೆ ರಾಯರ ದರ್ಶನಕ್ಕೆ ಮುಕ್ತ ಅವಕಾಶ ಲಭ್ಯವಿದ್ದು, ಯಾವುದೇ ವಿಶೇಷ ಪೂಜೆಗಳು, ಸೇವೆಗಳು ಅಥವಾ ಅಲಂಕಾರಗಳು ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ನಡೆಯಲಿದೆ. ಮಠದ ನಿಗದಿತ ಸಮಯದಂತೆ ಭಕ್ತರಿಗೆ ದರ್ಶನ ಹಾಗೂ ತೀರ್ಥ ಪ್ರಸಾದ ದೊರೆಯುತ್ತದೆ.

ಮಂತ್ರಾಲಯ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ಯ ತಿಳಿಸಿದ್ದಾರೆ, ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಗ್ರಹಣ ಸಮಯದಲ್ಲಿ ಬಾಗಿಲು ಹಾಕುವ ಪದ್ಧತಿ ಇದ್ದರೂ, ರಾಯರ ಮಠದಲ್ಲಿ ಬಾಗಿಲು ಹಾಕುವ ಪದ್ಧತಿ ಇಲ್ಲ. ಭಕ್ತರು ಎಂದಿನಂತೆ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಬಹುದು.

ಗ್ರಸ್ತೋದಯ ಚಂದ್ರಗ್ರಹಣ ಎಂದರೆ ಚಂದ್ರೋದಯದ ಸಮಯದಲ್ಲಿ ಗ್ರಹಣ ಆರಂಭವಾಗುವುದು. ಈ ಬಾರಿ ಚಂದ್ರೋದಯ ಸಮಯವು ಬೆಳಿಗ್ಗೆ 6:26 ಆಗಿದ್ದು, 6:26 ರಿಂದ 6:47 ರವರೆಗೆ ಗ್ರಹಣದ ಅವಧಿಯು 21 ನಿಮಿಷಗಳ ಕಾಲ ಮುಂದುವರಿಯುತ್ತದೆ. ಈ ಸಮಯದಲ್ಲಿ ಭಕ್ತರು ಗ್ರಹಣವನ್ನು ನೇರವಾಗಿ ಅನುಭವಿಸಬಹುದು. ನಾಳೆ ಗ್ರಹಣದ ವೇಳೆ ಮಠದಲ್ಲಿ ವಿಶೇಷ ಹೋಮ-ಹವನಗಳು ನಡೆಯುತ್ತವೆ, ಭಕ್ತರು ಮುಕ್ತವಾಗಿ ಭಾಗವಹಿಸಬಹುದು. ಗ್ರಹಣದ ನಂತರ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿ ರಾಯರ ದರ್ಶನ ಪಡೆಯುವ ಪರಂಪರೆಯು ಇರುತ್ತದೆ.

 

ನಿಂಬೆ ನೀರು ಕುಡಿಯುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳು!

0

ನಿಂಬೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು, ಆಂಟಿ-ಆಕ್ಸಿಡೆಂಟ್ ಗುಣಗಳೂ ಇವೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂಬೆ ನೀರಿನ ಅನೇಕ ಪ್ರಯೋಜನಗಳನ್ನು ಹೇಳಲಾಗುತ್ತಿದ್ದು, ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿನ ವಿಷಪದಾರ್ಥಗಳು ಹೊರಹೋಗುತ್ತವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದು ಎಷ್ಟು ಸತ್ಯ, ನಿಂಬೆ ನೀರು ನಿಜವಾಗಿಯೂ ಡಿಟಾಕ್ಸ್ ಮಾಡುವುದೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ದೆಹಲಿ ಮೂಲದ ಆಯುರ್ವೇದ ತಜ್ಞೆ ಡಾ. ಚಂಚಲ್ ಶರ್ಮಾ ಹೇಳುವ ಪ್ರಕಾರ, ನಿಂಬೆ ನೀರಿನ ಪ್ರಯೋಜನ ಎಲ್ಲರಿಗೂ ಸಮಾನವಾಗುವುದಿಲ್ಲ. ಪ್ರತಿಯೊಬ್ಬರ ದೇಹದ ಸ್ವಭಾವ, ಕಿಡ್ನಿ, ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಗಳ ಕಾರ್ಯಕ್ಷಮತೆ ವಿಭಿನ್ನವಾಗಿರುತ್ತದೆ. ಈ ಅಂಗಗಳು ಸ್ವಾಭಾವಿಕವಾಗಿ ದೇಹದ ಕಸದ ಪದಾರ್ಥಗಳನ್ನು ಹೊರಹಾಕುತ್ತವೆ. ನಿಂಬೆ ನೀರು ಈ ಪ್ರಕ್ರಿಯೆಗೆ ಸಹಾಯ ಮಾಡಬಹುದು, ಆದರೆ ದೇಹ ಸಂಪೂರ್ಣವಾಗಿ ಡಿಟಾಕ್ಸ್ ಆಗುತ್ತದೆ ಎಂಬುದಾಗಿ ಹೇಳುವುದು ಸರಿಯಲ್ಲ.

ನಿಂಬೆ ನೀರು ಕುಡಿಯುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳು:

  • ಜೀರ್ಣಕ್ರಿಯೆ ಸುಧಾರಣೆ: ನಿಂಬೆ ವಿಟಮಿನ್ ಸಿಯ ಪ್ರಾಕೃತಿಕ ಮೂಲವಾಗಿದೆ. ಇದರ ಆಂಟಿ-ಆಕ್ಸಿಡೆಂಟ್ ಗುಣಗಳು ಜೀರ್ಣಕ ಎನ್ಜೈಮ್‌ಗಳನ್ನು ಚುರುಕುಗೊಳಿಸಿ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತವೆ.
  • ಯಕೃತ್ತಿಗೆ ಒಳ್ಳೆಯದು: ನಿಂಬೆ ನೀರು ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹದ ವಿಷಪದಾರ್ಥಗಳನ್ನು ಹೊರಹಾಕಲು ನೆರವಾಗುತ್ತದೆ.
  • ತೂಕ ನಿಯಂತ್ರಣ: ತೂಕ ಕಡಿಮೆ ಮಾಡಲು ಪ್ರಯತ್ನಿಸುವವರು ನಿಯಮಿತವಾಗಿ ಕುಡಿಯಬಹುದು. ಇದು ಮೆಟಾಬಾಲಿಸಂ ಚುರುಕುಗೊಳಿಸಲು ಸಹಾಯ ಮಾಡುತ್ತದೆ.

ಪ್ರತಿದಿನ ಕುಡಿಯಬೇಕೇ?
ನಿಂಬೆ ನೀರಿನ ಲಾಭಗಳಿದ್ದರೂ, ಪ್ರತಿದಿನ ಕುಡಿಯಬೇಕೆಂಬ ಅಗತ್ಯವಿಲ್ಲ. ವಾರದಲ್ಲಿ ನಾಲ್ಕು–ಐದು ದಿನ ಕುಡಿಯುವುದೇ ಸಾಕು ಎಂದು ತಜ್ಞರು ಸೂಚಿಸಿದ್ದಾರೆ. ಹಳ್ಳು ನೋವು, ಆಮ್ಲತ್ವ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಸೇವಿಸಲು ತೊಡಗಬಾರದು. ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆ ಉರಿ ಉಂಟಾಗಬಹುದು. ಜೊತೆಗೆ, ನಿಂಬೆ ನೀರಿನಲ್ಲಿ ಹೆಚ್ಚು ಸಕ್ಕರೆ ಅಥವಾ ಉಪ್ಪು ಹಾಕಬಾರದು. ಒಟ್ಟಾರೆ, ನಿಂಬೆ ನೀರು ಆರೋಗ್ಯಕ್ಕೆ ಸಹಾಯಕ ಪಾನೀಯವಾಗಿದ್ದು, ದೇಹವನ್ನು ಸಂಪೂರ್ಣವಾಗಿ ಡಿಟಾಕ್ಸ್ ಮಾಡುತ್ತದೆ ಎಂಬ ಹೇಳಿಕೆ ವೈಜ್ಞಾನಿಕ ದೃಢತೆ ಹೊಂದಿಲ್ಲ.

ಗ್ಯಾಸ್‌ ಸಿಲಿಂಡರ್‌ ಎಷ್ಟು ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!

0

ಈಗ ಅಂತಾರಾಷ್ಟ್ರೀಯ ಮನೆಯಲ್ಲಿಯೂ ಗ್ಯಾಸ್‌ ಒಲೆ ಬಳಸಿ ಅಡುಗೆ ಮಾಡುವವರು ಹೆಚ್ಚು. ಗ್ಯಾಸ್‌ ಸಿಲಿಂಡರ್ ಅಡುಗೆ ಮನೆಯ ಅತ್ಯಗತ್ಯ ವಸ್ತುವಾಗಿದ್ದು, ಅದರಲ್ಲಿನ ಗ್ಯಾಸಿನ ಪ್ರಮಾಣವನ್ನು ತಿಳಿಯುವುದು ಎಲ್ಲರಿಗೂ ಸಮಸ್ಯೆಯಾಗುತ್ತದೆ.

ಗ್ಯಾಸು ಸಂಪೂರ್ಣವಾಗಿ ಮುಗಿಯುವ ಮೊದಲು ಎಷ್ಟು ಅನಿಲ ಉಳಿದಿದೆ ಎನ್ನುವುದನ್ನು ಊಹಿಸಲು ಹಲವರಿಗೆ ಕಷ್ಟವಾಗುತ್ತದೆ. ಕೆಲವೊಮ್ಮೆ, ಅರ್ಜೆಂಟ್‌ ಅಡುಗೆ ಮಾಡುವ ಸಂದರ್ಭದಲ್ಲಿ ಅರ್ಧದಲ್ಲಿಯೇ ಎಲ್.ಪಿ.ಜಿ ಗ್ಯಾಸ್‌ ಸಿಲಿಂಡರ್‌ ಖಾಲಿಯಾಗಿ ಹಲವರು ಫಜೀತಿಗೆ ಸಿಲುಕುತ್ತಿರುತ್ತಾರೆ.

ಇಂತಹ ತೊಂದರೆಯನ್ನು ತಪ್ಪಿಸಲು ಕೆಲವು ಸುಲಭ ಟ್ರಿಕ್ಸ್‌ ಬಳಸಿ, ನಿಮ್ಮ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸು ಉಳಿದಿದೆ ಎಂಬುದನ್ನು ನಿಮಿಷಗಳಲ್ಲಿ ತಿಳಿಯಬಹುದು.

ಸರಳ ವಿಧಾನಗಳು ಹೀಗಿವೆ:

  1. ಬಟ್ಟೆ ಮತ್ತು ನೀರಿನ ವಿಧಾನ:
    • ಮೊದಲಿಗೆ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಚುರುಕಾಗಿ ತೆಗೆಯಿರಿ.
    • ಈ ಒದ್ದೆಯಾದ ಬಟ್ಟೆಯಿಂದ ಸಿಲಿಂಡರ್‌ ಮೆಟ್ಟಲಿನ ಮೇಲೆ ಚೆನ್ನಾಗಿ ಹಚ್ಚಿ.
    • ಎರಡು ನಿಮಿಷ ಕಾಯಿರಿ.
    • ಸಿಲಿಂಡರ್‌ನಿಂದ ಬಟ್ಟೆ ಎಷ್ಟು ಭಾಗ ಒಣಗುತ್ತದೆಯೋ ಅಷ್ಟು ಗ್ಯಾಸು ಮುಗಿಯುತ್ತಿದೆ ಎಂದರ್ಥ.
    • ಬಟ್ಟೆ ಸಂಪೂರ್ಣ ಒಣಗಿದ್ದರೆ, ಯಾವುದೇ ಗ್ಯಾಸು ಉಳಿದಿಲ್ಲ ಎಂಬುದಾಗಿದೆ.
  2. ನೀರಿನ ಪ್ರತ್ಯಯ ವಿಧಾನ:
    • ಒಂದು ಗ್ಲಾಸ್ ಅಥವಾ ಕಪ್‌ನ್ನು ನೀರಿನಿಂದ ತುಂಬಿ ಸಿಲಿಂಡರ್ ಮೇಲೆ ಮೇಲಿನಿಂದ ಕೆಳಕ್ಕೆ ನಿಧಾನವಾಗಿ ಸುರಿಯಿರಿ.
    • ಕೈಯಿಂದ ಸಿಲಿಂಡರ್ ಸ್ಪರ್ಶಿಸಿ ನೋಡಿ.
    • ತಂಪಾಗಿರುವ ಸ್ಥಳದಲ್ಲಿ ಗ್ಯಾಸು ಉಳಿದಿದೆ, ಬಿಸಿ ಅಥವಾ ಒಣ ಭಾಗದಲ್ಲಿ ಗ್ಯಾಸು ಮುಗಿದಿದೆ ಎಂಬುದನ್ನು ಅಂದಾಜಿಸಬಹುದು.
  3. ತೂಕ ಮಾಪನ ವಿಧಾನ:
    • ಸಿಲಿಂಡರ್‌ನ ಒಟ್ಟು ತೂಕ ಮತ್ತು ಖಾಲಿ ತೂಕವನ್ನು ಗಮನಿಸಿ.
    • ಒಟ್ಟು ತೂಕದಿಂದ ಖಾಲಿ ತೂಕವನ್ನು ಕಳೆಯುವ ಮೂಲಕ ಎಷ್ಟು ಗ್ಯಾಸು ಉಳಿದಿದೆ ಎಂದು ತಿಳಿಯಬಹುದು.
    • ಉದಾಹರಣೆಗೆ, ಒಟ್ಟು ತೂಕ 28.5 ಕೆಜಿ ಮತ್ತು ಖಾಲಿ ತೂಕ 15.5 ಕೆಜಿ ಆಗಿದ್ದರೆ, ಸಿಲಿಂಡರ್‌ನಲ್ಲಿ ಸುಮಾರು 13 ಕೆಜಿ ಗ್ಯಾಸು ಉಳಿದಿದೆ ಎಂದು ಅಂದಾಜಿಸಬಹುದು.

ಈ ರೀತಿಯಾಗಿ, ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಅಡುಗೆ ಮಾಡುವಾಗ ಗ್ಯಾಸಿನ ಕೊರತೆ ಅಥವಾ ತಡತಡೆಗಳಿಂದ ತಪ್ಪಿಸಿಕೊಳ್ಳಬಹುದು.

error: Content is protected !!