Home Blog Page 92

ಗ್ಯಾಸ್‌ ಸಿಲಿಂಡರ್‌ ಎಷ್ಟು ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!

0

ಈಗ ಅಂತಾರಾಷ್ಟ್ರೀಯ ಮನೆಯಲ್ಲಿಯೂ ಗ್ಯಾಸ್‌ ಒಲೆ ಬಳಸಿ ಅಡುಗೆ ಮಾಡುವವರು ಹೆಚ್ಚು. ಗ್ಯಾಸ್‌ ಸಿಲಿಂಡರ್ ಅಡುಗೆ ಮನೆಯ ಅತ್ಯಗತ್ಯ ವಸ್ತುವಾಗಿದ್ದು, ಅದರಲ್ಲಿನ ಗ್ಯಾಸಿನ ಪ್ರಮಾಣವನ್ನು ತಿಳಿಯುವುದು ಎಲ್ಲರಿಗೂ ಸಮಸ್ಯೆಯಾಗುತ್ತದೆ.

ಗ್ಯಾಸು ಸಂಪೂರ್ಣವಾಗಿ ಮುಗಿಯುವ ಮೊದಲು ಎಷ್ಟು ಅನಿಲ ಉಳಿದಿದೆ ಎನ್ನುವುದನ್ನು ಊಹಿಸಲು ಹಲವರಿಗೆ ಕಷ್ಟವಾಗುತ್ತದೆ. ಕೆಲವೊಮ್ಮೆ, ಅರ್ಜೆಂಟ್‌ ಅಡುಗೆ ಮಾಡುವ ಸಂದರ್ಭದಲ್ಲಿ ಅರ್ಧದಲ್ಲಿಯೇ ಎಲ್.ಪಿ.ಜಿ ಗ್ಯಾಸ್‌ ಸಿಲಿಂಡರ್‌ ಖಾಲಿಯಾಗಿ ಹಲವರು ಫಜೀತಿಗೆ ಸಿಲುಕುತ್ತಿರುತ್ತಾರೆ.

ಇಂತಹ ತೊಂದರೆಯನ್ನು ತಪ್ಪಿಸಲು ಕೆಲವು ಸುಲಭ ಟ್ರಿಕ್ಸ್‌ ಬಳಸಿ, ನಿಮ್ಮ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸು ಉಳಿದಿದೆ ಎಂಬುದನ್ನು ನಿಮಿಷಗಳಲ್ಲಿ ತಿಳಿಯಬಹುದು.

ಸರಳ ವಿಧಾನಗಳು ಹೀಗಿವೆ:

  1. ಬಟ್ಟೆ ಮತ್ತು ನೀರಿನ ವಿಧಾನ:
    • ಮೊದಲಿಗೆ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಚುರುಕಾಗಿ ತೆಗೆಯಿರಿ.
    • ಈ ಒದ್ದೆಯಾದ ಬಟ್ಟೆಯಿಂದ ಸಿಲಿಂಡರ್‌ ಮೆಟ್ಟಲಿನ ಮೇಲೆ ಚೆನ್ನಾಗಿ ಹಚ್ಚಿ.
    • ಎರಡು ನಿಮಿಷ ಕಾಯಿರಿ.
    • ಸಿಲಿಂಡರ್‌ನಿಂದ ಬಟ್ಟೆ ಎಷ್ಟು ಭಾಗ ಒಣಗುತ್ತದೆಯೋ ಅಷ್ಟು ಗ್ಯಾಸು ಮುಗಿಯುತ್ತಿದೆ ಎಂದರ್ಥ.
    • ಬಟ್ಟೆ ಸಂಪೂರ್ಣ ಒಣಗಿದ್ದರೆ, ಯಾವುದೇ ಗ್ಯಾಸು ಉಳಿದಿಲ್ಲ ಎಂಬುದಾಗಿದೆ.
  2. ನೀರಿನ ಪ್ರತ್ಯಯ ವಿಧಾನ:
    • ಒಂದು ಗ್ಲಾಸ್ ಅಥವಾ ಕಪ್‌ನ್ನು ನೀರಿನಿಂದ ತುಂಬಿ ಸಿಲಿಂಡರ್ ಮೇಲೆ ಮೇಲಿನಿಂದ ಕೆಳಕ್ಕೆ ನಿಧಾನವಾಗಿ ಸುರಿಯಿರಿ.
    • ಕೈಯಿಂದ ಸಿಲಿಂಡರ್ ಸ್ಪರ್ಶಿಸಿ ನೋಡಿ.
    • ತಂಪಾಗಿರುವ ಸ್ಥಳದಲ್ಲಿ ಗ್ಯಾಸು ಉಳಿದಿದೆ, ಬಿಸಿ ಅಥವಾ ಒಣ ಭಾಗದಲ್ಲಿ ಗ್ಯಾಸು ಮುಗಿದಿದೆ ಎಂಬುದನ್ನು ಅಂದಾಜಿಸಬಹುದು.
  3. ತೂಕ ಮಾಪನ ವಿಧಾನ:
    • ಸಿಲಿಂಡರ್‌ನ ಒಟ್ಟು ತೂಕ ಮತ್ತು ಖಾಲಿ ತೂಕವನ್ನು ಗಮನಿಸಿ.
    • ಒಟ್ಟು ತೂಕದಿಂದ ಖಾಲಿ ತೂಕವನ್ನು ಕಳೆಯುವ ಮೂಲಕ ಎಷ್ಟು ಗ್ಯಾಸು ಉಳಿದಿದೆ ಎಂದು ತಿಳಿಯಬಹುದು.
    • ಉದಾಹರಣೆಗೆ, ಒಟ್ಟು ತೂಕ 28.5 ಕೆಜಿ ಮತ್ತು ಖಾಲಿ ತೂಕ 15.5 ಕೆಜಿ ಆಗಿದ್ದರೆ, ಸಿಲಿಂಡರ್‌ನಲ್ಲಿ ಸುಮಾರು 13 ಕೆಜಿ ಗ್ಯಾಸು ಉಳಿದಿದೆ ಎಂದು ಅಂದಾಜಿಸಬಹುದು.

ಈ ರೀತಿಯಾಗಿ, ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಅಡುಗೆ ಮಾಡುವಾಗ ಗ್ಯಾಸಿನ ಕೊರತೆ ಅಥವಾ ತಡತಡೆಗಳಿಂದ ತಪ್ಪಿಸಿಕೊಳ್ಳಬಹುದು.

ಡಿಕೆಶಿ ಸಭೆ ಮೇಲೆ ನಿಗಾ ಇಡಲು ಎಸ್ ಪಿ ನಿಯೋಜನೆ: ಆರ್.ಅಶೋಕ್ ಅರೋಪ

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಕಡೆಯವರ ಸಭೆಗಳ ಮೇಲೆ ನಿಗಾ ಇಡಲು ಸಿಎಂ ಸಿದ್ದರಾಮಯ್ಯ ಒಬ್ಬ ಎಸ್‌ಪಿ ನೇಮಕ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,

ಡಿಕೆಶಿ ಬಣದ ಶಾಸಕರ ಮೇಲೆ ಗುಪ್ತಚರ ನಿಗಾ ವಿಚಾರವಾಗಿ ಪ್ರತಿಕ್ರಿಯಿಸಿ, “ಇದು ಆದೇಶ ಇಲ್ಲದ ಎಸ್‌ಐಟಿ ಮಾಡಿರುವ ಹಾಗೆಯೇ ಇದೆ. ಇದೊಂದು ರೀತಿ ಕಣ್ಣಿಗೆ ಕಾಣದ ಎಸ್‌ಐಟಿ. ಡಿಕೆಶಿ ಕಡೆಯವರು ಎಲ್ಲಿ ಹೋಗುತ್ತಾರೆ, ಏನೇನು ಮಾಡುತ್ತಾರೆ ಎಂದು ಪತ್ತೆ ಮಾಡುವುದೇ ಈ ಕಣ್ಣಿಗೆ ಕಾಣದ ಎಸ್‌ಐಟಿ ಕೆಲಸ” ಎಂದು ಹೇಳಿದರು.

ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್‌ನವರು ಕಾಂಗ್ರೆಸ್‌ನವರಿಗೇ ಬೀದಿಗಿಳಿದು ಧಮ್ಕಿ ಹಾಕುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ಬೆಂಬಲಿಗರು ಬೀದಿಗಿಳಿದು ಕಚ್ಚಾಡುತ್ತಿದ್ದಾರೆ. ಆಡಳಿತ ಕುಸಿದಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ,” ಎಂದು ಟೀಕಿಸಿದರು.

ಬಜೆಟ್ ಅಧಿವೇಶನದಲ್ಲಿ ಆಡಳಿತ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ ಅವರು, “ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಅಭಿವೃದ್ಧಿ ಶೂನ್ಯವಾಗಿದೆ. ಕಸದ ಸಮಸ್ಯೆ, ಇ-ಖಾತಾ, ನೋಂದಣಿ ಸ್ಥಗಿತ, ಆದಾಯ ಕುಸಿತ ಸೇರಿದಂತೆ ಎಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ” ಎಂದರು.

ಸಚಿವ ಎಂ.ಬಿ. ಪಾಟೀಲ್ ಶ್ರೀಮಂತರು ಗ್ಯಾರಂಟಿ ಯೋಜನೆ ಬಿಡಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿ, “ಎಲ್ಲರಿಗೂ ಗ್ಯಾರಂಟಿ ಕೊಡುತ್ತೇವೆ ಎಂದಿದ್ದರು. ಈಗ ಶ್ರೀಮಂತರು ಬಿಟ್ಟುಕೊಡಬೇಕು ಎನ್ನುತ್ತಿದ್ದಾರೆ. ಅಂದರೆ ಜನತೆಗೆ ಕೊಟ್ಟ ಮಾತು ತಪ್ಪುತ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಅದಕ್ಕೇ ಶ್ರೀಮಂತರಿಗೆ ತೆಗೆದುಕೊಳ್ಳಬೇಡಿ ಎನ್ನುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬುಲೆರೋ ಕಾರು-ಎರಡು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

0

ದೊಡ್ಡಬಳ್ಳಾಪುರ: ಬುಲೆರೋ ಕಾರು ಮತ್ತು ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ನಾರಸಿಂಹನಹಳ್ಳಿ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಮದುವೆ ಆಮಂತ್ರಣ ನೀಡಲು ದೇವನಹಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ತಕ್ಷಣವೇ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.

‘ನಾನು ಸುರಕ್ಷಿತ, ಬಳ್ಳಾರಿಯ 35 ಮಂದಿಯನ್ನು ರಾಜ್ಯಕ್ಕೆ ಕರೆತರುವೆ’: ಶಾಸಕ ಭರತ್ ರೆಡ್ಡಿ ಭರವಸೆ

0

ಬಳ್ಳಾರಿ/ದುಬೈ: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದ ಆತಂಕಗೊಂಡಿರುವ ಕನ್ನಡಿಗರಿಗೆ ಶಾಸಕ ಭರತ್ ರೆಡ್ಡಿ ದುಬೈನಿಂದ ಭರವಸೆ ಸಂದೇಶ ರವಾನಿಸಿದ್ದಾರೆ. ಯುದ್ಧಭೂಮಿಯಲ್ಲಿ ಸಿಲುಕಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಅವರು, “ನಾನು ಹಾಗೂ ನನ್ನ ಕುಟುಂಬ ಸಂಪೂರ್ಣ ಸುರಕ್ಷಿತ,” ಎಂದು ಹೇಳಿದ್ದಾರೆ.

ಬಳ್ಳಾರಿಯಿಂದ ದುಬೈಗೆ ಪ್ರವಾಸ ಬಂದಿದ್ದ 35 ಜನರೂ ನಮ್ಮ ಸಂಪರ್ಕದಲ್ಲಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಸ್ಥಳೀಯ ಸಿಬ್ಬಂದಿಯನ್ನು ಅವರೊಂದಿಗೆ ಸಂಯೋಜನೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕರ್ನಾಟಕ ಸರ್ಕಾರವೂ ಚುರುಕುಗೊಂಡಿದ್ದು, ಬಳ್ಳಾರಿಯ ಪ್ರವಾಸಿಗರ ಪಟ್ಟಿಯನ್ನು ರಾಯಭಾರಿಗೆ ಕಳುಹಿಸಿದೆ. ವಿಮಾನ ನಿಲ್ದಾಣ ಸಾರ್ವಜನಿಕರಿಗೆ ಮುಕ್ತವಾದ ತಕ್ಷಣ ಅವರನ್ನು ರಾಜ್ಯಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತದೆ.

ಮಧ್ಯಪ್ರಾಚ್ಯದ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ 109 ಕನ್ನಡಿಗರ ರಕ್ಷಣೆಗೆ ಸಚಿವ ಕೃಷ್ಣಾ ಬೈರೇಗೌಡ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಿಎಂ ಸೂಚನೆಯ ನಂತರ ವಿಪತ್ತು ನಿರ್ವಹಣೆ ವಿಭಾಗ ಕಾರ್ಯಪ್ರವೃತ್ತವಾಗಿದ್ದು, ದೆಹಲಿ ರೆಸಿಡೆಂಟ್ ಕಮೀಷನರ್ ಮುಖಾಂತರ ಸಮನ್ವಯ ನಡೆಯುತ್ತಿದೆ.

ಶನಿವಾರ ರಾತ್ರಿಯಿಂದಲೇ ಸಹಾಯವಾಣಿ ಆರಂಭಿಸಲಾಗಿದೆ. ಇದುವರೆಗೆ 109 ಜನರು ಮಾಹಿತಿ ನೀಡಿದ್ದಾರೆ. ಕದನ ವಿರಾಮವಾಗುವವರೆಗೂ ವಿಮಾನ ಹಾರಾಟ ಸಾಧ್ಯವಿಲ್ಲ. “ಹಾರಾಟ ಮಾಡಿದರೆ ಗಂಡಾಂತರ ಸಂಭವಿಸಬಹುದು,” ಎಂದು ಸಚಿವರು ಎಚ್ಚರಿಸಿದ್ದಾರೆ.

ಕದನ ವಿರಾಮದ ಬಳಿಕ ವಿಶೇಷ ವಿಮಾನ ಕಳುಹಿಸುವ ಸಾಧ್ಯತೆ ಇದೆ. ಸಂಕಷ್ಟದಲ್ಲಿರುವವರು 22253707 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸರ್ಕಾರ ಮನವಿ ಮಾಡಿದೆ.

ಚಂದ್ರಗ್ರಹಣ ಸ್ಪೆಷಲ್ ವೇಳಾಪಟ್ಟಿ: ಓಂಕಾರೇಶ್ವರ ದೇವಾಲಯದಲ್ಲಿ ಗರ್ಭಗುಡಿ ತಾತ್ಕಾಲಿಕ ಮುಚ್ಚಳಿಕೆ

0

ಮಡಿಕೇರಿ: ಹೋಳಿ ಹುಣ್ಣಿಮೆಯ ದಿನ ಸಂಭವಿಸುತ್ತಿರುವ ವರ್ಷದ ಮೊದಲ ಚಂದ್ರಗ್ರಹಣ 2026 ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಗ್ರಹಣದ ಬಳಿಕ ಹಲವು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಬಹುದು ಎಂದು ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಪೂಜಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.

ಮಾರ್ಚ್ 3ರಂದು ಬೆಳಗ್ಗೆ 9 ಗಂಟೆಯೊಳಗೆ ಗ್ರಹಣ ಶುದ್ಧೀಕರಣ ಮತ್ತು ಸಂಪ್ರೋಕ್ಷಣೆ ಪೂರ್ಣಗೊಳ್ಳಲಿದೆ. ನಂತರ ಗರ್ಭಗುಡಿ ಬಾಗಿಲುಗಳನ್ನು ಮುಚ್ಚಿ, ಗ್ರಹಣ ಅವಧಿಯಲ್ಲಿ ಯಾವುದೇ ವಿಧಿ ವಿಧಾನ ನಡೆಯುವುದಿಲ್ಲ.

ಗ್ರಹಣ ಮುಗಿದ ಬಳಿಕ ಸಂಜೆ 7 ಗಂಟೆ ನಂತರ ದೇವಾಲಯದಲ್ಲಿ ವಿಶೇಷ ಆಲಯಾರ್ಚನೆ, ಅಭಿಷೇಕ ಮತ್ತು ಸಂಪ್ರೋಕ್ಷಣೆ ಶಾಂತಿ ಕಾರ್ಯಗಳು ಜರುಗಲಿವೆ. ಧಾರ್ಮಿಕ ಶಿಸ್ತಿನಂತೆ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಿ ನಂತರವೇ ಸಾಮಾನ್ಯ ದರ್ಶನ ವ್ಯವಸ್ಥೆ ಮುಂದುವರಿಸಲಾಗುತ್ತದೆ.

ಮರುದಿನ ಬೆಳಗ್ಗೆ 6 ಗಂಟೆಯಿಂದಲೇ ಶುದ್ಧಿ ಕಾರ್ಯಗಳು ಹಾಗೂ ಶಾಂತಿ ಪೂಜೆಗಳು ಪ್ರಾರಂಭವಾಗಲಿದ್ದು, ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗುತ್ತದೆ. ಗ್ರಹಣದ ಸಂದರ್ಭ ಭಕ್ತರು ಪ್ರಕಟಿತ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಾಲಯ ಆಡಳಿತ ವಿನಂತಿಸಿದೆ.

Israel–Iran War: ನೆತನ್ಯಾಹು ಕಚೇರಿ ಸೇರಿ ಪ್ರಮುಖ ನೆಲೆಗಳ ಮೇಲೆ ಕ್ಷಿಪಣಿ ದಾಳಿ!

0

ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಗಂಭೀರಗೊಂಡಿದ್ದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಂದು ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ಪ್ರಧಾನಿ ಕಚೇರಿಗೆ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ, ಪ್ರತೀಕಾರವಾಗಿ ಇಸ್ರೇಲ್ ಹಾಗೂ ಇತರೆ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಇರಾನ್ ದಾಳಿಯನ್ನು ತೀವ್ರಗೊಳಿಸಿದೆ ಎಂದು ಹೇಳಲಾಗಿದೆ.

ಇರಾನ್ ನೀಡಿದ ಮಾಹಿತಿಯಂತೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ, ಹೈಫಾ ನಗರದಲ್ಲಿನ ಭದ್ರತಾ ಮತ್ತು ಸೈನಿಕ ಕೇಂದ್ರಗಳು ಹಾಗೂ ಪೂರ್ವ ಜೆರುಸಲೆಮ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

‘ಜಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನಿಯ ಕಚೇರಿ ಹಾಗೂ ವಾಯುಪಡೆಯ ಕಮಾಂಡರ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಲಾಗಿದೆ’ ಎಂದು ಇರಾನ್ ಹೇಳಿದೆ. ದಾಳಿಯಲ್ಲಿ ಖೈಬರ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.

ಇನ್ನೊಂದೆಡೆ, ಅಮೆರಿಕ–ಇಸ್ರೇಲಿ ಏರ್‌ಸ್ಟ್ರೈಕ್‌ಗಳಿಂದ ಇರಾನಿನಲ್ಲಿ ಕನಿಷ್ಠ 555 ಜನರು ಸಾವನ್ನಪ್ಪಿರುವುದಾಗಿ ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಶನಿವಾರದಿಂದ ಅಮೆರಿಕ ಮತ್ತು ಇಸ್ರೇಲ್ ಇರಾನಿನಾದ್ಯಂತ ದಾಳಿಗಳನ್ನು ಮುಂದುವರಿಸುತ್ತಿವೆ.

ಖಮೇನಿ ಹತ್ಯೆಯಿಂದ ಪ್ರಾರಂಭವಾದ ಈ ಸಂಘರ್ಷ ಇದೀಗ ಸಂಪೂರ್ಣ ಪ್ರದೇಶವನ್ನು ಆವರಿಸಿದೆ. ದುಬೈ, ಬಹ್ರೇನ್, ಇರಾಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ಫೋಟಗಳ ಸದ್ದು ಕೇಳಿಬರುತ್ತಿದೆ ಎಂದು ವರದಿಗಳು ತಿಳಿಸಿವೆ.

ಯುದ್ಧಪೀಡಿತ ದೇಶಗಳಿಂದ ಕನ್ನಡಿಗರು ಎಲ್ಲಾ ಭಾರತೀಯರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ: ಹೆಚ್.ಡಿ. ಕುಮಾರಸ್ವಾಮಿ

ಮೈಸೂರು: ಕೊಲ್ಲಿ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆಯಲ್ಲಿ ಸಿಲುಕಿಕೊಂಡಿರುವ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕೇಂದ್ರ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು; ಈ ಹಿಂದೆ ಇಂಥದೇ ಅನೇಕ ಸಂದರ್ಭಗಳಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿತ್ತು. ಈ ಬಾರಿಯೂ ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆ ತರಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರಧಾನಿಗಳು ಕ್ರಮ ವಹಿಸಿದ್ದಾರೆ ಎಂದು ಹೇಳಿದರು.

ನಾನು ಕೂಡ ದುಬೈ ಸೇರಿದಂತೆ ಯುದ್ಧ ಕಾರ್ಮೋಡ ಇರುವ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಸಂಪರ್ಕಿಸಿದ್ದೇನೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿ ವಾಪಸ್ ಬರಲಿದ್ದಾರೆ. ಯಾವುದೇ ಅನುಮಾನ ಬೇಡ ಎಂದು ಅವರು ಹೇಳಿದರು.

ಇರಾನ್ ವಿರುದ್ಧ ಅಮೆರಿಕ ಜೊತೆ ಕೈಜೋಡಿಸಲು ಬ್ರಿಟನ್-ಫ್ರಾನ್ಸ್-ಜರ್ಮನಿ ಸಿದ್ಧ

0

ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಇರಾನ್ನಿಂದ ಸಂಭವಿಸಬಹುದಾದ ಪ್ರತೀಕಾರಾತ್ಮಕ ಮಿಲಿಟರಿ ಕ್ರಮಗಳನ್ನು ಎದುರಿಸಲು ಅಮೆರಿಕ ಜೊತೆ ಕೈಜೋಡಿಸಲು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸಿದ್ಧವಾಗಿವೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನಿ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಸಂಯುಕ್ತ ಹೇಳಿಕೆಯಲ್ಲಿ, ಮಿತ್ರ ರಾಷ್ಟ್ರಗಳ ಗುರಿಗಳ ವಿರುದ್ಧ ಇರಾನ್ ಅಜಾಗರೂಕ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ದಾಳಿಗಳು ನಾಗರಿಕರು ಮತ್ತು ಆ ಪ್ರದೇಶದಲ್ಲಿ ನಿಯೋಜಿಸಲಾದ ಸೈನಿಕರಿಗೆ ನೇರ ಬೆದರಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಮೂರು ರಾಷ್ಟ್ರಗಳು ತಮ್ಮ ಹಾಗೂ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧರಿರುವುದಾಗಿ ಹೇಳಿವೆ. ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯಲು ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಅಮೆರಿಕ ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ.ಆದರೆ ಯಾವುದೇ ನಿರ್ದಿಷ್ಟ ಸೈನಿಕ ಕಾರ್ಯಾಚರಣೆಗಳ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಸೈಪ್ರಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸರಣಿ ದಾಳಿಗಳು ನಡೆದಿರುವ ವರದಿಗಳ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ. ಬ್ರಿಟನ್ ರಕ್ಷಣಾ ಸಚಿವಾಲಯವು ಅಕ್ರೋಟಿರಿ ನೆಲೆಯಲ್ಲಿರುವ ತನ್ನ ಮಿಲಿಟರಿ ತಾಣದ ಮೇಲೆ ಶಂಕಿತ ಡ್ರೋನ್ ದಾಳಿ ನಡೆದಿರುವುದಾಗಿ ತಿಳಿಸಿದೆ.

ಇದೇ ವೇಳೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಫ್ರೆಂಚ್ ನೌಕಾ ತಾಣದ ಹ್ಯಾಂಗರ್‌ಗೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿದ್ದು, ಮುಂದಿನ ಬೆಳವಣಿಗೆಗಳತ್ತ ವಿಶ್ವದ ಗಮನ ಕೇಂದ್ರೀಕೃತವಾಗಿದೆ.

ಪಾಕಿಸ್ತಾನದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ರೂ. ದಂಡ..! ಯಾಕೆ ಗೊತ್ತಾ..?

0

ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದಾಗಿದೆ ಎಂದು ವರದಿಯಾಗಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಆದರೆ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಸೂಪರ್-8 ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಈ ಹೀನಾಯ ಪ್ರದರ್ಶನದ ಹಿನ್ನೆಲೆ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮಂಡಳಿ ನಿರ್ಧರಿಸಿದೆ.

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಆಟಗಾರರಿಗೆ ನೀಡಲಾಗುತ್ತಿದ್ದ ಹೆಚ್ಚುವರಿ ಸವಲತ್ತುಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದಿನಿಂದ ಮೈದಾನದ ಪ್ರದರ್ಶನ ಆಧಾರಿತವಾಗಿಯೇ ಹಣಕಾಸಿನ ಲಾಭಗಳು ಹಾಗೂ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.

2025-26ರ ಕೇಂದ್ರ ಗುತ್ತಿಗೆಯಲ್ಲಿ ಹಿರಿಯ ಆಟಗಾರರಾದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಝ್ವಾನ್ ಅವರನ್ನು ‘A’ ವರ್ಗದಿಂದ ‘B’ ವರ್ಗಕ್ಕೆ ಇಳಿಸಲಾಗಿದೆ. ಕಳಪೆ ಫಾರ್ಮ್ ಇದರ ಪ್ರಮುಖ ಕಾರಣವೆಂದು ತಿಳಿದುಬಂದಿದೆ.

ಇದೇ ವೇಳೆ, ಕೆಲಸದ ಒತ್ತಡ ನಿರ್ವಹಣೆ ಹೆಸರಿನಲ್ಲಿ ವಿದೇಶಿ ಲೀಗ್‌ಗಳಲ್ಲಿ ಆಡಲು ನೀಡಲಾಗುವ ಎನ್‌ಒಸಿ (NOC) ಗಳ ಮೇಲೂ ನಿರ್ಬಂಧ ಹೇರಲಾಗಿದೆ.

ಆಟಗಾರರಿಗೆ ವಿಧಿಸಲಿರುವ ದಂಡ ಹಾಗೂ ಶಿಸ್ತು ಕ್ರಮಗಳು ಪಾಕಿಸ್ತಾನ್ ತಂಡದ ಮನೋಭಾವ ಮತ್ತು ಮುಂದಿನ ಸರಣಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಇರಾನ್–ಇಸ್ರೇಲ್ ಉದ್ವಿಗ್ನತೆ: ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ – ಕೃಷ್ಣ ಭೈರೇಗೌಡ

ಬೆಂಗಳೂರು: ಇರಾನ್ಇಸ್ರೇಲ್ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಯಾರೂ ಆತಂಕಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಿಲುಕಿರುವ ಪ್ರತಿಯೊಬ್ಬರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಭರವಸೆ ನೀಡಿದರು.

ಶನಿವಾರದಿಂದಲೇ ಸಹಾಯವಾಣಿ ಆರಂಭಿಸಲಾಗಿದ್ದು, ಇದುವರೆಗೆ 109 ಮಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿರುವ ರಾಜ್ಯದ ರೆಸಿಡೆಂಟ್ ಕಮೀಷನರ್ ಕೂಡ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವವರಿಗೆ ಮುಖ್ಯವಾಗಿ ಮೂರು ಆತಂಕಗಳಿವೆ – ಅವರನ್ನು ಹೇಗೆ ವಾಪಸ್ ಕರೆಸಿಕೊಳ್ಳಲಾಗುತ್ತದೆ? ವಿಶೇಷ ವಿಮಾನ ವ್ಯವಸ್ಥೆ ಇರಬಹುದೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ಕುರಿತು ಸಚಿವರು, “ಪ್ರಸ್ತುತ ಏರ್ ಟ್ರಾಫಿಕ್ ನಿಷೇಧಗೊಂಡಿದೆ. ವಿಮಾನ ಸಂಚಾರ ಪುನರಾರಂಭವಾದ ಕೂಡಲೇ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ಸಿಗುತ್ತದೆ. ಏರ್ ಟ್ರಾಫಿಕ್ ಕ್ಲಿಯರ್ ಆಗುವವರೆಗೆ ತೆರವು ಕಾರ್ಯ ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಶಾಂತವಾಗಿ ಇರಬೇಕು,” ಎಂದು ಮನವಿ ಮಾಡಿದರು.

error: Content is protected !!