ವಿಜಯಸಾಕ್ಷಿ ಸುದ್ದಿ, ಗದಗ : ರೋಟರಿ ಗದಗ ಸೆಂಟ್ರಲ್ ಇವರು ಇತ್ತೀಚೆಗೆ ಆಯೋಜಿಸಿದ್ದ `ರೋಟರಿ ಉತ್ಸವ-24′ ಕಾರ್ಯಕ್ರಮವನ್ನು ಗದಗ ಡಾ. ಎಸ್.ವಿ. ತೋಟಗಂಟಿಮಠ ನರ್ಸಿಂಗ್ ಕಾಲೇಜಿನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಸಿಂಗಿಂಗ್ ಸ್ಟಾರ್ ಆಫ್ ಗದಗ ಸ್ಪರ್ಧೆ ನಡೆಸಿ ಪ್ರತಿಭಾವಂತ ಗಾಯಕರನ್ನು ಆಯ್ಕೆಮಾಡಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು. ರೋಟರಿ ಡ್ಯಾನ್ಸಿಂಗ್ ಸ್ಟಾರ್ ಆಫ್ ಗದಗ ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪಾರಿತೋಷಕ ವಿತರಣೆಯನ್ನು ರೋಟರಿ ಅಧ್ಯಕ್ಷ ವಿಜಯಕುಮಾರ ಹಿರೇಮಠ ಹಾಗೂ ಕಾರ್ಯದರ್ಶಿ ಡಾ. ಸಂತೋಷ ತೋಟಗಂಟಿಮಠ ಮತ್ತು ಪಾಸ್ಟ್ ಸಹಾಯಕ ಗವರ್ನರ್ ಶರಣಬಸಪ್ಪ ಗುಡಿಮನಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಶರಣಬಸಪ್ಪ ಗುಡಿಮನಿ ಮಾತನಾಡಿ, ಕ್ರಿಯಾತ್ಮಕ ಚಿಂತನೆ ಹಾಗೂ ಸೃಜನಶೀಲ ಮನೋಭಾವನೆಯನ್ನು ಬೆಳೆಸುವ ಈ ಕಾರ್ಯಕ್ರಮಗಳು ನಿಜಕ್ಕಾಗಿ ಸಮಾಜದ ಸಾಮರಸ್ಯಯನ್ನು ಎತ್ತಿ ಹಿಡಿಯುತ್ತವೆ ಎಂದು ಅಭಿಪ್ರಾಯಪಟ್ಟರು.
ಗ್ರುಪ್ ಡ್ಯಾನ್ಸ್ನಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆಫ್ ಗದಗ ಪ್ರಥಮ ಬಹುಮಾನ ಚೈತನ್ಯಾ ಡ್ಯಾನ್ಸ್ ಅಕಾಡೆಮಿ, ದ್ವಿತೀಯ ಬಹುಮಾನ ಮಹೇಶ ಹೊಸಳ್ಳಿ ಹಾಗೂ ತಂಡದವರಿಗೆ, ಮೂರನೇ ಬಹುಮಾನ ಹರ್ಷಿತಾ ಮತ್ತು ಜ್ಯೋತಿ ಇವರಿಗೆ ನೀಡಲಾಯಿತು. ಡ್ಯಾನ್ಸಿಂಗ್ ಸೋಲೋ ಕಾರ್ಯಕ್ರಮದಲ್ಲಿ ಚೈತನ್ಯಾ ಡ್ಯಾನ್ಸ್ ಅಕಾಡೆಮಿಯ ನಮೃತಾ ಪ್ರಥಮ, ಶ್ರೀಕಾಂತ ದೊಡ್ಡೂರ ಹಾಗೂ ನಿಖಿತಾ ದ್ವಿತೀಯ, ವೇದಾ ಹಿರೇಮಠ ತೃತೀಯ ಸ್ಥಾನ ಪಡೆದುಕೊಂಡರು.
ಸಿಂಗಿಂಗ್ ಸ್ಟಾರ್ ಆಫ್ ಗದಗ ಮನೋಜವಮ್ ರೇವಣಕರ ಪ್ರಥಮ, ವೀರಯ್ಯ ಹೊಸಮಠ ಹಾಗೂ ಎಸ್.ವಿ.ಟಿ. ಕಾಲೇಜಿನ ಶಿಕ್ಷಕರಾದ ಜೋಯಸನ್ ಬಂಡಿ ದ್ವಿತೀಯ, ಪದ್ಮಾ ಕಬಾಡಿ ತೃತೀಯ ಹಾಗೂ ಸಮಾಧಾನಕರ ಬಹುಮಾನವನ್ನು ಸುಧಾ ಲಮಾಣಿ ಇವರಿಗೆ ನೀಡಲಾಯಿತು.
ರೋಟರಿ ಗದಗ ಸೆಂಟ್ರಲ್ ಖಜಾಂಚಿ ಸುನೀಲ ಕಬಾಡಿ, ಸದಸ್ಯ ಸಂದೀಪ ಕಂಬಳಿ, ಆನಂದ ತೋಟಗಂಟಿಮಠ, ಕಾಲೇಜಿನ ಸಿಬ್ಬಂದಿಗಳಾದ ವಿನಯ ಕುಪಸತ, ರಾಧಾ ಬೂದಿಹಾಳ ಕಾರ್ಯಕ್ರಮದಲ್ಲಿ ಹಾಜರಿದ್ದರು.