HomeGadag Newsಸಂಸ್ಕೃತ ಜಗತ್ತಿನ ಮಾತೃ ಭಾಷೆ : ಶ್ರೀ ಬಸವಣ್ಣಯ್ಯ ಶಾಸ್ತ್ರಿಗಳು

ಸಂಸ್ಕೃತ ಜಗತ್ತಿನ ಮಾತೃ ಭಾಷೆ : ಶ್ರೀ ಬಸವಣ್ಣಯ್ಯ ಶಾಸ್ತ್ರಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಒಬ್ಬ ಮನುಷ್ಯ ತನ್ನ ಎಲ್ಲ ವ್ಯವಹಾರಿಕ, ನಿತ್ಯ ಜೀವನದ ಆಡುಭಾಷೆಯಲ್ಲಿ ಹಾಗೂ ಗ್ರಂಥದ ಭಾಷೆ ಮತ್ತು ಎಲ್ಲ ಭಾಷೆಗಳ ಮಾತೃ ಭಾಷೆಯೇ ಸಂಸ್ಕೃತ ಎಂದು ಶ್ರೀ ಬಸವಣ್ಣಯ್ಯ ಶಾಸ್ತ್ರಿಗಳು ತಿಳಿಸಿದರು.

ಅವರು ಗದಗ-ಬೆಟಗೇರಿ ನಗರದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ `ಅಸ್ಮಾಕಂ ಸಂಸ್ಸೃತಂ’ ಎಂಬ ಸರಣಿ ಕಾರ್ಯಕ್ರಮದ ನೇತೃವನ್ನು ವಹಿಸಿ ಮಾತನಾಡಿ, ನಾವೇಲ್ಲರೂ ಸಂಸ್ಕೃತವನ್ನು ಎಲ್ಲ ಆಯಾಮಗಳಲ್ಲಿ ಪ್ರಚಾರ ಮಾಡುತ್ತಾ ಸಂಸ್ಕೃತವನ್ನು ಸಂರಕ್ಷಿಸಬೇಕು ಹಾಗೂ ಸರ್ವರ ಮುಖ ಕಂಠದಿಂದ ಸಂಸ್ಕೃತವು ಆಡುವಂತಾಗಲಿ ಎಂದು ತಿಳಿಸಿದರು.

ಕಾರ್ಯಕ್ರಮವು ಎಸ್.ವ್ಹಿ. ತೋಟಗಂಟಿಮಠ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ವೇದ-ಸಂಸ್ಕೃತ ಪಾಠಶಾಲೆಯ ಸಹಯೋಗದೊಂದಿಗೆ ನಡೆಯಿತು.

ಅಧ್ಯಕ್ಷತೆಯನ್ನು ಸಂತೋಷ ತೋಟಗಂಟಿಮಠ ವಹಿಸಿದ್ದರು. ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡ ವಲಯದ ವಿಷಯ ಪರಿವೀಕ್ಷಕರಾದ ಗಣಪತಿ ಎಸ್.ಗಾಂವಕರ ಇವರು ಅಸ್ಮಾಕಂ ಸಂಸ್ಕೃತಂ ಕುರಿತು ಸಮಗ್ರವಾಗಿ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಸಿದ್ದಲಿಂಗಪ್ಪ ಚ.ಚಳಗೇರಿ, ಶಿವಮೂರ್ತಿ ಶಿಂಪಿಗೇರ, ಪಂಚಯ್ಯ ಹಿರೇಮಠ, ಗುರುಶಿದ್ದಯ್ಯ ಚ.ಹಿರೇವ್ಮಠ, ತೇಜಸ್ವಿನಿ ಕುರ್ತಕೋಟಿ ಭಾಗವಹಿಸಿದ್ದರು. ಪ್ರಾಂಭದಲ್ಲಿ ಪಾಠಶಾಲಾ ವಿದ್ಯಾರ್ಥಿಗಳು ವೇದಘೋಷ ಹಾಗೂ ಸಂಸ್ಕೃತ ಗೀತೆಗಳನ್ನು ವಾಚಿಸಿದರು. ಕಳಕಪ್ಪ ಕುರ್ತಕೋಟಿ ಇವರು ಸ್ವಾಗತಿಸಿದರು. ಶಿವಚಲಕುಮಾರ ಸಾಲಿಮಠ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img