HomeIndia NewsUPI ಶುಲ್ಕದ ಬಗ್ಗೆ ಗೊಂದಲ ಬೇಡ; ಗ್ರಾಹಕರು ತಿಳಿಯಬೇಕಾದ 5 ಪ್ರಮುಖ ಅಂಶಗಳು!

UPI ಶುಲ್ಕದ ಬಗ್ಗೆ ಗೊಂದಲ ಬೇಡ; ಗ್ರಾಹಕರು ತಿಳಿಯಬೇಕಾದ 5 ಪ್ರಮುಖ ಅಂಶಗಳು!

For Dai;y Updates Join Our whatsapp Group

ನವದೆಹಲಿ: ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ನಿಯಮಗಳ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಷೇರು ಮಾರುಕಟ್ಟೆ ವಹಿವಾಟುಗಳಿಗೂ MDR ನಿಗದಿಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಷೇರು ಮಾರುಕಟ್ಟೆ ವಹಿವಾಟುಗಳಿಗೆ ಶೇ.0.02ರ MDR ವಿಧಿಸುವ ನಿರ್ಧಾರವನ್ನು ಸೆಬಿ, ಷೇರು ವಿನಿಮಯ ಕೇಂದ್ರಗಳು ಹಾಗೂ ಸಂಬಂಧಿತ ಪಾಲುದಾರರೊಂದಿಗೆ ಚರ್ಚಿಸಿದ ಬಳಿಕ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮ್ಯೂಚುವಲ್ ಫಂಡ್‌, ಸ್ಟಾಕ್ ಬ್ರೋಕರ್ ಹಾಗೂ ಸೆಕ್ಯುರಿಟೀಸ್ ಪಾವತಿಗಳಿಗೂ ಶೇ.0.02ರ MDR ಅನ್ವಯವಾಗಲಿದ್ದು, ಗರಿಷ್ಠ ಶುಲ್ಕ ₹300ಕ್ಕೆ ಮಿತಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಇನ್ನು ₹2,000ವರೆಗೆ ನಡೆಯುವ ಯುಪಿಐ ವ್ಯಾಪಾರಿ ಪಾವತಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳಿಗೆ ಶೇ.0.4ರ MDR ಅನ್ವಯವಾಗಲಿದೆ. ₹75,000 ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಗರಿಷ್ಠ ಶುಲ್ಕ ₹300 ಎಂದು ತಿಳಿಸಲಾಗಿದೆ.

ಸಣ್ಣ ವ್ಯಾಪಾರಿಗಳಿಗೆ ಸಂಬಂಧಿಸಿದಂತೆಯೂ ವಿನಾಯಿತಿ ನೀಡಲಾಗಿದೆ. ತಿಂಗಳಿಗೆ ₹1 ಲಕ್ಷದವರೆಗೆ ಯುಪಿಐ ಕ್ಯೂಆರ್‌ ಕೋಡ್ ಮೂಲಕ ಆದಾಯ ಪಡೆಯುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ಇರಲಿದೆ ಎಂದು ತಿಳಿಸಲಾಗಿದೆ.

ಇನ್ನು ಯುಪಿಐ ಶುಲ್ಕ ವಿಧಿಸುವ ನಿರ್ಧಾರದ ಹಿಂದೆ ಅಮೆರಿಕದ ಯಾವುದೇ ಒತ್ತಡವಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಯುಪಿಐ ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬ ವರದಿಗಳನ್ನೂ ಮೂಲಗಳು ತಳ್ಳಿಹಾಕಿವೆ.

MDR ಎಂದರೆ ಗ್ರಾಹಕರಿಂದ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳು ಬ್ಯಾಂಕ್‌ಗಳು ಅಥವಾ ಪಾವತಿ ಸೇವಾ ಸಂಸ್ಥೆಗಳಿಗೆ ಪಾವತಿಸುವ ಸೇವಾ ಶುಲ್ಕವಾಗಿದೆ. ಡೆಬಿಟ್ ಕಾರ್ಡ್‌ಗಳಿಗೆ ಸಾಮಾನ್ಯವಾಗಿ ಸುಮಾರು ಶೇ.0.90ರಷ್ಟು ಹಾಗೂ ಕ್ರೆಡಿಟ್ ಕಾರ್ಡ್‌ಗಳಿಗೆ ಶೇ.1.5ರಿಂದ ಶೇ.2.5ರವರೆಗೆ MDR ಇರುವುದಾಗಿ ತಿಳಿಸಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img