HomeGadag Newsಗಣೇಶೋತ್ಸವದ ನಿಮಿತ್ತ ಶ್ರೀ ಸತ್ಯನಾರಾಯಣ ಪೂಜೆ

ಗಣೇಶೋತ್ಸವದ ನಿಮಿತ್ತ ಶ್ರೀ ಸತ್ಯನಾರಾಯಣ ಪೂಜೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಶ್ರೀ ಪಂ.ಪಂಚಾಕ್ಷರಿ ಗವಾಯಿಗಳ ಮಾರುಕಟ್ಟೆಯಲ್ಲಿ ದಲಾಲ ವರ್ತಕರ ಸಂಘ, ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಗಣೇಶ ಪ್ರತಿಷ್ಠಾಪನೆಯ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.

ವೇ.ಮೂ ಶಂಭುಲಿಂಗ ಶಾಸ್ತ್ರಿಗಳು ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿ ಪುರಾಣ ಪಾರಾಯಣ ಮಾಡಿದರು.

ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಶ್ರೀ ಸತ್ಯನಾರಾಯಣ ಪುಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮಣ್ಣ ಕೋನರೆಡ್ಡಿ, ಗೌರವಾಧ್ಯಕ್ಷ ಪ್ರಮೋದ ವಾರಕರ, ಪದಾಧಿಕಾರಿಗಳಾದ ರಾಜಶೇಖರ ಮುಧೋಳ, ರಾಜು ಮೂಲಿಮನಿ, ಚಂದ್ರಕಾಂತ ಸವದತ್ತಿ, ಮಹೇಶ ಗಾಣಗೇರ, ನೀತಿಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ಗುಂಡಪ್ಪನವರ, ವಿನಯ ಕಾಡಪ್ಪನವರ, ಸಾಗರ ವಜ್ರೇಶ್ವರಿ, ಮುತ್ತಣ್ಣ ಅಂಗಡಿ, ಅಜೀತ ಪುಣೇಕರ, ಶರಣಬಸಪ್ಪ ಗುಡಿಮನಿ, ಶಾಮದಾಸ ಪುಣೇಕರ, ತಾತನಗೌಡ ಪಾಟೀಲ, ಚನ್ನವೀರೇಶ ಹುಣಸಿಕಟ್ಟಿ, ಅಶೋಕ ಸಂಕಣ್ಣವರ, ಶೇಖಣ್ಣ ಗದ್ದಿಕೇರಿ, ಪ್ರಮೋದ ಬಳಗಾನೂರ, ಜಯಣ್ಣ ಬಾಳಿಹಳ್ಳಿಮಠ, ರಾಘವೇಂದ್ರ ಕಾಲವಾಡ, ಮಂಜುನಾಥ ಕವಲೂರ, ಬಸವರಾಜ ಅಂಗಡಿ, ಉಮೇಶ ಹುಬ್ಬಳ್ಳಿ ಮಂಜುನಾಥ ಬೇಲೆರಿ, ಹಾಗೂ ಸಂಘದ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img