ಹೆಸರು ಖರೀದಿ ಕೇಂದ್ರ ಪ್ರಾರಂಭಿಸಿ : ನಾಗರಾಜ ಕೆ

0
Start a name buying center
Spread the love

ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನಲ್ಲಿ ಈಗಾಗಲೇ ಹೆಸರು ಬೆಳೆಯ ಕಟಾವು ಆರಂಭಗೊಂಡಿದ್ದು, ರೈತರ ಅನುಕೂಲತೆಯ ದೃಷ್ಟಿಯಿಂದ ಶೀಘ್ರವೇ ಹೆಸರು ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಪಟ್ಟಣದ ರೈತರು ಮಂಗಳವಾರ ತಹಸೀಲ್ದಾರ್ ನಾಗರಾಜ ಕೆ ಅವರಿಗೆ ಮನವಿ ಸಲ್ಲಿಸಿದರು.

Advertisement

ರೈತ ಮುಖಂಡ ಅರ್ಜುನ ಕೊಪ್ಪಳ ಮಾತನಾಡಿ, ಸರಕಾರ ಈಗಾಗಲೇ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು ಒಳ್ಳೆಯ ಬೆಳವಣಿಗೆಯಾದರೂ ಹೆಸರು ಬೆಳೆ ಖರೀದಿ ಕೇಂದ್ರವನ್ನು ಆರಂಭಿಸಿದಾಗ ಮಾತ್ರ ರೈತರಿಗೆ ಲಾಭ ಸಿಗಲಿದೆ. ಇಲ್ಲದಿದ್ದರೆ ರೈತರು ತಮ್ಮ ಹಣದ ಅಡಚಣೆಗಾಗಿ ಬೇರೆ ಕಡೆಗಳಲ್ಲಿ ಮಾರಾಟ ಮಾಡುತ್ತಾರೆ.

ಆದ್ದರಿಂದ ಅಧಿಕಾರಿಗಳು ಶೀಘ್ರವೇ ಪಟ್ಟಣದಲ್ಲಿ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ರೋಣ ಹೋಬಳಿಯಲ್ಲಿ ಹೆಸರು ಶೇ 56ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಖರೀದಿ ಕೇಂದ್ರದಲ್ಲಿ 15 ಕ್ವಿಂಟಲ್ ಬದಲಾಗಿ 25 ಕ್ವಿಂಟಲ್‌ನಂತೆ ರೈತರಿಂದ ಖರೀದಿಸಬೇಕು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಎಂ.ಎಸ್. ನಾಯಕ, ವಿ.ಎಚ್. ಕೊಪ್ಪದ, ಎ.ಜಿ. ಬಂಗಾರಿ, ಮೂಕಪ್ಪ ಕೊಪ್ಪದ, ಹನಮಪ್ಪ ಗಡಗಿ, ಮಲ್ಲಪ್ಪ ಆದಿ, ಕುತುಬುದ್ದಿನ್ ಜಲಾವರ, ಎಸ್.ಪಿ. ಬಾಬಜಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here