HomeKarnataka Newsಸಾವಿರ ಹೆಡೆಗಳ ಸರ್ಪ ಹೇಳಿಕೆಗೆ ಈಗಲೂ ಬದ್ಧ: ಸಚಿವ ಯತೀಂದ್ರ

ಸಾವಿರ ಹೆಡೆಗಳ ಸರ್ಪ ಹೇಳಿಕೆಗೆ ಈಗಲೂ ಬದ್ಧ: ಸಚಿವ ಯತೀಂದ್ರ

For Dai;y Updates Join Our whatsapp Group

ಬೆಂಗಳೂರು: ಆರ್‌ಎಸ್‌ಎಸ್ ಅನ್ನು “ಸಾವಿರ ಹೆಡೆಗಳ ಸರ್ಪ” ಎಂದು ಹೋಲಿಸಿ ನೀಡಿದ್ದ ಹೇಳಿಕೆಗೆ ತಾವು ಈಗಲೂ ಬದ್ಧರಾಗಿರುವುದಾಗಿ ಸಚಿವ ಡಾ.ಯತೀಂದ್ರ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಆರ್‌ಎಸ್‌ಎಸ್ ನೂರಾರು ಅಂಗ ಸಂಸ್ಥೆಗಳನ್ನು ಹೊಂದಿದ್ದು, ತಮಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಲೇ ಆ ಸಂಘಟನೆ ಪರವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಆರೋಪಿಸಿದರು.

ಸಮಾಜದಲ್ಲಿ ನಿರಂತರವಾಗಿ ಕೋಮುವಾದದ ವಿಷ ಬಿತ್ತುತ್ತಿರುವ ಕಾರಣದಿಂದಲೇ ಈ ರೀತಿಯ ಉಪಮೆ ನೀಡಿರುವುದಾಗಿ ಅವರು ತಿಳಿಸಿದರು. ಯಾವುದೇ ವಿಷಯ ಎತ್ತಿಕೊಂಡರೂ ಅದನ್ನು ಧರ್ಮ ಮತ್ತು ಜಾತಿಯ ಚೌಕಟ್ಟಿಗೆ ತಿರುಗಿಸುವುದೇ ಆರ್‌ಎಸ್‌ಎಸ್‌ನ ಕೆಲಸ, ಜನರ ನೈಜ ಸಮಸ್ಯೆಗಳನ್ನು ಎತ್ತುವುದಿಲ್ಲ ಎಂದು ದೂರಿದರು.

ಕೋಮುವಾದ ಮಾಡುವ ಯಾರನ್ನೇ ಆದರೂ ತಾವು ಟೀಕಿಸುವುದಾಗಿ ಹೇಳಿದ ಸಚಿವರು, ಆರ್‌ಎಸ್‌ಎಸ್‌ನ ಭಯ ತಮಗಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ತಾವು ಅವರ ಪರವಾಗಿ ಮಾತನಾಡಬೇಕೆ ಎಂದು ಪ್ರಶ್ನಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರೂ ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಬದ್ಧರಾಗಿರುವ ತಾವು ಕೋಮುವಾದದ ವಿರುದ್ಧ ಇರುವ ಜಾತ್ಯತೀತ ಸಿದ್ಧಾಂತವನ್ನು ಬಲವಾಗಿ ಸಮರ್ಥಿಸುವುದಾಗಿ ತಿಳಿಸಿದ ಯತೀಂದ್ರ, ಆರ್‌ಎಸ್‌ಎಸ್ ಹಿಂದುತ್ವ ವಿಚಾರ ಬಿಟ್ಟು ಬೇರೆ ವಿಷಯ ಮಾತನಾಡಿದರೆ ಆರೋಪ ಮಾಡುವುದು ತಪ್ಪಾಗುತ್ತಿತ್ತು ಎಂದರು. ರಾಜಕಾರಣಕ್ಕೆ ಬಂದಾಗಿನಿಂದಲೂ ಇದೇ ವಿಚಾರ ಮಾತನಾಡುತ್ತಿರುವುದಾಗಿ ಹೇಳಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಘಟನೆಯಿಂದಾಗಿಯೇ ತಾವು ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಪ್ರಶ್ನಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img