• About
  • Advertise
  • Privacy & Policy
  • Contact
Monday, November 23, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಬಡವರ ಮತಗಳನ್ನು ಕಿತ್ತುಹಾಕುವುದು ನಾಚಿಕೆಗೇಡಿನ ಕೆಲಸ: ಸಿಎಂ ಡಿ ಕೆ ಶಿವಕುಮಾರ್

Vijaya Sakshi News Desk by Vijaya Sakshi News Desk
October 6, 2026
in Karnataka News
ಅಸೂಯೆಗೆ ಮದ್ದಿಲ್ಲ, ಪಾಪ ಕುಮಾರಸ್ವಾಮಿಗೆ ತಡೆದುಕೊಳ್ಳಲು ಆಗ್ತಿಲ್ಲ; ಡಿಕೆ ಶಿವಕುಮಾರ್​
0
SHARES
1
VIEWS
Share on Facebook

ಬೆಂಗಳೂರು: “ಕರ್ನಾಟಕ ಬಿಜೆಪಿಯವರು ಕುತಂತ್ರದ ರಾಜಕಾರಣ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಗೆಲ್ಲಬೇಕು. ಈ ರೀತಿ ಚುನಾವಣಾ ಆಯೋಗ ಬಳಸಿಕೊಂಡು ಮತಪಟ್ಟಿ ತಿರುಚಬಾರದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

“ಮತದಾರರ ಹೆಸರನ್ನು ಒಂದು ಬೂತ್ ನಿಂದ ಮತ್ತೊಂದು ಬೂತ್ ಗಳಿಗೆ ಸ್ಥಳಾಂತರಿಸುವುದು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ವರ್ಗಗಳು ಹಾಗೂ ಬಡವರ ಮತಗಳನ್ನು ಕಿತ್ತುಹಾಕಲಾಗುತ್ತಿದ್ದು, ಇದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಈಗ ಬಿಜೆಪಿಯವರು ಮತಕಳ್ಳರ ರಕ್ಷಣೆಗೆ ಹೊರಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಮಾಯಕರು, ಏಕೆಂದರೆ ಒಂದೇ ಕುಟುಂಬದಿಂದ ಗಂಡ, ಹೆಂಡತಿ ಮಗಳು, ಮೂರು ಜನರು ಹೋಗಿ ಫಾರಂ 7 ಅರ್ಜಿಯನ್ನು ನೀಡಿದ್ದು, ಇದನ್ನು ಮಾಧ್ಯಮದವರೇ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ.

ಒಂದೇ ಕುಟುಂಬದ ಮೂವರು ಈ ಅರ್ಜಿಗೆ ಸಹಿ ಹಾಕಿ ಕೊಟ್ಟಿದ್ದು, ತಮ್ಮ ದೂರವಾಣಿ ಸಂಖ್ಯೆಯನ್ನು ಕೊಟ್ಟಿರುವುದರಿಂದ, ಇವರು ಪೊಲೀಸ್ ಠಾಣೆಗೆ ಅಲೆಯುವಂತಾಗಿದೆ. ಬೆಳಗಾವಿಯ ಬಿಜೆಪಿಯ ರಾಜಕಾರಣಿ ರವಿ ಪಾಟೀಲ್ ಹಾಗೂ ವಿಜಯಪುರದ ಬಬಲೇಶ್ವರ ಕ್ಷೇತ್ರದಲ್ಲಿಯೂ ಫಾರಂ 7 ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ತಪ್ಪೊಪ್ಪಿ ಕೊಂಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿಯೂ 1500 ಫಾರಂ 7 ಅರ್ಜಿಗಳನ್ನು ಮಧ್ಯರಾತ್ರಿ ಸುಟ್ಟಿದ್ದಾರೆಬೆಂಗಳೂರಿನ ಜಯನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕ್ಷೇತ್ರದಲ್ಲಿ ಫಾರಂ 7 ಅರ್ಜಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ” ಎಂದರು.

ರಾಜ್ಯದ ಜನರ ಮತಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದು

“ಈಗ ಬಿಜೆಪಿಯ ಆರ್ ಅಶೋಕ್ ಹಾಗೂ ವಿಜಯೇಂದ್ರ ಅವರೇ ಸುಮಾರು 25000 ಫಾರಂ 7 ಅರ್ಜಿಗಳನ್ನು ನೀಡಿರಬಹುದು ಎಂದು ತಿಳಿಸಿದ್ದಾರೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂಬ ಗಾದೆ ಇದೆ. ಬಿಜೆಪಿಯವರು ಮತಗಳ್ಳತನಕ್ಕೆ ಮುಂದಾಗಿರುವುದು ಸರಿಯಲ್ಲ. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ, ಜನಪ್ರತಿನಿಧಿಯಾಗಿ ಹಾಗೂ ಪಕ್ಷದ ಮುಖ್ಯಸ್ಥನಾಗಿ ಈ ಬಗ್ಗೆ ನಮ್ಮ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇನೆ. ರಾಜ್ಯದ ಜನರ ಮತಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದು” ಎಂದು ಸ್ಪಷ್ಟಪಡಿಸಿದರು. ಸಿಎಂ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಏನಾದರೂ ಹೇಳಿಕೊಳ್ಳಲಿ” ಎಂದರು.

“ದೇಶದ ವಿರೋಧ ಪಕ್ಷಗಳ ನಾಯಕರಿಗೆ ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿಗಳ ಬಳಿ ಕೇಳುವ ಹಕ್ಕಿದೆ. ಆದರೆ ರಾಜ್ಯದ ಬಿಜೆಪಿ ನಾಯಕರು ಯಾಕೆ ರಾಜಭವನಕ್ಕೆ ತೆರಳಿದ್ದಾರೆ? ಅವರು ಷಡ್ಯಂತ್ರ ನಡೆಸಿ, ಫಾರಂ 7 ದುರುಪಯೋಗಪಡಿಸಿಕೊಂಡಿದ್ದು ಈಗ ಹೆದರಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ, ಶೋಭಕ್ಕ, ವಿಜಯೇಂದ್ರ, ಅಶೋಕ್ ಅವರು ಫಾರಂ 7 ಅನ್ನು ನಾವೇ ಕೊಟ್ಟಿದ್ದೇವೆ ಎಂದು ಒಪ್ಪಿಕೊಳ್ಳಲಿ. ವಿಧಾನಸಭಾ ಕ್ಷಏತ್ರ ವ್ಯಪ್ತಿಯಲ್ಲಿನ ಸಣ್ಣ ಕಾರ್ಯಕರ್ತರಿಗೆ ಇವರು ಫಾರಂ 7 ಅರ್ಜಿ ನೀಡಿದ್ದಾರೆ. ಅವರು ಯಾವ ರೀತಿ ಈ ಕಾರ್ಯಚರಣೆ ಮಾಡಿದ್ದಾರೆ ಎಂದು ನನ್ನ ಸ್ನೇಹಿತರು ನನಗೆ ಮಾಹಿತಿ ನೀಡಿದ್ದಾರೆ. ಒಬ್ಬೊಬ್ಬರಿಗೆ 1000, 5000, 10,000 ಅರ್ಜಿಗಳನ್ನು ನೀಡಿದ್ದು,

ನಾನು ಮುಖ್ಯಚುನಾವಣಾಧಿಕಾರಿ ಕಚೇರಿಗೆ ಹೋದ ಬಳಿಕ, ಬಿಎಲ್ಓಗಳಿಂದ ತಾವು ಸಲ್ಲಿಸಿದ್ದ ಫಾರಂ 7 ಅನ್ನುಕೆಲವರು ಮನವಿ ಮಾಡಿ ವಾಪಸ್ ಪಡೆದರೆ ಮತ್ತೆ ಕೆಲವರು ಕಿತ್ತುಕೊಂಡಿದ್ದಾರೆ. ಅವುಗಳನ್ನು ಸುಟ್ಟು ಹಾಕಿದ್ದಾರೆ. ಬಿಎಲ್ಓಗಳಿಗೆ ಬೆದರಿಕೆ ಹಾಕಿ ಲಕ್ಷಾಂತರ ಅರ್ಜಿ ಪಡೆದಿದ್ದಾರೆ. ಬಿಎಲ್ಓಗಳು ಇದರ ಬಗ್ಗೆ ವರದಿ ನೀಡಿದ್ದಾರೆ. ಮತದಾನದ ಹಕ್ಕು ಕಳೆದುಕೊಂಡವರು ದೂರು ನೀಡುವುದು ಸಹಜ. ಬದುಕಿರುವವರನ್ನು ಸತ್ತಿದ್ದಾರೆ ಎಂದು ತೋರಿಸಲಾಗಿದೆ. ಈ ಫಾರಂ 7 ಅನ್ನು ದೆಹಲಿ ಅಥವಾ ಬೇರೆಡೆ ಮುದ್ರಿಸಿ ಕೊಟ್ಟಿದ್ದಾರೆ. ಹೀಗಾಗಿ ನಾವು ಮುಖ್ಯಚುನಾವಣಾಧಿಕಾರಿ ಕಚೇರಿಗೆ ಹೋಗಿ ದೂರು ನೀಡಿದ್ದೇವೆ. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ” ಎಂದರು.

ಬಿಜೆಪಿ, ಜೆಡಿಎಸ್ ತಂತ್ರಗಳು ನನಗೆ ಗೊತ್ತಿವೆ

“ನಮ್ಮ ಜಾಗದಲ್ಲಿ ಅವರು ಇದ್ದಿದ್ದರೆ ಏನು ಮಾಡುತ್ತಿದ್ದರು? ಈ ಹಿಂದೆ ಚಿಲುಮೆ ಸಂಸ್ಥೆ ಹೆಸರಿನಲ್ಲಿ ಅಕ್ರಮ ಎಸಗಿದ್ದರು. ಅವರೇ ಬಿಎಲ್ಓ ನೇಮಕ ಮಾಡಿದ್ದರು. ಅವರು ಏನೆಲ್ಲಾ ಅಕ್ರಮ ಮಾಡಲು ಹೊರಟಿದ್ದಾರೆ ಎಂದು ನನಗೆ ಗೊತ್ತಿದೆ. ಜೆಡಿಎಸ್ ನಾಯಕರ ತಂತ್ರಗಳೇನು? ಬಿಜೆಪಿ ನಾಯಕರ ತಂತ್ರಗಳೇನು ಎಂದು ನನಗೆ ಗೊತ್ತಿದೆ. ನನಗೆ ಗೊತ್ತಿಲ್ಲ ಎಂದು ಅವರು ಭಾವಿಸಿದ್ದಾರೆ.

ಅವರ ಮತದಾರರ ಮತದಾನದ ಹಕ್ಕು ರಕ್ಷಣೆ ಮಾಡುವುದೂ ನಮ್ಮ ಜವಾಬ್ದಾರಿ. ಚುನಾವಣಾ ಆಯುಕ್ತರ ಕಚೇರಿಗೆ ದೂರು ಕೊಟ್ಟ ಬಳಿಕ ಚುನಾವಣಾ ಆಯೋಗ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಪರಿಶೀಲನೆ ನಡೆಸದೇ ಯಾವುದೇ ಫಾರಂ 7 ಅರ್ಜಿಗಳನ್ನು ಅನುಮೋದಿಸುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಕೆಲವು ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಯಾರು ಆ ಅರ್ಜಿಗಳನ್ನು ನೀಡಿದರು ಎಂದು ಅವರೇ ಹೇಳಬೇಕು. ಇದರ ಬಗ್ಗೆಯೂ ತನಿಖೆ ಆಗಬೇಕು” ಎಂದು ತಿಳಿಸಿದರು.

“ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಪಿತೂರಿ. ಈ ಮತಗಳ್ಳತನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಮಹದೇವಪುರ ಹಾಗೂ ಆಲಂದ ಸೇರಿದಂತೆ ಮತಗಳ್ಳತನದ ಬಗ್ಗೆ ಧ್ವನಿ ಎತ್ತಿದ್ದು ಬೆಂಗಳೂರಿನಿಂದಲೇ. ನಮ್ಮ ಸಚಿವರಾದ ಈಶ್ವರ್ ಖಂಡ್ರೆ, ಎಂ ಬಿ ಪಾಟೀಲ್ ಅವರ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ತಪ್ಪೊಪ್ಪಿಗೆ ನೀಡಿದ್ದು, ಕ್ರಮ ಜರುಗಿಸದಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ? ಬೆಳಗಾವಿ, ಬಳ್ಳಾರಿ, ಮೈಸೂರಿನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ” ಎಂದರು.

ರಾಹುಲ್ ಗಾಂಧಿ ಹಾಗೂ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ

ರಾಹುಲ್ ಗಾಂಧಿ ಅವರ ಪ್ರತಿಭಟನೆ ತಡೆಯಲಾಗಿದೆ ಎಂದು ಕೇಳಿದಾಗ, “ಅವರು ತಡೆಯಲಿ, ಬಂಧಿಸಲಿ, ರಾಹುಲ್ ಗಾಂಧಿ ಅವರು ಇದಕ್ಕೆಲ್ಲಾ ಜಗ್ಗುವುದಿಲ್ಲ. ರಾಹುಲ್ ಗಾಂಧಿ ಅವರು ಜನರ ಉದ್ದೇಶಕ್ಕಾಗಿ ಹೋರಾಟ ಮಾಡುತ್ತಿದ್ದು, ದೇಶದ ಚುನಾವಣಾ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದಾರೆ. ಎಸ್ಐಆರ್ ವಿಚಾರ ನಮ್ಮ ವಿಚಾರವಲ್ಲ, ದೇಶದ ಜನರ ವಿಚಾರ. ವಿರೋಧ ಪಕ್ಷದ ನಾಯಕರಾಗಿ, ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟ ಪಕ್ಷದ ನಾಯಕರಾಗಿ ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆ. ರಾಹುಲ್ ಗಾಂಧಿ ಅವರು ತಮ್ಮ ಕರ್ತವ್ಯ ಮಾಡುತ್ತಿದ್ದು, ಬಿಜೆಪಿಯವರು ರಾಹುಲ್ ಗಾಂಧಿ ಹಾಗೂ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಪುನರುಚ್ಚರಿಸಿದರು.

ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂಬ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಸಭೆ ಮಾಡಿದ್ದು, ಶಾಸಕರಿಗೆ ಮಾಹಿತಿ ನೀಡಿದ್ದೇನೆ. ನಮ್ಮ ದೂರಿನ ಬಳಿಕ ಚುನಾವಣಾ ಆಯೋಗ, ಮತಪಟ್ಟಿಯಿಂದ ಹೊರಗುಳಿದವರು ತಮ್ಮ ಹಕ್ಕು ಪಡೆಯಲು ಫಾರಂ 6 ಅರ್ಜಿ ಸಲ್ಲಿಸುವ ಅವಕಾಶ ನೀಡಿದ್ದಾರೆ. ಇದಕ್ಕಾಗಿ ವಿಶೇಷ ಅಭಿಯಾನ ನಡೆಸಲು ಸೂಚಿಸಿದ್ದಾರೆ. ಶೋಷಿತ ವರ್ಗ ಸೇರಿದಂತೆ ಎಲ್ಲರನ್ನು ಪರಿಗಣಿಸಿ ಅಭಿಯಾನ ನಡೆಸಬೇಕು ಎಂದು ಸೂಚಿಸಿದ್ದು, ಇದು ಕರ್ನಾಟಕದ ಜಯ.” ಎಂದು ತಿಳಿಸಿದರು.

ನೈಸ್ ವಿಚಾರ; ಈಗಲೇ ಉತ್ತರಿಸುವುದಿಲ್ಲ

ನೈಸ್ ಹೋರಾಟವನ್ನು ಎಸ್ಐಆರ್ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕೇಳಿದಾಗ, “ಅದಕ್ಕೆಲ್ಲಾ ನಾನು ಈಗಲೇ ಉತ್ತರ ಕೊಡಲು ಹೋಗುವುದಿಲ್ಲ. ಅದಕ್ಕೆಲ್ಲಾ ಕಾನೂನಿದೆ. ನೀವು ಏನೇನು ಬೇಕೋ ಅದನ್ನು ಹಾಕಿಕೊಂಡು ಮುಗಿಸಿ. ಆಮೇಲೆ ನಾನು ಮಾತನಾಡುತ್ತೇನೆ ಎಂದರು. ಮೊದಲು ಜನರ ಮತದಾನದ ಹಕ್ಕನ್ನು ರಕ್ಷಣೆ ಮಾಡಬೇಕಿದೆ. ನೈಸ್ ಯೋಜನೆಗೆ ಸಹಿ ಮಾಡಿದ ಪಿತಾಮಹರು ಅವರೇ” ಎಂದು ತಿರುಗೇಟು ನೀಡಿದರು.

ರಾಜ್ಯಕ್ಕೆ, ರೈತರಿಗೆ, ಬಿಜೆಪಿಯವರಿಗೆ ಒಳ್ಳೆಯದು ಮಾಡೋಣ

ಬಸ್ ಟಿಕೆಟ್ ದರ ಹಾಗೂ ಹಾಲಿನ ದರ ಏರಿಕೆ ಬಗ್ಗೆ ಕೇಳಿದಾಗ, “ನೀವು ಏನು ಮಾಡಬೇಕು ಎಂದು ಹೇಳುತ್ತೀರಿ? ಬಿಜೆಪಿಯವರು ಏನು ಹೇಳುತ್ತಾರೆ? ರೈತರಿಗೆ ಕೊಡಬೇಡಿ ಎಂದು ಅವರು ಹೇಳುತ್ತಾರೆಯೇ? ಈ ಬಗ್ಗೆ ಚರ್ಚೆ ಮಾಡೋಣ” ಎಂದರು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿಲ್ಲ ಈ ಸಮಯದಲ್ಲಿ ಬಸ್ ಟಿಕೆಟ್ ದರ ಏರಿಸಿದರೆ ಪ್ರತಿಭಟಿಸುವುದಾಗಿ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ “ಅವರು ಏನು ಬೇಕಾದರೂ ಮಾಡಲಿ. ನಮ್ಮ ರಾಜ್ಯಕ್ಕೆ, ರೈತರಿಗೆ, ಬಿಜೆಪಿಯವರಿಗೆ ಒಳ್ಳೆಯದೋ ಅದನ್ನು ಮಾಡೋಣ” ಎಂದರು.

ಜಿಎಸ್ ಟಿ ಮಂಡಳಿ ಸಭೆಗೆ ಹಾಜರಾಗಲು ಇಂದು ದೆಹಲಿಗೆ ಪ್ರಯಾಣ

ಜಿಎಸ್ ಟಿ ಮಂಡಳಿ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಕೇಳಿದಾಗ, “ಜಿಎಸ್ ಟಿ ಮಂಡಳಿ ಸಭೆ ನಡೆಯುತ್ತಿದ್ದು, ಸಭೆಗೆ ತೆರಳುತ್ತಿದ್ದೇನೆ. ನಮ್ಮ ಪ್ರಾತ್ಯಕ್ಷಿಕೆಯನ್ನು ಒಂದು ದಿನ ಮುಂದೂಡಲಾಗಿದ್ದರೂ ನಾನು ಈಗಲೇ ಹೊರಟಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ. ಸಚಿವ ಕೃಷ್ಣಬೈರೇಗೌಡರು ಮುಂಚಿತವಾಗಿ ತೆರಳಿದ್ದು, ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ. ಸಿದ್ದರಾಮಯ್ಯನವರು ರಾಜ್ಯದ ಪರವಾಗಿ ತಂಡವನ್ನು ಕಳುಹಿಸುತ್ತಿದ್ದರು. ಈಗ ಸಚಿವರನ್ನು ಕಳುಹಿಸಿ, ನಾನೂ ಕೂಡ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ. ನಾಡಿದ್ದು ಗೋವಾಕ್ಕೆ ತೆರಳುತ್ತಿದ್ದು, ಪಕ್ಷದ ಕೆಲಸ ಮುಗಿಸಿ ಹಿಂತಿರುಗುತ್ತೇನೆ” ಎಂದು ಮಾಹಿತಿ ನೀಡಿದರು.

Tags: BreakingNewsCM DKSCM DKShivakumarKarnatakaNewsHeadlinesVijayasakshivijayasakshinews
ShareSendShare
Previous Post

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್: 22K, 24K ಹಾಗೂ 18K ಚಿನ್ನದ ದರದಲ್ಲಿ ಇಳಿಕೆ, ಇಂದಿನ ಸಂಪೂರ್ಣ ಬೆಲೆ ಪಟ್ಟಿ ಇಲ್ಲಿದೆ

Next Post

ಡೆಲ್ಲಿ ಕ್ಯಾಪಿಟಲ್ಸ್ʼಗೆ ಹೊಸ ಸಾರಥಿ ಸೌರವ್ ಗಂಗೂಲಿ: ಐಪಿಎಲ್ ತಂಡದ ಮುಖ್ಯ ಕೋಚ್ ಆಗಿ ‘ದಾದಾ’ ನೇಮಕ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post

ಡೆಲ್ಲಿ ಕ್ಯಾಪಿಟಲ್ಸ್ʼಗೆ ಹೊಸ ಸಾರಥಿ ಸೌರವ್ ಗಂಗೂಲಿ: ಐಪಿಎಲ್ ತಂಡದ ಮುಖ್ಯ ಕೋಚ್ ಆಗಿ ‘ದಾದಾ’ ನೇಮಕ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ವೇದಿಕೆಗಳ ಗೌರವ, ಸನ್ಮಾನ ಕಡಿಮೆಯಾಯ್ತು; ಜೀವನಕ್ಕಾಗಿ ಪ್ಲಾಸ್ಟಿಕ್ ಬುಟ್ಟಿ ಹೆಣೆಯುತ್ತಿದ್ದಾರೆ ಪದ್ಮಶ್ರೀ ಮಂಜಮ್ಮ ಜೋಗತಿ

ವೇದಿಕೆಗಳ ಗೌರವ, ಸನ್ಮಾನ ಕಡಿಮೆಯಾಯ್ತು; ಜೀವನಕ್ಕಾಗಿ ಪ್ಲಾಸ್ಟಿಕ್ ಬುಟ್ಟಿ ಹೆಣೆಯುತ್ತಿದ್ದಾರೆ ಪದ್ಮಶ್ರೀ ಮಂಜಮ್ಮ ಜೋಗತಿ

November 23, 2026
ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

November 23, 2026
ರಷ್ಯಾಗೆ ಮತ್ತೊಂದು ಆಘಾತ: ಲಿಬಿಯಾ ಬಂದರಿನಲ್ಲಿ ಉಕ್ರೇನ್ ಡ್ರೋನ್ ಅಟ್ಯಾಕ್! 2 ಹಡಗು ಮುಳುಗಡೆ

ರಷ್ಯಾಗೆ ಮತ್ತೊಂದು ಆಘಾತ: ಲಿಬಿಯಾ ಬಂದರಿನಲ್ಲಿ ಉಕ್ರೇನ್ ಡ್ರೋನ್ ಅಟ್ಯಾಕ್! 2 ಹಡಗು ಮುಳುಗಡೆ

November 23, 2026
ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬರಿಗೂ ಬಾಲ್ ಟ್ಯಾಂಪರಿಂಗ್ ಗೊತ್ತಿತ್ತು: ಎಬಿ ಡಿವಿಲಿಯರ್ಸ್

ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬರಿಗೂ ಬಾಲ್ ಟ್ಯಾಂಪರಿಂಗ್ ಗೊತ್ತಿತ್ತು: ಎಬಿ ಡಿವಿಲಿಯರ್ಸ್

November 23, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ವೇದಿಕೆಗಳ ಗೌರವ, ಸನ್ಮಾನ ಕಡಿಮೆಯಾಯ್ತು; ಜೀವನಕ್ಕಾಗಿ ಪ್ಲಾಸ್ಟಿಕ್ ಬುಟ್ಟಿ ಹೆಣೆಯುತ್ತಿದ್ದಾರೆ ಪದ್ಮಶ್ರೀ ಮಂಜಮ್ಮ ಜೋಗತಿ

ವೇದಿಕೆಗಳ ಗೌರವ, ಸನ್ಮಾನ ಕಡಿಮೆಯಾಯ್ತು; ಜೀವನಕ್ಕಾಗಿ ಪ್ಲಾಸ್ಟಿಕ್ ಬುಟ್ಟಿ ಹೆಣೆಯುತ್ತಿದ್ದಾರೆ ಪದ್ಮಶ್ರೀ ಮಂಜಮ್ಮ ಜೋಗತಿ

November 23, 2026
ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

ಭಾರತದಲ್ಲಿ ಚಿನ್ನದ ಆಮದು ಶೇ.40ರಷ್ಟು ಕುಸಿತ: 7 ತಿಂಗಳಲ್ಲಿ 24.7 ಬಿಲಿಯನ್ ಡಾಲರ್ʼಗೆ ಇಳಿಕೆ, ಕಾರಣವೇನು?

November 23, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper