ಮಂಡ್ಯ: ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮಂಡ್ಯ ಜಿಲ್ಲೆಯ ಯುವತಿ ಸಜೀವ ದಹನಗೊಂಡು ಸಾವಿಗೀಡಾದ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು ಕೆ.ಆರ್.ಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ನವ್ಯ ಎಂದು ಗುರುತಿಸಲಾಗಿದೆ.
ನವ್ಯ ಅವರ ಕುಟುಂಬವು ಪ್ರಸ್ತುತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದಲ್ಲಿ ವಾಸವಾಗಿತ್ತು. ನವ್ಯ ಬೆಂಗಳೂರಿನಲ್ಲಿ ಎಂ.ಟೆಕ್ ಶಿಕ್ಷಣ ಪೂರ್ಣಗೊಳಿಸಿ, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನೆನ್ನೆ ಬೆಂಗಳೂರಿನಿಂದ ಬಸ್ ಹತ್ತಿ ಪ್ರಯಾಣ ಬೆಳೆಸಿದ್ದ ಅವರು, ರಾತ್ರಿ ನಡೆದ ಭೀಕರ ಬಸ್ ಅಪಘಾತದಲ್ಲಿ ಸಜೀವ ದಹನಗೊಂಡು ಪ್ರಾಣ ಕಳೆದುಕೊಂಡಿದ್ದಾರೆ. ನವ್ಯ ಅವರ ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಸಂಬಂಧಿಕರು ಹಾಗೂ ಊರಿನವರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.



