HomePolitics Newsಬೊಮ್ಮಾಯಿಯವರನ್ನು ಮೀರಿಸುವ ರಾಜಕಾರಣಿಯಿಲ್ಲ

ಬೊಮ್ಮಾಯಿಯವರನ್ನು ಮೀರಿಸುವ ರಾಜಕಾರಣಿಯಿಲ್ಲ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಎಪ್ರಿಲ್ 26ರಂದು ಕರ್ನಾಟಕದಲ್ಲಿ ನಡೆದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಂಭವವಿದ್ದು, ಮೇ.7ರಂದು ನಡೆಯುವ ಇನ್ನುಳಿದ 14 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮೋದಿಯವರಿಗೆ ಕಾಣಿಕೆಯಾಗಿ ನೀಡೋಣ.

ಬೊಮ್ಮಾಯಿಯವರನ್ನು ಆಯ್ಕೆ ಮಾಡಿ ಮೋದಿಯವರ ಸಂಪುಟದಲ್ಲಿ ಸಚಿವರಾಗಿ ನಿಮ್ಮೂರಿಗೆ ವಾಪಸ್ಸು ಬಂದಾಗ ಸ್ವಾಗತಿಸಲು ಸಜ್ಜಾಗಿ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಕರೆ ನೀಡಿದರು.

ಅವರು ಪಟ್ಟಣದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರಚಾರಾರ್ಥವಾಗಿ ಸೋಮವಾರ ನಡೆದ ರೋಡ್‌ಶೋನಲ್ಲಿ ಪಾಲ್ಗೊಂಡು ಮಾತನಾಡಿದರು.

ಬಸವರಾಜ ಬೊಮ್ಮಾಯಿಯವರನ್ನು ಕೇವಲ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆ ಮಾಡುತ್ತಿಲ್ಲ, ಮೋದಿಯವರ ಸಂಪುಟದಲ್ಲಿ ಸಂಪುಟ ದರ್ಜೆ ಕೇಂದ್ರ ಸಚಿವರಾಗುವಂತಹ ಒಬ್ಬ ವ್ಯಕ್ತಿಯನ್ನು ನೀವು ಆಯ್ಕೆ ಮಾಡುತ್ತಿದ್ದೀರಿ.

ಬಸವರಾಜ ಬೊಮ್ಮಾಯಿ ಈ ಭಾಗದಲ್ಲಿ ಚಿರಪರಿಚಿತರು ಮತ್ತು ಕುಷ್ಟಗಿ ಏತ ನೀರಾವರಿ ಯೋಜನೆ, ಕಳಸಾ ಬಂಡೂರಿ ಯೋಜನೆ, ಮೇಕೆ ದಾಟು ಯೋಜನೆಗೆ ಅನುಮತಿ ನೀಡಿದವರು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಕೊಡಿಸಿದ್ದು, ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಬೊಮ್ಮಾಯಿಯವರನ್ನು ಆಯ್ಕೆ ಮಾಡುವದು ಅಗತ್ಯವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬರದಿದ್ದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ ಎನ್ನುವ ನಿಟ್ಟಿನಲ್ಲಿ 2014ರಲ್ಲಿ ನಿಮ್ಮ ಒಂದೊಂದು ಮತದ ಬಲದಿಂದ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಸಾಧ್ಯವಾಗಿದೆ. ಅಂದಿನಿಂದ ಇಂದಿನವರೆಗೂ ದೇಶ ಸುಭಿಕ್ಷೆಯಿಂದ, ಪ್ರಗತಿಯಿಂದ ಸಾಗುವಂತೆ ಮಾಡಿದ ಕೀರ್ತಿ ಮೋದಿಜೀಯವರಿಗೆ ಸಲ್ಲುತ್ತದೆ. ನಿಮ್ಮ ಮತ ಬೊಮ್ಮಾಯಿಯವರನ್ನು ಕೇಂದ್ರದಲ್ಲಿ ಒಬ್ಬ ಸಚಿವರನ್ನಾಗಿ ಮಾಡಲಿದೆ. ನೀರಾವರಿ ವಿಚಾರದಲ್ಲಿ ಅವರನ್ನು ಮೀರಿಸುವ ರಾಜಕಾರಣಿ ಇನ್ನೊಬ್ಬರಿಲ್ಲ ಎಂದರು.

ರೋಡ್‌ಶೋ ಶಿಗ್ಲಿ ನಾಕಾ ಬಳಿ ಪ್ರಾರಂಭವಾಗಿ ಬಜಾರ ರಸ್ತೆ, ಹಾವಳಿ ಹನುಮಂತದೇವರ ದೇವಸ್ಥಾನ, ದರ್ಗಾ ರಸ್ತೆ, ಕೋರ್ಟ್ ರಸ್ತೆಯಟ್ಮೂಲಕ ಹಾಯ್ದು ಪಂಪ ಸರ್ಕಲ್ ಬಳಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಸಣ್ಣಿರಪ್ಪ ಹಳ್ಳೆಪ್ಪನವರ, ಮಂಜುನಾಥ ಮಾಗಡಿ, ಶಿವಪ್ರಕಾಶ ಮಹಾಜನಶೆಟ್ರ, ಪ್ರವೀಣ ಬಾಳಿಕಾಯಿ, ಡಿ.ವಾಯ್. ಹುನಗುಂದ, ಭರತ ಬೊಮ್ಮಾಯಿ, ಸುನೀಲ ಮಹಾಂತಶೆಟ್ಟರ, ಪೂರ್ಣಾಜಿ ಖರಾಟೆ, ನಿಂಗಪ್ಪ ಬನ್ನಿ ಸೇರಿದಂತೆ ಅನೇಕ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದ ಉತ್ತಮ ಭವಿಷ್ಯಕ್ಕಾಗಿ, ಭಾರತದ ಸುರಕ್ಷತೆಗಾಗಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲಿದೆ. ದಕ್ಷ, ಪ್ರಾಮಾಣಿಕ ದೇಶಭಕ್ತ ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img