HomeKarnataka Newsಹಾಡಹಗಲೇ ಬೈಕ್ ಎಗರಿಸಿದ ಕಳ್ಳ! ಮಾಲೀಕನ ನಿರ್ಲಕ್ಷ್ಯವೇ ಕೃತ್ಯಕ್ಕೆ ಕಾರಣ

ಹಾಡಹಗಲೇ ಬೈಕ್ ಎಗರಿಸಿದ ಕಳ್ಳ! ಮಾಲೀಕನ ನಿರ್ಲಕ್ಷ್ಯವೇ ಕೃತ್ಯಕ್ಕೆ ಕಾರಣ

For Dai;y Updates Join Our whatsapp Group

ಬೆಂಗಳೂರು: ಲಕ್ಕಸಂದ್ರದಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳನೊಬ್ಬ ಹಾಡಹಗಲೇ ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.

ಮಾಲೀಕರ ಸಣ್ಣ ನಿರ್ಲಕ್ಷ್ಯವೇ ಕಳ್ಳನಿಗೆ ಅವಕಾಶ ನೀಡಿದಂತಾಗಿದೆ.

ಏಪ್ರಿಲ್ 9ರಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಲಕ್ಕಸಂದ್ರದ 16ನೇ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ನಿವಾಸಿಯೊಬ್ಬರು ತಮ್ಮ ಸುಜುಕಿ ಆಕ್ಸೆಸ್ 125 ಬೈಕ್ ಅನ್ನು ಮನೆ ಮುಂದೆ ನಿಲ್ಲಿಸಿದ್ದರು. ಆದರೆ ಕೀ ತೆಗೆದುಕೊಳ್ಳದೇ ಮರೆತು ಹೋಗಿದ್ದರಿಂದ ಬೈಕ್ ಅಲ್ಲಿಯೇ ನಿಂತಿತ್ತು.

ಈ ವೇಳೆ ಅದೇ ಪ್ರದೇಶದಲ್ಲಿ ತಿರುಗುತ್ತಿದ್ದ ಕಳ್ಳನೊಬ್ಬ ಪರಿಸ್ಥಿತಿಯನ್ನು ಗಮನಿಸಿ, ಯಾರೂ ಇಲ್ಲದ ಅವಕಾಶವನ್ನು ಬಳಸಿಕೊಂಡು ಬೈಕ್ ಸ್ಟಾರ್ಟ್ ಮಾಡಿ ಸುಲಭವಾಗಿ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿವೆ.

ಬೈಕ್ ಕಳುವಾಗಿರುವುದನ್ನು ಗಮನಿಸಿದ ಮಾಲೀಕರು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img