Homehubballiಯುಪಿಐ ಮೂಲಕ ಟಿಕೆಟ್ ವಿತರಣೆ

ಯುಪಿಐ ಮೂಲಕ ಟಿಕೆಟ್ ವಿತರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ವಾಹನಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಿ, ಸಾರಿಗೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯನ್ನು ಉತ್ತಮಪಡಿಸಲು ಕೆಎಸ್‌ಆರ್‌ಟಿಸಿಯಲ್ಲಿ ನಗದುರಹಿತ UPI ವಹಿವಾಟುಗಳ ಮೂಲಕ ಟಿಕೆಟ್ ವಿತರಣೆಯನ್ನು ಪ್ರಾಯೋಗಿಕವಾಗಿ 01-09-2023ರಿಂದ ಪ್ರಾರಂಭಿಸಿ, ಪೆಬ್ರುವರಿ-2024ರಂದು ಪೂರ್ಣ ಪ್ರಮಾಣದಲ್ಲಿ ಸಂಸ್ಥೆಯ 50 ಘಟಕಗಳಲ್ಲಿ ಅಳವಡಿಸಲಾಗಿದೆ.

13-10-2024ರವರೆಗೆ UPI ವಹಿವಾಟಿನಿಂದ ಒಟ್ಟು 55.96 ಲಕ್ಷ ವಹಿವಾಟು (Transaction) ಗಳಿಂದ ರೂ. 50.53 ಕೋಟಿ ಸಂಗ್ರಹವಾಗಿರುತ್ತದೆ. ಪ್ರಸ್ತುತ ಪ್ರತಿ ದಿನ ಸರಾಸರಿ 27000 ವಹಿವಾಟುಗಳಿಂದ ರೂ.22.52 ಲಕ್ಷಗಳಷ್ಟು ಸಂಗ್ರಹವಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಭಾ.ಆ.ಸೇ.ರವರು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img