HomeMandya‘ವೀರಗಾಸೆ ಎಂದರೆ ಮಹದೇವಪ್ಪ’: ಮೇರು ಕಲಾವಿದನ ಅಗಲಿಕೆಗೆ ಚೆಲುವರಾಯಸ್ವಾಮಿ ಕಂಬನಿ

‘ವೀರಗಾಸೆ ಎಂದರೆ ಮಹದೇವಪ್ಪ’: ಮೇರು ಕಲಾವಿದನ ಅಗಲಿಕೆಗೆ ಚೆಲುವರಾಯಸ್ವಾಮಿ ಕಂಬನಿ

For Dai;y Updates Join Our whatsapp Group

ಮಂಡ್ಯ: ವೀರಗಾಸೆ ಕಲೆಗೆ ಜೀವ ತುಂಬಿದ ಹಿರಿಯ ಜಾನಪದ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹದೇವಪ್ಪ ಅವರ ನಿಧನಕ್ಕೆ ಮಾಜಿ ಸಚಿವ ಚೆಲುವರಾಯಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ತಾಲೂಕಿನ ಹಳ್ಳಿಯಿಂದ ಹೊರಹೊಮ್ಮಿ ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಮಂಡ್ಯದ ಹೆಸರನ್ನು ಪಸರಿಸಿದ್ದ ಮಹದೇವಪ್ಪ, ವೀರಗಾಸೆ ಕಲೆಯ ಜೀವಂತ ಪ್ರತೀಕವಾಗಿದ್ದರು. “ವೀರಗಾಸೆ ಎಂದರೆ ಮಹದೇವಪ್ಪ, ಮಹದೇವಪ್ಪ ಎಂದರೆ ವೀರಗಾಸೆ” ಎಂಬ ಮಟ್ಟಿಗೆ ಅವರು ಜನಮನದಲ್ಲಿ ಸ್ಥಾನ ಪಡೆದಿದ್ದರು ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಮಹದೇವಪ್ಪ, ನೂರಾರು ಶಿಷ್ಯರನ್ನು ರೂಪಿಸಿ ಜಾನಪದ ಕಲೆಯ ಉಳಿವಿಗೆ ಶ್ರಮಿಸಿದ್ದರು. ಮೈಸೂರು ದಸರಾ, ಹಂಪಿ ಉತ್ಸವ ಸೇರಿದಂತೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಅವರ ಕಲಾಪ್ರದರ್ಶನ ರಾಜ್ಯದ ಹೆಮ್ಮೆ ಹೆಚ್ಚಿಸಿತ್ತು.

ಇಂತಹ ಮೇರು ಕಲಾವಿದರ ಕುಟುಂಬಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕು. ಅವರ ಹೆಸರಿನಲ್ಲಿ ಜಾನಪದ ಪ್ರಶಸ್ತಿ ಸ್ಥಾಪಿಸಿ, ಮುಂದಿನ ಪೀಳಿಗೆಗೆ ಅವರ ಸಾಧನೆಯನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಚೆಲುವರಾಯಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಹದೇವಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ, ಶಿಷ್ಯರು ಮತ್ತು ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img