ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ ಇವರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಡಾ. ರಂಜಿತಾ ಎನ್.ಮಲ್ಲಾಡದ ಮಾತನಾಡಿ, ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಹೆಜ್ಜೆ ಮೂಡಿಸುತ್ತಿದ್ದಾಳೆ. ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎಂಬುದಕ್ಕೆ ಇಂದಿನ ಮಹಿಳೆಯರು ಸಾಕ್ಷಿಯಾಗಿದ್ದಾರೆ. ಆದರೆ ಆಕೆ ಸಾಧನೆ ಮಾಡಲು ಪ್ರೋತ್ಸಾಹ ಅಗತ್ಯ. ಕುಟುಂಬದ ಸದಸ್ಯರು ಅವಳಿಗೆ ಆಸರೆಯಾಗಿ ನಿಂತರೆ ಯಾವುದೇ ಕೆಲಸವನ್ನಾದರೂ ಮಹಿಳೆ ಮಾಡಬಲ್ಲಳು ಎಂದರು.
ಇಂದುಮತಿ ಎಸ್.ಪಿಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆರುಂಧತಿ ಎಸ್.ಬಳಿಗಾರ ಕಾರ್ಯಕ್ರಮ ಉದ್ಘಾಟಿಸಿದರು. ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಲಲಿತಕ್ಕ ಕೆರಿಮನಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿರ್ಮಲಾ ಅರಳಿ, ಸರೋಜಕ್ಕ ಬನ್ನೂರ, ಶಾರದಾ ಬಟಗುರ್ಕಿ, ಕಾಂಚನಾ ಹಸರೆಡ್ಡಿ, ಅರುಂಧತಿ ಬಿಂಕದಕಟ್ಟಿ, ಚಿತ್ರಾ ಹಣಗಿ, ಅಂಕಿತಾ ಅರಳಿ, ಅನ್ನಕ್ಕ ಯಾಳಗಿ, ಮಂಜುಳಾ ಓದುನವರ, ಕುಸುಮಾ ಮಲ್ಲಾಡದ, ಸುಲೋಚನ ಜವಾಯಿ, ರೂಪಾ ಕಳ್ಳಿಗುಡ್ಡ, ವಿಜಯಲಕ್ಷ್ಮಿ ಪಿಳ್ಳಿ, ಮಂಜುಳಾ ಪಿಳ್ಳಿ, ಪ್ರತಿಮಾ ಮಹಾಜನಶೆಟ್ಟ, ಕವಿತಾ ಅರಳಹಳ್ಳಿ, ಪಾರ್ವತಿ ಕಳ್ಳಿಮಠ ಮತ್ತಿತರರು ಇದ್ದರು. ಎಚ್.ಡಿ. ನಿಂಗರೆಡ್ಡಿ ಸ್ವಾಗತಿಸಿದರು. ಡಿ.ಎಫ್. ಪಾಟೀಲ ನಿರೂಪಿಸಿದರು. ನೀಲಾ ಕುಂಬಿ ವಂದಿಸಿದರು.