HomeCrime Newsಲಕ್ಷ್ಮೇಶ್ವರ ಯುವಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ಮುಖಂಡ ಸೇರಿ 8 ಮಂದಿ ವಿರುದ್ಧ...

ಲಕ್ಷ್ಮೇಶ್ವರ ಯುವಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ಮುಖಂಡ ಸೇರಿ 8 ಮಂದಿ ವಿರುದ್ಧ ಕೇಸ್!

For Dai;y Updates Join Our whatsapp Group

ಗದಗ: ಜಿಲ್ಲೆಯ ಲಕ್ಷ್ಮೇಶ್ವರದ ತಟ್ಟಿಯವರ ಲೇಔಟ್‌ನಲ್ಲಿ ಬುಧವಾರ ಹಾಡುಹಗಲೇ ನಡೆದ ಇರ್ಫಾನ್ ತಹಶೀಲದಾರ (34) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೋರ್ಟ್‌ನಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿ, ಕೊಲೆ ಬೆದರಿಕೆ ಹಾಕುತ್ತಿದ್ದವರು ಕೊಲೆಗೆ ಪ್ರಚೋದನೆ ನೀಡಿದ್ದರು ಎಂದು ಮೃತನ ಸಹೋದರ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಪೊಲೀಸ್ ದಾಖಲೆಯ ಪ್ರಕಾರ, ಅಯಾಜ್ ತಂದೆ ಅಬ್ದುಲರೆಹಮಾನ ಮುಲ್ಲಾ, ಮಹಮ್ಮದ್ ವಸೀಮ್ ತಂದೆ ಮಹಮ್ಮದ್ ಜಾಫರ್‌ಸಾಬ್ ಮುಲ್ಲಾ ಹಾಗೂ ಮಹಮ್ಮದ್ ಸೂಫಿಯಾನ್ ತಂದೆ ಜಬೀವುಲ್ಲಾ ಎಂಬ ಮೂವರು ಇರ್ಫಾನ್ ಮೇಲೆ ಚಾಕು ಹಾಗೂ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಬ್ದುಲ್ ತಂದೆ ಮೈನುದ್ದೀನ ಆಡೂರ, ಕಾಂಗ್ರೆಸ್ ಮುಖಂಡ, ಪುರಸಭೆಯ ಮಾಜಿ ಸದಸ್ಯ ಫಿರ್ದೋಷ ತಂದೆ ಮೈನುದ್ದೀನ ಆಡೂರ, ಸುಲೇಮಾನ ತಂದೆ ಮೈನುದ್ದೀನ ಆಡೂರ, ಅತ್ತಾರ ತಂದೆ ಮೈನುದ್ದೀನ ಆಡೂರ ಹಾಗೂ ಗೌಸ ಸವಣೂರ ಅವರು ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿ ಕೃತ್ಯಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಪ್ರಕರಣದಲ್ಲಿ ನೇರವಾಗಿ ಹಲ್ಲೆ ನಡೆಸಿದ ಆರೋಪ ಮೂವರ ಮೇಲಿದ್ದರೆ, ಪ್ರಚೋದನೆ ಹಾಗೂ ದುಷ್ಪ್ರೇರಣೆಯ ಆರೋಪ ಐವರ ಮೇಲಿದೆ. ಒಟ್ಟಾರೆ 8 ಮಂದಿ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋರ್ಟ್‌ ಕೇಸ್‌ ರಾಜಿಗೆ ಒತ್ತಡ?

ಮೃತ ಇರ್ಫಾನ್ ಕುಟುಂಬದವರೊಂದಿಗೆ ಆರೋಪಿಗಳು ದ್ವೇಷ ಹೊಂದಿದ್ದರು ಹಾಗೂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಈ ವಿಚಾರವಾಗಿ ಕೊಲೆ ಬೆದರಿಕೆಯನ್ನೂ ಹಾಕಲಾಗುತ್ತಿತ್ತು ಎಂದು ಫಿರ್ಯಾದಿನಲ್ಲಿ ತಿಳಿಸಲಾಗಿದೆ. ಇದೇ ಹಿನ್ನೆಲೆ ಕೊಲೆಗೆ ಕಾರಣವಾಗಿರಬಹುದು ಎಂಬ ಅಂಶವೂ ದೂರಿನಲ್ಲಿ ದಾಖಲಾಗಿದೆ.

ಸೆ.23ರಂದು ಮಧ್ಯಾಹ್ನ 2.30ರ ಸುಮಾರಿಗೆ ತಟ್ಟಿಯವರ ಲೇಔಟ್‌ನಲ್ಲಿ ಇರ್ಫಾನ್ ಮೇಲೆ ದಾಳಿ ನಡೆದಿದ್ದು, ನಂತರ ಪ್ರಕರಣ ದಾಖಲಾಗಿದೆ. ಮೃತನ ಸಹೋದರ ಮೈನುದ್ದೀನ ತಹಶೀಲದಾರ (32) ನೀಡಿದ ದೂರಿನ ಆಧಾರದ ಮೇಲೆ ಗುನ್ನೆ ನಂ.179/2026ರಲ್ಲಿ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ತನಿಖೆಯನ್ನು ಪಿಎಸ್‌ಐ ಆನಂದ ಕ್ಯಾರಕಟ್ಟಿ ಕೈಗೊಂಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img