ವಿಜಯಸಾಕ್ಷಿ ಸುದ್ದಿ, ಕುಷ್ಟಗಿ: ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಬಸ್‌ಗೆ ಕಲ್ಲು ತೂರಿದ ಘಟನೆ ನಡೆದಿದೆ. ಕಿಡಿಗೇಡಿಗಳು ಬಸ್‌ಗೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದ್ದು, ಕೃತ್ಯಕ್ಕೆ ಕಾರಣರಾದವರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಕೊಪ್ಪಳದಿಂದ ವಿಜಯಪುರಕ್ಕೆ ಹೊರಟಿದ್ದ ಬಸ್‌ಗೆ ಕಲ್ಲು ಎಸೆಯಲಾಗಿದೆ.
Advertisement
ಕೆ ಎ 37, ಎಫ್ 0911 ಬಸ್ ಗಾಜಿಗೆ ಕಲ್ಲು ತೂರಲಾಗಿದೆ. ನಿನ್ನೆ ರಾತ್ರಿ ಬಸ್ ಗ್ಲಾಸ್‌ಗೆ ಕಲ್ಲು ಎಸೆದಿದ್ದಾರೆ. ನಿನ್ನೆ ರಾತ್ರಿ ಒತ್ತಾಯ ಪೂರ್ವಕವಾಗಿ ಬಸ್ ಬಿಡಲಾಗಿತ್ತು.
ಬಸ್ ಬಿಟ್ಟ ಹಿನ್ನೆಲೆ ಸಿಬ್ಬಂದಿಗಳೇ ಬಸ್‌ಗೆ ಕಲ್ಲು ಎಸೆದಿರೋ ಶಂಕೆ ವ್ಯಕ್ತವಾಗಿದೆ. ಇಂದೂ ಸಹ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಈ ಕುರಿತು ಕುಷ್ಟಗಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಬಸ್ ನಿಲ್ದಾಣದ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.