26.4 C
Gadag
Thursday, December 8, 2022
spot_img
spot_img

ದಸರಾ, ಈದ್ ಮಿಲಾದ್ ಅಂಗವಾಗಿ ಶಾಂತಿ ಸಭೆ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಶುಕ್ರವಾರ ದಸರಾ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಸ್‌ಐ ಬಸವರಾಜ ಕೊಳ್ಳಿ ಮಾತನಾಡಿ, ದಸರಾ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಸಂದರ್ಭದಲ್ಲಿ, ಸರ್ಕಾರ ಹೊರಡಿಸಿರುವ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳ ನಾಗರಿಕರು ಎಚ್ಚರಿಕೆಯಿಂದ ಹಬ್ಬ ಹರಿದಿನಗಳನ್ನು ಮಾಡಬೇಕಾಗಿದೆ ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ. ನವಲಗುಂದ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಈ ರೋಗ ಮಾತ್ರ ಹತೋಟಿಗೆ ಬರುವ ಲಕ್ಷಣಗಳನ್ನು ಗೋಚರಿಸುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಕೊರೊನಾ ವೈರಸ್ ಬಗ್ಗೆ ಜಾಗೃತಿಗೊಂಡು ಪ್ರಸಕ್ತ ಸಾಲಿನ ಎಲ್ಲ ಹಬ್ಬಗಳನ್ನು ಮನೆಯಲ್ಲಿಯೇ ಆಚರಿಸಬೇಕಾಗಿದೆ ಎಂದರು.
ಅಬ್ಬಿಗೇರಿ ಗ್ರಾಮದ ಹಿರಿಯರಾದ ಅಂದಪ್ಪ ವೀರಾಪೂರ, ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತು ಕಡಗದ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಸಂತೋಷದ ವಿಷಯವಾಗಿದೆ. 10 ವರ್ಷದ ಒಳಗಿನ ಚಿಕ್ಕ ಮಕ್ಕಳು ಹಾಗೂ ವೃದ್ಧರು ಹಬ್ಬದ ಸಮಯದಲ್ಲಿ ಹೊರಗೆ ಬರುವಾಗ ಅಥವಾ ಹಬ್ಬವನ್ನು ಆಚರಣೆ ಮಾಡುವ ವೇಳೆ ಮಾಸ್ಕ್ ಧರಿಸಿಕೊಂಡು ಆಚರಿಸಬೇಕು ಎಂದರು.
ತಾ.ಪಂ ಸದಸ್ಯ ಅಂದಾನಪ್ಪ ದೊಡ್ಡಮೇಟಿ, ಅಶೋಕ ಬೇವಿನಕಟ್ಟಿ, ನಿಂಗಪ್ಪ ಕಣವಿ, ಯಲ್ಲಪ್ಪ ಮಣ್ಣೊಡ್ಡರ, ಅಲ್ಲಾಭಕ್ಷಿ ನದಾಫ, ರಾಜೇಶ ಅಂಗಡಿ, ಸಂತೋಷ ಹನಮಸಾಗರ, ಎಂ.ಕೆ. ಕಾಳಗಿ, ಅಂದಾನಯ್ಯ ಮಾಲಗಿತ್ತಿಮಠ, ಮಲ್ಲರಡ್ಡಿ ರಡ್ಡೇರ, ರಕ್ಷಿತಗೌಡ ಪಾಟೀಲ, ಎಸ್.ಎಫ್. ಅಂಗಡಿ, ಕೃಷ್ಣಾ ಜುಟ್ಲದ, ಶಿವನಗೌಡ ಪಾಟೀಲ, ಮಹೇಶ ಶಿವಶಿಂಪರ, ಹನಮಂತಪ್ಪ ದ್ವಾಸಲ್, ಮಹೇಶ ಬಾಗಲಿ, ಶರಣಪ್ಪಗೌಡ ಕರಮುಡಿ, ಹುಸೇನಸಾಬ ಮಾಕಿ, ಬಾಬುಸಾಬ ರಾಹುತ, ಎಂ.ಎಚ್. ಜಾಲಿಹಾಳ, ಈರಪ್ಪ ಜೋಗಿ, ಸತೀಶ ಮಾಳವಾಡ, ಸಂತೋಷ ಕಡೆತೋಟದ, ಬಸವರಾಜ ವೀರಾಪೂರ, ಕಾಶೀಮಸಾಬ ದೊಟ್ಟಿಹಾಳ, ನಿಂಗಪ್ಪ ಹೊನ್ನಾಪೂರ, ಹಟೇಲಸಾಬ ಲತೀಪನವರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು. ನಾಗರಾಜ ಮಂಗಳೂರ ನಿರ್ವಹಿಸಿದರು.
 


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,601FollowersFollow
0SubscribersSubscribe
- Advertisement -spot_img

Latest Posts

error: Content is protected !!