HomeBengaluru News`ಒಬ್ಬಟ್ಟು' ಸಿನಿಮಾಗೆ ಯು/ಎ ಸರ್ಟಿಫಿಕೇಟ್

`ಒಬ್ಬಟ್ಟು’ ಸಿನಿಮಾಗೆ ಯು/ಎ ಸರ್ಟಿಫಿಕೇಟ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಕೀರ್ತನಾ ಮೂವ್ಹಿ ಮೇರ‍್ಸ್ ಬೆಂಗಳೂರು ಅವರ, ಲೋಕೇಶ್ ವಿದ್ಯಾಧರ ನಿರ್ದೇಶನದ ‘ಒಬ್ಬಟ್ಟು’ ಕನ್ನಡ ಚಲನಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ.

ಹಾಸ್ಯಭರಿತ ಕಥಾಸಾರ ಹೊಂದಿದ ‘ಒಬ್ಬಟ್ಟು’ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿ ಸಾಗ್ಯ ಸರಗೂರು ಗ್ರಾಮದಲ್ಲಿ ಮಾಡಲಾಗಿದೆ. ಕೊಲೆ ರಹಸ್ಯ ಭೇದಿಸುವ ಒಂದು ಹಾಸ್ಯಪೂರಿತ ಮನರಂಜನೆಯನ್ನೊಳಗೊಂಡ ಕಥೆಯಿರುವ ಚಿತ್ರವಾಗಿದ್ದು, ಒಬ್ಬಟ್ಟಿನ ರುಚಿಯನ್ನು ಥೇಟರ್‌ಗಳಲ್ಲೇ ಪ್ರೇಕ್ಷಕರು ಬಂದು ನಗೆಹೂರಣದ ಸವಿಯನ್ನು ಸವಿಯಬೇಕು. ಶೀಘ್ರದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವದಾಗಿ ನಿರ್ದೇಶಕ, ನಿರ್ಮಾಪಕ ಲೋಕೇಶ ವಿದ್ಯಾಧರ ಹೇಳುತ್ತಾರೆ.

ಚಿತ್ರದಲ್ಲಿ ನಾಯಕ ಅಮಿತ್‌ರಾವ್, ಕಿರುತೆರೆ, ಚಲನಚಿತ್ರ ಕಲಾವಿದೆ ಸುನಂದ ಕಲ್ಬುರ್ಗಿ, ಲೋಕೇಶ್ ವಿದ್ಯಾಧರ, ಮಂಡ್ಯ ನಾಗರಾಜ್, ಮುತ್ತುರಾಜ್ ಟಿ, ರಾಜು ಅರಸಿಕೆರೆ, ರೋಹಿಣಿ, ಧನಲಕ್ಷ್ಮಿ, ಮಂಜುಳಾ ಕೆಂಪೇಗೌಡ್ರು, ಸತೀಶ್ ಶೆಟ್ಟಿ, ರವಿ, ನಂಜಪ್ಪ ಡಿ.ಎಸ್ ಮುಂತಾದವರು ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಬೆಟ್ಟೇಗೌಡ ಕೀಲಾರ, ಸ್ವರ ಸಂಯೋಜನೆ ಮತ್ತು ಹಾಡುಗಾರಿಕೆ ಎ.ಪಿ. ರವಿಕೀರ್ತಿ, ನೃತ್ಯ ಅಲ್ಲಿನ್ ಎ, ಸಾಹಸ ಸೂರ್ಯ, ಸಂಕಲನ ಸಂಜೀವರೆಡ್ಡಿ, ಪ್ರಸಾಧನ ಯತೀಶ, ಸಹಕಾರ ಆನಂದ ಆರ್ಟ್ಸ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಲೋಕೇಶ್ ವಿದ್ಯಾಧರ, ನಿರ್ಮಾಪಕರು ಸುನಂದಾ ಕಲ್ಬುರ್ಗಿ ಮತ್ತು ಲೋಕೇಶ್ ವಿದ್ಯಾಧರ ಆಗಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!