HomeEducationಜೀವನ ಪರಿಪೂರ್ಣತೆಗೆ ವಿದ್ಯೆ ಅಗತ್ಯ : ಪ್ರಭುಲಿಂಗ ದೇವರು

ಜೀವನ ಪರಿಪೂರ್ಣತೆಗೆ ವಿದ್ಯೆ ಅಗತ್ಯ : ಪ್ರಭುಲಿಂಗ ದೇವರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಆಧುನಿಕ ಜೀವನದಲ್ಲಿ ವಿದ್ಯೆ ಎಂಬ ಆಸ್ತಿ ಇದ್ದಲ್ಲಿ ಜೀವನ ಪರಿಪೂರ್ಣತೆಗೊಳ್ಳಲು ಸಾಧ್ಯವಾಗುತ್ತದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.

ಅವರು ಪಟ್ಟಣದ ಬೀರಲಿಂಗೇಶ್ವರ ಸೇವಾ ಸಮಿತಿಯ ಹಾಲುಮತ ಸಮಾಜದ ವತಿಯಿಂದ 2023/24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯತ್ತಮ ಅಂಕ ಪಡೆದ ವಿದ್ಯಾರ್ಥಿ/ನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ಇಂದು ಪ್ರತಿಯೊಬ್ಬ ಮಗುವಿನಲ್ಲಿ ತನ್ನದೇ ಆದ ಪ್ರತಿಭೆಗಳು ಇದ್ದು, ಅವುಗಳನ್ನು ಹೆಕ್ಕಿ ತೆಗೆಯುವ ಕೇಲಸವಾಗಬೇಕಿದೆ. ಅದಕ್ಕೆ ಪೂರಕವಾಗಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ವಾತಾವರಣ ನೀಡಿದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ.

ಮಕ್ಕಳು ಗುರುಗಳು ಹೇಳಿದ ಪಾಠವನ್ನು ಶ್ರದ್ಧೇಯಿಂದ, ಗಮನವಿಟ್ಟು ಆಲಿಸಿದಲ್ಲಿ ಉತ್ತಮ ಅಂಕಗಳನ್ನು ಪಡೆದು ತಂದೆ-ತಾಯಿಗಳಿಗೆ, ಕಲಿಸಿದ ಗುರುಗಳಿಗೆ, ಶಾಲೆಗೆ ಹಾಗೂ ಸಮಾಜಕ್ಕೆ ಕೀರ್ತಿ ತರಲು ಸಾಧ್ಯವಾಗುತ್ತದೆ. ಸತತ 14 ವರ್ಷಗಳಿಂದ ಪ್ರತಿಭಾವಂತ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ಹಾಲುಮತ ಸಮಾಜದ ಈ ಕಾರ್ಯ ನೀಜಕ್ಕೂ ಶ್ಲಾಘನಿಯ ಎಂದರು.

ನಿವೃತ್ತ ಆರ್‌ಟಿಓ ಬಿ.ಡಿ. ಹರ್ತಿ ಮಾತನಾಡಿ, ಮಕ್ಕಳು ಮನಸ್ಸು ಮಾಡಿದರೆ ಮಾರ್ಗ ತಾನಾಗೇ ತೆರೆದುಕೊಳ್ಳುತ್ತದೆ. ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಹಂಚುತ್ತಾ ಹೋದಂತೆಲ್ಲಾ ನಮ್ಮಲ್ಲಿ ಜ್ಞಾನ ಹೆಚ್ಚುತ್ತಾ ಹೋಗುತ್ತದೆ ಎಂದರು.

ಫಕ್ಕೀರಯ್ಯ ಅಮೋಘಿಮಠ, ಎಂ.ಡಿ. ಬಟ್ಟೂರ, ಎಸ್.ಸಿ. ಬಡ್ನಿ, ಡಾ. ಎಸ್.ಸಿ. ಚವಡಿ, ರಾಮಣ್ಣಾ ಕಮಾಜಿ, ಬಸವರಾಜ ಸುಂಕಾಪೂರ, ಮಾಹಾಂತಪ್ಪ ನೀಲಗುಂದ, ಮಾಹಾದೇವಪ್ಪ ಗಡಾದ, ರಾಮಣ್ಣ ಹಾಳಕೇರಿ, ಗೀತಾ ತಿರ್ಲಾಪೂರ, ಎಸ್.ಬಿ. ದೊಡ್ಡಣ್ಣವರ, ಮಂಜುನಾಥ ಜಂಪಾಳಿ, ಪದ್ಮಾ ಕುಂದಗೋಳ, ಸೇರಿದಂತೆ ಸಮಾಜ ಬಾಂಧವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img