ವಿಜಯಸಾಕ್ಷಿ ಸುದ್ದಿ, ಗದಗ : ಕಾಂಗ್ರೆಸ್ ಚುನಾವಣಾ ವೆಚ್ಚಕ್ಕೆ ಬಳಕೆಯಾಗಿರುವ ವಾಲ್ಮೀಕಿ ನಿಗಮದಲ್ಲಿ ಸರಕಾರಿ ಹಣದ ವರ್ಗಾವಣೆಯ ಗೋಲ್‌ಮಾಲ್, ಪರಿಶಿಷ್ಟ ಪಂಗಡದ ಅನುದಾನದ 187 ಕೋಟಿ ರೂ. ಸಂಶಯಾತ್ಮಕ ಖಾತೆಗಳಿಗೆ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಎಸ್.ಟಿ. ಮೋರ್ಚಾ ವತಿಯಿಂದ ಜೂನ್ 28ರ ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬಿಜೆಪಿಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಹಿರಿಯರು, ಹಿತೈಷಿಗಳು ಆಗಮಿಸಬೇಕೆಂದು ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ಎಸ್.ಟಿ. ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಈಶ್ವರಪ್ಪ ಹು.ರಂಗಪ್ಪನವರ, ಪ್ರ.ಕಾ. ವಾಯ್.ಪಿ. ಅಡ್ನೂರ, ಯಲ್ಲಪ್ಪ ಶೆರಿ, ಪ್ರಮುಖರಾದ ಈಶಪ್ಪ ನಾಯ್ಕರ, ಎಚ್.ಕೆ. ಹಟ್ಟಿಮನಿ, ನಾಗರಾಜ ತಳವಾರ, ಮಂಜುನಾಥ ತಳವಾರ, ಗೋವಿಂದಪ್ಪ ಪೂಜಾರ, ಬಸವರಾಜ ಹರ್ಲಾಪೂರ, ರಂಗಪ್ಪ ಯರಗುಡಿ, ವಸಂತ ವಾಲ್ಮೀಕಿ, ರಾಜಕುಮಾರ ಕೊನಣ್ಣವರ ಮುಂತಾದವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



