HomeGadag Newsಕರವೇ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನ

ಕರವೇ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ಕರವೇ ನೂತನ ಜಿಲ್ಲಾಧ್ಯಕ್ಷರಾದ ಹನಮಂತಪ್ಪ ಹೆಚ್.ಅಬ್ಬಿಗೇರಿ ಅವರನ್ನು ಗದಗ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ನನ್ನ ಮೇಲೆ ನಂಬಿಕೆ-ವಿಶ್ವಾಸವಿಟ್ಟು ಮತ್ತೊಮ್ಮೆ ಗದಗ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಲು, ನಾಡು-ನುಡಿ, ನೆಲ-ಜಲಕ್ಕಾಗಿ, ಕನ್ನಡದ ಉಳಿವಿಗಾಗಿ ಶ್ರಮಿಸುತ್ತೇನೆ ಎಂದರು.

ಮಹಿಳಾ ಘಟಕದ ಆಶಾ ಜೂಲಗುಡ್ಡ, ರೇಷ್ಮಾ ಅಬ್ಬಿಗೇರಿ, ಲಕ್ಷ್ಮಿ ಹಿತ್ತಲಮನಿ, ರತ್ನಮ್ಮ ಯಲಬುರ್ಗಾ, ಶೋಭಾ ಕಲಾಲ್, ಸಾವಿತ್ರಿ ಅತ್ತಿಗೆರೆ, ಮಾಲಾ ಪಾಟೀಲ್, ರೇಷ್ಮಾ, ಸುಮಾ, ಕವಿತಾ, ಪಾರ್ವತಿ, ಶಿವಪುತ್ರಮ್ಮ, ಮುತ್ತಣ್ಣ ಚೌಡಣ್ಣನವರ್, ವಿನಾಯಕ ಬದಿ, ಶರಣಪ್ಪ ಕರಮುಡಿ, ಕುಮಾರ ರೇವಣ್ಣವರ್, ಶಿವು ಮಠದ, ದಾವಲಸಾಬ ತಹಸೀಲ್ದಾರ್, ತೌಶಿಫ್ ಡಾಲಾಯತ್, ಸಲಿಂ ಶಿರವರ್, ಸುಲೇಮಾನ್ ಮಂಜಳಾಪುರ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!