ನನ್ನ ಮಗನ ಬದುಕನ್ನು ಆ ಧೋನಿ ಹಾಳು ಮಾಡ್ದ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿಗ ಗಂಭೀರ ಆರೋಪ ಮಾಡಿದ್ದಾರೆ.
ಯೋಗರಾಜ್ ಸಿಂಗ್ರವರು ಟೀಂ ಇಂಡಿಯಾದ ಮಾಜಿ ಆಲ್ರೌಂಡರ್, ಸಿಕ್ಸರ್ ಸಿಂಗ್ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್ ಸಿಂಗ್ರವರ ತಂದೆ. ಇವರು ಕೂಡ ಮಾಜಿ ಕ್ರಿಗೆಟಿಗರು ಮತ್ತು ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆದರೀಗ ಧೋನಿ ಕುರಿತಾಗಿ ಅವರಾಡಿದ ಮಾತುಗಳು ವೈರಲ್ ಆಗಿವೆ.
ನಾನು ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಅವರು ಶ್ರೇಷ್ಠ ಕ್ರಿಕೆಟಿಗನಾದರೆ ನನ್ನ ಮಗನ ವಿರುದ್ಧ ಏನು ಮಾಡಿದ್ರು. ಅದು ಈಗ ಬೆಳಕಿಗೆ ಬರುತ್ತಿದೆ. ನಾನು ಎಂದಿಗೂ ಕ್ಷಮಿಸುವುದಿಲ್ಲ. ಅವರು ನನ್ನ ಕುಟುಂಬವಾಗಿದ್ದರೂ ಸರಿ ನಾನು ತಪ್ಪು ಮಾಡಿಕೊಂಡದವರನ್ನು ಕ್ಷಮಿಸಲ್ಲ ಎಂದಿದ್ದಾರೆ.
ಯಾರಾದರೂ ಯುವರಾಜ್ ಸಿಂಗ್ನಂತಹ ಮಗನನ್ನು ಹುಟ್ಟು ಹಾಕಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ನಂತರ ಆಟಗಾರರು ಎಂದಿಗೂ ಹುಟ್ಟಿಲ್ಲ ಎಂದಿಗೂ ಹುಟ್ಟಲ್ಲ. ಯುವರಾಜ್ ಸಿಂಗ್ಗೆ ಭಾರತ ರತ್ನ ಕೊಡಬೇಕು. ಯುವಿ ಕ್ಯಾನ್ಸರ್ ವಿರುದ್ಧ ಹೋರಾಡಿ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟವರು. ಯುವಿ ಇನ್ನೂ ನಾಲ್ಕೈದು ವರ್ಷಗಳ ಕಾಲ ಆಡಬಹುದಿತ್ತು ಎಂದು ತಂದೆ ಯೋಗರಾಜ್ ಸಿಂಗ್ ಹೇಳಿದ್ದಾರೆ.