HomeGadag Newsರಕ್ತದಾನದಿಂದ ಉತ್ತಮ ಆರೋಗ್ಯ : ಡಾ. ಬಿ.ಜೆ. ಅಂಗಡಿ

ರಕ್ತದಾನದಿಂದ ಉತ್ತಮ ಆರೋಗ್ಯ : ಡಾ. ಬಿ.ಜೆ. ಅಂಗಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಕ್ತದಾನ ಮಾಡುವುದರ ಮೂಲಕ ಮಾನವೀಯತೆ ಮೆರೆಯಬೇಕು. ಇದಕ್ಕೆ ಯುವ ಸಮೂಹ ಸೇರಿದಂತೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಡಾ. ಬಿ.ಜೆ. ಅಂಗಡಿ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಸೂರಣಗಿ ಗ್ರಾಮದ ನವಚೇತನ ಯುವಕ ಮಂಡಳದ 20ನೇ ವರ್ಷದ ಗಣೇಶೋತ್ಸವ ಹಾಗೂ 8ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ಮಾನವೀಯ ಮೌಲ್ಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ರಕ್ತದಾನ ಮಾಡುವುದು ಒಂದು ರೀತಿಯ ಸಾಮಾಜಿಕ ಸೇವೆ. ಅರೋಗ್ಯವಚಿತರಾದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಎಂದು ಸಲಹೆ ನೀಡಿದರು.

ತಾ.ಪಂ ಮಾಜಿ ಸದಸ್ಯ ಕೊಟೇಪ್ಪ ವರ್ದಿ, ತಾಲೂಕಾ ವೈದ್ಯಾಧಿಕಾರಿ ಡಾ. ಸುಭಾಸ ದಾಯಗೊಂಡ ಮಾತನಾಡಿದರು.

ಸುಮಾರು 50ಕ್ಕೂ ಅಧಿಕ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಗ್ರಾ.ಪಂ ಅಧ್ಯಕ್ಷೆ ಚನ್ನವ್ವ ಕಳ್ಳಿಹಾಳ ಅಧ್ಯಕ್ಷತೆ ವಹಿಸಿದ್ದರು. ಚನ್ನಮ್ಮ ಹಿರೇಮಠ, ಡಾ. ಎನ್.ವಿ. ಹೆಬಸೂರ, ದೀಪಾ ಕಾಶಿಕೋವಿ, ರಾಘವೇಂದ್ರ ಗುತ್ತೇಮ್ಮನವರ, ಹುಸೇನಸಾಬ ಕೊಲ್ಕಾರ, ಕುಮಾರ ಬೆಟಗೇರಿ, ಸಚಿನ ಮೇಲ್ಮುರಿ, ಕೃಷ್ಣ ಲಮಾಣಿ, ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಾ. ದಿವ್ಯ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಎಸ್.ಬಿ. ಪಾಟೀಲ, ಡಾ.ಮಂಜುನಾಥ ಗುಡಿಮನಿ, ಶಕೀಲಬಾನು ಮುರ್ತುಜನವರ, ಎಫ್.ಬಿ. ಹೂಗಾರ, ಜಿ.ಎಸ್. ಮೇಲಿನಮನಿ, ವೆಂಕಟೇಶ ಟೆಂಕಪ್ಪನವರ, ಜಯಶ್ರೀ ಲಕ್ಕುಂಡಿ, ಎಚ್.ಎಚ್. ಕುಡಚಿ, ಎಸ್.ಎಸ್. ಗಂಗೂರ, ಸಿಂಧೂ ವಿ., ಎಸ್.ಪುಷ್ಪಾ, ಸುಜಾತಾ ನಡವಲಕೇರಿ, ಕಿರಣ ಮೆಗಲಮನಿ ಸೇರಿದಂತೆ ಸೂರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು. ಶರಣಪ್ಪ ಮಾಸ್ತಮ್ಮನವರ, ನಾಗರಾಜ ಪೂಜಾರ, ಬಸವರಾಜ ದುರ್ಗದ ನಿರೂಪಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img