HomeGadag Newsಪೌರ ಕಾರ್ಮಿಕರನ್ನು ಗೌರವದಿಂದ ಕಾಣಿ : ಈಶ್ವರ ಮೇಡ್ಲೇರಿ

ಪೌರ ಕಾರ್ಮಿಕರನ್ನು ಗೌರವದಿಂದ ಕಾಣಿ : ಈಶ್ವರ ಮೇಡ್ಲೇರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ರಾಜ್ಯದ ನಗರ ಪಟ್ಟಣಗಳನ್ನು ಸ್ವಚ್ಛ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುವ ಸೇನಾನಿಗಳಾಗಿದ್ದಾರೆ. ಸಮಾಜ ಇವರನ್ನು ಗೌರವದಿಂದ ಕಾಣಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಈಶ್ವರ ಮೇಡ್ಲೇರಿ ಹೇಳಿದರು.

ಅವರು ಸೋಮವಾರ ಪುರಸಭೆ ಆವರಣದಲ್ಲಿ 13ನೇ ವರ್ಷದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭಗಳಾಗಿರುವ ಪೌರಕಾರ್ಮಿಕರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೊಂಡಿರುತ್ತಾರೆ. ಕೊರೋನಾ ಮಹಾಮಾರಿ ಆವರಿಸಿರುವ ಸಂಕಷ್ಟದ ಕಾಲದಲ್ಲಿಯೂ ಭೀತಿಗೊಳ್ಳದೇ ಸೇನಾನಿಗಳಂತೆ ಕಾರ್ಯ ನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಊರಿನ ಸ್ವಚ್ಛತೆ ಪರಿಸರ ರಕ್ಷಣೆಗೆ ಅವರ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ಅವರನ್ನು ಸಮಾಜ ಗೌರವದಿಂದ ಕಾಣಬೇಕು. ಕಸ ಸಂಗ್ರಹಕ್ಕೆ ಬಂದ ಕಾರ್ಮಿಕರು ನಮ್ಮ ಮನೆಗಳ ಕಸವನ್ನು ಸ್ವಚ್ಛ ಮಾಡುವವರು ಎನ್ನುವ ಭಾವನೆ ಇರಲಿ. ಪೌರಕಾರ್ಮಿಕ ದಿನಾಚರಣೆಯಂದು ಮಾತ್ರ ಅವರನ್ನು ಗೌರವಿಸದೆ ನಿತ್ಯ ಅವರ ಬಗ್ಗೆ ಸಮಾಜ ಉತ್ತಮ ಭಾವನೆ ವ್ಯಕ್ತಪಡಿಸಿ ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷ ಪೀರದೋಷ ಆಡೂರ, ಸದಸ್ಯರಾದ ಪೂರ್ಣಿಮಾ ಪಾಟೀಲ, ರಾಜಣ್ಣ ಕುಂಬಿ, ಅಶ್ವಿನಿ ಅಂಕಲಕೋಟಿ, ಮಹೇಶ ಹೊಗೆಸೊಪ್ಪಿನ, ಪ್ರವೀಣ ಬಾಳಿಕಾಯಿ, ಮಾತನಾಡಿ, ಸ್ವಚ್ಛ ಪಟ್ಟಣ, ನಗರ ಮತ್ತು ಭಾರತ ನಿರ್ಮಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರನ್ನು ಎಲ್ಲ ಕಡೆ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದು, ಸೌಜನ್ಯಕ್ಕಾದರೂ ಕಾರ್ಯಕ್ರಮಗಳಲ್ಲಿ ಹೂ ನೀಡುವ ಮೂಲಕ ಗೌರವಿಸುವ ಕಾರ್ಯವಾಗಲಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರೆಲ್ಲರಿಗೂ ಸನ್ಮಾನಿಸಿ ಸರಕಾರದಿಂದ ಕೊಡಮಾಡಿದ ಚೆಕ್‌ಗಳನ್ನು ವಿತರಿಸಲಾಯಿತು.

ಸಭೆಯಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ, ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ, ಪುರಸಭೆ ಸದಸ್ಯರಾದ ರಾಮಣ್ಣ ಗಡದವರ, ಜಯಕ್ಕ ಅಂದಲಗಿ, ಮುಸ್ತಾಕ್‌ಅಹ್ಮದ ಶಿರಹಟ್ಟಿ, ಮಂಜುಳಾ ನಂದೆಣ್ಣವರ, ವಾಣಿ ಹತ್ತಿ, ಮಂಜುಳಾ ಗುಂಜಳ, ಎಸ್.ಕೆ. ಹವಾಲ್ದಾರ, ವಿಜಯ ಕರಡಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಶಿವಾನಂದ ಅಜ್ಜಣ್ಣವರ, ಹನುಮಂತ ನಂದೆಣ್ಣವರ, ಹಾಗೂ ಪೌರಕಾರ್ಮಿಕರು ಹಾಜರಿದ್ದರು.

ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಪಟ್ಟಣದ ಜನಸಂಖ್ಯೆಗನುಗುಣವಾಗಿ ಪೌರಕಾರ್ಮಿಕರ ಅವಶ್ಯಕತೆ ಇದೆ. ಆದರೆ ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. 23 ವಾರ್ಡ್ಗಳಲ್ಲಿ 8500ಕ್ಕೂ ಅಧಿಕ ಮನೆಗಳಿರುವ ಈ ಪಟ್ಟಣದಲ್ಲಿ ಸುಮಾರು 56 ಪೌರಕಾರ್ಮಿಕರ ಅವಶ್ಯಕತೆ ಇದ್ದು, ಇದೀಗ ನಮ್ಮಲ್ಲಿ ಕೇವಲ 7 ಜನ ಸಿಬ್ಬಂದಿಗಳಿದ್ದಾರೆ. ಈ ಕುರಿತಂತೆ ಆಡಳಿತಮಂಡಳಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!