• About
  • Advertise
  • Privacy & Policy
  • Contact
Thursday, October 22, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಸಾಧಿಸುವ ಛಲವಿದ್ದರೆ ಮಾತ್ರ ಯಶಸ್ಸು : ಬಸವರಾಜ ಬೊಮ್ಮಾಯಿ

News Desk by News Desk
October 1, 2024
in Gadag News
0
Gadag District Level ``Job Fair''
0
SHARES
0
VIEWS
Share on FacebookShare on Twitter

ವಿಜಯಸಾಕ್ಷಿ ಸುದ್ದಿ, ಗದಗ : ಯಾವ ದೇಶದಲ್ಲಿ ಕೌಶಲ್ಯ ಇರುವ ಯುವಕರಿರುತ್ತಾರೆಯೋ ಆ ದೇಶಕ್ಕೆ ಬಡತನವಿಲ್ಲ. ಭಾರತ ದೇಶದಲ್ಲಿ ಕೌಶಲ್ಯದ ಕೊರತೆ ಇದೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷವಾಗಿರುವ ಕೌಶಲ್ಯ ಅಭಿವೃದ್ಧಿ ಇಲಾಖೆ ತೆರೆದು ತರಬೇತಿ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ಕೆಎಲ್‌ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಎಸ್.ಆರ್. ಬೊಮ್ಮಾಯಿ ಟ್ರಸ್ಟ್ ಹಾಗೂ ಎಸ್.ವಿ. ಸಂಕನೂರು ಅಭಿಮಾನಿ ಬಳಗದ ಸಂಯುಕ್ತಾಶಯದಲ್ಲಿ ಸೋಮವಾರ ಏರ್ಪಡಿಸಿದ್ದ ಗದಗ ಜಿಲ್ಲಾ ಮಟ್ಟದ `ಉದ್ಯೋಗ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

ನನಗೆ ಕೌಶಲ್ಯ ಅಭಿವೃದ್ಧಿ, ಕಾರ್ಮಿಕ ಹಾಗೂ ಟೆಕ್ಸ್ಟೈಲ್ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಇಲಾಖೆಗಳ ಜವಾಬ್ದಾರಿಯನ್ನು ಪಧಾನಿ ನೀಡಿದ್ದಾರೆ. ಪ್ರಧಾನ ಮಂತ್ರಿಯ ಕನಸು ಕೌಶಲ್ಯ ಭರಿತ ಭಾರತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾದ ವರದಿಯನ್ನು ನೀಡಲು ನಾನು ಶ್ರಮವಹಿಸುತ್ತೇನೆ ಎಂದರು.

ಇಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಬಂದಿದ್ದಾರೆ. ಸಂಸ್ಥೆಗಳು ಬಯಸುವ ಉದ್ಯೋಗಕ್ಕೂ ನಾವು ಕಲಿಯುವುದಕ್ಕೂ ವ್ಯತ್ಯಾಸ ಇದೆ. ಅದನ್ನು ಸರಿಪಡಿಸಲು ಪದವಿ ಪಡೆಯುವ ಮೊದಲೇ ಕೌಶಲ್ಯ ತರಬೇತಿ ಪಡೆಯಬೇಕು. ತಾಂತ್ರಿಕ ತರಬೇತಿ, ಕೌಶಲ್ಯ ತರಬೇತಿ ಪಡೆಯಬೇಕು ಎಂದು ಹೇಳಿದರು.

ಮಹಾನಗರಗಳಲ್ಲಿ ಜೀವನ ಮಾಡಬೇಕೆಂದರೆ ಗಂಡ-ಹೆಂಡತಿ ಇಬ್ಬರೂ ಕೆಲಸ ಮಾಡುವ ಅನಿವಾರ್ಯತೆಯಿದೆ. ದುಡ್ಡಿದ್ದರೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಅಲ್ಲದೇ ಸ್ವಾಭಿಮಾನ ಹೆಚ್ಚಳವಾಗುತ್ತದೆ. ಉದ್ಯೋಗ ಒಂದು ಘನತೆಯನ್ನು ತಂದುಕೊಡುತ್ತದೆ. ಮೊದಲು ಭಾರತದ ಜನಸಂಖ್ಯೆಯ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸುತ್ತಿದ್ದರು. ಜನಸಂಖ್ಯೆ ನಿಯಂತ್ರಿಸಬೇಕು ಎಂದು ಹೇಳುತ್ತಿದ್ದರು. ನಮ್ಮ ಪ್ರಧಾನಿಗಳು ಜನಸಂಖ್ಯೆಯಿಂದಲೇ ನಮ್ಮ ದೇಶದ ಆರ್ಥಿಕತೆ ಹೆಚ್ಚಿಸಲು ಸಾಧ್ಯ ಎಂದು ತಿಳಿಸಿದ್ದಾರೆಂದರು.

ಸಮಾಜದಲ್ಲಿ ಶಿಕ್ಷಣ, ಉದ್ಯೋಗ ನೀಡುವ ಮೂಲಕ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಯುವಕರಿಗೆ ದಾರಿದೀಪವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಕಾರ್ಯ ಮಹಾನ್ ಕಾರ್ಯ.

ಸಂಕನೂರು ಅವರ ದೂರದೃಷ್ಟಿಯಿಂದ ಗದಗನಲ್ಲಿ ನಿರಂತರವಾಗಿ ಕೆಲಸಗಳು ನಡೆಯುತ್ತಿವೆ. ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಜರಿದ್ದರು.

ಈಗೆಲ್ಲ ಇಂಗ್ಲಿಷ್ ಕೇಳುತ್ತಾರೆ. ಬಹುತೇಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಭೂಗೋಳದಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಆದರೆ, ಗಣಿತ ವಿಷಯ ಬಂದಾಗ 35 ಅಂಕ ಪಡೆದು ಬರುತ್ತಾರೆ. ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ವೈಜ್ಞಾನಿಕ ಜ್ಞಾನ ಬರುವಂತಹ ಶಿಕ್ಷಣ ನೀಡಬೇಕು. ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರವೇ ಸಂಬಳ ನೀಡಲಿದೆ. ಹೆಚ್ಚಿನ ಯುವಕರು ಅದರ ಲಾಭ ಪಡೆದುಕೊಳ್ಳಬೇಕು.
– ಬಸವರಾಜ ಬೊಮ್ಮಾಯಿ.
ಸಂಸದರು, ಹಾವೇರಿ-ಗದಗ.

ದೇಶದಲ್ಲಿ 2014ರಲ್ಲಿ 42 ಸಾವಿರ ಕೊರೋಡ್‌ಪತಿಗಳು ಒಂದು ಕೋಟಿಗಿಂತ ಹೆಚ್ಚು ಆದಾಯ ಪಡೆಯುತ್ತಿದ್ದರು. ಈಗ ಮೂರು ಲಕ್ಷಕ್ಕೂ ಹೆಚ್ಚು ಜನರು ಒಂದು ಕೋಟಿಗಿಂತಲೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಆರ್ಥಿಕತೆಯಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ಕಠಿಣ ಪರಿಶ್ರಮ, ಪ್ರಾಮಾಣಿಕ ಪಯತ್ನ, ದೃಢ ಸಂಕಲ್ಪ, ಸಾಧನೆ ಮಾಡುವ ಛಲ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಯುವಕರು ಮನಸು ಮಾಡಿ ಎತ್ತರಕ್ಕೆ ಹಾರಬೇಕು. ಇಡೀ ಭೂಮಂಡಲ ನಿಮ್ಮದಿದೆ. ಆಕಾಶ ನಿಮ್ಮದಿದೆ. ನಿವೂ ಒಳ್ಳೆಯ ಹೆಸರು ಗಳಿಸಿ, ದೇಶಕ್ಕೂ ಒಳ್ಳೆಯ ಹೆಸರು ತನ್ನಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Tags: Basavaraja BommaiGadagGadag District Level ``Job Fair''gadaganewsLatestNewsupdatenews
Previous Post

ರಂಭಾಪುರಿ ಶ್ರೀಗಳ ಶರನ್ನವರಾತ್ರಿ ಅ.3ರಿಂದ

Next Post

ಮೆಟ್ರೋ ಪ್ರಯಾಣಿಕರೇ ಇಲ್ಲಿ ಕೇಳಿ: ಅ.3ರಂದು ಹಸಿರು ಮಾರ್ಗದಲ್ಲಿ ರೈಲು ಸೇವೆ ವ್ಯತ್ಯಯ!

News Desk

News Desk

Next Post
ಮೆಟ್ರೋ ಪ್ರಯಾಣಿಕರೇ ಇಲ್ಲಿ ಕೇಳಿ: ಅ.3ರಂದು ಹಸಿರು ಮಾರ್ಗದಲ್ಲಿ ರೈಲು ಸೇವೆ ವ್ಯತ್ಯಯ!

ಮೆಟ್ರೋ ಪ್ರಯಾಣಿಕರೇ ಇಲ್ಲಿ ಕೇಳಿ: ಅ.3ರಂದು ಹಸಿರು ಮಾರ್ಗದಲ್ಲಿ ರೈಲು ಸೇವೆ ವ್ಯತ್ಯಯ!

Leave a Reply Cancel reply

Your email address will not be published. Required fields are marked *

Stay Connected test

  • 24k Followers
  • 99 Subscribers
  • Trending
  • Comments
  • Latest
ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

October 21, 2026
Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

October 21, 2026

ಸೊಲ್ಲಾಪುರದಿಂದ ಗಾಂಜಾ ಪೂರೈಕೆ, ಗದಗದಲ್ಲಿ ಮಾರಾಟ: ಗಂಗಿಮಡಿಯ ಇಬ್ಬರು ಸೇರಿ ನಾಲ್ವರ ಬಂಧನ

October 18, 2026
ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

October 21, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

October 22, 2026
ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

October 22, 2026
ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಎಂಟ್ರಿ: ಮೊದಲ ಪೋಸ್ಟ್‌ನಲ್ಲೇ ಆತ್ಮಚರಿತ್ರೆಯ ಕವರ್ ರಿವೀಲ್!

ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಎಂಟ್ರಿ: ಮೊದಲ ಪೋಸ್ಟ್‌ನಲ್ಲೇ ಆತ್ಮಚರಿತ್ರೆಯ ಕವರ್ ರಿವೀಲ್!

October 22, 2026
ದಸರಾ ಸಂಭ್ರಮದ ನಡುವೆ ರಕ್ತಪಾತ: ಅಂಬಾರಿ ನೋಡಲು ಬಂದಿದ್ದ ಯಲ್ಲಪ್ಪನ ಭೀಕರ ಕೊಲೆ!

ದಸರಾ ಸಂಭ್ರಮದ ನಡುವೆ ರಕ್ತಪಾತ: ಅಂಬಾರಿ ನೋಡಲು ಬಂದಿದ್ದ ಯಲ್ಲಪ್ಪನ ಭೀಕರ ಕೊಲೆ!

October 22, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

October 22, 2026
ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

October 22, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!
Join WhatsApp Read E-Paper
f 𝕏 WhatsApp Copy Link