HomeGadag Newsಜಿಲ್ಲಾ ಜೆಡಿಎಸ್‌ನಿಂದ ರಾಜ್ಯಪಾಲರಿಗೆ ಮನವಿ

ಜಿಲ್ಲಾ ಜೆಡಿಎಸ್‌ನಿಂದ ರಾಜ್ಯಪಾಲರಿಗೆ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಾಡು ಕಂಡ ಧೀಮಂತ ನಾಯಕ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿರವರನ್ನು ಗುರಿಯನ್ನಾಗಿಸಿ ಎಡಿಜಿಪಿ ಎಂ.ಚಂದ್ರಶೇಖರ ನಿಂದಿಸಿದ್ದು, ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾ ಜೆಡಿಎಸ್‌ನಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ತಮ್ಮ ಸಿಬ್ಬಂದಿಗಳಿಗೆ ಪತ್ರ ಬರೆಯುವ ನೆಪದಲ್ಲಿ ಹಂದಿ ಎಂಬ ಪದವನ್ನು ಬಳಸಿ ರಾಜ್ಯಾಧ್ಯಕ್ಷರಿಗೆ ಹಾಗೂ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ಘಾಸಿಗೊಳಿಸಿದ್ದಾರೆ. ಇಂತಹ ದುರಹಂಕಾರ ಹೊಂದಿದ ಮತ್ತು ಸರಕಾರದ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ಎಸ್‌ಐಟಿ ಸಂಸ್ಥೆಗೆ ಕಳಂಕವಿದ್ದಂತೆ.

ಕೇಂದ್ರದ ಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳು ಎಂಬುದನ್ನು ಅರಿಯದೆ ಏಕವಚನದಲ್ಲಿ ನಿಂದಿಸಿರುವುದು ಅಕ್ಷಮ್ಯ ಅಪರಾಧ. ಇಂತಹ ಅಧಿಕಾರಿಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಇವರ ಸೇವೆಯನ್ನು ರಾಜ್ಯದಿಂದ ಮರಳಿ ಕೇಂದ್ರಕ್ಕೆ ಪಡೆಯಲು ಕೇಂದ್ರ
ಗೃಹ ಇಲಾಖೆಗೆ ನಿರ್ದೇಶಸುವಂತೆ ಕೋರಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ ಸಂಶಿ, ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ, ಸಂಘಟನಾ ಕಾರ್ಯದರ್ಶಿ ಕಾಸಿಂಸಾಬ ದೊಡಮನಿ, ಮುಖಂಡರಾದ ಎಂ. ಎಸ್. ಪರ್ತಗೌಡ, ಬಸವರಾಜ, ಶ್ರೀನಿವಾಸ ಓಂಕಾರ್, ಇಮಾಮಸಾಬ ಉಮಚಗಿ, ಅಲ್ತಾಫ ಖಾಜಿ, ಮಂಜುನಾಥ ನರೇಗಲ್, ಹನುಮಂತ, ಎಂ.ಪಿ. ಮುಳುಗುಂದ, ದಾವಲಸಾಬ ನಾಗನೂರ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img